Author: roovari

ಕಾಸರಗೋಡು : ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು, ಸ್ವರ ಚಿನ್ನಾರಿ, ನಾರಿ ಚಿನ್ನಾರಿ ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದಲ್ಲಿ ರಂಗಚಿನ್ನಾರಿಯ 18ನೇ ವಾರ್ಷಿಕೋತ್ಸವ ಮತ್ತು ರಂಗಚಿನ್ನಾರಿ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 30-03-2024ರಂದು ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಉದ್ಘಾಟಿಸಿ ಆಶೀರ್ವಚನ ನೀಡಿ “ಸುಪ್ತ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ಕೈಂಕರ್ಯ ಶ್ಲಾಘನೀಯವಾದುದು. ಈ ನಿಟ್ಟಿನಲ್ಲಿ ರಂಗಚಿನ್ನಾರಿ ನಡೆಸುತ್ತಿರುವ ಸತ್ಕಾರ್ಯ ಮಾದರಿ ಹಾಗೂ ಆದರ್ಶವಾಗಿದೆ” ಎಂದು ಹೇಳಿದರು. ಧಾರ್ಮಿಕ ಮುಂದಾಳು ಡಾ. ಅನಂತ ಕಾಮತ್ ಅಧ್ಯಕ್ಷತೆ ವಹಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸಂಕಬೈಲು ಸತೀಶ ಅಡಪ ಅವರು ಮಾತನಾಡಿ ಯಕ್ಷಗಾನವನ್ನು ಉಳಿಸುವ ನಿಟ್ಟಿನಲ್ಲಿ ‘ಯಕ್ಷ ಚಿನ್ನಾರಿ’ ಘಟಕ ಆರಂಭಿಸುವಂತೆ ವಿನಂತಿಸಿಕೊಂಡರು. ಅತಿಥಿಗಳಾಗಿ ಭಾಗವಹಿಸಿದ ಪ್ರಸಿದ್ಧ ಕಾನತ್ತೂರು ನಾಲ್ವರ್ ದೈವಸ್ಥಾನದ ಟ್ರಸ್ಟಿ ಖ್ಯಾತ ಸಾಹಿತಿ ಕೆ.ಪಿ. ಶಶಿಧರನ್ ನಾಯರ್…

Read More

ತೆಕ್ಕಟ್ಟೆ : ತೆಕ್ಕಟ್ಟೆಯ ಹಯಗೀವ ಕಲ್ಯಾಣ ಮಂಟಪದಲ್ಲಿ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಆಯೋಜಿಸಿದ ಯಶಸ್ವಿ ಕಲಾವೃಂದದ ಬೆಳ್ಳಿ ಹಬ್ಬದ ಪ್ರಯುಕ್ತ  ಶ್ವೇತಯಾನ ಶ್ವೇತ ಸಂಜೆ-13 ಕಾರ್ಯಕ್ರಮವು ದಿನಾಂಕ 31-03-2024 ರಂದು ನಡೆಯಿತು. ಕಾರ್ಯಕ್ರಮಮವನ್ನು ಉದ್ಘಾಟಿಸಿ ಮಾತನಾಡಿದ ಯಕ್ಷಗಾನದ  ಚಿಂತಕ ವಿಮರ್ಶಕರಾದ  ಹೆಚ್. ಸುಜಯೀಂದ್ರ ಹಂದೆ “ಕಲಾ ಮಾದ್ಯಮಗಳಿಗೆ ಭಾಷೆ, ದೇಶ ಹಾಗೂ ಧರ್ಮಗಳ ಎಲ್ಲೆಯನ್ನು ಮೀರಿ ಜಗದ ಜನರ ಮನಸ್ಸುಗಳನ್ನು ಬೆಸೆಯುವ ವಿಶಿಷ್ಟ ಗುಣವಿದೆ. ಅದರಲ್ಲಿಯೂ ಯಕ್ಷಗಾನ ತನ್ನ ಅನನ್ಯತೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಯಕ್ಷಗಾನದ ನೇಪಥ್ಯ ಸಹಾಯಕರನ್ನೂ ಒಳಗೊಂಡು ಸರ್ವ ಕಲಾವಿದರ ಸಂಘಟಕರ ಪರಿಶ್ರಮ ಸಾರ್ಥಕವಾಗಬೇಕಾದರೆ ರಾಜ್ಯ ಕಲೆಯಾಗಿ ಮಾನ್ಯತೆ ಪಡೆಯಬೇಕು.” ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರಾಯೋಜಕರಾದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ತೆಕ್ಕಟ್ಟೆ ಅವರನ್ನು ಸನ್ಮಾನಿಸಲಾಯಿತು. ಯಕ್ಷಾಂಗಣ ಟ್ರಸ್ಟಿನ ಸಂಚಾಲಕ ಸುದರ್ಶನ ಉರಾಳ, ಯಶಸ್ವಿ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ, ಕಾರ್ಯದರ್ಶಿ ವೆಂಕಟೇಶ ವೈದ್ಯ,…

