Author: roovari

ಮೈಸೂರು: ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜ‌ರ್ ರಘುಪತಿ ತಾಮ್ಹನ್ ಕರ್ ಅವರ ಮೊದಲ ಕೃತಿ’ ನೋಟಿನ ನಂಟು’ ಇದರ ಲೋಕರ್ಪಣಾ ಸಮಾರಂಭವು ದಿನಾಂಕ 07-07-2024 ರಂದು ಬೆಳಿಗ್ಗೆ 10.30ಕ್ಕೆ ಮೈಸೂರಿನ ಜಿ. ಎಲ್. ಬಿ. ರಸ್ತೆಯಲ್ಲಿರುವ ಇಂಜಿನಿಯರುಗಳ ಸಂಸ್ಥೆಯ ಎಸ್. ಪಿ. ಭಟ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಕವಿತಾ ಪ್ರಕಾಶನದ ಗಣೇಶ ಅಮೀನಗಡ ತಿಳಿಸಿದ್ದಾರೆ. ಪ್ರಸಿದ್ಧ ಹಿರಿಯ ಲೇಖಕರಾದ ಡಾ. ಸಿ. ಪಿ. ಕೆ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ವಿದ್ವಾಂಸ ಹಾಗೂ ಲೇಖಕರಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು ಕೃತಿ ಬಿಡುಗಡೆಗೊಳಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆನರಾ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ವಿಭಾಗೀಯ ಪ್ರಬಂಧಕರಾದ ಕೆ. ಗೋಪಾಲ ಹಾಗೂ ಬ್ಯಾಂಕ್ ಉದ್ಯೋಗಿಯಾಗಿರುವ ಲೇಖಕಿ ಡಾ. ಶುಭಶ್ರೀ ಪ್ರಸಾದ್ ಭಾಗವಹಿಸಲಿದ್ದಾರೆ.

Read More

Bengaluru : ‘NATANA TARANGINI’ School of Music and Dance is celebrating its 20th year & 5th year from the inception of ‘NATANA TARANGINI ACADEMY’. A series of events is lined up this July 6th & 7th, 2024 to celebrate and commemorate this milestone. A cultural extravaganza which has to be witnessed by artists and art lovers. NATANA TARANGINI (School of Music & Dance) was founded in the year 2004 by Dr. Smt. Y. G. Parimala. The school has been training students in Carnatic Classical Vocal, Veena, Keyboard, Mridangam & Bharathanatyam. Students are given opportunities to perform & take up various…

Read More

ಧಾರವಾಡ : ಡಾ. ಜಿನದತ್ತ ಅ. ಹಡಗಲಿ ಅಭಿನಂದನಾ ಸಮಿತಿ ಇದರ ವತಿಯಿಂದ ಸಾಹಿತ್ಯಾವಲೋಕನ, ಅಭಿನಂದನೆ ಮತ್ತು ಗ್ರಂಥ ಬಿಡುಗಡೆ ಸಮಾರಂಭವು ದಿನಾಂಕ 07-07-2024ರಂದು ಧಾರವಾಡದ ವಿದ್ಯಾಗಿರಿ ಜಿ.ಎಸ್.ಎಸ್. ಸನ್ನಿಧಿ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಬೆಳಿಗ್ಗೆ 9-30 ಗಂಟೆಗೆ ಹರ್ಲಾಪುರದ ಶ್ರೀ ಶಂಭಯ್ಯಾ ಹಿರೇಮಠ ಮತ್ತು ಸಂಗಡಿಗರಿಂದ ‘ಜಾನಪದ ಸಂಗೀತ’ ಪ್ರಸ್ತುತಗೊಳ್ಳಲಿದೆ. ಡಾ. ಜಿನದತ್ತ ಅ. ಹಡಗಲಿಯವರ ಸಾಹಿತ್ಯಾವಲೋಕನವನ್ನು ಪೂಜ್ಯ ಶ್ರೀ ಮ.ನಿ.ಪ್ರ. ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಉದ್ಘಾಟನೆ ಮಾಡಲಿದ್ದಾರೆ. ವೈಚಾರಿಕ ಸಾಹಿತ್ಯದ ಬಗ್ಗೆ ಸಾಹಿತಿ ಡಾ. ವೈ. ಎಂ. ಯಾ ಕೊಳ್ಳಿ, ಸಂಪಾದಿತ ಕೃತಿಗಳ ಬಗ್ಗೆ ಸಾಹಿತಿ ಡಾ. ಅರ್ಜುನ ಗೊಳಸಂಗಿ, ಬಾನುಲಿ ಬರಹಗಳು ಇದರ ಬಗ್ಗೆ ರಂಗ ಚಿಂತಕರಾದ ಡಾ. ಶಶಿಧರ ನರೇಂದ್ರ ಮತ್ತು ನನ್ನ ಗುರು ನನ್ನ ಹೆಮ್ಮೆ ವಿದ್ವಾನ್ ಶ್ರೀ ನವೀನ ಶಾಸ್ತ್ರೀ ಪುರಾಣಿಕ ಇವರು ವಿಚಾರ ಮಂಡನೆ ಮಾಡಲಿದ್ದಾರೆ. ಮಧ್ಯಾಹ್ನ 12-30 ಗಂಟೆಗೆ ಗುರುವಂದನೆ ನಡೆಯಲಿದೆ. ಮಧ್ಯಾಹ್ನ 2-00 ಗಂಟೆಗೆ ಧಾರವಾಡದ ಖ್ಯಾತ ಹಿಂದೂಸ್ತಾನಿ ಗಾಯಕರಾದ…

