Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ, ಅಕಾಡೆಮಿ ಸಭಾಂಗಣದಲ್ಲಿ ದಿನಾಂಕ 06 ಜೂನ್ 2025ರಂದು ’ಕಾವ್ಯಾಂ ವ್ಹಾಳೊ-3’ ಶೀರ್ಷಿಕೆಯಡಿ ಕವಿಗೋಷ್ಟಿಯನ್ನು ಹಮ್ಮಿಕೊಂಡಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ವಹಿಸಿ, ನೆರೆದಿರುವ ಎಲ್ಲಾ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಸನ್ಮಾನಿಸಿದ ಹಿರಿಯ ಸಾಹಿತಿ ಮತ್ತು ಕವಿಗಳಾದ ಶ್ರೀ ನವೀನ್ ಕುಲ್ಶೇಕರ್ ಇವರು ಮಾತಾನಾಡಿ ಎಲ್ಲರಿಗೂ ಹೃದಳಾಂತರದಿಂದ ಧನ್ಯವಾದ ಸಮರ್ಪಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ಸಾಹುಕಾರ್ ಕಿರಣ್ ಪೈಯವರು ಸನ್ಮಾನಿತರನ್ನು ಸನ್ಮಾನಿಸಿ, “ಕೊಂಕಣಿಗರು, ವಿದ್ಯಾಭ್ಯಾಸದಲ್ಲಿ ಹಾಗೂ ಇತರೇ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡುತ್ತಾ ಇದ್ದಾರೆ. ಕೊಂಕಣಿ ಅಕಾಡೆಮಿಯು ಕವಿಗೋಷ್ಟಿ ಕಾರ್ಯಕ್ರಮವನ್ನು ಏರ್ಪಡಿಸಿ, ಕವಿಗಳಿಗೆ ಕವಿತೆಗಳನ್ನು ಸೃಷ್ಟಿಸಲು, ಹೊಸ ಹುಮ್ಮಸ್ಸನ್ನು ನೀಡಿದೆ. ಈ ಕಾರ್ಯಕ್ರಮವು ಹೀಗೆಯೇ ಮುಂದುವರಿದು ಹೋಗಲಿ” ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪ್ರಮುಖ ಭಾಷಣಕಾರರಾಗಿ ಖ್ಯಾತ ಕವಿ ಶ್ರೀ ಟೈಟಸ್ ನೊರೊನ್ಹಾರವರು ಕವಿತೆಗಳ ಇತಿಹಾಸ, ಹಿರಿಯ ಕವಿಗಳ ಬಗ್ಗೆ ಮಾಹಿತಿಯನ್ನು ಒದಗಿಸಿ ಉಪನ್ಯಾಸವನ್ನು…
ಬೆಂಗಳೂರು : ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರ ಮತ್ತು ಸ್ನಾತಕೋತ್ತರ ಕೇಂದ್ರ ಹಾಗೂ ನಾಡೋಜ ಕವಿ ಡಾ. ಸಿದ್ಧಲಿಂಗಯ್ಯ ಸ್ಮಾರಕ ಪ್ರತಿಷ್ಠಾನ (ರಿ.) ಇದರ ವತಿಯಿಂದ ‘ಜೀವಧ್ವನಿ’ ಕಾರ್ಯಕ್ರಮವನ್ನು ದಿನಾಂಕ 11 ಜೂನ್ 2025ರಂದು ಬೆಳಗ್ಗೆ 10-30 ಗಂಟೆಗೆ ಬೆಂಗಳೂರು ಜ್ಞಾನಭಾರತಿ ಆವರಣದಲ್ಲಿರುವ ಪ್ರೊ. ವೆಂಕಟಗಿರಿಗೌಡ ಸ್ಮಾರಕ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಜನ ಮಾನಸ ಕವಿ ಪದ್ಮಶ್ರೀ ನಾಡೋಜ ಡಾ. ಸಿದ್ಧಲಿಂಗಯ್ಯನವರ 4ನೇ ವರ್ಷದ ಪರಿನಿಬ್ಬಾಣ ಸ್ಮರಣಾ ಕಾರ್ಯಕ್ರಮ ಹಾಗೂ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ. ಈ ಕಾರ್ಯಕ್ರಮವನ್ನು ಕರ್ಣಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ನಾಗರಾಜ ಮೂರ್ತಿ ಕೆ.ವಿ. ಇವರು ಉದ್ಘಾಟನೆ ಮಾಡಲಿದ್ದು, ನಾಡೋಜ ಕವಿ ಡಾ. ಸಿದ್ಧಲಿಂಗಯ್ಯ ಸ್ಮಾರಕ ಪ್ರತಿಷ್ಠಾನ ಇದರ ಉಪಾಧ್ಯಕ್ಷರಾದ ಶ್ರೀಮತಿ ರಮಾಕುಮಾರಿ ಸಿದ್ಧಲಿಂಗಯ್ಯ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಸಿದ್ಧ ಲೇಖಕರಾದ ಡಾ. ಬಿ.ಯು. ಸುಮಾ ಇವರ ಅಧ್ಯಕ್ಷತೆಯಲ್ಲಿ ನಡೆಯುವ ವಿಚಾರಗೋಷ್ಠಿಯಲ್ಲಿ ‘ದಲಿತ ಕವಿ ಸಿದ್ಧಲಿಂಗಯ್ಯನವರ ಕಾವ್ಯ’ ಎಂಬ ವಿಷಯದ ಬಗ್ಗೆ ಪ್ರಸಿದ್ಧ ಕವಿಗಳಾದ…
ಮಂಗಳೂರು : ತೆಂಕುತಿಟ್ಟಿನ ಯಕ್ಷಗಾನ ವೇಷಧಾರಿ ಮುಂಡಾಜೆ ಸದಾಶಿವ ಶೆಟ್ಟಿ (67 ವರ್ಷ) ದಿನಾಂಕ 07 ಜೂನ್ 2025ರಂದು ಹೃದಯಾಘಾತದಿಂದ ನಿಧನರಾದರು. ಧರ್ಮಸ್ಥಳ, ಕರ್ನಾಟಕ, ಸಸಿಹಿತ್ಲು ಮೇಳಗಳಲ್ಲಿ ತುಳು – ಕನ್ನಡ ಪ್ರಸಂಗಗಳಲ್ಲಿ ಎಲ್ಲಾ ಸ್ವರೂಪದ ಪಾತ್ರಗಳನ್ನು ನಿರ್ವಹಿಸಿದ್ದರು. ‘ವಿದ್ಯುನ್ಮತಿ ಕಲ್ಯಾಣ’ ಪ್ರಸಂಗ ಪುಸ್ತಕದಲ್ಲಿ ಮುಂಡಾಜೆಯವರ ಸ್ತ್ರೀ ವೇಷದ ಚಿತ್ರ ಮುಖಪುಟದಲ್ಲಿದ್ದು ಅವರ ವೇಷದ ಸರಣಿಯ ದಾಖಲಾತಿ ಒದಗಿಸುತ್ತದೆ. ಸದಾಶಿವ ಶೆಟ್ಟಿ ಕಟೀಲು ಮೇಳದಲ್ಲಿ ಕಳೆದ 23 ವರ್ಷಗಳಿಂದ ವೇಷಧಾರಿಯಾಗಿ ಹಾಗೂ 5ನೇ ಮೇಳದ ಪ್ರಬಂಧಕರಾಗಿ ಸೇವೆ ಸಲ್ಲಿಸಿದ್ದು, ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು 56 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದರು. ಕಟೀಲಿನ 5ನೇ ಮೇಳದಲ್ಲಿದ್ದ ಅವರು ಪ್ರಬಂಧಕರಾಗಿ, ಎಲ್ಲ ಕಲಾವಿದರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು, ತಿರುಗಾಟ ಆರಂಭವಾದರೆ ಮೇಳದ ಆರಂಭದಿಂದ ಕೊನೆಯವರೆಗೆ ಮನೆಗೂ ಬಾರದೆ ಸಮರ್ಪಣಾಭಾವದಿಂದ ಸದಾಶಿವ ಶೆಟ್ಟಿ ಅವರು ಮೇಳವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದರು. ಪುಂಡು, ರಾಜವೇಷ, ನಾಟಕೀಯ ವೇಷಗಳಲ್ಲಿ ನುರಿತ ಕಲಾವಿದರಾಗಿದ್ದ ಮುಂಡಾಜೆ ಅವರಿಗೆ ಕಳೆದ ವರ್ಷವಷ್ಟೇ…
ಮಂಗಳೂರು : ಸುರತ್ಕಲ್ ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಯ್ಯಾರ ನೆನಪು 110ನೇ ಜನ್ಮದಿನಾಚರಣೆ ಕಾರ್ಯಕ್ರಮವು 08 ಜೂನ್ 2025ರಂದು ಸಾಹಿತಿ ಇಂದಿರಾ ಹೆಗ್ಗಡೆಯವರ ನಿವಾಸದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಹಿರಿಯ ಸಾಹಿತ್ಯ ಸಂಘಟಕ ಭುವನ ಪ್ರಸಾದ್ ಹೆಗ್ಗಡೆ ಮಾತನಾಡಿ “ಕನ್ನಡ ನಾಡು ನುಡಿ ಸಂಸ್ಕೃತಿಗಳ ಕುರಿತು ಬದ್ಧತೆ, ತತ್ವ, ಆದರ್ಶಗಳೊಂದಿಗೆ ಕವಿಯಾಗಿ ಹೋರಾಟಗಾರರಾಗಿ ಕಯ್ಯಾರ ಕಿಞ್ಞಣ್ಣ ರೈಗಳು ತಮ್ಮನ್ನು ಅರ್ಪಿಸಿಕೊಂಡ ಶ್ರೇಷ್ಟ ಮಾನ್ಯರು. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆನ್ನುವ ಬಯಕೆಯಿಂದ ವ್ರತದಂತೆ ಹೋರಾಡಿದvರು” ಎಂದು ನುಡಿದರು. ಕಯ್ಯಾರ ಕಿಞ್ಞಣ್ಣ ರೈಗಳ ಪುತ್ರಿ ದೇವಕೀದೇವಿ ಮಾತಾನಾಡಿ “ಕಯ್ಯಾರರ ಮನ ಸದಾ ನಾಡು ನುಡಿ ಮತ್ತು ತಮ್ಮ ವಿದ್ಯಾರ್ಥಿಗಳ ಅಭಿವೃದ್ದಿಗಾಗಿ ಮಿಡಿಯುತ್ತಿತ್ತು” ಎಂದರು. ಹಿರಿಯ ಸಾಹಿತಿ ಹಾಗೂ ಸಂಶೋಧಕಿ ಇಂದಿರಾ ಹೆಗ್ಗಡೆ ಅವರು ಮಾತನಾಡಿ “ಶಿಕ್ಷಣ, ಸಾಹಿತ್ಯ ಮತ್ತು ಸಮಾಜಸೇವೆ ಕ್ಷೇತ್ರಗಳಲ್ಲಿ ಸಮಾನ ಆಸಕ್ತರಾಗಿದ್ದ ಕಯ್ಯಾರರ ಕೊಡುಗೆ ಅಪಾರವಾದುದು” ಎಂದರು. ಹಿರಿಯ ಕಲಾವಿದೆ ಗೀತಾ ಸುರತ್ಕಲ್ ಕಯ್ಯಾರ…
ಕಾಸರಗೋಡು : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ‘ವಿದ್ಯಾರ್ಥಿಗಳಿಗೆ ಏಕದಿನ ಸಾಹಿತ್ಯ ಅಭಿಯಾನ -1’ ಕಾರ್ಯಕ್ರಮವನ್ನು ದಿನಾಂಕ 14 ಜೂನ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಕಾಸರಗೋಡಿನ ದೇಲಂಪಾಡಿಯ ಸರಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಕೇಂದ್ರ ಸಮಿತಿಯ ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ ಇವರ ಅಧ್ಯಕ್ಷತೆಯಲ್ಲಿ ಹಿರಿಯ ಯಕ್ಷಗಾನ ಗುರುಗಳಾದ ವಿಶ್ವವಿನೋದ ಬನಾರಿ ಇವರು ಉದ್ಘಾಟನೆ ಮಾಡಲಿದ್ದಾರೆ. ನಿವೃತ್ತ ಶಿಕ್ಷಕ ವಿ.ಬಿ. ಕುಳಮರ್ವ ಮತ್ತು ಸಾಹಿತಿ ವಿರಾಜ್ ಅಡೂರು ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ಮೈಸೂರು : ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ), ಸಿದ್ದಾರ್ಥನಗರ, ಮೈಸೂರು ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನ ದೃಶ್ಯಕಲೆಯಲ್ಲಿ ಪ್ರಥಮ ಬಿ.ವಿ.ಎ (ಬ್ಯಾಚುಲರ್ ಆಫ್ ವಿಜ್ಯುಯಲ್ ಆರ್ಟ್ಸ್) ಪದವಿ ಪ್ರವೇಶಾತಿಗಾಗಿ, ದ್ವಿತೀಯ ಪಿ.ಯು.ಸಿ. ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳಿಂದ ವೆಬ್ಸೈಟ್ https://uucms.karnataka.gov.in ಅಥವಾ https://www. cavamysore. karnataka.gov.in ನಲ್ಲಿ ಆನ್ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ. ಸದರಿ ಪದವಿಯಲ್ಲಿ 3ನೇ ಸೆಮಿಸ್ಟರ್ನಿಂದ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್ ಕಲೆ (ಅಚ್ಚುಕಲೆ), ಅನ್ವಯಕಲೆ, ಕಲಾ ಇತಿಹಾಸ ಹಾಗೂ ಛಾಯಾಚಿತ್ರ ಮತ್ತು ಛಾಯಾಚಿತ್ರ ಪತ್ರಿಕೋದ್ಯಮ ವಿಭಾಗಗಳಲ್ಲಿ ವಿಶೇಷ ಅಧ್ಯಯನದ ಸ್ನಾತಕ ಪದವಿಯಾಗಿರುತ್ತದೆ. ಅರ್ಜಿ ಸಲ್ಲಿಸಲು 10 ಜೂನ್ 2025 ಕೊನೆಯ ದಿನ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರವೇಶಾತಿಗಾಗಿ ಅರ್ಹತಾ ಪರೀಕ್ಷೆಯ ದಿನಾಂಕ ಮತ್ತು ಇತರೆ ಮಾಹಿತಿಯನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 0821-2438931 ಅನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಡೀನ್ ತಿಳಿಸಿದ್ದಾರೆ.
