Author: roovari

ಮಂಗಳೂರು : ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದಲ್ಲಿ ಕಾಸರಗೋಡಿನ ಡಾ. ವಾಣಿಶ್ರೀ ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ಸದಸ್ಯರಿಂದ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮವು ದಿನಾಂಕ 31-03-2024ರ ಭಾನುವಾರದಂದು ನಡೆಯಿತು. ಕಾರ್ಯಕ್ರಮದಲ್ಲಿ ಗುರುರಾಜ್ ಕಾಸರಗೋಡು, ಅಕ್ಷತಾ ಅಡಿಗ, ಸುನೇತ್ರ ಉಡುಪ, ಭೂಮಿಕಾ ಉಡುಪ, ನಿವೇದಿತಾ, ಶ್ರೀಲತಾ ಹೆಬ್ಬಾರ್, ವಿಶ್ರುತಾ ಹೇರ್ಲೆ, ನಾಗರತ್ನ ಹೇರ್ಲೆ, ಸುಮಾಶ್ರೀ ಧನ್ಯ, ಅಮೃತಾ ಉಪಾಧ್ಯ, ಚಿನ್ಮಯಿ ಎಸ್, ಸ್ಮಿತಾ ಮಹಿಷಿ, ವನಿತ ಉಪಾಧ್ಯ, ಶುಭಾ ಅಡಿಗ, ಶಶಿಕಲಾ ಐತಾಳ್, ಹಂಶಿತ್ ಆಳ್ವ ಬಾಕ್ರಂಬೈಲ್, ಸೋನಿಕ ವಿ., ಜೋಶಿಕಾ ಎಸ್., ವಿಶಿಕಾ ಸಾಲ್ಯಾನ್, ಅವನಿ ಎಂ.ಎಸ್. ಸುಳ್ಯ, ಸತ್ಯಾಕಿ ಪಂಜಿಗರ್, ಗೋಪಾಲಕೃಷ್ಣ ಭಟ್, ಕಾರ್ತಿಕೇಯ ಉಡುಪ, ವೈಷ್ಣವಿ, ದೀಪಿಕಾ, ಪಂಚಮಿ, ಅದಿತಿ ಮೆಹೆಂದಲೆ, ದ್ರಿಶ್ಯ ಸಾಲ್ಯಾನ್, ಸೀಯಾ ಜೆ.ಕೆ., ಪಮ್ನಿ ಶೆಟ್ಟಿ, ಪವಿತ್ರ, ವೈಷ್ಣವಿ ಎಸ್. ಶೆಟ್ಟಿ, ಧೃತಿ ಎಸ್. ಕೊಟ್ಟಾರಿ, ಸಾಕ್ಷಿ ಗುರುಪುರ ಮತ್ತು ಸಾನ್ವಿ ಗುರುಪುರ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ದೇವಸ್ಥಾನದ…

Read More

ಸಾಣೇಹಳ್ಳಿ : ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆ ಸಾಣೇಹಳ್ಳಿ ಇದರ 2023-24ನೇ ಸಾಲಿನ ವಿದ್ಯಾರ್ಥಿಗಳ ಅಭ್ಯಾಸ ಮಾಲಿಕಾ ನಾಟಕ ಪ್ರದರ್ಶನ ‘ಆ ತೋಟ’ ದಿನಾಂಕ 06-04-2024ರಂದು ಸಂಜೆ 7 ಗಂಟೆಗೆ ಸಾಣೇಹಳ್ಳಿಯ ಎಸ್.ಎಸ್. ರಂಗ ಮಂದಿರದಲ್ಲಿ ನಡೆಯಲಿದೆ. ಮೂಲ ಆಂಟನ್ ಚೆಕೊವ್ ಇವರು ರಚಿಸಿರುವಂತಹ ‘The Cherry Orchard’ ನಾಟಕವನ್ನು ಅಕ್ಷರ ಕೆ.ವಿ. ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ನಾಟಕಕ್ಕೆ ಸಂಗೀತ ವಿನ್ಯಾಸ ಮತ್ತು ನಿದೇಶನವನ್ನು ಮಧು ಎಂ. ಇವರು ಮಾಡಿದ್ದು, ಸಹ ನಿರ್ದೇಶಕರಾಗಿ ವಿಶ್ವನಾಥ್ ಸ್ವಾಮಿ ಹೆಚ್.ಎಮ್. ಸಹಕರಿಸಿದ್ದಾರೆ. ನಾಟಕದ ವಸ್ತ್ರವಿನ್ಯಾಸವನ್ನು ವಿದ್ಯಾ ರಾಣಿ ಎ.ಎನ್. ಮಾಡಿದ್ದು, ಸಂಗೀತದಲ್ಲಿ ಗರೀಮ, ಶಾಂತನು, ಮಧು ಈ, ಶಿವು ಮತ್ತು ಚಂದ್ರಮ್ಮ ಸಹಕರಿಸಿದ್ದಾರೆ.

