Author: roovari

ಬೆಂಗಳೂರು : ಭಾರತೀಯ ಪ್ರದರ್ಶನ ಕಲಾಪ್ರಕಾರಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ SEPI ಇದರ ಸಹಸಂಸ್ಥೆಯಾದ ‘ಸಂಗಮವು’ ಆಯೋಜಿಸಿದ ‘ಸುದರ್ಶನ ಗರ್ವಭಂಗ’ ಯಕ್ಷಗಾನ ಪ್ರದರ್ಶನವು ದಿನಾಂಕ 20-04-2024ರಂದು ಬೆಂಗಳೂರು ದೊಂಬ್ಲೂರಿನಲ್ಲಿರುವ ‘ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್‌’ನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಇನ್ಫೋಸಿಸ್ ಸಹ ಸಂಸ್ಥಾಪಕರಲೊಬ್ಬರಾದ ಶಿಬುಲಾಲ್‌ರವರು ದೀಪ ಹಚ್ಚುವ ಮೂಲಕ ಉದ್ಘಾಟಿಸಿದರು. ಜೊತೆಯಲ್ಲಿ ಶಿಬುಲಾಲ್‌ರವರ ಪತ್ನಿ ಕುಮಾರಿ ಶಿಬುಲಾಲ್ ಯಕ್ಷದೇಗುಲದ ಕೋಟ ಸುದರ್ಶನ ಉರಾಳ, ಭಾಗವತ ಲಂಬೋದರ ಹೆಗಡೆ, ಯಕ್ಷಗುರು ಪ್ರಿಯಾಂಕ ಕೆ. ಮೋಹನ್ ಉಪಸ್ಥಿತರಿದ್ದರು. ‘ಯಕ್ಷದೇಗುಲ’ ಬೆಂಗಳೂರು ತಂಡದವರಿಂದ ನಡೆದ ಈ ಪ್ರದರ್ಶನದಲ್ಲಿ ನುರಿತ ಕಲಾವಿದರಾದ ಲಂಬೋದರ ಹೆಗಡೆ, ರಾಜೇಶ್ ಆಚಾರ್ಯ, ತಮ್ಮಣ್ಣ ಗಾಂವ್ಕರ್, ಆದಿತ್ಯ ಭಟ್, ಮನೋಜ್ ಭಟ್, ಶ್ರೀನಿಧಿ, ಉದಯ ಭೋವಿ, ಪನ್ನಗ ಮಯ್ಯ, ಶ್ರೀರಾಮ ಹೆಬ್ಬಾರ್ ಇವರಿಂದ ಕೆ. ಮೋಹನ್ ನಿರ್ದೇಶನದಲ್ಲಿ ಮಧುಕುಮಾರ್ ಬೋಳಾರ್ ವಿರಚಿತ “ಸುದರ್ಶನ ಗರ್ವಭಂಗ” ಯಕ್ಷಗಾನ ಪ್ರದರ್ಶನ ಪ್ರೇಕ್ಷಕರನ್ನು ಬಲುವಾಗಿ ರಂಜಿಸಿತು. ಮೊದಲಿಗೆ ಪ್ರಿಯಾಂಕ ಕೆ. ಮೋಹನ್ ನಿರ್ದೇಶನದಲ್ಲಿ ‘ಧೀರ ವೈಯ್ಯಾರೋ ಬಹುಪರಾಕ್’…

