Author: roovari

ಮುಳ್ಳೇರಿಯ : ಕಾರಡ್ಕ ಸರಕಾರಿ ಶಾಲೆಯ ಕನ್ನಡ ಮಾಧ್ಯಮದ 9ನೇ ತರಗತಿಯ ವಿದ್ಯಾರ್ಥಿಗಳೇ ಹೊರತಂದಿರುವ ‘ರಜಾ ಮಜಾ’ ಡಿಜಿಟಲ್ ರೂಪದ ಪುಸ್ತಕ ಬಿಡುಗಡೆ ಕಾರ್ಯಕ್ರಮ ದಿನಾಂಕ 20-06-2024ರಂದು ನಡೆಯಿತು. ಕಾರಡ್ಕ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಹಿರಿಯ ಅಧ್ಯಾಪಿಕೆ ಅಂಬಿಕಾ ಟೀಚರ್ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ “ಬೇಸಿಗೆ ರಜಾ ಕಾಲದ ಸವಿಗಳನ್ನು ಬರವಣಿಗೆ ರೂಪಕ್ಕಿಳಿಸಿರುವುದು ಒಳ್ಳೆಯ ವಿಚಾರವಾಗಿದೆ. ಶಿಕ್ಷಕರ ಮಾರ್ಗದರ್ಶನದಲ್ಲಿ ಸಂಪೂರ್ಣವಾಗಿ ವಿದ್ಯಾರ್ಥಿಗಳೇ ಶ್ರಮವಹಿಸಿ ಈ ಡಿಜಿಟಲ್ ಪುಸ್ತಕವನ್ನು ಹೊರ ತಂದಿರುವುದು ಶ್ಲಾಘನೀಯ” ಎಂದು ಹೇಳಿದರು. ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಕಥೆ, ಕವಿತೆ, ಓದಿನ ಟಿಪ್ಪಣಿ, ಪ್ರವಾಸ ಕಥನ, ಪ್ರಬಂಧ, ನಾಟಕ ಮೊದಲಾದವುಗಳನ್ನು ಈ ಕೃತಿಯು ಒಳಗೊಂಡಿದೆ. 8ನೇ ತರಗತಿಯ ದೇವಿಕಾ ಅವರು ಓದಿನ ಮಹತ್ವದ ಬಗ್ಗೆ ತಿಳಿಸಿದರು. ಸಹಶಿಕ್ಷಕರಾದ ಡಾ. ಶ್ರೀಶ ಕುಮಾರ, ರತೀಶ, ಚೈತ್ರಾ, ಚೈತ್ರಾ ನಾಯಕ್, ಅಖಿಲಾ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಮಂಜುಳಾ ಸ್ವಾಗತಿಸಿ, ಭೂಮಿಕಾ ವಂದಿಸಿ, ಸಹನಾ ನಿರೂಪಿಸಿದರು. ವಾಚನ ವಾರಾಚರಣೆಯ ವಿಶೇಷ…

