Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ, ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾ ಘಟಕ, ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಇವರ ಸಂಯುಕ್ತ ಆಶಯದಲ್ಲಿ ‘ಮನೆ ಮನೆ ಕನ್ನಡ ಜಾಗೃತಿ ಅಭಿಯಾನ’ ಮಂಗಳೂರಿನಲ್ಲಿ ದಿನಾಂಕ 22 ಜೂನ್ 2025ರಂದು ಉದ್ಘಾಟನೆಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಮತ್ತು ಸಾಹಿತ್ಯ ಪರಿಚಾರಕ ಡಾ. ಕೊಳ್ಚಪ್ಪೆ ಗೋವಿಂದ ಭಟ್ ವಹಿಸಿದ್ದರು. ಈ ಉಪಕ್ರಮವು ಸ್ಥಳೀಯ ಸಂಘಟನಾ ಕಾರ್ಯದರ್ಶಿ ಅನಿತಾ ಶೆಣೈಯವರ ಕುಲಶೇಖರ ಮನೆಯಲ್ಲಿ ಸಂಚಲನ ಮೂಡಿಸಿತು. ಈ ಅಭಿಯಾನದ ರೂವಾರಿ ಮತ್ತು ಈ ಸಂಸ್ಥೆಗಳ ಸ್ಥಾಪಕ ಸಂಚಾಲಕ ವಾಮನ ರಾವ್ ಬೇಕಲ್ ಮತ್ತು ಸಂಧ್ಯಾ ರಾಣಿ ಟೀಚರ್ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಸಂಚಾಲಕರಾದ ಜಯಾನಂದ ಪೆರಾಜೆ ಇವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತ “ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಸ್ವಯಂ ಅಳವಡಿಸಿ,…
ಉಡುಪಿ : ರಾಗ ಧನ ಉಡುಪಿ ಸಂಸ್ಥೆಯ ವಾರ್ಷಿಕ ಮಹಾಸಭೆ ಮತ್ತು ರಾಗರತ್ನಮಾಲಿಕೆ- 38 ಶಾಸ್ತ್ರೀಯ ಸಂಗೀತ ಕಛೇರಿಯು ದಿನಾಂಕ 22 ಜೂನ್ 2025 ಭಾನುವಾರದಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು. ಕಾರ್ಯದರ್ಶಿ ಉಮಾಶಂಕರಿ ವಾರ್ಷಿಕ ವರದಿ ಮಂಡಿಸಿದರು. ಖಜಾಂಚಿ ಪ್ರೊ. ಸದಾಶಿವರಾವ್ ಆಯವ್ಯಯ ಲೆಕ್ಕ ಪತ್ರಗಳನ್ನು ಮಂಡಿಸಿ ಸಭೆಯ ಅನುಮೋದನೆ ಪಡೆದರು. ಅಧ್ಯಕ್ಷ ಡಾ.ಶ್ರೀಕಿರಣ್ ಹೆಬ್ಬಾರ್ ಸಂಸ್ಥೆಯ ಆಶೋತ್ತರಗಳನ್ನು ಪ್ರಸ್ತುತ ಪಡಿಸಿದರು. ಕುಮಾರಿ ಸಿಯಾ ಪ್ರಭು ಮತ್ತು ಮಾಸ್ಟರ್ ತೀಕ್ಷಣ್ ಶೆಟ್ಟಿ ಪ್ರಾರ್ಥಿಸಿದರು. ವಿದುಷಿ ಸರೋಜಾ ಆಚಾರ್ಯ ವಂದಿಸಿದರು. ಶ್ರೀ ರಾಘವೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ರಾಗರತ್ನಮಾಲಿಕೆ- 38 ಶಾಸ್ತ್ರೀಯ ಸಂಗೀತ ಕಛೇರಿಯನ್ನು ವಿದ್ವಾನ್ ವಿವೇಕ್ ಸದಾಶಿವಂ ಚೆನೈ ಇವರು ನಡೆಸಿಕೊಟ್ಟರು.