Read More

ಸುರತ್ಕಲ್ : ಸುರತ್ಕಲ್ಲಿನ ಗೋವಿಂದದಾಸ ಕಾಲೇಜಿನ ರೋಟರಾಕ್ಟ್ ಕ್ಲಬ್, ವಾಣಿಜ್ಯ ಶಾಸ್ತ್ರ ಮತ್ತು ವ್ಯವಹಾರ ಆಡಳಿತ ಶಾಸ್ತ್ರ ವಿಭಾಗ ಹಾಗೂ ರೋಟರಿ ಕ್ಲಬ್ ಸುರತ್ಕಲ್‌ ಇದರ ಆಶ್ರಯದಲ್ಲಿ ‘ಮೈಂಡ್ ಮ್ಯಾಜಿಕ್’ ವಿಶೇಷ ಕಾರ್ಯಕ್ರಮವು ದಿನಾಂಕ 17-04-2024ರಂದು ಸುರತ್ಕಲ್ಲಿನ ಗೋವಿಂದದಾಸ ಕಾಲೇಜಿನಲ್ಲಿರುವ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿಭಾಗವಹಿಸಿದ ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಮಾತನಾಡಿ “ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಏಕಾಗ್ರತೆ ಅತ್ಯಗತ್ಯವಾಗಿದ್ದು ಸರಳ ತಂತ್ರಗಳ ಮೂಲಕ ಮನಸ್ಸಿನ ಏಕಾಗ್ರತೆ ಮತ್ತು ದೃಢತೆಯನ್ನು ಹೆಚ್ಚಿಸಿಕೊಳ್ಳಬಹುದು.” ಎಂದರು. ಮತ್ತು ವಿದ್ಯಾರ್ಥಿಗಳು ಏಕಾಗ್ರತೆಯನ್ನು ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ತಂತ್ರಗಳನ್ನು ಸರಳವಾದ ಜಾದೂಗಳ ಹಿನ್ನಲೆಯಲ್ಲಿ ಪ್ರಸ್ತುತ ಪಡಿಸಿದರು. ಸುರತ್ಕಲ್ ರೋಟರಿ ಕ್ಲಬ್ಬಿನ ಅಧ್ಯಕ್ಷ ರೋ. ಯೋಗೀಶ್ ಕುಳಾಯಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿ ಮಾತನಾಡಿ “ಮನಸ್ಸಿನ ಏಕಾಗ್ರತೆಯ ವಿಧಾನಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಕಲಿಕೆಯಲ್ಲಿ ಸಾಕರಾತ್ಮಕ ಫಲಿತಾಂಶಗಳನ್ನು ಪಡೆಯಬಹುದು.” ಎಂದರು. ಕಾರ್ಯಕ್ರಮದಲ್ಲಿ ಉಪ…

Read More

ಮೂಡುಬಿದಿರೆ : ಆಳ್ವಾಸ್ ಕಾಲೇಜಿನ ಕುವೆಂಪು  ಸಭಾಂಗಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕೇರಳ ಸಮಾಜಂ ಸಂಘದ ವತಿಯಿಂದ  “ಕಲೋತ್ಸವಂ- 2024” ದಿನಾಂಕ 22-04-2024ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ “ಕೇರಳದವರು ತಾವು  ಎಲ್ಲೇ ನೆಲೆಸಿದ್ದರೂ  ತಮ್ಮ  ಆಚರಣೆ, ಸಂಸ್ಕೃತಿಯನ್ನು  ಸದಾ ಪೋಷಿಸುತ್ತಾ ಸಾಗುತ್ತಾರೆ. ಕರಾವಳಿ ಹಾಗೂ ಕೇರಳದ ಆಚರಣೆಗಳಲ್ಲಿ,  ಜನರ  ನಡವಳಿಕೆಯಲ್ಲಿ ಅನೇಕ  ಹೋಲಿಕೆಗಳು ಕಂಡು  ಬರುತ್ತವೆ. ಆಳ್ವಾಸ್  ಶಿಕ್ಷಣ  ಸಂಸ್ಥೆಯ ವಿವಿಧ ಕಾಲೇಜುಗಳಲ್ಲಿ  ಹೆಚ್ಚಿನ ಸಂಖ್ಯೆಯ ಮಲಯಾಳಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇಲ್ಲಿನ ವಿದ್ಯಾರ್ಥಿಗಳೊಂದಿಗೆ ಅನ್ಯೋನ್ಯತೆಯಿಂದ ಸಹಜೀವನ ನಡೆಸುತ್ತಿದ್ದಾರೆ. ನಮ್ಮ ಪ್ರತಿಷ್ಠಾನವು ಕೇರಳದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇಲ್ಲಿ ಪರಿಚಯಿಸಿ ಪ್ರಚುರ ಪಡಿಸಿದೆ.  ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು. ದೇವರ ಸ್ವಂತ ನಾಡು ಎಂದೇ ಕರೆಸಿಕೊಳ್ಳುವ ಕೇರಳ ಎಲ್ಲಾ ಸಾಂಸ್ಕೃತಿಕ ಆಚರಣೆಗಳಿಗೆ ಸರಿಯಾದ ಅವಕಾಶವನ್ನು ಕಲ್ಪಿಸಿದೆ. ನಮ್ಮ ದೇಶದ ಸಂವಿಧಾನ ಎಲ್ಲಾ ಧರ್ಮದ ಜನರ ಆಚರಣೆಗಳಿಗೆ ಸಮಾನ ವೇದಿಕೆ…

