Author: roovari

ಉಡುಪಿ : ಪ್ರತಿವರ್ಷ ಯಕ್ಷಗಾನ ಕಲಾರಂಗ ಮೇ 31ರಂದು ನಡೆಸುವ ಕಲಾವಿದರ ಸಮಾವೇಶಕ್ಕ ಈ ವರ್ಷ ಸುವರ್ಣದ ಮೆರಗು. ಶ್ರೀಕೃಷ್ಣಮಠ ಪರ್ಯಾಯ ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ ದಿನಪೂರ್ತಿ ಕಾರ್ಯಕ್ರಮವಾಗಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ದಿನಾಂಕ 31 ಮೇ 2025ರಂದು ಸಂಪನ್ನಗೊಂಡಿತು. ಅಪರಾಹ್ನದವರೆಗಿನ ಕಲಾಪಗಳು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ ಜರಗಿತು. ಬೆಳಿಗ್ಗೆ 10-00 ಗಂಟೆಗೆ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಕಾರ್ಯಕ್ರಮ ಉದ್ಘಾಟಿಸಿದರು. ಉದ್ಯಮಿ ಗೋಪಾಲ ಸಿ. ಬಂಗೇರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಅಕಾಡೆಮಿಯ ಸದಸ್ಯ ಸತೀಶ ಅಡಪ ಉಪಸ್ಥಿತರಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್ ನಮೃತ ಸ್ವಾಗತಿಸಿ, ಗಣೇಶ ಎಲ್ಲೂರು ಕಾರ್ಯಕ್ರಮ ನಿರೂಪಿಸಿದರು. ಪೂರ್ವಾಹ್ನ 10-30 ಗಂಟೆಗೆ ಮಾಧವ ಮಾತೃಗ್ರಾಮಂ ಕೂಡಿಯಾಟ್ಟಮ್ ಗುರುಕುಲಂ, ತ್ರಿಶೂರ್ ಇವರಿಂದ ‘ಸೀತಾಪಾರಣಂ-ಜಟಾಯುವಧಂ ಕೂಡಿಯಾಟ್ಟಮ್’ ಪ್ರದರ್ಶನಗೊಂಡಿತು. ಪ್ರೊ. ಕೆ. ಸದಾಶಿವ ರಾವ್ ಕಾರ್ಯಕ್ರಮ ನಿರೂಪಿಸಿ, ಗಣೇಶ್ ಬ್ರಹ್ಮಾವರ ವಂದಿಸಿದರು. ಅಪರಾಹ್ನ 11.30 ಗಂಟೆಗೆ ‘ಕಲೆ ಪೂರ್ಣಾವಧಿ…

Read More

ಧಾರವಾಡ : ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಇದರ ವತಿಯಿಂದ ‘ನಾಡೋಜ ಡಾ. ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆ ಮತ್ತು ಶ್ರೀಮತಿ ಶಾಂತಾದೇವಿ ಕಣವಿ ಕಥಾ ಸ್ಪರ್ಧೆ-2025’ಯನ್ನು ಕನ್ನಡದ ಯುವ ಲೇಖಕರಿಗಾಗಿ ಏರ್ಪಡಿಸಲಾಗಿದೆ. ಸೂಚನೆಗಳು : * ಸ್ಪರ್ಧೆಯಲ್ಲಿ ಭಾಗವಹಿಸುವವರ ವಯೋಮಿತಿ: 18ರಿಂದ 35 ವರ್ಷ ಬರಹಗಳನ್ನು ಕಳಿಸಲು ಕೊನೆಯ ದಿನಾಂಕ 20 ಜೂನ್ 2025. * ಕಥೆ ಮತ್ತು ಕವನಗಳು ಸ್ವತಂತ್ರವಾಗಿರಬೇಕು. * ವಿಷಯದ ಆಯ್ಕೆಯ ಸ್ವಾತಂತ್ರ್ಯವಿರುತ್ತದೆ. ಈವರೆಗೂ ಎಲ್ಲಿಯೂ ಪ್ರಕಟವಾಗಿರಬಾರದು. * ಕೈಬರಹದ ಕವನ ಮತ್ತು ಕಥೆಗಳನ್ನು ಮಾತ್ರ ಕಳಿಸಬೇಕು. (ಕವನ ಮತ್ತು ಕಥೆ ಕೈ ಬರಹದ್ದಾಗಿರಬೇಕು) * ನಿರ್ಣಾಯಕರ ನಿರ್ಣಯವೇ ಅಂತಿಮ. * ಎರಡೂ ವಿಭಾಗಗಳಲ್ಲಿ ಆಯ್ಕೆಯಾದ ಮೊದಲ ಮೂರು ಕವನಗಳಿಗೆ/ಬರಹಗಳಿಗೆ ಜೂನ್ 28ರಂದು ಏರ್ಪಡಿಸುವ ಡಾ. ಚನ್ನವೀರ ಕಣವಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಗುವುದು. * ಕವನ ಮತ್ತು ಕಥೆಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು : ಪ್ರಧಾನ ಕಾರ್ಯದರ್ಶಿ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ…