Read More

‘ಕವಚ’ ಎಂಬ ಕೃತಿಯು ರಾಧಕೃಷ್ಣ ಕಲ್ಚಾರ್ ಇವರ ಎರಡನೇ ಕಾದಂಬರಿಯಾಗಿದೆ. ಮಹಾಭಾರತದ ಪಾತ್ರಗಳ ಪೈಕಿ ಮುಂಚೂಣಿಯಲ್ಲಿರುವ ದಿಟ್ಟ ನಾಯಕರಲ್ಲಿ ಒಬ್ಬನಾಗಿರುವ ಕರ್ಣನ ಬದುಕಿನ ಕುರಿತು ಹೆಣೆದ ವಿಚಾರಗಳು ಇಲ್ಲಿನ ಕಥಾವಸ್ತು. ಕ್ಷತ್ರಿಯನಾಗಿ ಹುಟ್ಟಿದರೂ ಕ್ಷತ್ರಿಯನಾಗಿ ಬದುಕದೆ ‘ಸೂತಸುತ’ ಎಂಬ ಹಣೆಪಟ್ಟಿಯನ್ನು ಹೊತ್ತು ಅನುಭವಿಸಿದ ತುಮುಲಗಳನ್ನು ಪ್ರಸ್ತುತ ಕಾದಂಬರಿಯಲ್ಲಿ ಕಾಣಬಹುದು. ‘ಯಾರದೋ ತೋಳುಗಳು ನನ್ನನ್ನೆತ್ತಿಕೊಂಡವು’ ಎಂಬ ಸ್ವಗತದಿಂದ ತೊಡಗುವ ಕಾದಂಬರಿ ಸ್ವಗತದ ಹಾದಿಯಲ್ಲಿ ಮುಂದುವರೆಯುತ್ತಾ ಸಾಗುವುದು ಕಾದಂಬರಿಯ ವೈಶಿಷ್ಟ್ಯವಾಗಿದೆ. ಪೌರಾಣಿಕ ಪಾತ್ರವನ್ನು ಪ್ರಥಮ ಪುರುಷದಲ್ಲಿ ನಿರೂಪಿಸದೆ ಉತ್ತಮ ಪುರುಷ ವಾಚಕದಲ್ಲಿ ಪರಿಭಾವಿಸಿ ಪಾತ್ರಕ್ಕೊಪ್ಪುವ ಭಾವಗಳನ್ನು ನಿರಂತರವಾಗಿ ವಿವರಿಸುವುದು ತ್ರಾಸದಾಯಕವಾದರೂ ಲೇಖಕರು ಅದರಲ್ಲಿ ಗೆದ್ದಿದ್ದಾರೆ. ದೂರ್ವಾಸ ಮುನಿಗಳನ್ನು ಸತ್ಕರಿಸಿದುದರ ಫಲವಾಗಿ ವರದ ರೂಪದಲ್ಲಿ ಕುಂತಿಗೆ ಅನುಗ್ರಹದ ರೂಪದಲ್ಲಿ ದೊರಕಿದ ಮಂತ್ರಗಳನ್ನು ತೀವ್ರ ಕೌತುಕದಿಂದ ಪರೀಕ್ಷಿಸಲು ಮುಂದಾಗಿದ್ದೇ ಭವಿಷ್ಯದಲ್ಲಿ ಆಕೆಯೂ ಸೇರಿದಂತೆ ಆಕೆಯ ಪುತ್ರರು ಎದುರಿಸಿದ ಹಲವು ಘಟನೆಗಳಿಗೆ ಕಾರಣವಾಯಿತು. ಮೂಡಣದಲ್ಲಿ ಮಿಂಚುತ್ತಿದ್ದ ಸೂರ್ಯನಿಂದ ಪಡೆದ ಕಂದನನ್ನು ಸಮಾಜದ ಕಣ್ಣುಗಳಿಗೆ ಹೆದರಿ, ನದಿಯಲ್ಲಿ ತೇಲಿ ಬಿಟ್ಟ…

Read More

ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ನಗರ ಘಟಕ ಇದರ ಮುಖಾಂತರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಶಾಲೆಗಳಲ್ಲಿ ನಡೆಯುವ ಯಕ್ಷಧ್ರುವ – ಯಕ್ಷ ಶಿಕ್ಷಣ ತರಗತಿ ವತಿಯಿಂದ ‘ಉಚಿತ ಯಕ್ಷಗಾನ ತರಬೇತಿ’ಯ ಉದ್ಘಾಟನಾ ಸಮಾರಂಭವನ್ನು ಶಕ್ತಿನಗರ ನಾಲ್ಯಪದವು ಇಲ್ಲಿರುವ ಪಿ.ಎಂ. ಶ್ರೀ ಕುವೆಂಪು ಶತಮನೋತ್ಸವ ಉ.ಮಾ.ಹಿ.ಪ್ರಾ. ಶಾಲೆಯಲ್ಲಿ ದಿನಾಂಕ 22-06-2024ರಂದು ಆಯೋಜಿಸಲಾಗಿದೆ. ಈ ಸಮಾರಂಭವನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಸ್ಥಾಪಕಾಧ್ಯಕ್ಷರಾದ ಶ್ರೀ ಪಟ್ಲ ಸತೀಶ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು ಇವರು ಉದ್ಘಾಟನೆ ಮಾಡಲಿದ್ದಾರೆ.

