Author: roovari

ಪುತ್ತೂರು : ರಾಸಾ ಕನ್ನಡ ಮತ್ತು ಕಲಾ ಸಂಸ್ಕೃತಿ ಚಾರಿಟೇಬಲ್ ಟ್ರಸ್ಟ್ (ರಿ.) ಮತ್ತು ರಾಸಾ ಪಬ್ಲಿಕೇಷನ್ಸ್ ಆಯೋಜಿಸಿದ ಕನ್ನಡ ಸಾಹಿತ್ಯ ಕವಿಗೋಷ್ಠಿ, ‘ಕರ್ನಾಟಕ ಸೇವಾರತ್ನ ಪ್ರಶಸ್ತಿ’ 2024 ಪ್ರದಾನ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ದಿನಾಂಕ 07-04-2024ರಂದು ಪುತ್ತೂರಿನ ನೆಹರು ನಗರದಲ್ಲಿರುವ ಸುದಾನ ವಸತಿ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಉಮೇಶ್ ನಾಯಕ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ರಘುನಾಥ ಉಪಾಧ್ಯಾಯ ಹಾಗೂ ರಾಸಾ ಕನ್ನಡ ಮತ್ತು ಕಲಾ ಸಂಸ್ಕೃತಿ ಚಾರಿಟೇಬಲ್ ಟ್ರಸ್ಟ್ ಇದರ ಸಂಸ್ಥಾಪಕರಾದ ರಾಸಾ ಆರ್. ಈಶ್ವರ, ಅಭಯ್ ಇವರು ಗಿಡಕ್ಕೆ ನೀರು ಹಾಕುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಚಿತ್ರದುರ್ಗದ ಶ್ರೀ ಅನಿತಾ ಲಕ್ಷ್ಮೀ ಆಚಾರ್ಯ, ಬಾಲ ಯೋಗಪಟು ಸುಬ್ರಹ್ಮಣ್ಯದ ಕುಮಾರಿ ಗೌರಿತಾ ಕೆ.…

Read More

ತೀರ್ಥಹಳ್ಳಿ : ಆರಗ ಸಮೀಪದ ಹೀರೆಸರ ಸರ್ಜಾ ವಸಂತರಾವ್ ಅವರ ಮನೆಯಂಗಳದಲ್ಲಿ ದಿನಾಂಕ 06-04-2024ರಂದು ಸಂಜೆ ‘ಮನೆ ಅಂಗಳದಲ್ಲಿ ಮಾತುಕತೆ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಪ್ರೊ. ಡಿ.ಎಸ್. ಸೋಮಶೇಖರ್ “ವಾಸ್ತು ಶಿಲ್ಪ, ವಿಜ್ಞಾನ, ಚಿಂತನ ಮಂಥನಗಳ ಪರಿಣಾಮ ಬಹುಬಗೆಯ ಚಟುವಟಿಕೆಗಳು ಸಂಸ್ಕೃತಿಯ ಚೌಕಟ್ಟಿಗೆ ಸೇರಿಸಿಕೊಳ್ಳುತ್ತದೆ. ಇದು ನಮ್ಮ ಅಂತರಂಗದ ಸೌಖ್ಯವನ್ನು ಹೆಚ್ಚಿಸುವ ಕೆಲಸ. ನಾಗರಿಕತೆ ನಮ್ಮ ಭೌತಿಕವಾದ ಅನುಕೂಲತೆಗಳನ್ನು ಹೆಚ್ಚಿಸಿಕೊಳ್ಳವ ಮುಖೇನ ಈ ಬದುಕನ್ನು ಹೆಚ್ಚು ಸುಖಕರವಾಗಿ ನಡೆಸುವುದು ಹೇಗೆ ಎಂದು ಯೋಚನೆ ಮಾಡಿಕೊಳ್ಳುವುದು ಆಗಿದೆ. ಸಾಮಾಜಿಕ ಕಳಕಳಿಯ ಚಿಂತಕರಾದ ಟಾಯಂಬಿ ಮತ್ತು ಸ್ಪೆನ್‌ಲರ್ ಅವರ ಕೃತಿಗಳು ನಮ್ಮ ಕಣ್ಣು ತೆರೆಸುವಂತಾಗಬೇಕು. ಹುಟ್ಟಿದ ಎಲ್ಲ ನಾಗರೀಕತೆಗಳು ವಿಕಸನವಾಗಲಿಲ್ಲ. ಅವರು ಗುರುತಿಸಿರುವ 28ರಲ್ಲಿ ಕೇವಲ 8 ಸಂಸ್ಕೃತಿಗಳು ಮಾತ್ರ ಉಳಿದಿವೆ. ಅದರಲ್ಲಿ ನಮ್ಮ ಭಾರತೀಯ ಸಂಸ್ಕೃತಿಯೂ ಒಂದು. ಜನಾಂಗೀಯವಾದ ವಿಚಾರಗಳು ನಾಗರೀಕತೆಯ ಹುಟ್ಟಿಗೆ ಕಾರಣವಲ್ಲ. ಕಗ್ಗತ್ತಲ ಖಂಡ ಆಫ್ರಿಕ ಅತ್ಯಂತ ಫಲವತ್ತಾದ ಖಂಡ. ಆದರೂ ನಾಗರಿಕತೆ ಅಲ್ಲಿ…

