Author: roovari

ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಅರ್ಪಿಸುವ ‘ನೃತ್ಯಾಂತರಂಗ 128’ ನೃತ್ಯ ಕಾರ್ಯಕ್ರಮವನ್ನು ದಿನಾಂಕ 07 ಜೂನ್ 2025ರಂದು ಸಂಜೆ 5-30 ಗಂಟೆಗೆ ಪುತ್ತೂರಿನ ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ವಿದ್ವಾನ್ ದೀಪಕ್ ಕುಮಾರರ ಶಿಷ್ಯೆ ಕುಮಾರಿ ನಿಶಿ ಎನ್. ಇವರು ನೃತ್ಯ ಪ್ರದರ್ಶನ ನೀಡಲಿದ್ದು, ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸಂಧ್ಯಾ ಕೆ. ಇವರು ಅಭ್ಯಾಗತರಾಗಿ ಭಾಗವಹಿಸಲಿರುವರು. ನಟುವಾಂಗದಲ್ಲಿ ವಿದ್ವಾನ್ ದೀಪಕ್ ಕುಮಾರ್, ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಸುಳ್ಯದ ವಿದ್ವಾನ್ ಶ್ಯಾಮ್ ಭಟ್ ಮೃದಂಗದಲ್ಲಿ ಪೂಂಜಾಲಕಟ್ಟೆ ವಿದ್ವಾನ್ ಕೃಷ್ಣಗೋಪಾಲ್ ಇವರು ಕೊಳಲಿನಲ್ಲಿ ಸಹಕರಿಸಲಿದ್ದಾರೆ.

Read More

ಮಂಗಳೂರು : ಕಲಾಭಿ ಯಕ್ಷಗಾನ ಅಧ್ಯಯನ ಕೇಂದ್ರ ಬೋಂದೆಲ್ ಮಂಗಳೂರು ಇದರ ವತಿಯಿಂದ ಖ್ಯಾತ ಯಕ್ಷ ಗುರುಗಳಾದ ಶ್ರೀ ರಾಕೇಶ್ ರೈ ಅಡ್ಕ ಇವರ ಸಾರಥ್ಯದಲ್ಲಿ ‘ಯಕ್ಷ ನಾಟ್ಯ ತರಬೇತಿ’ಯು ದಿನಾಂಕ 07 ಜೂನ್ 2025ರ ಶುಕ್ರವಾರದಂದು ಬೋಂದೆಲ್ ಕಲಾಗ್ರಾಮದಲ್ಲಿ ಪ್ರಾರಂಭವಾಗಲಿದೆ. ಯಕ್ಷಕಲಾ ಆಸಕ್ತರಿಗೆ ಯಕ್ಷಗಾನ ಕಲಾವಿದರಾಗಲು ಇದು ಸುವರ್ಣ ಅವಕಾಶವಾಗಿದ್ದು, ಪ್ರತಿ ಶುಕ್ರವಾರ ಸಂಜೆ 6-00ರಿಂದ 7-00 ಗಂಟೆ ತನಕ ತರಗತಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9900772221 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ದಿನಾಂಕ 04 ಜೂನ್ 2025ರಂದು ಮಂಚಿ ಸಮೀಪದ ಬಾವದ ಶ್ರೀಮತಿ ಮೀನಾಕ್ಷಿ ಮೋಹನ್ ಶೆಟ್ಟಿಯವರ ನೂತನ ಗೃಹ ‘ಭ್ರಾಮರಿ’ ಇದರ ಪ್ರವೇಶೋತ್ಸವದ ಅಂಗವಾಗಿ ‘ಲಕ್ಷ್ಮೀ ಸ್ವಯ೦ವರ’ (ಸಮುದ್ರ ಮಥನ) ಎಂಬ ಪ್ರಸಂಗದ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಮಲ್ಲಿಕಾ ಅಜಿತ್ ಶೆಟ್ಟಿ ಸಿದ್ದಕಟ್ಟೆ, ಪುಂಡಿಕಾಯಿ ರಾಜೇಂದ್ರ ಪ್ರಸಾದ್, ಬೇಂದ್ರೋಡಿ ಲಕ್ಷ್ಮೀಶ್ ಭಟ್ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಮಹಾವಿಷ್ಣು ಮತ್ತು ನಾರದ (ಕಿಶೋರಿ ದುಗ್ಗಪ್ಪ ನಡುಗಲ್ಲು), ಬಲಿ ಚಕ್ರವರ್ತಿ (ಶುಭಾ ಜೆ.ಸಿ. ಅಡಿಗ), ದೇವೇಂದ್ರ (ಹರಿಣಾಕ್ಷಿ ಜೆ. ಶೆಟ್ಟಿ), ವಾಲಿ ಮತ್ತು ದೂರ್ವಾಸ (ಶಾರದಾ ಅರಸ್), ಲಕ್ಷ್ಮೀ (ಭಾರತಿ ರೈ ಅರಿಯಡ್ಕ) ಸಹಕರಿಸಿದರು. ಸಂಚಾಲಕ ಭಾಸ್ಕರ್ ಬಾರ್ಯ ಸ್ವಾಗತಿಸಿದರು. ಅಭಿಮತ ಚಾನೆಲ್ ನ ಡಾ. ಮಮತಾ ಪ್ರವೀಣ್ ಶೆಟ್ಟಿ ಕಲಾವಿದರನ್ನು ಶಲ್ಯ ಹೊದಿಸಿ, ಗೌರವಿಸಿ ವಂದಿಸಿದರು.

