Subscribe to Updates
Get the latest creative news from FooBar about art, design and business.
Author: roovari
ಅಜೆಕಾರು : ಹಿರ್ಗಾನದ ಕ್ರಿಯೇಟಿವ್ ಕಾಲೇಜಿನ ಸಪ್ತಗಿರಿ ಕ್ಯಾಂಪಸ್ ಸಭಾಂಗಣದಲ್ಲಿ ದಿನಾಂಕ 01-07-2024ರಂದು ಪುಸ್ತಕ ಮನೆ ಪ್ರಕಾಶನದ ವತಿಯಿಂದ ನಾಡಿನ ಹೆಸರಾಂತ ಸಾಹಿತಿಗಳ 15 ಪುಸ್ತಕಗಳನ್ನು ಖ್ಯಾತ ಬರಹಗಾರ ಜೋಗಿ ನಾಮಾಂಕಿತ ಗಿರೀಶ್ ರಾವ್ ಹತ್ವಾರ್ ಇವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಳಿಸಲಾಯಿತು. ಈ ಸಂದರ್ಭದಲ್ಲಿ ನರೇಂದ್ರ ಪೈರವರ ಆಯ್ದ ವಿಮರ್ಶೆಗಳನ್ನು ಒಳಗೊಂಡ ‘ಸಾವಿರದೊಂದು ಪುಸ್ತಕ’, ಯಶೋದಾ ಮೋಹನ್ ಇವರ ‘ಇಳಿ ಹಗಲಿನ ತೇವಗಳು’ ಎಂಬ ಕಥಾಸಂಕಲನ, ಸುಧಾ ನಾಗೇಶ್ರಒವರ ‘ಹೊಂಬೆಳಕು’ ಎಂಬ ಚಿಂತನ ಬರಹಗಳು, ವಾಣಿ ರಾಜ್ ರವರ ಕಥಾಸಂಕಲನ ‘ಸವಿನೆನಪುಗಳ ಹಂದರ’, ಡಾ. ಸುಬ್ರಹ್ಮಣ್ಯ ಸಿ. ಕುಂದೂರುರವರ ಮಲೆನಾಡಿನ ಕಥನವಾದ ‘ಜೀವನಯಾನ’, ರಾಜೇಂದ್ರ ಭಟ್ ಇವರ ‘ರಾಜಪಥ’ ಎಂಬ ಲೇಖನಗಳ ಪುಸ್ತಕ, ಕೊಂಡಳ್ಳಿ ಪ್ರಭಾಕರ ಶೆಟ್ಟಿಯವರ ‘ಸಾರ್ಥಕ ಜೀವನಕ್ಕೆ ಕಗ್ಗೋಪದೇಶ’ ಎಂಬ ಲೇಖನಗಳು, ದಿಗಂತ್ ಬಿಂಬೈಲ್ ಇವರ ‘ಕೊಂದ್ ಪಾಪ ತಿಂದ್ ಪರಿಹಾರ’ ಎಂಬ ಕಥಾ ಪ್ರಸಂಗಗಳು, ಡಾ. ರಾಜಶೇಖರ್ ಹಳೆ ಮನೆಯವರ ಕಾದಂಬರಿ ‘ಒಡಲುಗೊಂಡವರು’, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ…
ಧಾರವಾಡ : ಭಾರತೀಯ ಸಂಗೀತ್ ವಿದ್ಯಾಲಯ ಮತ್ತು ದಾಸ ಟ್ರಸ್ಟ್ ಪ್ರಸ್ತುತ ಪಡಿಸುವ ಶ್ರೀ ಅನಂತ ಹರಿಹರ ಇವರಿಗೆ ಶೃದ್ಧಾಂಜಲಿ ಪ್ರಯುಕ್ತ ‘ಅನಂತ ನಮನ’ ಕಾರ್ಯಕ್ರಮವನ್ನು ದಿನಾಂಕ 07-07-2024ರಂದು ಸಂಜೆ 5-30 ಗಂಟೆಗೆ ಧಾರವಾಡದ ಕೆ.