Read More

ಕಾಸರಗೋಡು : ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ ಹಾಗೂ ಬಿ. ಶಿವಕುಮಾರ್ ಕೋಲಾರ ಸಾರತ್ಯದ ಸ್ವರ್ಣಭೂಮಿ ಫೌಂಡೇಷನ್ ಕೋಲಾರ ಜಂಟಿಯಾಗಿ ನಡೆಸಲಿರುವ ‘ಕೇರಳ -ಕರ್ನಾಟಕ ಗಡಿನಾಡು ಕನ್ನಡ ಸಾಂಸ್ಕೃತಿಕ ಉತ್ಸವ 2024’ವು ದಿನಾಂಕ 11-04-2024ರ ಗುರುವಾರ ಮಧ್ಯಾಹ್ನ 2 ಗಂಟೆಗೆ ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ ಬಯಲು ರಂಗ ಮಂಟಪದಲ್ಲಿ ನಡೆಯಲಿದೆ. ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶ್ರೀ ರವಿ ನಾಯ್ಕಾಪು ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಡಾ. ಶರಣಪ್ಪ ಗಬ್ಬೂರು ಕೋಲಾರ ಇವರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈಯುವರು. ಶ್ರೀ ವಿ.ಬಿ. ಕುಳಮರ್ವ, ಶ್ರೀ ಎ.ಆರ್. ಸುಬ್ಬಯ್ಯಕಟ್ಟೆ, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಶ್ರೀ ರಾಧಾಕೃಷ್ಣ ಕೆ. ಉಳಿಯತಡ್ಕ, ಪ್ರೊ. ಎ. ಶ್ರೀನಾಥ್,…

Read More

ಮಂಗಳೂರು : ಕನ್ನಡ ಸಂಘರ್ಷ ಸಮಿತಿಯು ಖ್ಯಾತ ವೈದ್ಯೆ, ಹೆಸರಾಂತ ಕಥೆಗಾರ್ತಿಯಾಗಿದ್ದ ಡಾ. ಅನುಪಮಾ ನಿರಂಜನ ಅವರ ಹುಟ್ಟುಹಬ್ಬದ ಅಂಗವಾಗಿ ಉದಯೋನ್ಮಖ ಕಥೆಗಾರ್ತಿಯರಿಗೆ ಮಹಿಳಾ ಕಥಾ ಸ್ಪರ್ಧೆ ಆಯೋಜಿಸಿದೆ. ಇದುವರೆಗೂ ಒಂದೂ ಕಥಾ ಸಂಕಲನ ಪ್ರಕಟಿಸದೆ ಇರುವವರು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಕಥೆಯು ಸ್ವಂತ ರಚನೆಯಾಗಿದ್ದು, ಮಹಿಳಾ ಕೇಂದ್ರಿತ ಕಥಾವಸ್ತು ಆಗಿರಬೇಕು. ಸ್ಪರ್ಧೆಗೆ ಕಳುಹಿಸುವ ಕಥೆಯು ಈ ಮೊದಲು ಎಲ್ಲೂ ಪ್ರಕಟವಾಗಿರಬಾರದು. 1200 ಪದಗಳನ್ನು ಮೀರದ, ಅಥವಾ ಎ4 ಅಳತೆಯ ಕಾಗದದಲ್ಲಿ 5 ಪುಟಗಳು ಮೀರದಂತೆ  ಹಾಳೆಯ ಒಂದೇ ಮಗ್ಗುಲಲ್ಲಿ ಕನ್ನಡದಲ್ಲಿ ಕೈಯಲ್ಲಿ ಬರೆದಿರಬಹುದು ಅಥವಾ ಡಿಟಿಪಿ ಮಾಡಿಸಿರಬಹುದು. ರೂ.200/-ಗಳ ಪ್ರವೇಶ ಶುಲ್ಕದೊಡನೆ (ಪ್ರವೇಶ ಶುಲ್ಕ ರೂ.200/-ಗಳನ್ನು ‘ಕನ್ನಡ ಸಂಘರ್ಷ ಸಮಿತಿ, ಉಳಿತಾಯ ಖಾತೆ ಸಂಖ್ಯೆ: 200300011051, IFSC CODE: HDFC0CSRCBL, ಬ್ಯಾಂಕ್: ಶ್ರೀರಾಮ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಮಲ್ಲೇಶ್ವರಂ’ ಖಾತೆಗೆ ಜಮಾ ಮಾಡಬಹುದಾಗಿದೆ) ದಿನಾಂಕ 30-04-2024ರೊಳಗೆ ತಲುವಂತೆ ಕಳುಹಿಕೊಡಬೇಕು. ತಡವಾಗಿ ಬಂದ ಕಥೆಯನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. ಕಥೆಯನ್ನು ‘ಎ.ಎಸ್.‌…