Read More

ಸುಳ್ಯ : ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್ ಇಲ್ಲಿ ಕಾರ್ಯಾಚರಿಸುತ್ತಿರುವ ರಂಗ ಮಯೂರಿ ಕಲಾ ಶಾಲೆಯ ಆಯೋಜನೆಯಲ್ಲಿ 5ನೇ ವರ್ಷದ ‘ಬಣ್ಣ’ ರಾಜ್ಯ ಮಟ್ಟದ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭವು ಮಹಾವಿಷ್ಣು ಸಭಾ ಭವನದಲ್ಲಿ ದಿನಾಂಕ 09-04-2024ರಂದು ನಡೆಯಿತು. ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ಅಧ್ಯಕ್ಷತೆ ವಹಿಸಿದ್ದರು. ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟ ಪೂರ್ವ ಅಧ್ಯಕ್ಷ ಉಮೇಶ್ ಪಿ.ಕೆ.ಯವರು ದೇಸಿಯ ಗ್ರಾಮೀಣ ಸೊಗಡಿನ ಆಟ ಅಡಿಕೆ ಹಾಳೆಯಲ್ಲಿ ಮಗುವನ್ನು ಕುಳ್ಳಿರಿಸಿ ಹಾಳೆಯನ್ನು ಎಳೆಯುವುದರೊಂದಿಗೆ ಶಿಬಿರಕ್ಕೆ ವಿಶಿಷ್ಟ ರೀತಿಯಲ್ಲಿ ಚಾಲನೆ ನೀಡಲಾಯಿತು. ಮುಖ್ಯ ಅಭ್ಯಾಗತರಾಗಿ ಕರ್ನಾಟಕ ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿಯವರು ದೀಪ ಪ್ರಜ್ವಲಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶೈಲಜಾ ಕುಕ್ಕುಜಡ್ಕ, ಸುದ್ಧಿ ಪತ್ರಿಕೆಯ ಸಂಪಾದಕ ಹರೀಶ್ ಬಂಟ್ವಾಳ್, ಪೋಷಕ ಕಮಿಟಿ ಸದಸ್ಯ ಚಂದ್ರಶೇಖರ ಗುಡ್ಡೆಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಸ್ತಾವಿಕ ಮಾತಿನೊಂದಿಗೆ ನಿರ್ದೇಶಕ ಲೋಕೇಶ್ ಊರುಬೈಲು ಸ್ವಾಗತಿಸಿದರು. ಕಲಾ…

