Subscribe to Updates
Get the latest creative news from FooBar about art, design and business.
Author: roovari
ಪುತ್ತೂರು : ಬಹುವಚನಂ ವಿದ್ಯಾನಗರ ದರ್ಬೆ ಪುತ್ತೂರು ಇವರ ವತಿಯಿಂದ ನಿರಂಜನರಿಗೆ 100 ವರುಷಗಳು ನೆನಪಿನ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 30-06-2024ರಂದು ಸಂಜೆ 4-30 ಗಂಟೆಗೆ ಪುತ್ತೂರಿನ ದರ್ಬೆ ವಿದ್ಯಾನಗರದ ಪದ್ಮಿನೀ ಸಭಾಭವನದಲ್ಲಿ ಆಯೋಜಿಸಿಲಾಗಿದೆ. ಡಾ. ವರದರಾಜ ಚಂದ್ರಗಿರಿಯವರಿಂದ ಕುಳ್ಕುಂದ ಶಿವರಾಯರು (ನಿರಂಜನ) ಇವರ ಬಗ್ಗೆ ವಿಶೇಷ ಉಪನ್ಯಾಸ ನೀಡಲಿರುವರು.
ಕಾವೂರು : ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಮಧುರಧ್ವನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತೀ ತಿಂಗಳು ನಡೆಯುವ ಸುಪ್ರಭಾತ ಸಂಗೀತ ಸೇವೆಯ ಐವತ್ತನೇ ಕಾರ್ಯಕ್ರಮದ ಭಾಗವಾಗಿ ದಿನಾಂಕ 17-06-2024ರಂದು ಬೆಳಗ್ಗೆ 6.06ರಿಂದ ಸಂಜೆವರೆಗೆ ಕರ್ನಾಟಕ ಶಾಸ್ತ್ರೀಯ ‘ಉದಯಾಸ್ತಮಾನ ಸಂಗೀತ ಸೇವೆ’ ನಡೆಯಿತು. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕಾಸರಗೋಡು ಜಿಲ್ಲೆಗಳಿಂದ ಸಂಗೀತ ವಿದ್ಯಾರ್ಥಿಗಳು, ಗುರುಗಳು, ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶ್ರೀ ಶಂಕರ ಶಗ್ರಿತ್ತಾಯ ಇವರು ದೀಪ ಪ್ರಜ್ವಾಲನೆ ನೆರವೇರಿಸಿದರು. ಇದೇ ವೇಳೆ ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರೊಫೆಸರ್ ಡಾ. ಸುಬ್ರಹ್ಮಣ್ಯ ಇವರನ್ನು ಸಮ್ಮಾನಿಸಲಾಯಿತು. ಕಾವೂರು ಮಹಾಲಿಂಗೇಶ್ವರ ದೇಗುಲದ ಪ್ರಧಾನ ಅರ್ಚಕ ವೇದ ಮೂರ್ತಿ ಶ್ರೀನಿವಾಸ ಭಟ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಕರ್ಣಾಟಕ ಬ್ಯಾಂಕ್ ನಿವೃತ್ತ ಅಧಿಕಾರಿ ಸದಾಶಿವ, ಪ್ರಸನ್ನ ಭಟ್, ದಾಮೋದರ ಆಚಾರ್ಯ, ಸುರೇಶ್ ರಾವ್, ಶಿವಳ್ಳಿ ಸ್ಪಂದನ ಕಾವೂರಿನ ನವೀನ್, ಅರವಿಂದ ಹೆಬ್ಬಾರ್ ಉಪಸ್ಥಿತರಿದ್ದರು. ಮಧೂರು ಪಿ. ಬಾಲಸುಬ್ರಹ್ಮಣ್ಯಂ ವಂದಿಸಿದರು.