Read More

ಬೆಂಗಳೂರು : ಶ್ರೀ ವಾಲ್ಮೀಕಿ ಗಮಕ ಪಾಠ ಶಾಲೆಯ ವತಿಯಿಂದ ಗಮಕಿ ಶ್ರೀಮತಿ ಪದ್ಮಿನಿ ರಾಮಮೂರ್ತಿ ಅವರ ಮನೆಯ ಆತ್ಮೀಯ ವಾತಾವರಣದಲ್ಲಿ ಕವಿ ಕುಮಾರ ವ್ಯಾಸ ಜಯಂತಿಯನ್ನು ದಿನಾಂಕ 24-03-2024ರ ಭಾನುವಾರ ಸಂಜೆ ಆಚರಿಸಲಾಯಿತು. ಗಮಕ ಭೀಷ್ಮ ದಿ. ಬಿ.ಎಸ್.ಎಸ್. ಕೌಶಿಕರ ಮಕ್ಕಳಾದ ಪದ್ಮಿನಿ ರಾಮಮೂರ್ತಿ ಮತ್ತು ಸತ್ಯವತಿ ಕೇಶವ ಮೂರ್ತಿಯವರ ನೇತೃತ್ವದಲ್ಲಿ ಆರಂಭವಾದ ಸಭೆಯಲ್ಲಿ ಮೊದಲು ಕುಮಾರ ಚಿರಾಗ್ ಕೌಶಿಕನ ಪ್ರಾರ್ಥನೆ, ಶ್ಯಾಮಲಾ ಅವಧಾನಿ ಮತ್ತು ಅವರ ಶಿಷ್ಯರಿಂದ ಸೌಂದರ್ಯ ಲಹರಿಯ ಕೆಲವು ಸೋತ್ರಗಳ ಗಾಯನ ನಡೆಯಿತು. ಕುಮಾರ ವ್ಯಾಸ ಭಾರತದ ಹನುಮ-ಭೀಮ ಸಮಾಗಮನದ ಭಾಗವನ್ನು ಶ್ರೀಮತಿಯರಾದ ಮಯೂರಿ ವಾಚನದಲ್ಲಿ ಮಾಧುರಿ ವ್ಯಾಖ್ಯಾನದಲ್ಲಿ ಹಿತಮಿತವಾಗಿಯೂ ಮಧುರವಾಗಿಯೂ ಎಲ್ಲರನ್ನೂ ಬೆರಗುಗೊಳಿಸಿದರು. ಸಹೋದರಿಯರಿಬ್ಬರೂ ಭವಿಷ್ಯದ ಉತ್ತಮ ಕಲಾವಿದರಾಗುವಲ್ಲಿ ಸಂದೇಹವಿಲ್ಲ. ಆನಂತರ ಹಿರಿಯರಾದ ಶ್ರೀಮತಿ ಜಯಲಕ್ಷ್ಮೀ ಗೋಪಿನಾಥ್, ಗೀತಾ ಪ್ರಭಾಕರ್, ವಿಶ್ವರೂಪ ದರ್ಶನವನ್ನು ಕೆಲವೇ ಪದ್ಯಗಳ ವಾಚನ, ವ್ಯಾಖ್ಯಾನಗಳ ಮೂಲಕ ಶ್ರೋತೃಗಳಿಗೆ ತಲುಪಿಸಿ ಭಾವಪರವಶರನ್ನಾಗಿಸಿದರು. ಮುಂದೆ ಹೊಸಹಳ್ಳಿಯ ವಿದ್ವಾನ್ ಶ್ರೀ ವೆಂಕಟರಮಣ ಅವರ ವಯೊಲಿನ್…