Read More

ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಅರ್ಪಿಸುವ ‘ನೃತ್ಯಾಂತರಂಗ 113’ದಲ್ಲಿ ಕೂಚಿಪುಡಿ ನೃತ್ಯ ಕಾರ್ಯಕ್ರಮವನ್ನು ದಿನಾಂಕ 06-07-2024ರಂದು ಸಂಜೆ 5-30 ಗಂಟೆಗೆ ಪುತ್ತೂರಿನ ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಗುರು ವೈಜಯಂತಿ ಕಾಶಿಯವರ ಶಿಷ್ಯೆ ಬೆಂಗಳೂರಿನ ಶ್ರೀಮತಿ ಅಶ್ವಿನಿ ಸಿ.ಹೆಚ್. ಇವರು ನೃತ್ಯ ಪ್ರದರ್ಶನ ನೀಡಲಿದ್ದು, ನಿವೃತ್ತ ಉಪನ್ಯಾಸಕರಾದ ಪ್ರೊ. ದತ್ತಾತ್ರೇಯ ರಾವ್ ಇವರು ಅಭ್ಯಾಗತರಾಗಿ ಭಾಗವಹಿಸಲಿರುವರು.

Read More

ಮಣಿಪಾಲ : ಕಲಾಸ್ಪಂದನ ಕಲಾ ಶಾಲೆಯು ಮೂವತ್ತನೆಯ ವರ್ಷಕ್ಕೆ ಕಾಲಿಡುವ ಪ್ರಯುಕ್ತ ವರ್ಷದುದ್ದಕ್ಕೂ ಆಯೋಜಿಸುವ ಸರಣಿ ಕಾರ್ಯಕ್ರಮದಲ್ಲಿ ಡಾಕ್ಟರ್ ಪಳ್ಳತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ (ರಿ) ಸಂಸ್ಥೆಯು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ‘ವೀಣಾ ಸಂಧ್ಯಾ’ ಎನ್ನುವ ಪಂಚ ವೀಣಾ ವಾದನ ಕಾರ್ಯಕ್ರಮವನ್ನು ದಿನಾಂಕ 20-06-2024ರಂದು ಗ್ರೀನ್ ವ್ಯಾಲಿ ಪ್ಯಾರಿಡೈಸ್ ರಿಟೈರ್ಮೆಂಟ್ ಹೋಂ ಮಂಚಿ ಮಣಿಪಾಲ ಇಲ್ಲಿ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀಮತಿ ಎಸ್.ಎನ್. ಕಮಲಾರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕಲಾ ಸ್ಪಂದನ, ಮಣಿಪಾಲದ ನಿರ್ದೇಶಕಿ ವಿದುಷಿ ಪವನ ಬಿ. ಆಚಾರ್ ಇವರ ಬಳಗದಿಂದ ರಿಟೈರ್ಮೆಂಟ್ ಹೋಂನಲ್ಲಿರುವವರಿಗೆ ಆಕ್ಟಿವಿಟಿ ನಡೆಸಲಾಯಿತು. ನಂತರ ವಿಪಂಚಿ ತಂಡ ವೀಣಾ ವಾದನವನ್ನು ನಡೆಸಿದರು. ಕಾರ್ಯಕ್ರಮವು ರಿಟೈರ್ಮೆಂಟ್ ಹೋಂ ಇವರ ನಿವಾಸಿಗಳಿಂದ ತುಂಬಾ ಮೆಚ್ಚುಗೆ ಗಳಿಸಿತು. ಡಾಕ್ಟರ್ ಪಳ್ಳತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟಿನ ಸದಸ್ಯರಾದ ಡಾ. ಬಾಲಚಂದ್ರ ಆಚಾರ್, ಡಾ. ಇಂದಿರಾ ಶಾನುಭೋಗ ಹಾಗೂ ಗ್ರೀನ್…

