Author: roovari

ಮುಂಬೈ : ಸುರ್ ಬಹಾರ್ ಸಂಗೀತ್ ಸಭಾ ಪ್ರಸ್ತುತ ಪಡಿಸುವ ಮುಂಬೈ ಸಂಗೀತ ಕಛೇರಿಯು ದಿನಾಂಕ 14 ಜೂನ್ 2025ರಂದು ಸಂಜೆ 5-30 ಗಂಟೆಗೆ ಮುಂಬೈಯ ಮುಲುಂದ್ ವೆಸ್ಟ್ ನಲ್ಲಿ ನಡೆಯಲಿದೆ. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ಪುಣೆಯ ವಿದುಷಿ ಪೌರ್ಣಿಮ ಧೂಮಲೆ ಇವರ ಹಾಡುಗಾರಿಕೆಗೆ ಪ್ರವೀಣ್ ಕರ್ಕರೆ ತಬಲಾದಲ್ಲಿ ಹಾಗೂ ಸುಧಾಂಶು ಘರ್ಪುರೆ ಹಾರ್ಮೋನಿಯಂನಲ್ಲಿ ಸಾಥ್ ನೀಡಲಿದ್ದಾರೆ.

Read More

ಬೆಂಗಳೂರು : ಮಂಗಳೂರಿನ ಆಯನ ನಾಟಕದ ಮನೆ ಪ್ರಸ್ತುತ ಪಡಿಸುವ ರಂಗಾಸಕ್ತರ ಗಮನ ಸೆಳೆದ ಈ ವರ್ಷದ ಒಂದು ಪ್ರಮುಖ ಕನ್ನಡ ನಾಟಕ ‘ಅಶ್ವತ್ಥಾಮ’ NOT OUT ದಿನಾಂಕ 13 ಜೂನ್ 2025ರಂದು ಸಂಜೆ 7-30 ಗಂಟೆಗೆ ಬೆಂಗಳೂರಿನ ರಂಗಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ. ರಂಗದಲ್ಲಿ ಚಂದ್ರಹಾಸ್ ಉಳ್ಳಾಲ್, ಪ್ರಭಾಕರ್ ಕಾಪಿಕಾಡ್ ಮತ್ತು ಡಾ. ದಿನೇಶ್ ನಾಯಕ್ ಇವರು ನಟಿಸಲಿದ್ದು, ಮೋಹನಚಂದ್ರ ಇವರು ನಿರ್ದೇಶನ ಮಾಡಲಿದ್ದಾರೆ. ನಾಟಕದ ಬಗ್ಗೆ : ಮಹಾಭಾರತದ ಹಲವಾರು ದುರಂತ ಪಾತ್ರಗಳಲ್ಲಿ ಅಶ್ವತ್ಥಾಮನ ಪಾತ್ರವೂ ಒಂದು. ಕುರುಕ್ಷೇತ್ರ ಯುದ್ಧದ ಬಳಿಕ ಉಪಪಾಂಡವರ ಹತ್ಯೆಯ ಕಾರಣದಿಂದಾಗಿ ಸಾವಿಲ್ಲದೆ ಸದಾ ಮರಣಕ್ಕಾಗಿ ಹಪಹಪಿಸುವ ಶಾಪಗ್ರಸ್ತ. ನಾಟಕ ಸುತ್ತುವುದೇ ಸಾವಿಲ್ಲದ ಬದುಕು ಒಂದು ಶಾಪ ಎಂದು ಗ್ರಹಿಸಿದ (ಕೃಷ್ಣನ) ಚಿಂತನೆ ; ಸತ್ತಿದ್ದರೂ ಇನ್ನೂ ಅಜರಾಮರ ಎಂದು ಬದುಕುವ (ಅಶ್ವತ್ಥಾಮನ) ಮನ:ಸ್ಥಿತಿ. ಇವೆರಡರ ನಡುವೆ ತನ್ನವರ ಕೊಲೆಯ ಪ್ರತೀಕಾರದಿಂದ ನಿರ್ಮಾಣಗೊಂಡ ಯುದ್ಧದ ಕಾರಣಗಳ ಹಿಂದಿರುವ (ಶಕುನಿಯ) ಮರ್ಮ.. ಈ ಮೇಲಿನ ಮೂರೂ ಪಾತ್ರಗಳು ನಾವೇ…

Read More

ಬಾನಂಗಳದಿ ಕೆಂಪುರಂಗಿನ ಓಕುಳಿ ರವಿ ಕಿರಣ ತೂರಿ ಮರದಿ ಬಾನುಲಿ ಕಿಟಕಿಯಿಂದ ಗೃಹದ ಒಳ ಪ್ರವೇಶ ರಂಗಾಗಿ ಬೆರಗಿಂದ ಕಂಗೊಳಿಪ ಆಕಾಶ || ಸುತ್ತ ಮುತ್ತೆಲ್ಲ ಹಸಿರಿನ ಆವರಣ ಹಸಿರ ಮೇಲೆ ಮಂಜು ಹನಿಯ ಹೂರಣ ಖಗ ಮೃಗಗಳ ಕೂಗಿನ ಸೆಳೆತ ಶುಕ ಪಿಕಗಳ ನಾದದ ಉಲಿತ || ಬಣ್ಣ ಬಣ್ಣದ ಹೂಗಳ ಸಾಕ್ಷಾತ್ಕಾರ ದುಂಬಿಗಳ ಖುಶಿಯ ಝೇಂಕಾರ ಪ್ರಕೃತಿ ಸೌಂದರ್ಯ ನಯನ ಮನೋಹರ ನೀಡಲು ಮನುಜಗೆ ಆನಂದ ಆಹ್ಲಾದಕರ || ಮಂದ ಮಾರುತದ ಸವಿಯಾದ ನಾದ ಬಾನಾಡಿಗಳ ಹಾರಾಟ ಸೆಳೆವ ಮೋದ ನೋಡಿರೆಲ್ಲ ರೋಮಾಂಚನ ದೃಶ್ಯವ ಕವಿಯು ಬರೆವ ಮನದಲ್ಲೆ ಕಾವ್ಯವ || ವಿಮಲಾ ಭಾಗ್ವತ್ ಸಿರ್ಸಿ ಉತ್ತರ ಕನ್ನಡ

Read More

ಮಡಿಕೇರಿ : ಕೊಡಗು ಪತ್ರಕರ್ತರ ಸಂಘದ ವತಿಯಿಂದ ನಗರದ ಲಾಲಿ ಪೆಟಲ್ ಸಭಾಂಗಣದಲ್ಲಿ ದಿನಾಂಕ 08 ಜೂನ್ 2025ರಂದು ಆಯೋಜಿತ ಪತ್ರಕರ್ತೆ ದೀಪಾ ಭಾಸ್ತಿಗೆ ಅಭಿನಂದನಾ ಸಮಾರಂಭ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು. ಈ ಸಮಾರಂಭದಲ್ಲಿ ಪಾಲ್ಗೊಂಡು ಪ್ರತಿಷ್ಠಿತ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಮಡಿಕೇರಿಯ ಲೇಖಕಿ ದೀಪಾ ಭಾಸ್ತಿ ಮಾತನಾಡಿ “ಪದಗಳ ತರ್ಜುಮೆಗಿಂತ ಭಾವನೆಗಳನ್ನು ದಾಖಲಿಸುವ ಭಾವಾನುವಾದ ಪ್ರಕಾರವು, ಅನುವಾದ ಸಾಹಿತ್ಯದಲ್ಲಿ ಮಹತ್ವದ್ದಾಗಿರುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ. ಬಾನು ಮುಷ್ತಾಕ್ ಇವರ ‘ಎದೆಯ ಹಣತೆ’ ಕೃತಿ ಸೇರಿದಂತೆ 6 ಕಥಾಸಂಕಲನಗಳಲ್ಲಿನ 12 ಕಥೆಗಳನ್ನು ಆಯ್ಕೆ ಮಾಡಿ ಇಂಗ್ಲೀಷ್ ನಲ್ಲಿ ಬರೆದ ‘ಹಾರ್ಟ್ ಲ್ಯಾಂಪ್’ ಕೃತಿ ಸಂಬಂಧಿತ ಮಾಹಿತಿ ನೀಡಿದ ದೀಪಾ ಭಾಸ್ತಿ “ಕನ್ನಡದಿಂದ ಇಂಗ್ಲೀಷ್ ಗೆ ಅನುವಾದ ಮಾಡುವಾಗ ಖಂಡಿತವಾಗಿಯೂ ಪದಗಳನ್ನು ತರ್ಜುಮೆ ಮಾಡಬಾರದು. ಇದರ ಬದಲಿಗೆ ಮೂಲಕೃತಿಯಲ್ಲಿನ ಪದಗಳ ಭಾವವನ್ನು ಅರ್ಥೈಸಿಕೊಂಡು ತನ್ನದೇ ಶೈಲಿಯಲ್ಲಿ ಭಾವಾನುವಾದ ಮಾಡಿದರಷ್ಟೇ ಅನುವಾದ ಸಾಹಿತ್ಯಕ್ಕೆ ಗಟ್ಟಿತನ ದೊರಕುತ್ತದೆ. ಪಂಪ, ಕುವೆಂಪು ಸೇರಿದಂತೆ ಕನ್ನಡದ ಅನೇಕ…