Read More

ಸುರತ್ಕಲ್ : ಪ್ರೊ. ಪಿ. ಕೆ. ಮೊಯ್ಲಿ ಅಭಿನಂದನಾ ಸಮಿತಿ ಸುರತ್ಕಲ್ ಮತ್ತು ಗೋವಿಂದ ದಾಸ ಕಾಲೇಜಿನ ಡಾ. ಸೀ. ಹೊಸಬೆಟ್ಟು ಅಧ್ಯಯನ ಕೇಂದ್ರ ಮತ್ತು ಮಾನವಿಕ ಸಂಘದ ಸಹಭಾಗಿತ್ವದಲ್ಲಿ ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಹಿರಿಯ ಲೇಖಕ, ಶಿಕ್ಷಣ ತಜ್ಞ ಹಾಗೂ ಪತ್ರಕರ್ತರಾಗಿ ಜನಪ್ರಿಯರಾಗಿರುವ ಪ್ರೊ. ಪಿ.ಕೆ. ಮೊಯ್ಲಿ ಅವರ ಅಭಿನಂದನಾ ಸಮಾರಂಭವು ದಿನಾಂಕ 06-04-2024ರಂದು ಗೋವಿಂದ ದಾಸ ಕಾಲೇಜಿನ ದೃಶ್ಯಶ್ರಾವ್ಯ ಮಂದಿರದಲ್ಲಿ ಸಂಜೆ3.30ರಿಂದ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರೊ. ಪಿ. ಕೆ. . ಮೊಯ್ಲಿಯವರ ಅಭಿನಂದನಾ ಕೃತಿ ‘ಗುರುಭ್ಯೋ ನಮಃ’ ಲೋಕಾರ್ಪಣೆಗೊಳ್ಳಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಹಿಂದೂ ವಿದ್ಯಾದಾಯಿನೀ  ಸಂಘದ ಅಧ್ಯಕ್ಷ ಹೆಚ್. ಜಯಚಂದ್ರ ಹತ್ವಾರ್ ವಹಿಸಲಿದ್ದು ಕೃತಿ ಬಿಡುಗಡೆಯನ್ನು ಹಿರಿಯ ವಿದ್ವಾಂಸ ಡಾ. ಪ್ರಭಾಕರ ಜೋಷಿ ನಡೆಸಿಕೊಡಲಿದ್ದಾರೆ. ಪ್ರೊ. ಪಿ. ಕೆ. ಮೊಯ್ಲಿಯವರು ದಕ್ಷಿಣ ಕನ್ನಡ ಜಿಲ್ಲಾ ಬೋರ್ಡಿನ ಆಡಳಿತಕ್ಕೊಳಪಟ್ಟ ವಿವಿಧ ಪ್ರೌಢಶಾಲೆಗಳಲ್ಲಿ ಪದವೀಧರ ಶಿಕ್ಷಕರಾಗಿ, ಹಿಂದಿ ಪಂಡಿತರಾಗಿ ಬೈಂದೂರಿನಿಂದ ತೊಡಗಿ ಪಂಜ, ಬೆಳ್ಳಾರೆ, ಹಿರಿಯಡ್ಕ, ಕಾರ್ಕಳದವರೆಗೆ…