Read More

ಕಾಸರಗೋಡು : ಬದಿಯಡ್ಕದ ಸಮೀಪದ ಮೂಲಡ್ಕ ಉದನೇಶ್ವರ ಪ್ರಸಾದ್ ಇವರ ಮಾತೃಶ್ರೀ ಲಕ್ಷ್ಮೀ ಅಮ್ಮನ 84ನೇ ಹುಟ್ಟುಹಬ್ಬದ ಧಾರ್ಮಿಕ ಕಾರ್ಯಕ್ರಮದ ಬಾಬ್ತು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ವತಿಯಿಂದ ‘ಜಾಂಬವತಿ ಕಲ್ಯಾಣ’ ತಾಳಮದ್ದಳೆಯು ದಿನಾಂಕ 20-04-2024ರಂದು ನಡೆಯಿತು. ಹಿಮ್ಮೇಳದಲ್ಲಿ ಭವ್ಯಶ್ರೀ ಕುಲ್ಕುಂದ, ಪುಂಡಿಕಾಯಿ ರಾಜೇಂದ್ರ ಪ್ರಸಾದ್, ಲಕ್ಷ್ಮೀಶ ಬೇಂಗ್ರೋಡಿ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಅಡಿಗ, ಶುಭಾ ಗಣೇಶ್, ಕಿಶೋರಿ ದುಗ್ಗಪ್ಪ ನಡುಗಲ್ಲು, ಮನೋರಮಾ ಜಿ. ಭಟ್ ಸಹಕರಿಸಿದರು. ಸಂಚಾಲಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ಮೂಲಡ್ಕ ಉದನೇಶ್ವರ ಪ್ರಸಾದ್ ವಂದಿಸಿದರು.

Read More

ಮಂಗಳೂರು : ಕಲಾಭಿ ಮಂಗಳೂರು ಹಾಗೂ ಕೆನರಾ ಕಲ್ಚರಲ್ ಅಕಾಡೆಮಿಯ ಆಶ್ರಯದಲ್ಲಿ ಮೂಡಿಬಂದ ‘ಅರಳು 2024’ ಎಂಬ ಮಕ್ಕಳ ರಂಗಭೂಮಿಯ ವಿಶೇಷ ಕಾರ್ಯಾಗಾರದ ‘ಮಕ್ಕಳ ನಾಟಕೋತ್ಸವ’ವು ಕೆನರಾ ಪದವಿ ಪೂರ್ವ ಕಾಲೇಜಿನ ಬಯಲು ರಂಗಮಂದಿರದಲ್ಲಿ ದಿನಾಂಕ 21-04-2024ರಂದು ಸಂಪನ್ನಗೊಂಡಿತು. ಅಂತರಾಷ್ಟ್ರೀಯ ಮಟ್ಟದ ಜಾದೂಗಾರ ಕುದ್ರೋಳಿ ಗಣೇಶ್ ಅವರು ಸಮಾರೋಪ ಭಾಷಣ ಮಾಡಿದರು. ನಿರ್ದೇಶಕ ಹಾಗೂ ನಟ ರಾಹುಲ್ ಅಮೀನ್ ಮುಖ್ಯ ಅತಿಥಿಯಾಗಿದ್ದರು. ಸಿ.ಎಚ್.ಎಸ್. ಅಸೋಸಿಯೇಶನ್ ಆಡಳಿತ ಮಂಡಳಿ ಸದಸ್ಯೆ ಅಶ್ವಿನಿ ಕಾಮತ್, ಕೆನರಾ ಪದವಿ ಪೂರ್ವ ಕಾಲೇಜಿನ ಡೀನ್ ಗೋಪಾಲ್ ಶೆಟ್ಟಿ, ಕೆನರಾ ಹಿ.ಪ್ರಾ. ಶಾಲೆಯ ಮುಖ್ಯೋಪಧ್ಯಾಯಿನಿ ಕವಿತಾ ಮೌರ್ಯ, ಕಲಾಭಿ ಗೌರವಾಧ್ಯಕ್ಷ ಸುರೇಶ್ ವರ್ಕಾಡಿ, ಅಧ್ಯಕ್ಷೆ ಡಾ. ಮೀನಾಕ್ಷಿ ರಾಮಚಂದ್ರ ಉಪಸ್ಥಿತರಿದ್ದರು. ಕಾರ್ಯಕ್ರಮವು ಶಿಬಿರದ ಮಕ್ಕಳು, ನಿರ್ದೇಶಕರು, ಸಹಾಯಕ ನಿರ್ದೇಶಕರು ಹಾಗೂ ಅರಳು ಕಾರ್ಯಾಗಾರದಲ್ಲಿ ಭಾಗವಹಿಸಿದ ಕಲಾವಿದರು ಒಟ್ಟಾಗಿ ಹಾಡಿದ ರಂಗ ಸಂಗೀತಗಳೊಂದಿಗೆ ಆರಂಭವಾಯಿತು. ಶ್ರೇಯಸ್ ಸಾಲ್ಯಾನ್ ನಿರೂಪಿಸಿ, ಕಾರ್ಯಾಗಾರ ಸಂಯೋಜಕ ಉಜ್ವಲ್ ಯು.ವಿ. ವಂದಿಸಿದರು. ಎರಡು ನಾಟಕಗಳಾದ ರಾಜು…

Read More

ಕಾರ್ಕಳ : ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಸಲ್ಪಡುತ್ತಿರುವ ಕಾರ್ಕಳದ ಪ್ರಸಿದ್ಧ ಪುಸ್ತಕ ಮಳಿಗೆಯಾದ ‘ಪುಸ್ತಕ ಮನೆ’ಯಲ್ಲಿ ವಿಶ್ವ ಪುಸ್ತಕ ದಿನಾಚರಣೆಯ ಪ್ರಯುಕ್ತ ‘ಪುಸ್ತಕ ಸಂತೆ’ ಕಾರ್ಯಕ್ರಮವನ್ನು ದಿನಾಂಕ 23-04-2024ರಿಂದ 29-04-2024ರವರೆಗೆ ಆಯೋಜಿಸಲಾಗಿದೆ. ದಿನಾಂಕ 23-04-2024ರ ಬೆಳಿಗ್ಗೆ ಘಂಟೆ 11.00ಕ್ಕೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ವಾಗ್ಮಿ ಹಾಗೂ ಸಾಹಿತಿ ಪ್ರಭಾಕರ ಕೊಂಡಳ್ಳಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ಪುಸ್ತಕಗಳಿಗೂ 10ರಿಂದ 50 ಶೇಕಡಾ ವಿಶೇಷ ರಿಯಾಯಿತಿಯನ್ನು ನೀಡಲಾಗುವುದು. ಜೊತೆಗೆ ಪ್ರತೀ ಖರೀದಿಯೊಂದಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತದೆ. ಪುಸ್ತಕ ಪ್ರೇಮಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.

Read More

ಕುಂದಾಪುರ : ‘ನೃತ್ಯ ವಸಂತ ನಾಟ್ಯಾಲಯ’ ಎಂಬ ನೃತ್ಯ ಸಂಸ್ಥೆಯ ವತಿಯಿಂದ ದಿನಾಂಕ 19-04-2024, 20-04-2024 ಮತ್ತು 21-04-2024ರಂದು ಮೂರು ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕರಾವಳಿಯ ಯುವ ವಿದ್ವಾಂಸರಾದ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಇವರು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಈ ಕಾರ್ಯಾಗಾರದಲ್ಲಿ ನೃತ್ಯ ಸಂಸ್ಥೆಯ ಸುಮಾರು 40 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದು, ಈ ಬಗ್ಗೆ ಸಂಸ್ಥೆಯ ಗುರುಗಳಾದ ವಿದುಷಿ ಪ್ರವಿತಾ ಅಶೋಕ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