Read More

ಬೆಂಗಳೂರು : ಕರ್ನಾಟಕ ಯಕ್ಷಧಾಮ ಮಂಗಳೂರು, ಪದ್ಮ ಕಮಲ ಟ್ರಸ್ಟ್ ಬೆಂಗಳೂರು, ಕಲ್ಕೂರ ಪ್ರತಿಷ್ಠಾನಗಳ ಸಹಯೋಗದೊಂದಿಗೆ ಕೋಟದ ಸಾಲಿಗ್ರಾಮ ಮಕ್ಕಳ ಮೇಳದ ‘ಸುವರ್ಣ ಪರ್ವ’ ಸರಣಿ ಕಾರ್ಯಕ್ರಮದ ಅಂಗವಾಗಿ ಸುವರ್ಣ ಸಂಮಾನ – ಯಕ್ಷಗಾನ ಪ್ರದರ್ಶನ ದಿನಾಂಕ 09 ಜೂನ್ 2025ರಂದು ಬೆಂಗಳೂರಿನ ಪರಂಪರಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಯಕ್ಷಗಾನ ಸಂಶೋಧಕ ಹಾಗೂ ವಿದ್ವಾಂಸರಾದ ಆನಂದರಾಮ ಉಪಾಧ್ಯ ಮಾತನಾಡಿ “ಸಂಘಟನೆ ಮತ್ತು ನಿರಂತರತೆ ಎರಡೂ ಸುಲಭದ್ದಲ್ಲ. ಎಪ್ಪತ್ತರ ದಶಕದಲ್ಲಿ ಸಾಲಿಗ್ರಾಮ ಮಕ್ಕಳ ಮೇಳವನ್ನು ಕಟ್ಟಿ, ಸುಮಾರು ಐವತ್ತು ವರ್ಷಗಳ ಸಾರ್ಥಕ ದಿಗ್ವಿಜಯವನ್ನು ಸಾಧಿಸಿದ ಶ್ರೀನಿವಾಸ ಉಡುಪ ಮತ್ತು ಶ್ರೀಧರ ಹಂದೆಯವರು ಯಕ್ಷ ಯುಗ ಪ್ರವರ್ತಕರು. ಅನೇಕ ಮಕ್ಕಳ ಮೇಳಗಳು ಇವತ್ತು ಹುಟ್ಟಿ, ಪ್ರದರ್ಶನಗೊಳ್ಳುವಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ಯಶಸ್ಸಿನ ಗಾಥೆಯೇ ಮೂಲ ಪ್ರೇರಣೆ. ಮುಗ್ಧ ಮನಸ್ಸಿನ ಮಕ್ಕಳಲ್ಲಿ ಪರಂಪರೆಯ ಯಕ್ಷಗಾನದ ಅಭಿರುಚಿಯನ್ನು ಮೂಡಿಸಿ, ಯಕ್ಷಗಾನ ಪ್ರೇಕ್ಷಕರ ಸಹೃದಯತೆಯನ್ನು ತಿದ್ದಿದ ಮಕ್ಕಳ ಮೇಳ ಐತಿಹಾಸಿಕ ದಾಖಲೆಯನ್ನು ಮೆರೆದಿದೆ” ಎಂದು…