Read More

ಬೆಂಗಳೂರು : ‘ಸಂಕಲ್ಪ ಮೈಸೂರು’ ಹುಲುಗಪ್ಪ ಕಟ್ಟಿಮನಿ ಅವರು ಕಾರಾಗೃಹ ಕೈದಿಗಳ ನಡುವೆ ರಂಗ ಚಟುವಟಿಕೆ ನಡೆಸಲು ಪ್ರಾರಂಭಿಸಿದ ರಂಗಸಂಸ್ಥೆ. ಕಾರಾಗೃಹ ವಾಸಿಗಳಿಗೆ ( ಗಮನಿಸಿ: ಖೈದಿಗಳು ಅಲ್ಲ) ಕಾರಾಗೃಹದಲ್ಲೇ ರಂಗತರಬೇತಿ ನೀಡಿ, ಸಾರ್ವಜನಿಕವಾಗಿ ರಂಗಮಂದಿರದಲ್ಲಿ ಪ್ರದರ್ಶನ ನೀಡುವ ಪ್ರಕ್ರಿಯೆ ಒಂದು ಇಪ್ಪತ್ತೈದು ವರುಷಗಳ ಹಿಂದೆ ರಂಗಭೂಮಿಯಲ್ಲೇ ವಿನೂತನ, ಆಶ್ಚರ್ಯ ಮತ್ತು ಕುತೂಹಲಗಳಿಗೆ ಕಾರಣವಾಗಿದ್ದ ರಂಗಪ್ರಕ್ರಿಯೆ; ಈ ಪ್ರಕ್ರಿಯೆ ರಂಗಭೂಮಿಯ ಸಾಧ್ಯತೆಗಳನ್ನು ವಿಸ್ತರಿಸಿತ್ತು. ನಮ್ಮ ತಲೆಮಾರಿಗೆ ಇರುವ ಮಾಹಿತಿ ಆಧಾರದಲ್ಲಿ ಹೇಳುವುದಾದರೆ, ಹಿಂದಿ ಚಿತ್ರರಂಗದ ಎಂದಿಗೂ ಅಮರ ಎನ್ನಿಸಿಕೊಳ್ಳುವ, ಕಾರಾಗೃಹ ವಾಸಿಗಳನ್ನು ವಿವಿಧ ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಅವರುಗಳ ಮನಪರಿವರ್ತನೆ ಮಾಡಿ, ಮತ್ತೆ ನಾಗರಿಕ ಸಮಾಜದಲ್ಲಿ ಮನುಷ್ಯರಾಗಿ ಬಾಳಲು ಸಹಾಯಕನಾಗುವ ಸಾಂಸ್ಕೃತಿಕ ಹಿನ್ನಲೆಯ ಜೇಲ್ ಸೂಪರಿಂಟೆಂಡೆಂಟ್ ನ ಕಥೆ ದೋ ಆಂಖೆ, ಬಾರಾ ಹಾತ್ ಚಿತ್ರ. ಅದರ ನಿರ್ದೇಶಕ ವಿ. ಶಾಂತರಾಮ್ ಅವರು ಈ ಮಾನವೀಯ ಜೇಲ್ ಸೂಪರಿಂಟೆಂಡೆಂಟ್ ಪಾತ್ರದಲ್ಲಿ ಅಭಿನಯಿಸಿದ್ದರೂ ಸಹ…… ನಂತರದಲ್ಲಿ ನಮಗೆ ಸಿಗುವ ಮತ್ತೊಂದು ಉದಾಹರಣೆ ಎಂದರೆ,…

