Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಸಾಲಿಗ್ರಾಮ ಮಕ್ಕಳ ಮೇಳ (ರಿ.) ಕೋಟ ಇದರ ವತಿಯಿಂದ ನಡೆಯುವ ಸುವರ್ಣ ಪರ್ವ -11ರ ಸರಣಿಯಲ್ಲಿ ಕರ್ನಾಟಕ ಯಕ್ಷಧಾಮ ಮಂಗಳೂರು ಮತ್ತು ಪದ್ಮಕಮಲ ಟ್ರಸ್ಟ್ ಬೆಂಗಳೂರು ಇವರ ಸಹಯೋಗದೊಂದಿಗೆ ಸುವರ್ಣ ಸಮ್ಮಾನ – ಯಕ್ಷಗಾನ ಪ್ರದರ್ಶನವನ್ನು ದಿನಾಂಕ 08 ಜೂನ್ 2025ರಂದು ಮಧ್ಯಾಹ್ನ 2-00 ಗಂಟೆಗೆ ಬೆಂಗಳೂರಿನ ಪರಂಪರಾ ಅಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ. ಮಕ್ಕಳ ಯಕ್ಷಗಾನ ಕ್ಷೇತ್ರದ ಅನನ್ಯ ಸಾಧಕರಾದ ಕೆ. ಮೋಹನ್ ಹೊಳ್ಳ, ಶ್ರೀನಿವಾಸ ಸಾಸ್ತಾನ, ಕೃಷ್ಣಮೂರ್ತಿ ತುಂಗ ಕೆ., ಡಾ. ಶಿವಕುಮಾರ್ ಬೇಗಾರ್, ಡಾ. ರಾಧಾಕೃಷ್ಣ ಉರಾಳ ಮತ್ತು ಶಂಕರ ಬಾಳ್ಕುದ್ರು ಇವರಿಗೆ ಸುವರ್ಣಪರ್ವ ಗೌರವ ಪುರಸ್ಕಾರ ನೀಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಶಶಿಕಾಂತ್ ಶೆಟ್ಟಿ ಕಾರ್ಕಳ ಇವರ ನಿರ್ದೇಶನದಲ್ಲಿ ವೃತ್ತಿ ಕಲಾವಿದರಿಂದ ‘ಶ್ರೀ ದೇವಿ ವಿಜಯ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಬೆಂಗಳೂರು : ಶ್ರೀ ವಾಗ್ದೇವಿ ಗಮಕಕಲಾ ಪ್ರತಿಷ್ಠಾನ (ರಿ.) ಬೆಂಗಳೂರು ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ಣಾಟಕ ಸರ್ಕಾರ ಮತ್ತು ಕನ್ನಡ ಸಹೃದಯ ಪ್ರತಿಷ್ಠಾನ ಕುಮಾರ ವ್ಯಾಸ ಮಂಟಪ ಇವರ ಸಹಕಾರದಲ್ಲಿ ವಾರ್ಷಿಕ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 07 ಜೂನ್ 2025ರಂದು ಬೆಳಿಗ್ಗೆ 9-30 ಗಂಟೆಗೆ ಬೆಂಗಳೂರು ರಾಜಾಜಿ ನಗರದಲ್ಲಿರುವ ಕುಮಾರವ್ಯಾಸ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ‘ಶ್ರೀ ವಾಗ್ದೇವಿ ಪ್ರಶಸ್ತಿ’ಯನ್ನು ವಿದುಷಿ ಎನ್. ಶ್ರೀಮತಿ ಜಯರಾಂ, “ಕೀರ್ತಿಶೇಷ ಗುರು ಪದ್ಮಶ್ರೀ ಹೆಚ್.