Author: roovari

ಮುಂಬಯಿ : ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಬಿಲ್ಲವರ ಎಸೋಸಿಯೇಶನ್ ಮುಂಬಯಿ ವತಿಯಿಂದ ಸಾಹಿತಿ ದಿ. ಎಮ್.ಬಿ. ಕುಕ್ಯಾನ್ ಪ್ರಾಯೋಜಿತ ‘ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ – 2023’ ಹಾಗೂ ದಿ. ಅಚ್ಚು ಸಿ. ಸುವರ್ಣರ ಸ್ಮರಣೆಯಲ್ಲಿ ಸಮಾಜ ಸೇವಾ ಧುರೀಣ ದಿ. ಜಯ ಸಿ. ಸುವರ್ಣ ಪ್ರಾಯೋಜಿತ ‘ಯಕ್ಷಗಾನ ಕಲಾ ಪ್ರಶಸ್ತಿ – 2023’ ಪ್ರದಾನ ಸಮಾರಂಭವು ದಿನಾಂಕ 29-03-2024ರ ಶುಕ್ರವಾರದಂದು ಜರಗಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಲೇಖಕಿ, ಸಾಹಿತಿ, ಮಿತ್ರಾ ವೆಂಕಟ್ರಾಜ್ ಮಾತನಾಡಿ “ಬಿಲ್ಲವರ ಎಸೋಸಿಯೇಶನ್ ಅನೇಕ ಉತ್ತಮ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದೆ. ನಾಗರಿಕತೆಯ ಮೂಲ ಲಕ್ಷಣವೇ ಕಲೆ, ಸಾಹಿತ್ಯ ಮೊದಲಾದ ಸೃಜನಶೀಲ ಅಭಿವ್ಯಕ್ತಿಗಳು. ಇವು ಒಂದು ಸಮುದಾಯದ ಔನ್ನತ್ಯವನ್ನು ತೋರಿಸುತ್ತದೆ. ಬಿಲ್ಲವರ ಎಸೋಸಿಯೇಶನ್ ಈ ನಿಟ್ಟಿನಲ್ಲಿ ಮಾಡುತ್ತಿರುವ ಇಂತಹ ಕಾರ್ಯಕ್ರಮಗಳು ಅತ್ಯಂತ ಶ್ಲಾಘನೀಯ. ಎಸೋಸಿಯೇಶನ್‌ನ ಕಲಾ ಪ್ರೇಮ ತುಂಬಾ ಮೆಚ್ಚುವಂತದ್ದು. ನಾರಾಯಣ ಗುರುಗಳ ವಿದ್ಯಾ ಕ್ರಾಂತಿ…

Read More

ಪುತ್ತೂರು : ಬೆಂಗಳೂರಿನ ರಾಸಾ ಕನ್ನಡ ಮತ್ತು ಕಲಾ ಸಂಸ್ಕೃತಿ ಚಾರಿಟೇಬಲ್‌ ಟ್ರಸ್ಟ್ ಮತ್ತು ರಾಸಾ ಪಬ್ಲಿಕೇಷನ್ಸ್‌ ವತಿಯಿಂದ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ರಾಜ್ಯದ ವಿವಿಧ ಕ್ಷೇತ್ರಗಳ ಸೇವಾ ಸಾಧಕರಿಗೆ ‘ಕರ್ನಾಟಕ ಸೇವಾರತ್ನ ಪ್ರಶಸ್ತಿ-2024’ ಪ್ರದಾನ ಕಾರ್ಯಕ್ರಮವನ್ನು ದಿನಾಂಕ 07-04-2024ರಂದು ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಆಯೋಜಿಸಲಾಗಿದೆ. ಬೆಳಗ್ಗೆ 10 ಗಂಟೆಗೆ ಆರಂಭಗೊಳ್ಳಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ಘಟಕದ ಅಧ್ಯಕ್ಷರಾದ ಶ್ರೀ ಉಮೇಶ್ ನಾಯಕ್ ವಹಿಸಲಿದ್ದು, ಪುತ್ತೂರಿನ ಸುದಾನ ವಿದ್ಯಾ ಸಂಸ್ಥೆಯ ಸಂಚಾಲಕರಾದ ರೇ. ವಿಜಯ ಹಾರ್ವಿನ್ ಮತ್ತು ಬಂಟ್ವಾಳದ ಸೂರ್ಯ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಘುನಾಥ ಉಪಾಧ್ಯಾಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಲೇಖಕಿ ಶ್ರೀಮತಿ ಮಲ್ಲಿಕಾ ಜೆ.ಆರ್. ರೈ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ರಾಸಾ ಕನ್ನಡ ಮತ್ತು ಕಲಾ ಸಂಸ್ಕೃತಿ ಚಾರಿಟೆಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾದ ರಾಸಾ ಆರ್. ಈಶ್ವರ ಅಭಯ್ ಮತ್ತು ರಾಸಾ ಸಂಸ್ಥೆಯ ಟ್ರಸ್ಟಿಯಾದ…

Read More

ಉಡುಪಿ : ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಯಕ್ಷಗಾನ ಕೇಂದ್ರ ಇಂದ್ರಾಳಿ, ಉಡುಪಿ (ಮಾಹೆ), ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ ಮಾಹೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಬಡಗುತಿಟ್ಟು ಯಕ್ಷಗಾನದ ಭಾಗವತಿಕೆ ವಿವಿಧ ಶೈಲಿ-ಮಟ್ಟುಗಳ ಪ್ರಾತ್ಯಕ್ಷಿಕೆ ಮತ್ತು ದಾಖಲೀಕರಣವು ದಿನಾಂಕ 07-04-2024ರಂದು ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಹೆ ಸಹಕುಲಾಧಿಪತಿಗಳಾದ ಡಾ. ಎಚ್.ಎಸ್. ಬಲ್ಲಾಳ್ ನೆರವೇರಿಸಲಿದ್ದು, ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಲಿರುವರು. ಶ್ರೀ ಭುವನೇಂದ್ರ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಸಿ.ಎ. ಶಿವಾನಂದ ಪೈ ಮತ್ತು ಹಿರಿಯ ಭಾಗವತರು ಹಾಗೂ ಗುರುಗಳಾದ ಹೆರಂಜಾಲು ಗೋಪಾಲ ಗಾಣಿಗ ಉಪಸ್ಥಿತರಿವರು. ಬೆಳಿಗ್ಗೆ 10-00 ಗಂಟೆಗೆ ಪ್ರಾತ್ಯಕ್ಷಿಕೆ ನಡೆಯಲಿದ್ದು, ಶ್ರೀ ಹೆರಂಜಾಲು ಗೋಪಾಲ ಗಾಣಿಗ, ವಿಷ್ಣು ಸುಬ್ರಾಯ ಹೆಗಡೆ, ಹಿರೇಮಕ್ಕಿ, ಹಿರಿಯಣ್ಣ ಆಚಾರ್ಯ ಕಿಗ್ಗ, ಉದಯಕುಮಾ‌ರ್ ಹೊಸಾಳ, ನಾಗೇಶ ಕುಲಾಲ್ ನಾಗರಕೊಡಿಗೆ, ಮರವಂತೆ ಕೃಷ್ಣದಾಸ್, ಮಹೇಶ ಕುಮಾ‌ರ್ ಮಂದಾರ್ತಿ, ರಾಘವೇಂದ್ರ ಹೆಗಡೆ ಯಲ್ಲಾಪುರ ಮತ್ತು…

