Author: roovari

ಮಂಗಳೂರು : ಉರ್ವಸ್ಟೋರ್ ಪರಿಸರದಲ್ಲಿ ಹಲವು ದಶಕಗಳಿಂದ ಯಕ್ಷಗಾನ ಕಲಾ ಸೇವೆ ಮಾಡುತ್ತಿದ್ದ ಶ್ರೀ ಶಾರದಾಂಬಾ ಯಕ್ಷಗಾನ ಮಂಡಳಿಯನ್ನು ಉರ್ವಸ್ಟೋರ್‌ನ ಶ್ರೀ ಮಹಾಗಣಪತಿ ದೇವಸ್ಥಾನ ಸನ್ನಿಧಿಯಲ್ಲಿ ಮಂಡಳಿಯ ಯಕ್ಷಗಾನ ತಾಳಮದ್ದಳೆ ಸೇವೆಯೊಂದಿಗೆ ದಿನಾಂಕ 10-04-2024ರಂದು ಪುನರಾರಂಭ ಮಾಡಲಾಯಿತು. ಮಂಡಳಿಯ ಅಧ್ಯಕ್ಷ ಕದ್ರಿ ನವನೀತ ಶೆಟ್ಟಿ ಮಾತನಾಡಿ, “1932ರಲ್ಲಿ ದಿ. ಹೂವಪ್ಪ ಮಡಿವಾಳರಿಂದ ಪ್ರಾರಂಭಿಸಲ್ಪಟ್ಟ ಈ ಮಂಡಳಿ ಮುಂದೆ ದಿ. ಕೃಷ್ಣಪ್ಪ ಕರ್ಕೇರರ ಸಂಚಾಲಕತ್ವದಲ್ಲಿ ಹಲವು ವರ್ಷ ಮುನ್ನಡೆಯಿತು. ಇತ್ತೀಚಿನ ಕೆಲವು ಸಮಯಗಳಿಂದ ಸ್ಥಗಿತಗೊಂಡಿದ್ದ ಈ ಮಂಡಳಿಗೆ ಈಗ ಶ್ರೀ ಮಹಾಗಣಪತಿ ದೇವರ ಸನ್ನಿಧಾನದಲ್ಲಿ ಯಕ್ಷಗಾನದ ಮೂಲಕ ಪುರಾಣ ಕಥೆಗಳ ಪ್ರಚಾರ ಸೇವೆಯನ್ನು ಮಾಡುವ ಭಾಗ್ಯ ದೊರಕಿದೆ.” ಹಲವು ಕಲಾವಿದರನ್ನು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಈ ಮಂಡಳಿಗೆ ಬೆಂಬಲ ನೀಡಿ ಇನ್ನಷ್ಟು ಕಲಾವಿದರು ರೂಪುಗೊಳ್ಳಲು ಅನುವು ಮಾಡಿಕೊಟ್ಟ ದೇವಸ್ಥಾನದ ಆಡಳಿತ ಮಂಡಳಿಗೆ ಕೃತಜ್ಞತೆ ಸೂಚಿಸಿದರು. ವಿದ್ವಾಂಸ ಎಂ. ಪ್ರಭಾಕರ ಜೋಷಿ ಮತ್ತು ದೇವಸ್ಥಾನದ ಅಧ್ಯಕ್ಷ ಸುರೇಂದ್ರ ರಾವ್‌ ಮಾತನಾಡಿದರು. ಕೆನರಾ ಪದವಿ ಪೂರ್ವ…