ಆರ್. ಕೇಶವಮೂರ್ತಿ ಸ್ಮಾರಕ ಉತ್ತಮ ಗಮಕ ಶಿಕ್ಷಕ ಪ್ರಶಸ್ತಿ’ಯನ್ನು ಶ್ರೀಮತಿ ಮಂಜುಳಾ ಸುಬ್ರಹ್ಮಣ್ಯ ಭಟ್ ಹಾಗೂ ದಿ. ಕೆ.ವಿ. ರವೀಂದ್ರನಾಥ ಟ್ಯಾಗೋರ್ ಸ್ಮಾರಕ ಯುವ ಗಮಕ ಪ್ರಶಸ್ತಿ’ಯನ್ನು ವಿದ್ವಾನ್ ವೇ. ಬ್ರಂ. ಅಚ್ಯುತ ಅವಧಾನೀ ಎಂ.ಎಲ್. ಇವರುಗಳಿಗೆ ಪ್ರದಾನ ಮಾಡಲಾಗುವುದು. ಸಾನ್ವಿ ಎಸ್. ಜೋಯಿಸ್, ಅನೀಶ್ ನಾಗೇಶ್, ರಿಧಿ ಭಾರದ್ವಾಜ್, ಸ್ಪಂದನಾ, ನೈನಿಕಾ ಕೊಡಂಚ ಕೆ., ಅಭಿರಾಮ ದೇಸಾಯಿ ಮುಂತಾದ ಕಲಾವಿದರಿಂದ ಕಾವ್ಯಾಂತ್ಯಾಕ್ಷರಿ ಹಾಗೂ ಪ್ರಶಸ್ತಿ…
ಮಂಗಳೂರು: ಕೇಂದ್ರ ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿರುವ ಸೆಂಟರ್ ಫಾರ್ ಕಲ್ಚರಲ್ ರಿಸೋರ್ಸಸ್ ಎಂಡ್ ಟ್ರೈನಿಂಗ್(ಸಿ. ಸಿ. ಆರ್. ಟಿ.) ವಿಭಾಗದವರು ವರ್ಷಪ್ರತಿ ಸಂದರ್ಶನದ ಮೂಲಕ ಆಯ್ಕೆ ಮಾಡುವ ಪ್ರತಿಷ್ಠಿತ ಕಲ್ಚರಲ್ ಟ್ಯಾಲೆಂಟ್ ಸರ್ಚ್ ಸ್ಕೀಮ್ (ಸಿ. ಟಿ. ಎಸ್. ಎಸ್.) ಇದರ ಜ್ಯೂನಿಯರ್ ವಿಭಾಗದ ಶಿಷ್ಯವೇತನಕ್ಕಾಗಿ ಮಂಗಳೂರಿನ ಅರಳು ಪ್ರತಿಭೆಗಳಾದ ಶುಕೀ ರಾವ್ ಹಾಗೂ ಶಿವಾನಿ ಇವರುಗಳು ಭರತನಾಟ್ಯ ವಿಷಯದಲ್ಲಿ ಅಧ್ಯಯನಕ್ಕಾಗಿ ಆಯ್ಕೆಯಾಗಿದ್ದಾರೆ. ಇವರೀರ್ವರು ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಎಂಡ್ ಕಲ್ಚರಲ್ ಟ್ರಸ್ಟಿ ಇದರ ನಿರ್ದೇಶಕಿ ಡಾ. ಭ್ರಮರಿ ಶಿವಪ್ರಕಾಶ್ ಇವರಲ್ಲಿ ಕಳೆದ ಎಂಟು ವರುಷಗಳಿಂದ ಭರತನಾಟ್ಯವನ್ನು ಅಭ್ಯಸಿಸುತ್ತಿದ್ದು ಕೆನರಾ ಹೈಸ್ಕೂಲ್ ಸಿ. ಬಿ. ಎಸ್. ಇ. ಹಾಗೂ ಎಸ್. ಡಿ. ಎಂ. ಸ್ಕೂಲಿನಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಾಗಿದ್ದಾರೆ.