ರಥ ಶಿಲ್ಪಿ ಪರಮೇಶ್ವರಾಚಾರ್ಯ ಇವರೊಬ್ಬ ಶಾಸ್ತ್ರೀಯ ರೀತಿಯ ಅಪರೂಪದ ಕಲಾವಿದರು. ಶಿಲ್ಪಕಲೆಗೆ ಅನನ್ಯವಾದ ಕೊಡುಗೆಯನ್ನು ನೀಡಿದವರು. ಮಾನಾಚಾರ್ಯ ಮತ್ತು ವೀರಮ್ಮ ದಂಪತಿಗಳ ಪುತ್ರರಾದ ಇವರು ಹೊಳಲ್ಕೆರೆ ತಾಲೂಕಿನ ನೂಲೇನೂರಿನಲ್ಲಿ 24 ಜೂನ್ 1924ರಂದು ಜನಿಸಿದರು. ತಂದೆ ತಾಯಿ ಇಬ್ಬರದ್ದೂ ಶಿಲ್ಪಕಲೆಯನ್ನು ಶಾಸ್ತ್ರೀಯವಾಗಿ ಕರಗತಗೊಳಿಸಿಕೊಂಡ ಮನೆತನ. ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡ ಇವರು ಸೋದರ ಮಾವಂದಿರಾದ ಕೆಂಚವೀರಾಚಾರ್ಯ ಮತ್ತು ಕಾಳಾಚಾರ್ಯರ ಪೋಷಣೆಯಲ್ಲಿ ಬೆಳೆದರು. ಬಾಲ್ಯದಲ್ಲಿ ರಥಶಿಲ್ಪವನ್ನು, ಶಿಲಾ ಮತ್ತು ಲೋಹ ಶಿಲ್ಪದ ವಿದ್ಯೆಯನ್ನು ಮಾವ ಕಾಳಾಚಾರ್ಯರ ಮಾರ್ಗದರ್ಶನದಲ್ಲಿ ಮತ್ತು ಶಿಲೆ, ಚಿನ್ನ, ಬೆಳ್ಳಿ ಹಾಗೂ ಎರಕದ ಕೆಲಸವನ್ನು ಮಾವ ಕೆಂಚವೀರಾಚಾರ್ಯರಿಂದ ಪಡೆದರು. ಪರಮೇಶ್ವರಾಚಾರ್ಯರ ವಿದ್ಯಾಭ್ಯಾಸ ಲೋಯರ್ ಸೆಕೆಂಡರಿಗೇ ನಿಂತಿತ್ತು. ಬಾಲ್ಯದಲ್ಲಿ ಮರಗೆಲಸದೊಂದಿಗೆ ಬದುಕನ್ನು ಆರಂಭಿಸಿದ ಇವರು ವಂಶ ಪಾರಂಪರ್ಯವಾಗಿ ಬಂದ ಶಿಲ್ಪಶಾಸ್ತ್ರ ಮತ್ತು ಶಿಲ್ಪಶಾಸ್ತ್ರವನ್ನು ಕುರಿತು ಗುರು ಮುಖೇನ ಮಾಡಿದ ಅಧ್ಯಯನದ ಪಾಂಡಿತ್ಯದಿಂದ ಕಂಚು, ಶಿಲೆ, ಪಂಚಲೋಹ, ಚಿನ್ನ, ಬೆಳ್ಳಿ, ತಾಮ್ರಗಳಲ್ಲಿಯೂ ಶಿಲ್ಪ ರಚನೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದರು. ರೇಖಾ ಚಿತ್ರಗಳ ರಚನೆ…
ಮಂಗಳೂರು : ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ಮತ್ತು ಸಂಗೀತ ದಿನಾಚರಣೆಯನ್ನು ದಿನಾಂಕ 21 ಜೂನ್ 2025ರಂದು ಸಂಭ್ರಮದಿಂದ ಆಚರಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಅಂತಾರಾಷ್ಟ್ರೀಯ ಯೋಗ ತೀರ್ಪುಗಾರರಾದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ “ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ” ಎನ್ನುವ ಧ್ಯೇಯದೊಂದಿಗೆ ಯೋಗವನ್ನು ಸರ್ವರೂ ತಮ್ಮ ಜೀವನದಲ್ಲಿ ಅಭ್ಯಾಸ ಮಾಡಿಕೊಳ್ಳುವ ಮೂಲಕ ಆರೋಗ್ಯವಂತರಾಗಬೇಕು. ವಿದ್ಯಾರ್ಥಿಗಳು ಯೋಗವನ್ನು ಪ್ರತಿನಿತ್ಯ ಅಭ್ಯಾಸ ಮಾಡುವುದರಿಂದ ಮನಸ್ಸನ್ನು ಏಕಾಗ್ರತೆಯಲ್ಲಿಡಲು ಸಾಧ್ಯ. ವಿಚಾರಗಳನ್ನು, ಚಿಂತನೆಗಳನ್ನು ಸುಲಭವಾಗಿ ತಿಳಿಯಲು ಸಹಕಾರಿಯಾಗುತ್ತದೆ. ಯೋಗ ನಮ್ಮ ಶರೀರ-ಮನಸ್ಸುಗಳಲ್ಲಿ ನವಚೈತನ್ಯವನ್ನು ಮೂಡಿಸುತ್ತದೆ. ಆ ನಿಟ್ಟಿನಲ್ಲಿ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜು ವಿದ್ಯಾರ್ಜನೆಯ ಜೊತೆಗೆ ಪ್ರತಿನಿತ್ಯ ಯೋಗವನ್ನೂ ಅಭ್ಯಾಸ ಮಾಡಿಸುತ್ತಿರುವುದು ಶ್ಲಾಘನೀಯ” ಎಂದು ನುಡಿದರು. ಯುವ ಸಿತಾರ್ ಕಲಾವಿದರಾದ ಭಾರತ ಮತ್ತು ಅಂತಾರಾಷ್ಟೀಯ ಮಟ್ಟದಲ್ಲಿ ಹಲವಾರು ಯಶಸ್ವಿ ಸಂಗೀತ ಪ್ರದರ್ಶನ ನೀಡಿರುವ ಎಕ್ಸ್ ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ…
ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಅಮೃತ ಕಾಲೇಜು ಪಡೀಲ್ ಮಂಗಳೂರು ಆಯೋಜಿಸುವ ಕಾಲೇಜು ವಿದ್ಯಾರ್ಥಿಗಳಿಗಾಗಿ 10 ದಿನಗಳ ತುಳು ನಾಟಕ ಕಾರ್ಯಾಗಾರದ ಉದ್ಘಾಟನಾ ಸಮಾರಂಭ ದಿನಾಂಕ 24 ಜೂನ್ 2025ರಂದು ಅಪರಾಹ್ನ ಘಂಟೆ 2.30ಕ್ಕೆ ಮಂಗಳೂರಿನ ಪಡೀಲ್ ನಲ್ಲಿರುವ ಅಮೃತ ಕಾಲೇಜಿನಲ್ಲಿ ನಡೆಯಲಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ತಾರಾನಾಥ ಗಟ್ಟಿ ಕಾಪಿಕಾಡ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಹಿರಿಯ ರಂಗ ತಜ್ಞ ಹಾಗೂ ನಿರ್ದೇಶಕರಾದ ಶ್ರೀ ತಮ್ಮ ಲಕ್ಷ್ಮಣ ಉದ್ಘಾಟಿಸಿ ತುಳು ನಾಟಕ ಕ್ಷೇತ್ರ ಬೆಳೆದು ಬಂದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ರಂಗ ನಟರಾದ ಶ್ರೀ ಪ್ರಭಾಕರ ಕಾಪಿಕಾಡ್, ಹಿರಿಯ ನಟ, ನಿರ್ದೇಶಕ ಹಾಗೂ ನಾಟಕ ಕಾರ್ಯಾಗಾರದ ನಿರ್ದೇಶಕರಾದ ಶ್ರೀ ಜಗನ್ ಪವಾರ್ ಬೇಕಲ್ ಭಾಗವಹಿಸಲಿದ್ದಾರೆ.
