Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಕರಾವಳಿ ಲೇಖಕಿಯರ-ವಾಚಕಿಯರ ಸಂಘ (ರಿ.) ಹಾಗೂ ದ್ರಾವಿಡ ಭಾಷಾ ಅನುವಾದಕರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ 08 ಮಾರ್ಚ್ 2025ರಂದು ಒಂದು ದಿನದ ತುಳು – ಕನ್ನಡ ಭಾಷಾಂತರ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಸಭಾಂಗಣ ‘ಸಾಹಿತ್ಯ ಸದನ’ದಲ್ಲಿ ಹಮ್ಮಿಕ್ಕೊಳ್ಳುವ ಈ ಕಾರ್ಯಾಗಾರದಲ್ಲಿ ಖ್ಯಾತ ಭಾಷಾಂತರಕಾರರು ತುಳುವಿನಿಂದ ಕನ್ನಡಕ್ಕೆ ಹಾಗೂ ಕನ್ನಡದಿಂದ ತುಳುವಿಗೆ ಭಾಷಾಂತರ ಮಾಡುವಾಗ ಎದುರಾಗುವ ಸಮಸ್ಯೆಗಳನ್ನು ಕುರಿತು ತರಗತಿಗಳನ್ನು ನೀಡಲಿದ್ದಾರೆ. ಕನ್ನಡ ಮತ್ತು ತುಳು ಗೊತ್ತಿರುವ, ಅನುವಾದದಲ್ಲಿ ಆಸಕ್ತಿಯುಳ್ಳವರು ದಿನಾಂಕ 02 ಮಾರ್ಚ್ 2025ರರೊಳಗೆ ನಿಮ್ಮ ಹೆಸರು ನೋಂದಾಯಿಸಬಹುದು. 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಸಹ ಭಾಗವಹಿಸಬಹುದು. ನೋಂದಣಿ ಶುಲ್ಕವಿಲ್ಲ. ಊಟದ ವ್ಯವಸ್ಥೆ ಮಾಡಲಾಗುತ್ತದೆ. ಕಮ್ಮಟದಲ್ಲಿ ಭಾಗವಹಿಸುವವರಿಗೆ ಪ್ರಮಾಣ ಪತ್ರ ನೀಡಲಾಗುವುದು ಎಂದು ದ್ರಾವಿಡ ಭಾಷಾ ಅನುವಾದಕರ ಸಂಘದ ಅಧ್ಯಕ್ಷೆ ಡಾ. ಸುಷ್ಮಾ ಶಂಕರ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9901041889 ಡಾ. ಸುಷ್ಮ ಶಂಕರ್…
ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಡಾ. ಪಿ. ದಯಾನಂದ ಪೈ – ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ಆಯೋಜಿಸುವ ‘ಅಕಾಡೆಮಿಡ್ ಒಂಜಿ ದಿನ’ ಬಲೆ ತುಳು ಓದುಗ ಸರಣಿಯ 3ನೇ ಕಾರ್ಯಕ್ರಮವು ದಿನಾಂಕ 27 ಫೆಬ್ರವರಿ 2025ನೇ ಗುರುವಾರದಂದು ಬೆಳಿಗ್ಗೆ ಘಂಟೆ 10.00ಕ್ಕೆ ಉದ್ಘಾಟನೆಗೊಳ್ಳಲಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಸೆಂಟ್ರಲ್ ಬ್ಯುರೋ ಆಫ್ ಕಮ್ಯುನಿಕೇಷನ್, ಮಂಗಳೂರು