ಧಾರವಾಡ : ಉತ್ತರ ಕರ್ನಾಟಕದ ಜನಪ್ರಿಯ ರಂಗ ಸಂಸ್ಥೆಯಾದ ಅಭಿನಯ ಭಾರತಿ ತನ್ನ 44ನೇ ವರ್ಷದ ಆರಂಭವನ್ನು ಧಾರವಾಡದ ಸೃಜನಾ ರಂಗಮಂದಿರದಲ್ಲಿ ದಿನಾಂಕ 01-07-2024 ಮತ್ತು 02-07-2024ರಂದು ಸಂಜೆ 6-00 ಗಂಟೆಗೆ ‘ವಸಂತೋತ್ಸವ’ ಕಾರ್ಯಕ್ರಮದಲ್ಲಿ ಮೂರು ನಾಟಕಗಳ ಪ್ರದರ್ಶನವನ್ನು ಹಮ್ಮಿಕೊಂಡಿದೆ. ಮೂರು ನಾಟಕಗಳ ವಿವರ ಹೀಗಿವೆ : ದಿನಾಂಕ 01-07-2024ರಂದು ಸಂಜೆ ಗಂಟೆ 6ಕ್ಕೆ ಹಾಸ್ಯ ನಾಟಕ : “ನಾ ತುಕಾರಾಂ ಅಲ್ಲ” ರಚನೆ : ಶ್ರೀ ಎನ್. ಸುರೇಂದ್ರನಾಥ ನಿರ್ದೇಶಕರು : ಶ್ರೀ ಶ್ರೀಪತಿ ಮಂಜನಬೈಲ್ ಅವಧಿ : 100 ನಿಮಿಷ ದಿನಾಂಕ 02-07-2024ರಂದು ಸಂಜೆ ಗಂಟೆ 6ಕ್ಕೆ ನಾಟಕ : “ಉರಿಯ ಉಯ್ಯಾಲೆ” ರಚನೆ : ಡಾ. ಎಚ್.ಎಸ್. ವೆಂಕಟೇಶಮೂರ್ತಿ ನಿರ್ದೇಶಕರು : ಶ್ರೀಪತಿ ಮಂಜನ ಬೈಲ್ ಅವಧಿ : 80 ನಿಮಿಷ ದಿನಾಂಕ 02-07-2024ರಂದು ಸಂಜೆ ಗಂಟೆ 7.30ಕ್ಕೆ ನಾಟಕ : “ಎಸಿ ವರ್ಸಸ್ ಡಿಸಿ” (ಹಾಸ್ಯ + ವಿಜ್ಞಾನ ಪ್ರಾಮುಖ್ಯತೆ ಪಡೆದ ನಾಟಕ) ರಚನೆ :…
ಬೆಂಗಳೂರು : ‘ಕಣ’ ಇದರ ವತಿಯಿಂದ ಸಿದ್ಧಾರ್ಥ ಮಾಧ್ಯಮಿಕಾ ಇವರಿಂದ ಮೂರು ತಿಂಗಳುಗಳ ಕಾಲ ನಡೆಯಲಿರುವ ‘ನಟನಾ ಕಾರ್ಯಾಗಾರ’ವು ದಿನಾಂಕ 29-06-2024ರಂದು ಬೆಂಗಳೂರಿನ ಕೆ.ವಿ. ಸುಬ್ಬಣ್ಣ ಆಪ್ತ ರಂಗಮಂದಿರದಲ್ಲಿ ಪ್ರಾರಂಭವಾಗಲಿದೆ. ಈ ಕಾರ್ಯಾಗಾರದಲ್ಲಿ ಪ್ರತಿ ವಾರಾಂತ್ಯ ಶನಿವಾರ ಮತ್ತು ಭಾನುವಾರ 10-00ರಿಂದ 1-00 ಗಂಟೆಯವರೆಗೆ ಮೂರು ತಾಸುಗಳು ತರಬೇತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9663704395 ಸಂಪರ್ಕಿಸಿರಿ. * ಕತೆ ಅಂದರೆ ಏನು ? * ಮೊಟ್ಟ ಮೊದಲು ಕತೆ ಹೇಳಿದವರು ಯಾರು ? * ಮೊದಲ ಕತೆ ಹೇಳಿದವರು ಅದನ್ನು ಯಾಕಾಗಿ ಹೇಳಿದ್ದರು ? * ಕಾಲ ಕ್ರಮೇಣ ಕತೆ ಹೇಳುವ ಪ್ರಕ್ರಿಯೆ ತನ್ನೊಳಗೆ ಏನೇನನ್ನೆಲ್ಲಾ ಹುದುಗಿಸುಕೊಳ್ಳುತ್ತಾ ಬರುತ್ತಿದೆ ? * ಇವತ್ತಿನ ಕಾಲಮಾನದಲ್ಲಿ ನಾವು ಕತೆಯನ್ನು ಯಾಕೆ ಹೇಳಬೇಕು ? * ಕಲಾವಿದರು ಅಂದರೆ ಯಾರು ? * ಕಲೆ ಎಂದರೆ ಏನು ? ಹೀಗೆ ಹತ್ತು ಹಲವು ಕುತೂಹಲ ಭರಿತ ಪ್ರಶ್ನೆಗಳೊಂದಿಗೆ ಶುರವಾಗುವ ಮೂರು ತಿಂಗಳುಗಳ ಕಾಲದ ಈ…