Read More

ಮುಂಬಯಿ :  ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಹಾಗೂ ಮೈಸೂರು ಅಸೋಸಿಯೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಬಂಗಾರ ಹಬ್ಬದ ದತ್ತಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ 23-03-2024ರ ಶನಿವಾರ ಮತ್ತು 24-03-2024 ರ ಭಾನುವಾರದಂದು ಮುಂಬಯಿಯ ಮೈಸೂರು ಅಸೋಸಿಯೇಷನ್ನಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಭರತನ ನಾಟ್ಯಶಾಸ್ತ್ರದ ಕುರಿತು ಮಾತನಾಡಿದ ನಾಡಿನ ಹಿರಿಯ ಕಲಾವಿದ, ರಂಗತಜ್ಞ, ನಿರ್ದೇಶಕ, ನಟ ಹಾಗೂ ವಿದ್ವಾಂಸರಾದ  ಡಾ. ಬಿ. ವಿ. ರಾಜಾರಾಮ  “ಕಲೆ, ಸಾಹಿತ್ಯ, ಸಂಗೀತ ನೃತ್ಯ ಇವೆಲ್ಲವೂ ಬದುಕನ್ನು ಸಮೃದ್ಧ ಹಾಗೂ ಸಾರ್ಥಕಗೊಳಿಸುತ್ತವೆ. ಇವು ನಮ್ಮಲ್ಲಿ ವ್ಯಕ್ತಿತ್ವವನ್ನು ರೂಪಿಸುತ್ತವೆ. ಸುಮಾರು 2,೦೦೦ ವರ್ಷಗಳಷ್ಟು ಹಿಂದೆ ಭರತನು ರಚಿಸಿದ ನಾಟ್ಯ ಶಾಸ್ತ್ರಸಂಗೀತವು  ನೃತ್ಯ, ಸಾಹಿತ್ಯ, ಅಭಿನಯಕ್ಕೆ ಮೂಲ. ಭರತನ ನಾಟ್ಯ ಶಾಸ್ತ್ರ ಒಂದು ಪರಂಪರೆಯಾಗಿ ಬೆಳೆದು ಬಂದಿದೆ. ನಾಟ್ಯಶಾಸ್ತ್ರದ ರಸ ಸಿದ್ಧಾಂತ ಸಂತೋಷವನ್ನು ನೈಸರ್ಗಿಕವಾಗಿ ಸ್ವೀಕರಿಸುವುದರ ಕುರಿತು ಹೇಳುತ್ತದೆ.  ಭರತನು ಹೇಳಿದ ಷಡ್‌ರಸಗಳು ಆರೋಗ್ಯಕ್ಕೆ ಹಾಗೂ ನಂತರದ ಅಭಿನವಗುಪ್ತ ಪಾದನಿಂದ ಬಂದ ಅಭಿನವ ಭಾರತದಲ್ಲಿ ಬರುವ ನವರಸಗಳು ಮನಸ್ಸಿಗೆ…