Read More

ಪುತ್ತೂರು : ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ವತಿಯಿಂದ ‘ಸಾಹಿತ್ಯ ಗಾನ ನೃತ್ಯ ವೈಭವ’ ಕಾರ್ಯಕ್ರಮವು ದಿನಾಂಕ 11-04-2024ರಂದು ಪುತ್ತೂರು ಮಹಾಲಿಂಗೇಶ್ವರ ಕ್ಷೇತ್ರದ ಜಾತ್ರೋತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ವಿಜೃಂಭಣೆಯಿಂದ ನಡೆದು ನೆರೆದಿದ್ದ ಅಸಂಖ್ಯಾತ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಸಂಸ್ಥೆಯ ಕಲಾವಿದರಾದ ಗುರುರಾಜ್ ಕಾಸರಗೋಡು, ಅವನಿ ಎಂ.ಎಸ್. ಸುಳ್ಯ, ಜ್ಞಾನ ರೈ ಪುತ್ತೂರು, ಪ್ರಥಮ್ಯ ಯು.ವೈ. ನೆಲ್ಯಾಡಿ, ಆಜ್ಞಾ ರೈ ಪುತ್ತೂರು, ಶ್ವೇತಾ ಯು.ವೈ. ನೆಲ್ಯಾಡಿ, ರಕ್ಷಿತಾ ಮೊದಲಾದವರು ಭಾಗವಹಿಸಿದ್ದರು. ಕಾರ್ಯಕ್ರಮದ ಸಾಹಿತ್ಯ ಪ್ರಸ್ತುತಿ ಹಾಗೂ ನಿರೂಪಣೆಯನ್ನು ಡಾ. ವಾಣಿಶ್ರೀ ಕಾಸರಗೋಡು ನಿರ್ವಹಿಸಿದ್ದರು. ಪುತ್ತೂರು ಕ್ಷೇತ್ರದ ವತಿಯಿಂದ ಡಾ. ವಾಣಿಶ್ರೀ ಕಾಸರಗೋಡು ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಕಲಾವಿದರಗೂ ಸಂಸ್ಥೆಯ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

Read More

ಕಾಸರಗೋಡು : ವಿದುಷಿ ಮಂಜುಳ ಸುಬ್ರಹ್ಮಣ್ಯ ಇವರ ಗುರುತ್ವದಲ್ಲಿ ಪುತ್ತೂರಿನ ನಾಟ್ಯರಂಗದ ಎಡನೀರು ಶಾಖೆಯ ವಿದ್ಯಾರ್ಥಿನಿಯರಾದ ಮಧುಶ್ರೀ, ದೇವಾನಂದ, ಶ್ರೀನಂದ ಹಾಗೂ ನೃತ್ಯ ಗುರುಗಳ ಸಮನ್ವಯದಲ್ಲಿ ಎಡನೀರು ಮಠದ ಭಾರತೀ ಕಲಾಸದನದಲ್ಲಿ ‘ನೃತ್ಯಾವತರಣಂ’ ಪ್ರಸ್ತುತಿಯು ದಿನಾಂಕ 14-04-2024ರಂದು ಸಂಪನ್ನಗೊಂಡಿತು. ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ದೀಪ ಬೆಳಗಿಸಿ ಶುಭಾಶೀರ್ವಚನ ನೀಡಿ ಮಾತನಾಡುತ್ತಾ “ಕಲಾವಿದರಿಂದ ಕಲಾಪ್ರೇಕ್ಷಕರೆಡೆಗೆ ಕಲಾಪ್ರಜ್ಞೆ ಹರಿದು ಬರಬೇಕು. ಕಲೆ ವ್ಯಕ್ತಿಯನ್ನು ಅರಳಿಸುವ ಕಾರ್ಯದೊಂದಿಗೆ ಸೂಕ್ಷ್ಮಪ್ರಜ್ಞೆಯನ್ನು ಬೆಳೆಸುತ್ತದೆ. ಮಠದ ಸಾನಿಧ್ಯವು ಕಲಾವಿದರಿಗೂ, ಕಲಾಪ್ರೇಕ್ಷಕರಿಗೂ, ಕಲಾ ಪೋಷಕರಿಗೂ, ಭಗವದ್ಭಕ್ತರಿಗೂ ಸದಾ ಆಶ್ರಯ ತಾಣವಾಗಬೇಕು ಎಂಬುದೇ ನಮ್ಮ ಸದಾಶಯ” ಎಂದು ಹೇಳಿದರು. ಮುಖ್ಯ ಅಭ್ಯಾಗತರ ನೆಲೆಯಲ್ಲಿ ಕೇರಳ ರಾಜ್ಯ ಬಯೋಡೈವರ್ಸಿಟಿ ಬೋರ್ಡ್ ಮೆಂಬರ್ ಸೆಕ್ರೆಟರಿ, ಡಿವೈಎಸ್ಪಿ ಡಾ. ಬಿ. ಬಾಲಕೃಷ್ಣನ್ ಮಾತನಾಡಿ “ಮಠದ ಆಶ್ರಯವು ತಮ್ಮ ಬದುಕಿನಲ್ಲಿ ಮಹತ್ತರ ಪಾತ್ರವಹಿಸುತ್ತಿದ್ದು ಪ್ರಸಕ್ತ ಸನ್ನಿವೇಶಗಳಲ್ಲಿ ಕಲಾವಿದರನ್ನು ಸೃಷ್ಟಿಸುವಷ್ಟೇ ಆದ್ಯತೆ ಹಾಗೂ ಪ್ರಾಮುಖ್ಯತೆ ಕಲಾ ಆಸ್ವಾಧಕರನ್ನು ಸೃಷ್ಟಿಸುವಲ್ಲಿ ನೀಡುತ್ತಿರುವುದು ಶ್ಲಾಘನೀಯ” ಎಂದರು.…

