Author: roovari

ಮೂಡುಬಿದಿರೆ : ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ. 2025-26ನೇ ಸಾಲಿನ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷ ಪ್ರಯೋಗಗಳು ಮತ್ತು ಯಕ್ಷಗಾನ ಪ್ರದರ್ಶನಗಳಲ್ಲಿ ಅಭಿನಯಿಸಲು ಕಲಾವಿದರು ಬೇಕಾಗಿರುತ್ತಾರೆ. ತೆಂಕು ಬಡಗು ಯಕ್ಷಗಾನ ನಾಟ್ಯ ತಾಳಗಳ ಅನುಭವ ಹೊಂದಿರುವ 18ರಿಂದ 28 ವರ್ಷಗಳ ವಯೋಮಿತಿಯ ಆಸಕ್ತರು ತಮ್ಮ ಇತ್ತೀಚಿನ ಭಾವಚಿತ್ರ, ಯಕ್ಷಗಾನ ಪ್ರದರ್ಶನದ ಫೋಟೋ, ತಮ್ಮ ಯಕ್ಷಗಾನ ಅನುಭವದ ಸ್ವವಿವರಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ. ಡಾ. ಎಂ. ಮೋಹನ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡು ಬಿದಿರೆ -574227. ಅರ್ಜಿ ತಲುಪಲು ಕೊನೆಯ ದಿನಾಂಕ 25 ಜೂನ್ 2025 ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 9480529236 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಮಂಗಳೂರು : ಉಭಯ ತಿಟ್ಟುಗಳ ಖ್ಯಾತ ಹಾಸ್ಯಗಾರರಾದ ಕಿನ್ನಿಗೋಳಿ ಮುಖ್ಯಪ್ರಾಣ (84) ದಿನಾಂಕ 21 ಜೂನ್ 2025ರಂದು ನಿಧನರಾದರು. ಕಟೀಲು, ಮಂದಾರ್ತಿ, ಸಾಲಿಗ್ರಾಮ, ಪೆರ್ಡೂರು, ಕುಮಟಾ, ಇರಾ, ಕದ್ರಿ, ಸುಬ್ರಹ್ಮಣ್ಯ, ಮಂತ್ರಾಲಯ ಹೀಗೆ ವಿವಿಧ ಮೇಳಗಳಲ್ಲಿ 58 ವರ್ಷಗಳ ಕಾಲ ನಿರಂತರವಾಗಿ ಕಲಾಸೇವೆಗೈದ ಅಪೂರ್ವ, ಪ್ರತಿಭಾವಂತ ಹಾಸ್ಯ ಕಲಾವಿದರಾಗಿದ್ದರು. ರುಕ್ಮಯ್ಯ ಶೆಟ್ಟಿಗಾರ್ ಮತ್ತು ಸೇಸಿ ಶೆಟ್ಟಿಗಾರ್ ಇವರ ಪುತ್ರರಾದ ಮುಖ್ಯಪ್ರಾಣ 1941ರಲ್ಲಿ ಜನಿಸಿದ್ದರು. ಶೀಮಂತೂರಿನಲ್ಲಿ ವಾಸವಾಗಿದ್ದ ಇವರು ಕಿನ್ನಿಗೋಳಿಯ ಗೋಳಜೋರದ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾ ಸಂಘದಲ್ಲಿ ಹವ್ಯಾಸಿ ವೇಷಧಾರಿಯಾಗಿ ಸೇವೆ ಆರಂಭಿಸಿದ್ದರು.  ಶೀಮಂತೂರು ನಾರಾಯಣ ಶೆಟ್ಟಿ ಇವರ ಗುರುಗಳು. ತೆಂಕು ತಿಟ್ಟಿನ ಹೆಸರಾಂತ ಹಾಸ್ಯಗಾರ ಮಿಜಾರು ಅಣ್ಣಪ್ಪ ಇವರ ಮಾರ್ಗದರ್ಶನದಲ್ಲಿ ಪಾತ್ರಾಭಿನಯ ಪಡೆದುಕೊಂಡಿದ್ದರು. ‘ಚೆಲುವೆ ಚಿತ್ರಾವತಿ’ಯ ಅಡುಗೂಲಜ್ಜಿ, ‘ಶೂದ್ರ ತಪಸ್ವಿನಿ’ಯ ರಂಗಾಚಾರಿ, ‘ಕಾಂಚನಶ್ರೀ’ಯ ಪ್ರೇತ, ‘ಸ್ವಪ್ನ ಸಾಮ್ರಾಜ್ಯ’ದ ಶೂರಸೇನ, ‘ಕಲಿ ಕ್ರೋಧನ’ದ ಮಡಿವಾಳ ಮೊದಲಾದ ವೇಷಗಳು ಇವರಿಗೆ ಖ್ಯಾತಿ ತಂದುಕೊಟ್ಟ ಪಾತ್ರಗಳು. ರಾಜ್ಯೋತ್ಸವ ಸಹಿತ ನೂರಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಇವರಿಗೆ ಯಕ್ಷಗಾನ…