ಉಡುಪಿ : 03 ಆಗಸ್ಟ್ 2025ರಂದು ಎಂ.ಜಿ. ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯುವ ‘ಬನ್ನಂಜೆ 90’ರ ನಮನ ಅಂಗವಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆ ದಿನಾಂಕ 18 ಜೂನ್ 2025ರ ಬುಧವಾರದಂದು ಉಡುಪಿಯ ರಾಜಾಂಗಣ ಬಳಿಯ ಮಥುರಾ ಕಂಫರ್ಟ್‌ನಲ್ಲಿ ನಡೆಯಿತು. ವಿದ್ಯಾವಾಚಸ್ಪತಿ ಗೋವಿಂದಾಚಾರ್ಯರ ಬನ್ನಂಜೆ ಬದುಕು, ಸಾಧನೆಯ ಸ್ಮರಣೆಗಾಗಿ ಬನ್ನಂಜೆ 90 ಉಡುಪಿ ನಮನ ಕಾರ್ಯಕ್ರಮ ರಾಜ್ಯದ 24 ಕಡೆಗಳಲ್ಲಿ ನಡೆಯಲಿದೆ ಎಂದು ಸಾಂಸ್ಕೃತಿಕ ಚಿಂತಕಿ ವೀಣಾ ಬನ್ನಂಜೆ ತಿಳಿಸಿದರು . ‘ಬನ್ನಂಜೆ 90ರ ನಮನ ಸಮಿತಿ ಕಾರ್ಯಾಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ “ಬನ್ನಂಜೆ ಗೋವಿಂದಾಚಾರ್ಯರಂತಹ ವ್ಯಕ್ತಿಗಳು ಬದುಕಿನಲ್ಲಿ ಮಾಡಿದ ಶ್ರೇಷ್ಠ ಸಾಧನೆ ಸತ್ತ ನಂತರವೂ ಸ್ಮರಣೀಯ” ಎಂದರು. ಸಭೆಯಲ್ಲಿ ನಡೆದಂತೆ ಬನ್ನಂಜೆಯವರ ಮೂಲಮನೆ ಕುಂಜಿಗುಡ್ಡೆಯಿಂದ ಕರಾವಳಿ ಜಂಕ್ಷನ್ ತನಕ ಮೆರವಣಿಗೆ ದಿನಾಂಕ 03 ಆಗಸ್ಟ್ 2025ರಂದು ಬೆಳಗ್ಗೆ ಘಂಟೆ 10.00ಕ್ಕೆ ಕಾರ್ಯಕ್ರಮ ಉದ್ಘಾಟನೆ, ಬನ್ನಂಜೆ ರಚಿತ ಹಾಡುಗಳ ಗಾಯನ, ಹೈಕೋರ್ಟ್ ನ್ಯಾಯಮೂರ್ತಿ ಶ್ರೀಶಾನಂದರಿಂದ ‘ಬನ್ನಂಜೆ 90…
ಉಡುಪಿ : ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕ, ಅಮ್ಮ ಪ್ರಕಾಶನ ಕಟಪಾಡಿ, ವನಸುಮ ಟ್ರಸ್ಟ್ ಕಟಪಾಡಿ ಹಾಗೂ ವನಸುಮ ವೇದಿಕೆ ಕಟಪಾಡಿ ಆಶ್ರಯದಲ್ಲಿ ಆಯೋಜಿಸಿದ್ದ ರಂಗನಟ ಹಾಗೂ ಚಲನಚಿತ್ರ ನಟ ಬಾಸುಮ ಕೊಡಗು ವಿರಚಿತ “ನಡುರಾತ್ರಿಯ ಸ್ವಾತಂತ್ರ್ಯ’ ಕವನ ಸಂಕಲನದ ಲೋಕಾರ್ಪಣಾ ಸಮಾರಂಭವು ದಿನಾಂಕ 22 ಜೂನ್ 2025ರ ಭಾನುವಾರ ಸಂಜೆ ಉಡುಪಿಯ ಮಥುರಾ ಕಂಫರ್ಟ್ನ ಸಭಾಂಗಣದಲ್ಲಿ ನಡೆಯಿತು. ಕ. ಸಾ. ಪ. ಉಡುಪಿ ತಾಲೂಕು ಅಧ್ಯಕ್ಷರಾದ ರವಿರಾಜ ಎಚ್.ಪಿ. ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ತುಳು ಕೂಟದ ಸ್ಥಾಪಕ, ಖ್ಯಾತ ವೈದ್ಯ ಡಾ. ಭಾಸ್ಕರಾನಂದ ಮಾತನಾಡಿ “ಹೆಸರಿನಲ್ಲೇ ಸುಮ (ಪರಿಮಳ) ಹೊಂದಿರುವ ವಿಶೇಷ ಸದಭಿರುಚಿಯ ರಂಗನಟ ಬಾಸುಮ ಕೊಡಗು. ಅವರು ಸಾಹಿತ್ಯ, ಕಲೆಯ ಸುಮವನ್ನು ಪಸರಿಸುತ್ತಿದ್ದಾರೆ. ನಾನು ಬರೆದ “ಭೀಷ್ಮನ ಕೊನೆಯ ದಿನಗಳು’ ಎಂಬ ಕೃತಿಯನ್ನು ರಂಗದಲ್ಲಿ ಪ್ರದರ್ಶಿಸಿದ್ದಾರೆ. ಸ್ಪರ್ಧೆಯಲ್ಲಂತೂ ಈ ನಾಟಕ ಯಾವಾಗಲೂ ಪ್ರಥಮ ಬರುತ್ತಿತ್ತು. ಅದಕ್ಕೆ ಕಾರಣ ನನ್ನ ಕೃತಿಯಲ್ಲ,…
ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ವತಿಯಿಂದ ಆಶಾ ಮತ್ತು ಅಶೋಕ್ ಕುತ್ಯಾರು ಪ್ರಾಯೋಜಿತ ಪ್ರೊ. ಕು. ಶಿ. ಹರಿದಾಸ ಭಟ್ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 21 ಜೂನ್ 2025 ರಂದು ಉಡುಪಿಯ ಟಿ.ಮೋಹನದಾಸ ಪೈ ಕೌಶಲ ಅಭಿವೃದ್ಧಿ ಕೇಂದ್ರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಮಾತನಾಡಿ “ಯಕ್ಷಗಾನ, ಭೂತಕೋಲ ಸೇರಿದಂತೆ ಉಡುಪಿ ಪ್ರದೇಶದ ಜಾನಪದ ಕಲಾ ಪ್ರಕಾರಗಳಿಗೆ ಜಾಗತಿಕ ಮನ್ನಣೆ ದೊರಕಿಸಿಕೊಟ್ಟವರು ಪ್ರೊ. ಕು. ಶಿ. ಹರಿದಾಸ ಭಟ್. ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವ ಇಂದಿನ ದಿನಮಾನದಲ್ಲಿ ಪುಸ್ತಕ ಪ್ರಕಟಿಸುವುದು ಸವಾಲಿನ ಕೆಲಸ. ಆದರೂ ಹರಿದಾಸ ಭಟ್ ಅವರ ‘ಲೋಕಾಭಿರಾಮ’ ಕೃತಿಯ ಆರು ಸಂಪುಟಗಳನ್ನು ಸಮಗ್ರ ಕೃತಿಯಾಗಿ ಪ್ರಕಟಿಸಬೇಕು. ಗೋವಿಂದ ಪೈ ಸಂಶೋಧನ ಕೇಂದ್ರ ಅದಕ್ಕೆ ಮುಂದಾಗಬೇಕು. ಜಾನಪದ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಕೆಲಸ ಮಾಡಿದ್ದರೂ ಹರಿದಾಸ ಭಟ್…
ಕಾಸರಗೋಡು : * ಕಾಸರಗೋಡು: 2025ನೇ ಸಾಲಿನ ಕೊಡಗಿನ ಗೌರಮ್ಮ ದತ್ತಿನಿಧಿ ಹಾಗೂ ಹವ್ಯಕ ಮಹಾಮಂಡಲ ಮಾತೃಮಂಡಳಿ ಇವುಗಳ ಸಹಯೋಗದಲ್ಲಿ ಹವ್ಯಕ ಮಹಿಳೆಯರಿಗಾಗಿ ಸಣ್ಣ ಕಥಾ ಸ್ಪರ್ಧೆಯನ್ನು ಅಖಿಲ ಭಾರತ ಮಟ್ಟದಲ್ಲಿ ಆಯೋಜಿಸಲಾಗಿದೆ. ಕಥೆ ನೀಡುವವರು