Subscribe to Updates
Get the latest creative news from FooBar about art, design and business.
Author: roovari
ದಿನಾಂಕ 22.6. 2025 ಭಾನುವಾರದಂದು ಉಡುಪಿಯ ಎಂ.ಜಿ.ಎಂ.ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಾಗ ಧನ ಸಂಸ್ಥೆಯ 36ನೆಯ ವಾರ್ಷಿಕ ಮಹಾಸಭೆಯನ್ನು ಆಯೋಜಿಸಲಾಗಿತ್ತು. ತದನಂತರ ರಾಗ ಧನ ಸಂಸ್ಥೆಯು ಹಮ್ಮಿಕೊಂಡಿರುವ ರಾಗರತ್ನಮಾಲಿಕೆ ಸಂಗೀತ ಸರಣಿಯ 38ನೆಯ ಕಾರ್ಯಕ್ರಮ ನಡೆಯಿತು. ಪ್ರಧಾನ ಕಛೇರಿಯ ಪೂರ್ವದಲ್ಲಿ ಶ್ರೀಮತಿ ಶ್ರುತಿ ಗುರುಪ್ರಸಾದ್ ಅವರು “ಪೂರ್ಣಮದ: ಪೂರ್ಣಮಿದಂ” ಪ್ರಾರ್ಥನೆಯನ್ನು ‘ಭಟಿಯಾರ್ ಹಾಗೂ ಕಲಾವತಿ’ ರಾಗಗಳಲ್ಲಿ ಅತ್ಯಂತ ಮಧುರವಾಗಿ ಹಾಡಿ ಮುಂದಿನ ಗಾಯನಕ್ಕೆ ಶುಭ ಕೋರಿದರು. ಕಛೇರಿಯನ್ನು ನೀಡಿದವರು ಚೆನ್ನೈನ ಶ್ರೀ ವಿವೇಕ್ ಸದಾಶಿವಂ. ನಗುಮುಖ, ಗತ್ತಿನಿಂದ ಕೂಡಿದ ಅಂತೆಯೇ ಮೂರು ಕಾಲಗಳಲ್ಲಿ ಸಂಚರಿಸಬಲ್ಲ ಶಾರೀರ. ಉತ್ತಮವಾದ ಧ್ವನಿ ಸಂಸ್ಕಾರ! ಹಿಂದಿನ ಪರಂಪರೆಯ ಕೊಡುಗೆಗಳನ್ನು ಹಾಗೆಯೇ ಸಾಂಪ್ರದಾಯಿಕ ಶೈಲಿಯಲ್ಲಿ ಸರಳವಾಗಿ ನೀಡಲಾದ ಕಾರ್ಯಕ್ರಮ ಇದಾಗಿತ್ತು. ಭೈರವಿ ಅಟ್ಟತಾಳ ವರ್ಣದೊಂದಿಗೆ ಗಂಭೀರವಾಗಿ ಪ್ರಾರಂಭಗೊಂಡ ಕಛೇರಿ ಕೊನೆಯವರೆಗೂ ಅದೇ ಬಿಗುತನವನ್ನು ಕಾದುಕೊಂಡಿತು. ಸೌರಾಷ್ಟ್ರ( ಎನ್ನಾಡು) ಸಾಮ( ಅನ್ನಪೂರ್ಣೆ)ಧವಳಾಂಬರಿ (ಶೃಂಗಾರಮಿರ) ಕುಂತಲವರಾಳಿ (ಭೋಗಿಂದ್ರಶಾಹಿನಂ) ಬೃಂದಾವನಿ (ಬೃಂದಾವನವೇ ಮಂದಿರ) ರಾಗಗಳ ಪ್ರಸ್ತುತಿಗಳು ಗಾಯಕರ ಮನೋಧರ್ಮವನ್ನು ಬಿಂಬಿಸುವ…
124 ಪುಟಗಳ ಈ ಕೃತಿಯಲ್ಲಿ ಮೂರು ಪ್ರತಿಭೆಗಳು ಮುಪ್ಪುರಿಗೊಂಡಿವೆ : 1. ಮಲೆಯಾಳದ ಸುಪ್ರಸಿದ್ಧ ಕಥೆಗಾರ ಎಂ. ಮುಕುಂದನ್, 2. ತಮ್ಮ ಚಲನಚಿತ್ರ ನಿರ್ದೇಶನ, ಪತ್ರಿಕೋದ್ಯಮ ಮತ್ತು ಬರಹಗಳ ಮೂಲಕ ಸಾಕಷ್ಟು ಪ್ರಸಿದ್ಧಿಗೆ ಬಂದ ಇ.ಎಂ.