Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಕುಡ್ಲ ಆರ್ಟ್ಸ್ ಫೆಸ್ಟಿವಲ್, ನೃತ್ಯಾಂಗಣ ಮತ್ತು ಅಮೃತ ವಿದ್ಯಾಲಯಂ ಇವುಗಳ ಸಹಯೋಗದಲ್ಲಿ ಪಸ್ತುತ ಪಡಿಸುವ ‘ಶರಸೇತು ಬಂಧನ’ ಹರಿಕಥೆಯು ದಿನಾಂಕ 14-07-2024ರಂದು ಸಂಜೆ ಗಂಟೆ 6-30ಕ್ಕೆ ಮಂಗಳೂರಿನ ಬೋಳೂರ್ ಅಮೃತ ವಿದ್ಯಾಲಯಂನಲ್ಲಿ ಪ್ರಸ್ತುತಗೊಳ್ಳಲಿದೆ. ಈ ಹರಿಕಥೆ ಕಾರ್ಯಕ್ರಮದಲ್ಲಿ ಹರಿದಾಸ ಶ್ರೇಣಿ ಮುರಳಿಯವರಿಗೆ ಶ್ರೀಪತಿ ಭಟ್ ಬೆಲ್ಲೇರಿ ಹಾರ್ಮೋನಿಯಂನಲ್ಲಿ ಮತ್ತು ಕೌಶಿಕ್ ಮಂಜನಾಡಿ ತಬಲಾದಲ್ಲಿ ಸಹಕರಿಸಲಿದ್ದಾರೆ.
ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು, ‘ಕಾಂಜವೇ’ ಸಾಂಸ್ಕೃತಿಕ ವೇದಿಕೆ ಬೆಳ್ತಂಗಡಿ, ವಿದ್ಯಾಪ್ರಕಾಶನ ಅತ್ತಾವರ ಮಂಗಳೂರು ಹಾಗೂ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಇದರ ಸಹಯೋಗದೊಂದಿಗೆ ಮೂರು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 12-07-2024ರಂದು ಮಂಗಳೂರಿನ ಕೆನರಾ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಶೀನಾ ನಾಡೋಳಿಯವರ ‘ಬೊಳಂತ್ಯೆ-ಉರ್ಪೆಲ್’, ‘ಧರ್ಮದೃಷ್ಟಿ’ ಮತ್ತು ಪ್ಲೀಸ್ ನನ್ನ ಫೀಸ್ ಕೊಡಿ’ ಎಂಬ ಮೂರು ಕೃತಿಗಳನ್ನು ವಿಶ್ರಾಂತ ಉಪಕುಲಪತಿಗಳಾದ ಡಾ. ಕೆ. ಚಿನ್ನಪ್ಪ ಗೌಡ ಇವರು ಲೋಕಾರ್ಪಣೆಗೊಳಿಸಲಿದ್ದು, ಆಂಗ್ಲ ಭಾಷಾ ಪ್ರಾಧ್ಯಾಪಕರಾದ ಶ್ರೀ ನಂದಕಿಶೋರ್ ಎಸ್. ಮತ್ತು ಖ್ಯಾತ ರಂಗಕರ್ಮಿಯಾದ ಶ್ರೀ ಮೋಹನ್ ಚಂದ್ರ ಯು. ಇವರುಗಳು ಪುಸ್ತಕ ಪರಿಚಯ ಮಾಡಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ತಾರಾನಾಥ್ ಗಟ್ಟಿ ಇವರು ಅಧ್ಯಕ್ಷತೆ ವಹಿಸಲಿದ್ದು, ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಶೆಟ್ಟಿ, ಖ್ಯಾತ ಸಾಹಿತಿಗಳಾದ ಶ್ರೀ ರಘು ಇಡ್ಕಿದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀ ದಯಾನಂದ…