Read More

ಮೂಡುಬಿದಿರೆ : ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಇದರ ವತಿಯಿಂದ 2025-26ನೇ ಸಾಲಿನ ಆಳ್ವಾಸ್ ರಂಗ ತಂಡದ ನಾಟಕಗಳಲ್ಲಿ ಅಭಿನಯಿಸಲು ಕಲಾವಿದರು ಬೇಕಾಗಿದ್ದು, ಆಸಕ್ತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ವಿದ್ಯಾರ್ಹತೆ ಒಂದು ವರ್ಷದ ರಂಗ ಶಿಕ್ಷಣ ಪದವಿ ಹಾಗೂ ವಯೋಮಿತಿ 20ರಿಂದ 35 ವರ್ಷ. ಆಯ್ಕೆ ಆದ ಕಲಾವಿದರಿಗೆ ಉಚಿತ ಊಟ, ಉಪಹಾರ, ಉತ್ತಮ ವಸತಿ ವ್ಯವಸ್ಥೆಯ ಜೊತೆಗೆ ತಿಂಗಳ ವೇತನ ಇರುತ್ತದೆ. ಆಸಕ್ತರು ತಮ್ಮ ಇತ್ತೀಚಿನ ಭಾವಚಿತ್ರ, ಅಭಿನಯದ ನಾಟಕಗಳ ಫೋಟೋ ಹಾಗೂ ತಮ್ಮ ರಂಗ ಅನುಭವದ ಸ್ವವಿವರಗಳನ್ನು ಈ ಕೆಳಗಿನ ವಿಳಾಸಕ್ಕೆ ಕೂಡಲೇ ಕಳುಹಿಸಿ. ಅರ್ಜಿ ತಲುಪಲು ಕೊನೆಯ ದಿನಾಂಕ 10 ಜೂನ್ 2025 ಆಗಿದ್ದು, ಅರ್ಜಿ ಕಳುಹಿಸುವ ವಿಳಾಸ : ಡಾ. ಎಂ. ಮೋಹನ ಆಳ್ವ ಅಧ್ಯಕ್ಷರು ಅಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ ದ.ಕ -574227. ಮಾಹಿತಿಗಾಗಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕರು ಡಾ. ಜೀವನ್ ರಾಂ ಸುಳ್ಳ 6362043317 ಮತ್ತು 9448215946 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಮಂಗಳೂರು : ಡಾ. ವಾಮನ್ ರಾವ್ ಬೇಕಲ್ ಸಾರಥ್ಯದ ಕಾಸರಗೋಡು ಕನ್ನಡ ಭವನದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉದ್ಘಾಟನೆಯು ದಿನಾಂಕ 25 ಮೇ 2025ರಂದು ಮಂಗಳೂರು ತಾಲೂಕು ಮಹಿಳಾ ಒಕ್ಕೂಟ ಸಭಾ ಭವನದಲ್ಲಿ ನಡೆಯಿತು. ಈ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕಾಸರಗೋಡಿನ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಸ್ಥಾಪಕ ಅಧ್ಯಕ್ಷೆಯಾದ ಡಾ. ವಾಣಿಶ್ರೀ ಕಾಸರಗೋಡು ಇವರು ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ ಉದ್ಘಾಟಿಸಿ ಮಾತನಾಡುತ್ತಾ “ಯುವ ಪ್ರತಿಭೆಗಳನ್ನು ಸಮಾಜದ ಮುಂದೆ ಅನಾವರಣಗೊಳಿಸುವುದೇ ಸಂಸ್ಥೆಯ ಯೋಜನೆ. ಯುವ ಪ್ರತಿಭೆಗಳಲ್ಲಿ ಕನ್ನಡತನ, ಕನ್ನಡ ಸಂಸ್ಕೃತಿ ಮೂಡಿಸುವುದೇ, ಸಂಸ್ಥೆಯ ಗುರಿ, ಇದಕ್ಕಾಗಿ ಸಂಸ್ಥೆಯು ಸರ್ವ ಸಮರ್ಪಣಾ ಭಾವದಲ್ಲಿ ಮುನ್ನಡೆಯಲಿದೆ ಎಂದು ಹೇಳಿದ್ದಾರೆ. ಕನ್ನಡ ಭವನ ರೂವಾರಿ ಡಾ. ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಭವನ ಪ್ರಕಾಶಾನದ ರೂವಾರಿ ಸಂಧ್ಯಾರಾಣಿ ಟೀಚರ್, ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ ರೇಖಾ ಸುದೇಶ್ ರಾವ್, ಕನ್ನಡ ಭವನ ಕಾಸರಗೋಡು ಗೌರವ ಅಧ್ಯಕ್ಷ…