Read More

ಗೋವಾ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಗೋವಾ ಘಟಕದ ದ್ವಿತೀಯ ವಾರ್ಷಿಕೋತ್ಸವವು ಗೋವಾ ಪಣಜಿಯಲ್ಲಿರುವ ಇನ್ಸ್ಟಿಟ್ಯೂಟ್ ಮೆನೇಜಸ್ ಬ್ರಗಾನ್ಸಾ ಸಭಾಗೃಹದಲ್ಲಿ ದಿನಾಂಕ 22 ಜೂನ್ 2025ರಂದು ಗೋವಾ ಘಟಕದ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಇರ್ವತ್ತೂರು ಇವರ ಅಧ್ಯಕ್ಷತೆಯಲ್ಲಿ, ಸ್ಥಾಪಕಾಧ್ಯಕ್ಷರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ನಡೆಯಿತು. ಭಾರತದ ಪ್ರವಾಸೋದ್ಯಮ ಬಂದರುಗಳ, ಹಡಗು ಹಾಗೂ ಜಲಮಾರ್ಗಗಳ ರಾಜ್ಯ ಸಚಿವರಾದ ಶ್ರೀಪಾದ ನಾಯಕ್ ಇವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗೋವಾ ಸರಕಾರದ ಮಾಜಿ ಕಾರ್ಯದರ್ಶಿ ಟಿ.ಎನ್. ಧ್ರುವ ಕುಮಾರ್, ಪಟ್ಲ ಫೌಂಡೇಶನ್ ಗೋವಾ ಘಟಕದ ಗೌರವಾಧ್ಯಕ್ಷರಾದ ವಿಜಯೇಂದ್ರ ಶೆಟ್ಟಿ ಮತ್ತಿತರ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರತಿಭಾನ್ವಿತ ವಿದ್ಯಾರ್ಥಿ ದಕ್ಷ್ ಶೆಟ್ಟಿ ಇವರಿಗೆ ವಿದ್ಯಾನಿಧಿ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಪಾವಂಜೆ ಮೇಳದವರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ನಡೆಯಿತು. ನಿತೇಶ್ ಶೆಟ್ಟಿ ಎಕ್ಕಾರು ಇವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Read More

‘The Black Eagle’ is a novel translated into English by Shankara Narayana Dooja Poojary from its original Thulu (Kappu Gidi) version by the veteran Thulu writer Janaki Brahmavar. It not only tells the story of a family in Thulunad but also meticulously depicts its culture and lifestyles of Thulunad around five decades ago. The story opens with the monologue of the son of the family Shashank. He is the foster son of Damodar (Damajja) and Kalyani. They have adopted him from their tenant Akkani, whose grandson is Shashank. Damajja and Kalyani are big landlords of the village. They are childless.…

Read More

ಮೂಡುಬಿದಿರೆ : ಶಿವರಾಮ ಕಾರಂತ ಪ್ರತಿಷ್ಠಾನ ಕಳೆದ 30 ವರ್ಷಗಳಿಂದಲೂ ನಿರಂತರವಾಗಿ ಕನ್ನಡದ ಮಹತ್ವದ ಕೃತಿಗಳಿಗೆ ನೀಡುತ್ತಾ ಬಂದಿರುವ ‘ಶಿವರಾಮ ಕಾರಂತ ಪುರಸ್ಕಾರ’ಕ್ಕೆ ಈ ವರ್ಷ ಮೋಹನ್ ಕುಂಟಾರ್ ಇವರ ‘ಅನುವಾದ ಒಲವು ನಿಲುವುಗಳು’, ಹೆಚ್.ಎಸ್. ಅನುಪಮಾರವರ ‘ಬೆಡಗಿನೊಳಗು -ಮಹಾದೇವಿ ಅಕ್ಕ’, ಸಬಿತಾ ಬನ್ನಾಡಿಯವರ ‘ಇದಿರು ನೋಟ’ ಮತ್ತು ಶ್ರೀಪಾದ ಭಟ್ ಇವರ ‘ದಡವ ನೆಕ್ಕಿದ ಹೊಳೆ’ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ಹತ್ತು ಸಾವಿರ ನಗದು, ಪ್ರಶಸ್ತಿ ಫಲಕ ಹಾಗೂ ಸನ್ಮಾನವನ್ಮು ಒಳಗೊಂಡಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಡಾ. ಜಯಪ್ರಕಾಶ ಮಾವಿನಕುಳಿ ಇವರು ತಿಳಿಸಿದ್ದಾರೆ.