Read More

ಉಪ್ಪಳ : ಐಲ ದುರ್ಗಾಪರಮೇಶ್ವರಿ ಕ್ಷೇತ್ರದ ಬಿಂಬ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ದಿನಾಂಕ 07-04-2024ರ ಭಾನುವಾರ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ಸದಸ್ಯರಿಂದ ‘ಸಾಹಿತ್ಯ ಗಾನ ನೃತ್ಯ’ ವೈಭವ ಕಾರ್ಯಕ್ರಮ ನಡೆಯಿತು. ಕಲಾವಿದರಾದ ಗುರುರಾಜ್ ಕಾಸರಗೋಡು, ಆದ್ಯಂತ್ ಅಡೂರು, ಉಷಾ ಸುಧಾಕರನ್, ಸನುಷಾ ಸುನೀಲ್, ವರ್ಷಾ ಎಂ.ಆರ್., ವೃಕ್ಷಾ ಎಂ.ಆರ್., ಅಹನಾ ಎಸ್. ರಾವ್, ಜ್ಞಾನ ರೈ ಪುತ್ತೂರು, ವರ್ಷಾ ಶೆಟ್ಟಿ, ದೃಶ್ಯ ಸಾಲ್ಯಾನ್, ವಿಶಿಕಾ ಸಾಲ್ಯಾನ್, ಸಿಯಾ ಜೆ.ಕೆ., ವೈಷ್ಣವಿ ಎಸ್. ಶೆಟ್ಟಿ, ಅಜ್ಞಾ ರೈ ಪುತ್ತೂರು, ಪೂಜಾಶ್ರೀ, ತೃಪ್ತಿ ಕೆ.ಎಸ್., ಅವನಿ ಎಂ.ಎಸ್., ಸನುಷಾ ಸುಧಾಕರನ್, ಅರ್ಪಿತಾ ವಿ. ರೈ, ಹಂಶಿತ್ ಆಳ್ವ, ಶ್ರದ್ಧಾ ಎ.ಎಸ್., ಮೇಧಾ ಎ.ಎಸ್., ಆರಾಧ್ಯ ಎನ್.ಆಳ್ಳ, ಆದ್ಯ, ಆರಾಧ್ಯ, ಇಶಾನ್, ಹೃತಿಕ, ಕೌಶಿಕ, ಮಧುಲತಾ ಪುತ್ತೂರು, ರೆಶ್ಮಿ ಪ್ರಭಾ, ಕೀರ್ತಿಪ್ರಭಾ, ಭಾನ್ವಿ ಕುಲಾಲ್, ಕೃಪೇಶ್ ಎಂ.ಆರ್. ಮೊದಲಾದವರು…

Read More

ಕಾಸರಗೋಡು : ನಾಟ್ಯರಂಗ ಪುತ್ತೂರು ಪ್ರಸ್ತುತ ಪಡಿಸುವ ‘ನೃತ್ಯಾವತರಣಂ’ ಕಲಾವಿದರಿಂದ ಕಲಾಕಸಿಕರೆಡೆಗೆ ನೃತ್ಯದ ಅವತರಣ ಕಾರ್ಯಕ್ರಮವು ದಿನಾಂಕ 14-04-2024ರಂದು ಕಾಸರಗೋಡಿನ ಶ್ರೀ ಎಡನೀರು ಮಠದ ಭಾರತೀ ಕಲಾಸದನದಲ್ಲಿ ಸಂಜೆ ಗಂಟೆ 4.30ಕ್ಕೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕಾಸರಗೋಡಿನ ಶ್ರೀ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಶುಭಾಶೀರ್ವಚನ ನೀಡಲಿದ್ದಾರೆ. ವಿದುಷಿ ಮಂಜುಳಾ ಸುಬ್ರಹ್ಮಣ್ಯ, ದೇವನಂದ ಸಿ.ಎಸ್., ಮಧುಶ್ರೀ ವಿ.ಎಸ್. ಮತ್ತು ಶ್ರೀನಂದ ಇ ಇವರುಗಳು ನೃತ್ಯ ಪ್ರಸ್ತುತಿ ನೀಡಲಿದ್ದಾರೆ.