Read More

ಬೆಂಗಳೂರು : ಕರ್ಣಾಟಕ ಯಕ್ಷಧಾಮ ಮಂಗಳೂರು, ಸಾಲಿಗ್ರಾಮ ಮಕ್ಕಳ ಮೇಳ ಕೋಟ, ಪದ್ಮಕಮಲ ಟ್ರಸ್ಟ್ ಬೆಂಗಳೂರು ಮತ್ತು ಕಲ್ಕೂರ ಪ್ರತಿಷ್ಠಾನ ಮಂಗಳೂರು ಇವರ ವತಿಯಿಂದ ‘ಲಲಿತ ಕಲೋತ್ಸವ, ಸಮ್ಮಾನ ಮತ್ತು ಯಕ್ಷಗಾನ ಪ್ರದರ್ಶನಗಳನ್ನು ದಿನಾಂಕ 08 ಜೂನ್ 2025ರಂದು ಮುಂಜಾನೆ 10-00 ಗಂಟೆಗೆ ಬೆಂಗಳೂರಿನ ಪರಂಪರಾ ಅಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ. ವೇದಮೂರ್ತಿ ಶ್ರೀ ಅನಂತ ಪದ್ಮನಾಭ ಸೋಮಯಾಜಿ ಇವರನ್ನು ಸನ್ಮಾನಿಸಲಾಗುವುದು ಹಾಗೂ ಮಿಜಾರು ಬಾಲಕೃಷ್ಣ ಗೌಡ ಇವರಿಗೆ ‘ಯಕ್ಷಕಲಾ ಗೌರವ’ ನೀಡಲಾಗುವುದು. ಲಲಿತ ಕಾಲೋತ್ಸವದಲ್ಲಿ ಕಲಾಕುಸುಮಗಳಾದ ಶ್ರೀಮತಿ ಅನಸೂಯ ಹೊಳ್ಳ, ಶ್ರೀಮತಿ ಜಯಶ್ರೀ ಅರವಿಂದ, ಕು. ನಿಧಿ ರವಿರಾಜ್‌ ಭಟ್‌, ಕು. ನಿಧಿ ಕೆದಿಲಾಯ, ಕು. ನಿಭ ಕೆದಿಲಾಯ, ಕು. ಈಶ್ವರಿ ಪ್ರವೀಣ, ಕು. ಪ್ರಣತಿ ಸಂತೋಷ್, ಕು. ಕಾವ್ಯ ಹಂದೆ, ಶ್ರೀಮತಿ ಪ್ರಣೀತ ಅನುಪ್, ಶ್ರೀ ಅಭಿಜಿತ್ ಮೈಸೂರು, ಶ್ರೀಮತಿ ಶಮ ಭಾಗವಹಿಸಲಿದ್ದು, ಬೆಂಗಳೂರಿನ ಶಂಕರ ಫೌಂಡೇಶನ್ ಇದರ ವಿದುಷಿ ಸುಪ್ರಿಯ ಶಿವರುದ್ರಪ್ಪ ಇವರ ಶಿಷ್ಯೆಯರಿಂದ ಭರತನಾಟ್ಯ ಪ್ರದರ್ಶನಗೊಳ್ಳಲಿದೆ. ಬೆಂಗಳೂರಿನ ‘ಯಕ್ಷ…