Read More

ಕಾಸರಗೋಡು : ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಇದರ ನೇತೃತ್ವದಲ್ಲಿ ಕನ್ನಡದ ನಡಿಗೆ-ಶಾಲೆಯ ಕಡೆಗೆ ಹಾಗೂ ಮನೆ ಮನೆ-ಕನ್ನಡ ಜಾಗ್ರತಿ ಅಭಿಯಾನ ಕಾರ್ಯಕ್ರಮವು ದಿನಾಂಕ 20 ಜೂನ್ 2025ರಂದು ಮಂಗಳೂರಿನ ಸಂತ ರೀತಾ ಶಾಲೆಯಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಗೌರವ ಅಧ್ಯಕ್ಷರಾದ ಡಾ. ರವೀಂದ್ರ ಜೆಪ್ಪು “ವಿದ್ಯಾರ್ಥಿಗಳಲ್ಲಿ, ಯುವಜನರಲ್ಲಿ ಕನ್ನಡ ಪ್ರಜ್ಞೆ ಮೂಡಿಸುವುದೇ ಕನ್ನಡ ಭವನದ ಉದ್ದೇಶ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಗುರುತರ ಹೊಣೆಗಾರಿಕೆ ನಮ್ಮ ಮೇಲಿದೆ. ನಮ್ಮ ಈ ಕಾರ್ಯಕ್ರಮ ಕನ್ನಡ ನಡಿಗೆ-ಶಾಲೆಯ ಕಡೆಗೆ ಹಾಗೂ ಮನೆ ಮನೆ-ಕನ್ನಡ ಜಾಗ್ರತಿ ಅಭಿಯಾನಕ್ಕೆ ನಿಮ್ಮೆಲ್ಲರ ಸಂಪೂರ್ಣ ಸಹಕಾರ ಬೇಕಿದೆ” ಎಂದು ಹೇಳಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಡೋರಿನ್ ತಾವ್ರೊ ಈ ಕಾರ್ಯಕ್ರಮವನ್ನು ಕನ್ನಡಾಂಬೆಯ ಭಾವಚಿತ್ರಕ್ಕೆ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ “ಇಂತಹ ಅತ್ಯುತ್ತಮ ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ಹಮ್ಮಿಕೊಳ್ಳಲು ಕಾರಣಕರ್ತರಾದ ನಮ್ಮ…