Read More

ಬೆಂಗಳೂರು : ಯಶವಂತಪುರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಖ್ಯಾತ ಕವಿ, ಸಾಹಿತಿ ಹೆಚ್. ಎಸ್. ವೆಂಕಟೇಶಮೂರ್ತಿ ಇವರಿಗೆ ನುಡಿ ನಮನ ಹಾಗೂ ಖ್ಯಾತಿ ಗಾಯಕಿ ಸಂಗೀತ ಕಟ್ಟಿ ಇವರಿಂದ ಗಾಯನ ಕಾರ್ಯಕ್ರಮ ದಿನಾಂಕ 15 ಜೂನ್ 2025ರ ಭಾನುವಾರ ಬೆಳಗ್ಗೆ ಘಂಟೆ 10.00 ರಿಂದ ಕೆಂಗೇರಿ ಉಪನಗರದ ಶೇಷಾದ್ರಿಪುರಂ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ಯಶವಂತಪುರ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುಧೀಂದ್ರ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಖ್ಯಾತ ಕವಿ ಡಾ. ಬಿ. ಆರ್. ಲಕ್ಷ್ಮಣರಾವ್ ನುಡಿ ನಮನ ಸಲ್ಲಿಸಲಿದ್ದಾರೆ. ಪ್ರಜಾವಾಣಿ ಸಂಪಾದಕರಾದ ರವೀಂದ್ರ ಭಟ್, ಖ್ಯಾತ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ಪ್ರಾಧ್ಯಾಪಕಿ ಹಾಗೂ ಲೇಖಕಿಯಾದ ಡಾ. ವತ್ಸಲ ಮೋಹನ್, ಎಚ್. ಎಸ್. ವಿ. ಕುರಿತು ಮಾತನಾಡಲಿದ್ದಾರೆ‌ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಎಂ ಪ್ರಕಾಶಮೂರ್ತಿ ಡಾ. ಜೈರಾಮ್, ಡಾ. ಮಂಜುನಾಥ್, ಡಾ. ವೆಂಕಟಸ್ವಾಮಿ, ಡಾ, ವಿನಯ್ ಪಾಲ್ಗೊಳ್ಳಲಿದ್ದಾರೆ. ಹೆಚ್. ಎಸ್.…

Read More

ಉಡುಪಿ : ಯಕ್ಷಗಾನ ಕಲಾರಂಗವು ಸಹೃದಯಿ ಕಲಾ ಪೋಷಕ ಮಟ್ಟಿ ಮುರಲೀಧರ ರಾವ್ ಮತ್ತು ಅರ್ಥಧಾರಿ ಪಂಡಿತ ಪೆರ್ಲ ಕೃಷ್ಣ ಭಟ್ ಇವರ ನೆನಪಿನಲ್ಲಿ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ ಅನುಕ್ರಮವಾಗಿ ಅರ್ಥಧಾರಿ ಹವ್ಯಾಸಿ ವೇಷಧಾರಿ ಸಂಘಟಕ ಡಾ. ಜಿ.ಎಲ್. ಹೆಗಡೆ ಹಾಗೂ ಅರ್ಥಧಾರಿ ಹವ್ಯಾಸಿ ವೇಷಧಾರಿ ಸರ್ಪಂಗಳ ಈಶ್ವರ ಭಟ್ ಇವರು ಆಯ್ಕೆಯಾಗಿದ್ದಾರೆ. ದಿನಾಂಕ 12 ಜುಲೈ 2025ರಂದು ಸಂಸ್ಥೆಯ ಐವೈಸಿ ಸಭಾಂಗಣದಲ್ಲಿ ತಾಳಮದ್ದಲೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂಬುವುದಾಗಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ. ಪ್ರಶಸ್ತಿಯು ರೂ.20,000/- ನಗದು ಪುರಸ್ಕಾರ ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿರುತ್ತದೆ.