Read More

ಇಂದು ವಿಶ್ವ ಪುಸ್ತಕ ದಿನ. ಪುಸ್ತಕಗಳು ಜ್ಞಾನದ ಭಂಡಾರ ಆಗಿವೆ. ಪುಸ್ತಕ ದಿನವೆಂದರೆ ಜ್ಞಾನ ದಿನವೇ ಆಗಿದೆ. ಅಂದರೆ ಜ್ಞಾನದ ಆರಾಧನೆಯೇ ಪುಸ್ತಕ ದಿನದ ಆಶಯವಾಗಿದೆ. ಪುಸ್ತಕದಲ್ಲಿ ಜ್ಞಾನ ಅಡಕವಾಗಿದೆ. ಆದರೆ ಜ್ಞಾನವು ಪುಸ್ತಕ ರೂಪದಲ್ಲಿ ಮಾತ್ರವೇ ಇರಬೇಕಾಗಿಲ್ಲ. ಪುಸ್ತಕವು ಜ್ಞಾನವನ್ನು ಸಂರಕ್ಷಿಸಿ ಇಟ್ಟುಕೊಂಡಿರುವ ಒಂದು ಮಾಧ್ಯಮವಾಗಿದೆ. ಆಧುನಿಕ ಕಾಲದಲ್ಲಿ ಒಂದು ಮಹತ್ವದ ಮತ್ತು ಶಕ್ತಿಯುತ ಮಾಧ್ಯಮವೂ ಹೌದು. ಹಿಂದಿನ ಕಾಲದಲ್ಲಿ ಸಾಹಿತ್ಯವನ್ನು ಅಕ್ಷರ ರೂಪದಲ್ಲಿ ಬರೆದಿಡುವ ವ್ಯವಸ್ಥೆ ಇರಲಿಲ್ಲ. ಎಲ್ಲವನ್ನೂ ನೆನಪಿನ ರೂಪದಲ್ಲಿ ಸಂರಕ್ಷಿಸಬೇಕಾಗಿತ್ತು. ಅವುಗಳನ್ನು ಶ್ರುತಿ ಮತ್ತು ಸ್ಮೃತಿ ಎಂಬುದಾಗಿ ಕರೆದರು. ಶ್ರುತಿ ಎಂದರೆ ವೇದ ಸಾಹಿತ್ಯ ಶ್ರೋತ್ರೀಯ ವ್ಯವಸ್ಥೆಯ ಮೂಲಕ ಅಂದರೆ ಬಾಯ್ದೆರೆಯಾಗಿ ಕಂಠಪಾಠ ಮಾಡಿ ಗುರು ಶಿಷ್ಯ ಪರಂಪರೆಯ ಮೂಲಕ ತಲೆಮಾರಿನಿಂದ ತಲೆಮಾರಿಗೆ ದಾಟಿಸಲಾಗುತ್ತಿತ್ತು. ಸ್ಮೃತಿ ಎಂದರೆ ಇತರ ಎಲ್ಲಾ ಜ್ಞಾನ ಶಾಖೆಗಳು. ಇವು ಕೂಡ ತಂದೆಯಿಂದ ಮಗನಿಗೆ ಹರಿದು ಬಂದವು. ಆಗ ಗುಹೆಗಳಲ್ಲಿ ವಾಸಿಸುತ್ತಿದ್ದ ಮನುಷ್ಯ ಗುಹೆಗಳ ಗೋಡೆಗಳಲ್ಲಿ ಚಿತ್ರ ಲಿಪಿಗಳನ್ನು ಕೆತ್ತಿದ. ಆನಂತರ…