Read More

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 08-07-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅರ್ಚನ ಹೆಚ್.ಆರ್. ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ವಿದುಷಿ ಶ್ರೀಮತಿ ಅರ್ಚನಾರವರು ತಮ್ಮ 6ನೇ ವಯಸ್ಸಿನಲ್ಲೇ ಗುರುಗಳಾದ ಶ್ರೀರಂಜಿತಾ ನಾಗೇಶ್ ಹಾಗೂ ಜಿ.ಎಸ್. ನಾಗೇಶ್ ಇವರ ಮಾರ್ಗದರ್ಶನದಲ್ಲಿ ಭರತನಾಟ್ಯದ ಕಲಿಕೆ ಆರಂಭಿಸಿದ್ದು, ನಂತರ ವಿವಿಧ ಕಾರ್ಯಾಗಾರಗಳ ಮೂಲಕ ತಮ್ಮ ಕಲಿಕೆ ಹಾಗೂ ಆಸಕ್ತಿಯನ್ನು ಮುಂದುವರಿಸುತ್ತಿದ್ದಾರೆ. 2016ರಲ್ಲಿ ತಮಿಳ್ ಯೂನಿವರ್ಸಿಟಿಯಿಂದ ಡಿಸ್ಟೆನ್ಸ್ ಎಜುಕೇಶನ್ ಮೂಲಕ ಭರತನಾಟ್ಯದಲ್ಲಿ ಮಾಸ್ಟರ್ಸ್ ಪದವಿಯನ್ನು ಹೊಂದಿದ್ದಾರೆ. ಇದರಲ್ಲಿ “ದೇವದಾಸಿ ವ್ಯವಸ್ಥೆ ಮತ್ತು ಅದು ಕಲಾರೂಪಕ್ಕೆ ಹೇಗೆ ಸಹಾಯ ಮಾಡಿತು” ಎಂಬ ಸಂಶೋಧನಾ ಕೆಲಸವನ್ನು ಸಲ್ಲಿಸಿದ್ದಾರೆ. 2014ರಲ್ಲಿ ರಂಗಪ್ರವೇಶವನ್ನು ಮುಗಿಸಿ, 2018ರಲ್ಲಿ ಗುರುಗಳಾದ ಕಿರಣ್ ಸುಬ್ರಮಣ್ಯಮ್…

Read More

ಮಂದಾರ್ತಿ : ಬ್ರಹ್ಮಾವರ ಹಂದಾಡಿಯ ಶ್ರೀ ಗಜಾನನ ಯಕ್ಷಗಾನ ವೇಷಭೂಷಣ ಸಂಸ್ಥೆಯ ಸಂಸ್ಥಾಪಕ, ಬಡಗುತಿಟ್ಟಿನ ಹಿರಿಯ ಪ್ರಸಾದನ ತಜ್ಞ ಹಂದಾಡಿ ಬಾಲಕೃಷ್ಣ ನಾಯಕ್ (76 ವರ್ಷ) ದಿನಾಂಕ 04-07-2024ರಂದು ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಎಚ್. ಸುಬ್ಬಣ್ಣ ಭಟ್ ಮತ್ತು ಇಂದು ನಾಯಕ್ ಇವರ ಜೊತೆಯಲ್ಲಿ ಬಡಗುತಿಟ್ಟಿನ ವೇಷಭೂಷಣಗಳನ್ನು ವಿವಿಧ ಸಂಘ ಸಂಸ್ಥೆಗಳಿಗೆ ಒದಗಿಸುತ್ತಾ, ಬಳಿಕ ಸ್ವಂತ ಸಂಸ್ಥೆಯನ್ನು ಸ್ಥಾಪಿಸಿದರು. ತಮ್ಮ ಅಪೂರ್ವ ಕಲಾಪ್ರತಿಭೆ ಹಾಗೂ ಸರಳ ಸಜ್ಜನಿಕೆಯಿಂದ ಎಲ್ಲಾ ಸಂಘ ಸಂಸ್ಥೆಗಳಿಗೂ ಅನಿವಾರ್ಯ ಎಂಬಂತೆ ಬಾಳಿದ ಧೀಮಂತರು. ಬಡಗುತಿಟ್ಟಿನ ಕಿರೀಟ ಹಾಗೂ ವೇಷಭೂಷಣಗಳ ತಯಾರಿಕೆಯಲ್ಲಿ ಸಿದ್ಧಹಸ್ತರಾಗಿದ್ದರು. ದೇಶವಿದೇಶಗಳಲ್ಲಿ ನೂರಾರು ಮಂದಿಗೆ ಬಡಗುತಿಟ್ಟಿನ ಪಾರಂಪರಿಕ ವೇಷಭೂಷಣ ಸಿದ್ಧಪಡಿಸಿಕೊಟ್ಟ ಕೀರ್ತಿ ಬಾಲಕೃಷ್ಣ ನಾಯಕರದ್ದು. ತನ್ನ ಮೂವರು ಪುತ್ರರೂ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದು ಈ ಕುಟುಂಬದ ವಿಶೇಷತೆಯಾಗಿದೆ. ಇವರ ಕಲಾ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ ಯಕ್ಷಗಾನ ಅಕಾಡೆಮಿ, ಯಕ್ಷಗಾನ ಕಲಾರಂಗ ಹಾಗೂ ಕಳೆದ ವರ್ಷ ಉಡುಪಿಯಲ್ಲಿ ಜರಗಿದ ಪ್ರಥಮ ಯಕ್ಷಗಾನ ಸಮ್ಮೇಳನದಲ್ಲಿ…

Read More

ಬೆಂಗಳೂರು : ‘ನಮ್ದೆ ನಟನೆ’ ಸಾಂಸ್ಕೃತಿಕ ವೇದಿಕೆ ಪ್ರಸ್ತುತ ಪಡಿಸುವ ರಾಜೇಂದ್ರ ಕಾರಂತ್ ಇವರು ಬರೆದು ನಿರ್ದೇಶಿಸಿದ ಪ್ರಭಾವಶಾಲಿ ‘ಮರಣ ಮೃದಂಗ’ ನಾಟಕವು ದಿನಾಂಕ 07-07-2024ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನ ವಾಡಿಯಾ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ. ಟೆಲಿಬುಕಿಂಗ್ : +91-9743190793 ಬಹಳಷ್ಟು ರಾಜಕಾರಣಿಗಳು ತಾವು ಜಿತೇಂದ್ರಿಯರು ಎಂದೇ ಭ್ರಮಿಸಿರುತ್ತಾರೆ, ಸಾವು ಬಾಗಿಲನ್ನು ತಟ್ಟುವ ತನಕ. ರಾಜ್ಯವನ್ನು ಹತ್ತು ವರ್ಷ ಆಳಿದ ನರಸಿಂಹರಾವ್ ಕೂಡ ಹಾಗೇ ಮೆರೆದಿರುತ್ತಾನೆ, ಕ್ಯಾನ್ಸರ್ ಬರುವ ತನಕ. ಅನಿವಾರ್ಯವಾಗಿ ತಾನು ನಿರಾಕರಿಸಿದ ಡಾಕ್ಟರ್ ಹತ್ತಿರವೇ ಚಿಕಿತ್ಸೆಗೆ ಬರಬೇಕಾಗುತ್ತದೆ. ಅಲ್ಲಿ ಸಾಮಾನ್ಯರ ನೋವು, ನಲಿವುಗಳು, ಸಾವಿನ ಅನುಭವ ಅವನನ್ನ ಮಾಗಿಸುತ್ತವೆ… ಅಧಿಕಾರ, ಹಣ ಸಂಪಾದನೆಗಿಂತ ಸೇವೆ ಸರ್ವ ಶ್ರೇಷ್ಠ ಸಾಧನೆ ಎಂಬ ಅರಿವಾಗುತ್ತದೆ. ಆದರೆ.. ಸಾವು ಯಾರನ್ನೂ ಬಿಡುವುದಿಲ್ಲ.

