Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಪ್ರಕಾಶ್ ರಾಜ್ ಫೌಂಡೇಷನ್ ವತಿಯಿಂದ ಮಂಗಳೂರು ‘ನಿರ್ದಿಗಂತ ಉತ್ಸವ 2025’ ಕಾರ್ಯಕ್ರಮವನ್ನು ದಿನಾಂಕ 28 ಫೆಬ್ರವರಿ 2025ರಿಂದ 03 ಮಾರ್ಚ್ 2025ರವರೆಗೆ ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಕಾಲೇಜಿನಲ್ಲಿ ಆಯೋಜಿಸಲಾಗಿದೆ. ದಿನಾಂಕ 28 ಫೆಬ್ರವರಿ 2025ರಂದು 9-30 ಗಂಟೆಗೆ ಈ ಕಾರ್ಯಕ್ರಮವು ರೆ. ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಮತ್ತು ಪ್ರಕಾಶ್ ರಾಜ್ ಇವರಿಂದ ಉದ್ಘಾಟನೆಗೊಳ್ಳಲಿದೆ. 10-30 ಗಂಟೆಗೆ ಪುರುಷೋತ್ತಮ ಬಿಳಿಮಲೆ ಇವರಿಂದ ಆಶಯ ಭಾಷಣ, 12-00 ಗಂಟೆಗೆ ಶಕೀಲ್ ಅಹ್ಮದ್ ಇವರ ನಿರ್ದೇಶನದಲ್ಲಿ ಬಿಜಾಪುರದ ಸ್ಪಿನ್ನಿಂಗ್ ಟ್ರೀ ಥಿಯೇಟರ್ ತಂಡದವರಿಂದ ‘ಫಾರ್ ಎ ಬ್ರೈಟ್ ಆಫ್ ಫುಡ್’ ನಾಟಕ ಪ್ರದರ್ಶನ, 3-00 ಗಂಟೆಗೆ ಮಂಗಳೂರಿನ ಯಕ್ಷಮಿತ್ರರು ತಂಡದವರಿಂದ ‘ಕೋಟಿ ಚೆನ್ನಯ್ಯ’ ಯಕ್ಷಗಾನ, 4-00 ಗಂಟೆಗೆ ಡಾ. ಗಣನಾಥ ಎಕ್ಕಾರು ಇವರಿಂದ ‘ಬದಲಾಗುತ್ತಿರುವ ಯಕ್ಷಗಾನದ ಸ್ವರೂಪ’ ಎಂಬ ವಿಷಯದ ಬಗ್ಗೆ ಉಪನ್ಯಾಸ, 5-30 ಗಂಟೆಗೆ ಸಂತ ಅಲೋಶಿಯಸ್ ಕಾಲೇಜು ‘ಕಾಲೇಜ್ ಬ್ಯಾಂಡ್ ಜ್ಯಾಮಿಂಗ್’ ಮತ್ತು 7-00 ಗಂಟೆಗೆ…
ನೃತ್ಯ ಕಲಾವಿದ/ ಕಲಾವಿದೆಯಾಗಿ ಕಲಾಮಾತೆಯ ಸೇವಾ ಕೈಂಕರ್ಯದಲ್ಲಿ ನಿರಂತರವಾಗಿ ಮುಂದುವರೆದು, ನಟರಾಜನ ದಯೆಗೆ ಪಾತ್ರರಾಗಿ, ಕಲಾ ರಸಿಕರ ಮನದಲ್ಲಿ ಸದಾ ನೆಲೆಗೊಂಡು ಅತ್ಯುತ್ತಮ ಸ್ಥಾನ ಗಳಿಸಿಕೊಳ್ಳುವುದು ಒಂದು ದೊಡ್ಡ ಸಾಧನೆ. ಈ ಸಾಧನೆಗೆ ಪರಿಪಕ್ವ ಮನಸ್ಸು ಮತ್ತು ಶಾಂತ ಚಿತ್ತದಿಂದ ಎಲ್ಲವನ್ನೂ ಒಂದೇ ರೀತಿಯಲ್ಲಿ ಒಪ್ಪಿಕೊಳ್ಳುವ – ಅಪ್ಪಿಕೊಳ್ಳುವ ಗುಣವು ಬೇಕೇ ಬೇಕು. ಧನಾತ್ಮಕ ಮತ್ತು ಮುಖ್ಯವಾಗಿ ಋಣಾತ್ಮಕ ಅಂಶಗಳನ್ನೂ ಪಡೆದುಕೊಂಡು, ಅದನ್ನು