Read More

ಕೊಪ್ಪಳ : ಮಹಾಂತಯ್ಯನ ಮಠ ಕಲ್ಯಾಣ ಮಂಟಪದಲ್ಲಿ ದಿನಾಂಕ 25 ಮೇ 2025ರಂದು ಹಿರಿಯ ಪತ್ರಕರ್ತ ರಮೇಶ್ ಸುರ್ವೆಯವರ ಪುತ್ರ ಕಿಶನ್ ಜೊತೆ ತೇಜಸ್ವಿಯವರ ವಿವಾಹ ಆರತಕ್ಷತೆ ಕಾರ್ಯಕ್ರಮ ನಿಮಿತ್ತ ಚುಟುಕು ಸಾಹಿತ್ಯ ಪರಿಷತ್ ಕೊಪ್ಪಳ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕವಿಗೋಷ್ಠಿ ನಡೆಯಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಭಾಗ್ಯಜ್ಯೋತಿ ಮಾತನಾಡಿ “ಕನ್ನಡ ಸಾಹಿತ್ಯ ಇಂದು ಹಲವಾರು ಪ್ರಕಾರಗಳನ್ನು ತನ್ನ ಒಡಲೊಳಗೆ ಇಟ್ಟುಕೊಂಡು ಅತ್ಯಂತ ಶ್ರೀಮಂತವಾದ ಸಾಹಿತ್ಯವಾಗಿದೆ. ಕಾದಂಬರಿ, ನಾಟಕ, ಎನರ್ಜಿ, ಜೀವನ ಚರಿತ್ರೆ, ಆತ್ಮಚರಿತ್ರೆಯಂತೆ ಕಾವ್ಯವೂ ಕೂಡ ಒಂದು ಅತ್ಯಂತ ಮಹತ್ವದ ಸಾಹಿತ್ಯ ಪ್ರಕಾರವಾಗಿದೆ. ಕಾವ್ಯ ರಚನೆಗೆ ಕವಿಗೆ ಸತತ ಅಧ್ಯಯನದ ಅವಶ್ಯಕತೆ ಇದೆ ಮತ್ತು ಶಬ್ದ ಭಂಡಾರದ ತಿಳುವಳಿಕೆ ಜ್ಞಾನ ಇರಬೇಕು. ಆಧುನಿಕ ಹನಿಗವನ, ಮಿನಿ ಗವನ, ಚುಟುಕು, ಹಾಯ್ಕುಗಳು ಕೂಡ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿದೆ. ಚುಟುಕು ನಾಲ್ಕು ಸಾಲುಗಳನ್ನು ಹೊಂದಿರಬೇಕು ಮತ್ತು ಅಂತ್ಯ…

Read More

ಬೆಳಗಾವಿ : ರಂಗ ಸಂಪದ (ರಿ.) ಬೆಳಗಾವಿ ಇದರ ವತಿಯಿಂದ ಖ್ಯಾತ ಶಿಕ್ಷಕ ತಜ್ಞ, ವಾಗ್ಮಿ, ಲೇಖಕ ಡಾ. ಗುರುರಾಜ ಕರಜಗಿ ಇವರಿಂದ ‘ಬದುಕಿನಲ್ಲಿ ಮಾನವೀಯ ಮೌಲ್ಯಗಳು’ ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 02 ಜೂನ್ 2025ರಂದು ಸಂಜೆ 4-00 ಗಂಟೆಗೆ ಬೆಳಗಾವಿಯ ಹಿಂದವಾಡಿ ಗೊಮಟೇಶ ವಿದ್ಯಾ ಪೀಠದ ಹತ್ತಿರ ಆಯ್.ಎಂ.ಈ.ಆರ್. ಸಭಾಗೃಹದಲ್ಲಿ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಬೆಳಗಾವಿಯ ಸಮೃದ್ಧ ವಿಶೇಷ ಚೇತನರ ಸಂಸ್ಥೆಯ ಅಂಧ ಮಕ್ಕಳಿಂದ ಸಂಗೀತ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ.

