Author: roovari

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಏಪ್ರಿಲ್ ತಿಂಗಳ ಸಾಪ್ತಾಹಿಕ ಸರಣಿ ಕಾರ್ಯಕ್ರಮವು ದಿನಾಂಕ 06-05-2024, 13-05-2024, 20-05-2024 ಮತ್ತು 27-05-2024ರಂದು ಪ್ರತೀ ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ದಿನಾಂಕ 06-05-2024ರಂದು ನಡೆಯಲಿರುವು ಸರಣಿ 44ರಲ್ಲಿ ಕುಮಾರಿ ಆಂಗಿಕ ಶೆಟ್ಟಿ ಕುದ್ಕಾಡಿ, ದಿನಾಂಕ 13-05-2024ರಂದು ನಡೆಯಲಿರುವು ಸರಣಿ 45ರಲ್ಲಿ ವಿದುಷಿ ಶ್ರೇಯಾ ಬಾಲಾಜಿ ಬೆಂಗಳೂರು, ದಿನಾಂಕ 20-05-2024ರಂದು ನಡೆಯಲಿರುವು ಸರಣಿ 46ರಲ್ಲಿ ಶ್ರೀ ಲಕ್ಷ್ಮೀ ಪಿ.ವೈ. ಬೆಂಗಳೂರು ಮತ್ತು ದಿನಾಂಕ 27-05-2024ರಂದು ನಡೆಯಲಿರುವು ಸರಣಿ 47ರಲ್ಲಿ ಕುಮಾರಿ ಕೀರ್ತನ ಯು. ಭಟ್ ಇವರುಗಳು ನೃತ್ಯ ಕಾರ್ಯಕ್ರಮ ನೀಡಲಿದ್ದಾರೆ.

Read More

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಇದರ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಕರ ದಿನಾಚರಣೆಯು ದಿನಾಂಕ 05-05-2024ರಂದು ಪುತ್ತೂರು ದರ್ಬೆ ಶ್ರೀರಾಮ ಸೌಧ ವಾಣಿಜ್ಯ ಸಂಕೀರ್ಣದ ಕ.ಸಾ.ಪ. ಕಚೇರಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಇವರು ವಹಿಸಲಿದ್ದು, ಘಟಕದ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಹಾಜಿ ಎಸ್. ಅಬೂಬಕ್ಕರ್ ಆರ್ಲಪದವು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಉಪ್ಪಿನಂಗಡಿ ಹೋಬಳಿ ಅಧ್ಯಕ್ಷರಾದ ಶ್ರೀ ಕರುಣಾಕರ ಸುವರ್ಣ ಮತ್ತು ಪುತ್ತೂರು ಹೋಬಳಿ ಅಧ್ಯಕ್ಷರಾದ ಕಡಮಜಲು ಸುಭಾಸ್ ರೈ ಇವರು ಗೌರವ ಉಪಸ್ಥಿತರಿರಲಿದ್ದಾರೆ.

Read More

ಮೈಸೂರು : ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಸಹಯೋಗದೊಂದಿಗೆ ಮೈಸೂರಿನ ನಟನ ಇವರ ವತಿಯಿಂದ ಮಂಡ್ಯ ರಮೇಶ ನೇತೃತ್ವದಲ್ಲಿ ನಡೆಯುತ್ತಿರುವ ‘ರಜಾಮಜಾ’ ಬೇಸಿಗೆ ಶಿಬಿರದ ಸಮಾರೋಪ ಸಡಗರವು ಮೈಸೂರಿನ ವಿನೋಬಾ ರಸ್ತೆ, ಕರ್ನಾಟಕ ಕಲಾ ಮಂದಿರದಲ್ಲಿ ದಿನಾಂಕ 05-05-2024ರಂದು ಸಂಜೆ ಗಂಟೆ 4-00ರಿಂದ ನಡೆಯಲಿದೆ. ಇದೇ ಸಂದರ್ಭದಲ್ಲಿ ವೃತ್ತಿ ರಂಗಭೂಮಿಯ ಹಿರಿಯ ನಟಿ ಶ್ರೀಮತಿ ಇಂದಿರಮ್ಮ ಎಚ್.ಟಿ. ಇವರಿಗೆ ನಟನ ಪುರಸ್ಕಾರವನ್ನು ನೀಡಲಾಗುವುದು. ರಂಗ ಗೀತೆಗಳು, ಕಂಸಾಳೆ, ಯಕ್ಷಗಾನ, ಕಂಗೀಲು, ಡೊಳ್ಳು, ಮಲ್ಲಗಂಬ, ಹಗ್ಗದ ಮಲ್ಲಕಂಬ, 6 ಮಕ್ಕಳ ನಾಟಕಗಳು, ಕಂಪನಿ ನಾಟಕ ಇನ್ನೂ ಹತ್ತು ಹಲವು ಆ ಸಂಜೆಯ ಆಕರ್ಷಣೆಯಾಗಿದೆ.