ಮನದಲ್ಲಿ ಅಳೆದು ತೂಗಿ, ತಪ್ಪುಗಳಿದ್ದರೆ ತಿದ್ದಿಕೊಂಡು ಮುಂದಿನ ದಿನಗಳಲ್ಲಿ ಹೊಸ ಬದಲಾವಣೆಯನ್ನು ಸೃಷ್ಟಿಸಿ ಎಲ್ಲರಿಂದ ಸೈ ಅನ್ನಿಸಿಕೊಳ್ಳಲು ಬಹಳ ಕಾಲ ಹಿಡಿಯುತ್ತದೆ. ಈ ಮಧ್ಯೆ ಅದೆಷ್ಟೋ ಅಡಚಣೆಗಳು, ಕಠೋರ ಮಾತುಗಳು, ಮೂಕ ರೋದನೆ ಮತ್ತು ಕೆಲವೊಮ್ಮೆ ಪ್ರತಿಭಟನೆ ಹೀಗೆ ಹಲವಾರು ಆಪತ್ತನ್ನು ಎದುರಿಸುತ್ತಾ, ಒಳ್ಳೆಯದನ್ನು ಸ್ವೀಕರಿಸಿ, ಖುಷಿ ಪಟ್ಟುಕೊಳ್ಳುತ್ತಾ ಸಾಗುತ್ತದೆ ಕಲಾ ಬದುಕು. ನಾವು ಮಾಡುವ ಕೆಲಸಗಳು ಎಲ್ಲರನ್ನೂ ತಲುಪುವುದಿಲ್ಲ, ತಲುಪಿದರೂ ಸಹಜವಾದ ಬದಲಾವಣೆಯನ್ನು ಅವರವರ ದೃಷ್ಟಿಕೋನದಲ್ಲಿ ಉಂಟುಮಾಡಿ ನಮ್ಮನ್ನು ಕ್ರಿಯಾತ್ಮವಾಗಿ ಬೆಳೆಸುತ್ತದೆ. ಇಂತಹ ಕ್ರಿಯಾತ್ಮಕ ಕಲಾವಿದ/ಕಲಾವಿದೆಯರು…
ಮಡಿಕೇರಿ : ಕರ್ನಾಟಕ ಜಾನಪದ ಅಕಾಡೆಮಿ ಮತ್ತು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಂಯುಕ್ತಾಶ್ರಯದಲ್ಲಿ ‘ಕೊಡಗು ಜಾನಪದ ಬೆಡಗು-ಜಾನಪದ ನಡೆ ವಿದ್ಯಾರ್ಥಿಗಳ ಕಡೆ’ ಎನ್ನುವ ವಿಶಿಷ್ಟ ಕಾರ್ಯಕ್ರಮ ದಿನಾಂಕ 24 ಫೆಬ್ರವರಿ 2025 ರಂದು ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ. ಕಾವೇರಿ ಪ್ರಕಾಶ್ ಮಾತನಾಡಿ “ಜಾನಪದ ಎನ್ನುವುದು ಸಾಹಿತ್ಯದ ಮೂಲಬೇರು. ಇಂತಹ ಅಮೂಲ್ಯ ಜಾನಪದ ಸಂಸ್ಕೃತಿ ಪರಂಪರೆಗಳು ತಲೆತಲಾಂತರಗಳಿಂದ ಹರಿದು ಬಂದಿದ್ದು, ಇದನ್ನು ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿನವಾಗಿದೆ. ಅಂದು ಬೆಳಗ್ಗೆ ಘಂಟೆ 10.30ಕ್ಕೆ ‘ಕೊಡಗು ಜಾನವದ ಬೆಡಗು’ ಕಾರ್ಯಕ್ರಮವನ್ನು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವ ಪ್ರಸಾದ್ ಅವರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ವೆಂಕಟೇಶ ಪ್ರನನ್ನ ಪಿ. ಕೆ. ವಹಿಸಲಿದ್ದಾರೆ” ಎಂದು ಹೇಳಿದರು. ಕಾರ್ಯಕ್ರಮದ ಸಹ ಸಂಚಾಲಕರು ಹಾಗೂ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಮೋಹನ್ ಕುಮಾರ್…