Read More

ಮಂಗಳಾದೇವಿ : ಸಂಗೀತ ಪರಿಷತ್ ಮಂಗಳೂರು ಆಶ್ರಯದಲ್ಲಿ ಭಾರತೀಯ ವಿದ್ಯಾಭವನ ಮತ್ತು ರಾಮಕೃಷ್ಣ ಮಠದ ಸಹಯೋಗದೊಂದಿಗೆ ವಿದ್ವಾನ್ ಎನ್. ಗೋಪಾಲಕೃಷ್ಣ ಅಯ್ಯರ್ ಸ್ಮರಣಾರ್ಥ ಇಲ್ಲಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ವಿಶಿಷ್ಟ ಸಂಗೀತ ಕಛೇರಿಯನ್ನು ದಿನಾಂಕ 07-04-2024ರಂದು ಆಯೋಜಿಸಲಾಗಿತ್ತು. ಮೊದಲು ನಡೆದ ಉಡುಪಿಯ ಕಡಿಯಾಳಿ ಸಹೋದರರಾದ ಪ್ರಭವ್ ಉಪಾಧ್ಯ ಮತ್ತು ಸೌರವ್ ಉಪಾಧ್ಯ ಇವರ ಕೊಳಲು ವಾದನ ಕಛೇರಿಗೆ ಧನಶ್ರೀ ಶಬರಾಯ ವಯೋಲಿನ್ ಹಾಗೂ ಪ್ರಣವ್ ಸುಬ್ರಹ್ಮಣ್ಯ ಮೃದಂಗದಲ್ಲಿ ಸಹಕರಿಸಿದರು. ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುತ್ತಿರುವ ಬಾಲಪ್ರತಿಭೆ 10 ವರ್ಷ ವಯಸ್ಸಿನ ಗಂಗಾ ಶಶಿಧರನ್ ಮತ್ತು ಅವರ ಗುರು ಸಿ. ಅನುರೂಪ್ ಅವರ ವಯೋಲಿನ್ ಕಾರ್ಯಕ್ರಮ ನಡೆಯಿತು. ಪ್ರಸಿದ್ಧ ಕೃತಿ ವಾತಾಪಿಯಿಂದ ಕಛೇರಿ ಆರಂಭಿಸಿದ ತಂಡದ ಪ್ರಸ್ತುತಿ ಶೋತೃಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಯಿತು. ಮೃದಂಗ, ತವಿಲ್ ಮತ್ತು ಘಟಂಗಳ ಕಲಾವಿದರ ಚಾತುರ್ಯವನ್ನೂ ತೋರ್ಪಡಿಸಿದರು. ಪುಟ್ಟಬಾಲೆ ಗಂಗಾ ತನ್ನ ಚಾತುರ್ಯ, ಆಕರ್ಷಕ ನುಡಿಸಾಣಿಕೆ, ಭಾವಪೂರ್ಣ ಅಭಿವ್ಯಕ್ತಿಗಳಿಂದ ಪ್ರೇಕ್ಷಕರ ಮನಸೂರೆಗೊಂಡಳು. ಆನಂತರ ವಿಳಂಬ ಕಾಲದ…