Read More

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಅಜ್ಜನ ಮನೆ ಕಲಾ ಪ್ರಪಂಚ ‘ಶ್ರೀ ಮೈಸೂರು ವಾಸುದೇವಾಚಾರ್ಯರ’ ಸ್ಮರಣಾರ್ಥ ಸಾದರಪಡಿಸುವ ‘ಕಿಶೋರ ಗಾಯನ ನಮನ’ ಕಾರ್ಯಕ್ರಮವು ದಿನಾಂಕ 07-04-2024, 14-04-2024 ಮತ್ತು 21-05-2024ರಂದು ಬೆಳಿಗ್ಗೆ ಗಂಟೆ 9.30ಕ್ಕೆ ಮೈಸೂರಿನ ಅಗ್ರಹಾರ ಶ್ರೀ ವಾಸುದೇವಾಚಾರ್ಯರ ನಿವಾಸದಲ್ಲಿ ನಡೆಯಲಿದೆ. ದಿನಾಂಕ 07-04-2024ರಂದು ಉಡುಪಿಯ ಕುಮಾರಿ ಮೇಧಾ ಉಡುಪ, ಬೆಂಗಳೂರಿನ ಚಿ. ಆದಿತ್ಯ ಶ್ರೀನಿಧಿ ತಾಯೂರ್ ಮತ್ತು ಶಿವಮೊಗ್ಗದ ಕುಮಾರಿ ದ್ಯುತಿ ಎಸ್. ಇವರ ಹಾಡುಗಾರಿಕೆಗೆ ಮೈಸೂರಿನ ವಿದ್ವಾನ್ ಶ್ರೀವತ್ಸ ಹೆಚ್. ಪಿಟೀಲು ಹಾಗೂ ವಿದ್ವಾನ್ ಜಿ. ಸುಬ್ರಮಣ್ಯ ಕುಮಾರ್ ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ. ದಿನಾಂಕ 14-04-2024ರಂದು ಮೈಸೂರಿನ ಕುಮಾರಿ ನಿರಾಮಯಾ ವಿ. ರಾವ್, ಚಿ. ಕುನಾಲ್ ಮಹೇಶ್ ಮತ್ತು ಕುಮಾರಿ ಹರಿಣಿ ಇವರ ಹಾಡುಗಾರಿಕೆಗೆ ಮೈಸೂರಿನ ವಿದ್ವಾನ್ ರೂಪನಗುಡಿ ರತ್ನತೇಜ ಪಿಟೀಲು ಹಾಗೂ ವಿದ್ವಾನ್ ಜಿ. ಸುಬ್ರಮಣ್ಯ ಕುಮಾರ್ ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ. ದಿನಾಂಕ 21-04-2024ರಂದು ಬೆಂಗಳೂರಿನ ಕುಮಾರಿ ಸಾರಂಗಿ ಎಸ್. ಹರಿತ್ವ, ಕುಮಾರಿ ಅರ್ಣ…

Read More

ಮಂಗಳೂರು : ಕರಾವಳಿ ಸಂಗೀತ ಕಲಾವಿದರ ಒಕ್ಕೂಟ (ರಿ.) ವತಿಯಿಂದ ಸಂಗೀತ, ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದು ಅಗಲಿದವರಿಗೆ ನುಡಿನಮನ ಕಾರ್ಯಕ್ರಮವು ದಿನಾಂಕ 29-03-2024ರಂದು ಮಂಗಳೂರಿನ ಹೋಟೆಲ್ ವುಡ್ಲ್ಯಾಂಡ್ಸ್ ನಲ್ಲಿ ನಡೆಯಿತು. ನಮ್ಮ ನಡುವೆ ಸದಾ ಸ್ನೇಹ ಪೂರ್ಣ ಚಟುವಟಿಕೆಗಳಿಂದ ಮಾದರಿ ಮಾರ್ಗದರ್ಶಕರಾಗಿದ್ದು ಜನ ಮನ್ನಣೆಗಳಿಸಿ ಇತ್ತೀಚೆಗೆ ದಿವಂಗತರಾದ ಮಾಧ್ಯಮ ತಜ್ಞ ಮನೋಹರ ಪ್ರಸಾದ್, ಚಲನಚಿತ್ರ ಹಾಗೂ ರಂಗನಟ ವಿ.ಜಿ. ಪಾಲ್, ಗಾಯಕ, ಪ್ರಸಾದನಕಾರ  ಎಸ್. ರಾಮದಾಸ್, ಸಂಗೀತ ಕ್ಷೇತ್ರದ ಗಿಟಾರಿಸ್ಟ್ ನವೀನ್ ಚಂದ್ರ ಎಂ. ಅವರಿಗೆ ತೋನ್ಸೆ ಅವರು ನುಡಿನಮನ ಸಲ್ಲಿಸಿ, ಒಕ್ಕೂಟದ ವತಿಯಿಂದ  ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಹರಿದಾಸರಾದ ತೋನ್ಸೆ ಪುಷ್ಕಳ ಕುಮಾರ್ “ಸಂಗೀತ, ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದು ಅಗಲಿದವರನ್ನು ಸ್ಮರಿಸುವುದು ಸಾಂಸ್ಕೃತಿಕ ಸಂಘಟನೆಗಳ ಆದ್ಯ ಕರ್ತವ್ಯ.” ಎಂದರು. ಕಾರ್ಯಕ್ರಮದಲ್ಲಿ ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ದೀಪಕ್ ರಾಜ್ ಉಳ್ಳಾಲ್ ಅಧ್ಯಕ್ಷತೆ ವಹಿಸಿ ಮುಂದಿನ ಏಪ್ರಿಲ್, ಮೇ ಹಾಗೂ…