ಏನಿದೆ ಏನಿಲ್ಲ..ಈ ಸುಂದರ ಸೃಷ್ಟಿಯಲಿ ಅಡಗಿದೆ ಚೆಲುವೆಲ್ಲ ..ಆ ಕಾಣುವ ದೃಷ್ಟಿಯಲಿ |ಪ.| ಭಾವಕೆ ತೋರಣವು.. ಬದುಕಿಗೆ ಹೂರಣವು ಸಗ್ಗ- ನಿಸರ್ಗವಿದು.. ಚಂದದ ಚಾರಣವು ||ಅ.ಪ.|| ಚಾದರದಂತೆ ಹಾಸಿದ ಆಗಸ ಚೆಲ್ಲುವ ಬಣ್ಣಗಳು ನೇಸರ-ಚಂದಿರ ಹಗಲಲಿ-ಇರುಳಲಿ ಅರಳುವ ಕಣ್ಣುಗಳು ಅಲೆಯುವ ಮುಗಿಲುಗಳು…ತೇಲುವ ಮಳೆಬಿಲ್ಲು ಮೋಡದ ಮುಗುಳುಗಳು..ಕಾಡುವ ಪಿಸು ಸೊಲ್ಲು ||೧|| ಹಸಿರನು ಹೊದ್ದ ಶ್ಯಾಮಲೆ ಭೂರಮೆ ಮನವನು ತಣಿಸುವಳು ಜಲ-ಫಲ ತರುಲತೆ ಆಸರೆ-ನೆರಳಲಿ ಉಸಿರನು ಉಣಿಸುವಳು ಮೋಹಕ ಸಲಿಲಗಳು..ಚುಂಬಕ ಗಿರಿ ಕಡಲು ಝರಿ-ತೊರೆ ಅಲೆಅಲೆಯು, ಖಗ-ಮಿಗ ನಲಿಯುಲಿಯು ||೨|| ತಿಂಗಳು ತುಂಬಿದ ಬಸುರಿಯ ತೆರದಿ ಪ್ರೀತಿಸು ಇಳೆಯನ್ನು ಮೇಯದೆ, ಸವೆಸದೆ ಒಡಲ ನೋಯಿಸದೆ ಹೆಚ್ಚಿಸು ಕಳೆಯನ್ನು ಬೆಳೆಸುವ ಬಸಿರನ್ನು…ಉಳಿಸುವ ಉಸಿರನ್ನು ಶಾಶ್ವತ ಸವಿಯೋಣ..ಭೂ ದೇವಿಯ ಸಿರಿಯನ್ನು ||೩|| ರೂಪಕಲಾ ಆಳ್ವ ಕನ್ನಡ, ತುಳು ಬರಹಗಾರ್ತಿ
ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘ ಮತ್ತು ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತಾಶ್ರಯದಲ್ಲಿ ದಿನಾಂಕ 09 ಜೂನ್ 2025ರಂದು ಸಾಹಿತ್ಯ ಪ್ರಪಂಚದ ಅಂತರಾಷ್ಟ್ರೀಯ ಮಟ್ಟದ ‘ಬೂಕರ್ ಪ್ರಶಸ್ತಿ’ ಪುರಸ್ಕೃತರಾದ ದೀಪಾ ಭಾಸ್ತಿ ಇವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಮಡಿಕೇರಿಯಲ್ಲಿ ನಡೆಯಲಿದೆ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಟಿ.ಪಿ. ರಮೇಶ್ ಇವರು ಹೋಟೆಲ್ ರೆಡ್ಬ್ರಿಕ್ಸ್ ನ ‘ಸತ್ಕಾರ’ ಸಭಾಂಗಣದಲ್ಲಿ ಈ ಕಾರ್ಯಕ್ರಮ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಪದ್ಮಾ ಶೇಖರ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ವಹಿಸಲಿದ್ದಾರೆ. ಸಾಹಿತಿಗಳು ಮತ್ತು ಬೂಕರ್ ಪ್ರಶಸ್ತಿ ಪುರಸ್ಕೃತರಾದ ದೀಪಾ ಭಾಸ್ತಿಯವರನ್ನು ಕವಿ ಮತ್ತು ಅನುವಾದಕಿ ಹಾಸನದ ಜ.ನಾ. ತೇಜಶ್ರೀ ಸನ್ಮಾನಿಸಲಿದ್ದು, ಮುಖ್ಯ ಅತಿಥಿಗಳಾಗಿ ಕ.ಸಾ.ಪ. ಮಾಜಿ…
