Subscribe to Updates
Get the latest creative news from FooBar about art, design and business.
Author: roovari
ಬಂಟ್ವಾಳ : ಫರಂಗಿಪೇಟೆ ಅರ್ಕುಳದ ಶ್ರೀ ರಾಮ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಯಕ್ಷಧ್ರುವ ಪಟ್ಟ ಫೌಂಡೇಷನ್ ವತಿಯಿಂದ ಉಚಿತ ಯಕ್ಷಗಾನ ತರಬೇತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ದಿನಾಂಕ 22-06-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಚಂದ್ರಹಾಸ ಡಿ. ಶೆಟ್ಟಿ ಇವರು ಮಾತನಾಡಿ “ಯಕ್ಷಶಿಕ್ಷಣ ತರಗತಿಯಲ್ಲಿ ಏಕಾಗ್ರತೆಯನ್ನು ಸಾಧಿಸಬಹುದು. ಅದು ಮಕ್ಕಳ ಶಿಕ್ಷಣಕ್ಕೂ ಪೂರಕವಾಗಿ ಪರಿಣಮಿಸುತ್ತದೆ” ಎಂದು ಹೇಳಿದರು. ಯಕ್ಷ ಶಿಕ್ಷಣ ತರಗತಿಯ ಉದ್ಘಾಟನೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಅರ್ಕುಳಬೀಡು ವಜ್ರನಾಭ ಶೆಟ್ಟಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಎ.ಕೆ. ಜಯರಾಮ ಶೇಕ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಯಕ್ಷ ತರಗತಿ ಗುರುಗಳಾದ ರಕ್ಷಿತ್ ಶೆಟ್ಟಿ ಪಡ್ರೆಯವರ ಸಾಧನೆ ಗುರುತಿಸಿ ಸನ್ಮಾನಿಸಲಾಯಿತು. ಶಾಲಾ ಸಂಚಾಲಕ ಎ. ಗೋವಿಂದ ಶೆಣೈ, ಯಕ್ಷ ತರಗತಿ ಗುರುಗಳಾದ ರಕ್ಷಿತ್ ಶೆಟ್ಟಿ ಪಡ್ರೆ, ರೋಟರಿ ಸದಸ್ಯರಾದ ರಮೇಶ್ ಶೆಟ್ಟಿ ನಡಿಗುತ್ತು, ರಮೇಶ್ ತುಂಬೆ, ಜಯಶೀಲ…