Read More

ಪುತ್ತೂರು : ವಾಹಿನಿ ಕಲಾಸಂಘ ವತಿಯಿಂದ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಶ್ರೀ ಮಧುರಕಾನನ ಗಣಪತಿ ಭಟ್ ನೇತೃತ್ವದಲ್ಲಿ ಹಾಗೂ ಸಂಸ್ಥೆಯ ಗೌರವಾಧ್ಯಕ್ಷರಾದ ಪ್ರೊ. ವಿ.ಬಿ. ಆರ್ತಿಕಜೆಯವರ ಮಾರ್ಗದರ್ಶನದಲ್ಲಿ ‘ವಾಹಿನಿ ಸಾಹಿತ್ಯ ಸಂಭ್ರಮ 2024’ ದಿನಾಂಕ 11-04-2024ರಂದು ಬೆಳಿಗ್ಗೆ 9.30ಕ್ಕೆ ಪುತ್ತೂರಿನ ದರ್ಬೆ, ಮುಕ್ರಂಪಾಡಿ, ಸುಭದ್ರ ಸಭಾ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಮೂಡುಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರು, ಗಾಯಕರು, ಸಾಹಿತಿ ಮತ್ತು ಕೃಷಿಕರಾದ ಶ್ರೀ ರಾಮಪ್ರಸಾದ್ ಕಾಂಚೋಡು ಇವರ ಅಧ್ಯಕ್ಷತೆಯಲ್ಲಿ ಶ್ರೀ ಚಂದ್ರಶೇಖರ ಏತಡ್ಕ ಇವರು ದೀಪ ಪ್ರಜ್ವಲನೆ ಮಾಡಿ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪುತ್ತೂರಿನ ಹಿರಿಯ ಕವಯತ್ರಿ ಶ್ರೀಮತಿ ಭಾರತಿ ಕೊಲ್ಲರಮಜಲು ಇವರ ‘ಭಾವ ಭಾರತಿ’ ಭಾವಗೀತೆಗಳು, ‘ಮನೋವಾರಿಧಿ’ ಷಡ್ಪದಿಗಳು ಮತ್ತು ‘ಅಂತಃಸತ್ತ್ವ’ ಮುಕ್ತಕಗಳು, ಸಾಹಿತಿ ಶ್ರೀಮತಿ ಸಂಧ್ಯಾ ಕುಮಾರ್ ಉಬರತ್ನ ಇವರ ‘ನೀಳವೇಣಿ ನೀ ನಾಟ್ಯವಾಡು’ ಕಥಾ ಸಂಕಲನ ಮತ್ತು ವಿಶ್ರಾಂತ ಚಿತ್ರ ಕಲಾ ಶಿಕ್ಷಕರು ಮತ್ತು ಕವಿಗಳಾದ ಶ್ರೀ ಬಾಲ ಮಧುರಕಾನನ ಇವರ…