Read More

ಬೆಂಗಳೂರು : 2024ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಪ್ರಶಸ್ತಿಗೆ ಮೈಸೂರಿನ ಹಿರಿಯ ಜನಪದ ವಿದ್ವಾಂಸ ಡಾ. ಹಿ.ಶಿ. ರಾಮಚಂದ್ರೇ ಗೌಡ ಮತ್ತು ಬೆಂಗಳೂರಿನ ಚಿಂತಕಿ ಮತ್ತು ವಿಮರ್ಶಕಿ ಡಾ. ಬಿ.ಎನ್. ಸುಮಿತ್ರಾ ಬಾಯಿಯವರನ್ನು ಆಯ್ಕೆ ಮಾಡಲಾಗಿದೆ. ನಾಡೋಜ ಡಾ. ಮನು ಬಳಿಗಾರ್ ಅವರು  ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಧ್ಯಕ್ಷರಿಗೆ ನೀಡುವ ಗೌರವ ಧನವನ್ನು ಸ್ವೀಕರಿಸದೆ ಆ ಮೊತ್ತವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿಯೇ ಇರಿಸಿ, ಕನ್ನಡ ನಾಡು-ನುಡಿಗೆ ಮಹತ್ವದ ಸೇವೆ ಸಲ್ಲಿಸಿದವರಿಗೆ ಗೌರವ ಪ್ರಶಸ್ತಿಯನ್ನು ನೀಡಲೆಂದು ಈ ದತ್ತಿಯನ್ನು ಸ್ಥಾಪಿಸಿದ್ದಾರೆ. ಹಾಸನ ಜಿಲ್ಲೆಯ ರಂಗನಾಥ ಪುರದಲ್ಲಿ ಜನಿಸಿದ ಡಾ. ಹಿ.ಶಿ. ರಾಮಚಂದ್ರೇ ಗೌಡರು, ಕೇರಳದಲ್ಲಿ ಜನಪದ ಅಧ್ಯಯನವನ್ನು ಮಾಡಿ, ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ‘ಕನ್ನಡ ಜನಪದ ಕಥಾ ವರ್ಗಗಳು’ ಎನ್ನುವ ವಿಷಯದಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದಿರುವ ಇವರು ಕರ್ನಾಟಕ ಜನಪದ ಅಕಾಡಮಿ ಅಧ್ಯಕ್ಷರಾಗಿ ಮತ್ತು ಕರ್ನಾಟಕ…