Read More

ಬೈಂದೂರು : ಲಾವಣ್ಯ ಬೈಂದೂರಿನ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ಸಹಯೋಗದಲ್ಲಿ ಜಗದೀಶ ಮಯ್ಯ ಇವರ ಪ್ರಾಯೋಜಕತ್ವದಲ್ಲಿ ‘ಯಕ್ಷ ಲಾವಣ್ಯ-24’ ಸರಣಿ ಕಾರ್ಯಕ್ರಮವು ದಿನಾಂಕ 30-03-2024ರ ಶನಿವಾರದಂದು ಬೈಂದೂರಿನ ಶ್ರೀ ಸೇನೇಶ್ವರ ದೇವಸ್ಥಾನದ ಶ್ರೀ ಶಾರದಾ ವೇದಿಕೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿದ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ಬಿಜೂರು ವಿಶ್ವೇಶ್ವರ ಅಡಿಗ ಮಾತನಾಡಿ “ತಾಳಮದ್ದಲೆ ಬಹಳ ಕಡಿಮೆಯಾಗುತ್ತಿದ್ದು ಹಿಂದೆಲ್ಲಾ ಮನೆಯ ಜಗುಲಿಯಲ್ಲಿ, ದೇವಸ್ಥಾನದ ಹೆಬ್ಬಾಗಿಲಿನಲ್ಲಿ ಪೂರ್ತಿ ರಾತ್ರಿಯಿಂದ ಬೆಳಿಗ್ಗಿನ ತನಕ ನಡೆಯುತ್ತಿತ್ತು. ಆದರೆ ಈಗ ಬದಲಾದ ಕಾಲಘಟ್ಟಕ್ಕೆ ಹೊಂದಿಕೊಂಡು ಕಾಲ ಮಿತಿಯಲ್ಲಿ ನಡೆಸುವಂತಾಗಿದೆ. ವಿದ್ಯುನ್ಮಾನ ಮಾಧ್ಯಮಗಳಿಂದಾಗಿ ತಾಳಮದ್ದಲೆ ಹಾಗೂ ಯಕ್ಷಗಾನ ಜನರಿಂದ ದೂರವಾಗುತ್ತಿದೆ. ಹಿಮ್ಮೇಳ ಮತ್ತು ಅರ್ಥದಾರಿಗಳು ಮಾತ್ರ ಸಾಕಾಗುವ ಅತ್ಯಂತ ಸರಳ ರಂಗಭೂಮಿಯಾದ ತಾಳಮದ್ದಲೆಗೆ ಅದರದ್ದೇ ಆದ ಶ್ರೋತೃವರ್ಗ ಇರುವುದರಿಂದ ಜೀವಂತ ಕಲೆ ನಶಿಸದು ಎಂಬ ಭರವಸೆ ನೀಡುತ್ತದೆ.” ಎಂದರು. ಲಾವಣ್ಯದ ಅಧ್ಯಕ್ಷ ನರಸಿಂಹ ಬಿ. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ…