Read More

ಬೆಂಗಳೂರು : ಶ್ರೀ ಪುರಂದರದಾಸ ಮೆಮೋರಿಯಲ್ ಟ್ರಸ್ಟ್ (ರಿ.) ಇದರ ವತಿಯಿಂದ ‘ದಾಸವಾಣಿ’ ಹವಲ್ದಾರ್ ತಂಡದವರಿಂದ ದಾಸರ ಕೃತಿಗಳ ಅಮೋಘ ಗಾಯನ (ಹಿಂದೂಸ್ಥಾನಿ ಶೈಲಿಯಲ್ಲಿ) ಕಾರ್ಯಕ್ರಮವನ್ನು ದಿನಾಂಕ 01 ಜೂನ್ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ದೇವರಕೆರೆ ಇಸ್ರೋ ಲೇಔಟ್ ಹತ್ತಿರ ಪುರಂದರ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಡಾ. ಪಂಡಿತ್ ನಾಗರಾಜ ರಾವ್ ಹವಲ್ದಾರ್ ಹಾಗೂ ಶ್ರೀ ಓಂಕಾರನಾಥ ಹವಲ್ದಾರ್ ಇವರ ಹಾಡುಗಾರಿಕೆಗೆ ಕೇದಾರನಾಥ ಹವಲ್ದಾರ್ ಇವರು ತಬಲಾದಲ್ಲಿ ಹಾಗೂ ಸಮೀರ್ ಹವಲ್ದಾರ್ ಇವರು ಹಾರ್ಮೋನಿಯಂನಲಿ ಸಾಥ್ ನೀಡಲಿದ್ದಾರೆ.

Read More

ಮೈಸೂರು : ನಟನ ರಂಗಶಾಲೆಯ ವತಿಯಿಂದ ‘ಅಭಿನಯ ಮತ್ತು ರಂಗ ತರಬೇತಿ’ ತರಗತಿಯು 8ರಿಂದ 14 ವರ್ಷದ ಮಕ್ಕಳಿಗೆ ಪ್ರತಿ ಶನಿವಾರ ಮಧ್ಯಾಹ್ನ ಗಂಟೆ 3-00ರಿಂದ 5-00 ಮತ್ತು ಭಾನುವಾರ ಬೆಳಗ್ಗೆ ಗಂಟೆ 10-00ರಿಂದ 12-00ರವರೆಗೆ ಹಮ್ಮಿಕೊಳ್ಳಲಾಗಿದೆ. ಪ್ರವೇಶ ಪ್ರಕ್ರಿಯೆ ಮತ್ತು ಸಂದರ್ಶನ ದಿನಾಂಕ 08 ಜೂನ್ 2025ರಂದು ಬೆಳಗ್ಗೆ 10-00 ಗಂಟೆಗೆ ನಡೆಯಲಿದೆ. ವೆಬ್‌ಸೈಟ್‌ : www.natanamysuru.org ವಿಳಾಸ : ನಟನ ರಂಗಶಾಲೆ, ರಾಮಕೃಷ್ಣ ನಗರ ‘ಕೆ’ ಬ್ಲಾಕ್, ಮೈಸೂರು -570022 ಪ್ರವೇಶ ಶುಲ್ಕ ಮತ್ತು ಇತರ ಮಾಹಿತಿಗಳಿಗಾಗಿ ಸಂಪರ್ಕಿಸಿ : 7259537777, 9480468327