ಇದರ ಸಹಾಯಕ ನಿರ್ದೇಶಕರಾದ ಜಿತು ನಿಡ್ಲೆ ಉದ್ಘಾತಿಸಲಿದ್ದು, ಮುಖ್ಯ ಅತಿಥಿಯಾಗಿ ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಪತ್ರಕರ್ತರಾದ ಆನಂದ ಶೆಟ್ಟಿ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಇಲ್ಲಿನ ಸಹ ಪ್ರಾಧ್ಯಾಪಕರಾದ ಡಾ. ಜ್ಯೋತಿ ಪ್ರಿಯಾ ಭಾಗವಹಿಸಲಿದ್ದಾರೆ. ಬೆಳಿಗ್ಗೆ ಘಂಟೆ 10.30 ರಿಂದ 1.30ರ ವರೆಗೆ ಓದು ಮತ್ತು…
ಮಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಸಮಿತಿ ಅಧ್ಯಕ್ಷರಾಗಿ ಡಾ. ಮೀನಾಕ್ಷಿ ರಾಮಚಂದ್ರ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ತುಪ್ಪೆಕಲ್ಲು ನರಸಿಂಹ ಶೆಟ್ಟಿ , ಚಂದ್ರಪ್ರಭಾ ದಿವಾಕರ್, ಕಾರ್ಯದರ್ಶಿಯಾಗಿ ಯಶೋದಾ ಕುಮಾರಿ, ಜತೆ ಕಾರ್ಯದರ್ಶಿಯಾಗಿ ರವಿಕಲಾ ಸುಂದರ್, ಕೋಶಾಧಿಕಾರಿಯಾಗಿ ಬೀನಾ ವಿದ್ಯಾಸಾಗರ್, ಸಮಿತಿ ಸದಸ್ಯರಾಗಿ ಉಷಾ ಅಮೃತ ಕುಮಾರ್, ಸಂಧ್ಯಾ ಆಳ್ವ, ಕವಿತಾ, ಮಮತಾ, ಗಾಯತ್ರಿ, ಪ್ರೊ. ಗಿರಿಯಪ್ಪ, ಲಾವಣ್ಯ ಸುಧಾಕರ್, ಶೈಲಜಾ ಪುದುಕೋಳಿ, ಪ್ರೊ.ವಿಶಾಲ ಆಯ್ಕೆಯಾಗಿದ್ದಾರೆ. ತುಪ್ಪೆಕಲ್ಲು ನರಸಿಂಹ ಶೆಟ್ಟಿ ಚಂದ್ರಪ್ರಭಾ ದಿವಾಕರ್ ಯಶೋದಾ ಕುಮಾರಿ ರವಿಕಲಾ ಸುಂದರ್ ಬೀನಾ ವಿದ್ಯಾಸಾಗರ್
ಉಡುಪಿ : ಆದರ್ಶ ಶಿಕ್ಷಕ, ಕವಿ, ಲೇಖಕ, ಯಕ್ಷಗಾನ ಕಲಾವಿದರಾಗಿದ್ದ ಅಂಬಾತನಯ ಮುದ್ರಾಡಿ ಸ್ಮರಣಾರ್ಥ ನೀಡುವ ಸಂಸ್ಮರಣಾ ಪ್ರಶಸ್ತಿಗೆ ಬೆಂಗಳೂರಿನ ಉಪನ್ಯಾಸಕ ಎನ್. ಸಿ. ಮಹೇಶ್ ಇವರ ‘ಸಾಕುತಂದೆ ರೂಮಿ’ ನಾಟಕ ಕೃತಿ ಆಯ್ಕೆಯಾಗಿದೆ. ಈ ಪ್ರಶಸ್ತಿಯು 15 ಸಾವಿರ ನಗದು ಮತ್ತು ಸನ್ಮಾನ ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು 27 ಮಾರ್ಚ್ 2025 ರಂದು ನಡೆಯಲಿದೆ ಎಂದು ರಂಗಭೂಮಿ ಉಡುಪಿಯ ಅಧ್ಯಕ್ಷರಾದ ಡಾ.ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ.