ಸಿ.ಡಿ. ಕ್ಯಾಂಪಸ್, ಡಾ.ಅಣ್ಣಾಜಿ ರಾವ್ ಶೀರೂರ್ ರಂಗ ಮಂದಿರ, ‘ಸೃಜನ’ದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪಂಡಿತ್ ಎಂ. ವೆಂಕಟೇಶ್ ಕುಮಾರ್ ಇವರ ಹಾಡುಗಾರಿಕೆಗೆ ಶ್ರೀಧರ್ ಮಾಂಡ್ರೆ ತಬಲಾ ಮತ್ತು ಗುರುಪ್ರಸಾದ್ ಹೆಗ್ಡೆ ಇವರು ಹಾರ್ಮೋನಿಯಂ ಸಾಥ್ ನೀಡಲಿರುವರು. ಛೋಟೆ ರಹಿಮತ್ ಖಾನ್, ರಫೀಕ್ ಖಾನ್, ಶಫೀಕ್ ಖಾನ್, ರೈಸ್ ಖಾನ್, ಹಫೀಜ್ ಖಾನ್ ಮತ್ತು ಮೊಹಸಿನ್ ಖಾನ್ ಇವರ ಷಷ್ಠ ಸಿತಾರ್ ವಾದನಕ್ಕೆ ರಾಜೇಂದ್ರ ನಾಕೊಡ್ ಇವರು ತಬಲಾದಲ್ಲಿ ಸಹಕರಿಸಲಿದ್ದಾರೆ.
ದಾವಣಗೆರೆ : ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಮೈಸೂರಿನ ಸಂಸ್ಕೃತಿ ಪ್ರಕಾಶನದ ಸಹಯೋಗದಲ್ಲಿ ಲೇಖಕಿ ಛಾಯಾ ಶ್ರೀಧರ್ ಇವರ ‘ದರ್ಪಣ’ ಕವನ ಸಂಕಲನದ ಲೋಕಾರ್ಪಣಾ ಸಮಾರಂಭವು ದಿನಾಂಕ 27-06-2024ರ ಗುರುವಾರದಂದು ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಹಿರಿಯ ಕವಯಿತ್ರಿ ಶಶಿಕಲಾ ವಸ್ತ್ರದ್ “ಸಮಾಜದ ತಲ್ಲಣಗಳಿಗೆ ದನಿಯಾಗುವ ಮೂಲಕ ಜಾಗತಿಕ ಸಮಸ್ಯೆಗಳಿಗೆ ಕಾವ್ಯ ದಿಟ್ಟ ಉತ್ತರ ನೀಡಬೇಕು. ಕವಿಯಾದವನು ಸರ್ಕಾರದ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಬೇಕು. ಸಮಾಜದಲ್ಲಿನ ಶೋಷಿತರು, ದಮನಿತರು, ರೈತರು, ಕಾರ್ಮಿಕರ ಪರ ಹಾಗೂ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಪ್ರಶ್ನೆ ಮಾಡುವ ದಾರ್ಷ್ಟ್ಯ ಹಾಗೂ ಸಾತ್ವಿಕ ರೋಷ ಬೆಳೆಸಿಕೊಳ್ಳಬೇಕು. ಕವಿಗಳಿಗೆ ಪರಕಾಯ ಪ್ರವೇಶ ಮಾಡುವ ಗುಣವಿರುತ್ತದೆ. ಸಮಾಜದಲ್ಲಿ ಜನರ ನೋವುಗಳಿಗೆ ಸ್ಪಂದಿಸುವ ಮೂಲಕ ಪ್ರೀತಿ, ಸಹನೆ ಮತ್ತು ಅಂತಃಕರಣ ಹೊಂದಿದಾಗ ಸಂವಹನ ಶಕ್ತಿ ಬರುತ್ತದೆ. ಪರಕಾಯ ಪ್ರವೇಶ ಮಾಡುವ ಗುಣವುಳ್ಳವರು ಮಾತ್ರ ಪ್ರಬುದ್ಧ ಕವಿಗಳಾಗಲು ಸಾಧ್ಯ. ಕಾವ್ಯಕ್ಕೆ ಎಂದೂ…