ಬೆಂಗಳೂರು : ಕಲಾ ಕದಂಬ (ಮೈಸೂರು ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ಸಂಸ್ಥೆ) ಆಯೋಜಿಸುವ ‘ರಂಗಉದ್ಭೋಧ -3’ ಯಕ್ಷಗಾನ ಒಂದು ನೋಟ – ಉಪನ್ಯಾಸ ಕಾರ್ಯಕ್ರಮವು ದಿನನಕ 23 ಫೆಬ್ರವರಿ 2025ರ ಭಾನುವಾರದಂದು ಸಂಜೆ ಘಂಟೆ 4.00 ರಿಂದ 7.30ರ ವರೆಗೆ ನಡೆಯಲಿದೆ ಬೆಂಗಳೂರಿನ ವಿಶ್ವೇಶ್ವರಯ್ಯ ಬಡಾವಣೆ 4ನೇ ವಿಭಾಗದ ಉಲ್ಲಾಳ ಉಪನಗರದಲ್ಲಿರುವ ಕಲಾ ಕದಂಬ ಆರ್ಟ್ ಸೆಂಟರ್ (ಕಲಾಗುಡಿ ) ಇಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಯಕ್ಷಗಾನ ವಿದ್ವಾಂಸರಾದ ಡಾ ಆನಂದರಾಮ ಉಪಾಧ್ಯ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಯಕ್ಷಗಾನ ಸರ್ಟಿಫಿಕೇಟ್ ಹಾಗೂ ಡಿಪ್ಲೊಮೊ ಪರೀಕ್ಷೆ ಸಿದ್ಧತೆ ಕುರಿತು ಮಾಹಿತಿ ನೀಡಲಾಗುವುದು. ಸರ್ಟಿಫಿಕೇಟ್, ಡಿಪ್ಲೋಮ ವಿದ್ಯಾರ್ಥಿಗಳಲ್ಲದ ಯಕ್ಷಗಾನ ಆಸಕ್ತರೂ ಈ ಒಂದು ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
ತೆಕ್ಕಟ್ಟೆ : ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ಇವರ ವತಿಯಿಂದ ಸಿನ್ಸ್ 1999 ಶ್ವೇತಯಾನ -108 ಕಾರ್ಯಕ್ರಮದಡಿಯಲ್ಲಿ ‘ಯಶಸ್ವಿ ಕಲೋತ್ಸವ 2’ ಮಹಿಳಾ ಸಮ್ಮಿಲನವನ್ನು ದಿನಾಂಕ 23 ಫೆಬ್ರವರಿ 2025ರಂದು ಬೆಳಿಗ್ಗೆ 9-30 ಗಂಟೆಗೆ ತೆಕ್ಕಟ್ಟೆ ಹಯಗ್ರೀವದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ನೃತ್ಯ ಹಾಡು ಯಕ್ಷಗಾನ ಪ್ರಸ್ತುತಗೊಳ್ಳಲಿದೆ. 25ರ ಸಂಭ್ರಮದ ಯಾನದಲ್ಲಿ ಯಶಸ್ವೀ ಕಲಾವೃಂದ ಈ ಕಾರ್ಯಕ್ರಮವು ಆನಂದ್ ಉರಾಳ್ ಹಂದಟ್ಟು ಮತ್ತು ಶಾಂತ ಗಣೇಶ್ ಕುಂಭಾಶಿ ಇವರ ಸಹಕಾರದೊಂದಿಗೆ ನಡೆಯಲಿದೆ.