Read More

ಮಡಿಕೇರಿ : ಮಧ್ಯಪ್ರಾಚ್ಯದ ಇತಿಹಾಸದಲ್ಲಿ ಮೊದಲಬಾರಿಗೆ ಅರಬ್ ಸಂಯುಕ್ತ ಸಂಸ್ಥಾನದ ಅಬುಧಾಬಿ ಬಿ.ಎ.ಪಿ.ಎನ್. ಹಿಂದೂ ದೇವಾಲಯದಲ್ಲಿ ದಿನಾಂಕ 31 ಮೇ 2025ರಂದು ನಡೆದ ಗುರುವಂದನಾ ಸಂಸ್ಕೃತಿ ಸಿಂಚನ ಕಾರ್ಯಕ್ರಮದಲ್ಲಿ ಕೊಡಗಿನ ಚಿತ್ರಶಿಲ್ಪ ಕಲಾವಿದ ಬಿ.ಕೆ. ಗಣೇಶ್ ರೈ ಇವರಿಗೆ ‘ಸಂಸ್ಕೃತಿ ಶಿಲ್ಪಕಲಾ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸನಾತನ್ ವೇದಿಕ್ ಸಂಸ್ಥಾನದ ಗುರುಗಳಾದ ಶ್ರೀ ಶ್ರೀ ಶ್ರೀ ಪ್ರೋಫೆಸರ್ ಸ್ವಾಮಿ ಚೈತನ್ಯಾನಂದ ಸರಸ್ವತಿಯವರ ಸಮ್ಮುಖದಲ್ಲಿ ಕಲಾವಿದೆ ಬಿ.ಕೆ. ಗಣೇಶ್ ರೈ ಹಾಗೂ ಮಂಜುಳಾ ಗಣೇಶ್ ರೈ ದಂಪತಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಹಿಂದೂ ಮಂದಿರದ ಅವರಣದಲ್ಲಿರುವ ಪ್ರಮುಖ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಬುಧಾಬಿ ಹಿಂದೂ ಮಂದಿರದ ಮುಖ್ಯಸ್ಥರಾದ ಶ್ರೀ ಬ್ರಹ್ಮವಿಹಾರಿ ದಾಸ್ ಸ್ವಾಮೀಜಿ, ಬೆಳಗಾವಿ ನಿಡಸೋಸಿ ಶ್ರೀ ಜಗದ್ಗುರು ದುರುದುಂಡೇಶ್ವರ ಮಠದ ಶ್ರೀ ಶ್ರೀ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ, ಗೋವಾ ರಾಜ್ಯದ ಶ್ರೀ ದತ್ತ ಪದ್ಮನಾಭ ಪೀಠದ ಪದ್ಮಶ್ರೀ ಪುರಸ್ಕೃತ ಶ್ರೀ ಶ್ರೀ ಸದ್ಗುರು ಬ್ರಹ್ಮೇಶನಂದನಾಚಾರ್ಯ…

Read More

ಕುಂದಾಪುರ : ಶ್ರೀ ಗೆಜ್ಜೆನಾದ ಯಕ್ಷಗಾನ ಕಲಾಮಂಡಳಿ ಕುಂದಾಪುರ ಇವರ 5ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಂಘದ ಕಲಾವಿದರು ಮತ್ತು ಬಡಗಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 14 ಜೂನ್ 2025ರಂದು ಸಂಜೆ 7-30 ಗಂಟೆಗೆ ಕುಂದಾಪುರದ ಹೇರಿಕುದ್ರು ಮಾನಸ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀ ಮಹಾಬಲ ಪೂಜಾರಿ ಅವರ ಪದ್ಯ ರಚನೆಯ ಶ್ರೀಕಾಂತ್ ಕಲ್ಕೂರ್ ಅವರ ಕಥಾ ಹಂದರ ಹಂಗಳೂರಿನ ಮಹಿಮೆಯನ್ನು ಸಾರುವ ಪುಣ್ಯ ಕಥನಕ ‘ಹಂಗಳೂರು ಶ್ರೀ ಬ್ರಹ್ಮಲಿಂಗೇಶ್ವರ ಮಹಿಮೆ’ ಎಂಬ ಪ್ರಸಂಗ ಪ್ರದರ್ಶನಗೊಳ್ಳಲಿದೆ.

Read More

ಮಂಗಳೂರು : ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಹಾಗೂ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ದೇರಳಕಟ್ಟೆ ಇದರ ಜಂಟಿ ಆಶ್ರಯದಲ್ಲಿ ಈ ಶೈಕ್ಷಣಿಕ ವರ್ಷದ 2025ನೇ ಸಾಲಿನ 105ನೇ ‘ಸಾಹಿತ್ಯ ಅಭಿರುಚಿ’ ಕಾರ್ಯಕ್ರಮವು ದಿನಾಂಕ 10 ಜೂನ್ 2025ರಂದು ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಇವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಚೇರ್ಮೆನ್ ರವೀಂದ್ರ ಶೆಟ್ಟಿ ಉಳಿದೊಟ್ಟು ಇವರು ವಹಿಸಿದ್ದು, ಮುಖ್ಯ ಸಂಪನ್ಮೂಲ ಅತಿಥಿಯಾಗಿ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕರು ಹಾಗೂ ಲೇಖಕರಾದ ರವೀಂದ್ರ ರೈ ಕಲ್ಲಿಮಾರ್ ಹಾಗೂ ಹೆಸರಾಂತ ನಿರೂಪಕಿ ನಮ್ಮ ಕುಡ್ಲ ಚಾನೆಲ್ ಕಾರ್ಯಕ್ರಮ ನಿರೂಪಕಿ ಡಾ. ಪ್ರಿಯ ಹರೀಶ್ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್ ಇಂದಾಜೆ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ…

Read More