ಮಡಿಕೇರಿ: ಕೊಡಗು ಜಿಲ್ಲಾ ಪೊಲೀಸ್ ಇದರ ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆ ವತಿಯಿಂದ ತಿಂಗಳಿಗೊಂದು ಕಾರ್ಯಕ್ರಮದಡಿ ಮಿಡಿದ ಪೊಲೀಸ್ ಹೃದಯಗಳಿಂದ ಘೋಷವಾಕ್ಯದ ‘ಪ್ರತಿಭೋತ್ಸವ’ ಕಾರ್ಯಕ್ರಮವು ದಿನಾಂಕ 24 ಫೆಬ್ರವರಿ 2025ರಂದು ಮಡಿಕೇರಿಯ ಗಾಂಧಿ ಭವನದಲ್ಲಿ ನಡೆಯಿತು. ಜನಪದ ಗೀತೆ ಮತ್ತು ಭಾವಗೀತೆಗಳ ಸಂಗಮದ ‘ಪ್ರತಿಭೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇದರ ಅಧ್ಯಕ್ಷರಾದ ಎಂ. ಪಿ. ಕೇಶವ ಕಾಮತ್ ಮಾತನಾಡಿ “ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮಕ್ಕಳಲ್ಲಿ ಅಡಗಿರುವ ಕಲಾಪ್ರತಿಭೆಯನ್ನು ಅನಾವರಣಗೊಳಿಸಲು ಪೊಲೀಸ್ ಸಾಂಸ್ಕೃತಿಕ ವೇದಿಕೆ ಸದ್ಬಳಕೆಯಾಗಬೇಕು. ಕಾನೂನನ್ನು ಕಾಪಾಡುವ ಪೊಲೀಸರಲ್ಲಿ ಕೂಡ ಕಲಾವಿದನಿರುತ್ತಾನೆ. ಈ ಕಲಾವಿದನ ಪ್ರತಿಭೆಯನ್ನು ಪ್ರತಿಬಿಂಬಿಸಲು ಪೊಲೀಸ್ ಸಾಂಸ್ಕೃತಿಕ ವೇದಿಕೆ ಹೆಚ್ಚು ಉಪಯುಕ್ತವಾಗಿದೆ. ಇದೇ ವೇದಿಕೆಯಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮಕ್ಕಳ ಪ್ರತಿಭೆ ಕೂಡ ಅನಾವರಣಗೊಳ್ಳಬೇಕು. ಇದರಿಂದ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ದೊರೆತಂತಾಗುತ್ತದೆ ಮತ್ತು ಶಾಲಾ, ಕಾಲೇಜುಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಸ್ಫೂರ್ತಿ…
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಆಯೋಜಿಸಿದ 27ನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭವು ದಿನಾಂಕ 21 ಫೆಬ್ರವರಿ 2025ರ ಶುಕ್ರವಾರದಂದು ಮಗಳೂರಿನ ಕೊಣಾಜೆಯಲ್ಲಿರುವ ಮಂಗಳ ಗಂಗೋತ್ರಿಯ ಸಭಾಂಗಣದಲ್ಲಿ ನಡೆಯಿತು. ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ ಹಿರಿಯ ಸಾಹಿತಿ ಡಾ. ಬಿ. ಪ್ರಭಾಕರ ಶಿಶಿಲ ಮಾತನಾಡಿ “ರಾಜ್ಯದಲ್ಲಿ ಒಂದರಿಂದ 10ನೆಯ ತರಗತಿವರೆಗೆ ಎಲ್ಲಾ ಶಾಲೆಗಳಲ್ಲಿ ಕನ್ನಡ ಭಾಷಾ ಕಲಿಕೆ ಕಡ್ಡಾಯವಾಗಬೇಕು. ಸುಗ್ರೀವಾಜ್ಞೆಯ ಮೂಲಕವಾದರೂ ಇದರ ಅನುಷ್ಠಾನವಾಗಬೇಕು. ಆಂಗ್ಲ ಭಾಷಾ ಕಲಿಕೆ ಬೇಡವೆಂದೇನೂ ಅಲ್ಲ. ಆದರೆ ಕನ್ನಡಕ್ಕೆ ಪ್ರಥಮ ಆದ್ಯತೆ ಸಿಗಬೇಕು. ಇಂಗ್ಲಿಷ್ ಭಾಷೆ ಲಿಂಕ್ ಲ್ಯಾಂಗ್ವೆಜ್ ಆಗಿ ಕಲಿಯುವಂತಾಗಬೇಕು. ಆಗ ಕನ್ನಡ ಇನ್ನಷ್ಟು ಉತ್ತುಂಗಕ್ಕೇರಲಿದೆ. ಸಾಹಿತ್ಯ ಸಮ್ಮೇಳನಕ್ಕೆ ಬರುವ ಮಂದಿ ತಮ್ಮ ಮಕ್ಕಳನ್ನೂ ಕರೆತರಬೇಕು. ಸಾಹಿತ್ಯ ಪುಸ್ತಕದ ಪರಿಚಯವನ್ನು ಮಕ್ಕಳಿಗೆ ಕಲಿಸಿಕೊಬೇಕು. ವೀಕೆಂಡ್‌ಲ್ಲಿ ಹೆತ್ತವರು ತಮ್ಮ ಮಕ್ಕಳನ್ನು ಬೀಚ್, ಮಾಲ್‌ಗಳಿಗೆ ಕರೆದೊಯ್ಯುವಂತೆ ಸಾಹಿತ್ಯ ಕಾರ್ಯಕ್ರಮಗಳಿಗೂ ಕರೆತರಬೇಕು. ಪ್ರತಿಯೊಂದು ಮನೆಯಲ್ಲೂ ಒಂದು ಪುಟ್ಟ ಗ್ರಂಥಾಲಯವಿರಬೇಕು. ಆರಾಧನಾ ಕೇಂದ್ರ ಗಳಲ್ಲೂ ಗ್ರಂಥಾಲಯಗಳ…
ಬದಿಯಡ್ಕ : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಇದರ ವತಿಯಿಂದ ಶ್ರೀ ಎಂ.ಕೆ. ಜಿನಚಂದ್ರನ್ ದತ್ತಿ ಹಾಗೂ ಶ್ರೀಮತಿ ಕಮಲಮ್ಮ ದತ್ತಿ ‘ಉಪನ್ಯಾಸ ಮತ್ತು ಕವಿ ಕಾವ್ಯ ಸಂವಾದ’ ಕಾರ್ಯಕ್ರಮವನ್ನು ದಿನಾಂಕ 01 ಮಾರ್ಚ್ 2025ರಂದು ಅಪರಾಹ್ನ 2-30 ಗಂಟೆಗೆ ಬದಿಯಡ್ಕದ ಸಂಸ್ಕೃತಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಇದರ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಇವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಶ್ರೀ ಎಂ.ಕೆ. ಜಿನಚಂದ್ರನ್ ದತ್ತಿ ಉಪನ್ಯಾಸದಲ್ಲಿ ಖ್ಯಾತ ವಾಗ್ಮಿ ಶ್ರೀಮತಿ ಆಯಿಶಾ ಪೆರ್ಲ ಇವರು ‘ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ’ ಹಾಗೂ ಶ್ರೀಮತಿ ಕಮಲಮ್ಮ ದತ್ತಿ ಉಪನ್ಯಾಸದಲ್ಲಿ ಪ್ರಾಧ್ಯಾಪಕರಾದ ಡಾ. ಸುಭಾಷ್ ಪಟ್ಟಜೆ ಇವರು ‘ಕನ್ನಡ ಕಥಾ ಸಾಹಿತ್ಯಕ್ಕೆ ಕಾಸರಗೋಡಿನ ಕೊಡುಗೆ’ ಎಂಬ ವಿಷಯಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಬಳಿಕ ಕವಿತಾ ಕೌತುಕ ಸರಣಿ -2ರಲ್ಲಿ ‘ಕವಿ ಕಾವ್ಯ ಸಂವಾದ’ ಹಿರಿಯ ಸಾಹಿತಿ ರಾಧಾಕೃಷ್ಣ…