Read More

ಕೊಣಾಜೆ : ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನಾ ಕೇಂದ್ರದ ವತಿಯಿಂದ ನಡೆದ ‘ಕನಕ ಕೀರ್ತನ ಗಂಗೋತ್ರಿ’ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮದಲ್ಲಿ 20 ಗಾಯಕರು ಮತ್ತು ಮೂರು ತಂಡಗಳು 2023-24ನೇ ಸಾಲಿನ ಕನಕ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಕನಕ ಕೀರ್ತನ ಗಂಗೋತ್ರಿಯಲ್ಲಿ ತೋನ್ಸೆ ಪುಷ್ಕಳ ಕುಮಾರ್, ರತ್ನಾವತಿ ಜೆ. ಬೈಕಾಡಿ, ಸುಮನ ಪ್ರಸಾದ್ ಮೂಡಬಿದ್ರೆ, ಪನ್ನಗ ಭಟ್ ಶಿರಸಿ, ಶ್ರೀದೇವಿ ಕಲ್ಲಡ್ಕ ಮತ್ತು ಕಾರ್ತಿಕ್ ಮಂಗಳೂರು ಮೌಲ್ಯಮಾಪಕರಾಗಿ ಭಾಗವಹಿಸಿದ್ದರು. ಕನಕ ಪುರಸ್ಕಾರವು ಸ್ಮರಣಿಕೆ, ಪ್ರಮಾಣ ಪತ್ರ ಮತ್ತು 2000 ನಗದು ಬಹುಮಾನವನ್ನು ಹೊಂದಿದೆ. ಪ್ರೌಢ ಶಾಲಾ ವಿಭಾಗ : ಪೂರ್ವಿ ಬಿ.ಎಸ್. ಇವರು ಅತ್ತಾವರದ ಸರೋಜಿನಿ ಮಧುಸೂದನ್ ಕುಶೆ ಸ್ಕೂಲಿನ 9ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಅತ್ತಾವರದ ಶ್ರೀ ಬಿ. ಶೇಷಪ್ಪ ಬಂಬಿಲ ಮತ್ತು ಶ್ರೀಮತಿ ನಾಗರತ್ನ ಕೆ. ಯಸ್ ದಂಪತಿಗಳ ಪುತ್ರಿಯಾಗಿದ್ದಾರೆ. ಪ್ರಸ್ತುತ ಇವರು ಕರ್ನಾಟಕ ಶಾಸ್ತ್ರಿಯ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ. ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ತೊಕ್ಕೊಟ್ಟು ಇವರ ಗಾನಂ ವೇಶಂ,…

Read More

ಮಂಗಳೂರು : ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ 60 ವರ್ಷಗಳ ಸಾಧನಾ ಪಥದ ನೆಲೆಯಲ್ಲಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ‘ಷಷ್ಟ್ಯಬ್ದ ಅಭಿವಂದನ’ ಸಮಾರಂಭ ದಿನಾಂಕ 30-03-2024ರ ಶನಿವಾರದಂದು ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಕಲ್ಕೂರ ಪ್ರತಿಷ್ಠಾನ ಆಯೋಜಿಸಿದ ಬಹುಭಾಷಾ ಕವನ ಹಾಗೂ ಭಕ್ತಿ ಗೀತೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಹುಭಾಷಾ ಕವನ ಸ್ಪರ್ಧೆಯ ಪ್ರೌಢಶಾಲಾ ವಿಭಾಗದಲ್ಲಿ ಕು. ಕೃತಿ ಬಿ. ಕೆ. ಎಕ್ಕಾರ್ ಪ್ರಥಮ, ಕು. ಧನ್ವಿತಾ ಕಾರಂತ್ ಬಂಟ್ವಾಳ ದ್ವಿತೀಯ, ಹಾಗೂ ಬೆಂಗಳೂರಿನ ಕು. ಸಿಂಚನಾ ಎಸ್. ಶಂಕರ್ ತೃತೀಯ. ಕಾಲೇಜು ವಿಭಾಗದಲ್ಲಿ ಕು. ವಿಜಯಲಕ್ಷ್ಮೀ ಆರ್. ಕಾಮತ್ ವಾರಂಗ ಪ್ರಥಮ, ಶ್ರೀ ಸಮ್ಯಕ್ತ್ ಜೈನ್ ಕಡಬ ದ್ವಿತೀಯ ಹಾಗೂ ಉತ್ತರಕನ್ನಡದ ಕು. ಭಾಗ್ಯಶ್ರೀ ಭಟ್ ತೃತೀಯ. ಮುಕ್ತ ವಿಭಾಗದಲ್ಲಿ ತೀರ್ಥಹಳ್ಳಿಯ ಶ್ರೀ ವಾ. ಮುರಳೀಧರ ಪ್ರಥಮ, ಬಂಟ್ವಾಳದ ಶ್ರೀಮತಿ ಶೈಲಜಾ ಕೇಕಣಾಜೆ ದ್ವಿತೀಯ ಹಾಗೂ ಬೆಂಗಳೂರಿನ ದಿವಾಕರ ಡೋಂಗ್ರೆ ತೃತೀಯ ಬಹುಮಾನವನ್ನು…