Read More

ಇವರು ಮಡಿಕೇರಿ ತಾಲೂಕು ಚೇರಂಬಾಣೆ-ಕೋಪಟ್ಟಿ ಗ್ರಾಮದ ಕೊಟ್ಟು ಕತ್ತೀರಾ ಕಾರ್ಯಪ್ಪ ಮತ್ತು ರಾಗಿಣಿ ದಂಪತಿಯರ ಪುತ್ರ. ತಮ್ಮ ವಿದ್ಯಾಭ್ಯಾಸವನ್ನು ಕಾಲೂರು ಹಾಗೂ ಗಾಳಿಬೀಡು ಶಾಲೆಯಲ್ಲಿ ಮುಗಿಸಿ 1983ರಲ್ಲಿ ಭಾರತೀಯ ಸೇನೆಗೆ ಸೇರಿ ಜಮ್ಮು, ಕಾಶ್ಮೀರ, ಪಂಜಾಬ್ ಬ್ಲೂ ಸ್ಟಾರ್, ಗ್ವಾಲಿಯರ್, ಐ. ಪಿ. ಕೆ. ಎಫ್, ಶ್ರೀಲಂಕಾ ಮತ್ತು ನಾರ್ತ್ ಈಸ್ಟ್ ಸೆಕ್ಟರ್, ಅರುಣಾಚಲ ಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್ ಗ್ರಿಪ್ ಲ್ ಡೆಪ್ಯೂಟೇಷನ್ ಮತ್ತು ರಾಜಸ್ತಾನ್, ಪಂಜಾಬ್ ಬಾರ್ಡರ್, ಕಾರ್ಗಿಲ್ ಯುದ್ದದ ಸಂದರ್ಭದಲ್ಲಿ ಅಟ್ಯಾಚ್ಮೆಂಟ್ ಆಗಿ ಕೆಲಸ ಮಾಡಿರುತ್ತಾರೆ. 2000ರಲ್ಲಿ ಸೇನಾ ನಿವೃತ್ತಿ ಹೊಂದಿ ಬೆಂಗಳೂರಿನ ಜಾಲಹಳ್ಳಿಯಲ್ಲಿ ‘ಸ್ವಸ್ತಿಕ್ ಕನ್ಸ್ಟ್ರಕ್ಷನ್ ಮತ್ತು ಸ್ವಸ್ತಿಕ್ ಕಾಂಕ್ರೀಟ್ ಪ್ರಾಡಕ್ಟ್‌’ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಕನ್ನಡ ಭಾಷೆಯಲ್ಲಿ ‘ಬೈಸಿಕಲ್’, ‘ವೀರ ಚಕ್ರ’, ‘ಮೋಹ ಪಾಶ’ ಹಾಗೂ ‘ಕರಗಿದ ಬದುಕು’  ಎನ್ನುವ 4 ಕೃತಿಗಳನ್ನು ರಚಿಸಿ ಲೋಕಾರ್ಪಣೆ ಮಾಡಿದ್ದಾರೆ. ಇವರು ಕೊಡವ ಭಾಷೆಯಲ್ಲಿ ಬರೆದ ‘ವಿಧಿರ ಕಳಿಲ್’ ಎನ್ನುವ ಕಾದಂಬರಿಯು ‘ಪೋಮ್ಮಲೆ ಕೊಡಗ್’ ಎನ್ನುವ ಕೊಡವ…

Read More

ಜಗತ್ತಿನ ಅಂಧಕಾರವನ್ನು ಕಳೆಯುವ ಬೆಳಕಾಗಿ ಹಬ್ಬಗಳು ಬರಬೇಕು ಎಂಬುವುದು ದೀಪಾವಳಿಯ ಕಲ್ಪನೆ. ಮನುಕುಲವನ್ನು ಕಾಡುವ ಅನಿಷ್ಟಗಳು, ಸಾಂಕ್ರಾಮಿಕ ರೋಗಗಳು, ನೋವು, ದುಮ್ಮಾನಗಳು ಇವುಗಳಿಗೆ ಪರಿಹಾರವಾಗಿ ಪ್ರತಿಯೊಬ್ಬರ ಬದುಕಿನಲ್ಲಿ ನಲಿವಿನ ಜತೆಗಿನ ನೆಮ್ಮದಿಯ ಬೆಳಕು ಬೇಕು. ಇದರ ನಿರೀಕ್ಷೆಯಲ್ಲಿ ಜಗತ್ತಿನ ಪ್ರತೀ ಮನಸ್ಸುಗಳೂ ಇರುತ್ತಿವೆ. ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ತವಕದ ಪಯಣದಲ್ಲಿ ಸಾವಿರಾರು ಕನಸುಗಳಿವೆ, ಯೋಜನೆಗಳಿವೆ. ಇವೆಲ್ಲವೂ ಸಾಕಾರಗೊಳ್ಳಬೇಕು. ಮನುಜ ಸಂಕುಲವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಸಾಗಿಸಲು ಜ್ಞಾನದೀವಿಗೆಯ ಅಗತ್ಯವೂ ಇದೆ. ಮಾನವನ ಎಲ್ಲಾ ಪ್ರಗತಿಯಲ್ಲು ಕೂಡಾ ಜ್ಞಾನದ ಬೆಳಕಿನ ಸ್ಥಾನ ದೊಡ್ಡದು. ಅದು ಗಟ್ಟಿಯಾದ ಅಡಿಪಾಯ. ಮಾನವನ ಮನದೊಳಗೆ ಜ್ಞಾನವನ್ನು, ಬದುಕಿನ ರೀತಿಯನ್ನು ನಾಗರಿಕತೆಯ ಪಥವನ್ನು ಮಹತ್ವದ ಗ್ರಂಥಗಳು ನೀಡುತ್ತವೆ. ಪ್ರತೀ ಗ್ರಂಥಗಳೂ ಕೂಡಾ ಸನಾತನ ಸತ್ವಗಳ ಪೂರಣ. ಅದು ಮನಮುಟ್ಟಿದಾಗ ಮನಸ್ಸಿನಲ್ಲು ಪಕ್ವತೆ, ಕೃತಿಯಲ್ಲಿ ದೃಢತೆ, ವ್ಯವಹಾರದಲ್ಲಿ ಸಾತ್ವಿಕತೆ ದೊರೆಯುತ್ತದೆ. ಮನಸ್ಸಿನ ತಾಮಸ ಗುಣವನ್ನು ಕಳೆಯುವುದಕ್ಕೆ ಜ್ಞಾನವು ಬೆಳಕಿನ ರೂಪದಲ್ಲಿ ಆವಾಹನೆಯಾಗಬೇಕು. ಆದ್ದರಿಂದ ನಮ್ಮ ಸುತ್ತಲಿನ ಪ್ರಬುದ್ಧ ಗ್ರಂಥಗಳು ಸತ್ಯದರ್ಶನದ ಮೂಲಬಿಂದುಗಳು.…