ಕೋಲಾರ : ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೋಲಾರ ಇವರ ಸಹಯೋಗದಲ್ಲಿ ವಿಶೇಷ ಘಟಕ ಯೋಜನೆಯಡಿ ರಾಜ್ಯಮಟ್ಟದ ‘ಜನಪರ ಉತ್ಸವ -2025’ವನ್ನು ದಿನಾಂಕ 24 ಮತ್ತು 25 ಫೆಬ್ರವರಿ 2025ರಂದು ಕೋಲಾರದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 24 ಫೆಬ್ರವರಿ 2025ರಂದು ಕೋಲಾರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಮಧ್ಯಾಹ್ನ 3-00 ಗಂಟೆಗೆ ರಾಜ್ಯ ಮಟ್ಟದ ಕವಿಗೋಷ್ಠಿ, ಹಾಡು ಹುಟ್ಟಿದ ಗಳಿಗೆ ಮಕ್ಕಳ ರಂಗ ರೂಪಕ ಪ್ರಸ್ತುತಗೊಳ್ಳಲಿದೆ. 5-30 ಗಂಟೆಗೆ ಕೋಲಾರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜನಪರ, ಜನಪದ ಮತ್ತು ಗೀತ ಗಾಯನ ಸಂಭ್ರಮದಲ್ಲಿ ಜನಪದ, ಸುಗಮ ಸಂಗೀತ, ವಚನ, ತತ್ವಪದ, ರಂಗ ಸಂಗೀತ, ನೃತ್ಯ ರೂಪಕ, ನೃತ್ಯ ಪ್ರದರ್ಶನ, ವಾದ್ಯ ಸಂಗೀತ ಮತ್ತು ನಾಟಕ ಪ್ರದರ್ಶನ ನಡೆಯಲಿದೆ. ದಿನಾಂಕ 25 ಫೆಬ್ರವರಿ 2025ರಂದು ಕೋಲಾರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಬೆಳಿಗ್ಗೆ 11-00 ಗಂಟೆಗೆ ‘ಸಮಕಾಲೀನ ಸಂದರ್ಭದಲ್ಲಿ ದಲಿತ ಸಮುದಾಯದ ಮುಂದಿರುವ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ…
ಬೆಂಗಳೂರು : ಭಾರತದ ಪ್ರತಿಷ್ಠಿತ ನಾಟಕೋತ್ಸವಗಳಲ್ಲಿ ಒಂದಾದ ಮಹೀಂದ್ರ ಎಕ್ಸ್ಲೆನ್ಸ್ ಇನ್ ಥಿಯೇಟರ್ ಅವಾರ್ಡ್ 2025 (META)’ಗೆ 367 ನಾಟಕಗಳ ಪೈಕಿ ಆಯ್ಕೆಯಾದ 10 ನಾಟಕಗಳಲ್ಲಿ ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ ನಾಟಕವು ಒಂದು. ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ ನಾಟಕದ ಬಗ್ಗೆ : ತನ್ನ ಜನಾಂಗದ ಮೇಲೆ ನಿರಂತರ ನಡೆಯುತ್ತಿದ್ದ ಶೋಷಣೆಯನ್ನ ವಿರೋಧಿಸಿ, ತನ್ನ ಹಾಡಿನ ಮೂಲಕ ಜಗತ್ತಿಗೆ ಪರಿಚಯ ಇರುವ ಜಮೈಕಾದ ಹಾಡುಗಾರ, ಹೋರಾಟಗಾರ ‘ಬಾಬ್ ಮಾರ್ಲಿ’ಯ ರೂಪಕದಂತಿದೆ ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ ನಾಟಕ. ಹಲವು ಕನಸುಗಳನ್ನು ಹೊತ್ತು, ಸ್ವಚ್ಛಂದ ಬದುಕು ಕಟ್ಟಿಕೊಳ್ಳಲು