Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ.) ಇದರ ನವೀಕೃತ ‘ಸಾಹಿತ್ಯ ಸದನ’ ಉದ್ಘಾಟನಾ ಸಮಾರಂಭವು ದಿನಾಂಕ 13-07-2024ರಂದು ಮಂಗಳೂರಿನ ಉರ್ವಸ್ಟೋರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕರರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರಾದ ಶ್ರೀಮತಿ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಇವರು ಉದ್ಘಾಟಿಸಲಿದ್ದು, ಸಂಸದರಾದ ಮಾನ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಮಾನ್ಯ ಡಿ. ವೇದವ್ಯಾಸ ಕಾಮತ್, ಕ.ಸಾ.ಪ.ದ ಅಧ್ಯಕ್ಷರಾದ ಡಾ. ಶ್ರೀನಾಥ ಎಂ.ಪಿ., ಎಂ.ಆರ್.ಪಿ.ಎಲ್.ನ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಕೃಷ್ಣ ಹೆಗ್ಡೆ, ಕಾರ್ಪೊರೇಟರ್ ಶ್ರೀ ಗಣೇಶ ಕುಲಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಹಿರಿಯ ಲೇಖಕರಾದ ಶ್ರೀಮತಿ ಇಂದಿರಾ ಹಾಲಂಬಿ ಮತ್ತು ಹಿರಿಯ ವಾಚಕರಾದ ಶ್ರೀಮತಿ ಶಕುಂತಲಾ ಟಿ. ಶೆಟ್ಟಿ ಇವರ ಗೌರವ ಉಪಸ್ಥಿತಿಯಲ್ಲಿ ಪ್ರಾಧ್ಯಾಪಕರಾದ ಡಾ. ಸಬಿತಾ ಬನ್ನಾಡಿ ಯವರು ಮುನ್ನೋಟದ ಮಾತುಗಳನ್ನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಕ್ಷತಾ ಬೈಕಾಡಿ ಹಾಗೂ ಕಲಾಶ್ರೀ ವಿದುಷಿ…
ಕೋಟ : ಕೋಟದ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಸಾಹಿತ್ಯ ಸಂಘದ ಆಶ್ರಯದಲ್ಲಿ ‘ಸಾಹಿತ್ಯ ಮತ್ತು ಬದುಕು’ ಎಂಬ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ 02-07-2024ರಂದು ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಸುಜಯೀಂದ್ರ ಹಂದೆ ಎಚ್. ಮಾತನಾಡಿ “ಸಾಹಿತ್ಯ ಬೇರೆ ಅಲ್ಲ, ಬದುಕು ಬೇರೆ ಅಲ್ಲ. ಬದುಕಿನ ಪ್ರತಿಬಿಂಬವೇ ಸಾಹಿತ್ಯ. ಒಂಟಿತನ ಎಂಬುದು ಭೂತಗಳ ಆಗರ. ಏಕಾಂತದ ಮನಸ್ಸು ನಮ್ಮನ್ನು ಕೆಟ್ಟ ಕೆಟ್ಟ ಆಲೋಚನೆಗಳಿಗೆ ಕೊಂಡೊಯ್ಯುತ್ತವೆ. ಸಾಹಿತ್ಯವು ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಬಲ್ಲ ಶಕ್ತಿ ಹೊಂದಿದೆ. ಮನಸ್ಸಿನ ಕೊಳೆ ದೂರ ಮಾಡಲು ಸಾಹಿತ್ಯದ ಓದು ಮತ್ತು ಆಸಕ್ತಿ ಸುಲಭದ ದಾರಿ. ಪುರಾಣ ಸಾಹಿತ್ಯಗಳನ್ನು ಓದುವುದರ ಮೂಲಕ ನೈತಿಕ ಮೌಲ್ಯವನ್ನು ಪಡೆಯಬಹುದು. ಸಾಹಿತ್ಯಾಧ್ಯಯನದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ.” ಎಂದರು. ಮುಖ್ಯೋಪಾಧ್ಯಾಯ ವೆಂಕಟೇಶ ಉಡುಪ, ಶಿಕ್ಷಕರಾದ ಪ್ರೇಮಾನಂದ ಮತ್ತು ಶಂಭು ಭಟ್ಟರು ಸುಜಯೀಂದ್ರ ಹಂದೆಯವರನ್ನು ಸನ್ಮಾನಿಸಿದರು. ವಿದ್ಯಾರ್ಥಿ…
ಬೆಂಗಳೂರು: ಕರ್ನಾಟಕ ಸುಗಮ ಸಂಗೀತ ಪರಿಷತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಸಹಯೋಗದೊಂದಿಗೆ ಎಚ್. ಎಸ್. ವೆಂಕಟೇಶ್ಮೂರ್ತಿ ಇವರಿಗೆ 80ರ ಹುಟ್ಟುಹಬ್ಬದ ಅಭಿನಂದನೆ – ಗೀತ ಗೌರವ ಹಾಗೂ ಕವಿ ಚನ್ನವೀರ ಕಣವಿ ಇವರಿಗೆ ನುಡಿನಮನ ಕಾರ್ಯಕ್ರಮವು ದಿನಾಂಕ 08-07-2024ರ ಭಾನುವಾರದಂದು ಬೆಂಗಳೂರಿನ ಬಸವನಗುಡಿಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಇದರ ವಾಡಿಯಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್. ಜಿ. ಸಿದ್ದರಾಮಯ್ಯ “ಕನ್ನಡದಲ್ಲಿ ಹಲವು ಸಮನ್ವಯ ಕವಿಗಳಿದ್ದರೆ ಅವರಲ್ಲಿ ಚನ್ನವೀರ ಕಣವಿ ಕೂಡ ಒಬ್ಬರು. ಕನ್ನಡ ಸಾಹಿತ್ಯ ಇಂದಿನವರೆಗೂ ಸಮೃದ್ಧವಾಗಿ ಬೆಳೆಯುತ್ತಾ ಬಂದಿದೆಯಾದರೆ ಅದು ನಮ್ಮ ಕವಿ ಮಹಾಶಯರ ಕೊಡುಗೆ. ಕೆಲವು ಪ್ರಮುಖ ಕವಿಗಳಿಗೆ ಜ್ಞಾನಪೀಠ ಸಿಗಬೇಕಾಗಿತ್ತು. ಎಲ್ಲಾ ಸಂಸ್ಕೃತಿ, ತತ್ತ್ವ ಸಿದ್ಧಾಂತಗಳ ಸಾರವನ್ನು ಹೀರಿಕೊಂಡು ತಮ್ಮ ಕಾಲಗಳಲ್ಲಿ ಒಡಮೂಡಿಸಿದ ಕೀರ್ತಿ ಚನ್ನವೀರ ಕಣವಿ ಅವರಿಗೆ ಸಲ್ಲುತ್ತದೆ. ಕಣವಿ ಅವರ ಒಟ್ಟಾರೆ ಸಾಹಿತ್ಯವನ್ನು ಸೂಕ್ಷ್ಮವಾಗಿ ಗಮನಿಸಿದ್ದಲ್ಲಿ ಅವರು…