Read More

ಸುರತ್ಕಲ್ : ಮಣಿಕೃಷ್ಣ ಸ್ವಾಮಿ ಅಕಾಡೆಮಿ ಸುರತ್ಕಲ್ ಮತ್ತು ನಾಗರಿಕ ಸಲಹಾ ಸಮಿತಿಗಳ ಸಹಯೋಗದಲ್ಲಿ ಸುರತ್ಕಲ್ ಇನ್ನರ್‌ವೀಲ್ ಕ್ಲಬ್ ಸುರತ್ಕಲ್ ಸಹಭಾಗಿತ್ವದಲ್ಲಿ ಸುರತ್ಕಲ್ ಮೇಲ್ಸೇತುವೆಯ ತಳ ಭಾಗದಲ್ಲಿ ‘ಉದಯರಾಗ-51’ನೇ ಶಾಸ್ತ್ರೀಯ ಸಂಗೀತ ಸರಣಿ ಕಾರ್ಯಕ್ರಮವು ದಿನಾಂಕ 24-03-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸುರತ್ಕಲ್ ಇನ್ನರ್ ವೀಲ್‌ಕ್ಲಬ್ ಅಧ್ಯಕ್ಷೆ ಸಾವಿತ್ರಿ ರಮೇಶ್ ಭಟ್ “ಶಾಸ್ತ್ರೀಯ ಸಂಗೀತ ಸಹೃದಯರ ಮನಸ್ಸನ್ನು ಅರಳಿಸುವ ಶ್ರೇಷ್ಠ ಕಲಾ ಪ್ರಕಾರವಾಗಿದ್ದು, ಕಲಾ ವಾತಾವರಣವನ್ನು ಕಲ್ಪಿಸಿ ಕೊಡಬೇಕು” ಎಂದು ನುಡಿದರು. ರೋಶ್ನಿ ಉಪಾಧ್ಯಾಯ ಸಾರಡ್ಕ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ತನ್ಮಯಿ ಉಪ್ಪಂಗಳ ಪುತ್ತೂರು ಅವರು ವಯಲಿನ್ ನಲ್ಲಿ ಹಾಗೂ ಮೃದಂಗದಲ್ಲಿ ಅವಿನಾಶ್ ಬಿ. ಮಂಗಳೂರು ಸಹಕರಿಸಿದರು. ಸುರತ್ಕಲ್ ನಾಗರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಕೆ. ರಾಜಮೋಹನ್ ರಾವ್, ಸಂಯೋಜಕ ಸತೀಶ್ ಸದಾನಂದ್, ಪ್ರೊ. ರಮೇಶ್ ಭಟ್ ಎಸ್.ಜಿ., ಸಾಹಿತಿ ರಘುರಾಮ ರಾವ್ ಬೈಕಂಪಾಡಿ ಮತ್ತಿತರರು ಉಪಸ್ಥಿತರಿದ್ದರು. ಮಣಿಕೃಷ್ಣ ಸ್ವಾಮಿ ಅಕಾಡೆಮಿಯ…