Read More

ಬೆಳ್ತಂಗಡಿ : ಕರ್ನಾಟಕ ಗಮಕ ಕಲಾ ಪರಿಷತ್ತಿನ ಮನೆ ಮನೆ ಗಮಕ ಕಾರ್ಯಕ್ರಮವು ದಿನಾಂಕ 20-06-2024ರಂದು ಬೆಳ್ತಂಗಡಿ ಹಳೆಕೋಟೆ ಶ್ರೀ ಶಿರಡಿ ಸಾಯಿ ಸತ್ಯಸಾಯಿ ಕ್ಷೇತ್ರದಲ್ಲಿ ಶ್ರೀ ಸಿ.ಹೆಚ್. ಪ್ರಭಾಕರ ಇವರ ವತಿಯಿಂದ ನಡೆಯಿತು. ರಾಮಾಯಣದ ‘ಸುಂದರ ಕಾಂಡ’ ಭಾಗದ ವಾಚನವನ್ನು ಕುಮಾರಿ ಜಯಶ್ರೀಯವರು ಮತ್ತು ವ್ಯಾಖ್ಯಾನವನ್ನು ಮಧೂರು ಮೋಹನ ಕಲ್ಲೂರಾಯ ಇವರು ನಡೆಸಿಕೊಟ್ಟರು. ತಾಲೂಕು ಅಧ್ಯಕ್ಷ ಶ್ರೀ ರಾಮಕೃಷ್ಣ ಭಟ್ ಬಳಂಜ, ಕಾರ್ಯದರ್ಶಿ ಶ್ರೀಮತಿ ಮೇಘ ಅಶೋಕ್ ಕುಮಾರ್ ಮತ್ತು ಹಲವು ಗಣ್ಯರು ಉಪಸ್ಥಿತರಿದ್ದರು.

Read More

ಉಡುಪಿ : ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಮಂದಾರ (ರಿ.) ಇದರ ಮಕ್ಕಳ ರಂಗತಂಡ ‘ತೋರಣ’ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗಾಗಿ ‘ರಂಗ ತರಬೇತಿ’ಯನ್ನು ಕಪಿಲೇಶ್ವರ ದೇವಸ್ಥಾನದ ಹತ್ತಿರ ಸಾಲಿಕೇರಿ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಜುಲೈ ಮೊದಲನೇ ವಾರದಿಂದ ಆರಂಭವಾಗಲಿರುವ ಈ ರಂಗ ತರಬೇತಿ ತರಗತಿಯಲ್ಲಿ ಅನುಭವಿ ರಂಗಕರ್ಮಿಗಳಿಂದ ತರಬೇತಿ ನೀಡಲಾಗುವುದು. 8ರಿಂದ 18 ವರ್ಷ ವಯಸ್ಸಿನ ಮಿತಿಯಾಗಿದ್ದು, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕ ತರಬೇತಿ ಇದಾಗಿದೆ. ಪ್ರತಿ ಭಾನುವಾರ ಬೆಳಗ್ಗೆ 9ರಿಂದ 11ರವೆರೆಗೆ ತರಬೇತಿ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 9972117300 ಮತ್ತು 9880470301.

Read More

ಮಂಗಳೂರು : ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಪಳ್ಳಿ ನಿಂಜೂರು ಘಟಕದ ವತಿಯಿಂದ ಪಳ್ಳಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಯಕ್ಷ ಶಿಕ್ಷಣ ನಾಟ್ಯ ತರಬೇತಿ ಶಿಕ್ಷಣ ಅಭಿಯಾನ ಕಾರ್ಯಕ್ರಮವನ್ನು ದಿನಾಂಕ 19-06-2024ರಂದು ಪಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಮ್ಮೂರಿನ ಬಹುಮೇಳಗಳ ವ್ಯವಸ್ಥಾಪಕರಾದ ಪಳ್ಳಿ ಕಿಶನ್ ಹೆಗ್ಡೆ ಉದ್ಘಾಟಿಸಿದರು. ವೇದಿಕೆಯಲ್ಲಿ ಪಳ್ಳಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರಾದ ಜಗದೀಶ್ ಹೆಗ್ಡೆ ಪಳ್ಳಿ ಪೇಜಕೊಡಂಗೆ, ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಷಾ ಅಂಚನ್, ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಪ್ರಭಾಕರ್ ಬಂಗೇರ, ಪಟ್ಲ ಫೌಂಡೇಶನ್ ಪಳ್ಳಿ ನಿಂಜೂರು ಘಟಕದ ಅಧ್ಯಕ್ಷರು ಸುನಿಲ್ ಬಿ. ಶೆಟ್ಟಿ, ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಕಾಂತ್ ಪ್ರಭು, ಮನೋಹರ್ ಶೆಟ್ಟಿ, ರಘುನಾಥ್ ಶೆಟ್ಟಿ, ಜಯರಾಮ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ಕಾಂತೆಶ್ ಶೆಟ್ಟಿ, ವಿಜಯ ಎಂ. ಶೆಟ್ಟಿ ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ನಾಗರತ್ನ ಹಾಗೂ ಯಕ್ಷ ಗುರುಗಳಾದ…