ಮಂಗಳೂರು : ಮಂಗಳೂರಿನ ಕೋಡಿಕಲ್ ನಲ್ಲಿರುವ ವಿಪ್ರ ವೇದಿಕೆ (ರಿ.) ಇದರ ದ್ವೈಮಾಸಿಕ ಸಭಾ ಕಾರ್ಯಕ್ರಮವು ದಿನಾಂಕ 07-07-2024ರಂದು ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಸುರತ್ಕಲ್ಲಿನ ವಿದ್ಯಾದಾಯಿನಿ ಶಿಕ್ಷಣ ಸಂಸ್ಥೆಯ ನಿವೃತ್ತ ಮುಖ್ಯೋಪಾಧ್ಯಾಯ, ಶ್ರೇಷ್ಠ ಗಮಕಿ ಹಾಗೂ ಗೋವಿಂದ ದಾಸ ಕಾಲೇಜಿನಲ್ಲಿ ನಡೆಯಲಿರುವ ಗಮಕ ಸಮ್ಮೇಳನದ ಅಧ್ಯಕ್ಷರಾದ ಶ್ರೀ ಯಜ್ಞೇಶ್ ರಾವ್ ಹೊಸಬೆಟ್ಟು ಮಾತನಾಡಿ “ಗಮಕ ಕಲೆಯು ನಮ್ಮ ಭಾರತೀಯ ಕಲೆಗಳಲ್ಲಿ ಶ್ರೇಷ್ಠ ಸ್ಥಾನ ಪಡೆದಿದೆ. ಹಲವು ರಂಗ ಪ್ರಕಾರಗಳಲ್ಲಿ ಗಮಕವು ಸಾಹಿತ್ಯ, ಸಂಗೀತ, ಶ್ರುತಿ, ರಾಗಗಳ ಮಿಲನದಿಂದ ಉತ್ತಮ ಆರಾಧನಾ ಕಲೆ ಎಂದು ಪ್ರಸಿದ್ಧಿ ಪಡೆದಿದೆ. ಅನೇಕ ಕವಿಗಳ ರಚನೆಯನ್ನು ಹಾಡಿದಾಗ ಆತ್ಮಾನುಭೂತಿ ಮೂಡುತ್ತದೆ.” ಎಂದರು. ಕಾರ್ಯದರ್ಶಿ ದುರ್ಗಾದಾಸ್ ಕಟೀಲ್ ಪ್ರಸ್ತಾವಿಕವಾಗಿ ಮಾತನಾಡಿ, ಶ್ರೀಮತಿ ವಿದ್ಯಾ ರಾವ್ ಸ್ವಾಗತಿಸಿ, ಕೋಶಾಧಿಕಾರಿ ಕಿಶೋರ ಕೃಷ್ಣ ನಿರ್ವಹಿಸಿ, ಮಾಜಿ ಅಧ್ಯಕ್ಷ ಅನೂಪ್ ರಾವ್ ಬಾಗ್ಲೋಡಿ ಕಲಾವಿದರನ್ನು ಗೌರವಿಸಿದರು. ಬಳಿಕ ಯಜ್ಞೇಶ್ ರಾವ್ ಇವರಿಂದ ವಾಚನ ಹಾಗೂ ವರ್ಕಾಡಿ ರವಿ ಅಲೆವೂರಾಯರಿಂದ ‘ಅಕ್ಷಯ ಪಾತ್ರೆ’…
ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಸುರತ್ಕಲ್ ಇದರ ವತಿಯಿಂದ ‘ಕರ್ನಾಟಕ ಸಂಗೀತ ಸ್ಪರ್ಧೆ’ಯನ್ನು ಆಯೋಜಿಸಲಾಗಿದೆ. ನಿಯಮಗಳು : 1) ವಯಸ್ಸು 15 ವರ್ಷಕ್ಕಿಂತ ಕಡಿಮೆ ಇರಬೇಕು (ದಿನಾಂಕ 17-11-2009ರ ನಂತರ ಜನಿಸಿದವರಾಗಿರಬೇಕು.) 2) ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಸಂಗೀತಾಭ್ಯಾಸಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವಿದೆ. 