Read More

ಸಾಹಿತಿ ಹಾಗೂ ಸಂಶೋಧಕರಾಗಿ ಹೆಸರು ಮಾಡಿದವರು ಡಾ. ವೀರಣ್ಣ ರಾಜೂರ 04 ಜೂನ್ 1947ರಲ್ಲಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬೆನಕನಾಳದಲ್ಲಿ ಬಸಪ್ಪ ಮತ್ತು ಫಕೀರಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದರು. ಬೆನಕನಾಳ ಮತ್ತು ಹನುಮಸಾಗರದಲ್ಲಿ ಅವರ ಪ್ರಾಥಮಿಕ ವಿದ್ಯಾಭ್ಯಾಸ ನಡೆಯಿತು. ಗದಗ ಜೆ. ಟಿ. ಕಾಲೇಜ್ ನಲ್ಲಿ ಬಿ. ಎ. ಪದವಿಯ ನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ. ಎ. ಪದವಿ ಪಡೆದರು. ‘ಕನ್ನಡ ಸಾಂಗತ್ಯ ಸಾಹಿತ್ಯ’ ಎಂಬ ಮಹಾ ಪ್ರಬಂಧ ಮಂಡಿಸಿ ಪಿ. ಎಚ್. ಡಿ. ಪದವಿಯನ್ನು ಗಳಿಸಿದರು. ಎಪಿಗ್ರಫಿಯಲ್ಲಿ ಡಿಪ್ಲೋಮಾ ಪದವಿಯನ್ನೂ ಪಡೆದರು. ಸರಳ ಸೌಜನ್ಯತೆಯನ್ನು ಮೈಗೂಡಿಸಿಕೊಂಡ ವೀರಣ್ಣ ರಾಜೂರ ಖ್ಯಾತ ಸಂಶೋಧಕ ಎಂ. ಎಂ. ಕಲಬುರ್ಗಿಯವರ ಅತ್ಯಂತ ಪ್ರಿಯ ಶಿಷ್ಯರಾಗಿದ್ದರು. ಇವರು ಕರ್ನಾಟಕ ವಿಶ್ವವಿದ್ಯಾಲಯದ ಅಧ್ಯಯನ ಪೀಠದಲ್ಲಿ ಸಹಾಯಕ ಸಂಶೋಧಕರಾಗಿ ಸೇರಿ, ಅಧ್ಯಾಪಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ವಿಭಾಗದ ಅಧ್ಯಕ್ಷರಾಗಿ, ಪ್ರಸಾರಂಗದ ನಿರ್ದೇಶಕರಾಗಿ ಹೀಗೆ ವಿವಿಧ ಆಯಾಮಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯಿಂದ ಫೆಲೋಶಿಪ್ ಪಡೆದ…