Read More

ಪುತ್ತೂರು : ಉರ್ವದಲ್ಲಿರುವ ನಾಟ್ಯಾರಾಧನಾ ಕಲಾ ಕೇಂದ್ರ ಇದರ ತ್ರಿಂಶೋತ್ಸವದ ಅಂಗವಾಗಿ ಅರ್ಪಿಸುವ ‘ನೃತ್ಯಾಮೃತ -5’ ಸರಣಿ ನೃತ್ಯ ಕಾರ್ಯಕ್ರಮವು ದಿನಾಂಕ 23-06-2024ರಂದು ಸಂಜೆ 3-30 ಗಂಟೆಗೆ ಪುತ್ತೂರು ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ನಡೆಯಲಿದೆ. ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಮತ್ತು ನಾಟ್ಯಾರಾಧನಾ ತ್ರಿಂಶೋತ್ಸವ ವಿದ್ಯಾರ್ಥಿ ಸಮಿತಿಯ ಸಹಕಾರದೊಂದಿಗೆ ಪುತ್ತೂರು ದರ್ಬೆಯ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಇವರ ‘ನೃತ್ಯಾಂತರಂಗ -112’ ಕಾರ್ಯಕ್ರಮದ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮವನ್ನು ಖ್ಯಾತ ವಾಸ್ತು ಇಂಜಿನಿಯರ್ ಮತ್ತು ಪುತ್ತೂರಿನ ನಗರ ಸಭಾ ಸದಸ್ಯರಾದ ಶ್ರೀ ಪಿ.ಜಿ. ಜಗನ್ನಿವಾಸ ರಾವ್ ಇವರು ಉದ್ಘಾಟಿಸಲಿದ್ದು, ಯಕ್ಷಗಾನ ಕಲಾವಿದ ಅರ್ಥಧಾರಿ ಶ್ರೀ ಹರೀಶ ಬಳಂತಿಮೊಗರು ಅವರ ಅಧ್ಯಕ್ಷತೆಯಲ್ಲಿ ‘ಹಾಡೊಂದು ಭಾವ ಹಲವು’ ಕಾರ್ಯಕ್ರಮ ಜರುಗಲಿದೆ. ಪುತ್ತೂರಿನ ವಿಶ್ವಕಲಾ ನಿಕೇತನ ನೃತ್ಯ ಶಾಲೆಯ ನಿರ್ದೇಶಕಿ ವಿದುಷಿ ನಯನ ವಿ. ರೈ, ನೃತ್ಯಾಂಜಲಿ ಜ್ಯೋತಿಗುಡ್ಡೆಯ ನಿರ್ದೇಶಕಿ ವಿದುಷಿ ಮಲ್ಲಿಕಾ ವೇಣುಗೋಪಾಲ್, ಕೃಷಿಕರಾದ ಶ್ರೀಮತಿ ಚಿತ್ರಾ ಭಿಡೆ ಹಾಗೂ ನಾಟ್ಯಾರಾಧನಾದ ಹಿರಿಯ ವಿದ್ಯಾರ್ಥಿ ವಿದ್ವಾನ್…