3) ಪ್ರಸ್ತುತಪಡಿಸಲಿರುವ ಕೃತಿಗಳು a) ಒಂದು ವರ್ಣ, b) ಒಂದು ಮಧ್ಯಮ ಕಾಲ ಕೃತಿ, (ಒಂದು ದೇವರ ನಾಮ, d) ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ರಚಿತವಾದ ಕೃತಿಗಳಲ್ಲಿ ಒಂದು ಕೃತಿ (ಆಯ್ಕೆಯಾದ ಸ್ಪರ್ಧಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಕೃತಿಯನ್ನು on-line ಮೂಲಕ ಕಲಿಯುವ ವ್ಯವಸ್ಥೆ ಮಾಡಲಾಗುವುದು) 4) ಶ್ರುತಿ ಪೆಟ್ಟಿಗೆಯ ವ್ಯವಸ್ಥೆಯನ್ನು ಮಾಡಲಾಗುವುದು. ಪಕ್ಕವಾದ್ಯ ಇರುವುದಿಲ್ಲ. 5) ಮನೋಧರ್ಮ ಸಂಗೀತ ಪ್ರಸ್ತುತಿಗೆ ಅವಕಾರವಿಲ್ಲ. 6) ಸ್ಪರ್ಧಿಸುವ ಇಚ್ಛೆ ಉಳ್ಳವರು ಯಾವುದಾದರೊಂದು ಮಧ್ಯಮಕಾಲ ಕೃತಿಯನ್ನು ದಿನಾಂಕ 21-07-2024ರೊಳಗೆ ವಿಡಿಯೋ ದಾಖಲಿಸಿ [email protected]ಗೆ mail ಮೂಲಕ ಕಳುಹಿಸುವುದು. 7) ಸ್ಪರ್ಧೆಯಲ್ಲಿ ಭಾಗವಹಿಸಲು…
ಸುರತ್ಕಲ್ : ಕರ್ನಾಟಕ ಗಮಕ ಕಲಾ ಪರಿಷತ್ ಬೆಂಗಳೂರು, ಕರ್ನಾಟಕ ಗಮಕ ಕಲಾ ಪರಿಷತ್ ದ.ಕ. ಜಿಲ್ಲೆ, ಕರ್ನಾಟಕ ಗಮಕ ಕಲಾ ಪರಿಷತ್ ಮಂಗಳೂರು ಹಾಗೂ ಗೋವಿಂದ ದಾಸ ಪದವಿ ಪೂರ್ವ ಕಾಲೇಜು ಸುರತ್ಕಲ್ ಸಂಯುಕ್ತಾಶ್ರಯದಲ್ಲಿ ಪಸ್ತುತ ಪಡಿಸುವ ದಕ್ಷಿಣ ಕನ್ನಡ ಜಿಲ್ಲಾ 9ನೇ ‘ಗಮಕ ಕಲಾ ಸಮ್ಮೇಳನ’ವು ದಿನಾಂಕ 13-07-2024ರಂದು ಸುರತ್ಕಲ್ ಗೋವಿಂದ ದಾಸ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಸಮ್ಮೇಳನದ ಅಧ್ಯಕ್ಷತೆಯನ್ನು ಗಮಕ ವಿದ್ವಾನ್ ಎಚ್. ಯಜ್ಞೇಶಾಚಾರ್ಯ ವಹಿಸಲಿದ್ದಾರೆ. ಬೆಳಗ್ಗೆ 8-30ಕ್ಕೆ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಾಸ್ಥಾನದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಹೊರಡಲಿದ್ದು, ಬೆಳಿಗ್ಗೆ 9.30ರಿಂದ ಉದ್ಘಾಟನಾ ಸಮಾರಂಭ ನಡೆಯಲಿದೆ. ಬೆಂಗಳೂರಿನ ಕರ್ನಾಟಕ ಗಮಕ ಕಲಾ ಪರಿಷತ್ ಇದರ ಅಧ್ಯಕ್ಷರಾದ ಶ್ರೀ ಎ.ವಿ. ಪ್ರಸನ್ನ ಇವರು ಜ್ಯೋತಿ ಪ್ರಜ್ವಲನೆ ಮಾಡಿ ಉದ್ಘಾಟನೆ ನೆರವೇರಿಸಲಿದ್ದು, ವೇದಮೂರ್ತಿ ಹರಿನಾರಾಯಣ ದಾಸ ಆಸ್ರಣ್ಣ, ವೇದಮೂರ್ತಿ ರಮಾನಂದ ಭಟ್ ಶುಭಹಾರೈಸಲಿದ್ದಾರೆ. ಶ್ರೀ ಜಯಚಂದ್ರ ಹತ್ವಾರ್, ಡಾ. ಎಂ.ಬಿ. ಪುರಾಣಿಕ್ ಶುಭಾಶಂಸನೆಗೈಯಲಿದ್ದು, ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು,…