Read More

ತುಮಕೂರು : ಕನ್ನಡ ರಂಗಭೂಮಿಯ ಮಕ್ಕಳ ರಂಗಭೂಮಿಯಲ್ಲಿ ವಿಶಿಷ್ಟ ಕಾರ್ಯ ಮಾಡುತ್ತಿರುವ ತುಮಕೂರು ಜಿಲ್ಲೆಯ ಡಮರುಗ ರಂಗ ಸಂಪನ್ಮೂಲ ಕೇಂದ್ರ 20 ವರ್ಷಗಳಿಂದ ಒಂದು ತಿಂಗಳ ಪೂರ್ಣಾವಧಿ ‘ಚಿಣ್ಣರ ಬಣ್ಣದ ಶಿಬಿರ’ವನ್ನ ಆಯೋಜಿಸುತ್ತಿದ್ದು, ಈ ವರ್ಷ ದಿನಾಂಕ 11-04-2024 ಗುರುವಾರ ಬೆಳಗ್ಗೆ 10-00 ಗಂಟೆಗೆ ಶಿಬಿರವನ್ನು ಉದ್ಘಾಟಿಸಲಾಯಿತು. ಜನಪದ ಆಟಗಳು, ಜನಪದ ನೃತ್ಯ, ಕಸದಲ್ಲಿ ಕಲೆ, ಆಟಿಕೆಗಳು, ರಂಗಾಟಗಳು ಜೊತೆಜೊತೆಗೆ ರಂಗಪಠ್ಯಗಳೊಂದಿಗೆ ಒಂದು ನಾಟಕವನ್ನು ತರಬೇತುಗೊಳಿಸುತ್ತಾರೆ. ಶಿಬಿರ ಸಂಪೂರ್ಣ ಉಚಿತವಾಗಿದ್ದು ಮಧ್ಯಾಹ್ನದ ಬಿಸಿ ಊಟದ ವ್ಯವಸ್ಥೆ ಇರುತ್ತದೆ. ಪ್ರತಿ ವರ್ಷ 50ರಿಂದ 60 ಮಕ್ಕಳು ಇದರ ಉಪಯೋಗ ಪಡೆಯುತ್ತಿದ್ದು, ಕನ್ನಡ ರಂಗಭೂಮಿಯಲ್ಲೇ ಇದೊಂದು ವಿಶೇಷವಾದದ್ದು. ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಮೆಳೇಹಳ್ಳಿ ದೇವರಾಜ್, ಪ್ರಕಾಶ್ ಮೆಳೇಹಳ್ಳಿ, ಸ್ನೇಹ, ಚಿನ್ಮಯ, ನಾಗೇಶ್, ನಂದೀಶ್, ಪ್ರಸಾದ್, ಮಧುಸೂದನ್ ರಾವ್, ರವಿಶಂಕರ್, ಸುಧಾ, ಲಯ ಎಂ.ಡಿ, ರಾಜೇಶ್ವರಿ, ಸವಿತಾ, ಮೈಸೂರ್ ರಮಾನಂದ್ ಮುಂತಾದವರು ಭಾಗವಹಿಸುತ್ತಾರೆ.

Read More

ಕೋಟ : ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟಿ, ಡಾ. ಶಿವರಾಮ ಕಾರಂತ ಟ್ರಸ್ಟ್ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಉಸಿರು ಕೋಟ, ಕಾರ್ಯನಿರತ ಪತ್ರಕರ್ತರ ಸಂಘ ಬ್ರಹ್ಮಾವರ ತಾಲೂಕು, ಕುಂದಾಪುರ ಕನ್ನಡ ಪರಿಷತ್ತು ಉಡುಪಿ ಜಿಲ್ಲೆ ಅವರ ಆಶ್ರಯದಲ್ಲಿ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ದಿನಾಂಕ 05-05-2024ರಂದು ನಡೆಯುವ ನಾಲ್ಕನೆಯ ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನ ಕಾಂಬ-2024 ಸಮ್ಮೇಳನಾಧ್ಯಕ್ಷರಾಗಿ ಕುಂದಾಪ್ರ ಕನ್ನಡ ಹರಿಕಾರ ಎ.ಎಸ್.ಎನ್. ಹೆಬ್ಬಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಕುಂದಾಪುರ ಕನ್ನಡದ ಕಂಪನ್ನು ಪಸರಿಸಲು ಹಲವಾರು ಹೊಸ ಸಾಧ್ಯತೆಗಳ ಕೆಲಸಗಳನ್ನು ಮಾಡುತ್ತಾ, ಸಾಹಿತ್ಯ, ಕವನಗಳನ್ನು ರಚಿಸಿ ಆ ಮೂಲಕ ಆರಂಭದಲ್ಲಿಯೇ ಕುಂದಾಪ್ರ ಕನ್ನಡಕ್ಕೆ ಮೂಲ ದಿಕ್ಕು ದೆಸೆಯನ್ನು ನೀಡಿದಂತಹವರು ಎ.ಎಸ್.ಎನ್. ಹೆಬ್ಬಾರರು. ಈ ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನ ಕಾಂಬ-2024 ಕಾರ್ಯಕ್ರಮಕ್ಕೆ ಸಾಹಿತ್ಯ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ,…

Read More