Read More

ಬೆಲ್ಜಿಯಂ : ಬೆಲ್ಜಿಯಂ ಕಲಾ ವೇದಿಕೆ ವತಿಯಿಂದ ದಿನಾಂಕ 13 ಜೂನ್ 2025 ಎರಡನೇ ಶುಕ್ರವಾರದಂದು ಸಾಹಿತ್ಯ ಸಂಜೆ ಪ್ರಸಾರದ ಶುಭಾರಂಭವಾಗಿದೆ. ಮೊದಲಿಗೆ ಕನ್ನಡದ ಜ್ಞಾನಶಿಖರ ಡಾ. ಡಿ.ವಿ.ಜಿ. ಯವರ ಜೀವನ, ಸಾಹಿತ್ಯ ಮತ್ತು ಸಾಧನೆಗಳ ಅವಲೋಕನ ಹಾಗೂ ವಿಚಾರ ವಿನಿಮಯ ನಡೆಯಿತು. ಈ ಕಾರ್ಯದಲ್ಲಿ ಬೆಂಗಳೂರಿನ ನಿವಾಸಿ ಡಾ. ಎ. ಭಾನು ಇವರು ಬೆಲ್ಜಿಯಂ ಕಲಾ ವೇದಿಕೆಯೊಂದಿಗೆ ಸಹಕರಿಸುತ್ತಿದ್ದಾರೆ. ಬೆಲ್ಜಿಯಂ ಕಲಾ ವೇದಿಕೆಯ ಆಶ್ರಯದಲ್ಲಿ ನಡೆಸಲಾಗುತ್ತಿರುವ ಹಲವಾರು ಕನ್ನಡ ಪರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಯೂರೋಪಿನ ನೂರಾರು ಕನ್ನಡಿಗರು ಭಾಗವಹಿಸಿ ತಮ್ಮ ತಾಯ್ನಾಡಿನ ಬಗ್ಗೆ ಪ್ರೀತಿ ಮೆರೆಯುತ್ತಿರುವುದು ಹರ್ಷದಾಯಕ ಸಂಗತಿ. ಸಂಕ್ರಾಂತಿ, ಯುಗಾದಿ, ಗಣೇಶೋತ್ಸವ, ನವರಾತ್ರಿ, ದೀಪಾವಳಿ, ಕನ್ನಡ ರಾಜ್ಯೋತ್ಸವ ಮುಂತಾದ ಭಾರತದ ಪ್ರಮುಖ ಆಚರಣೆಗಳನ್ನು ದೂರದ ಬೆಲ್ಜಿಯಂ ದೇಶದಲ್ಲಿ ಆಯೋಜಿಸಿ, ಯಶಸ್ವಿಯಾಗಿ ನಡೆಸಿ ಅಲ್ಲಿನ ಹೆಮ್ಮೆಯ ಕನ್ನಡಿಗರ ಭಾಷಾಪ್ರೇಮದ ಅಭಿವ್ಯಕ್ತಿಗೆ ಅನುವು ಮಾಡಿಕೊಡುವ ಬೆ.ಕ.ವೇ ಪ್ರಯತ್ನ ಶ್ಲಾಘನೀಯ. ಜರ್ಮನಿಯಲ್ಲಿರುವ ಹವ್ಯಾಸಿ ಯಕ್ಷಗಾನ ತಂಡದವರನ್ನು ಬೆಲ್ಜಿಯಂಗೆ ಕರೆಸಿ ಯಕ್ಷಗಾನ ಪ್ರಸಂಗದ ಪ್ರದರ್ಶನ…

Read More

ಪುತ್ತೂರು : ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ಪುತ್ತೂರು ಇವರ ಆಶ್ರಯದಲ್ಲಿ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಉಜಿರೆ ಇವರ ವತಿಯಿಂದ ಹಾಸ್ಯಗಾರ ಪೆರುವಡಿ ನಾರಾಯಣ ಭಟ್ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಮತ್ತು ತಾಳಮದ್ದಳೆ ಸಪ್ತಾಹವನ್ನು ದಿನಾಂಕ 30 ಜೂನ್ 2025ರಿಂದ 06 ಜುಲೈ 2025ರವೆರೆಗೆ ಪ್ರತಿ ದಿನ ಸಂಜೆ 4-00 ಗಂಟೆಗೆ ಪುತ್ತೂರಿನ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 30 ಜೂನ್ 2025ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ ಜಿ. ಬಲರಾಮ ಆಚಾರ್ಯ ಇವರು ವಹಿಸಲಿದ್ದು, ಹಿರಿಯ ಯಕ್ಷಗಾನ ಕಲಾವಿದರಾದ ದಶಾವತಾರಿ ಕೆ. ಗೋವಿಂದ ಭಟ್ ಇವರು ದೀಪ ಪ್ರಜ್ವಲನೆ ಮಾಡಲಿರುವರು. ಸಭಾ ಕಾರ್ಯಕ್ರಮದ ಬಳಿಕ ‘ತರಣಿಸೇನ ಕಾಳಗ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ದಿನಾಂಕ 01 ಜುಲೈ 2025ರಂದು ‘ಶಲ್ಯ ಸಾರಥ್ಯ’, ದಿನಾಂಕ 02 ಜುಲೈ 2025ರಂದು ‘ದಕ್ಷಾದ್ವರ’, ದಿನಾಂಕ 03 ಜುಲೈ 2025ರಂದು ‘ದಮಯಂತಿ ಪುನಃಸ್ವಯಂವರ’, ದಿನಾಂಕ 04…