ಅಶ್ರಫ್, 3. ಇಪ್ಪತ್ತಕ್ಕೂ ಹೆಚ್ಚು ಮಲೆಯಾಳದ ಒಳ್ಳೆಯ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿರುವ ಕೆ. ಪ್ರಭಾಕರನ್. ‘ಯಮುನಾ ನದಿಯ ತೀರಗಳಲ್ಲಿ’ ಎಂಬ ಈ ಕೃತಿ ಎಂ. ಮುಕುಂದನ್ ಇವರು ಕೆಲವೊಮ್ಮೆ ತಮ್ಮ ಬಿಡುಬೀಸಾದ ನಿರೂಪಣಾ ಶೈಲಿಯಿಂದ ಓದುಗರನ್ನು ಕೆರಳಿಸಿದ ಕಾದಂಬರಿಗಳಲ್ಲಿ ಪ್ರಸ್ತಾಪಿಸಲ್ಪಟ್ಟ ವಿಚಾರಗಳ ಬಗ್ಗೆ ಇದೆ. ಇಲ್ಲಿ ಮುಖ್ಯವಾಗಿ ಚರ್ಚಿಸಲ್ಪಟ್ಟ ಕೆಲವು ಕೃತಿಗಳು ಕನ್ನಡಕ್ಕೆ ಬಂದಿಲ್ಲದಿರುವುದು ಒಂದು ಸಣ್ಣ ಕೊರತೆಯೆನ್ನಿಸಿದರೂ ಈಗಾಗಲೇ ಕನ್ನಡಕ್ಕೆ ಬಂದಿರುವ ಅವರ ಕಾದಂಬರಿಗಳಾದ ‘ಮಯ್ಯಳಿ ನದಿಯ ತೀರದಲ್ಲಿ’, ‘ದೇವರ ವಿಕರಾಳಗಳು’ ಮತ್ತು ಅನೇಕ ಸಣ್ಣ ಕಥೆಗಳ ಮೂಲಕ ಅವರು ಕನ್ನಡದ ಓದುಗರಿಗೆ ಸಾಕಷ್ಟು ಪರಿಚಿತರಾಗಿದ್ದಾರೆ ಅನ್ನುವ ಸಮಾಧಾನವೂ ಇದೆ. ಅಶ್ರಫ್ ಒಳ್ಳೆಯ ಸೃಜನಶೀಲ ಚಿಂತಕರು. ತಮ್ಮ ಸಿನಿಮಾಗಳಿಗೆ ಸ್ವತಃ ಅವರೇ ಚಿತ್ರಕಥೆಗಳನ್ನು ಬರೆಯುತ್ತಾರೆ.…
ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ʼಕಾವ್ಯಾಂ ವ್ಹಾಳೊ-4ʼ ಶೀರ್ಷಿಕೆಯಡಿ ಕವಿಗೋಷ್ಟಿಯು ದಿನಾಂಕ 05 ಜುಲೈ 2025ರಂದು ಅಕಾಡೆಮಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ವಹಿಸಿ, ನೆರೆದಿರುವ ಎಲ್ಲಾ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಮೊದಲು ಹಿರಿಯ ಬರಹಗಾರರಾದ ಶ್ರೀ ಎಡ್ವಿನ್ ನೆಟ್ಟೊ (ಎಡಿ ನೆಟ್ಟೊ)ರವರು ಅಸ್ವಸ್ಥರಿರುವ ಕಾರಣ, ಅವರ ಮನೆಗೆ ಭೇಟಿ ನೀಡಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ಅರುಣ್ ಜಿ. ಶೇಟ್ ಮಾತನಾಡಿ “ವಿವಿಧ ಪ್ರಕಾರಗಳಿರುವ ಕೊಂಕಣಿ ಭಾಷೆಯು, ವಿವಿಧ ವೈವಿಧ್ಯತೆಗಳನ್ನು ಹೊಂದಿದೆ. ಅಕಾಡೆಮಿಯ ಪ್ರಶಸ್ತಿ ಗಳಿಸುವುದು ಜೀವನದ ಅತೀ ದೊಡ್ಡ ಸಾಧನೆ. ಅಕಾಡೆಮಿಯು ಸ್ವಂತ ಕಟ್ಟಡವನ್ನು ಹೊಂದಲಿ ಎಂದು ಆಶಿಸುತ್ತೇನೆ” ಎಂದರು. ಪ್ರಮುಖ ಭಾಷಣಕಾರರಾದ ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಶ್ರೀ ವೆಂಕಟೇಶ್ ನಾಯಕ್ ಇವರು ಸಾಹಿತ್ಯ, ಕವಿತೆ ಹಾಗೂ ಅಕಾಡೆಮಿ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶ್ರೀಮತಿ ಫೆಲ್ಸಿ ಲೋಬೊ, ದೆರೆಬೈಲ್ ಇವರ…
ಬೆಳಗಾವಿ : ರಂಗಸಂಪದ ಇದರ ಆಶ್ರಯದಲ್ಲಿ ಕೋನವಾಳ ಬೀದಿಯ ಲೋಕಮಾನ್ಯ ರಂಗಮಂದಿರದಲ್ಲಿ ದಿನಾಂಕ 05 ಜುಲೈ 2025ರಂದು ಪ್ರದರ್ಶನಗೊಂಡ ‘ಶರ್ಮಿಷ್ಠೆ’ ಏಕವ್ಯಕ್ತಿ ನಾಟಕ ಜನಮನಸೂರೆಗೊಂಡಿತು. ಚಲನಚಿತ್ರಗಳಲ್ಲಿ ಅಭಿನಯಿಸಿ, ನಾಡಿನ ಜನರ ಮನ ಗೆದ್ದಿರುವ ಉಮಾಶ್ರೀ ನಾಟಕದಲ್ಲಿ ಶರ್ಮಿಷ್ಠೆಯಾಗಿ ಕಾಣಿಸಿಕೊಂಡು ಅದ್ಭುತ ಅಭಿನಯ ನೀಡಿದರು. ಮೂಲ ಮರಾಠಿಯ ವಿ.ಸ. ಖಾಂಡೇಕರ ಇವರ ‘ಯಯಾತಿ’ ಕಾದಂಬರಿಯನ್ನು ಕನ್ನಡಕ್ಕೆ ವಿ.ಎಂ. ಇನಾಮದಾರ ಅನುವಾದಿಸಿದ್ದಾರೆ. ಇದೇ ಆಧಾರದ ಮೇಲೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಗಿರೀಶ ಕಾರ್ನಾಡ ರಚಿಸಿರುವ ‘ಯಯಾತಿ’ ನಾಟಕದಲ್ಲಿ ಬರುವ ಒಂದು ಪ್ರಮುಖ ಪಾತ್ರವೇ ‘ಶರ್ಮಿಷ್ಠೆ’. ಇವಳು ಒಬ್ಬಳು ರಾಜಕುಮಾರಿಯಾಗಿದ್ದರೂ ದೇವಯಾನಿ ಹತ್ತಿರ ಆಳಾಗಿ ದುಡಿದು ಬದುಕುವ ಪ್ರಸಂಗ ಬಂದಾಗ ಅವಳ ಮನಸ್ಸಿನಲ್ಲಿ ಆಗುವ ತಳಮಳ, ಹೆಣ್ಣಾಗಿ ಅನುಭವಿಸುವ ನೋವುಗಳು ಈ ನಾಟಕದ ಕಥಾ ವಸ್ತು. ಉಮಾಶ್ರೀಯವರು ತಮ್ಮ ಅದ್ಭುತ ಹಾವ, ಭಾವ, ಅಭಿನಯದಿಂದ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಏಕವ್ಯಕ್ತಿಯ ರಂಗ ಪ್ರಯೋಗಗಳು ಅಪರೂಪವಾಗುತ್ತಿರುವ ಇಂದಿನ ದಿನಗಳಲ್ಲಿ ಕರ್ನಾಟಕದ ಉದಯೋನ್ಮುಖ ನಾಟಕಕಾರರಾದ ಬೇಲೂರು…