ಪುತ್ತೂರು : ಕಾರ್ಗಿಲ್ ವಿಜಯೋತ್ಸವಕ್ಕೆ 25 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಶಾಲಾ ಶಿಕ್ಷಣ ಇಲಾಖೆ ಹಾಗೂ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಜಂಟಿಯಾಗಿ ದಕ್ಷಿಣ ಕನ್ನಡ, ಕೊಡಗು ಹಾಗೂ ಕಾಸರಗೋಡು ಜಿಲ್ಲೆಗಳ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ‘ಭಾಷಣ ಸ್ಪರ್ಧೆ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆ’ಗಳನ್ನು ಆಯೋಜನೆ ಮಾಡಿದ್ದು, ಎರಡೂ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ರೂ.5,000/- ಹಾಗೂ ದ್ವಿತೀಯ ಬಹುಮಾನ ರೂ.3,000/- ನೀಡಲಾಗುತ್ತದೆ. ಭಾಷಣ ಸ್ಪರ್ಧೆಗೆ ‘ಭಾರತೀಯ ಸೈನ್ಯ-ಸಾಧನೆ ಹಾಗೂ ಸಾಮರ್ಥ್ಯ’ ಎಂಬ ವಿಷಯ ನೀಡಲಾಗಿದೆ. ದೇಶಭಕ್ತಿ ಗೀತೆಗೆ ಕನಿಷ್ಟ ಮೂರು ಜನರ ತಂಡ ಹಾಗೂ ಗರಿಷ್ಟ ಐದು ಜನರ ತಂಡ ಭಾಗವಹಿಸಬಹುದಾಗಿದ್ದು, ಎರಡೂ ಸ್ಪರ್ಧೆಗೆ ತಲಾ ಐದು ನಿಮಿಷಗಳ ಸಮಯಾವಕಾಶ ನೀಡಲಾಗಿದೆ. ಒಂದು ಸಂಸ್ಥೆಯಿಂದ ಎಷ್ಟು ತಂಡಗಳು ಬೇಕಾದರೂ ಭಾಗವಹಿಸುವುದಕ್ಕೆ ಅವಕಾಶವಿದೆ ಹಾಗೂ ಯಾವುದೇ ನೋಂದಾವಣೆ ಶುಲ್ಕ ಇರುವುದಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ದಿನಾಂಕ 10-07-2024ರ ಒಳಗಾಗಿ ತಮ್ಮ ಹೆಸರನ್ನು…
ದೇವೀಕಳೆಯಿಂದ ರಾರಾಜಿಸುತ್ತಿದ್ದ ಪುಟ್ಟ ನೃತ್ಯಕಲಾವಿದೆ ಕುಮಾರಿ ಅದಿತಿ ಗೋಪಾಲ್ ಇವರು ಕೆ.ಇ.ಎ. ಪ್ರಭಾತ್ ರಂಗಮಂದಿರದ ವೇದಿಕೆಯಲ್ಲಿ ತನ್ಮಯತೆಯಿಂದ ನರ್ತಿಸಿದ ದೈವೀಕ ನಾಟ್ಯದ ಶೀರ್ಷಿಕೆ ‘ನರ್ತಿಸು ಆದಿಶಕ್ತಿ’- ಅನ್ವರ್ಥಕವಾಗಿ ಸಾಕಾರಗೊಂಡಿತು. ‘ಚಿತ್ರ ನಾಟ್ಯ ಫೌಂಡೇಶನ್’ ನೃತ್ಯ ಸಂಸ್ಥೆಯ ಸೃಜನಶೀಲ ನೃತ್ಯಗುರು ವಿದುಷಿ ಎಲ್.