ಬಂಟ್ವಾಳ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಉಚಿತ ಯಕ್ಷಗಾನ ತರಬೇತಿ ಅಭಿಯಾನದಡಿ ನಡೆಯುತ್ತಿರುವ ಯಕ್ಷ ಶಿಕ್ಷಣದ ಉದ್ಘಾಟನಾ ಸಮಾರಂಭವು ದಿನಾಂಕ 25-06-2024ರಂದು ಕೊಯಿಲ ಸರಕಾರಿ ಪ್ರೌಢ ಶಾಲೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ದುರ್ಗಾ ದಾಸ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಸರಪಾಡಿ ಘಟಕದ ಸಂಚಾಲಕರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದರಾದ ಸರಪಾಡಿ ಅಶೋಕ ಶೆಟ್ಟಿ ಪ್ರಸ್ತಾಪನೆ ಮೂಲಕ ಯಕ್ಷಧ್ರುವ ಯಕ್ಷ ಶಿಕ್ಷಣ ಇದರ ಮಹತ್ವವನ್ನು ತಿಳಿಸಿದರು. ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಸೌಮ್ಯ ಸ್ವಾಗತಿಸಿದರು. ಸರಪಾಡಿ ಘಟಕದ ಅಧ್ಯಕ್ಷರಾದ ಶಶಿಕಾಂತ್ ಜೆ. ಶೆಟ್ಟಿ, ರಾಯಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಬೆಟ್ಟು, ವಸಂತ ಕುಮಾರ್ ಅಣ್ಣಳಿಕೆ, ಪರಮೇಶ್ವರ ರಾಯಿ, ಯಕ್ಷಗಾನ ಗುರುಗಳಾದ ಪ್ರೇಮರಾಜ್ ಕೊಯಿಲ ಹಾಗೂ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕರಾದ ಜನಾರ್ದನ್ ಇವರು ಧನ್ಯವಾದ ಸಮರ್ಪಣೆಗೈದರು. ತರಬೇತುದಾರರಾದ ಪ್ರೇಮ್ ರಾಜ್ ಕೊಯಿಲ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹೆಜ್ಜೆ ಕಲಿಸಿ ತರಬೇತಿಗೆ…
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದಾದ ‘ಚಾವುಂಡರಾಯ ದತ್ತಿ ಪ್ರಶಸ್ತಿ’ ಪ್ರದಾನ ಸಮಾರಂಭವು 28-06-2024ರ ಶುಕ್ರವಾರ ಸಂಜೆ ಘಂಟೆ 5.00ರಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನವನ್ನು ಚಾಮರಾಜನಗರ ಜಿಲ್ಲೆಯ ಕನಕಗಿರಿ ಕ್ಷೇತ್ರದ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮಿಗಳು ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನ್ ಸೊಸೈಟಿ(ರಿ.) ಉಜಿರೆ ಇಲ್ಲಿನ ಶ್ರೀ ಧರ್ಮಸ್ಥಳ ಸುರೇಂದ್ರ ಕುಮಾರ್ ಅವರು ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ವಹಿಸಲಿದ್ದು, 2023ನೆಯ ಸಾಲಿನ ಪ್ರಶಸ್ತಿ ಪುರಸ್ಕೃತರಾದ ಡಾ. ಪ್ರೀತಿ ಶುಭಚಂದ್ರ ಅವರು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಶ್ರವಣಬೆಳಗೊಳ ಶ್ರೀಮಠದ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ವಿಂದ್ಯಗಿರಿಯಲ್ಲಿ ಬಾಹುಬಲಿ ಏಕಶಿಲಾ ಮೂರ್ತಿಯನ್ನು ಸ್ಥಾಪಿಸಿದ್ದ ಚಾವುಂಡರಾಯನ ಹೆಸರಿನಲ್ಲಿ ಈ ದತ್ತಿಯನ್ನು ಸ್ಥಾಪಿಸಿದ್ದು, ಪ್ರಾಚೀನ ಜೈನ ಸಾಹಿತ್ಯವನ್ನು ಆಧರಿಸಿ ಆಧುನಿಕ ಕನ್ನಡದಲ್ಲಿ ಕೃತಿ ರಚನೆ ಮಾಡಿರುವ ಲೇಖಕರನ್ನು, ಪ್ರಾಚೀನ ಜೈನಗ್ರಂಥಗಳ ಸಂಪಾದನೆ…
ಪುತ್ತೂರು : ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಕಲಾ ಸಂಘದ ವಿವಿಧ ಚಟುವಟಿಕೆಗಳ ಮುನ್ನುಡಿಯಾಗಿ ಸಂಘದ ಉದ್ಘಾಟನಾ ಸಮಾರಂಭವು ದಿನಾಂಕ 24-06-2024 ರಂದು ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿವೇಕಾನಂದ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ವಿದ್ಯಾ ಎಸ್. ಮಾತನಾಡಿ “ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಪಠ್ಯಕ್ಕೆ ಕೊಡುವಷ್ಟೇ ಮಹತ್ವವನ್ನು ಪಠ್ಯೇತರ ಚಟುವಟಿಕೆಗಳಿಗೂ ನೀಡಬೇಕಾಗುತ್ತದೆ. ಆದುದರಿಂದ ಶಾಲಾ ಕಾಲೇಜುಗಳು ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕಲಾ ವಿಭಾಗವು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಬದುಕುವ ಕಲೆಯನ್ನು ಕರಗತಗೊಳಿಸುತ್ತದೆ. ಪಠ್ಯದ ಜತೆಗೆ ತಮ್ಮ ಆಸಕ್ತ ವಿಷಯಗಳನ್ನು ಅಧ್ಯಯನ ಮಾಡುವುದರ ಮೂಲಕ ಒಂದು ಚೌಕಟ್ಟಿಗೆ ಸೀಮಿತವಾಗದೆ ಅವಕಾಶಗಳ ಬೆನ್ನುಹತ್ತಿ ಜೀವನದಲ್ಲಿ ಸಫಲರಾಗಬೇಕು.” ಎಂದು ಕಿವಿಮಾತನ್ನು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಹೇಶ್ ನಿಟಿಲಾಪುರ ಮಾತನಾಡಿ “ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳಲ್ಲಿ ಜೀವನ ಕೌಶಲ್ಯವನ್ನು ಹೆಚ್ಚಿಸುವ ಹಲವು ಕಾರ್ಯಚಟುವಟಿಕೆಗಳ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳೆಲ್ಲರೂ…