ಕುಂದಾಪುರ : ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆಯ ‘ಶ್ವೇತಯಾನ-39’ನೆಯ ಕಾರ್ಯಕ್ರಮವು ದಿನಾಂಕ 30-06-2024 ರಂದು ಕಲಾಕ್ಷೇತ್ರದಲ್ಲಿರುವ ಪ್ರಕಾಶಾಂಗಣ ಸ್ಟುಡಿಯೋದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಉಡುಪಿ ಜಿಲ್ಲಾ ಬಿ. ಜೆ. ಪಿ. ಅಧ್ಯಕ್ಷರಾದ ಬಿ. ಕಿಶೋರ್ ಕುಮಾರ್ “ಕುಂದಾಪುರ ಹೃದಯ ಭಾಗದಲ್ಲಿ ಡಿಪ್ಲೊಮೇಟ್ ಹೋಟೇಲ್ ಹತ್ತಿರ ಸಾಹಿತ್ಯ ಚಟುವಟಿಕೆಗಾಗಿ ‘ಪ್ರಕಾಶಾಂಗಣ’ ಎನ್ನುವ ಹೆಸರಿನಲ್ಲಿ ತೆರೆದುಕೊಂಡ ಸ್ಟುಡಿಯೋ, ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಹಾಗೂ ಯಶಸ್ವೀ ಕಲಾವೃಂದದ ಗಾನ ವೈಭವದೊಂದಿಗೆ ಸಂಪನ್ನಗೊಂಡಿದೆ. ಮತ್ತೆ ಮತ್ತೆ ಕೇಳಬೇಕು, ನೋಡಬೇಕು ಎಂದೆನಿಸುವ ಯಕ್ಷಗಾನದ ಪೌರಾಣಿಕ ಆಧಾರಿತ ಪದ್ಯಗಳ ಗಾನ ವೈಭವ ಮಸ್ತಕದಲ್ಲಿ ಉಳಿಯುವಂತಹದ್ದು. ಸಂಸ್ಥೆಯ 25 ವರ್ಷಗಳ ತಪಸ್ಸು ಫಲ ನೀಡುವ ಕಾಲ ಕೂಡಿಬಂದಿದೆ. ಒಂದಷ್ಟು ವಿದ್ಯಾರ್ಥಿಗಳಿಗೆ ಕಲಿಸುತ್ತಾ ಬೆಳೆದ ಸಂಸ್ಥೆ ಸಾಕಷ್ಟು ಕಲಾವಿದರನ್ನು ಹೊಂದಿ ಸಮಾಜಕ್ಕೆ ಬೆಳಕಾಗಿದೆ.” ಎಂದು ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಹಿರಿಯ ಭಾಗವತರಾದ ರಾಘವೇಂದ್ರ ಮಯ್ಯ ಮಾತನಾಡಿ “ಕಲೆಯು ಕಲಾಭಿಮಾನಿಗಳ ಸಹಕಾರದಿಂದ ಕರಾವಳಿಯ ತಡಿಯಲ್ಲಿ ಭದ್ರವಾಗಿ ಬೇರೂರಿದೆ. ಕಲೆಯು…