Read More

ತೆಕ್ಕಟ್ಟೆ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಲಕ್ಷ್ಮೀಶ ಪಾವಂಜೆ ಪ್ರಾಯೋಜನೆಯಲ್ಲಿ ಧಮನಿ ಹಾಗೂ ದಿಮ್ಸಾಲ್ ಸಹಯೋಗದೊಂದಿಗೆ ಸಿನ್ಸ್ 1999  ಶ್ವೇತಯಾನದ 12ನೇ ಕಾರ್ಯಕ್ರಮ ತೆಕ್ಕಟ್ಟೆ ಹಯಗ್ರೀವದಲ್ಲಿ ದಿನಾಂಕ 29-03-2024 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ವೇದಮೂರ್ತಿ ಸುಬ್ರಹ್ಮಣ್ಯ ಭಟ್ ತೂಕೂರು ಮಾತನಾಡಿ “ಸಂಸ್ಥೆಯ 25ರ ಸಂಭ್ರಮದಲ್ಲಿ 60 ಸಂವತ್ಸರದ ಸಂಭ್ರಮವನ್ನು ಆಚರಿಸುತ್ತಿರುವುದು ನಿಜಕ್ಕೂ ಸ್ತುತ್ಯರ್ಹ. ತೆಕ್ಕಟ್ಟೆ ಆನಂದ ಮಾಸ್ತರ್ ಯಕ್ಷಗಾನ ಕ್ಷೇತ್ರದಲ್ಲಿ ಅತ್ಯಮೋಘ ಸಾಧನೆ ಸಲ್ಲಿಸಿದವರು. ಅಂತಹ ಕ್ಷೇತ್ರದಲ್ಲಿ ಇಂತಹ ಸಂಸ್ಥೆ ಅತೀವ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಅವರ ಹೆಸರಿಗೆ ಸರಿಸಾಟಿಯಾಗಿ ನಿಂತಿರುವುದು ನಿಜಕ್ಕೂ ಹೆಮ್ಮೆ ಎನಿಸುತ್ತಿದೆ. ಧಾರ್ಮಿಕ ಕಾರ್ಯಕ್ರಮಕ್ಕೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಸಾಮ್ಯತೆ ಇದೆ. ಒಂದನ್ನು ಬಿಟ್ಟು ಇನ್ನೊಂದಿಲ್ಲ. ಕರಾವಳಿ ಭಾಗದಲ್ಲಿ ಯಕ್ಷಗಾನವನ್ನೇ ಪ್ರಧಾನವಾಗಿಸಿಕೊಂಡು ದೇಶವೇ ಗಮನಿಸುವಂತೆ ಮಾಡಿದೆ.”ಎಂದರು. ಇದೇ ಸಂದರ್ಭದಲ್ಲಿ ಶ್ರೀ ಲಕ್ಷ್ಮೀಶ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬೆಟ್ಟಿನ ಮನೆ ವಾದಿರಾಜ ಹತ್ವಾರ್, ಉದ್ಯಮಿ ಗೋಪಾಲ ಪೂಜಾರಿ ಕುಂದಾಪುರ, ಕು. ಹರ್ಷಿತಾ ಅಮೀನ್ ಕೊಮೆ, ಕಾರ್ಯದರ್ಶಿ…

Read More

ಮಂಗಳೂರು : ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದಲ್ಲಿ ಕಾಸರಗೋಡಿನ ಡಾ. ವಾಣಿಶ್ರೀ ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ಸದಸ್ಯರಿಂದ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮವು ದಿನಾಂಕ 31-03-2024ರ ಭಾನುವಾರದಂದು ನಡೆಯಿತು. ಕಾರ್ಯಕ್ರಮದಲ್ಲಿ ಗುರುರಾಜ್ ಕಾಸರಗೋಡು, ಅಕ್ಷತಾ ಅಡಿಗ, ಸುನೇತ್ರ ಉಡುಪ, ಭೂಮಿಕಾ ಉಡುಪ, ನಿವೇದಿತಾ, ಶ್ರೀಲತಾ ಹೆಬ್ಬಾರ್, ವಿಶ್ರುತಾ ಹೇರ್ಲೆ, ನಾಗರತ್ನ ಹೇರ್ಲೆ, ಸುಮಾಶ್ರೀ ಧನ್ಯ, ಅಮೃತಾ ಉಪಾಧ್ಯ, ಚಿನ್ಮಯಿ ಎಸ್, ಸ್ಮಿತಾ ಮಹಿಷಿ, ವನಿತ ಉಪಾಧ್ಯ, ಶುಭಾ ಅಡಿಗ, ಶಶಿಕಲಾ ಐತಾಳ್, ಹಂಶಿತ್ ಆಳ್ವ ಬಾಕ್ರಂಬೈಲ್, ಸೋನಿಕ ವಿ., ಜೋಶಿಕಾ ಎಸ್., ವಿಶಿಕಾ ಸಾಲ್ಯಾನ್, ಅವನಿ ಎಂ.ಎಸ್. ಸುಳ್ಯ, ಸತ್ಯಾಕಿ ಪಂಜಿಗರ್, ಗೋಪಾಲಕೃಷ್ಣ ಭಟ್, ಕಾರ್ತಿಕೇಯ ಉಡುಪ, ವೈಷ್ಣವಿ, ದೀಪಿಕಾ, ಪಂಚಮಿ, ಅದಿತಿ ಮೆಹೆಂದಲೆ, ದ್ರಿಶ್ಯ ಸಾಲ್ಯಾನ್, ಸೀಯಾ ಜೆ.ಕೆ., ಪಮ್ನಿ ಶೆಟ್ಟಿ, ಪವಿತ್ರ, ವೈಷ್ಣವಿ ಎಸ್. ಶೆಟ್ಟಿ, ಧೃತಿ ಎಸ್. ಕೊಟ್ಟಾರಿ, ಸಾಕ್ಷಿ ಗುರುಪುರ ಮತ್ತು ಸಾನ್ವಿ ಗುರುಪುರ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ದೇವಸ್ಥಾನದ…

Read More

ಸಾಣೇಹಳ್ಳಿ : ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆ ಸಾಣೇಹಳ್ಳಿ ಇದರ 2023-24ನೇ ಸಾಲಿನ ವಿದ್ಯಾರ್ಥಿಗಳ ಅಭ್ಯಾಸ ಮಾಲಿಕಾ ನಾಟಕ ಪ್ರದರ್ಶನ ‘ಆ ತೋಟ’ ದಿನಾಂಕ 06-04-2024ರಂದು ಸಂಜೆ 7 ಗಂಟೆಗೆ ಸಾಣೇಹಳ್ಳಿಯ ಎಸ್.ಎಸ್. ರಂಗ ಮಂದಿರದಲ್ಲಿ ನಡೆಯಲಿದೆ. ಮೂಲ ಆಂಟನ್ ಚೆಕೊವ್ ಇವರು ರಚಿಸಿರುವಂತಹ ‘The Cherry Orchard’ ನಾಟಕವನ್ನು ಅಕ್ಷರ ಕೆ.ವಿ. ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ನಾಟಕಕ್ಕೆ ಸಂಗೀತ ವಿನ್ಯಾಸ ಮತ್ತು ನಿದೇಶನವನ್ನು ಮಧು ಎಂ. ಇವರು ಮಾಡಿದ್ದು, ಸಹ ನಿರ್ದೇಶಕರಾಗಿ ವಿಶ್ವನಾಥ್ ಸ್ವಾಮಿ ಹೆಚ್.ಎಮ್. ಸಹಕರಿಸಿದ್ದಾರೆ. ನಾಟಕದ ವಸ್ತ್ರವಿನ್ಯಾಸವನ್ನು ವಿದ್ಯಾ ರಾಣಿ ಎ.ಎನ್. ಮಾಡಿದ್ದು, ಸಂಗೀತದಲ್ಲಿ ಗರೀಮ, ಶಾಂತನು, ಮಧು ಈ, ಶಿವು ಮತ್ತು ಚಂದ್ರಮ್ಮ ಸಹಕರಿಸಿದ್ದಾರೆ.