Read More

ಮಂಗಳೂರು : ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದಲ್ಲಿ ‘ತುಲುವೆರೆ ಕಲ ವರ್ಸೊಚ್ಚಯ’ ಕಾರ್ಯಕ್ರಮವು ದಿನಾಂಕ 01-05-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದ ಹಿರಿಯ ಸಾಹಿತಿ ಸದಾನಂದ ನಾರಾವಿ “ಇಂದು ವ್ಯಾವಹಾರಿಕ ಅಗತ್ಯಕ್ಕೆ ಇತರ ಭಾಷೆಗಳ ಕಲಿಕೆ ಅನಿವಾರ್ಯವಾದರೂ, ಮಾತೃಭಾಷೆ ಮೇಲಿನ ಅಭಿಮಾನ ಎಂದಿಗೂ ಮರೆಯಾಗಬಾರದು. ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಮಾತೃಭಾಷೆಯಲ್ಲಿದೆ. ಶೈಕ್ಷಣಿಕ ದೃಷ್ಟಿಯಿಂದಲೂ ಭಾಷೆಯ ಕಲಿಕೆ ಹೆಚ್ಚಿದಷ್ಟೂ ಜ್ಞಾನದ ಮಟ್ಟ ವೃದ್ಧಿಸುತ್ತದೆ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ ಸಕಾರಾತ್ಮಕ ಚಿಂತನೆ ಸೃಷ್ಟಿಯಾಗುತ್ತದೆ. ಈ ನಿಟ್ಟಿನಲ್ಲಿ ಬಹುಭಾಷಾ ಕಲಿಕೆ ಮಹತ್ವದ ಪಾತ್ರ ವಹಿಸುತ್ತದೆ. ಭಾಷೆಯನ್ನು ದ್ವೇಷಿಸುವ ಮನೋಭಾವ ಸಲ್ಲದು. ವರ್ಷದ ಅವಧಿಯಲ್ಲಿ ಸಂಘಟನೆ ಸದಸ್ಯರ ಕವನ, ಬರಹಗಳ ಸಂಗ್ರಹದ ಆರು ಪುಸ್ತಕಗಳನ್ನು ಹೊರತರುವ ಕೆಲಸ ಸುಲಭಸಾಧ್ಯವಾಗಿಸಿದ ಸಂಘಟನೆಯ ಪದಾಧಿಕಾರಿಗಳು ಅಭಿನಂದನಾರ್ಹರು, ಸಾಹಿತಿ, ಕವಿಗಳಿಗೆ ಪ್ರೋತ್ಸಾಹ ನೀಡುತ್ತಿರುವ ಸಂಘಟನೆ ಕಾರ್ಯ ನಿರಂತರವಾಗಿರಲಿ, ಇನ್ನಷ್ಟು ಕೃತಿಗಳು ಹೊರಬರಲಿ” ಎಂದು ಆಶಿಸಿದರು. ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ಅಕ್ಷಯಾ ಆರ್.ಶೆಟ್ಟಿ ಮಾತನಾಡಿ “ಕೃತಿ ರೂಪದಲ್ಲಿ ಸಾಹಿತ್ಯದ ದಾಖಲೀಕರಣ…

Read More

ಕಯ್ಯಾರು : ಮಹಿಳಾ ಯಕ್ಷಕೂಟ (ರಿ.) ಪೊನ್ನೆತ್ತೋಡು ಕಯ್ಯಾರು ಹಾಗೂ ಶ್ರೀ ಭಗವತೀ ಕೃಪಾ ವೀರಾಂಜನೇಯ ವ್ಯಾಯಾಮ ಶಾಲೆ (ರಿ.) ಭಗವತೀ ನಗರ ಅಡ್ಕ ಇವರ ಸಹಯೋಗದೊಂದಿಗೆ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವೇದಿಕೆಯಲ್ಲಿ ನಾಲ್ಕನೆಯ ವರ್ಷದ ತಾಳಮದ್ದಳೆ ಸಪ್ತಾಹವು ದಿನಾಂಕ 15-04-2024ರಿಂದ 21-04-204ರವರೆಗೆ ಅಡ್ಕ ಶ್ರೀ ಭಗವತೀ ಕೃಪಾ ವೀರಾಂಜನೇಯ ವ್ಯಾಯಾಮ ಶಾಲಾ ಸಭಾಂಗಣದಲ್ಲಿ ಜರಗಿತು. ಪ್ರತೀ ದಿನ ಮಧ್ಯಾಹ್ನ 3ರಿಂದ 4ರವರೆಗೆ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು 4ರಿಂದ 4.45ರವರೆಗೆ ಸಭಾ ಕಾರ್ಯಕ್ರಮ ಹಾಗೂ 5ರಿಂದ 7.30ರವರೆಗೆ ವಿವಿಧ ಮಹಿಳಾ ತಂಡಗಳಿಂದ ತಾಳಮದ್ದಳೆ ಕಾರ್ಯಕ್ರಮ ನೆರವೇರಿತು. ದಿನಾಂಕ 15-04-2024ನೇ ಸೋಮವಾರ ಸಪ್ತಾಹದ ಉದ್ಘಾಟನೆಯನ್ನು ಶ್ರೀ ಗೋಪಾಲ ಕೃಷ್ಣ ಮಾಸ್ಟರ್ ಪಂಜತ್ತೊಟ್ಟಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಶ್ರೀ ಚಂದ್ರಹಾಸ ಭಗವತೀ ನಗರ ವಹಿಸಿದರು. ಮುಖ್ಯ ಅತಿಥಿಯಾಗಿ ಶ್ರೀ ಶಂಕರ ಕಾಮತ್ ಚೇವಾರು ಪಾಲ್ಗೊಂಡರು. ಬಳಿಕ ಮಹಿಳಾ ಯಕ್ಷಕೂಟ ಪೊನ್ನೆತ್ತೋಡು ಕಯ್ಯಾರು ಇವರಿಂದ ‘ದೇವಯಾನಿ ಕಲ್ಯಾಣ’ ಎಂಬ ತಾಳಮದ್ದಳೆ ಪ್ರಸ್ತುತಿಗೊಂಡಿತು. ದಿನಾಂಕ 16-04-2024ನೇ ಮಂಗಳವಾರ ಸಭಾ…