ಕಾಸರಗೋಡು : ಕಾಸರಗೋಡಿನ ಯುವ ರಂಗನಟಿ ಸುಶ್ಮಿತಾ ಇವರು ಶಿವಮೊಗ್ಗ ಜಿಲ್ಲೆಯ ಸಾಗರದ ‘ನೀನಾಸಂ’ ರಂಗಶಿಕ್ಷಣ ತರಬೇತಿಗೆ ಆಯ್ಕೆಯಾಗಿದ್ದಾರೆ. ಪ್ರತಿಷ್ಠಿತ ನೀನಾಸಂಗೆ ಆಯ್ಕೆ ಆಗಬೇಕೆಂಬುದು ಪ್ರತಿಯೊಬ್ಬ ರಂಗಭೂಮಿ ಕಲಾವಿದನ ಕನಸಾಗಿರುತ್ತದೆ. ಆ ನಿಟ್ಟಿನಲ್ಲಿ ಅಷ್ಟೇ ಶ್ರದ್ದೆ ಮತ್ತು ಪರಿಶ್ರಮದ ಅಗತ್ಯತೆ ಇದ್ದು, ಈಗಾಗಲೇ ಸಾವಿರಾರು ಕಲಾವಿದರು ಇಲ್ಲಿ ತರಬೇತಿ ಪಡೆದು ಉತ್ತಮ ಕಲಾವಿದರಾಗಿ ಹೊರಹೊಮ್ಮಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ 2020ರಲ್ಲಿ ‘ಸಾಹೇಬ್ರು ‘ಸಾಹೇಬ್ರು ಬಂದವೇ’ ನಾಟಕವನ್ನು ರಾಜ್ಯದ ಖ್ಯಾತ ರಂಗಭೂಮಿ ನಿರ್ದೆಶಕರಾದ ಡಾ. ಜೀವನ್ ರಾಂ ಸುಳ್ಯ ಇವರ ನಿರ್ದೇಶನದಲ್ಲಿ ಸಿದ್ಧಪಡಿಸಲಾಗಿತ್ತು. ರಾಜ್ಯಾದ್ಯಂತ ಸುಮಾರು 20 ಪ್ರದರ್ಶನಗಳನ್ನು ನೀಡಿದ ಈ ನಾಟಕ ರಂಗಭೂಮಿ ಪ್ರೇಕ್ಷಕರ ಮನ ಗೆದ್ದಿತ್ತು. ಇದರಲ್ಲಿ ಅಭಿನಯಿಸಿದ ಎಲ್ಲರೂ ರಂಗಭೂಮಿಗೆ ಹೊಸದಾಗಿ ಪರಿಚಯಗೊಂಡ ಕಲಾವಿದರೇ ಆಗಿದ್ದರು. ಇದರಲ್ಲಿ ಕಲ್ಮಕಾರಿನ ಪ್ರತಿಭೆ ಮಮತಾ ಕಳೆದ ಬಾರಿಯ ನೀನಾಸಂ ತರಬೇತಿಗೆ ಆಯ್ಕೆಯಾಗಿದ್ದು, ಇದೇ ‘ಸಾಹೇಬ್ರು ಬಂದವೇ’ ನಾಟಕದಲ್ಲಿ ಮೋನಿಕಾ ಪಾತ್ರ ಮಾಡುತ್ತಿದ್ದ ಕೇರಳ ರಾಜ್ಯದ ಕಾಸರಗೋಡಿನ…
ಕಾಸರಗೋಡು : ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸುವ ಈ ವರ್ಷದ ಯಕ್ಷಗಾನ ತರಗತಿಯ ಉದ್ಘಾಟನಾ ಸಮಾರಂಭವು ದಿನಾಂಕ 06-07-2024ರಂದು ಸಂಜೆ ಘಂಟೆ 5-00ಕ್ಕೆ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ನಡೆಯಲಿದೆ. ಪ್ರತೀ ಶನಿವಾರ ಸಂಜೆ ಘಂಟೆ 5-00 ರಿಂದ ಹಿಮ್ಮೇಳ ತರಗತಿ ಮತ್ತು ಘಂಟೆ 6-00 ರಿಂದ ನಾಟ್ಯ ತರಗತಿಗಳು ನಡೆಯಲಿವೆ. ಹೆಚ್ಚಿನ ಮಾಹಿತಿಗಾಗಿ 9496297055 ಅಥವಾ 8089882831 ಸಂಖ್ಯೆಯನ್ನು ಸಂಪರ್ಕಿಸಬಹುದು.