Read More

ಐರೋಡಿ : ಕೀರ್ತಿಶೇಷ ಭಾಗವತ ನೀಲಾವರ ಲಕ್ಷ್ಮೀನಾರಾಯಣ ರಾಯರ ಜನ್ಮ ಶತಮಾನೋತ್ಸವ 2025 ಸಂಕೀರ್ತನ 12 ತಿಂಗಳ ಸರಣಿ ಕಾರ್ಯಕ್ರಮಗಳ ಮಾಲಿಕೆಯಲ್ಲಿ ಜೂನ್ ತಿಂಗಳ ಕಾರ್ಯಕ್ರಮದಲ್ಲಿ ‘ಯಕ್ಷಗಾನ ತಾಳಮದ್ದಳೆ’ಯು ದಿನಾಂಕ 29 ಜೂನ್ 2025ರಂದು ಸಂಜೆ 4-00 ಗಂಟೆಗೆ ಬಾಳ್ಕುದ್ರು ಶ್ರೀ ರಾಮ ಮಂದಿರದಲ್ಲಿ ನಡೆಯಲಿದೆ. ಪಾರ್ತಿಸುಬ್ಬ ವಿರಚಿತ ‘ವಾಲಿ ವಧೆ’ ಪ್ರಸಂಗದ ಹಿಮ್ಮೇಳದಲ್ಲಿ ಉದಯ ಕುಮಾರ್ ಹೊಸಾಳ, ಶಶಿಕುಮಾರ್ ಆಚಾರ್ ಮತ್ತು ವಾಗ್ವಿಲಾಸ ಭಟ್ ಹಾಗೂ ಮುಮ್ಮೇಳದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಜಬ್ಬಾರ್ ಸಮೊ ಸಂಪಾಜೆ, ರವಿರಾಜ ಪನೆಯಾಲ ಮತ್ತು ಸುನಿಲ್ ಹೊಲಾಡ್ ಸಹಕರಿಸಲಿದ್ದಾರೆ.

Read More

ಬೆಳ್ತಂಗಡಿ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ವತಿಯಿಂದ ನಡೆಯುವ 2025-26ನೇ ಸಾಲಿನ ಯಕ್ಷಧ್ರುವ ಯಕ್ಷ ಶಿಕ್ಷಣ ನಾಟ್ಯಾಭ್ಯಾಸ ಕಾರ್ಯಕ್ರಮವು ಸರ್ಕಾರಿ ಪ್ರೌಢಶಾಲೆ ನಿಡ್ಲೆಯಲ್ಲಿ ದಿನಾಂಕ 20 ಜೂನ್ 2025ರ ಶುಕ್ರವಾರದಂದು ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಫೌಂಡೇಶನ್ನಿನ ಕೇಂದ್ರ ಸಮಿತಿಯ ಟ್ರಸ್ಟಿಗಳೂ ಆಗಿರುವ ಸಂಘಟಕರಾದ ಶ್ರೀ ಭುಜಬಲಿ ಬಿ. ಧರ್ಮಸ್ಥಳ ಇವರು ಉದ್ಘಾಟಿಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀಯುತರು “ಉತ್ತಮ ಕಲಾವಿದರಾದ ಈಶ್ವರ ಪ್ರಸಾದ್ ಇವರು ಗುರುಗಳಾಗಿ ಸಿಗುತ್ತಿರುವುದು ನಿಮ್ಮ ಭಾಗ್ಯ. ವಿದ್ಯಾಭ್ಯಾಸದ ಜೊತೆಗೆ ಯಕ್ಷಗಾನವನ್ನು ಕಲಿಯಿರಿ. ಇದು ನಿಮ್ಮ ಭವಿಷ್ಯಕ್ಕೆ ಪೂರಕ” ಎಂದು ಕಿವಿ ಮಾತು ಹೇಳಿದರು. ಪಟ್ಲ ಫೌಂಡೇಶನ್ ಟ್ರಸ್ಟಿನ ಕಾರ್ಯ ಚಟುವಟಿಕೆಗಳನ್ನು ತಿಳಿಸಿದರು. ಪಟ್ಲ ಶ್ರೀ ಸತೀಶ್ ಶೆಟ್ಟಿ ಇವರ ಕಾರ್ಯವೈಖರಿಯನ್ನು ಪ್ರಶಂಶಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಟ್ರಸ್ಟಿನ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಶ್ರೀ ಸುರೇಶ್ ಶೆಟ್ಟಿಯವರು ಕಳೆದ ಮೂರು ವರ್ಷಗಳಿಂದ ವಿವಿಧ ಶಾಲೆಗಳಲ್ಲಿ ನಡೆಯುತ್ತಿರುವ ಯಕ್ಷನಾಟ್ಯ ಅಭಿಯಾನ ಕಾರ್ಯಕ್ರಮದ ಬಗ್ಗೆ ತಿಳಿಸುತ್ತಾ ಪ್ರಸ್ತುತ ಸಾಲಿನಲ್ಲಿ ನಡೆಯುವ…

Read More