Read More

ಮಂಗಳೂರು: ಗಾನ ಗಂಧರ್ವ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನೋತ್ಸವದ ಅಂಗವಾಗಿ ಗಾಯಕ ಯಶವಂತ ಎಂ. ಜಿ. ಅವರಿಂದ 24 ಗಂಟೆಗಳ ಕಾಲ ನಿರರ್ಗಳವಾಗಿ ಗಾಯನ ಕಾರ್ಯಕ್ರಮ ‘ಬಾಲಗಾನ ಯಶೋಯಾನ’ಕ್ಕೆ ಚಾಲನಾ ಕಾರ್ಯಕ್ರಮ ದಿನಾಂಕ 03 ಜೂನ್ 2025ರ ಮಂಗಳವಾರದಂದು ಮಂಗಳೂರಿನ ಕುದ್ದುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದ ವಿರಾಜಪೇಟೆ ಡಿವೈಎಸ್ಪಿ ಎಸ್. ಮಹೇಶ್ ಕುಮಾರ್ ಮಾತನಾಡಿ “ಒಬ್ಬನೇ ವ್ಯಕ್ತಿ 24 ಗಂಟೆ ಹಾಡುವುದು ಸಾಮಾನ್ಯ ವಿಷಯವಲ್ಲ. ಇದೊಂದು ಅದ್ಭುತ ಕಾರ್ಯಕ್ರಮ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಸಲ್ಲಿಸುವ ನೈಜ ಗೌರವವಾಗಿದೆ” ಎಂದರು. ಉದ್ಯಮಿ ಮಲ್ಲಿಕಾ ಶೆಟ್ಟಿ, ಕರಾವಳಿ ಸಂಗೀತ ಒಕ್ಕೂಟದ ಅಧ್ಯಕ್ಷರಾದ ಕೇಶವ ಕನಿಲ, ಶ್ರೀರಂಗ ಕನ್‌ಸ್ಟಕ್ಷನ್ಸ್‌ ಇದರ ರಾಘವೇಂದ್ರ ಆಚಾರ್ಯ, ಉದ್ಯಮಿ ಕೆ. ಕೆ. ನೌಷಾದ್ ಮುಖ್ಯ ಅತಿಥಿಗಳಾಗಿದ್ದರು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ಏಷಿಯಾ ಮುಖ್ಯಸ್ಥ ಡಿ.ಮನೀಶ್ ವಿಲ್ಲೋಯ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮ್ಯಾಂಡೋಲಿನ್ ವಾದಕ ದೇವರಾಜ ಆಚಾರ್, ಕೀಬೋರ್ಡ್ ವಾದಕ ಸತೀಶ್  ಸುರತ್ಕಲ್,…

Read More

ಸುರತ್ಕಲ್ : ಸುರತ್ಕಲ್ ಹಿಂದು ವಿದ್ಯಾದಾಯಿನಿ ಸಂಘದ ಆಡಳಿತಕ್ಕೆ ಒಳಪಟ್ಟ ಇಡ್ಯಾ ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಆರಂಭ ಉತ್ಸವ, ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ ಸ್ವೀಕಾರ ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಸಮಾರಂಭ ದಿನಾಂಕ 02 ಜೂನ್ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕಿ ಕಸ್ತೂರಿ ಪಿ. ಮಾತನಾಡಿ “ಪ್ರಾಥಮಿಕ ಶಾಲಾ ಶಿಕ್ಷಣದ ಹಂತದಲ್ಲಿಯೇ ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಮೂಡಿಸಿಕೊಳ್ಳಬೇಕು. ಬದುಕಿನ ಉನ್ನತಿಗೆ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ವಿದ್ಯಾ ಸಂಸ್ಥೆಗಳು ನೀಡಬೇಕು” ಎಂದರು. ಸಮಾರಂಭವನ್ನು ಉದ್ಘಾಟಿಸಿ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿ ಮಾತನಾಡಿದ ಗೋವಿಂದದಾಸ ಕಾಲೇಜ್ ಇಲ್ಲಿನ ನಿವೃತ್ತ ಪ್ರಾಂಶುಪಾಲರಾದ ಕೃಷ್ಣಮೂರ್ತಿ. ಪಿ. “ನೂರ ಒಂಬತ್ತು ವರ್ಷಗಳ ಭವ್ಯ ಪರಂಪರೆ ಹೊಂದಿರುವ ವಿದ್ಯಾದಾಯಿನಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದೆ. ಪುಸ್ತಕ ಪ್ರೀತಿ ಬೆಳೆಸುವ ನಿಟ್ಟಿನಲ್ಲಿ ಗ್ರಂಥಾಲಯ ಮಹತ್ವದ ಪಾತ್ರ ವಹಿಸುತ್ತದೆ” ಎಂದು ನುಡಿದರು.…