Read More

ಕಾಸರಗೋಡು : ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ ಹಾಗೂ ಬಿ. ಶಿವಕುಮಾರ್ ಕೋಲಾರ ಸಾರತ್ಯದ ಸ್ವರ್ಣಭೂಮಿ ಫೌಂಡೇಷನ್ ಕೋಲಾರ ಜಂಟಿಯಾಗಿ ನಡೆಸಲಿರುವ ‘ಕೇರಳ -ಕರ್ನಾಟಕ ಗಡಿನಾಡು ಕನ್ನಡ ಸಾಂಸ್ಕೃತಿಕ ಉತ್ಸವ 2024’ವು ದಿನಾಂಕ 11-04-2024ರ ಗುರುವಾರ ಮಧ್ಯಾಹ್ನ 2 ಗಂಟೆಗೆ ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಬಯಲು ರಂಗ ಮಂಟಪದಲ್ಲಿ ನಡೆಯಲಿದೆ. ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶ್ರೀ ರವಿ ನಾಯ್ಕಾಪು ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಡಾ. ಶರಣಪ್ಪ ಗಬ್ಬೂರು ಕೋಲಾರ ಇವರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈಯುವರು. ಶ್ರೀ ವಿ.ಬಿ. ಕುಳಮರ್ವ, ಶ್ರೀ ಎ.ಆರ್. ಸುಬ್ಬಯ್ಯಕಟ್ಟೆ, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಶ್ರೀ ರಾಧಾಕೃಷ್ಣ ಕೆ. ಉಳಿಯತಡ್ಕ, ಪ್ರೊ. ಎ. ಶ್ರೀನಾಥ್,…

Read More

ಮಂಗಳೂರು : ಕನ್ನಡ ಸಂಘರ್ಷ ಸಮಿತಿಯು ಖ್ಯಾತ ವೈದ್ಯೆ, ಹೆಸರಾಂತ ಕಥೆಗಾರ್ತಿಯಾಗಿದ್ದ ಡಾ. ಅನುಪಮಾ ನಿರಂಜನ ಅವರ ಹುಟ್ಟುಹಬ್ಬದ ಅಂಗವಾಗಿ ಉದಯೋನ್ಮಖ ಕಥೆಗಾರ್ತಿಯರಿಗೆ ಮಹಿಳಾ ಕಥಾ ಸ್ಪರ್ಧೆ ಆಯೋಜಿಸಿದೆ. ಇದುವರೆಗೂ ಒಂದೂ ಕಥಾ ಸಂಕಲನ ಪ್ರಕಟಿಸದೆ ಇರುವವರು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಕಥೆಯು ಸ್ವಂತ ರಚನೆಯಾಗಿದ್ದು, ಮಹಿಳಾ ಕೇಂದ್ರಿತ ಕಥಾವಸ್ತು ಆಗಿರಬೇಕು. ಸ್ಪರ್ಧೆಗೆ ಕಳುಹಿಸುವ ಕಥೆಯು ಈ ಮೊದಲು ಎಲ್ಲೂ ಪ್ರಕಟವಾಗಿರಬಾರದು. 1200 ಪದಗಳನ್ನು ಮೀರದ, ಅಥವಾ ಎ4 ಅಳತೆಯ ಕಾಗದದಲ್ಲಿ 5 ಪುಟಗಳು ಮೀರದಂತೆ  ಹಾಳೆಯ ಒಂದೇ ಮಗ್ಗುಲಲ್ಲಿ ಕನ್ನಡದಲ್ಲಿ ಕೈಯಲ್ಲಿ ಬರೆದಿರಬಹುದು ಅಥವಾ ಡಿಟಿಪಿ ಮಾಡಿಸಿರಬಹುದು. ರೂ.200/-ಗಳ ಪ್ರವೇಶ ಶುಲ್ಕದೊಡನೆ (ಪ್ರವೇಶ ಶುಲ್ಕ ರೂ.200/-ಗಳನ್ನು ‘ಕನ್ನಡ ಸಂಘರ್ಷ ಸಮಿತಿ, ಉಳಿತಾಯ ಖಾತೆ ಸಂಖ್ಯೆ: 200300011051, IFSC CODE: HDFC0CSRCBL, ಬ್ಯಾಂಕ್: ಶ್ರೀರಾಮ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಮಲ್ಲೇಶ್ವರಂ’ ಖಾತೆಗೆ ಜಮಾ ಮಾಡಬಹುದಾಗಿದೆ) ದಿನಾಂಕ 30-04-2024ರೊಳಗೆ ತಲುವಂತೆ ಕಳುಹಿಕೊಡಬೇಕು. ತಡವಾಗಿ ಬಂದ ಕಥೆಯನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. ಕಥೆಯನ್ನು ‘ಎ.ಎಸ್.‌…

Read More