ಮಂಗಳೂರು : ಕೊಲ್ಯ ಸೋಮೇಶ್ವರದ ನಾಟ್ಯನಿಕೇತನದ ನಾಟ್ಯ ಸಭಾಗೃಹದಲ್ಲಿ ಮೋಹನ ಕುಮಾರ್ ಅವರಿಗೆ 90 ತುಂಬಿದ ಸಂಭ್ರಮದ ಪ್ರಯುಕ್ತ ‘ನಾಟ್ಯ ಮೋಹನ ನವತ್ಯುತ್ಸವ’ ನೃತ್ಯ ಸರಣಿ 6ರ ಕಾರ್ಯಕ್ರಮವು ದಿನಾಂಕ 29-06-2024ರಂದು ಪ್ರಸ್ತುತಗೊಂಡಿತು. ಈ ಕಾರ್ಯಕ್ರಮದಲ್ಲಿ ನಾಟ್ಯಾಲಯ ಉರ್ವದ ನಿರ್ದೇಶಕಿ ಕರ್ನಾಟಕ ಕಲಾಶ್ರೀ ಕಮಲ ಭಟ್ ಇವರು ಮಾತನಾಡಿ “ಕಲಾ ತಪಸ್ವಿ ನಾಟ್ಯಾಚಾರ್ಯ ಮೋಹನ್ ಕುಮಾರ್ ಇವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೃತ್ಯ ಕಲೆಯನ್ನು ಶ್ರೀಮಂತಗೊಳಿಸಿ, ಇಂದು ಸಾಮಾನ್ಯರು ನೃತ್ಯ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಳ್ಳುವಂತೆ ಮಾಡಿ ಅಸಂಖ್ಯಾತ ಶಿಷ್ಯ ವರ್ಗವನ್ನು ಮತ್ತು ನೃತ್ಯ ಗುರುಗಳನ್ನು ನೃತ್ಯ ಕ್ಷೇತ್ರಕ್ಕೆ ನೀಡಿದ ಮಹಾನ್ ಕಲಾವಿದರು” ಎಂದು ನುಡಿದರು. ಭರತಾಂಜಲಿಯ ನೃತ್ಯ ಗುರುಗಳಾದ ವಿದ್ವಾನ್ ಶ್ರೀಧರ ಹೊಳ್ಳ ಮತ್ತು ವಿದುಷಿ ಪ್ರತಿಮಾ ಶ್ರೀಧರ್ ನೃತ್ಯ ಕಾರ್ಯಕ್ರಮ ನೀಡಿದರು. ಪ್ರತಿಮಾರವರು ತನ್ನ ಅಮೋಘ ಅಭಿನಯದಿಂದ ವಾಗ್ಗೇಯಕಾರರಾದ ಮೈಸೂರು ವಾಸುದೇವಾಚಾರ್ಯರ ಬ್ರೋಚೆವಾರೆ ವರುರಾ ಕೃತಿಯು ತುಂಬಿದ ಪ್ರೇಕ್ಷಕರ ಮನತಟ್ಟಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಗುರುಗಳಾದ ಮೋಹನ್ ಕುಮಾರ್ ಶುಭ ಹಾರೈಸಿ,…
ಕರ್ನಾಟಕದವರಾಗಿ ಅಮೇರಿಕದಲ್ಲಿ ನೆಲೆಸಿರುವ ಶ್ರೀ ಯೋಗೇಶ್ವರ್ ಮತ್ತು ಶ್ರೀಮತಿ ಪ್ರಜ್ಞಾ ಅವರ ಮೂವರು ಮಕ್ಕಳಲ್ಲಿ ಹಿರಿಯವನೇ 15ರ ಹರೆಯದ ಮಾಸ್ಟರ್ ಅಕುಲ್ ಗೊಂಚಿಗಾರ್. ಅಮೇರಿಕಾದಲ್ಲಿ ಹುಟ್ಟಿ ಬೆಳೆದ ಈ ಬಾಲಕನಿಗೆ ತಂದೆ ತಾಯಂದಿರ ಪ್ರಯತ್ನದಿಂದ ಕರ್ನಾಟಕ ಸಂಗೀತದ ಬಗ್ಗೆ ಒಲಮೆ ಹುಟ್ಟಿಕೊಂಡಿತು. ಬಳಿಕ ವಿದುಷಿ ಪ್ರಾರ್ಥನಾ ಸಾಯಿ ನರಸಿಂಹನ್ ಅವರ ಸಂಗೀತ ಪಾಠ ಆತನಲ್ಲಿ ಸಂಗೀತದ ಬಗ್ಗೆ ಹೆಚ್ಚು ಆಕರ್ಷಣೆಯನ್ನು ಉಂಟು ಮಾಡಿರಬೇಕು. ಬೆಂಗಳೂರಿನ ಜಯನಗರದ ವಿವೇಕ ಸಭಾಂಗಣದಲ್ಲಿ ಅಕುಲ್ ಬಂಧುಗಳೇ ಹೆಚ್ಚಾಗಿ ಇದ್ದ ಉತ್ತಮ ಸಂಖ್ಯೆಯ ಶ್ರೋತೃಗಳ ಸಮ್ಮುಖದಲ್ಲಿ ದಿನಾಂಕ 29-06- 2024ರಂದು ನಿಗದಿತ ಸಮಯಕ್ಕಿಂತ ಸ್ವಲ್ಪ ತಡವಾಗಿ ಸಂಜೆ ಗಂಟೆ 7-00ಕ್ಕೆ ವಿದ್ವಾನ್ ಕೇಶವ ಮೋಹನ್ ಕುಮಾರ್, ವಿದ್ವಾನ್ ಆನೂರು ವಿನೋದ್ ಶ್ಯಾಮ್ ಮತ್ತು ವಿದ್ವಾನ್ ರಘುನಂದನ್ ಬಿ.ಎಸ್.ರಂತಹ ಅನುಭವೀ ಪಕ್ಕವಾಕ್ಯದೊಂದಿಗೆ ಸಂಗೀತ ಕಚೇರಿ ಪ್ರಾರಂಭವಾಯಿತು. ತೋಡಿ ರಾಗ – ಆದಿತಾಳ ವರ್ಣ, ಖರಹರಪ್ರಿಯ ರಾಗದ ತ್ಯಾಗರಾಜರ ಪಕ್ಕಲ ನಿಲಬಡಿ ಕೃತಿ, ಹಂಸಧ್ವನಿ ರಾಗದ ವಿದ್ವಾನ್ ಸಾಯಿ ನರಸಿಂಹನ್…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ತಿಂಗಳ ಸರಣಿ ತಾಳಮದ್ದಳೆಯ ಪ್ರಯುಕ್ತ ದಿನಾಂಕ 29-06-2024ರಂದು ಬನ್ನೂರು ಭಾರತೀನಗರದ ಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನದ ಆಶ್ರಯದಲ್ಲಿ ‘ಕರ್ಣಾವಸಾನ’ ಎಂಬ ಪ್ರಸಂಗದ ತಾಳಮದ್ದಳೆಯು ನಡೆಯಿತು. ಹಿಮ್ಮೇಳದಲ್ಲಿ ಸತೀಶ್ ಇರ್ದೆ, ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಪದ್ಯಾಣ ಶಂಕರನಾರಾಯಣ ಭಟ್, ಪರೀಕ್ಷಿತ್ ಪುತ್ತೂರು ಸಹಕರಿಸಿದರು. ಮುಮ್ಮೇಳದಲ್ಲಿ ಕರ್ಣ (ಪಕಳಕುಂಜ ಶ್ಯಾಮ್ ಭಟ್ ಮತ್ತು ಗುಂಡ್ಯಡ್ಕ ಈಶ್ವರ ಭಟ್), ಅರ್ಜುನ (ಸುಬ್ಬಪ್ಪ ಕೈಕಂಬ ಮತ್ತು ಮಾಂಬಾಡಿ ವೇಣುಗೋಪಾಲ ಭಟ್), ಶ್ರೀ ಕೃಷ್ಣ (ಕು೦ಬ್ಳೆ ಶ್ರೀಧರ್ ರಾವ್ ಮತ್ತು ಭಾಸ್ಕರ್ ಬಾರ್ಯ), ಶಲ್ಯ (ಗುಡ್ಡಪ್ಪ ಬಲ್ಯ), ವೃದ್ಧ ವಿಪ್ರ (ದುಗ್ಗಪ್ಪ ಎನ್.), ಅಶ್ವಸೇನ (ಬಡೆಕ್ಕಿಲ ಚಂದ್ರಶೇಖರ್ ಭಟ್) ಸಹಕರಿಸಿದರು. ಬೋನಂತಾಯ ಶಿವಶಂಕರ ಭಟ್ ಪ್ರಾಯೋಜಿಸಿದ್ದರು.