ಹಳ್ಳಿಯಿಂದ ಪಟ್ಟಣಕ್ಕೆ ಬಂದ ಮೂವರು ತಮ್ಮ ಆಹಾರದಿಂದಾಗಿ ಅನುಭವಿಸುವ ಮಾನಸಿಕ ವೇದನೆ, ಒಬ್ಬಂಟಿತನ ಮತ್ತು ಅವರ ನಡುವೆ ನಡೆವ ಸಂಭಾಷಣೆ ನೋಡುಗರನ್ನು ಪ್ರಶ್ನಿಸುತ್ತಾ, ಅಣಕಿಸುತ್ತಾ ಸಾಗುತ್ತದೆ. ಕಥೆಯಲ್ಲಿ ಉಪಕಥೆಗಳು, ಹಾಡುಗಳು, ತಾವು ಅನುಭವಿಸಿದ ಅನೇಕ ನೈಜ ಘಟನೆಗಳಿದ್ದು ಕೇಳಲು ಕಷ್ಟವಾದರೂ ಅವು ಸತ್ಯವೇ ಆಗಿವೆ. ನಾಟಕ ನೋಡುತ್ತಿದ್ದ ಹಾಗೇ ನಮ್ಮ ಸುತ್ತ ಈಗ…
ಮೈಸೂರು : ಮೈಸೂರಿನ ಗ್ರಾಮಾಂತರ ಬುದ್ದಿಜೀವಿಗಳ ಬಳಗದ ವತಿಯಿಂದ ನೀಡಲಾಗುವ ‘ವಿಶ್ವಮಾನ್ಯ ಕನ್ನಡಿಗ ರಾಜ್ಯ ಪ್ರಶಸ್ತಿ’ಗೆ ಬಹಗಾರ್ತಿ, ಚಿತ್ರ ನಿರ್ಮಾಪಕಿ, ನಟಿ ಹಾಗೂ ಸಹನಿರ್ದೇಶಕಿ ಈರಮಂಡ ಹರಿಣಿ ವಿಜಯ್ ಆಯ್ಕೆಯಾಗಿದ್ದಾರೆ. ಗ್ರಾಮಾಂತರ ಬುದ್ಧಿಜೀವಿಗಳ ಬಳಗದ 40ನೇ ವಾರ್ಷಿಕೋತ್ಸವದ ಅಂಗವಾಗಿ ಮೈಸೂರಿನ ಇನ್ಸಿ ಟ್ಯೂಟ್ ಆಫ್ ಇಂಜಿನಿಯರಿಂಗ್ ಸಭಾಂಗಣದಲ್ಲಿ.23 ಫೆಬ್ರವರಿ 2025 ರಂದು ಬೆಳಿಗ್ಗೆ 10.30 ಗಂಟೆಗೆ ನಡೆಯುವ ರಾಷ್ಟ್ರ ಕವಿ ಕುವೆಂಪು ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಈರಮಂಡ ಹರೀಣಿ ವಿಜಯ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಡಾ. ಭೇರ್ಯ ರಾಮಕುಮಾರ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಾಹಿತ್ಯೋತ್ಸವವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ್ ಜೋಶಿ ಉದ್ಘಾಟಿಸಲಿದ್ದಾರೆ. ಈರಮಂಡ ಹರೀಣಿ ವಿಜಯ್ ಅವರು ಸಾಹಿತ್ಯ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಲ್ಲೂ ಸಕ್ರೀಯಾರಾಗಿರುವ ಇವರು ಕೊಡಗಿನ ಪ್ರತಿಷ್ಠಿತ ‘ಕೊಡಗಿನ ಗೌರಮ್ಮ ದತ್ತಿನಿಧಿ ಪ್ರಶಸ್ತಿ’…
ಬೆಂಗಳೂರು : ಜಾಗೃತಿ ಟ್ರಸ್ಟ್ (ರಿ.) ಬೆಂಗಳೂರು ಇದರ ವತಿಯಿಂದ ರೋಟರಿ ಕ್ಲಬ್ ಮತ್ತು ರಿಚ್ ಮಂಡ್ ಟೌನ್ ಬೆಂಗಳೂರು ಇವುಗಳ ಸಹಯೋಗದಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಕಾರದಲ್ಲಿ ಭಾವಜೀವಿ ಡಾ. ಬಿ.