Read More

ಕಾಸರಗೋಡು : ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಕಾಸರಗೋಡು ಮಾನ್ಯದ ಶ್ರೀ ಅಯ್ಯಪ್ಪ ಮಂದಿರದಲ್ಲಿ ನಡೆಸಿದ ಗ್ರಾಮ ಪರ್ಯಟನೆಯ ಎಂಟನೇ ಕಾರ್ಯಕ್ರಮವು ದಿನಾಂಕ 29-04-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದ ಮಾನ್ಯ ಸುಂದರಶೆಟ್ಟಿ “ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಊರೂರುಗಳಲ್ಲಿ ಹಮ್ಮಿಕೊಳ್ಳುವ ಮೂಲಕ ಈ ಮಣ್ಣಿನ ಸಂಸ್ಕೃತಿಯನ್ನು ಗಟ್ಟಿಗೊಳಿಸುವ ಕಾರ್ಯ ಶ್ಲಾಘನೀಯ” ಎಂದು ಹೇಳಿದರು. ಮಾನ್ಯ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಎಂ., ಪದಾಧಿಕಾರಿ ರಾಮ ಮಾನ್ಯ, ರಂಗಸಿರಿಯ ಸಂಗೀತ ಶಿಕ್ಷಕಿ ಸಂಗೀತ ವಿದುಷಿ ಗೀತಾ ಸಾರಡ್ಕ ಶುಭ ಹಾರೈಸಿದರು. ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಪ್ರಭಾವತಿ ಕೆದಿಲಾಯ ಪುಂಡೂರು ಅಧ್ಯಕ್ಷತೆ ವಹಿಸಿದ್ದರು. ಅನ್ವಿತ ಟಿ. ಹಾಗೂ ಸುಮೇಧ ಕೆ. ಪ್ರಾರ್ಥಿಸಿ, ಅಭಿಜ್ಞಾ ಭಟ್ ಬೊಳುಂಬು ಸ್ವಾಗತಿಸಿದರು. ಬಳಿಕ ಸಂಗೀತ ವಿದುಷಿ ಗೀತಾ ಸಾರಡ್ಕ ಅವರ ನಿರ್ದೇಶನದಲ್ಲಿ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.…

Read More

ಕಾಸರಗೋಡು : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಆಯೋಜಿಸಿದ ಸಾಹಿತ್ಯ ಪರಿಷತ್‌ ನಡಿಗೆ, ಹಿರಿಯ ಸಾಧಕರ ಎಡೆಗೆ’ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ಕಲಾವಿದ, ಪ್ರಸಂಗಕರ್ತ, ಭಾಗವತ, ತಾಳಮದ್ದಲೆ ಅರ್ಥಧಾರಿ ಮಧೂರು ವೆಂಕಟಕೃಷ್ಣ ಅವರನ್ನು ಮಧೂರಿನ ಅವರ ನಿವಾಸದಲ್ಲಿ ದಿನಾಂಕ 30-04=2024ರಂದು ಅಭಿನಂದಿಸಲಾಯಿತು. ಅಭಿನಂದನಾ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟಿತ್ತೋಡಿ ಅಧ್ಯಕ್ಷತೆಯಲ್ಲಿ ವೆಂಕಟಕೃಷ್ಣ ದಂಪತಿಯನ್ನು ಅಭಿನಂದಿಸಲಾಯಿತು . ಅಭಿನಂದನಾ ಭಾಷಣ ಮಾಡಿದ ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ ಮಾತನಾಡಿ “ಹವ್ಯಾಸಿ ಯಕ್ಷಗಾನ ಕಲಾವಿದರಾಗಿ, ಪ್ರಸಂಗಕರ್ತರಾಗಿ, ತಾಳಮದ್ದಲೆ ಅರ್ಥಧಾರಿಯಾಗಿ, ಕನ್ನಡ ತುಳು ಭಕ್ತಿ ಗೀತೆಗಳ ಗೀತ ರಚನಕಾರರಾಗಿ, ತಾಳಮದ್ದಲೆ ಸಂಘಟಕನಾಗಿ, ಮಧೂರು ವೆಂಕಟಕೃಷ್ಣರು ನೀಡಿದ ಕೊಡುಗೆ ಅನನ್ಯವಾದುದು.” ಎಂದು ಹೇಳಿದರು. ನಿವೃತ್ತ ಪ್ರಿನ್ಸಿಪಾಲ್ ಡಾ.ಕೆ. ಕಮಲಾಕ್ಷ ಮಾತನಾಡಿ “ಯಕ್ಷಗಾನದ ಪ್ರತಿಯೊಂದು ವಿಷಯದ ಪರಿಜ್ಞಾನ ವೆಂಕಟಕೃಷ್ಣರಿಗಿದೆ. ಭಾಗವತರಾಗಿ ಅರ್ಥಧಾರಿಗಳಲ್ಲಿ ಸ್ಫೂರ್ತಿ ತುಂಬಬಲ್ಲ ಇವರು ಅರ್ಥಧಾರಿಯಾಗಿ ಸಹ…

Read More