Read More

ಮಡಿಕೇರಿ : ಭಾರತೀಯ ವಿದ್ಯಾಭವನದಲ್ಲಿ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ವತಿಯಿಂದ ಆಯೋಜಿಸಿದ್ದ ಶ್ರೀಮತಿ ಕೂತಂಡ ಪಾರ್ವತಿ ಪೂವಯ್ಯರವರ ಕುರಿತಾದ ‘ಅವ್ವ’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 06-04-2024ರಂದು ನಡೆಯಿತು. ಕೃತಿ ಲೋಕಾರ್ಪಣೆಗೊಳಿಸಿದ ಹಿರಿಯ ಪತ್ರಕರ್ತ ಕೆ.ಬಿ. ಗಣಪತಿಯವರು ಮಾತನಾಡಿ “ಗಾಂಧೀಜಿ ಅನುಯಾಯಿಯಾಗುವುದು ಸುಲಭವಲ್ಲದ ದಿನಗಳಲ್ಲಿ ಗಾಂಧೀಜಿ ತತ್ವಾದರ್ಶಗಳನ್ನು ಜೀವನದಲ್ಲಿ ಹಾಸುಹೊಕ್ಕಾಗಿಸಿ ಸರಳವಾಗಿ, ಆದರ್ಶಪ್ರಾಯವಾಗಿ ಬದುಕಿದ ಹಿರಿಮೆ ಕೂತಂಡ ಪಾರ್ವತಿ ಪೂವಯ್ಯರವರಿಗೆ ಸಲ್ಲಬೇಕು. ಪಂದ್ಯಂಡ ಗಣಪತಿಯವರು ಅಂದಿನ ಕಾಲದಲ್ಲಿ ಕೊಡಗಿನ ಗಾಂಧಿ ಎಂದು ಹೆಸರಾಗಿದ್ದರೆ, ಕೂತಂಡ ಪೂರ್ವತಿ ಪೂವಯ್ಯರವರು ಕೊಡಗಿನ ಸರೋಜಿನಿ ನಾಯ್ಡು ಎಂದು ಹೆಸರುವಾಸಿಯಾಗಿದ್ದರು. ಕೂತಂಡ ಪಾರ್ವತಿಯವರನ್ನು ಪ್ರತ್ಯಕ್ಷ ಕಂಡವರು ಕೆಲವೇ ಜನರಾದರೂ ಪಾರ್ವತಿರವರ ಜೀವನಾದರ್ಶಗಳನ್ನು ಅರಿತವರು ಅನೇಕರಿದ್ದಾರೆ. ತನ್ನ ಬರವಣಿಗೆ ಮೂಲಕ ಕೊಡವರಂಥ ಸಣ್ಣ ಸಮುದಾಯವನ್ನು ಭಾರತಾದ್ಯಂತ ಪ್ರಚುರಪಡಿಸಿದ ಕೀರ್ತಿ ಪಾರ್ವತಿ ಪೂವಯ್ಯನವರಿಗೆ ಸಲ್ಲುತ್ತದೆ. ಕೊಡವ, ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಹಿಡಿತ ಹೊಂದುವ ಮೂಲಕ ಅಂದಿನ ಕಾಲಘಟ್ಟದಲ್ಲಿಯೇ ಕೊಡಗಿನ ಪ್ರಥಮ ಮಹಿಳಾ ಲೇಖಕಿಯಾಗಿ ಪಾರ್ವತಿ ಪೂವಯ್ಯ ಸಾಹಿತ್ಯ ಲೋಕಕ್ಕೆ…