Read More

ಕಾಸರಗೋಡು: ಕನ್ನಡ ಭಾಷೆ ಮತ್ತು ಸಂಸ್ಕೃತಿಗಾಗಿ ಸೇವೆ ಸಲ್ಲಿಸಿದ ಹಿರಿಯರನ್ನು ಗೌರವಿಸುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕವು ಆರಂಭಿಸಿದ ‘ಸಾಹಿತ್ಯ ಪರಿಷತ್‌ನ ನಡಿಗೆ ಕನ್ನಡದ ಹಿರಿಯ ಸಾಧಕರ ಕಡೆಗೆ’ ಎಂಬ ಕಾರ್ಯಕ್ರಮದಡಿಯಲ್ಲಿ ಹಿರಿಯ ಪತ್ರಕರ್ತ, ತುಳು ಮತ್ತು ಕನ್ನಡ ಸಾಹಿತಿ ಮಲಾರ್ ಜಯರಾಮ ರೈ ಅವರನ್ನು ಅಭಿನಂದಿಸುವ ಕಾರ್ಯಕ್ರಮವು ದಿನಾಂಕ 30-03-2024ರಂದು ಶಿರಿಯದ ಅಡ್ಕದಲ್ಲಿರುವ ಅವರ ನಿವಾಸದಲ್ಲಿ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್‌ನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅವರು ಮಲಾರ್ ಜಯರಾಮ ರೈ ದಂಪತಿಯನ್ನು ಶಾಲು ಹೊದಿಸಿ ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಿದರು.  ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿದ ಕಸಾಪ ಗಡಿನಾಡ ಘಟಕದ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು “ಪತ್ರಿಕಾ ರಂಗಕ್ಕೆ ಹಾಗೂ ಧಾರ್ಮಿಕ ರಂಗಕ್ಕೆ ತುಳು ಮತ್ತು ಕನ್ನಡ ಭಾಷೆ, ಸಂಸ್ಕೃತಿಗೆ ಮಲಾರ್ ಜಯರಾಮ ರೈಗಳು ನೀಡಿದ ಕೊಡುಗೆ ಅಪಾರವಾದುದು.” ಎಂದರು.  ಕಣಿಪುರ ಪತ್ರಿಕೆಯ ಸಂಪಾದಕ ಎಂ.ನಾ.…

Read More

ಕೋಟ : ಮಿತ್ರ ಮಂಡಳಿ ಕೋಟ, ಡಾ. ಕಾರಂತ ಮಕ್ಕಳ ಸಾಹಿತ್ಯ ವೇದಿಕೆ ಸಾಲಿಗ್ರಾಮ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಬ್ರಹ್ಮಾವರ ತಾಲೂಕು ಘಟಕ ಇದರ ಜಂಟಿ ಆಶ್ರಯದಲ್ಲಿ ‘ಯುಗಾದಿ ಸಾಹಿತ್ಯೋತ್ಸವ’ವನ್ನು ದಿನಾಂಕ 11-04-2024ರಂದು ಕೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾರಂತ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ ಗಂಟೆ 9.30ರಿಂದ ಶ್ರೀಮತಿ ಪಲ್ಲವಿ ತುಂಗ ಇವರಿಂದ ಅಡಿಗ ಕಾವ್ಯ ರಸಧಾರೆ. 10-00 ಗಂಟೆಗೆ ಕೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾವತಿ ಇವರ ಉಪಸ್ಥಿತಿಯಲ್ಲಿ ಕುಂದಾಪುರದ ಸಾಹಿತಿ ಹಿರಿಯ ನ್ಯಾಯವಾದಿಯಾದ ಶ್ರೀ ಎ.ಎಸ್.ಎನ್. ಹೆಬ್ಬಾರ್ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಗಂಟೆ 10-45ಕ್ಕೆ ‘ಸಾಹಿತ್ಯ ಸಲ್ಲಾಪ’ದಲ್ಲಿ ಉಪನ್ಯಾಸ -1ರಲ್ಲಿ ‘ಶ್ರೀ ನೀಲಾವರ ಸುರೇಂದ್ರ ಅಡಿಗರ ಶೈಕ್ಷಣಿಕ ಕೃತಿಗಳು’ ಎಂಬ ವಿಷಯದ ಬಗ್ಗೆ ಉಪಪ್ರಾಂಶುಪಾಲರಾದ ಡಾ. ಕೆ. ಅಶೋಕ ಕಾಮತ್ ಇವರು, ಉಪನ್ಯಾಸ -2ರಲ್ಲಿ ‘ಅಡಿಗ, ಇತ್ತೀಚಿನ ಸಾಹಿತ್ಯಾನುಸಂಧಾನ’ ಎಂಬ ವಿಷಯದ ಬಗ್ಗೆ ಸಾಹಿತಿ ಮತ್ತು ಶಿಕ್ಷಕರಾದ…

Read More

ಉಡುಪಿ : ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಇದರ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ತು (ರಿ.) ಉಡುಪಿ ಜಿಲ್ಲೆ ಮತ್ತು ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ (ರಿ.) ಇವರ ಸಹಯೋಗದಲ್ಲಿ ಉಡುಪಿಯ ಶ್ರೀ ರಾಮ್ ಜಾನಪದ ಕಲಾ ತಂಡದವರಿಂದ ‘ಜಾನಪದ ವೈಭವ’ವು ಅಂಬಲಪಾಡಿ ದೇವಸ್ಥಾನದ ಶ್ರೀ ಜನಾರ್ದನ ಬಯಲು ರಂಗ ಮಂದಿರದಲ್ಲಿ ದಿನಾಂಕ 07-04-2024ರಂದು ಸಂಜೆ 6 ಗಂಟೆಗೆ ನಡೆಯಲಿದೆ.

Read More

ಮಂಜೇಶ್ವರ : ಸಾಹಿತಿ, ವ್ಯಂಗ್ಯಚಿತ್ರಗಾರ, ಪತ್ರಕರ್ತ, ಅಂಕಣಬರಹಗಾರ, ಸಂಘಟಕ, ಕೃಷಿಕ, ಶಿಬಿರ ಸಂಪನ್ಮೂಲ ವ್ಯಕ್ತಿಯಾಗಿ ಸಮಾಜದ ವಿವಿಧ ಉನ್ನತ ಕ್ಷೇತ್ರಗಳಲ್ಲಿ ಸದಾ ತೊಡಗಿಸಿಕೊಂಡಿರುವ ಕಾಸರಗೋಡು ಜಿಲ್ಲೆಯ ಅಡೂರು ಗ್ರಾಮದ ಪ್ರಶಾಂತ ರಾಜ ವಿ ತಂತ್ರಿ (ವಿರಾಜ್ ಅಡೂರು) ಅವರಿಗೆ ದಿನಾಂಕ 01-04-2024ರ ಸೋಮವಾರದಂದು ‘ಗಡಿನಾಡ ಚೈತನ್ಯ -2024’ ಪ್ರಶಸ್ತಿ ಪ್ರದಾನ ಮಾಡಲಾಯಿತು. ವರ್ಕಾಡಿ ಕಾವಿ ಸುಬ್ರಹ್ಮಣ್ಯ ಕ್ಷೇತ್ರದ ಬ್ರಹ್ಮಕಲಶದ ಸಂದರ್ಭದಲ್ಲಿ ಕಾಸರಗೋಡಿನ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕಂತಿಕ ಸಂಘದ ವತಿಯಿಂದ ನಡೆದ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ವಿರಾಜ್ ಅಡೂರು ಅವರ ಗಡಿನಾಡಿನಲ್ಲಿ ಕನ್ನಡ ಭಾಷೆಯ ಕುರಿತ ಕಾಳಜಿ ಹಾಗೂ ಸಮಾಜಮುಖಿ ಕೆಲಸಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಿಲಾಯಿತು. ಕಾರ್ಯಕ್ರಮದಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ಡಾ.ವಾಣಿಶ್ರೀ ಕಾಸರಗೋಡು, ಕಾರ್ಯದರ್ಶಿ ಗುರುರಾಜ್ ಕಾಸರಗೋಡು, ಜಯಂತಿ ಪಿ. ರಾಜ್, ಆದ್ಯಂತ್ ಅಡೂರು, ಉಷಾ ಸುಧಾಕರನ್, ವಿದುಷಿ ರೇಖಾ ದಿನೇಶ್ ಮಂಜೇಶ್ವರ, ಕಾವಿ ಸುಬ್ರಹ್ಮಣ್ಯ…

Read More

ಕಾಸರಗೋಡು : ಕಾಸರಗೋಡಿನ ಕೂಡ್ಲಿನಲ್ಲಿ ದೇಶೀಯ ಅಧ್ಯಾಪಕ ಪರಿಷತ್ ಇದರ ಕಾರ್ಯಾಲಯದ ಉದ್ಘಾಟನೆಯು ದಿನಾಂಕ 03-04-2024 ರಂದು ನಡೆಯಿತು. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಕಲಾವಿದರಿಂದ ‘ವೀರಮಣಿ ಕಾಳಗ’ ಎಂಬ ಪ್ರಸಂಗವು ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಶತ್ರುಘ್ನನಾಗಿ ಮಾ. ಮನ್ವಿತ್ ಕೃಷ್ಣ ನಾರಾಯಣಮಂಗಲ ಅವರ ರಂಗನಡೆಗಳು, ಹನುಮನಾಗಿ ಕು. ಅಭಿಜ್ಞಾ ಭಟ್ ಅವರ ಉತ್ತಮ ವಾಕ್ಸರಣಿ, ವೀರಮಣಿಯ ಗತ್ತುಗಾರಿಕೆಯೊಂದಿಗೆ ಡಾ. ಶ್ರೀಶ ಕುಮಾರ ಪಂಜಿತ್ತಡ್ಕ, ಶಿವನಾಗಿ ಶ್ರೀ ಶಶಿಧರ ಕುದಿಂಗಿಲ ಅವರ ರಂಗವೈಖರಿ ಹಾಗೂ ಲಾಲಿತ್ಯ ಗಾಂಭೀರ್ಯದೊಂದಿಗೆ ಶ್ರೀರಾಮನಾಗಿ ವಿನಯ ಚಿಗುರುಪಾದೆ ಅವರು ಪ್ರಸಂಗದ ಯಶಸ್ಸಿಗೆ ಕಾಣಿಕೆಯಿತ್ತರು. ಭಾಗವತರಾಗಿ ಶ್ರೀ ಕೇಶವ ಪ್ರಸಾದ, ಚೆಂಡೆ ಹಾಗೂ ಮದ್ದಳೆಗಳಲ್ಲಿ ಶ್ರೀ ಚೇವಾರು ಶಂಕರ ಕಾಮತ್, ಯಕ್ಷಗಾನ ಗುರು ಶ್ರೀ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಹಾಗೂ ಶ್ರೀ ಕೃಷ್ಣಮೂರ್ತಿ ಎಡನಾಡು ಹಿಮ್ಮೇಳಗಳಲ್ಲಿ ಸಹಕರಿಸಿದರು. ಪ್ರಬುದ್ಧ ಪ್ರೇಕ್ಷಕ ಗಡಣ ಮೌನವಾಗಿ ವೀಕ್ಷಿಸಿ, ಸೂಕ್ತ ಪ್ರತಿಕ್ರಿಯೆ ನೀಡಿದರು.

Read More