ಬೆಂಗಳೂರು : ಕನ್ನಡ ನಾಡು, ನುಡಿ, ಸಂಸ್ಕೃತಿ ,ಇತಿಹಾಸ, ಮಾನವಿಕ ವಿಷಯಗಳಿಗೆ ಕುರಿತು ನಡೆಸುವ ಸಂಶೋಧನ ಕ್ಷೇತ್ರದ ಅನನ್ಯ ಸಾಧನೆಗೆ ಕನ್ನಡ ಪುಸ್ತಕ ಪ್ರಾಧಿಕಾರ ಕೊಡ ಮಾಡುವ ‘ಡಾ. ಎಂ. ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ’ಯ 2023ನೇ ಸಾಲಿನ ಪ್ರಶಸ್ತಿಗೆ ಹಿರಿಯ ಸಾಹಿತಿ ಹಾಗು ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಆಯ್ಕೆಯಾಗಿದ್ದು, ಪ್ರಶಸ್ತಿಯನ್ನು 4 ಜೂನ್ 2025 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರಿಂದ ಸ್ವೀಕರಿಸಿದರು. ಹಿರಿಯ ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಮತ್ತಿತರರು ಉಪಸ್ಥತರಿದ್ದರು. ಕನ್ನಡ ಮತ್ತು ತುಳು ನಾಡು, ನುಡಿ, ಸಂಸ್ಕೃತಿ, ಇತಿಹಾಸ, ಜನಪದ, ಲೋಕಕ್ಕೆ ತಮ್ಮ ಮೌಲಿಕ ಸಂಶೋಧನಾ ಮತ್ತು ಸೃಜನಶೀಲ ಕೃತಿಗಳನ್ನು ಕೊಡುಗೆಯಾಗಿ ನೀಡಿರುತ್ತಾರೆ. ಎಸ್. ಆರ್. ಹೆಗ್ಡೆ ಚಾರಿಟಬಲ್…
ಮೈಸೂರು : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ.) ಕಮತಗಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಮೈಸೂರು ಇದರ ವತಿಯಿಂದ ದಿನಾಂಕ 08 ಜೂನ್ 2025ರಂದು ಬೆಳಗ್ಗೆ 9-30 ಗಂಟೆಗೆ ‘ರಾಜ್ಯಮಟ್ಟದ ಮೇಘಮೈತ್ರಿ 8ನೇ ಕನ್ನಡ ಸಾಹಿತ್ಯ ಸಮ್ಮೇಳನ -2025’ ಮೈಸೂರು ವಿಜಯನಗರದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಹಿರಿಯ ಸಾಹಿತಿ ಹಾಗೂ ಖ್ಯಾತ ವೈದ್ಯರಾದ ಡಾ. ಸಿ. ಶರತ್ ಕುಮಾರ್ ಇವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಸಮ್ಮೇಳನದಲ್ಲಿ ಪುಸ್ತಕ ಬಿಡುಗಡೆ, ಕಲಾ ಪ್ರದರ್ಶನ, ವಿಶೇಷ ಉಪನ್ಯಾಸ, ಕವಿಗೋಷ್ಠಿ, ವಿಚಾರಗೋಷ್ಠಿ, ದತ್ತಿ ಪ್ರಶಸ್ತಿ ಮತ್ತು ವಿವಿಧ ಕ್ಷೇತ್ರದಲ್ಲಿ ಸೇವೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್ ಇವರ ಅಧ್ಯಕ್ಷತೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ಡಿ. ತಿಮ್ಮಯ್ಯ ಇವರು ಉದ್ಘಾಟನೆ ಮಾಡಲಿದ್ದಾರೆ. ಹಡವನಹಳ್ಳಿ ವೀರಣ್ಣ ಗೌಡರ ‘ಉರಿವ ದೀಪದ ಕೆಳಗೆ’ ಕಥಾ ಸಂಕಲನವನ್ನು…