ಕಾಂತಾವರ: ಯಕ್ಷದೇಗುಲ ಕಾಂತಾವರದ ವಾರ್ಷಿಕ ಆಟ ,ಕೂಟ, ಬಯಲಾಟ ಸಹಿತ 22 ನೇ ‘ಯಕ್ಷೋಲ್ಲಾಸ’ ಕಾರ್ಯಕ್ರಮವು ದಿನಾಂಕ 21-07-2024ನೇ ಭಾನುವಾರದಂದು ಶ್ರೀ ಕ್ಷೇತ್ರ ಕಾಂತಾವರದಲ್ಲಿ ನಡೆಯಲಿದೆ. ಅಂದು ಯಕ್ಷ ರಂಗದ ಸಿಡಿಲ ಮರಿ ಖ್ಯಾತಿವೆತ್ತ ಪುತ್ತೂರು ದಿ. ಡಾ. ಶ್ರೀಧರ ಭಂಡಾರಿ ಸಂಸ್ಮರಣಾ ಪ್ರಶಸ್ತಿಯನ್ನು ಧರ್ಮಸ್ಥಳ ಮೇಳದ ನಿವೃತ್ತ ಕಲಾವಿದ ನಿಡ್ಲೆ ಗೋವಿಂದ ಭಟ್ ಇವರಿಗೆ ಹಾಗೂ ಸವ್ಯ ಸಾಚಿ ಕಲಾವಿದ ಬಾಯಾರು ದಿ. ಪ್ರಾಕಾಶ್ಚಂದ್ರ ರಾವ್ ಸಂಸ್ಮರಣಾ ಪ್ರಶಸ್ತಿಯನ್ನು ಸುರತ್ಕಲ್ ಮೇಳದ ನಿವೃತ್ತ ಕಲಾವಿದ ಪುತ್ತಿಗೆ ಕುಮಾರ ಗೌಡ ಇವರಿಗೆ ನೀಡಲು ಸಂಸ್ಥೆಯ ಆಯ್ಕೆ ಸಮಿತಿ ತೀರ್ಮಾನಿಸಿದೆ. ಅಂದು ನಡೆಯುವ ಸಭಾ ಸಂಭ್ರಮದಲ್ಲಿ ಕ್ಷೇತ್ರದ ಧರ್ಮದರ್ಶಿ ಡಾ. ಜೀವಂಧರ ಬಲ್ಲಾಳರ ಅಧ್ಯಕ್ಷತೆಯಲ್ಲಿ ಕಾರ್ಕಳ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ವಿ. ಸುನಿಲ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು ನಗದು ಪುರಸ್ಕಾರವನ್ನು ಒಳಗೊಂಡಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಹಾವೀರ ಪಾಂಡಿ ತಿಳಿಸಿದ್ದಾರೆ. ಪುತ್ತಿಗೆ ಕುಮಾರ ಗೌಡ ನಿಡ್ಲೆ…
ಮೈಸೂರು: ಮೈಸೂರಿನ ಗಾನಭಾರತಿ ಸಾಂಸ್ಕೃತಿಕ ವೇದಿಕೆಯ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಮಂಗಳೂರಿನ ನಾದನೃತ್ಯ ಕಲಾಸಂಸ್ಥೆಯ ನಿರ್ದೇಶಕಿ ಡಾ. ಭ್ರಮರಿ ಶಿವಪ್ರಕಾಶರಿಂದ ‘ಕುಮಾರವ್ಯಾಸ ನೃತ್ಯಭಾರತ’ ಎಂಬ ಶಾಸ್ತ್ರೀಯ ಭರತನಾಟ್ಯ ಕಾರ್ಯಕ್ರಮವು ದಿನಾಂಕ 04-07-2024 ರಂದು ಮೈಸೂರಿನ ಕುವೆಂಪು ನಗರದಲ್ಲಿರುವ ವೀಣೆ ಶೇಷಣ್ಣ ಭವನದಲ್ಲಿ ನಡೆಯಿತು. ಗಾನಭಾರತಿಯ ಅಧ್ಯಕ್ಷೆ ನಿವೃತ್ತ ಕನ್ನಡ ಪ್ರಾಧ್ಯಾಪಕಿ, ಸಂಗೀತಜ್ಞೆ, ವಿಮರ್ಶಕಿ ಡಾ. ರಮಾ ವಿ. ಬೆಣ್ಣೂರು ಮಾತನಾಡಿ “ಕುಮಾರವ್ಯಾಸ ಹಾಡಿದ ಕೃಷ್ಣ ಕಥೆಯ ನೃತ್ಯ ಪ್ರಸ್ತುತಿಯು ಕನ್ನಡನಾಡಿನ ಕಲಾಪ್ರಪಂಚದಲ್ಲಿ ಒಂದು ಅನನ್ಯ ಪ್ರಯತ್ನ. ಕನ್ನಡ ಸಾಹಿತ್ಯ ಕೃತಿ ಆಧಾರಿತ ಪ್ರಸ್ತುತಿಯನ್ನೇ ಪ್ರೋತ್ಸಾಹಿಸಲು ಬಯಸಿ ಪ್ರಾಯೋಜಿಸಿದ ಶ್ರೀ ರವಿ ಬಳೆ ದಂಪತಿಗಳ ಸಹೃದಯತನವು ಶ್ಲಾಘನೀಯ.” ಎಂದರು.
ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ಸಂಯೋಜನೆಯಲ್ಲಿ ‘ಸಿನ್ಸ್ 1999 ಶ್ವೇತಯಾನ-41’ ಕಾರ್ಯಕ್ರಮದಡಿಯಲ್ಲಿ ದಿಮ್ಸಾಲ್ ಫಿಲ್ಮ್ಸ್ ಹಾಗೂ ಧಮನಿ ಟ್ರಸ್ಟ್ ಸಹಕಾರದೊಂದಿಗೆ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಶ್ರೀ ರಾಮ ಪಟ್ಟಾಭಿಷೇಕ’ ತಾಳಮದ್ದಳೆ ಕಾರ್ಯಕ್ರಮವು ದಿನಾಂಕ 07-07-2024 ರಂದು ತೆಕ್ಕಟ್ಟೆಯ ಪಟೇಲರ ಬೆಟ್ಟುವಿನ ಶಾಂತಾ ಸುಧಾಕರ ಶೆಟ್ಟಿ ಇವರ ಮನೆಯಂಗಳದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸುಧಾಕರ ಶೆಟ್ಟಿ, ಶಾಂತಾ ಶೆಟ್ಟಿ, ಕುಮಾರಿ ಮಾನ್ವಿಯವರನ್ನು ಅಭಿನಂದಿಸಿ ಮಾತನಾಡಿದ ಬಸ್ರೂರು ಮಹಾಲಿಂಗೇಶ್ವರ ದೇಗುಲದ ಆಡಳಿತ ಧರ್ಮದರ್ಶಿ ಅಪ್ಪಣ್ಣ ಹೆಗಡೆ “ಧಾರ್ಮಿಕ ವಿಧಿ ವಿಧಾನಗಳನ್ನು ಅರಿತ ಸುಧಾಕರ ಶೆಟ್ಟಿಯವರು ಗುರು ಹಿರಿಯರ ಮೇಲೆ ಅಪಾರ ಗೌರವವನ್ನು ಹೊಂದಿದವರು. ಜೀವನದಲ್ಲಿ ಬಹು ಕಷ್ಟದಿಂದ ಏಳ್ಗೆಯನ್ನು ಸಾಧಿಸಿದವರು. ಅಪಾರ ಜನಸ್ನೇಹಿಯಾಗಿ ಸಮಾಜದಲ್ಲಿ ಚಿರಪರಿಚಿತರಾಗಿ ಸಾಂಸ್ಕೃತಿಕ ವಲಯ, ಸಮಾಜ ಸೇವಾ ಸಂಸ್ಥೆ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ನೆರವನ್ನು ನೀಡುತ್ತಾ ಬೆಳೆದವರು. ಕಲಾಪ್ರೇಮಿಯಾಗಿರುವ ಇವರು ಗ್ರಹಪ್ರವೇಶ ಎನ್ನುವ ಧಾರ್ಮಿಕ ಕಾರ್ಯಕ್ರಮದ ಈ ಸಂದರ್ಭದಲ್ಲಿ ತಾಳಮದ್ದಳೆಯಂತಹ ಅಪೂರ್ವ ಕಾರ್ಯಕ್ರಮವನ್ನು ಏರ್ಪಡಿಸಿ, ಪ್ರೇಕ್ಷಕರಿಗೂ ಆಹ್ವಾನವಿತ್ತು ಸತ್ಕರಿಸುವ ಮನೋಭಾವ…
ಮಂಗಳೂರು : ಉರ್ವಸ್ಟೋರ್ ನಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ 1932ರಲ್ಲಿ ದಿ. ಹೂವಪ್ಪ ಮಡಿವಾಳರಿಂದ ಆರಂಭಗೊಂಡ ಶ್ರೀ ಶಾರದಾಂಬಾ ಯಕ್ಷಗಾನ ಮಂಡಳಿಯನ್ನು ದಶಕಗಳ ಕಾಲ ಮುನ್ನಡೆಸಿ ಕಲಾಸೇವೆ ಸಲ್ಲಿಸಿದ ಭಾಗವತ ಕೃಷ್ಣಪ್ಪ ಕರ್ಕೇರ ಇವರ ಸಂಸ್ಮರಣಾ ಕಾರ್ಯಕ್ರಮವು ದಿನಾಂಕ 03-07-2024ರ ಬುಧವಾರದಂದು ಮಂಗಳೂರಿನ ಉರ್ವಸ್ಟೋರ್ ನಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀಮಹಾಗಣಪತಿ ದೇವಸ್ಥಾನ ಉರ್ವಸ್ಟೋರ್ ಇದರ ಅಧ್ಯಕ್ಷರಾದ ಸುರೇಂದ್ರ ರಾವ್ ಮಾತನಾಡಿ “ಅಪ್ರತಿಮ ಯಕ್ಷಗಾನ ಭಾಗವತ ದಿವಂಗತ ಡಿ. ಕೃಷ್ಣಪ್ಪ ಕರ್ಕೇರ ಅವರು ಯಕ್ಷಗಾನ ಕಲಾ ಸೇವೆಗೈದು, ಯಕ್ಷಲೋಕದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ. ಅವರ ಕಲಾಸೇವೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಅವರು ಮುನ್ನಡೆಸಿದ ಶ್ರೀ ಶಾರದಾಂಬಾ ಯಕ್ಷಗಾನ ಮಂಡಳಿಯ ಯಕ್ಷಗಾನ ತಾಳಮದ್ದಲೆ ವಾರದ ಕೂಟಗಳಿಗೆ ಸಂಪೂರ್ಣ ಬೆಂಬಲ ನೀಡಬೇಕು.” ಎಂದು ಹೇಳಿದರು. ಶ್ರೀಶಾರದಾಂಬಾ ಯಕ್ಷಗಾನ ಮಂಡಳಿಯ ಗೌರವಾಧ್ಯಕ್ಷ ಉದ್ಯಮಿ ಕೆ. ಎಲ್. ಜಯಪ್ರಕಾಶ್ ರಾವ್, ಮಹಾಪೋಷಕ ಸಿ. ಎಸ್. ಭಂಡಾರಿ, ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಜಿಲ್ಲಾಧ್ಯಕ್ಷ…
ಕುಶಾಲನಗರ : ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಆಯೋಜಿಸಿದ ಗ್ರೀಷ್ಮಸಿರಿ ಕವಿಗೋಷ್ಠಿ ಅಂಗವಾಗಿ ಉಳುವಂಗಡ ಕಾವೇರಿ ಉದಯ ಅವರ ‘ಕಲ್ಪನೆಯ ಹನಿಗಳು’ ಕವನ ಸಂಕಲನದ ಲೋಕಾರ್ಪಣಾ ಸಮಾರಂಭವು ದಿನಾಂಕ 07-07-2024ರ ಭಾನುವಾರದಂದು ಕುಶಾಲನಗರ ತಾಲೂಕಿನ ಹಾರಂಗಿಯಲ್ಲಿ ನಡೆಯಿತು. ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ “ಕವಿಗಳನ್ನು ಸಮಾಜ ಗಮನಿಸುತ್ತಿರುತ್ತದೆ. ಹಾಗಾಗಿ ಕವನ ಬರೆಯುವವರು ಸಾಕಷ್ಟು ಹುಷಾರಾಗಿ ಇರಬೇಕು. ಕವನಗಳ ರಚನೆ ಬಹಳ ಸುಲಭ ಎಂದು ಅಂದು ಕೊಳ್ಳುತ್ತೇವೆ. ಆದರೆ ಇದರಷ್ಟು ಆಪಾಯಕಾರಿ ಕೆಲಸ ಯಾವುದೂ ಇಲ್ಲ. ಕವನ ಬರೆಯುವಾಗ ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಕವನ ಬರೆಯುವವರಿಗೆ ಅದರ ಪರಿಣಾಮಗಳ ಅರಿವು ಇರಬೇಕು. ಬರೆಯುವವರು ಓದುವ ಹವ್ಯಾಸ ಹೊಂದಿರಬೇಕು. ಹೆಚ್ಚು ಹೆಚ್ಚು ಓದಿ ಕಡಿಮೆ ಬರೆಯಬೇಕು. ಬರೆಯುವುದನ್ನು ಪರಿಣಾಮಕಾರಿಯಾಗಿ ಬರೆಯಬೇಕು. ಶಬ್ದಗಳನ್ನು ಚೆಂದವಾಗಿ ಜೋಡಿಸುವುದು ಕೂಡ ಒಂದು ಕಲೆ. ಈ ಕಲೆ ಕವಿಗಳಿಗೆ ಇರಬೇಕು. ಕವನ ಬರೆದವರು ಅದನ್ನು ತಾವೇ ಒಮ್ಮೆ ಓದಬೇಕು. ಅದನ್ನು ಒಳ್ಳೆಯ…