ಮುಂದೆ ಗುರಿ ಹಿಂದೆ ಗುರು ಇದ್ದರೆ ಸಾಧಕರಿಗೆ ಯಶಸ್ಸು ಸಾಧ್ಯ ಎನ್ನುತ್ತಾರೆ ಅನುಭವಿಗಳು. ಮುನ್ನುಗ್ಗಿ ಮುಂದೆ ಮುಂದೆ ನಡೆಯುವ ಛಲ ಸಾಧಕರಿಗೂ ಇರಬೇಕು. ಇಂತಹ ಒಬ್ಬ ಛಲಗಾರ ಡಾ. ಬಿ. ದೇವೇಂದ್ರಪ್ಪನವರು. ಮುಂದೆ ದಾರಿ ತೋರುವ ಗುರು ಭೌತಿಕವಾಗಿ ಇಲ್ಲದಿದ್ದರೂ, ಗುರು ದ್ರೋಣರ ಮೂರ್ತಿಯನ್ನು ಮುಂದಿಟ್ಟುಕೊಂಡು ಧನುರ್ವಿದ್ಯೆ ಅಭ್ಯಾಸ ಮಾಡಿ ಕರಗತಗೊಳಿಸಿಕೊಂಡಾತ ಏಕಲವ್ಯ. ಇದೇ ರೀತಿಯ ಸಾಧನೆ ಚಿತ್ರದುರ್ಗದ ಮದಕರಿ ನಾಯಕನ ವಂಶಕ್ಕೆ ಸೇರಿದ್ದ ಕಲಾವಿದ ದೇವೇಂದ್ರಪ್ಪನವರದು. 1899 ಜೂನ್ 3ರಂದು ಶಿವಮೊಗ್ಗ ಜಿಲ್ಲೆಯ ಅಯನೂರಿನಲ್ಲಿ ಜನಿಸಿದ ಮಹಾನ್ ಕಲಾವಿದ ಇವರು. ತಂದೆ ಸಂಗೀತ ಮತ್ತು ಭರತನಾಟ್ಯ ಪ್ರವೀಣರಾದ ಬಿ.ಎಸ್. ರಾಮಯ್ಯನವರು, ತಾಯಿ ತುಳಸಮ್ಮ. ತಂದೆಯಿಂದಲೇ ಸಂಗೀತ ಶಿಕ್ಷಣವನ್ನು ಪಡೆದ ಇವರು ಶಾಲಾ ಶಿಕ್ಷಕರಾಗಿ ಉದ್ಯೋಗಕ್ಕೆ ಸೇರಿಕೊಂಡರು. ಸಂಗೀತದಲ್ಲಿ ಆಸಕ್ತಿ, ಶ್ರದ್ಧೆ ಇದ್ದ ಕಾರಣ ತಮ್ಮ ಹೆಚ್ಚಿನ ಸಮಯವನ್ನು ಮನೆಯಲ್ಲಿರುವ ಸಿತಾರ್, ಗೋಟುವಾದ್ಯ, ಪಿಟೀಲು, ಜಲತರಂಗ ಮುಂತಾದ ಸಂಗೀತ ಪರಿಕರಗಳನ್ನು ತಾವೇ ಸ್ವತಃ ಅಭ್ಯಾಸಮಾಡಿ ಪ್ರವೀಣರಾದರು. ಖ್ಯಾತ ಸಂಗೀತಗಾರರಾದ ಬಿಡಾರಂ ಕೃಷ್ಣಪ್ಪನವರ…
ಮಡಿಕೇರಿ : ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ಮೂವರು ಪತ್ರಕರ್ತರು ಭಾಜನರಾಗಿದ್ದಾರೆ ಎಂದು ಕೊಡಗು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಎಂ.ಕೆ.ಆದರ್ಶ್ ತಿಳಿಸಿದ್ದಾರೆ. ಹಿರಿಯ ಪತ್ರಕರ್ತ ಕೆ. ಬಿ.ಮಹಂತೇಶ್ ಅವರ ಸ್ಮರಣಾರ್ಥ ಕೊಡಗು ಪ್ರೆಸ್ ಕ್ಲಬ್ ವತಿಯಿಂದ ನೀಡುವ ಅತ್ಯುತ್ತಮ ಪರಿಣಾಮಕಾರಿ ವರದಿ ಪ್ರಶಸ್ತಿಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ “ರೂ.7 ಕೋಟಿ ವೆಚ್ಚದ ಜರ್ಮನ್ ತಂತ್ರಜ್ಞಾನದ ತಡೆಗೋಡೆ ಪೂರ್ಣಗೊಳ್ಳುವುದು ಎಂದು?’ ಎಂಬ ವರದಿಗೆ ಹೆಚ್.ಜಿ.ರಾಕೇಶ್, ಕೋವರ್ ಕೊಲ್ಲಿ ಇಂದ್ರೇಶ್ ಮತ್ತು ಕುಟುಂಬವರ್ಗ ತಮ್ಮ ತಂದೆ ಬಿ. ವಿ. ಚಂದ್ರಶೇಖರ್ ಹಾಗೂ ತಾಯಿ ಪುಷ್ಪಲತಾ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿ ಪ್ರಶಸ್ತಿಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ “ಸೋರುತಿಹುದು ಮೀನಾಳ ಮನೆಯ ಮಾಳಿಗೆ” ಎಂಬ ವರದಿಗೆ ಕೆ.ಎಂ.ಇಸ್ಮಾಯಿಲ್ ಕಂಡಕರೆ ಹಾಗೂ ಎಂ. ಎನ್. ಚಂದ್ರಮೋಹನ್ ಅವರು ತಮ್ಮ ತಂದೆ ಎಂ. ನಾರಾಯಣ ಹಾಗೂ ತಾಯಿ ಎನ್.ಪದ್ಮಾವತಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಪರಿಸರ ವರದಿ ಪ್ರಶಸ್ತಿಗೆ ಶಕ್ತಿ…
ಮಂಗಳೂರು: ತುಲುವೆರೆ ಕಲ ಸಂಘಟನೆಯ ಎರಡನೇ ‘ವರ್ಸೋಚ್ಚಯ’ ಕಾರ್ಯಕ್ರಮವು ದಿನಾಂಕ 01 ಜೂನ್ 2025ರ ಭಾನುವಾರದಂದು ಉಪ್ಪಳದ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದ ಸಭಾಂಗಣದಲ್ಲಿ ನಡೆಯಿತು. ತುಲುವೆರೆ ಕಲ ಇದರ ಅಧ್ಯಕ್ಷೆಯಾದ ಗೀತಾ ಲಕ್ಷ್ಮೀಶ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ “ಸಾಹಿತ್ಯ ಹಾಗೂ ಪ್ರಕೃತಿ ಒಂದಕ್ಕೊಂದು ಪೂರಕ. ಜಗತ್ತಿನಲ್ಲಿ ಎಲ್ಲೂ ಇಲ್ಲದ ಸಾಂಸ್ಕೃತಿಕ ವೈಶಿಷ್ಟ್ಯ ತುಳುನಾಡಿನಲ್ಲಿದೆ. ಇದನ್ನು ಮುಂದಿನ ಪೀಳಿಗೆಗೆ ದಾಟಿಸುವ ಕಾರ್ಯವಾಗಬೇಕು. ಶಾಸ್ತ್ರ ಹಾಗೂ ಶಸ್ತ್ರಗಳು ಸಾಹಿತ್ಯದಿಂದ ಶಕ್ತಿಯಾಗುತ್ತದೆ. ಸನಾತನ ಸಂಸ್ಕೃತಿ, ಪ್ರಕೃತಿ, ಭಾಷೆ ಹಾಗೂ ಸಾಹಿತ್ಯಕ್ಕೆ ಬೇರ್ಪಡಿಸಲಾಗದ ಬಂಧವಿದೆ. ಇದರ ಉಳಿವಿಗೆ ಪ್ರಯತ್ನ ಅಗತ್ಯ. ತುಳು ಭಾಷೆ ಇಂದು ಸರ್ವವ್ಯಾಪಿಯಾಗಿದೆ. ಭಾಷೆ, ಸಂಸ್ಕೃತಿ ಬಗೆಗಿನ ಅಭಿಮಾನದ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಕರ್ತವ್ಯ” ಎಂದರು. ಹಿರಿಯ ಪತ್ರಕರ್ತ, ಸಾಹಿತಿ ಮಲಾರ್ ಜಯರಾಮ ರೈ, ಮಂಗಳೂರು ವಿಶ್ವವಿದ್ಯಾಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ ಸಂಯೋಜಕರಾದ ಡಾ.ಮಾಧವ…
ಮಡಿಕೇರಿ : ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾದ ಮಡಿಕೇರಿಯ ಲೇಖಕಿ ದೀಪಾಭಾಸ್ತಿಯವರನ್ನು ಅವರ ನಿವಾಸದಲ್ಲಿ ದಿನಾಂಕ 30 ಮೇ 2025ರಂದು ಸನ್ಮಾನಿಸಲಾಯಿತು. ಲೇಖಕಿಯನ್ನು ಕಾಫಿ ಹಾರದ ಮೂಲಕ ಸನ್ಮಾನಿಸಿದ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಮಾತನಾಡಿ “ಲೇಖಕಿ ದೀಪಾಭಾಸ್ತಿಯವರ ಸಾಹಿತ್ಯ ಸಾಧನೆ ಕೊಡಗಿನ ಜನತೆಗೇ ಹೆಮ್ಮೆ ತಂದಿದ್ದು, ಭವಿಷ್ಯದಲ್ಲಿಯೂ ಲೇಖತಿಯ ಯಾವುದೇ ಸಾಹಿತ್ಯ ಪರ ಚಟುವಟಿಕೆಗಳಿಗೆ ಸರ್ಕಾರದ ವತಿಯಿಂದ ಅಗತ್ಯ ನೆರವು ನೀಡಲಾಗುವುದು. ಬೂಕರ್ ಪ್ರಶಸ್ತಿಯು ಅನುವಾದ ಸಾಹಿತ್ಯದ ನಿಜವಾದ ಶಕ್ತಿಯನ್ನು ನಿರೂಪಿಸಿದೆ. ಬೂಕರ್ ಪ್ರಶಸ್ತಿಯಂಥ ಜಗತ್ತಿನಲ್ಲಿ ಸಾಹಿತ್ಯಕ್ಕಾಗಿನ ಶ್ರೇಷ್ಠ ಪ್ರಶಸ್ತಿಯನ್ನು ಮಡಿಕೇರಿಯ ಲೇಖಕಿ ಪಡೆದುಕೊಳ್ಳುವ ಮೂಲಕ ಕೊಡಗು, ಕರ್ನಾಟಕ ಮಾತ್ರವಲ್ಲದೇ ಭಾರತವೇ ಮಡಿಕೇರಿಯತ್ತ ಗಮನ ಹರಿಸುವಂತೆ ದೀಪಾಭಾಸ್ತಿ ಮಾಡಿದ್ದಾರೆ. ಈ ಸಾಹಿತ್ಯ ಸಾಧನೆ ಜಗತ್ತಿನ ಸಾಹಿತ್ಯ ಲೋಕದ ಇತಿಹಾಸದಲ್ಲಿ ಅಚ್ಚಳಿಯದೇ ದಾಖಲಾಗಿದೆ. ಬಾನುಮುಪ್ತಾಕ್ ಅವರ ‘ಎದೆಯ ಹಣತೆ’ ಕೃತಿಯನ್ನು ‘ಹಾರ್ಟ್ ಲ್ಯಾಂಗ್’ ಎಂಬ ಆಂಗ್ಲ ಭಾಷಾ ಕೃತಿಗೆ ಅನುವಾದಿಸಲು ಪಟ್ಟಿರಬಹುದಾದ ಶ್ರಮ ಊಹೆಗೂ ನಿಲುಕದ್ದು, ಮಡಿಕೇರಿಯ ಪರಿಸರದ ನಡುವಿನ…
ಹುಬ್ಬಳ್ಳಿ: ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ ಕೊಡಮಾಡುವ ‘ವಿಭಾ ಸಾಹಿತ್ಯ ಪ್ರಶಸ್ತಿ-2025’ಕ್ಕಾಗಿ ಕನ್ನಡದ ಕವಿ/ಕವಯಿತ್ರಿಯರಿಂದ ಮೂವತ್ತಕ್ಕೂ ಹೆಚ್ಚು, ಐವತ್ತರ ಒಳಗಿರುವ ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವಿತೆಗಳು, ಚುಟುಕು, ಹನಿಗವನಗಳು ಬೇಡ. ಈ ಪ್ರಶಸ್ತಿಯು ರೂಪಾಯಿ 10,000 ನಗದು ಮತ್ತು ಫಲಕವನ್ನು ಒಳಗೊಂಡಿದೆ. ಆಸಕ್ತರು ತಮ್ಮ ಹೊಸ ಕವಿತೆಗಳ ಹಸ್ತಪ್ರತಿಯನ್ನು ಸ್ಪರ್ಧೆಗೆ ಕಳುಹಿಸಲು ವಿನಂತಿಸಲಾಗಿದೆ. ಯಾವುದೇ ಕಾರಣಕ್ಕೂ ಹಸ್ತಪ್ರತಿಯನ್ನು ಹಿಂದಿರುಗಿಸಲಾಗುವುದಿಲ್ಲ. ಮೇಲ್ ಮೂಲಕ ಕಳಿಸುವದಕ್ಕಿಂತ ಡಿಟಿಪಿ ಮಾಡಿದ ಹಸ್ತಪ್ರತಿ ಕಳಿಸಿಕೊಡಬೇಕು. ಬರವಣಿಗೆ ಮಾಡಿದ ಹಸ್ತಪ್ರತಿಯನ್ನೂ ಕಳಿಸಬಹುದು. ಹಸ್ತಪ್ರತಿ ಕಳುಹಿಸಲು ಜೂನ್ 30 ಕೊನೆಯ ದಿನಾಂಕ. ಸುನಂದಾ ಮತ್ತು ಪ್ರಕಾಶ ಕಡಮೆ, ಸಂಚಾಲಕರು, ವಿಭಾ ಸಾಹಿತ್ಯ ಪ್ರಶಸ್ತಿ-2025, ನಂ.90, ‘ನಾಗಸುಧೆ ಜಗಲಿ’ 6/ಬಿ ಕ್ರಾಸ್, ಕಾಳಿದಾಸನಗರ, ವಿದ್ಯಾನಗರ ವಿಸ್ತೀರ್ಣ ಹುಬ್ಬಳ್ಳಿ- 580031, ದೂ.ಸಂ. 9380613683, 9845779387ಗೆ ಹಸ್ತಪ್ರತಿಯನ್ನು ಕಳುಹಿಸಿಕೊಡಬೇಕು.