Read More

ವಿಟ್ಲ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು – ವಿಟ್ಲ ಘಟಕದ 4ನೇ ವಾರ್ಷಿಕೋತ್ಸವವು ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ದಿನಾಂಕ 11-04-2024ರಂದು ನಡೆಯಿತು. ಹವ್ಯಾಸಿ ಯಕ್ಷಗಾನ ಕಲಾವಿದೆ ಶ್ರೀಮತಿ ಜಯಲಕ್ಷ್ಮಿ ರೈ ಅಡ್ಯನಡ್ಕ ಮತ್ತು ಝೀ ಕನ್ನಡ ಡ್ರಾಮಾ ಜ್ಯೂನಿಯರ್ ಖ್ಯಾತಿಯ ಬಹುಮುಖ ಪ್ರತಿಭೆ ರಿಷಿತ್ ರಾಜ್ ವಿಟ್ಲ ಇವರನ್ನು ಸಂಮಾನಿಸಲಾಯಿತು. ಸ್ಥಾಪಕಧ್ಯಕ್ಷರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ಗೌರವಾಧ್ಯಕ್ಷರಾದ ವಿಟ್ಲ ಅರಮನೆಯ ಕೃಷ್ಣಯ್ಯ ಅರಸರು, ಮಾರಪ್ಪ ಶೆಟ್ಟಿ ಬೈಲುಗುತ್ತು, ಮಾಧವ ಮಾವೆ, ಮೋಹನದಾಸ ರೈ ಎರುಂಬು, ಸಂತೋಷ್ ಶೆಟ್ಟಿ ಪೆಲತ್ತಡ್ಕ ಉಪಸ್ಥಿತರಿದ್ದರು. ವಿಟ್ಲ ಘಟಕದ ಅಧ್ಯಕ್ಷರು ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಇವರು ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಪೂವಪ್ಪ ಶೆಟ್ಟಿ ಅಳಕೆ ಇವರು ಪ್ರಸ್ತಾವಿಸಿದರು. ಸುರೇಶ್ ಶೆಟ್ಟಿ ಪಡಿಬಾಗಿಲು ನಿರೂಪಿಸಿ ವಿಜಯಶಂಕರ ಆಳ್ವರು ವಂದಿಸಿದರು.

Read More

ಉಡುಪಿ : ಭಾವನಾ ಫೌಂಡೇಶನ್ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಸಂಯೋಜಿಸುವ ‘ಜನಪದ’ ದೇಶೀಯ ಕಲೆಗಳ ಕಾರ್ಯಾಗಾರ ಸರಣಿ 11, 12, 13 ಮತ್ತು 14ನ್ನು ದಿನಾಂಕ 18-04-2024ರಿಂದ 21-04-2024ರವರೆಗೆ ಬೆಳಗ್ಗೆ 9-30ರಿಂದ ಸಂಜೆ 5ರ ತನಕ ಉಡುಪಿ ಬಡಗುಪೇಟೆಯ ‘ಹತ್ತು ಮೂರು ಇಪ್ಪಂತ್ತೆಂಟು ಗ್ಯಾಲರಿ’ಯಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 18-04-2024ರಂದು ಕೋಹ್ಬಾರ್ ಚಿತ್ರಕಲೆ, ದಿನಾಂಕ 19-04-2024ರಂದು ಟಿಕುಲಿ ಚಿತ್ರಕಲೆ, ದಿನಾಂಕ 20-04-2024ರಂದು ಜಾಲಿ ಫ್ರೇಂ ಮತ್ತು ದಿನಾಂಕ 21-04-2024ರಂದು ಮಂಜೂಷಾ ಚಿತ್ರಕಲೆ ಎಂಬ ಕಲೆಗಳ ಬಗ್ಗೆ ಕಲಾವಿದರಾದ ಶ್ರೀ ಶ್ರವಣ್ ಪಾಸ್ವಾನ್ ಮತ್ತು ಶ್ರೀ ಪವನ್ ಕುಮಾರ್ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಿದ್ದಾರೆ. ಹೆಚ್ಚಿನ ಮಾಹಿತಿ ಮತ್ತು ಕಾರ್ಯಾಗಾರದ ನೋಂದಣಿಗಾಗಿ ಡಾ. ಜನಾರ್ದನ ಹಾವಂಜೆ (9845650544)ಯವರನ್ನು ಸಂಪರ್ಕಿಸಬಹುದು. ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ಸಂಜೆ ಗಂಟೆ 4-00ರಿಂದ 6-00ರ ತನಕ ನಡೆಯಲಿದೆ.

Read More

ಕುಂದಾಪುರ: ಕೊಮೆ ತೆಕ್ಕಟ್ಟೆಯ ಯಶಸ್ವೀ ಕಲಾವೃಂದವು ಧಮನಿ ಹಾಗೂ ಧಿಮ್ಸಾಲ್ ಸಹಕಾರದೊಂದಿಗೆ ಆಯೋಜಿಸಿದ ‘ಯಕ್ಷ ಗಾನ ವೈಭವ’ ಕಾರ್ಯಕ್ರಮವು ದಿನಾಂಕ 12-04-2024 ರಂದು ಕುಂದಾಪುರ ವಿಶ್ವಕರ್ಮ ಸಭಾಂಗಣದಲ್ಲಿ ನಡೆಯಿತು. ಪವನ್ ಆಚಾರ್ಯ ಇವರ ಉಪನಯನ ಕಾರ್ಯಕ್ರಮದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ವಟುವಿಗೆ ಗೌರವಿಸಿ ಮಾತನಾಡಿದ ಪ್ರಸಿದ್ಧ ಹಿರಿಯ ಭಾಗವತ ಹೆಮ್ಮಾಡಿ ಪ್ರಭಾಕರ ಆಚಾರ್ “ಶ್ವೇತಯಾನವು ಅದ್ಭುತವಾಗಿ ನೆರವೇರುತ್ತಿದೆ. ಇದು ವಿಶ್ವವ್ಯಾಪಿಯಾಗಿ ಬೆಳಗಲಿ. ಪುಟಾಣಿಗಳ ತಂಡವೊಂದು ತೆಕ್ಕಟ್ಟೆ ಭಾಗದಲ್ಲಿ ಕೆ. ಪಿ. ಹೆಗಡೆ, ಕೂಡ್ಲಿ ದೇವದಾಸ್ ರಾವ್, ಲಂಬೋದರ ಹೆಗಡೆಯವರ ಗರಡಿಯಲ್ಲಿ ಸಿದ್ಧಗೊಂಡು ಸಮಾಜದ ಮಾನ್ಯತೆ ಪಡೆದಿದೆ. 25ರ ಬೆಳ್ಳಿ ಹಬ್ಬದ ಈ ಯಾನವು ನಿರ್ವಿಘ್ನವಾಗಿ ನೆರವೇರಲಿ. ಹೆಚ್ಚು ಹೆಚ್ಚು ಕಲಾ ಪೋಷಕರ ಬಳಗ ಸಂಸ್ಥೆಗೆ ಲಭಿಸಲಿ.” ಎಂದು ಹಾರೈಸಿದರು. ಗುರುಗಳಾದ ಸೀತಾರಾಮ ಶೆಟ್ಟಿ ಕೊಯಿಕೂರು, ಶ್ರೀಮತಿ ಪೂರ್ಣಿಮಾ ಹಾಗು ಶ್ರೀ ಸುರೇಶ್ ಆಚಾರ್ಯ, ಭರತ್ ಚಂದನ್ ಕೋಟೇಶ್ವರ, ರಾಹುಲ್ ಕುಂದರ್ ಕೋಡಿ, ರಾಹುಲ್ ಕೊಮೆ, ಪೂಜಾ ಆಚಾರ್, ಹರ್ಷಿತಾ ಅಮೀನ್,…

Read More

ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಮತ್ತು ನಾಗರಿಕ ಸಲಹಾ ಸಮಿತಿ (ರಿ), ಸುರತ್ಕಲ್‌ಗಳ ವತಿಯಿಂದ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಉದಯರಾಗ – 52 ಶಾಸ್ತ್ರೀಯ ಸಂಗೀತ ಸರಣಿ ಕಾರ್ಯಕ್ರಮವು ದಿನಾಂಕ 07-04-2024ರಂದು ಸುರತ್ಕಲ್ ಫ್ಲೈಓವರ್ ಕೆಳಗಡೆ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸುರತ್ಕಲ್ ರೋಟರಿ ಕ್ಲಬ್‌ ಇದರ ಅಧ್ಯಕ್ಷರಾದ ಯೋಗೀಶ್ ಕುಳಾಯಿ ಮಾತನಾಡಿ “ಸಾಮಾಜಿಕ ಸೇವಾ ಸಂಸ್ಥೆಗಳು ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಭಾರತೀಯ ಸಂಸ್ಕೃತಿಯ ಅಭಿವೃದ್ಧಿಗೆ ಶ್ರಮಿಸಬೇಕು.” ಎಂದರು. ಸುರತ್ಕಲ್ ನಾಗರಿಕ ಸಲಹಾಸಮಿತಿಯ ಅಧ್ಯಕ್ಷರಾದ ಡಾ. ಕೆ. ರಾಜಮೋಹನ್‌ರಾವ್, ಸುರತ್ಕಲ್ ರೋಟರಿ ಕ್ಲಬ್‌ ಇದರ ಕಾರ್ಯದರ್ಶಿ ರಮೇಶ್ ರಾವ್ ಎಂ. ಉಪಸ್ಥಿತರಿದ್ದರು. ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಾಸ್ಟರ್ ಆಕಾಶ್‌ಕೃಷ್ಣ ವೇಣೂರು ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಇವರಿಗೆ ವಯೋಲಿನ್‌ನಲ್ಲಿ ಸುನಾದ ಪಿ.ಎಸ್. ಮಾವೆ,…

Read More

ತೆಕ್ಕಟ್ಟೆ : ತೆಕ್ಕಟ್ಟೆ ಶಿಶುಮಂದಿರದ ಬಳಿಯ ಪ್ರಕೃತಿ ವಾತಾವರಣದಲ್ಲಿ ಯಶಸ್ವೀ ಕಲಾವೃಂದ ಕೊಮೆ-ತೆಕ್ಕಟ್ಟೆ, ಶ್ರೀ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ, ಧಮನಿ ಟ್ರಸ್ಟ್ ತೆಕ್ಕಟ್ಟೆ, ದಿಮ್ಸಾಲ್ ಕ್ರಿಯೇಷನ್ಸ್ ಸಂಸ್ಥೆಗಳ ಆಶ್ರಯದಲ್ಲಿ ‘ರಜಾರಂಗು-24’, ಮೊಬೈಲ್ ಮುಕ್ತ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ 11-04-2024ರಂದು ನಡೆಯಿತು. ಶಿಬಿರವನ್ನು ಉದ್ಘಾಟಿಸಿದ ಖ್ಯಾತ ರಂಗ ನಿರ್ದೇಶಕ ಶ್ರೀಪಾದ ಭಟ್ ಮಾತನಾಡಿ “ದೀಪ ಹಚ್ಚುವುದು ಬಹಳ ಕಷ್ಟ. ತಿಂಗಳುಗಟ್ಟಲೆ ಎಲ್ಲವರೂ ಸೇರಿಕೊಂಡು ಯೋಚಿಸಬೇಕು, ಮಕ್ಕಳನ್ನು ಕ್ರೋಡೀಕರಿಸುವುದಕ್ಕೆ ಪಾಲಕರನ್ನು ಒಪ್ಪಿಸಬೇಕು, ಸಂಪನ್ಮೂಲ ವ್ಯಕ್ತಿಗಳನ್ನು ಹೊಂದಿಸಿಕೊಳ್ಳಬೇಕು, ಕಾರ್ಯಕ್ರಮದ ಬಗೆಗಿನ ಆತಂಕಗಳನ್ನು ಎದುರಿಸಬೇಕು, 25ದಿನಗಳು ತೊಂದರೆ ಆಗದ ರೀತಿಯಲ್ಲಿ ಪ್ರತೀ ದಿನವೂ ಕಷ್ಟ ಪಡಬೇಕು, ದೀಪ ಆರದಂತಿರಲು ಭಯ ಪಡಬೇಕು. ಆದರೆ ಬೆಂಕಿ ಹಚ್ಚುವುದು ಬಹಳ ಸುಲಭ. ಯಾವುದೋ ಮೂಲೆಯಲ್ಲಿ ನಿಂತು ಒಂದು ಕಡ್ಡಿ ಕೀರಿದರೆ ಸಾಕಾಗುತ್ತದೆ. ಅದಕ್ಕಾಗಿ ಬೆಂಕಿ ಹಚ್ಚುವುದು ಬಹಳ ಸುಲಭ, ದೀಪ ಹಚ್ಚುವುದು ಬಹಳ ಕಷ್ಟ. ಈ ದೀಪ ಹಚ್ಚುವ ಕಷ್ಟದ ಕಾಯಕವನ್ನು ಅನೇಕ ವರ್ಷಗಳಿಂದ ಸಂಸ್ಥೆ ನಡೆಸಿಕೊಂಡು…

Read More