ಎಸ್. ಮಂಜುನಾಥ್ ಇವರ ‘ಯೋಗಪಥ’ ಕಾದಂಬರಿ ಲೋಕಾರ್ಪಣೆ ಮತ್ತು ಡಾ. ರಾಜಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 25 ಫೆಬ್ರವರಿ 2025ರಂದು ಬೆಳಿಗೆ 9-30 ಗಂಟೆಗೆ ಬೆಂಗಳೂರಿನ ಕೆ.ಆರ್. ವೃತ್ತ, ಕಬ್ಬನ್ ಪಾರ್ಕ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಟ್ಟಡ, ಮೇರಿ ದೇವಾಸಿಯಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ನಾಡಪ್ರಭು ಶ್ರೀ ಕೆಂಪೇಗೌಡ ಸಾರ್ವಜನಿಕ ಸೇವಾವೇದಿಕೆ ಇದರ ಅಧ್ಯಕ್ಷರಾದ ಪಿ. ಶಿವಕುಮಾರ್ ಇವರ ಅಧ್ಯಕ್ಷತೆಯಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕರಾದ ಶ್ರೀಮತಿ ಲಕ್ಷ್ಮೀದೇವಿ ಇವರು ಈ ಸಮಾರಂಭವನ್ನು ಉದ್ಘಾಟನೆ ಮಾಡಲಿದ್ದಾರೆ. ಶ್ರೀಮತಿ ಆರ್. ಅಂಬುಜಾಕ್ಷಿ ಬೀರೇಶ್ ತಂಡದವರಿಂದ ಜಾನಪದ ಗೀತಗಾಯನ, ಸರಿಗಮಪ ಸ್ಪರ್ಧಿ ನಾಗರಾಜ ತುಂಬ್ರಿರವರಿಂದ ಗಾಯನ, ಇಂಡಿಯನ್ ಪ್ರೈಮರಿ ಅಂಡ್ ಹೈಸ್ಕೂಲ್ ಮಕ್ಕಳಿಂದ…
ಬೆಂಗಳೂರು : ಸಂಸ್ಕೃತಿ ಸೌರಭ ಟ್ರಸ್ಟ್ (ರಿ.) ಇದರ ವತಿಯಿಂದ ವಾದ್ಯಗೋಷ್ಠಿ ವೈಭವದ ಆ ದಿನಗಳು ‘ಚಿರನೂತನ ಗೀತ ಗಾಯನ’ವನ್ನು ದಿನಾಂಕ 23 ಫೆಬ್ರವರಿ 2025ರಂದು ಸಂಜೆ 4-00 ಗಂಟೆಗೆ ಬೆಂಗಳೂರು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ವಾದ್ಯಗೋಷ್ಠಿ ರಂಗದಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಕಲಾವಿದರು ಹಾಗೂ ಕಲಾಪೋಷಕರಿಗೆ ಅಭಿನಂದನಾ ಸಮಾರಂಭ ಇದಾಗಿದೆ. ಬೆಂಗಳೂರು ನಗರ ಕ.ರ.ವೇ. ಅಧ್ಯಕ್ಷರಾದ ಶಿವಾನಂದ ಶೆಟ್ಟಿಯವರು ಈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಚಲನಚಿತ್ರ ಸಂಗೀತ ನಿರ್ದೇಶಕರು, ನಿರ್ಮಾಪಕರು ಹಾಗೂ ಗಾಯಕರಾದ ಟಾಪ್ ಸ್ಟಾರ್ ರೇಣುಕುಮಾರ್ ಇವರು ಉದ್ಘಾಟಿಸಲಿದ್ದಾರೆ. ಬಿ.ಜೆ.ಪಿ. ಮಹಾಲಕ್ಷ್ಮೀ ಲೇಔಟ್ ಮಂಡಲದ ಅಧ್ಯಕ್ಷರಾದ ಹೆಚ್.ಎಸ್. ರಾಘವೇಂದ್ರ ಶೆಟ್ಟಿಯವರು ಕಲಾವಿದರು ಹಾಗೂ ಕಲಾಪೋಷಕರನ್ನು ಅಭಿನಂದಿಸಲಿದ್ದು, ಸಂಸ್ಕೃತಿ ಸೌರಭ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷರಾದ ಡಾ. ರಾ.ಬಿ. ನಾಗರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.