ಬೆಂಗಳೂರು : ರಂಗಾಯಣದ ಖ್ಯಾತ ಹಿರಿಯ ರಂಗಕರ್ಮಿ ಹುಲುಗಪ್ಪ ಕಟ್ಟೀಮನಿ ನಡೆಸಿಕೊಡುವ 7 ದಿನಗಳ ‘ನಾಟ್ಯಶಾಸ್ತ್ರದ ಪಾಠ’ ರಂಗಶಿಬಿರವು ದಿನಾಂಕ 01-07-2024 ರಿಂದ 07-07-2024ರ ವರೆಗೆ ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ದಯಾನಂದ ಸಾಗರ ಕಾಲೇಜು ಬಳಿಯಿರುವ ಕೆ. ವಿ. ಸುಬ್ಬಣ್ಣ ರಂಗ ಮಂದಿರದಲ್ಲಿ ಸಂಜೆ ಘಂಟೆ 5.00 ರಿಂದ ರಾತ್ರಿ ಘಂಟೆ 9.00ರವರೆಗೆ ನಡೆಯಲಿದೆ. ಶಿಬಿರದಲ್ಲಿ ನಟ ತನ್ನ ಒಳಾವರಣವನ್ನು ಶುದ್ಧೀಕರಿಸಿ ಕೊಳ್ಳುವ, ನಟನ ಒಳನೋಟ ಅಥವಾ ಆತ ಪಠ್ಯವನ್ನು ಗ್ರಹಿಸುವ, ನಟಿಸುವ ದಾರಿಯಲ್ಲಿ ನಟನಿಗೆ ಕಿರಿ ಕಿರಿ ಆದಲ್ಲಿ ಅದನ್ನು ಪರಿಹರಿಸಿಕೊಳ್ಳುವ, ತನ್ನ ಮನೋಧರ್ಮದೊಳಗೆ ವೇಷದ ಮನೋಧರ್ಮವನ್ನ ಅಳವಡಿಸಿಕೊಳ್ಳುವ, ನಟನೆ ಮತ್ತು ಆತ ತೊಡಲಿರುವ ವೇಷದ ಹಾಗೂ ಅವರಿಬ್ಬರ ನಡುವಿನ ತಾಕಲಾಟ ಹಾಗೂ ಹೊಸ ವೇಷ ತೊಡುವ ಮುನ್ನ ಹಿಂದೆ ತಾನು ತೊಟ್ಟ ವೇಷದ ಚರಿತ್ರೆಯನ್ನು ಅಳಿಸಿ ಹಾಕುವ ಮುಂತಾದ ವಿಷಯಗಳ ಬಗ್ಗೆ ತರಗತಿಗಳು ನಡೆಯಲಿರುವುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ – 9743912770 ಸಂಖ್ಯೆಯನ್ನು ಸಂಪರ್ಕಿಸಬಹುದು. ಹುಲುಗಪ್ಪ ಕಟ್ಟೀಮನಿ
ಮಂಗಳೂರು : ಸೋಮೇಶ್ವರ ಕೊಲ್ಯದಲ್ಲಿರುವ ನಾಟ್ಯನಿಕೇತನ (ರಿ) ಸಾದರಪಡಿಸುವ ‘ಶಾಂತಲಾ ನಾಟ್ಯ’ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್ಯ ಗುರು ಶ್ರೀ ಉಳ್ಳಾಲ್ ಮೋಹನ್ ಕುಮಾರ್ ಇವರ 90 ವರ್ಷ ತುಂಬಿದ ಸಂಭ್ರಮದ ಪ್ರಯುಕ್ತ ನೃತ್ಯಶ್ರೀ ಸರಣಿ-ಮಾಲಿಕೆ 6ಯಲ್ಲಿ ‘ನಾಟ್ಯ ಮೋಹನ ನವತ್ಯೋತ್ಸಹ’ ಕಾರ್ಯಕ್ರಮವನ್ನು ದಿನಾಂಕ 29-06-2024ರಂದು ಸಂಜೆ 5.30 ಗಂಟೆಗೆ ಕೊಲ್ಯದ ನಾಟ್ಯನಿಕೇತನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಗುರು ಶ್ರೀ ಉಳ್ಳಾಲ್ ಮೋಹನ್ ಕುಮಾರ್ ಇವರಿಂದ ದೇವತಾ ಜ್ಯೋತಿ ಪ್ರಜ್ವಲನೆಯೊಂದಿಗೆ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಗುರುಗಳಾದ ಶ್ರೀಮತಿ ಕಮಲ ಭಟ್ ಮತ್ತು ನಾಟ್ಯಾಚಾರ್ಯ ಉಳ್ಳಾಲ್ ಮೋಹನ್ ಕುಮಾರ್ ಇವರ ಶಿಷ್ಯೆ ವಿದುಷಿ ಶ್ರೀಮತಿ ಪ್ರತಿಮಾ ಶ್ರೀಧರ್ ಮತ್ತು ಕೊಟ್ಟಾರದ ಭರತಾಂಜಲಿ ನೃತ್ಯ ಸಂಸ್ಥೆಯ ನಿರ್ದೇಶಕರು ಗುರು ಉಳ್ಳಾಲ್ ಶ್ರೀ ಮೋಹನ್ ಕುಮಾರ್ ಶಿಷ್ಯ ಶ್ರೀ ಶ್ರೀಧರ ಹೊಳ್ಳ ಇವರು ನೃತ್ಯ ಪ್ರಸ್ತುತಿ ನೀಡಲಿದ್ದಾರೆ.
ಪುತ್ತೂರು : ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಉಜಿರೆ ವತಿಯಿಂದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ಪುತ್ತೂರು ಇದರ ಆಶ್ರಯದಲ್ಲಿ ತೆಂಕುತಿಟ್ಟಿನ ಖ್ಯಾತ ಭಾಗವತ ಪದ್ಯಾಣ ಗಣಪತಿ ಭಟ್ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಮತ್ತು ತಾಳಮದ್ದಳೆ ಸಪ್ತಾಹವು ದಿನಾಂಕ 01-07-2024ರಿಂದ 07-07-2024ರ ತನಕ ನಡೆಯಲಿದೆ. ದೇವಸ್ಥಾನದ ಶ್ರೀ ಸುಕೃತೀಂದ್ರ ಕಲಾಮಂದಿರದಲ್ಲಿ ಪ್ರತಿದಿನ ಸಂಜೆ 4ರಿಂದ 8 ಗಂಟೆಯವರೆಗೆ ತಾಳಮದ್ದಳೆ ನಡೆಯಲಿದ್ದು, ಖ್ಯಾತ ಹಿಮ್ಮೇಳ ಮುಮ್ಮೇಳ ಕಲಾವಿದರು ಭಾಗವಹಿಸಲಿದ್ದಾರೆ. ಭಕ್ತ ಪ್ರಹ್ಲಾದ, ಸ್ಯಮಂತಕಮಣಿ, ಮೃತಸಂಜೀವಿನಿ, ಪಟ್ಟಾಭಿಷೇಕ, ಪ್ರತಿಸ್ವರ್ಗ, ಸುಧನ್ವ ಮೋಕ್ಷ, ಗಂಗಾ ಸಾರಥ್ಯ ಪ್ರಸಂಗದ ಪ್ರಸ್ತುತಿಯಾಗಲಿದೆ. ದಿನಾಂಕ 01-07-2024ರಂದು ಉದ್ಯಮಿ ಜಿ. ಬಲರಾಮ ಆಚಾರ್ಯ ಉದ್ಘಾಟಿಸಿ, ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಕಲಾಪೋಷಕ ವೆಂಕಟೇಶ ನಾವಡ ಪೊಳಲಿಯವರಿಗೆ ಕುರಿಯ ಸ್ಮೃತಿ ಗೌರವ ಪ್ರದಾನ ನಡೆಯಲಿದೆ. ದಿನಾಂಕ 07-07-2024ರಂದು ಸಮಾರೋಪ ಸಮಾರಂಭದಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ. ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ…