Author: roovari

ಬೆಂಗಳೂರು : ಜಗದೀಶ ಹೊಸಬಾಳೆ ಮತ್ತು ವಿನಾಯಕ ವಾಜಗದ್ದೆ ಇದರ ಸಂಯೋಜನೆಯಲ್ಲಿ ಕವಿ ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಅಂಬಾ ಶಪಥ’ ತಾಳಮದ್ದಳೆಯು ದಿನಾಂಕ 14-07-2024ರಂದು ಮಧ್ಯಾಹ್ನ 3-15 ಗಂಟೆಗೆ ಬೆಂಗಳೂರಿನ ಎನ್.ಆರ್. ಕಾಲೋನಿಯ ಡಾ. ಸಿ. ಅಶ್ವತ್ಥ ಕಲಾಭವನದಲ್ಲಿ ನಡೆಯಲಿದೆ. ಮುಮ್ಮೇಳದಲ್ಲಿ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ, ವಾಸುದೇವ ರಂಗ ಭಟ್ಟ, ಸಂಕದಗುಂಡಿ ಗಣಪತಿ ಭಟ್ಟ ಹಾಗೂ ಹಿಮ್ಮೇಳದಲ್ಲಿ ಕೊಳಗಿ ಕೇಶವ ಹೆಗಡೆ, ಅನಂತ ಪದ್ಮನಾಭ ಘಾಟಕ್ ಮತ್ತು ಗಣೇಶ ಗಾಂವ್ಕರ್ ಇವರುಗಳು ಭಾಗವಹಿಸಲಿದ್ದಾರೆ.

Read More

ಕನ್ನಡದ ಮಹತ್ವದ ಲೇಖಕರಾದ ಡಾ. ನಾ. ಮೊಗಸಾಲೆಯವರ ‘ನೀರು’ ಎಂಬ ಕಾದಂಬರಿಯು ಒಂದು ದೃಷ್ಟಿಯಲ್ಲಿ ನೀಳ್ಗತೆಯಂತೆ ಇದ್ದರೂ 250 ಪುಟಗಳಷ್ಟು ಬೆಳೆದು ಕಾದಂಬರಿಯ ವ್ಯಾಪ್ತಿಯನ್ನು ಪಡೆದಿದೆ. ಕಥೆ, ಕಾದಂಬರಿ ಎಂದು ವಿಂಗಡಿಸಿ ಲಕ್ಷಣವನ್ನು ವಿಧಿಸುವವರಿಗೆ ಇದೊಂದು ಗಟ್ಟಿ ಸವಾಲಾಗಿ ಪರಿಣಮಿಸಿದೆ. ಮನುಷ್ಯ ಸಂಬಂಧದೊಳಗೆ ಸಹಜವಾದ ಅಸೂಯೆ, ಸ್ಪರ್ಧೆ, ಫಟಿಂಗತನ, ಕಾಮ ಕ್ರೋಧಾದಿಗಳ ತಳಮಟ್ಟದ ಹುಡುಕಾಟವನ್ನು ಕಾದಂಬರಿಕಾರರು ಹೊಸ ಬಗೆಯಲ್ಲಿ ನಡೆಸಿದ್ದಾರೆ. ತಮ್ಮ ಹೆಚ್ಚಿನ ಕೃತಿಗಳಂತೆ ಇಲ್ಲೂ ಮರಣ, ಕೊಲೆ, ದೊಂಬಿಗಳನ್ನು ತಂದಿಲ್ಲ. ಮನುಷ್ಯರು ಪರಸ್ಪರ ದೂರವಾಗುವುದಕ್ಕೆ ಕಾರಣವಾಗುವ ಅಂತರಂಗದ ಸ್ಥಾಯೀ ಸಂಚಾರೀ ಭಾವ ಮನಃಶಾಸ್ತ್ರೀಯವಾಗಿ ವಿಶ್ಲೇಷಣೆಗೊಳಗಾಗುವುದೇ ಈ ಕೃತಿಯ ಪ್ರತ್ಯೇಕತೆಯಾಗಿದೆ. ಪಾತ್ರ ನಿರ್ಮಾಣದ ತಂತ್ರ, ಸಂಭಾಷಣೆಯ ಸೊಗಸು, ಪರಿಸರ ಸೃಷ್ಟಿಯ ಕಲಾತ್ಮಕತೆ, ಆಧುನಿಕ ಕಾನೂನುಗಳ ವಿಶ್ಲೇಷಣೆ, ವ್ಯಕ್ತಿ ತನ್ನ ಸುತ್ತ ನಿರ್ಮಿಸಿಕೊಳ್ಳುವ ಪ್ರಭಾವಲಯ, ರಾಜಕಾರಣ ಮತ್ತು ಸಂಸ್ಕೃತಿಗಳೊಳಗಿನ ಸಂಘರ್ಷ, ಧರ್ಮ ಹಾಗೂ ಆಚಾರಗಳೊಳಗೆ ತಪ್ಪುವ ತಾಳ, ಅಮಾನವೀಯ – ಅಸಂಗತ ನಡವಳಿಕೆಯಿಂದ ತನ್ನ ಸುತ್ತ ತಾನೇ ಬೇಲಿ ಬಿಗಿದುಕೊಂಡು ಪಾಡುಪಟ್ಟು ಹೊರಬರಲಾಗದೆ…

Read More

ಮುಳ್ಳೇರಿಯ : ಹಿರಿಯ ಸಾಹಿತಿ, ಬಹುಮುಖ ವ್ಯಕ್ತಿತ್ವದ ನಾಡೋಜಾ ಡಾ. ಕಯ್ಯಾರ ಕಿಂಞಣ್ಣ ರೈ ಅವರ 109ನೇ ಜನ್ಮದಿನಾಚರಣೆ ಕಾರ್ಯಕ್ರಮವು ದಿನಾಂಕ 10-06-2024ರ ಸೋಮವಾರದಂದು ಮುಳ್ಳೇರಿಯ ಸಮೀಪದ ಕುಂಟಾರಿನ ಎ. ಯು. ಪಿ. ಶಾಲೆಯಲ್ಲಿ ನಡೆಯಿತು. ಶಾಲೆಯ ವಿದ್ಯಾರ್ಥಿಗಳಾದ ಹರಿಕೃಷ್ಣ, ಕಾವ್ಯ, ದೀಕ್ಷಿತ್ ಮೊದಲಾದವರು ಕಯ್ಯಾರರ ಬದುಕು ಹಾಗೂ ಸಾಹಿತ್ಯ ಬಗ್ಗೆ ಭಾಷಣ ಮಾಡಿದರು. ವಿದ್ಯಾರ್ಥಿಗಳಾದ ಭವಿತ್, ಫಾಸಿಲ್, ಬೇಬಿ ಲಿಖಿತಾ, ಅನ್ವಿತಾ ಹಾಗೂ ಶಿವಾನಿ ಕೆ. ಇವರು ಕಯ್ಯಾರರು ರಚಿಸಿದ ಹಾಡುಗಳನ್ನು ಹಾಡಿದರು. ಈ ಸಂದರ್ಭದಲ್ಲಿ ಶಾಲೆಯ ಹಿರಿಯ ಶಿಕ್ಷಕಿ ದಾಕ್ಷಾಯಿಣಿ ಅವರ ನೇತೃತ್ವದಲ್ಲಿ ಕಯ್ಯಾರ ಕಿಂಞಣ್ಣ ರೈ ಅವರ ಕುರಿತ ರಸಪ್ರಶ್ನೆ ಸ್ಪರ್ಧೆ ನಡೆಯಿತು. ವಿದ್ಯಾರ್ಥಿಗಳಾದ ಹರಿಕೃಷ್ಣ ಹಾಗೂ ರನಾಫ್ ಫಾತಿಮಾ ಅನುಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದರು. ಸಭಾ ಕಾರ್ಯಕ್ರಮದ ಬಳಿಕ ವ್ಯಂಗ್ಯಚಿತ್ರಕಾರ ವಿರಾಜ್ ಅಡೂರು ಇವರಿಂದ ವ್ಯಂಗ್ಯಚಿತ್ರ ರಚನಾ ತರಬೇತಿ ಶಿಬಿರ ನಡೆಯಿತು. ವ್ಯಂಗ್ಯಚಿತ್ರ ರಚನೆಯಲ್ಲಿ ಮಕ್ಕಳು ಗಮನಿಸಬೇಕಾದ ಅಂಶಗಳು, ಚಿತ್ರಗಳ ಗಾತ್ರದಲ್ಲಿನ ಬದ್ಧತೆಗಳು,…

Read More

ಕಾರ್ಕಳ : ಸಾಹಿತ್ಯ, ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ಅಗಲಿದ ಪತ್ರಕರ್ತ ಡಾ. ಶೇಖರ ಅಜೆಕಾರು ಅವರ ಹೆಸರಿನಲ್ಲಿ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ‘ಡಾ. ಶೇಖರ ಅಜೆಕಾರು ರಾಜ್ಯ ಪ್ರಶಸ್ತಿ’ಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅದ್ಯಕ್ಷ ಮಹಮ್ಮದ್ ಷರೀಫ್ ತಿಳಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಸಾಹಿತ್ಯ ಹಾಗೂ ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗುವುದು. ಸಾಹಿತ್ಯ ಹಾಗೂ ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಕನಿಷ್ಠ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ ಪತ್ರಕರ್ತರು ಯಾ ಸಾಹಿತಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಪ್ರಶಸ್ತಿಯು ಹತ್ತು ಸಾವಿರ ಪ್ರಶಸ್ತಿ ನಗದು ಹಾಗೂ ರಜತ ಫಲಕ ಒಳಗೊಂಡಿರುತ್ತದೆ. ಸ್ವವಿವರ ಹಾಗೂ ಇತ್ತೀಚಿನ ಭಾವಚಿತ್ರವನ್ನೊಳಗೊಂಡ ಅರ್ಜಿಯನ್ನು ಮೊಹಮ್ಮದ್ ಶರೀಫ್‌ ಅಧ್ಯಕ್ಷರು, ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಬಂಗ್ಲೆಗುಡ್ಡೆ ಪೋಸ್ಟ್, ಕುಕ್ಕುಠದೂರು, ಕಾರ್ಕಳ ತಾಲೂಕು 576117 ಇವರಿಗೆ ದಿನಾಂಕ 21-06-2024ರೊಳಗೆ ಕಳುಹಿಸಿಕೊಡಬಹುದಾಗಿದೆ. ತದನಂತರ ಬಂದ…

Read More

ಶಿಮ್ಲಾ : ಶಿಮ್ಲಾದ ಪುರಾತನ ಗಯ್ಟೀ ರಂಗಮಂದಿರದಲ್ಲಿ ದಿನಾಂಕ 06-06-2024ರಿಂದ 09-06-2024ರವರೆಗೆ ನಡೆದ ‘ರಾಷ್ಟ್ರೀಯ ಹಿಂದಿ ನಾಟಕ ಸ್ಪರ್ಧೆ’ಯಲ್ಲಿ ಶೈಲೀಕೃತ ನಾಟಕ ವಿಭಾಗದಲ್ಲಿ ಪ್ರಥಮ ಬಹುಮಾನ ಬರುವುದರ ಜೊತೆಗೆ ವೈಯಕ್ತಿಕ ವಿಭಾಗದಲ್ಲೂ ನಿರ್ದೇಶನಕ್ಕಾಗಿ ಬಾಲಕೃಷ್ಣ ಕೊಡವೂರು ಇವರಿಗೆ ಪ್ರಥಮ ಬಹುಮಾನ ಹಾಗೂ ಅತ್ಯುತ್ತಮ ನಟಿ ವಿಭಾಗದಲ್ಲಿ ಚಂದ್ರಾವತಿ ಪಿತ್ರೋಡಿಯವರಿಗೆ ಬಹುಮಾನ ಸಿಕ್ಕಿರುವುದರ ಜೊತೆಗೆ ನಾಟಕ ವೀಕ್ಷಕರೆಲ್ಲರೂ ‘ದ್ರೌಣಿ’ಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದುದು ಇಷ್ಟು ದೂರ ತುಳುನಾಡಿನಿಂದ ಬಂದಿರುವ ಇಡೀ ನವಸುಮ ರಂಗಮಂಚ ತಂಡಕ್ಕೂ ಸಾರ್ಥಕ ಕ್ಷಣ. ನಾಟಕ : ‘ದ್ರೌಣಿ’ ಮೂಲ ರಚನೆ : ಬಾಲಕೃಷ್ಣ ಕೊಡವೂರು ಹಿಂದಿ ಅನುವಾದ : ಡಾ. ಮಾಧವಿ ಭಂಡಾರಿ ರಂಗಪಠ್ಯ : ಅಕ್ಷತಾ ರಾಜ್ ಪೆರ್ಲ ಬೆಳಕು : ಜಯಶೇಖರ ಮಡಪ್ಪಾಡಿ ಸಂಗೀತ : ರೋಹಿತ್ ಮಲ್ಪೆ ಪ್ರಸ್ತುತಿ : ನವಸುಮ ರಂಗಮಂಚ (ರಿ) ಕೊಡವೂರು.

Read More

ಮೈಸೂರು : ಮೈಸೂರಿನ ರಂಗಾಯಣ ವತಿಯಿಂದ ಭಾರತೀಯ ರಂಗ ಶಿಕ್ಷಣ ಕೇಂದ್ರದಲ್ಲಿ 2024-25ನೇ ಸಾಲಿನ ಒಂದು ವರ್ಷದ ರಂಗ ಶಿಕ್ಷಣ ತರಬೇತಿಗೆ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ದಿನಾಂಕ 20-06-2024 ಕೊನೆಯ ದಿನವಾಗಿರುತ್ತದೆ. ರಂಗ ತರಬೇತಿಗೆ ಸೇರ ಬಯಸುವ ವಿದ್ಯಾರ್ಥಿಗಳು ರಂಗಭೂಮಿಯ ಪ್ರಾಥಮಿಕ ಅನುಭವ ಹೊಂದಿರಬೇಕು. ಕನಿಷ್ಠ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆ ಹೊಂದಿರಬೇಕು. 18 ವರ್ಷ ತುಂಬಿದ ಮತ್ತು 28 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ರಂಗಾಯಣದಿಂದ ಉಚಿತ ವಸತಿ ವ್ಯವಸ್ಥೆ ಹಾಗೂ ತಿಂಗಳಿಗೆ ರೂ.5,000 ವಿದ್ಯಾರ್ಥಿವೇತನ ಪಾವತಿಸಲಾಗುವುದು. ಹೆಚ್ಚಿನ ಮಾಹಿತಿಗೆ 0821-2512639, 9148827720 ಈ ಸಂಖ್ಯೆ ಸಂಪರ್ಕಿಸಬಹುದು ಎಂದು ರಂಗಾಯಣದ ಉಪನಿರ್ದೇಶಕರು ತಿಳಿಸಿದ್ದಾರೆ.

Read More

ಕಾರ್ಕಳ : ಕಾರ್ಕಳ ಸಾಹಿತ್ಯ ಸಂಘದ ವತಿಯಿಂದ ಪ್ರೊ. ಎಂ. ರಾಮಚಂದ್ರ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 05-06-2024ರಂದು ಹೊಟೇಲ್ ಪ್ರಕಾಶ್‌ ನಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಭಾಗವಹಿಸಿದ ಧಾರವಾಡದ ಹಿರಿಯ ಸಾಹಿತಿ ಡಾ. ರಾಘವೇಂದ್ರ ಪಾಟೀಲ ಇವರು ಮಾತನಾಡಿ “ಸಾಹಿತ್ಯ ಮತ್ತು ಸಂಗೀತ ಮಾನವನನ್ನು ಆರೋಗ್ಯವಾಗಿಡುವ ಸಾಧನ. ನಮ್ಮ ಸುತ್ತಮುತ್ತಲಿನ ವ್ಯಕ್ತಿಗಳ ಮನಸ್ಸು ಮತ್ತು ಪರಿಸರ ಸುಸ್ಥಿತಿಯಲ್ಲಿದ್ದರೆ, ನಮ್ಮ ಆಚೆಗಿನ ಪರಿಸರ ಕೂಡಾ ಚೆನ್ನಾಗಿರಲು ಸಾಧ್ಯವಾಗುತ್ತದೆ. ಪ್ರಸ್ತುತ ಆಧುನಿಕತೆಯ ಪರಿಣಾಮ, ವೈಯಕ್ತಿಕರಣದ ಕೆಲಸವಾಗುತ್ತಿದೆ. ಒಂದು ಸಮುದಾಯವಾಗಿ ಉಳಿಯುವ ಬದಲು, ಬಿಡಿ-ಬಿಡಿ ವ್ಯಕ್ತಿಗಳಾಗಿ ಒಟ್ಟಿಗೆ ಇದ್ದೇವೆ. ಸ್ವಾರ್ಥ ಎನ್ನುವುದು ಅತ್ಯಂತ ಪ್ರಖರವಾಗಿ ಹೊರಹೊಮ್ಮುತ್ತಿದೆ. ನಿಸ್ವಾರ್ಥದ ಪರಿಧಿ ಎಷ್ಟು ಸಂಕುಚಿತವಾಗಿದೆ ಎಂದರೆ, ನನ್ನದು ನನಗೆ ಎಂಬ ರೀತಿಯಲ್ಲಿದೆ. ಇವೆಲ್ಲವುಗಳ ನಡುವೆ ಆರೋಗ್ಯವಾಗಿರಲು ಸಾಹಿತ್ಯ ಮತ್ತು ಸಂಗೀತ ಸಹಕಾರಿಯಾಗುತ್ತದೆ” ಎಂದು ಹೇಳಿದರು. ಪ್ರೊ. ರಾಮಚಂದ್ರ ಅವರ ಸಂಸ್ಮರಣೆ ಬಗ್ಗೆ ಮಾತನಾಡಿ, “ಅವರು ಯುವ ಮನಸುಗಳನ್ನು ಸಿದ್ದಪಡಿಸುವ ಕೆಲಸ ನಿರ್ವಹಿಸಿದ್ದರು. ಕೇವಲ ಒಬ್ಬ…

Read More

ಬೆಂಗಳೂರು : ಚಂಪಾ ಹೆಸರಿನಿಂದಲೇ ಪ್ರಖ್ಯಾತಿ ಪಡೆದಂತಹ ಕವಿ, ವಿಮರ್ಶಕರಾದ ದಿವಂಗತ ಪ್ರೊ. ಚಂದ್ರಶೇಖರ ಪಾಟೀಲರು ಸ್ಥಾಪಿಸಿರುವಂತಹ ‘ಕರ್ನಾಟಕ ಸ್ವಾಭಿಮಾನಿ ವೇದಿಕೆ’ ವತಿಯಿಂದ ನೀಡುವ ಪ್ರಸಕ್ತ ಸಾಲಿನ ‘ಚಂಪಾ ಸಿರಿಗನ್ನಡ ಪ್ರಶಸ್ತಿ’ಗೆ ಬಂಡಾಯ ಸಾಹಿತಿ ಕೊಪ್ಪಳದ ಪ್ರೊ. ಅಲ್ಲಮಪ್ರಭು ಬೆಟ್ಟದೂರು ಇವರು ಭಾಜನರಾಗಿದ್ದಾರೆ. ಈ ಪ್ರಶಸ್ತಿಯನ್ನು 2023ರಿಂದ ನೀಡಲಾಗುತ್ತಿದ್ದು, ಇದೀಗ ಎರಡನೇ ವರ್ಷದ ಪ್ರಶಸ್ತಿಯನ್ನು ಕೊಡಲಾಗುತ್ತಿದೆ. ಪ್ರಶಸ್ತಿಯು 10 ಸಾವಿರ ನಗದು ಹಾಗೂ ಕಂಚಿನ ಫಲಕ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದ್ದು, ಪ್ರೊ. ಚಂದ್ರಶೇಖ‌ರ್ ಪಾಟೀಲರ ನಾಡುನುಡಿ ಹೋರಾಟದ ಅಭಿಮಾನದಿಂದ ಸ್ಫೂರ್ತಿ ಪಡೆದು ಕರ್ನಾಟಕ ಸ್ವಾಭಿಮಾನಿ ವೇದಿಕೆ ‘ಚಂಪಾ ಸಿರಿಗನ್ನಡ ಪ್ರಶಸ್ತಿ’ಯನ್ನು ಸ್ಥಾಪಿಸಲಾಗಿದೆ. ಪ್ರೊ. ಅಲ್ಲಮ್ಮ ಪ್ರಭು ಅವರು ಸಮಾಜವಾದಿ ಚಿಂತಕರು, ಬಂಡಾಯ ಸಾಹಿತಿಗಳು ಹಾಗೂ ಹೋರಾಟಗಾರರಾಗಿ, ಕವಿಯಾಗಿ ಗುರುತಿಸಿಕೊಂಡಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 20-06-2024ರಂದು ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಲಿದ್ದು, ಖ್ಯಾತ ವಿದ್ವಾಂಸರಾದ ಪ್ರೊ. ಹಂ.ಪ. ನಾಗರಾಜಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಲೇಖಕ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ…

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ‌ ಬೊಳುವಾರು ಪುತ್ತೂರು ಇದರ‌ ತಿಂಗಳ ಸರಣಿ ತಾಳಮದ್ದಳೆಯ ಪ್ರಯುಕ್ತ ಪಾರ್ತಿಸುಬ್ಬ ವಿರಚಿತ ‘ಸೀತಾಪರಿತ್ಯಾಗ’ ತಾಳಮದ್ದಳೆಯು ದಿನಾಂಕ 10-06-2024ರಂದು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ರಾಜ ಗೋಪುರದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಎಲ್.ಎನ್. ಭಟ್, ಸತೀಶ್ ಇರ್ದೆ, ಪದ್ಯಾಣ ಶಂಕರನಾರಾಯಣ ಭಟ್, ಪರೀಕ್ಷಿತ್ ಪುತ್ತೂರು ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ರಾಮ (ಪಕಳಕುಂಜ ಶ್ಯಾಮ್ ಭಟ್‌), ಸೀತಾ (ಭಾಸ್ಕರ್ ಬಾರ್ಯ), ಲಕ್ಷ್ಮಣ (ಗುಡ್ಡಪ್ಪ ಬಲ್ಯ), ವಸಿಷ್ಠ ‌(ದುಗ್ಗಪ್ಪ ಎನ್.), ವಾಲ್ಮೀಕಿ (ಮಾಂಬಾಡಿ ವೇಣುಗೋಪಾಲ ಭಟ್) ಮತ್ತು ಕುಶಲವ (ಹರಿಣಾಕ್ಷಿ ಜೆ. ಶೆಟ್ಟಿ) ಸಹಕರಿಸಿದರು. ಟಿ. ರಂಗನಾಥ ರಾವ್ ಸ್ವಾಗತಿಸಿ, ವಂದಿಸಿದರು.

Read More

ಕಿನ್ನಿಗೋಳಿ : ಶಿವಪ್ರಣಾಮ್ ನೃತ್ಯ ಸಂಸ್ಥೆ ಕಿನ್ನಿಗೋಳಿ ಇದರ ದಶಸಂಭ್ರಮದ ಕಾರ್ಯಕ್ರಮ ‘ಶಿವಾಂಜಲಿ – 2024’ ಯುಗಪುರುಷ ಕಿನ್ನಿಗೋಳಿ ಇವರ ಸಹಕಾರದೊಂದಿಗೆ ದಿನಾಂಕ 08-06-2024ರಂದು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಪ್ರಾರಂಭಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಮಾತನಾಡಿ “ವಿದ್ಯಾರ್ಥಿಗಳು ವಿದ್ಯೆಯ ಜೊತೆ ನೃತ್ಯ ಅಥವಾ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ಜೀವನದಲ್ಲಿ ಯಶಸ್ವಿಗೊಳುತ್ತಾರೆ.” ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಿನ್ನಿಗೋಳಿ ಯುಗಪುರುಷ ಸಂಸ್ಥೆಯ ಕೆ. ಭುವನಾಭಿರಾಮ ಉಡುಪ ಮಾತನಾಡಿ “ಕಲಾ ಪ್ರಕಾರಗಳಲ್ಲಿ ಭರತನಾಟ್ಯ ಕಲೆಗಾರಿಕೆಗೆ ವಿಶ್ವಮಾನ್ಯತೆ ಇದೆ.” ಎಂದರು. ನಾಟ್ಯ ಗುರು ಶ್ರೀಧರ ಹೊಳ್ಳ ಮತ್ತು ಗುರು ವಿದುಷಿ ಪ್ರತೀಮಾ ಶ್ರೀಧರ್ ಹಾಗೂ ಶಿವಪ್ರಣಾಮ್ ನೃತ್ಯ ಸಂಸ್ಥೆಯ ನಿರ್ದೇಶಕಿಯಾದ ಅನ್ನಪೂರ್ಣ ರಿತೇಶ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಯುವ ಕಲಾವಿದರಾದ ವಿದುಷಿ ಪ್ರಕ್ಷಿಲಾ ಜೈನ್, ವಿದುಷಿ ಅಂಕಿತ ರೈ, ಅದಿತಿ ಲಕ್ಷ್ಮಿ, ಪೂರ್ವಿಕ ಹಾಗೂ ಗಾರ್ಗಿ ದೇವಿ ಇವರಿಂದ ನೃತ್ಯಕಾರ್ಯಕ್ರಮ ನಡೆಯಿತು.…

Read More