Read More

ಉಡುಪಿ : ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಸಹಯೋಗದಲ್ಲಿ `ವೃತ್ತಿಪರ ಕಲಾವಿದರಿಗಾಗಿ ಕಲಾಪಗಳು ‘ ಕಾರ್ಯಕ್ರಮ ದಿನಾಂಕ 31 ಮೇ 2025ರ ಶನಿವಾರದಂದು ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಹಿಂದೆ ಶ್ರದ್ಧಾಭಕ್ತಿಯಿಂದ ಕಲಾವಿದರು ವೃತ್ತಿಪರರಾಗಿ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸಿದರು. ಇಂದು ಈ ಕ್ಷೇತ್ರಕ್ಕೆ ವೈದ್ಯರು, ಇಂಜೀನಿಯರ್, ಶಿಕ್ಷಕರು ಸೇರಿದಂತೆ ಉನ್ನತ ಶಿಕ್ಷಣ ಪಡೆದ ಮಂದಿ ಕಲೆಯ ತೇರನ್ನು ಮುಂದೆಳೆಯುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಆದರೆ ಮತ್ತೊಂದೆಡೆ ಯಕ್ಷಗಾನ ತನ್ನ ಸಾಂಪ್ರಾದಾಯಿಕ ಚೌಕಟ್ಟನ್ನು ಮೀರುತ್ತಿದೆ ಎಂಬ ದೂರುಗಳು ಕೂಡಾ ಅಕಾಡೆಮಿಯ ಕದವನ್ನು ತಟ್ಟುತ್ತಿವೆ. ಆದ್ದರಿಂದ ಈ ಸಂಕ್ರಮಣ ಕಾಲದಲ್ಲಿ ಯಕ್ಷಗಾನ ಕಲೆಯ ಗರಿಮೆಗೆ ಚ್ಯುತಿ ಬಾರದಂತೆ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯಕ್ಷಗಾನ ಕಲಾವಿದರ ಮೇಲಿದೆ. ಯಕ್ಷಗಾನ ಕರಾವಳಿ ಮಾತ್ರವಲ್ಲದೆ ವಿವಿಧ ಜಿಲ್ಲೆಗಳಲ್ಲಿ, ರಾಜ್ಯಗಳಲ್ಲಿ ಅಲ್ಲದೆ ಅಂತರಾಷ್ಟ್ರೀಯ ಮಟ್ಟಕ್ಕೂ ಯಕ್ಷಗಾನವನ್ನು ಕೊಂಡೊಯ್ಯುವ ಕಾರ್ಯ ಅಕಾಡೆಮಿ ಮಾಡಲಿದೆ.…

Read More

ಮಂಗಳೂರು: ಮಂಗಳೂರಿನ ಬಿಜೈಯಲ್ಲಿರುವ ನೃತ್ಯಾಂಗನ್ ಸಂಸ್ಥೆ ಆಯೋಜಿಸುವ ‘ಯುವ ನೃತ್ಯೋತ್ಸವ – 2025’ ಕಾರ್ಯಕ್ರಮವು ಡಾ. ಅರುಣ್ ಕುಮಾರ್ ಮೈಯಾ ಇವರ ಸ್ಮರಣಾರ್ಥ ದಿನಾಂಕ 08 ಜೂನ್ 2025ರಂದು ಮಂಗಳೂರಿನ ಡಾನ್‌ಬಾಸ್ಕೋ ಸಭಾಂಗಣದಲ್ಲಿ ನಡೆಯಲಿದೆ. ಅಂದು ಸಾಯಂಕಾಲ ಘಂಟೆ 5.30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಭರತಾಂಜಲಿ ನಿರ್ದೇಶಕಿ ವಿದುಷಿ ಪ್ರತಿಮಾ ಶ್ರೀಧರ್ ಚಾಲನೆ ನೀಡುವರು. ಯುವ ನೃತ್ಯೋತ್ಸವ-2025ರ ಪ್ರಯುಕ್ತ ಉದಯೋನ್ಮುಖ ಕಲಾವಿದೆಯರಾದ ಶ್ರೇಷ್ಠಾ ಆರ್. ದೇವಾಡಿಗ, ಪೂಜಾ ಸುಗಮ್, ಶ್ರೇಯಾ ಜಿ. ಏಕವ್ಯಕ್ತಿ ಭರತನಾಟ್ಯ ಪ್ರಸ್ತುತಪಡಿಸುವರು. ಪೃಥ್ವಿ ನಾಯಕ್ ಏಕವ್ಯಕ್ತಿ ಒಡಿಸ್ಸಿ ನೃತ್ಯ ಪ್ರಸ್ತುತಪಡಿಸುವರು. ಬಳಿಕ ಗುರು ವಿದುಷಿ ಪ್ರತಿಮಾ ಶ್ರೀಧರ್ ಅವರ ಶಿಷ್ಯೆಯಂದಿರು ಸಮೂಹ ನೃತ್ಯ ಪ್ರಸ್ತುತಪಡಿಸುವರು. ಆಸಕ್ತರಿಗೆ ಉಚಿತ ಪ್ರವೇಶ ಎಂದು ನೃತ್ಯಾಂಗನ್ ಸಂಸ್ಥೆಯ ನಿರ್ದೇಶಕಿ, ಕಲಾವಿದೆ ರಾಧಿಕಾ ಶೆಟ್ಟಿ ತಿಳಿಸಿದ್ದಾರೆ.