ಸುಳ್ಯ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ವತಿಯಿಂದ ಯಕ್ಷಗಾನ ಶಿಕ್ಷಣ ಅಭಿಯಾನ ‘ಯಕ್ಷಧ್ರುವ- ಯಕ್ಷ ಶಿಕ್ಷಣ’ ಕಾರ್ಯಕ್ರಮವು ದಿನಾಂಕ 30 ಜೂನ್ 2025ರಂದು ಮಂಡೆಕೋಲು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಮಂಡೆಕೋಲು ಶಾಲಾ ವಿದ್ಯಾರ್ಥಿಗಳಿಗೆ ಪ್ರತಿ ವಾರ ಯಕ್ಷಗಾನ ತರಬೇತಿ ನಡೆಯಲಿದೆ. ಹಿರಿಯ ಯಕ್ಷಗಾನ ಕಲಾವಿದ ಅಪ್ಪಯ್ಯ ಮಣಿಯಾಣಿ ಅಕ್ಕಪ್ಪಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ಮಂಡೆಕೋಲು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪತ್ರಕರ್ತ ಗಂಗಾಧರ ಕಲ್ಲಪಳ್ಳಿ, ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟಿನ ಪುತ್ತೂರು ತಾಲೂಕು ಸಂಚಾಲಕ ಪ್ರಶಾಂತ ರೈ, ಸುಳ್ಯ ತಾಲೂಕು ಅಧ್ಯಕ್ಷ ಪ್ರೀತಂ ರೈ, ಯಕ್ಷಗಾನ ಗುರು ಯೋಗೀಶ್ ಶರ್ಮ, ಭಜನಾ ಪರಿಷತ್ ಅಜ್ಜಾವರ ವಲಯ ಅಧ್ಯಕ್ಷ ಪ್ರಕಾಶ್ ಕಣೆಮರಡ್ಕ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ವಿನುತ ಪಾತಿಕಲ್ಲು, ಗ್ರಾಮ ಪಂಚಾಯತ್ ಸದಸ್ಯೆ, ಪ್ರಶಾಂತಿ, ಶಾಲಾ ಮುಖ್ಯೋಪಾಧ್ಯಾಯಿನಿ ಮಂಜುಳ ಅತ್ಯಾಡಿ ವೇದಿಕೆಯಲ್ಲಿ…
ಬ್ರಹ್ಮಾವರ : ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ (ರಿ.) ಬೈಕಾಡಿ, ಬ್ರಹ್ಮಾವರ ಉಡುಪಿ ಇದರ ವತಿಯಿಂದ ಎಸ್.ಎಮ್.ಎಸ್. ಪದವಿ ಪೂರ್ವ ಕಾಲೇಜು ಬ್ರಹ್ಮಾವರ ಇವರ ಸಹಕಾರದಲ್ಲಿ ನಾಟಕ ಪ್ರದರ್ಶನವನ್ನು ದಿನಾಂಕ 08 ಜುಲೈ 2025ರಂದು ಸಂಜೆ 7-00 ಗಂಟೆಗೆ ಬ್ರಹ್ಮಾವರದ ಎಸ್.ಎಮ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ಸತ್ಯಶೋಧನ ರಂಗ ಸಮುದಾಯ ಹೆಗ್ಗೋಡು (ರಿ.) ಇದರ ಜನಮನದಾಟ ಕಲಾವಿದರು ಅಭಿನಯಿಸುವ ರಂಜಿತ್ ಶೆಟ್ಟಿ ಕುಕ್ಕಡೆ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧಾರಿತ ‘ಮಾಯಾಮೃಗ’ ಮತ್ತು ಡಾ. ಎಂ. ಗಣೇಶ್ ಹೆಗ್ಗೋಡು ಇವರ ನಿರ್ದೇಶನದಲ್ಲಿ ಬೂಕರ್ ವಿಜೇತೆ ಬಾನು ಮುಷ್ತಾಕ್ ಇವರ ಕಥೆಯಾಧಾರಿತ ‘ಎದೆಯ ಹಣತೆ’ ಎಂಬ ಕನ್ನಡ ನಾಟಕಗಳ ಪ್ರದರ್ಶನ ನಡೆಯಲಿದೆ.