Read More

ಶಿರಸಿ : ಕಲಾಸಂಗಮ ಚಾರಿಟೇಬಲ್ ಟ್ರಸ್ಟ್ (ರಿ.) ಶಿರಸಿ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಬೆಂಗಳೂರು ಇವರ ಸಹಯೋಗದೊಂದಿಗೆ 14ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಪ್ರಯುಕ್ತ ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ಯಕ್ಷಗಾನ ಪ್ರದರ್ಶನವನ್ನು ದಿನಾಂಕ 01 ಜೂನ್ 2025ರಂದು ಸಂಜೆ 4-00 ಗಂಟೆಗೆ ಶಿರಸಿಯ ನೆಮ್ಮದಿ ಆವರಣದ ರಂಗಧಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಸಭಾ ಕಾರ್ಯಕ್ರಮವನ್ನು ಶಿರಸಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶ್ರೀಮಾತಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜಿ.ಎನ್. ಹೆಗಡೆ ಹಿರೇಸರ, ಧಾರವಾಡ ಹಾಲು ಒಕ್ಕೂಟ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ನನೆ ಮತ್ತು ರಾಜದೀಪ ಟ್ರಸ್ಟ್ ಶಿರಸಿ ಅಧ್ಯಕ್ಷ ದೀಪಕ ದೊಡ್ಡರು ಇವರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಹಿರಿಯ ಲೆಕ್ಕಪತ್ರ ಪರಿಶೋಧಕ ಉದಯ ಸ್ವಾದಿ ವಹಿಸಲಿದ್ದಾರೆ. ಯಕ್ಷಗಾನದ ಹಿರಿಯ ಭಾಗವತರಾದ ರವೀಂದ್ರ ಭಟ್ ಅಚವೆ ಇವರನ್ನು ಸನ್ಮಾನಿಸಲಾಗುವುದು ಹಾಗೂ ಕುಮಾರಿ ಅಭಿಜ್ಞಾ ಹೆಗಡೆ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಸಭಾ ಕಾರ್ಯಕ್ರಮದ…

Read More

ಬೆಂಗಳೂರು : ಸರಸ್ವತೀ ಸಂಗೀತ ವಿದ್ಯಾಲಯ (ನೋಂ) ಇದರ ವಾರ್ಷಿಕ ಪುರಸ್ಕಾರ ಪ್ರದಾನ ಸಮಾರಂಭ ಮತ್ತು ಭಾರತೀಯ ನಾದ ಸೌರಭ ಸಂಗೀತೋತ್ಸವವನ್ನು ದಿನಾಂಕ 01 ಜೂನ್ 2025ರಂದು ಸಂಜೆ 4-30 ಗಂಟೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಆಯೋಜಿಸಲಾಗಿದೆ. ಖ್ಯಾತ ಹಿರಿಯ ಸಿತಾರ್ ವಿದ್ವಾಂಸರಾದ ಗುರು ಪಂಡಿತ್ ಎನ್.ವಿ. ಗೋಪಿನಾಥ್ ಇವರಿಗೆ ಗೋವಿಂದ ಲಕ್ಷ್ಮೀ ಪುರಸ್ಕಾರ ಮತ್ತು ಖ್ಯಾತ ವಯೋಲಿನ್ ವಿದ್ವಾಂಸ ವಿದ್ವಾನ್ ಕೆ.ಸಿ. ಜಯರಾಮ್ ಇವರಿಗೆ ಶ್ಯಾಮಲಾ ಸ್ಮೃತಿ ಸಮ್ಮಾನ್ ಪುರಸ್ಕಾರ ಪ್ರದಾನ ಮಾಡಲಾಗುವುದು. ನಾದೋಪಾಸಕ ಗುರು ಪಂಡಿತ್ ವಾಗೀಶ ಭಟ್ ಇವರ ಹಿಂದೂಸ್ತಾನಿ ಗಾಯನಕ್ಕೆ ಕರ್ಣಾಟಕ ಕಲಾಶ್ರೀ ಪಂಡಿತ್ ಸತೀಶ್ ಹಂಪಿಹೊಳಿ ತಬಲಾ, ಪಂಡಿತ್ ಶಿವಕುಮಾರ್ ಮಹಂತ ಹಾರ್ಮೋನಿಯಂ ಮತ್ತು ರಾಜೇಶ್ ಕುಲಕರ್ಣಿ ಮಂಜಿರ ಸಾಥ್ ನೀಡಲಿದ್ದಾರೆ. ಕುಮಾರಿ ಸ್ಮೃತಿ ಎಸ್. ಭಟ್ ಇವರಿಂದ ಹಿಂದೂಸ್ತಾನಿ ಗಾಯನಕ್ಕೆ ಕುಮಾರ್ ಎಂ. ಪ್ರಣವ್ ಪೈ ತಬಲಾದಲ್ಲಿ ಸಹಕರಿಸಲಿದ್ದಾರೆ. ಪಂಡಿತ್ ಸತೀಶ್ ಹಂಪಿಹೊಳಿಯವರ ಶಿಷ್ಯರಾದ ಶ್ರೀರಾಮ ವಿ.…

Read More