Read More

ಬೆಂಗಳೂರು : ಬೆಂಗಳೂರಿನ ಯಕ್ಷದೇಗುಲ ತಂಡದ ಸಂಯೋಜನೆಯಲ್ಲಿ ತ್ಯಾಗರಾಜ ನಗರದಲ್ಲಿರುವ ಯಕ್ಷದೇಗುಲದಲ್ಲಿ ಒಂದು ದಿನದ ಯಕ್ಷಗಾನ ವಸ್ತ್ರಾಲಂಕಾರದ ಕಾರ್ಯಾಗಾರವು ದಿನಾಂಕ 07-04-2024ರಂದು ನಡೆಯಿತು. ಈ ಕಾರ್ಯಾಗಾರವನ್ನು ಮೇಕಪ್ ಮಾಡುವ ಮೂಲಕ ಉಪನ್ಯಾಸಕರಾದ ಡಾ. ರಾಮಮೂರ್ತಿಯವರು ಉದ್ಘಾಟಿಸಿ ಮಾತನಾಡಿ “ಯಕ್ಷಗಾನ ವೇಷ ಕಟ್ಟಿಕೊಂಡು ರಂಗಸ್ಥಳದಲ್ಲಿ ಕುಣಿಯುವುದಕ್ಕಷ್ಟೇ ಕಲಾವಿದ ಪರಿಪೂರ್ಣನಾಗುವುದಿಲ್ಲ, ಯಕ್ಷಗಾನದಲ್ಲಿ ವೇಷಗಾರಿಕೆಯೂ ಪ್ರಧಾನವಾಗಿರುತ್ತದೆ. ರಂಗದಲ್ಲಿ ಕುಣಿಯುವುದಕ್ಕೆಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ ಮುಖ್ಯವಾದುದು ಬಣ್ಣಗಾರಿಕೆ, ವೇಷ ಕಟ್ಟಿಕೊಳ್ಳುವುದು ಕೂಡಾ. ಕಲಾವಿದನೂ ಸ್ವಯಂ ವೇಷ ಕಟ್ಟಿಕೊಳ್ಳುವುದಕ್ಕೂ ಕಲಿತಿರಬೇಕು. ಅದೂ ಕೂಡಾ ಒಂದು ಕಲೆ. ಯಕ್ಷಗಾನ ವೇಷಭೂಷಣದಲ್ಲಿ ಕ್ಯಾದಿಗೆ ಮುಂದಲೆ, ಮುಂಡಾಸು, ಕಿರೀಟ, ಬಣ್ಣಗಾರಿಕೆ, ವಸ್ತ್ರಾಲಂಕಾರದಲ್ಲಿ ಹಿಂದೆಗಿಂತಲೂ ಈಗ ತುಂಬಾ ಬದಲಾವಣೆಯಾಗಿದೆ ಅಥವಾ ಸುಧಾರಣೆಗೊಂಡಿದೆ. ಈ ವಿಚಾರ ಇಂದಿನ ಮಕ್ಕಳು, ಯುವಕರು ತಿಳಿಯಲು ಇಂತಹ ಕಾರ್ಯಾಗಾರ ಉಪಯುಕ್ತವಾಗಿದೆ” ಎಂದು ಹೇಳಿದರು. ಹಾಗೇ ವೇದಿಕೆಯಲ್ಲಿ ಯಕ್ಷದೇಗುಲದ ಅಧ್ಯಕ್ಷರಾದ ಬಾಲಕೃಷ್ಣ ಭಟ್‌ರು, ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾದ ಕೋಟ ಸುದರ್ಶನ ಉರಾಳ, ಯಕ್ಷದೇಗುಲದ ಹಿಂದಿನ ಕಲಾವಿದೆ ಡಾ. ಪ್ರೀತಿ ಕೆ. ಮೋಹನ್,…

Read More

ಬ್ರಹ್ಮಾವರ : ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಬೈಕಾಡಿ ಬ್ರಹ್ಮಾವರ ಇವರ ಆಯೋಜನೆಯ ಮೂರನೇ ವರ್ಷದ ‘ರಂಗೋತ್ಸವ’ ಕಾರ್ಯಕ್ರಮವು ದಿನಾಂಕ 05-04-2024ರ ಶುಕ್ರವಾರ ಬ್ರಹ್ಮಾವರದ ನಿರ್ಮಲ ಆಂಗ್ಲ ಮಾಧ್ಯಮ ಶಾಲಾ ವೇದಿಕೆಯಲ್ಲಿ ಆರಂಭಗೊಂಡು ಮೂರು ದಿನಗಳ ಕಾಲ ನಡೆದು ಭಾನುವಾರ ಸಮಾಪನಗೊಂಡಿತು. ಮೊದಲ ದಿನದ ಕಾರ್ಯಕ್ರಮವು ನಾದ ಮಣಿನಾಲ್ಕೂರು ಅವರ ಸದಾಶಯದ ಹಾಡುಗಳೊಂದಿಗೆ ಉದ್ಘಾಟನೆಗೊಂಡಿತು. ಈ ವೇಳೆ ನಡೆದ ಸಭಾ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇದರ ಸಹಾಯಕ ನಿರ್ದೇಶಕಿಯಾದ ಶ್ರೀಮತಿ ಪೂರ್ಣಿಮಾ ಅವರು ಮಾತನಾಡಿ “ರಂಗಭೂಮಿ ಒಂದು ಸಮಷ್ಟಿ ಕಲೆ, ಇಂದಿನ ಕಾಲಘಟ್ಟದಲ್ಲಿ ನೈತಿಕ‌ ಮೌಲ್ಯ ಅನ್ನೋದು ಇಳಿಯುತ್ತಿರುವಂತ ಸಂದರ್ಭದಲ್ಲಿ ನಾಟಕ ಕಲೆ, ರಂಗಚಟುವಟಿಕೆಗಳು ಅರ್ಥಪೂರ್ಣ ಹಾಗೂ ಅತ್ಯಗತ್ಯ” ಎಂದು ಅಭಿಪ್ರಾಯ ಹಂಚಿಕೊಂಡರು. ರಂಗನಿರ್ದೇಶಕ ವಾಸುದೇವ ಗಂಗೇರ ಅವರು ಮಂದಾರದ ಕೆಲಸಗಳ ಬಗ್ಗೆ ಮೆಚ್ಚುಗೆ ಸೂಚಿಸಿದರು. ಹೋಲಿ ಫ್ಯಾಮಿಲಿ ಚರ್ಚ್ ಬ್ರಹ್ಮಾವರದ ಫಾದರ್ ಜಾನ್ ಫೆರ್ನಾಂಡಿಸ್ ಮತ್ತಿತ್ತರ ಗಣ್ಯರು ಉಪಸ್ಥಿತರಿದ್ದು…