Read More

ಮಂಗಳೂರು : ಕಲಾಶಾಲೆ ಮತ್ತು ಸ್ವರಾಲಯ ಸಾಧನಾ ಫೌಂಡೇಶನ್ ಜಂಟಿಯಾಗಿ ಆಯೋಜಿಸಿದ 79ನೇ ಮನೆ ಮನೆಯಲ್ಲಿ ಸ್ವರಾಲಯ ಸಾಧನಾ ಶಿಬಿರ ಕಾರ್ಯಕ್ರಮಮವು ದಿನಾಂಕ 24-03-2024ರ ಭಾನುವಾರದಂದು ವೈದ್ಯ ಕೆ. ಆರ್. ಕಾಮತ್ ಅವರ ನಿವಾಸ ‘ಶ್ರೀ ರಾಮಪ್ರಸಾದ್’ದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ವೈದ್ಯ ಡಾ. ಅಶೋಕ ಶೆಣೈ “ಶಾಸ್ತ್ರೀಯ ಸಂಗೀತದ ರಾಗಗಳು ನಮ್ಮ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುವುದು ನಿಜ. ಇದು ವೈಜ್ಞಾನಿಕವಾಗಿ ರುಜುವಾಗಿದೆ. ಹಾಗಾಗಿ ಅರೋಗ್ಯಕರ ಜೀವನಕ್ಕಾಗಿ ಉತ್ತಮ ಸಂಗೀತ ಆಲಿಸಿ. ನಗರದ ವೈದ್ಯಕೀಯ ಕಾಲೇಜುಗಳು ಕೂಡ ಸಂಗೀತ ಚಿಕಿತ್ಸೆ (ಮ್ಯೂಸಿಕಲ್ ತೆರಪಿ) ಕುರಿತಂತೆ ಪ್ರಯೋಗಗಳನ್ನು ನಡೆಸಿ ಯಶಸ್ಸು ಕಂಡಿವೆ. ಐ. ಸಿ. ಯು. ನಲ್ಲಿ ಚಿಕಿತ್ಸೆ ಪಡೆಯುವವರಿಗೆ ಹಾಗೂ ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಸಂಗೀತ ಚಿಕಿತ್ಸೆ ನೀಡಿದಾಗ ಅವರ ದೇಹಗಳಲ್ಲಿ ಸಕರಾತ್ಮಕವಾಗಿ ಬದಲಾವಣೆಗಳು ಆಗಿರುವುದು ದೃಢವಾಗಿದೆ.ಮುಂಜಾವಿನ ಹೊತ್ತು ಭಕ್ತಿ ಭಾವದ ಭೈರವಿ ರಾಗ ಅಲಿಸಿದರೆ ಮನಸ್ಸು ಅರಳುವುದು. ಅದೇ ಬೇಸರದಲ್ಲಿ ಇರುವವರು ತೋಡಿ, ದರ್ಬಾರಿ …

Read More

ಸುಳ್ಯ :  ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರು ‘ಅಮರ ಸುಳ್ಯ ಅಧ್ಯಯನ ಕೇಂದ್ರ’ ಸುಳ್ಯ ಇದರ ಸಹಯೋಗದೊಂದಿಗೆ ಆಯೋಜಿಸಿದ ಖ್ಯಾತ ಸಾಹಿತಿ ಡಾ.ಶಂಕರ ಪಾಟಾಳಿ ಬದಿಯಡ್ಕ ವಿರಚಿತ ‘ಶಿಶಿಲ ಚಿಂತನೆ’ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 29-03-2024ರಂದು ಸುಳ್ಯದ ಕನ್ನಡ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಹಿರಿಯ ಯಕ್ಷಗಾನ ಅರ್ಥದಾರಿ ಜಬ್ಬಾ‌ರ್ ಸಮೋ ಸಂಪಾಜೆ “ಓರ್ವ ತಾಯಿ ಶಿಶುವನ್ನು ತನ್ನ ಗರ್ಭದಲ್ಲಿ ಒಂಬತ್ತು ತಿಂಗಳು ಹೊತ್ತು ಬಳಿಕ ಅದನ್ನು ಭೂಮಿಗೆ ಬಿಡುಗಡೆಗೊಳಿಸುವ ರೀತಿಯಲ್ಲಿ ಒಬ್ಬ ಸಾಹಿತಿ ತನ್ನ ಕೃತಿಯನ್ನು ಬಹಳಷ್ಟು ದಿನಗಳಿಂದ ತನ್ನ ಮನಸ್ಸಿನಲ್ಲಿ ಬಂದಂತಹ ವಾಕ್ಯಗಳನ್ನು ಕೃತಿ, ಸಾಹಿತ್ಯ ಹಾಗೂ ಕವನ ಮುಂತಾದವುಗಳ ಮೂಲಕ ಹೊರ ಚಿಮ್ಮಿ ಅದನ್ನು ಜಗತ್ತಿನ ಮುಂದೆ ಇಡುತ್ತಾನೆ. ಅದನ್ನು ಓದುಗರು ಯಾವ ರೀತಿ ಬೆಳೆಸುತ್ತಾರೆ ಎಂಬುದರ ಮೇಲೆ ಆ ಕೃತಿಯ ಮೌಲ್ಯವು ನಿಂತಿರುತ್ತದೆ. ಡಾ. ಶಿಶಿಲರು ಎಲ್ಲಾ ವಿಭಾಗದಲ್ಲಿಯೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡವರು. ಅರ್ಥಶಾಸ್ತ್ರಜ್ಞನಾಗಿದ್ದ ಅವರು…

Read More