Read More

ಮಂಗಳೂರು : ಕಿಶೋರ ರಂಗ ಪಯಣ ಕಲಾಭಿ ಮಕ್ಕಳ ರಂಗಭೂಮಿ ಪ್ರಸ್ತುತ ಪಡಿಸುವ ಭುವನ್ ಮಣಿಪಾಲ ರಂಗರೂಪ ಮತ್ತು ನಿರ್ದೇಶನದಲ್ಲಿ ‘ಮೊಗ್ಲಿ’ ನಾಟಕವು ದಿನಾಂಕ 06-07-2024ರಂದು ಸಂಜೆ 7-00ಕ್ಕೆ ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವ ವಿದ್ಯಾನಿಲಯ) ಸಹೋದಯ ಹಾಲ್ ನಲ್ಲಿ ಪ್ರದರ್ಶನಗೊಳ್ಳಲಿದೆ.

Read More

ಬೆಂಗಳೂರು : ವಚನ ಪಿತಾಮಹ ಫ.ಗು. ಹಳಕಟ್ಟಿಯವರ 144ನೆಯ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದಿನಾಂಕ 02-07-2024ರಂದು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಫ.ಗು. ಹಳಕಟ್ಟಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ “ವಚನ ಸಾಹಿತ್ಯದ ವಿರಾಟ್ ಸ್ವರೂಪವನ್ನು ತೋರಿಸಿ ಕೊಟ್ಟ ಫ.ಗು. ಹಳಕಟ್ಟಿಯವರು ಸಹಜವಾಗಿಯೇ ವಚನ ಪಿತಾಮಹ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಳಕಟ್ಟಿಯವರು ತಾಳೆಯೋಲೆಗಳನ್ನು ಸಂಗ್ರಹಿಸುವುದಕ್ಕೂ ಮೊದಲು, ಕವಿ ಹಾಗೂ ಚರಿತೆಕಾರರು ಗುರುತಿಸಿದ್ದು ಕೇವಲ 50 ವಚನಕಾರರನ್ನು ಮಾತ್ರ. ಫ.ಗು. ಹಳಕಟ್ಟಿಯವರು ತಮ್ಮ ಸಂಶೋಧನೆಯ ಮೂಲಕ 250ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದರು. ಜೊತೆಗೆ ಹರಿಹರನ 42 ರಗಳೆಗಳನ್ನು ಸಂಶೋಧಿಸಿ ಪ್ರಕಟಿಸಿದ ಸಾಧನೆ ಹಳಕಟ್ಟಿಯವರಿಗೆ ಸಲ್ಲುತ್ತದೆ. ಹಳಕಟ್ಟಿಯವರು ಬಸವಣ್ಣನವರ ವಚನಗಳನ್ನು ಇಂಗ್ಲೀಷಿಗೆ ಅನುವಾದಿಸಿ ‘ಇಂಡಿಯನ್ ಆಂಟಿಕ್ವರಿ’ಯಲ್ಲಿ ಪ್ರಕಟಗೊಳಿಸಿದರು. ಅಷ್ಟೇ ಅಲ್ಲ ವಚನಗಳ ಗಾಯನಕ್ಕೂ ವ್ಯವಸ್ಥೆ ಮಾಡಿಸಿದರಲ್ಲದೆ ಶ್ರೇಷ್ಠ ಸಂಗೀತಕಾರರನ್ನು ವಚನ ಗಾಯನ ರೆಕಾರ್ಡಿಂಗಿಗಾಗಿ ಮುಂಬಯಿಯವರೆಗೆ ಕಳುಹಿಸಿದರು. ಹೀಗೆ ವಚನ ಸಾಹಿತ್ಯದ…

Read More