ತೆಕ್ಕಟ್ಟೆ: : ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆಯ ‘ಸಿನ್ಸ್ 1999 ಶ್ವೇತಯಾನ-29’ನೇ ಕಾರ್ಯಕ್ರಮ ದಿನಾಂಕ 29-06-2024ರಂದು ತೆಕ್ಕಟ್ಟೆ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕಲ್ಯಾಣ ಮಂದಿರದ ಮ್ಯಾನೇಜರ್ ದೀಪಕ್ ಇವರನ್ನು ಅಭಿನಂದಿಸಿದ ತೆಕ್ಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಗಣಪತಿ ಟಿ. ಶ್ರೀಯಾನ್ ಮಾತನಾಡಿ “ಸಾಂಸ್ಕೃತಿಕ ಚಿಂತನೆಯಿಂದ ಸಮಾಜದ ನ್ಯೂನತೆಗಳ ಸಮತೋಲನ ಸಾಧ್ಯ. ಕಲೆಯನ್ನು, ಕಲಾವಿದರನ್ನು, ಕಲಾ ಸಂಸ್ಥೆಗಳನ್ನು ಗೌರವಿಸುವುದು ಸಮಾಜದ ಎಲ್ಲಾ ಗೌರವಾನ್ವಿತರ ಕರ್ತವ್ಯ. ಈ ನಿಟ್ಟಿನಲ್ಲಿ ಯಶಸ್ವೀ ಕಲಾವೃಂದದ 25 ನೇ ಸಂಭ್ರಮಾಚರಣೆಯಲ್ಲಿ ಸಂಸ್ಥೆಗೆ ಹೊಸ ತಲೆಮಾರಿನ ಅರ್ಥದಾರಿಗಳ ಪರಿಶೋಧ, ಅರ್ಥಾಂಕುರಕ್ಕೆ ಅವಕಾಶ ನೀಡಿ, ತೆಕ್ಕಟ್ಟೆ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದ ಮಾಲಕ ನಿತ್ಯಾನಂದ ಗಾಣಿಗ ಸಾಂಸ್ಕೃತಿಕ ಕಳಕಳಿಯಿಂದ ಸಂಸ್ಥೆಯನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಿರುವುದು ನಿಜಕ್ಕೂ ಶ್ಲಾಘನೀಯ.” ಎಂದು ಅಭಿಪ್ರಾಯಪಟ್ಟರು. ಉದ್ಯಮಿ ಗೋಪಾಲ ಪೂಜಾರಿ ಬಾಳೆಹಿತ್ಲು, ಕಲಾವಿದ ಹರೀಶ್ ಕಾವಡಿ, ಪ್ರಶಾಂತ್ ಆಚಾರ್ ಕೆಳಕಳಿ, ರಾಘವೇಂದ್ರ ಮಣೂರು ಉಪಸ್ಥಿತರಿದ್ದ ಈ ಕಾರ್ಯಕ್ರಮದ ನಿರ್ವಾಹಣೆಯನ್ನು ಹೆರಿಯ ಮಾಸ್ಟರ್ ಮಾಡಿದರು. ಬಳಿಕ ಅರ್ಥಾಂಕುರ-9…
ಮಂಗಳೂರು : ಜರ್ನಿ ಥೇಟರ್ ಮಂಗಳೂರು ಹಾಗೂ ಮಾಂಡ್ ಸೊಭಾಣ್ ಇದರ ಸಹಯೋಗದಲ್ಲಿ ಆಯೋಜಿಸಿದ ಮೂರು ದಿನಗಳ ಬೆಳಕಿನ ವಿನ್ಯಾಸ ಕರ‍್ಯಾಗಾರ `ಕ್ರಾಸ್ ಫೇಡ್’ ಇದರ ಸಮಾರೋಪ ಸಮಾರಂಭ ದಿನಾಂಕ 27-06-2024ರಂದು ಮಂಗಳೂರಿನ ಶಕ್ತಿನಗರದ ಕಾಲಾಂಗಣ್ ನಲ್ಲಿ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ತುಳು ರಂಗ ಹಾಗೂ ಸಿನೆಮಾ ನಿರ್ದೇಶಕ ಮತ್ತು ನಟರಾದ ವಿಜಯಕುಮಾರ್ ಕೊಡಿಯಾಲ್ ಬೈಲ್ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ “ಒಂಬತ್ತು ಗಂಟೆಗೆ ನಾಟಕವಾದರೆ ನಮಗೆ ವೇದಿಕೆ ದೊರೆಯುತ್ತಿದ್ದುದು ಎಂಟು ಮುಕ್ಕಾಲಿಗೆ. ಬೇಗ ಶುರು ಮಾಡಿ ಎಂಬ ಒತ್ತಾಯ ಬೇರೆ. ಆಗ ಬೆಳಕಿನ ವಿನ್ಯಾಸದ ಬಗ್ಗೆ ಚಿಂತಿಸಲು ಪುರುಸೊತ್ತಾದರೂ ಎಲ್ಲಿ? ನಮಗೆ ಗೊತ್ತಿದ್ದದ್ದು ಎರಡೇ ಲೈಟು. ಕೋಪ ಬಂದರೆ ಕೆಂಪು, ಮತ್ತೊಂದು ನೀಲಿ. ಏಕೆಂದರೆ ನಮ್ಮ ಕಾಲದ ತುಳು ಕಲಾವಿದರಿಗೆ ಇಂತಹ ರಂಗ ಶಿಕ್ಷಣ ದೊರೆತಿರಲಿಲ್ಲ. ನಾವು ಮೂರು ಗಂಟೆ ಪ್ರೇಕ್ಷಕರನ್ನು ನಗಿಸುವ ಬಗ್ಗೆ, ನೂರಾರು ಪ್ರದರ್ಶನ ಮಾಡುವ ಬಗ್ಗೆ ಹಾಗೂ ಅದರಿಂದ ನಮ್ಮ…
ನೃತ್ಯ ತರಗತಿಯಲ್ಲಿಯೇ, ತರಗತಿಯ ಅವಧಿಯಲ್ಲಿಯೇ ವಿದ್ಯಾರ್ಥಿಗಳು, ಹೆತ್ತವರು ಹಾಗೂ ಸೀಮಿತ ಆಮಂತ್ರಿತ ಅಭ್ಯಾಗತರ ಸಮ್ಮುಖದಲ್ಲಿ ಕಳೆದ ಎಂಟು ತಿಂಗಳಿನಿಂದ ನಡೆಯುತ್ತಿದೆ ನಾದನೃತ್ಯ ತಿಂಗಳ ಸರಣಿ ಕಾರ್ಯಕ್ರಮ. ಭರತನಾಟ್ಯದ ಮೂಲಭೂತ ಹೆಜ್ಜೆಗಳನ್ನು ಮತ್ತು ಹತ್ತರಿಂದ – ಹದಿನೈದು ನೃತ್ಯಬಂಧಗಳನ್ನು ಕಲಿತ ಮಂಗಳೂರಿನ ನಾದನೃತ್ಯ ಕಲಾಸಂಸ್ಥೆಯ ವಿದ್ಯಾರ್ಥಿಗಳೇ ಈ ಕಾರ್ಯಕ್ರಮವನ್ನು ನಡೆಸಿ ಕೊಡುತ್ತಾರೆ. 2022-23ನೇ ಸಾಲಿನ ಜೂನಿಯರ್ ಹಾಗೂ ಸೀನಿಯರ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಶುಕೀ ರಾವ್, ಅಂಜಲಿ ಶೋನ್ಶಾ, ಶಿವಾನಿ ಭಟ್, ಹರುಷ ಡಿ. ಎಸ್, ವರ್ಣಿಕಾ ಆಚಾರ್ಯ, ಚೈತನ್ಯ ಆಳ್ವ, ಮಹಾಲಕ್ಷ್ಮೀ ಶೆಣೈ, ಚಿನ್ಮಯೀ ಕೋಟ್ಯಾನ್ ಹಾಗೂ ಮೇಧಾ ರಾವ್ ಈ ಒಂಭತ್ತು ಮಂದಿ ವಿದ್ಯಾರ್ಥಿಗಳು ಸರಣಿ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿರುತ್ತಾರೆ. ಭರತನಾಟ್ಯವೆಂಬ ನೃತ್ಯ ಪದ್ಧತಿಯನ್ನು ಅರಿತು ಪ್ರದರ್ಶಿಸುವುದರಲ್ಲಿ ಅಗತ್ಯವಿರುವ ಪರಿಪೂರ್ಣ ಕಲಿಕಾ-ವಿಧಾನವನ್ನು ರೂಪಿಸಿಕೊಂಡು ಈ ಸಂಸ್ಥೆ ಮುನ್ನಡೆಯುತ್ತಿದೆ. ಶಾಸ್ತ್ರ ಹಾಗೂ ಪ್ರಯೋಗಗಳ ಸಂಬಂಧವನ್ನು ಬರಿಯ ಪರೀಕ್ಷೆ ಎದುರಿಸಿ ಅಂಕಗಳಿಸುವ ಪ್ರಕ್ರಿಯೆಗಷ್ಟೇ ಸೀಮಿತಗೊಳಿಸದೆ ವಿದ್ಯಾರ್ಥಿಗಳ ಶಾರೀರಿಕ, ಬೌದ್ಧಿಕ, ಸಾಮಾಜಿಕ ಹಾಗೂ ಕಲಾತ್ಮಕ ಬೆಳವಣಿಗೆಗೆ…
ಬೆಂಗಳೂರು : ಖ್ಯಾತ ಭರತನಾಟ್ಯ ಕಲಾವಿದೆ ಹಂಸ ಮೊಯ್ಲಿ ಇವರು ದಿನಾಂಕ 30-06-2024ರ ಭಾನುವಾರದಂದು ಬೆಂಗಳೂರಿನಲ್ಲಿ ನಿಧನರಾದರು. ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವರಾದ ಎಂ.ವೀರಪ್ಪ ಮೊಯ್ಲಿ ಇವರ ಪುತ್ರಿಯಾದ 46 ವರ್ಷದ ಹಂಸ ಮೊಯ್ಲಿ ಖ್ಯಾತ ಭರತನಾಟ್ಯ ಕಲಾವಿದೆ ಮತ್ತು ಪ್ರಾಯೋಗಿಕ ನೃತ್ಯ ಸಂಯೋಜಕಿಯಾಗಿದ್ದು, ದೇವದಾಸಿಯರ ಜೀವನವನ್ನು ಆಧರಿಸಿದ ತಮಿಳು ಚಲನಚಿತ್ರ ‘ಶೃಂಗಾರಂ’ನಲ್ಲಿ ನಟಿಸಿದ್ದರು ಮತ್ತು ಅಧ್ಯಾತ್ಮ, ಯೋಗ ಇತ್ಯಾದಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಪುತ್ತೂರು : ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ನೇತೃತ್ವದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಗ್ರಾಮ ಪಂಚಾಯತ್ ಕೊಡಿಪ್ಪಾಡಿ ಸಹಯೋಗದಲ್ಲಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ, ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ ಅಬುದಾಬಿಯವರ ಪೋಷಕತ್ವದಲ್ಲಿ ದಿನಾಂಕ 29-6-2024ರಂದು ಕೊಡಿಪ್ಪಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ಸಾಹಿತ್ಯ ಸಂಭ್ರಮ 14ನೇ ಸರಣಿ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸೋಮಪ್ಪ ಪೂಜಾರಿ “ಗ್ರಾಮ ಮಟ್ಟದ ಸಾಹಿತಿಗಳನ್ನು ಗುರುತಿಸಿ, ಗ್ರಾಮೀಣ ಯುವ ಮತ್ತು ವಿದ್ಯಾರ್ಥಿಗಳಿಗೆ ಸಾಹಿತ್ಯದ ಚಟುವಟಿಕೆಗಳನ್ನು ಆಯೋಜನೆ ಮಾಡುವುದರ ಮೂಲಕ ಉತ್ತಮ ಪರಿಣಾಮ ಬೀರಲು ಗ್ರಾಮ ಸಾಹಿತ್ಯ ಸಂಭ್ರಮ ಒಳ್ಳೆಯ ಕಾರ್ಯಕ್ರಮವಾಗಿದೆ” ಎಂದು ಆಶಯ ವ್ಯಕ್ತಪಡಿಸಿದರು. ಕಾರ್ಯಕ್ರಮದ ಸರ್ವಾಧ್ಯಕ್ಷತೆಯನ್ನು ವಹಿಸಿದ ಕೊಡಿಪ್ಪಾಡಿ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ. ಶಾಲೆಯ ಕುಮಾರಿ ಶಮಿತ ಮಾತನಾಡಿ “ಇದೊಂದು ಶಾಲಾ ಮಕ್ಕಳಿಗೆ ಸಾಹಿತ್ಯದ ಬಗ್ಗೆ ಒಲವು ಮೂಡಿಸುವ ಕಾರ್ಯಕ್ರಮವಾಗಿದ್ದು, ನಮ್ಮಲ್ಲಿರುವ ಪ್ರತಿಭೆಗೆ ಗ್ರಾಮ ಮಟ್ಟದಲ್ಲಿ ಗುರುತಿಸಿ ಪ್ರೋತ್ಸಾಹಿಸುವ…
ಉಡುಪಿ : ಯಕ್ಷಗಾನ ಕಲಾರಂಗದ ನೂತನ ಐ.ವೈ.ಸಿ. ಸಭಾಂಗಣದಲ್ಲಿ ದಿನಾಂಕ 29-06-2024ರಂದು ಕೀರ್ತಿಶೇಷ ಮಲ್ಪೆ ಶಂಕರನಾರಾಯಣ ಸಾಮಗರ ಜೀವನ ದರ್ಶನ ಪರಿಚಯಿಸುವ ‘ದೊಡ್ಡ ಸಾಮಗರ ನಾಲ್ಮೊಗ’ ಕೃತಿ ಲೋಕಾರ್ಪಣೆಗೊಂಡಿತು. ಕೃತಿ ಲೋಕಾರ್ಪಣೆಗೊಳಿಸಿ ಅಶೀರ್ವಚನ ನೀಡಿದ ಕಾಸರಗೋಡಿನ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದರು “ಶಂಕರನಾರಾಯಣ ಸಾಮಗರು ಮಠದೊಂದಿಗೆ ನಿಕಟಸಂಪರ್ಕ ಹೊಂದಿದ್ದರು. ಅವರು ಕಲಾವಿದ, ವಿದ್ವಾಂಸ ಮಾತ್ರವಲ್ಲದೆ ಸಂಸ್ಕಾರದ ಪ್ರತೀಕವಾಗಿದ್ದರು. ಹಿರಿಯ ವ್ಯಕ್ತಿಯ ಸರಳತೆ ಯುವ ಕಲಾವಿದರಿಗೆ ಅದರ್ಶಪ್ರಾಯವಾಗಿದೆ. ಹಿರಿಯ ಕಲಾವಿದರ ಬಗೆಗಿನ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಓದುಗರಿಗೆ ಲಭಿಸಬೇಕು. ಇದರಿಂದ ಯುವ ಪೀಳಿಗೆಗೆ ಸಾಧಕರ ಪರಿಚಯವಾಗಲು ಸಾಧ್ಯವಿದೆ. ಯಕ್ಷಗಾನದ ಪರಂಪರೆಗೆ ಸೇವೆ ಸಲ್ಲಿಸಿ, ಮಹನೀಯರ ಮಾಹಿತಿ ಪಡೆಯಲು ಸಹಕಾರಿಯಾಗುತ್ತದೆ” ಎಂದು ಹೇಳಿದರು. ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ವಿದ್ವಾಂಸ ಡಾ. ಪ್ರಭಾಕರ ಜೋಶಿ ಶುಭಾಶಂಸನೆಗೈದರು. ಹಿರಿಯ ವಿಮರ್ಶಕ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಪುಸ್ತಕ ಪರಿಚಯಿಸಿದರು. ಮಾಜಿ ಸಚಿವ ಪ್ರಮೋದ್…