ಮುಡಿಪು : ಮಂಗಳೂರು ವಿಶ್ವ ವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯಿಂದ ನಡೆದ ಬಿತ್ತಿ ದಿನಾಚರಣೆ ಮತ್ತು ಗುಂಡ್ಮಿ ಚಂದ್ರಶೇಖರ ಐತಾಳ್ ನೆನಪಿನ ಬಹುಭಾಷಾ ಕವಿಗೋಷ್ಠಿಯು ದಿನಾಂಕ 05-07-2024ರಂದು ಎಸ್.ವಿ.ಪಿ. ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ‘ಬಿತ್ತಿ’ ಗೋಡೆ ಬರಹ ವಾರ್ಷಿಕ ಸಂಪುಟ ಬಿಡುಗಡೆಗೊಳಿಸಿದ ಅಡ್ಯಾರಿನ ಸಹ್ಯಾದ್ರಿಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಮತ್ತು ಲೇಖಕಿ ಅಕ್ಷಯ ಆರ್. ಶೆಟ್ಟಿ ಮಾತನಾಡುತ್ತಾ “ಏಕತಾನತೆ ಮತ್ತು ಒತ್ತಡವನ್ನು ನಿವಾರಿಸಲು ಬರವಣೆಗೆ ಸಹಕಾರಿಯಾಗಿದ್ದು, ಆ ಮೂಲಕ ಸಮಾಜದೊಂದಿಗೆ ಸೃಜನಶೀಲ ಸಂವಾದ ನಡೆಸಲು ಸಾಧ್ಯವಾಗುತ್ತದೆ” ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಸೋಮಣ್ಣ ಹೊಂಗಳ್ಳಿ ಮಾತನಾಡಿ “ಕನ್ನಡದ ಹಿರಿಯ ಲೇಖಕರನ್ನು ಅಧ್ಯಯನ ಮಾಡುವ ಜೊತೆಗೆ ಸಮಕಾಲೀನ ಬರಹಗಾರರ ಕೃತಿಗಳ ಓದು, ವಿಮರ್ಶೆ ನಡೆಯಬೇಕಿದೆ” ಎಂದರು. ವಿಭಾಗದ ಪ್ರಾಧ್ಯಾಪಕರಾದ ನಾಗಪ್ಪ ಗೌಡ, ಧನಂಜಯ ಕುಂಬ್ಳೆ, ಯಶುಕುಮಾರ್, ‘ಬಿತ್ತಿ’ ಸಂಪಾದಕ ಬ್ರಿಜೇಶ್ ಯು. ಉಳ್ಳಾಲ್ ಭಾಗವಹಿಸಿದ್ದರು. ಕವಿಗೋಷ್ಠಿಯಲ್ಲಿ ಪ್ರತೀಕ್ಷ, ಶಂಕರ್…
ತೆಕ್ಕಟ್ಟೆ : ಕೋಟದ ಯಕ್ಷಾಂತರಂಗ ವ್ಯವಸಾಯೀ ಯಕ್ಷತಂಡ ಮತ್ತು ಡಾ. ಕೋಟ ಶಿವರಾಮ ಕಾರಂತ ಥೀಂ ಪಾರ್ಕ್ ಇವರ ವತಿಯಿಂದ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 13-07-2024ರಂದು ಸಂಜೆ 4-00 ಗಂಟೆಗೆ ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಯಕ್ಷಾಂತರಂಗ ವ್ಯವಸಾಯೀ ಯಕ್ಷತಂಡ ಇದರ ಅಧ್ಯಕ್ಷರಾದ ಶ್ರೀ ಆನಂದ ಸಿ ಕುಂದರ್ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ತೆಕ್ಕಟ್ಟೆಯ ರೋಟರಿ ಕ್ಲಬ್ ನ ಅಧ್ಯಕ್ಷರಾದ ರೊ| ಗಣಪತಿ ಟಿ. ಶ್ರೀಯಾನ್ ಇವರು ಉದ್ಘಾಟನೆ ಮಾಡಲಿರುವರು. ಗೆಳೆಯರ ಬಳಗದ ಅಧ್ಯಕ್ಷರಾದ ಶ್ರೀ ಕೆ. ತಾರಾನಾಥ ಹೊಳ್ಳ, ತೆಕ್ಕಟ್ಟೆಯ ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷರಾದ ಶ್ರೀ ಹೆರಿಯ ಮಾಸ್ಟ್ರು ಮತ್ತು ಯಕ್ಷಾಂತರಂಗ ವ್ಯವಸಾಯೀ ಯಕ್ಷತಂಡ ಇದರ ಕಾರ್ಯಾಧ್ಯಕ್ಷರಾದ ಶ್ರೀ ಸುಬ್ರಾಯ ಆಚಾರ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಯಕ್ಷಾಂತರಂಗ ವ್ಯವಸಾಯೀ ಯಕ್ಷತಂಡವು ‘ಅಂಬೆ’ ಯಕ್ಷಗಾನ ಪ್ರದರ್ಶನ ಪ್ರಸ್ತುತ ಪಡಿಸಲಿದ್ದಾರೆ.
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು, ಪುತ್ತೂರು ಇದರ ವತಿಯಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ತಿಂಗಳ ಸರಣಿ ತಾಳಮದ್ದಳೆ ಹಾಗೂ ಇತ್ತೀಚೆಗೆ ನಿಧನರಾದ ಯಕ್ಷಗಾನದ ಖ್ಯಾತ ವೇಷಧಾರಿಗಳಾದ ಕುಂಬ್ಳೆ ಶ್ರೀಧರ್ ರಾವ್ ಇವರಿಗೆ ನುಡಿನಮನ ಕಾರ್ಯಕ್ರಮವು ದಿನಾಂಕ 08-07-2024ರಂದು ಭಾಸ್ಕರ್ ಬಾರ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ದಿವಂಗತರು ಬೆಳೆದು ಬಂದ ದಾರಿ ಅವರ ಸರಳ ಜೀವನ ಕುರಿತಾಗಿ ಸಂಘದ ಸದಸ್ಯರಾದ ಪೂಕಳ ಲಕ್ಷ್ಮೀನಾರಾಯಣ ಭಟ್, ಪಕಳಕುಂಜ ಶ್ಯಾಮ್ ಭಟ್, ಗುಂಡ್ಯಡ್ಕ ಈಶ್ವರ ಭಟ್, ಗುಡ್ಡಪ್ಪ ಬಲ್ಯ, ದುಗ್ಗಪ್ಪ ಎನ್., ಶುಭಾ ಜೆ.ಸಿ. ಅಡಿಗ ಮಹಿಳಾ ಯಕ್ಷಗಾನ ಸಂಘದ ಅಧ್ಯಕ್ಷ ಪ್ರೇಮಲತಾ ಟಿ. ರಾವ್ ಮಾತಾಡಿ ನುಡಿನಮನ ಸಲ್ಲಿಸಿದರು. ದೇವಳದ ಅರ್ಚಕ ಹರೀಶ್ ಭಟ್, ಪದ್ಮನಾಭ, ಗಣೇಶ್ ಕೇಕುಣ್ಣಾಯ, ಟಿ. ರಂಗನಾಥ ರಾವ್, ಪದ್ಯಾಣ ಶಂಕರನಾರಾಯಣ ಭಟ್, ಆನಂದ ಸವಣೂರು, ಎಲ್.ಎನ್. ಭಟ್, ಮುರಳೀಧರ ಕಲ್ಲೂರಾಯ ಮತ್ತು ನಿತೀಶ್ ಈಶ್ವರಮಂಗಿಲ ಮೊದಲಾದವರು ಉಪಸ್ಥಿತಿತರಿದ್ದರು. ಬಳಿಕ ‘ಭಕ್ತ ಸುಧನ್ವ’…