ಜಿ. ಮೀರಾ ನುರಿತ ಗರಡಿಯಲ್ಲಿ ತರಬೇತಿಯನ್ನು ಪಡೆದ ಅದಿತಿ ತನ್ನ ರಂಗಪ್ರವೇಶದ ಸ್ಮರಣೀಯ ಸಂದರ್ಭದಲ್ಲಿ ಅನೇಕ ದೇವೀ ಕೃತಿಗಳನ್ನು ಭಕ್ತಿಪರವಶತೆಯಿಂದ ಸುಮನೋಹರವಾಗಿ ನರ್ತಿಸಿದಳು. ತಮ್ಮ ಶಿಷ್ಯೆಯ ವಯಸ್ಸು ಮತ್ತು ಮನೋಧರ್ಮವನ್ನು ಗಮನದಲ್ಲಿಟ್ಟುಕೊಂಡು ಗುರು ಮೀರಾ, ಅದಿತಿಗೆ ತಕ್ಕುದಾದ ಭಕ್ತಿಪ್ರಧಾನ ಕೃತಿಗಳನ್ನೇ ಆಯ್ದುಕೊಂಡು ಸುಂದರ ಪ್ರದರ್ಶನಕ್ಕೆ ಅನುವು ಮಾಡಿದ್ದರು. ಶುಭಾರಂಭದಲ್ಲಿ ಪ್ರಾರ್ಥನಾರೂಪದ ಸಮರ್ಪಣೆಯಾಗಿ ಆದಿಪೂಜಿತ ಗಣೇಶನನ್ನು ‘ಪುಷ್ಪಾಂಜಲಿ’ಯ ನೃತ್ತ ನಮನಗಳ ಮೂಲಕ ಆರಾಧಿಸಿ, ಅನಂತರ ‘ನಟೇಶ ಕೌತ್ವಂ’- ಕೃತಿಯಲ್ಲಿ ನಟರಾಜನ ವೈಶಿಷ್ಯ-ಮಹತ್ವವನ್ನು ನಾನಾ ಭಂಗಿಗಳಲ್ಲಿ ಅಭಿವ್ಯಕ್ತಿಸಿದಳು. ಮುಂದೆ ಅದಿತಿ ನಗುಮೊಗದಿಂದ ಪ್ರಸ್ತುತಪಡಿಸಿದ ‘ಸರಸ್ವತಿ ಅಲರಿಪು’ (ಖಂಡಜಾತಿ) ಶಿರೋ ಭೇದ, ದೃಷ್ಟಿ-ಗ್ರೀವ ಭೇದಗಳಿಂದ ಕೂಡಿದ್ದು, ನೃತ್ಯವ್ಯಾಕರಣದ ಬಹತೇಕ ಅಂಶಗಳನ್ನೂ ಒಳಗೊಂಡು ವೀಣಾಪಾಣಿ ಸರಸ್ವತಿಯ…
ಮುಡಿಪು : ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2022-23ನೇ ಸಾಲಿನ ‘ಯಕ್ಷಮಂಗಳ ಪ್ರಶಸ್ತಿ’ ಮತ್ತು ‘ಯಕ್ಷಮಂಗಳ ಕೃತಿ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 09-07-2024ರಂದು ಮಧ್ಯಾಹ್ನ 2.30 ಗಂಟೆಗೆ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ನಡೆಯಲಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ ಅವರು ಅಧ್ಯಕ್ಷತೆ ವಹಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅತಿಥಿಗಳಾಗಿ ಹಿರಿಯ ಯಕ್ಷಗಾನ ಕಲಾವಿದ ಕೋಳ್ಯೂರು ರಾಮಚಂದ್ರ ರಾವ್, ಮಂಗಳೂರು ವಿವಿ ಕುಲಸಚಿವರಾದ ಶ್ರೀ ಕೆ. ರಾಜು ಮೊಗವೀರ ಭಾಗವಹಿಸುವರು. ಹಾವೇರಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ಪ್ರೊ. ಕೆ. ಚಿನ್ನಪ್ಪ ಗೌಡ ಅವರು ಅಭಿನಂದನಾ ಭಾಷಣ ಮಾಡುವರು. ಇದೇ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷಮಂಗಳ ತಂಡದ ವಿದ್ಯಾರ್ಥಿಗಳಿಂದ ‘ಸುದರ್ಶನ ವಿಜಯ’ ಯಕ್ಷಗಾನ ಪ್ರದರ್ಶನ, 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ‘ಶ್ರೀರಾಮ ದರ್ಶನ’ ಯಕ್ಷಗಾನ ನೃತ್ಯರೂಪಕ ನಡೆಯಲಿದೆ ಎಂದು ಯಕ್ಷಗಾನ…
ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ 2022-2023ನೇ ಸಾಲಿನ ‘ಗೌರವ ಪ್ರಶಸ್ತಿ’ಗಾಗಿ ಅರ್ಜಿ ಆಹ್ವಾನಿಸಿದೆ. ಬ್ಯಾರಿ ಭಾಷೆ, ಕಲೆ ಮತ್ತು ಬ್ಯಾರಿ ಸಾಹಿತ್ಯ- ಸಂಶೋಧನೆ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ 6 ಮಂದಿಯನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು. ಗೌರವ ಪ್ರಶಸ್ತಿಯು ₹50,000/- ನಗದು, ಪ್ರಮಾಣ ಪತ್ರ, ಸ್ಮರಣಿಕೆ ಮತ್ತು ಫಲಪುಷ್ಪವನ್ನೊಳಗೊಂಡಿದೆ. ಪ್ರತಿ ಕ್ಷೇತ್ರಕ್ಕೆ ಒಬ್ಬರಂತೆ 2022ನೇ ಸಾಲಿಗೆ ಮೂವರು ಹಾಗೂ 2023ನೇ ಸಾಲಿಗೆ ಮೂವರು ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ಅರ್ಜಿಗಳನ್ನು ಸಾಧಕರೇ ಸಲ್ಲಿಸಬಹುದು ಅಥವಾ ಸಾಧಕರ ಪರವಾಗಿ ಇತರರು ಶಿಫಾರಸು ಮಾಡಬಹುದು. ಹಿಂದಿನ ಸಾಲಿನಲ್ಲಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಿ ಆಯ್ಕೆ ಆಗದಿರುವ ಸಾಧಕರ ಅರ್ಜಿಗಳನ್ನು ಈ ವರ್ಷವೂ ಪರಿಗಣಿಸಲಾಗುವುದು. ಪೂರಕ ವಿವರಗಳಿದ್ದಲ್ಲಿ ಮಾತ್ರ ಅಕಾಡೆಮಿಗೆ ಕಳುಹಿಸಿಕೊಡಬಹುದು. ಹೊಸದಾಗಿ ಅರ್ಜಿ ಸಲ್ಲಿಸುವವರು ವ್ಯಕ್ತಿ ಪರಿಚಯದ ಎಲ್ಲಾ ಮಾಹಿತಿ, ಭಾವಚಿತ್ರ ಹಾಗೂ ದಾಖಲೆಗಳ ಪ್ರತಿಗಳೊಂದಿಗೆ ಅಕಾಡೆಮಿಗೆ ಕಳುಹಿಸಿ ಕೊಡಬೇಕು. ಲಕೋಟೆಯ ಮೇಲೆ ‘ಬ್ಯಾರಿ ಅಕಾಡೆಮಿ ಗೌರವ ಪ್ರಶಸ್ತಿ’ ಎಂದು ಬರೆದು, ರಿಜಿಸ್ಟ್ರಾರ್, ಕರ್ನಾಟಕ…