Read More

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ವಿಭಾಗದ ಅಧ್ಯಕ್ಷರಾಗಿ ಬಳಿಕ ಹಂಪಿ ಕನ್ನಡ ವಿಶ್ವವಿದ್ಯಾಲಯ ಹಾಗೂ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯಗಳ ಕುಲಪತಿಗಳಾಗಿ ಸೇವೆ ಸಲ್ಲಿಸಿದ ವಿದ್ವಾಂಸ ಪ್ರೊ. ಬಿ.ಎ ವಿವೇಕ ರೈ ಅವರಿಗೆ ಕರ್ನಾಟಕ ಸರಕಾರ ನೀಡುವ ಪ್ರತಿಷ್ಠಿತ ಪಂಪ ಪ್ರಶಸ್ತಿ ದೊರಕಿದ ಪ್ರಯುಕ್ತ ಅಭಿವಂದನ ಸಮಾರಂಭವು ದಿನಾಂಕ 03 ಜೂನ್ 2025ರ ಮಂಗಳವಾರದಂದು ಮಂಗಳೂರು ವಿವಿಯಲ್ಲಿ ನಡೆಯಿತು. ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದ ಅವರು “ನಾವು ಕರಾವಳಿಯಲ್ಲಿ ದ್ವೇಷ ಬಿತ್ತುವುದು ಬೇಡ. ಬೆಂಕಿ ಹಚ್ಚೋದೂ ಬೇಡ. ಮನುಷ್ಯ ಪ್ರೀತಿಯ ದೀಪ ಹಚ್ಚೋಣ. ಬಹುತ್ವದ ಈ ಮಣ್ಣಿನಲ್ಲಿ ನಾಡಿಗೆ ಹೊಸ ಸಂವೇದನೆಯನ್ನು ದಾಟಿಸಬಲ್ಲ ಶಕ್ತಿಯಿದೆ. ಎಲ್ಲ ಅಭಿಪ್ರಾಯಗಳಿಗೂ ಕಿಟಕಿ ಬಾಗಿಲುಗಳನ್ನು ತೆರೆದಿಟ್ಟು ಪರಸ್ಪರ ಗೌರವ ಪ್ರೀತಿಗೆ ಬದ್ಧವಾದ ಸಮಾಜವನ್ನು ಕಟ್ಟೋಣ. ವಿಶ್ವವಿದ್ಯಾನಿಲಯಗಳನ್ನು ಕಟ್ಟಡ, ಹಣದಿಂದ ಕಟ್ಟಲು ಸಾಧ್ಯವಿಲ್ಲ. ಶೈಕ್ಷಣಿಕ ಕಾಳಜಿ, ಜ್ಞಾನದ ಬಗೆಗಿನ ಹಸಿವು ಮತ್ತು ಮಾನವೀಯ ಸಂಬಂಧಗಳ ಸಂಘಟಿತ ಪ್ರಯತ್ನದ ಮೂಲಕ ಕಟ್ಟಬೇಕು. ಕುವೆಂಪು ಮತ್ತು…

Read More