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ 141ನೇ ಜಯಂತ್ಯುತ್ಸವ ಮತ್ತು ಶ್ರೀಮತಿ ಮಹಾಲಕ್ಷ್ಮಿ ಟಿ. ಕೃಷ್ಣರಾಜು ದತ್ತಿ, ಶ್ರೀಮತಿ ವಿ. ಗೌರಮ್ಮ ಗಂಗಾಧರಯ್ಯ ಮಕ್ಕಳ ಸಿಬ್ಬಂದಿ ಸೇವಾ ದತ್ತಿ, ಶ್ರೀಮತಿ ಎಸ್. ರಮಾದೇವಿ ವಿಶ್ವೇಶ್ವರಯ್ಯ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 04 ಜೂನ್ 2025ರ ಮಂಗಳವಾರ ಸಂಜೆ 5-00 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಚುನಾವಣಾ ಆಯುಕ್ತರಾದ ನ್ಯಾಯಾಧೀಶ ಜಿ.ಎಸ್. ಸಂಗ್ರೇಶಿ ಇವರು ಮಾಡಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಇವರ ಕುರಿತು ಹಂಪಿ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ ವಿಶೇಷ ಉಪನ್ಯಾಸ ನೀಡಿಲಿದ್ದಾರೆ. ದತ್ತಿದಾನಿಗಳಾದ ಟಿ. ಕೃಷ್ಣರಾಜು ಮತ್ತು ಡಾ. ಎಂ.ಜಿ. ನಾಗರಾಜು ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ. ಶ್ರೀಮತಿ ಮಹಾಲಕ್ಷ್ಮಿ ಟಿ. ಕೃಷ್ಣರಾಜು ಸವಿನೆನಪಿನ…
ಸಾಗರ : ಯಕ್ಷಗಾನ ತರಬೇತುದಾರರಿಂದ ಆಸಕ್ತ ಮಕ್ಕಳಿಗೆ ಯಕ್ಷಗಾನ ತರಬೇತಿಯು ಸಾಗರ ತಾಲೂಕಿನಲ್ಲಿ ದಿನಾಂಕ 09 ಜೂನ್ 2025ರಂದು ಸಂಜೆ 5-00 ಗಂಟೆಗೆ ಸಾಗರದ ಶಿವಗೋಪಾಲಕೃಷ್ಣ ದೇವಸ್ಥಾನದಲ್ಲಿ ಉದ್ಘಾಟನೆಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಈಗಾಗಲೇ ತರಬೇತಿ ಪಡೆದ ವಿದ್ಯಾರ್ಥಿಗಳಿಂದ ಯಕ್ಷಗಾನ ನೃತ್ಯ ಪ್ರದರ್ಶನ ನಡೆಯಲಿದೆ. ಹೆಚ್ಚಿನ ಮಾಹಿತಿ ಮತ್ತು ನೋಂದಾವಣೆಗೆ ಎಸ್.ಸಿ. ಸೈದೂರ್ 9480289724 ಮತ್ತು ಶಿವು ಶಿರಳಿಗೆ 9900394991 ಸಂಖ್ಯೆಯನ್ನು ಆಸಕ್ತ ಮಕ್ಕಳು ಸಂಪರ್ಕಿಸಬಹುದು.