Read More

ಧಾರವಾಡ : ಕನ್ನಡದಲ್ಲಿ ಲಲಿತ ಪ್ರಬಂಧಗಳನ್ನು ಬರೆಯುತ್ತಿರುವ ಉದಯೋನ್ಮುಖ ಲೇಖಕ ಹಾಗೂ ಲೇಖಕಿಯರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಯುವ ವಿಮರ್ಶಕ ವಿಕಾಸ ಹೊಸಮನಿ ಅವರ ಸಂಪಾದಕತ್ವದಲ್ಲಿ ಆಯ್ದ ಲಲಿತ ಪ್ರಬಂಧಗಳ ಸಂಕಲನವೊಂದನ್ನು ಹೊರ ತರಲಾಗುತ್ತಿದ್ದು, ಆಸಕ್ತ ಬರಹಗಾರರು ಲಲಿತ ಪ್ರಬಂಧಗಳನ್ನು ಕಳುಹಿಸಬಹುದು. ನಿಯಮಗಳು * ಬರಹಗಾರರಿಗೆ ಮುಕ್ತ ಪ್ರವೇಶವಿದ್ದು ಪ್ರವೇಶ ಶುಲ್ಕವಿರುವುದಿಲ್ಲ. * ಬರಹದ ಗುಣಮಟ್ಟವೊಂದೇ ಆಯ್ಕೆಯ ಮಾನದಂಡ. * ಸಂಕಲನದಲ್ಲಿ 25-30 ಪ್ರಬಂಧಗಳನ್ನು ಮಾತ್ರ ಪ್ರಕಟಿಸಲಾಗುವುದು. * ಒಬ್ಬರು ಒಂದು ಪ್ರಬಂಧವನ್ನು ಮಾತ್ರ ಕಳುಹಿಸಬಹುದು. * ಸ್ವತಂತ್ರ ರಚನೆಗಳಿಗೆ ಮಾತ್ರ ಅವಕಾಶವಿದೆ. ಅನುವಾದ, ಅನುಸೃಷ್ಟಿ ಮತ್ತು ರೂಪಾಂತರ ಮಾಡಿದ ಪ್ರಬಂಧಗಳಿಗೆ ಅವಕಾಶವಿಲ್ಲ. * ಯಾವುದಾದರೂ ಪತ್ರಿಕೆ ಅಥವಾ ವಿಶೇಷಾಂಕದಲ್ಲಿ ಪ್ರಕಟವಾದ ಪ್ರಬಂಧವನ್ನು ಪರಿಗಣಿಸಲಾಗುವುದು. ಆದರೆ ಪುಸ್ತಕ ರೂಪದಲ್ಲಿ ಪ್ರಕಟವಾದ ಪ್ರಬಂಧಗಳಿಗೆ ಅವಕಾಶವಿಲ್ಲ. * ಪ್ರಬಂಧವು 12 ಫಾಂಟ್ ಸೈಜಿನಲ್ಲಿ 2500 ಪದಗಳ ಮಿತಿಯಲ್ಲಿರಬೇಕು. * ಲೇಖಕ/ಕಿಯರ ಪರಿಚಯ, ಪೂರ್ಣ ವಿಳಾಸ ಮತ್ತು ಒಂದು ಭಾವಚಿತ್ರವನ್ನು ಪ್ರತ್ಯೇಕವಾಗಿ ಕಳುಹಿಸಬೇಕು. * ಪ್ರಬಂಧಗಳನ್ನು ಕಳುಹಿಸಲು…

Read More

ಬದಿಯಡ್ಕ: ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ‘ವಾಚನಾ ವಾರಾಚರಣೆ’ ಕಾರ್ಯಕ್ರಮವು ದಿನಾಂಕ 19-06-2024ರ ಬುಧವಾರದಂದು ಬದಿಯಡ್ಕ ಪೆರಡಾಲದ ನವಜೀವನ ಪ್ರೌಢಶಾಲೆಯಲ್ಲಿ ಪ್ರಾರಂಭಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾಹಿತಿ ಹಾಗೂ ಪತ್ರಕರ್ತರಾದ ವಿರಾಜ್ ಅಡೂರು “ಆಧುನಿಕ ದೃಶ್ಯ ಮಾಧ್ಯಮಗಳಿಂದ ದೊರೆಯುವ ಜ್ಞಾನಕ್ಕಿಂತ ಓದುವಿಕೆಯಿಂದ ದೊರೆಯುವ ಜ್ಞಾನವು ಪ್ರಭಾವಶಾಲಿ. ಓದುವಿಕೆಯಿಂದ ಕೆಟ್ಟವರಿಲ್ಲ. ಓದುವಿಕೆಯಿಂದ ಗೆದ್ದವರೇ ಎಲ್ಲ. ಓದುಗರ ಸಂಗವೇ ಸಿಹಿಜೇನ ರಸಗುಲ್ಲ.” ಎಂದು ಹೇಳಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕಿ ಮಿನಿ ಟೀಚರ್ ಮಾತನಾಡಿ “ಸಾಮಾಜಿಕವಾಗಿ ಕಾಣುವ ಒಳಿತು ಕೆಡುಕುಗಳನ್ನು ಮೌಲೀಕರಿಸುವ ಜ್ಞಾನವು ನಿರಂತರ ಓದುವಿಕೆಯಿಂದ ಸಿದ್ಧಿಸುತ್ತದೆ. ಮಕ್ಕಳಲ್ಲಿ ಓದುವ ಆಸಕ್ತಿಯು ವಾಚನಾ ವಾರಕ್ಕೆ ಸೀಮಿತವಾಗದೆ ನಿರಂತರವಾಗಿ ಇರಬೇಕು.” ಎಂದು ಹೇಳಿದರು. ವಿದ್ಯಾರಂಗದ ಸಂಚಾಲಕಿ ಪುಂಡೂರು ಪ್ರಭಾವತಿ ಕೆದಿಲಾಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಭೆಯಲ್ಲಿ ಶಿಕ್ಷಕರಾದ ನಿರಂಜನ ಮಾಸ್ತರ್, ಜ್ಯೋತ್ಸ್ನಾ ಟೀಚರ್, ವಿದ್ಯಾ ಟೀಚರ್, ರಾಜೇಶ್ ಅಗಲ್ಪಾಡಿ, ಕೃಷ್ಣ ಕುಮಾರ್, ವಿದ್ಯಾರಂಗದ ಕಾರ್ಯದರ್ಶಿ ಶರ್ವಾಣಿ, ಜತೆ ಕಾರ್ಯದರ್ಶಿ ಚಿರಂಜೀವಿ ಮೊದಲಾದವರು…

Read More

ಉಡುಪಿ : ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ ಉಡುಪಿ ಇವರ ಆಶ್ರಯದಲ್ಲಿ ಪ್ರತಿಷ್ಠಿತ ಯಕ್ಷರಂಗ ಕಲಾ ಸಂಸ್ಥೆ, ಶ್ರೀ ಮಿತ್ರ ಯಕ್ಷಗಾನ ಮಂಡಳಿ ಸರಳೇಬೆಟ್ಟು, ಶ್ರೀಮಿತ್ರ ಕಲಾನಿಕೇತನ ಟ್ರಸ್ಟ್ ಸರಳೇಬೆಟ್ಟು, ಶ್ರೀ ಯಕ್ಷ ಮಿತ್ರ ಯಕ್ಷಗಾನ ತರಬೇತಿ ಕೇಂದ್ರ ಸರಳೇಬೆಟ್ಟು, ರಸಿಕರತ್ನ ವಿಟ್ಲ ಜೋಶಿ ಪ್ರತಿಷ್ಠಾನ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ಇವರ ಸಯುಕ್ತ ಆಶ್ರಯದಲ್ಲಿ ಪ್ರಶಸ್ತಿ ಪ್ರದಾನ ಮತ್ತು 41ನೇ ವಾರ್ಷಿಕೋತ್ಸವ ಸಂಮಾರಂಭವು ದಿನಾಂಕ 16-04-2024 ರಂದು ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಮಾಜ ಸೇವಕಿ ತೋನ್ಸೆ ಗೀತಾ ಮಂಜುನಾಥ ಪೈ ಸ್ಮಾರಕ ‘ಶ್ರೀಮಿತ್ರ ವೈಭವ’ ಪ್ರಶಸ್ತಿಯನ್ನು ಖ್ಯಾತ ಸಂಗೀತ ವಿದುಷಿ ಶ್ರೀಮತಿ ಉಷಾ ಹೆಬ್ಬಾರ್ ಮಣಿಪಾಲ ಇವರಿಗೆ ನೀಡಿ ಗೌರವಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು, ಪಳ್ಳಿ ಕಿಶನ್ ಹೆಗ್ಡೆ, ತಲ್ಲೂರು ಶಿವರಾಮ ಶೆಟ್ಟಿ, ಭುವನ ಪ್ರಸಾದ್ ಹೆಗ್ಡೆ, ಎಚ್. ಪ್ರಕಾಶ್ ಶಾನ್ ಭಾಗ್, ಎಸ್…

Read More