ಮಡಿಕೇರಿ : ಕನ್ನಡಸಿರಿ ಸ್ನೇಹ ಬಳಗ ಕುಶಾಲನಗರ ಕೊಡಗು ಜಿಲ್ಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ವಿಚಾರ ಮಂಡನೆ ಮತ್ತು ಕೃತಿ ಬಿಡುಗಡೆ ಕಾರ್ಯಕ್ರಮವು ದಿನಾಂಕ 05-07-2024ರಂದು ಬೆಳಿಗ್ಗೆ 10-30 ಗಂಟೆಗೆ ಮಡಿಕೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸಭಾಂಗಣದಲ್ಲಿ ನಡೆಯಲಿದೆ. ಮಡಿಕೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪಿ.ಆರ್. ವಿಜಯ್ ಇವರ ಅಧ್ಯಕ್ಷತೆಯಲ್ಲಿ ಮಡಿಕೇರಿ ನಗರಸಭೆ ಮಾನ್ಯ ಸದಸ್ಯರಾದ ಶ್ರೀ ಕೆ.ಎಸ್. ರಮೇಶ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಕನ್ನಡಸಿರಿ ಸ್ನೇಹ ಬಳಗದ ಅಧ್ಯಕ್ಷರಾದ ಶ್ರೀ ಲೋಕೇಶ್ ಸಾಗರ್ ಬಿ.ಎಸ್. ಇವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷರಾದ ಶ್ರೀ ಅನಂತಶಯನ ಇವರು ಖ್ಯಾತ ಸಾಹಿತಿಗಳಾದ ಕಿಗ್ಗಾಲು ಗಿರೀಶ್ ಇವರ ‘ಕಳೆದುಕೊಂಡವನು ಮತ್ತು ಇನ್ನಿತರ ಕಥೆಗಳು’ ಎಂಬ ಕೃತಿಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಮಡಿಕೇರಿಯ ಶ್ರೀಮತಿ ಜಯಲಕ್ಷ್ಮಿ ಶೇಖರ್ ಇವರು…
ಬೆಂಗಳೂರು : ಎಂ.ಎ. ನರಸಿಂಹಾಚಾರ್ ಮ್ಯೂಜಿಕ್ ಫೌಂಡೇಷನ್ (ರಿ.) ಪ್ರಸ್ತುತ ಪಡಿಸುವ ಸಂಗೀತ ಭೂಷಣ ಎಂ.ಎ. ನರಸಿಂಹಾಚಾರ್ ಇವರ ಜನ್ಮ ಶತಮಾನೋತ್ಸವದ ನೆನಪಿಗಾಗಿ ಯುಟ್ಯೂಬ್ ನಲ್ಲಿ ಖ್ಯಾತರಾದ ಗಾಯಕರ ಸಂಗೀತ ಕಾರ್ಯಕ್ರಮವು ದಿನಾಂಕ 07-07-2024ರಂದು ಬೆಂಗಳೂರಿನ ಕೆ.ಆರ್. ರೋಡಿನಲ್ಲಿರುವ ಬೆಂಗಳೂರು ಗಾಯನ ಸಮಾಜ ಹಾಲ್ ಇಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸ್ಪೂರ್ತಿ ರಾವ್ ಇವರ ಹಾಡುಗಾರಿಕೆಗೆ ಶ್ರೀಲಕ್ಷ್ಮೀ ಭಟ್ ವಯೋಲಿನ್, ಅನಿರುದ್ಧ ಭಟ್ ಮೃದಂಗ, ಸುನಾದ ಅನೂರ್ ಖಂಜೀರದಲ್ಲಿ ಸಹಕರಿಸಲಿದ್ದಾರೆ. ಸೂರ್ಯಗಾಯತ್ರಿಯವರ ಭಕ್ತಿಗೀತೆಗಳಿಗೆ ಪ್ರದೇಶಾಚಾರ್ ವಯೋಲಿನ್, ಕೃಪಾಲ್ ಸಾಯಿ ರಾಮ್ ಮೃದಂಗ, ಪ್ರಶಾಂತ್ ಶಂಕರ್ ತಬಲಾ ಮತ್ತು ಶೈಲೇಶ್ ಮರಾರ್ ಹೆಚ್ಚುವರಿ ತಾಳವಾದ್ಯದಲ್ಲಿ ಸಾಥ್ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಗಾನ ಕಲಾ ಮಂದಿರದ ವಿದ್ಯಾರ್ಥಿಗಳಿಂದ ಗುರು ವಂದನ ನಡೆಯಲಿದೆ. ಸಾಯಿ ವಿಘ್ನೇಶ್ ಕರ್ನಾಟಿಕ್ ಫ್ಯೂಶನ್ ಬಾಂಡ್ ನಲ್ಲಿ ಎಸ್. ವೆಂಕಟರಮಣ್ ಕೀಬೋರ್ಡ್, ತ್ರಿರುಚೇರೈ ಕಾರ್ತಿಕ್ ವಯೋಲಿನ್, ಅಮೋಘವರ್ಷ ಡ್ರಮ್ಸ್ ಮತ್ತು ಕೌಶಿಕ್ ಶ್ರೀಧರ್ ತಾಳವಾದ್ಯದಲ್ಲಿ ಹಾಗೂ ರಾಹುಲ್ ವೆಲ್ಲಾಳ್ ಇವರ ಹಾಡುಗಾರಿಕೆಗೆ…
ಉಡುಪಿ : ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಮತ್ತು ತಾಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ ಖ್ಯಾತ ಪತ್ರಕರ್ತ ಎಂ.ಐ.ಸಿ. ಮಣಿಪಾಲದ ಪ್ರಾಧ್ಯಾಪಕರಾಗಿರುವ ಸತ್ಯಬೋಧ ಜೋಶಿಯವರನ್ನು ದಿನಾಂಕ 01-07-2024ರಂದು ಪತ್ರಿಕಾ ದಿನಾಚರಣೆಯ ಅಂಗವಾಗಿ ಅಭಿನಂದಿಸಿ ಗೌರವಿಸಲಾಯಿತು. ಕೀಲಿಮಣೆ ತಜ್ಞ ವಿದ್ವಾಂಸ ನಾಡೋಜ ಕೆ.ಪಿ. ರಾವ್ ಇವರು ಶಾಲು ಹೊದೆಸಿ, ಸ್ಮರಣಿಕೆಯೊಂದಿಗೆ ಅಭಿನಂದನಾ ಪತ್ರ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕ.ಸಾ.ಪ. ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ., ಗೌರವ ಕಾರ್ಯದರ್ಶಿಗಳಾದ ಜನಾರ್ದನ್ ಕೊಡವೂರು, ರಂಜನಿ ವಸಂತ್, ಸಾಮಾಜಿಕ ಜಾಲ ನಿರ್ವಾಹಕರಾದ ಶಶಿಕಾಂತ ಶೆಟ್ಟಿ, ಸದಸ್ಯ ವಸಂತ್, ರಾಘವೇಂದ್ರ ಪ್ರಭು ಕರ್ವಾಲು, ಎಂ.ಐ.ಸಿ. ಮಣಿಪಾಲದ ಪ್ರಾಧ್ಯಾಪಕಿ ಹೆಚ್.ಎಸ್. ಶುಭ, ಸಹಾಯಕ ಪ್ರಾಧ್ಯಾಪಕ ವಿನ್ಯಾಸ್ ಹೆಗ್ಡೆ ಉಪಸ್ಥಿತರಿದ್ದರು.
ಮಂಗಳೂರು : ಭರತಾಂಜಲಿ (ರಿ.) ಕೊಟ್ಟಾರ ಇವರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಪ್ರಸ್ತುತ ಪಡಿಸುವ ‘ನೃತ್ಯಾಮೃತಮ್ -2024’ ನೃತ್ಯ ಸಂಭ್ರಮ ಕಾರ್ಯಕ್ರಮವು ದಿನಾಂಕ 07-07-2024ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಈ ನೃತ್ಯ ಸಂಭ್ರಮವನ್ನು ನಾಟ್ಯಾಚಾರ್ಯ ಉಳ್ಳಾಲ ಮೋಹನ ಕುಮಾರ್ ಇವರು ಉದ್ಘಾಟಿಸಲಿದ್ದು, ಕರ್ನಾಟಕ ಕಲಾಶ್ರೀಗಳಾದ ಗುರು ಕಮಲ ಭಟ್ ಮತ್ತು ಗುರು ರಾಜಶ್ರೀ ಉಳ್ಳಾಲ್ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಂಕುರ, ವಲ್ಲರಿ ಮತ್ತು ತರು ತಂಡಗಳು ನೃತ್ಯ ಕಾರ್ಯಕ್ರಮ ನೀಡಲಿರುವರು.