ನಿಯಮಾವಳಿಗಳಂತೆ ಕಥೆಗಳನ್ನು ಕಳುಹಿಸಬಹುದಾಗಿದೆ. ಹವ್ಯಕ ಮಹಿಳೆಯರು (ವಯೋಮಿತಿ ಇಲ್ಲ, ಹೈಸ್ಕೂಲ್, ಕಾಲೇಜು ವಿದ್ಯಾರ್ಥಿನಿಯರೂ ಭಾಗವಹಿಸಬಹುದು). ಹವ್ಯಕ ಭಾಷೆ (ಯಾವುದೇ ಸೀಮೆಯ ಹವ್ಯಕ ಭಾಷೆ) ಆಗಿರಬಹುದು. ಈ ವರೆಗಿನ ಪ್ರಥಮ ವಿಜೇತೆಯರಿಗೆ ಅವಕಾಶವಿಲ್ಲ. ಅಲ್ಲದೆ ಎಲ್ಲಿಯೂ ಪ್ರಕಟವಾಗಿರದ ಸಾಮಾಜಿಕ ಕಥೆಯಾಗಿರಬೇಕು. ಸಾಮಾನ್ಯ 8 ಪುಟಕ್ಕೆ ಮೀರದಂತೆ ಕಾಗದದ ಒಂದೇ ಬದಿಗೆ ಸ್ಪುಟವಾಗಿ ಬರೆದಿರಬೇಕು. (ಟೈಪ್ ಮಾಡಿದ್ದಾದರೆ ಉತ್ತಮ, ಪದಗಳ ಮಿತಿ ಎರಡು ಸಾವಿರ), ಬರಹಗಾರರು ತಮ್ಮ ಹೆಸರು, ವಿಳಾಸ, ಸಂಪರ್ಕ ಸಂಖ್ಯೆಯನ್ನು ಬೇರೆ ಕಾಗದದಲ್ಲಿ ಬರೆದು ಲಗತ್ತಿಸಿರಬೇಕು. ಇ ಮೇಲ್ ಮೂಲಕ ಕಳುಹಿಸಿದರೆ ಸ್ವೀಕಾರಾರ್ಹವಲ್ಲ. ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಕಥೆಗಳಿಗೆ ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ನಗದನ್ನು ಬಹುಮಾನವಾಗಿ ನೀಡಲಾಗುವುದು. ಆಸಕ್ತರು 20…
ಮೈಸೂರು : ಭಿನ್ನಷಡ್ಜ ಇದರ ವತಿಯಿಂದ ಹಲವು ಪ್ರಕಾರದ ಸಾಹಿತ್ಯ ಮತ್ತು ಸಂಗೀತದ ಅನುಸಂಧಾನ ‘ರಾಗ – ರಂಗ’ ರಂಗಸಂಗೀತ ತರಗತಿಗಳು ದಿನಾಂಕ 05 ಜುಲೈ 2025ರಿಂದ ಮೈಸೂರಿನಲ್ಲಿ ಆರಂಭವಾಗಲಿದೆ. ಕನ್ನಡ ರಂಗಭೂಮಿಯಲ್ಲಿ ವೃತ್ತಿ ರಂಗಭೂಮಿಯಿಂದ ಇಂದಿನವರೆಗೆ ನಡೆದು ಬಂದ ರಂಗಸಂಗೀತವನ್ನು, ಹಲವಾರು ರೀತಿಯ ಸಾಹಿತ್ಯ ಮತ್ತು ಸಂಗೀತ ಪದ್ದತಿಗಳನ್ನು ಉದಾಹರಣೆ ಸಹಿತ ಕಲಿಸುವ ಪ್ರಕ್ರಿಯೆಯನ್ನು ಅರಂಭಿಸುತ್ತಿದ್ದೇವೆ. ರಂಗಭೂಮಿಗೆ ಬೇಕಾದ ಉಸಿರಾಟ, ಧ್ವನಿ ಮತ್ತು ದೇಹದ ನಡುವಿನ ಸಂಬಂಧ ಮತ್ತು ಸಾಮರಸ್ಯವನ್ನು ಅಭ್ಯಾಸಮಾಡುವ ಒಂದು ಅವಕಾಶ. 10 ವಯಸ್ಸಿನ ಮೇಲ್ಪಟ್ಟವರಿಗೆ ಸಂಗೀತದ ಪ್ರಾಥಮಿಕ ಪರಿಚಯವನ್ನು ಸುಲಭವಾಗಿ ಹಾಡುಗಳ ಮೂಲಕ ತಿಳಿಸಿಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 9632535749 ಸಂಖ್ಯೆಯನ್ನು ಸಂಪರ್ಕಿಸಿರಿ.