ಮೇಲುಕೋಟೆ : ದೃಶ್ಯ ಟ್ರಸ್ಟ್ (ರಿ.) ಮೇಲುಕೋಟೆ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಡ್ಯ, ಪು.ತಿ.ನ. ಟ್ರಸ್ಟ್ (ರಿ.) ಮೇಲುಕೋಟೆ ಮತ್ತು ಕರ್ನಾಟಕ ಸಂಘ ಮಂಡ್ಯ ಇವರ ಸಹಯೋಗದೊಂದಿಗೆ ದಿ. ಸುಘೋಷ ಕೌಲಗಿರವರ ಸವಿ ನೆನಪಿಗಾಗಿ ಆಯೋಜಿಸುವ ‘ಸುಗ್ಗಿ ಮಕ್ಕಳ ನಾಟಕೋತ್ಸವ -2025’ವನ್ನು ದಿನಾಂಕ 01 ಮತ್ತು 02 ಮಾರ್ಚ್ 2025ರಂದು ಸಂಜೆ 7-00 ಗಂಟೆಗೆ ಮೇಲುಕೋಟೆ ಪು.ತಿ.ನ. ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 01 ಮಾರ್ಚ್ 2025ರಂದು ಸದ್ವಿದ್ಯಾ ರಂಗತಂಡ ಮಂಡ್ಯ ಇವರು ಕುವೆಂಪು ರಚಿಸಿರುವ ಬೊಮ್ಮನಹಳ್ಳಿಯ ಕಿಂದರಿ ಜೋಗಿ ನಾಟಕ ಪ್ರದರ್ಶನ ನೀಡಲಿದ್ದಾರೆ. ಈ ನಾಟಕಕ್ಕೆ ದಿಗ್ವಿಜಯ ಹೆಗ್ಗೋಡು ಇವರು ಸಂಗೀತ ನೀಡಿದ್ದು, ಅಜಯ್ ನೀನಾಸಂ ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದಾರೆ. ದಿನಾಂಕ 02 ಮಾರ್ಚ್ 2025ರಂದು ದೊಡ್ಡಬ್ಯಾಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಂದ ಮೂಡಲಪಾಯ ಯಕ್ಷಗಾನ ಪ್ರಸಂಗ ‘ಕರ್ಣ ಅರ್ಜುನರ ಕಾಳಗ’ ಪ್ರದರ್ಶನಗೊಳ್ಳಲಿದೆ. ರವೀಂದ್ರ ತಲಕಾಡು ಇವರು ಭಾಗವತಿಕೆ ಮತ್ತು ಮದ್ದಳೆ, ನಾರಾಯಣಸ್ವಾಮಿ ಮುಖವಾಣಿ,…
ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಹುದಿಕೇರಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರಕಾರಿ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕೈಬುಲಿರ ಪಾರ್ವತಿ ಬೋಪಯ್ಯ ದತ್ತಿ ಕಾರ್ಯಕ್ರಮವು ದಿನಾಂಕ 25 ಫೆಬ್ರವರಿ 2025ರಂದು ಬಿರುನಾಣಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ದತ್ತಿ ಉಪನ್ಯಾಸ ನೀಡಿದ ಸಾಹಿತಿ, ಶ್ರೀಮಂಗಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಶ್ರೀಮತಿ ಉಳುವಂಗಡ ಕಾವೇರಿ ಉದಯ “ಜ್ಞಾನವನ್ನು ಯಾರು ಕದಿಯಲು ಯಾರಿಗೂ ಸಾಧ್ಯವಿಲ್ಲ. ಅದು ಶಿಕ್ಷಣದಿಂದ ಬರುತ್ತದೆ. ಪ್ರೌಢಶಾಲಾ ಹಂತದಲ್ಲಿ ಉತ್ತಮ ಶಿಕ್ಷಣ ಸಿಕ್ಕಿ ಅಭ್ಯರ್ಥಿಗಳು ಮನಸ್ಸು ಮಾಡಿದರೆ ಯಾವ ಸಾಧನೆ ಬೇಕಾದರೂ ಮಾಡಬಹುದು. 2023-24ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ನಡೆದ ಹತ್ತನೇ ತರಗತಿಯ ಕನ್ನಡ ಮಾಧ್ಯಮ ಪರೀಕ್ಷೆಯಲ್ಲಿ ಮೊದಲಿಗಳಾಗಿ ಬಂದ ಯು. ಅದವಿಯಾ ಇದಕ್ಕೆ ಸಾಕ್ಷಿ. ಮಾದಾಪುರದಂತಹ ಗ್ರಾಮೀಣ ಪ್ರದೇಶದ ಶ್ರೀಮತಿ ಚೆನ್ನಮ್ಮ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ಜಿಲ್ಲೆಗೆ ಪ್ರಥಮ…
ಬೆಂಗಳೂರು : ಯಕ್ಷ ಸಂಭ್ರಮ (ರಿ.) ಹುಳಿಮಾವು ಬೆಂಗಳೂರು ಇವರ ತೃತೀಯ ವಾರ್ಷಿಕೋತ್ಸವದ ಪ್ರಯುಕ್ತ ‘ಯಕ್ಷ ಸಪ್ತಕ’ ಯಕ್ಷಗಾನ ಆಖ್ಯಾನಗಳು ದಿನಾಂಕ 01, 02, 08 ಮತ್ತು 09 ಮಾರ್ಚ್ 2025ರಂದು ಬೆಂಗಳೂರಿನ ಹುಳಿಮಾವು ಶ್ರೀ ಕ್ಷೇತ್ರ ಭಗವತಿ ದೇವಸ್ಥಾನದಲ್ಲಿ ಪ್ರದರ್ಶನಗೊಳ್ಳಲಿವೆ. ದಿನಾಂಕ 01 ಮಾರ್ಚ್ 2025ರಂದು ಮಧ್ಯಾಹ್ನ 3-30 ಗಂಟೆಗೆ ಹುಳಿಮಾವು ಘಟಕದ ಮಕ್ಕಳಿಂದ ‘ಶ್ರೀಕೃಷ್ಣ ಲೀಲೆ – ಕಂಸವಧೆ’ ಮತ್ತು ಸಂಜೆ 6-00 ಗಂಟೆಗೆ ಹೆಬ್ಬಾಳ ಘಟಕದ ಕಲಾವಿದರಿಂದ ‘ಶರಸೇತು ಬಂಧನ’, ದಿನಾಂಕ 02 ಮಾರ್ಚ್ 2025ರಂದು ಮಧ್ಯಾಹ್ನ 3-30 ಗಂಟೆಗೆ ಮಹಿಳಾ ತಂಡದಿಂದ ‘ಭಸ್ಮಾಸುರ ಮೋಹಿನಿ’ ಮತ್ತು ಸಂಜೆ 6-00 ಗಂಟೆಗೆ ಚಂದಾಪುರ ಘಟಕದ ಕಲಾವಿದರಿಂದ ‘ಶ್ರೀದೇವಿ ಮಹಾತ್ಮೆ’, ದಿನಾಂಕ 08 ಮಾರ್ಚ್ 2025ರಂದು ಮಧ್ಯಾಹ್ನ 3-30 ಗಂಟೆಗೆ ಕೆಂಗೇರಿ ಘಟಕದ ಕಲಾವಿದರಿಂದ ‘ಚೂಡಾಮಣಿ’ ಮತ್ತು ಸಂಜೆ 6-00 ಗಂಟೆಗೆ ಮಹಿಳಾ ತಂಡದಿಂದ ‘ಶಶಿಪ್ರಭಾ ಪರಿಣಯ’ ಹಾಗೂ ದಿನಾಂಕ 09 ಮಾರ್ಚ್ 2025ರಂದು ಸಂಜೆ 6-00 ಗಂಟೆಗೆ…