ಬೆಂಗಳೂರು : ಅಕಾಡೆಮಿ ಆಫ್ ಮ್ಯೂಜಿಕ್ (ರಿ.) ಮತ್ತು ಚೌಡಯ್ಯ ಸ್ಮಾರಕ ಭವನ ಅರ್ಪಿಸುವ ‘ರಂಗ ರಂಗೋಲಿ’ ರಾಜ್ಯ ಮಟ್ಟದ ಕನ್ನಡ ನಾಟಕೋತ್ಸವವನ್ನು ದಿನಾಂಕ 9, 10 ಮತ್ತು 11 ಜುಲೈ 2025ರಂದು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕನ್ನಡದ ಮಹಾನ್ ಸಾಹಿತಿಗಳ ಅತ್ಯಂತ ಪ್ರಸಿದ್ಧ ಕಾದಂಬರಿಗಳು ರಂಗ ರೂಪವಾಗಿ ಅನಾವರಣಗೊಳ್ಳುವ ರಾಜ್ಯ ಮಟ್ಟದ ನಾಟಕೋತ್ಸವ ಇದಾಗಿದೆ. ದಿನಾಂಕ 9 ಜುಲೈ 2025ರಂದು ಸಂಜೆ 6-30 ಗಂಟೆಗೆ ಹಾವೇರಿ ಜಿಲ್ಲೆಯ ಶೇಷಗಿರಿ ಗ್ರಾಮದ ಶ್ರೀ ಗಜಾನನ ಯುವಕ ಮಂಡಳಿ ತಂಡದಿಂದ ಜ್ಞಾನಪೀಠ ಪುರಸ್ಕೃತ ಲೇಖಕ ಕುವೆಂಪು ಅವರ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ ಆಧಾರಿತ ‘ವಾಲಿ ವಧೆ’ ನಾಟಕ ಪ್ರದರ್ಶನಗೊಳ್ಳಲಿದೆ. ಗಣೇಶ ಮಂದರ್ತಿ ಇವರು ರಂಗ ಪಠ್ಯ, ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದು, ಪದ್ಮಶ್ರೀ ಎಮ್.ಎಸ್. ಸತ್ಯು ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಇವರಿಗೆ ಇದೇ ಸಂದರ್ಭದಲ್ಲಿ ರಂಗ ಗೌರವ ನೀಡಲಾಗುವುದು. ದಿನಾಂಕ 10 ಜುಲೈ 2025ರಂದು ಸಂಜೆ…
ಉಡುಪಿ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಉಡುಪಿ ಘಟಕ ವತಿಯಿಂದ ಗೌರವಾರ್ಪಣಾ ಕಾರ್ಯಕ್ರಮವು ದಿನಾಂಕ 05 ಜುಲೈ 2025ರಂದು ಉಡುಪಿಯ ಪುರಭವನದಲ್ಲಿ ನಡೆಯಿತು. ಪ್ರೊ. ಪವನ್ ಕಿರಣ್ ಕೆರೆ ಇವರು ಫೌಂಡೇಷನ್ನಿನ ಕಾರ್ಯವೈಖರಿಯ ಬಗ್ಗೆ ಆಶಯ ಭಾಷಣದಲ್ಲಿ ನುಡಿದರು. ಮಾನವ ಹಕ್ಕುಗಳ ಆಯೋಗ ಅಧ್ಯಕ್ಷರಾದ ಟಿ. ಶ್ಯಾಮ್ ಭಟ್ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು. ಮಾಹೆ ಮಣಿಪಾಲ ಇದರ ಡಾ. ಹೆಚ್.ಯಸ್. ಬಲ್ಲಾಳ್, ಪ್ರೊ ಎಂ.ಎಲ್. ಸಾಮಗ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಸ್ಥಾಪಕಾಧ್ಯಕ್ಷರು ಪಟ್ಲ ಸತೀಶ್ ಶೆಟ್ಡಿ, ಉಡುಪಿ ಘಟಕದ ಗೌರವಾಧ್ಯಕ್ಷರಾದ ಪುರುಷೋತ್ತಮ ಶೆಟ್ಟಿ, ಸಂಚಾಲಕರಾದ ಸುಧಾಕರ ಆಚಾರ್ಯ, ಮಹಿಳಾ ಘಟಕದ ಸದಸ್ಯೆಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೇಂದ್ರೀಯ ಘಟಕಕ್ಕೆ ಗೌರವನಿಧಿಯನ್ನು ಸಮರ್ಪಿಸಲಾಯಿತು. ಉಡುಪಿ ಘಟಕದ ಅಧ್ಯಕ್ಷರಾದ ಇಂದ್ರಾಳಿ ಜಯಕರ ಶೆಟ್ಟಿ ಇವರು ಸ್ವಾಗತಿಸಿ, ಶಿಲ್ಪಾ ಜೋಷಿ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ತೆಂಕು ಬಡಗುತಿಟ್ಟಿನ ಕಲಾವಿದರಿಂದ ‘ದಕ್ಷಯಜ್ಞ’ ಯಕ್ಷಗಾನ ಪ್ರದರ್ಶನ ನಡೆಯಿತು.
ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು ಘಟಕ ಮತ್ತು ಕ್ರಿಯೇಟಿವ್ ಪುಸ್ತಕ ಮನೆ ಇದರ ಸಹಯೋಗದೊಂದಿಗೆ ‘ವಿದ್ಯಾರ್ಥಿಗಳೆಡೆ ಪುಸ್ತಕದ ನಡೆ’ ಕನ್ನಡ ಡಿಂಡಿಮ ಸರಣಿ ಕಾರ್ಯಕ್ರಮವನ್ನು ದಿನಾಂಕ 12 ಜುಲೈ 2025ರಂದು ಅಪರಾಹ್ನ 1-30 ಗಂಟೆಗೆ ಮುಂಡ್ಕೂರು ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.
ಬಾಲ್ಯದಿಂದಲೂ ಯಕ್ಷಗಾನ ಹಾಗೂ ಭರತನಾಟ್ಯ ಕಲೆಯ ಮೇಲೆ ಆಸಕ್ತಿ ಹಾಗೂ ತಂದೆಯವರ ಯಕ್ಷಗಾನ ವೇಷದ ಪ್ರಭಾವ ನಂತರದಲ್ಲಿ ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೃಷ್ಣ ಯಾಜಿ ಬಳ್ಕೂರು, ರಾಮಚಂದ್ರ ಹೆಗಡೆ ಕೊಂಡದಕುಳಿ ಅಂತಹ ಯಕ್ಷ ದಿಗಜ್ಜರ ವೇಷವನ್ನು ನೋಡಿ ಹಾಗೂ ಬಾಲ್ಯದಿಂದಲೂ ಶಾಸ್ತ್ರೀಯ ನೃತ್ಯ ಪ್ರಕಾರವಾದ ಭರತನಾಟ್ಯ ಕಲೆಯಡೆಗೆ ಆಕರ್ಷಿತರಾಗಿ ಆರನೇ ತರಗತಿಯಲ್ಲಿ ಇರುವಾಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ತೂರು ಇಲ್ಲಿ ಪ್ರಥಮ ವೇಷ ಮಾಡಿ ಇಂದು ಯಕ್ಷಗಾನ ಹಾಗೂ ಭರತನಾಟ್ಯ ರಂಗದಲ್ಲಿ ಛಾಪು ಮೂಡಿಸುತ್ತಿರುವ ಕಲಾವಿದೆ ಶ್ರುತಿ ಭಟ್ ಮಾರಣಕಟ್ಟೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಾರಣಕಟ್ಟೆಯ ಎಂ.ಶಂಕರ್ ಭಟ್ ಹಾಗೂ ವನಿತಾ ಭಟ್ ಇವರ ಮಗಳಾಗಿ ಜೂನ್ 30ರಂದು ಶ್ರುತಿ ಭಟ್ ಮಾರಣಕಟ್ಟೆಯವರ ಜನನ. ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್ಮೆಂಟ್ ಕಾಲೇಜ್ ನಲ್ಲಿ ದ್ವಿತೀಯ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಯಕ್ಷಗಾನ ಗುರುಗಳು: ಶ್ರೀಯುತ ಪ್ರಭಾಕರ ಆಚಾರ್ಯ ಹೆಮ್ಮಾಡಿ. ನಂತರದಲ್ಲಿ ಹೆಜ್ಜೆಗಾರಿಕೆ ಹಾಗೂ ಭಾಗವತಿಕೆಯನ್ನು…