Read More

ತೆಕ್ಕಟ್ಟೆ : ಯಶಸ್ವೀ ಕಲಾವೃಂದ (ರಿ.) ಕೊಮೆ-ತೆಕ್ಕಟ್ಟೆ ಮತ್ತು ಧಮನಿ ಟ್ರಸ್ಟ್ ದಿಮ್ಸಾಲ್ ತಂಡದ ಸಹಯೋಗದೊಂದಿಗೆ ತೆಕ್ಕಟ್ಟೆಯಲ್ಲಿ ದಿನಾಂಕ 08-04-2024ರಂದು ಯಕ್ಷ-ಗಾನ-ವೈಭವ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇದಮೂರ್ತಿ ಲೋಹಿತಾಶ್ವ ಆಚಾರ್ಯರವರು ಮಾತನಾಡಿ “ಗಂಡು ಕಲೆಯಾದ ಯಕ್ಷಗಾನದಿಂದ ಜ್ಞಾನ ಸಂಪಾದನೆ ಸಾಧ್ಯ. ಕಲಾವಿದರೇ ಆಗಿ ರಂಗದಲ್ಲಿ ರಂಜಿಸಿದ ಕಲಾಸಕ್ತ ವಿಶ್ವನಾಥ ಆಚಾರ್ಯ ಪಾತ್ರ ಪೋಷಣೆಯಲ್ಲಿ ನಿಪುಣರು. ಕಲಾರಾಧಕರಾಗಿ ಸ್ಥಳೀಯ ಸಂಸ್ಥೆಗೆ ತನ್ನ ಮನೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಲೇಪನ ತೊಡಿಸಿ ಕಾರ್ಯಕ್ರಮವನ್ನು ಪರಿಪೂರ್ಣವಾಗಿಸಿಕೊಂಡರು” ಎಂದು ಹೇಳಿ ಸ್ವರ್ಣಶ್ರೀ ಪುನೀತ್ ಕುಮಾರ್ ಆಚಾರ್ಯರನ್ನು ಯಶಸ್ವೀ ಕಲಾವೃಂದದ ಪರವಾಗಿ ಅಭಿನಂದಿಸಿದರು. ರಥದ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ, ಉದ್ಯಮಿ ಗೋಪಾಲ ಪೂಜಾರಿ, ವಿಶ್ವನಾಥ ಆಚಾರ್ಯ ಕುಟುಂಬದವರು ಗೌರವ ಸಮರ್ಪಣೆಯಲ್ಲಿ ಉಪಸ್ಥಿತರಿದ್ದರು. ಗುರುಗಳಾದ ಲಂಬೋದರ ಹೆಗಡೆ ಸ್ವಾಗತಿಸಿ ನಿರೂಪಣೆಗೈದರು. ಬಳಿಕ ಯಕ್ಷ ಗಾನ ವೈಭವ ಯಶಸ್ವೀ ಕಲಾವೃಂದದ ಸಂಯೋಜನೆಯಲ್ಲಿ ಪ್ರಸ್ತುತಿಗೊಂಡಿತು.

Read More