Author: roovari

ರಾಮನಗರ : 2023-2024ನೇ ಸಾಲಿನ ‘ಕೆ.ಪಿ. ಪೂರ್ಣಚಂದ್ರ ತೇಜಸ್ವಿ (ಪೂಚಂತೆ)ಯವರ ಸಾಹಿತ್ಯ ಪ್ರಶಸ್ತಿ’ಗೆ ಲೇಖಕರಿಂದ ಕನ್ನಡದ ಕೃತಿಗಳನ್ನು ಆಹ್ವಾನಿಸಲಾಗಿದೆ. 2023- 2024ರಲ್ಲಿ ಪ್ರಕಟವಾದ ಎಲ್ಲಾ ಪ್ರಕಾರದ ಕೃತಿಗಳನ್ನು ಪೂಚಂತೆ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಪ್ರಶಸ್ತಿಯು ಪೂಚಂತೆಯವರ ಪುಸ್ತಕಗಳು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಶೀರ್ಷಿಕೆಯ ಮೂರು ಕೃತಿಗಳನ್ನು ಮಾರ್ಚ್ ಅಂತ್ಯದೊಳಗೆ ಲಿಖಿತ್ ಹೊನ್ನಾಪುರ, ಸುಗ್ಗನಹಳ್ಳಿ ಅಂಚೆ, ತಿಪ್ಪಸಂದ್ರ ಹೋಬಳಿ, ಮಾಗಡಿ ತಾಲೂಕು, ರಾಮನಗರ ಜಿಲ್ಲೆ – 561101 ಈ ಅಂಚೆ ವಿಳಾಸಕ್ಕೆ ಕಳುಹಿಸಲು ಕೋರುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ : 9353062539.

Read More

ಮೂಲತ: ಭಾರತೀಯ ಆಡಳಿತಾತ್ಮಕ ಸೇವಾ ಅಧಿಕಾರಿ (I.A.S.) ಅದಕ್ಕೂ ಮಿಗಿಲಾಗಿ ಬಹುಮುಖ ಸೇವೆಯೊಂದಿಗೆ ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ಜಾನಪದ ಸಂಗ್ರಾಹಕ, ಸಂಶೋಧಕ ಹೀಗೆ ಬಹುಮುಖ ಪ್ರತಿಭೆಯ ಕನ್ನಡ ಸಾಹಿತ್ಯ ಮತ್ತು ಜಾನಪದ ಲೋಕವನ್ನು ಶ್ರೀಮಂತಗೊಳಿಸಿದ ಕನ್ನಡ ಸಾರಸ್ವತ ಲೋಕದ ಹಿರಿಯರಲ್ಲಿ ಓರ್ವರಾದ ಎಚ್.ಎಲ್. ನಾಗೇಗೌಡರು, ಮಂಡ್ಯ ಜಿಲ್ಲೆಯ ಹೆರಗನಹಳ್ಳಿ ದೊಡ್ಡಮನೆ ಕುಟುಂಬದಲ್ಲಿ 1915ರ ಫೆಬ್ರವರಿ 11ರಂದು ಜನಿಸಿದರು. ತಂದೆ ಲಿಂಗೇಗೌಡ, ತಾಯಿ ಹುಚ್ಚಮ್ಮನವರು. ಬಾಲಕನಿರುವಾಗಲೇ ತಾಯಿಯನ್ನು ಕಳೆದುಕೊಂಡ ಇವರಿಗೆ ತಂದೆಯೇ ಮಾತಾಪಿತರೀರ್ವರ ಸ್ಥಾನ ತುಂಬುತ್ತಾ ಪ್ರತೀ ಹೆಜ್ಜೆಯಲ್ಲಿ ಹುರಿದುಂಬಿಸಿರುವರು. ಅವರ ಮಾರ್ಗದರ್ಶನದಂತೆಯೆ ಬೆಳೆದರು. ನಾಗತಿಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಮೈಸೂರಿನಲ್ಲಿ ಬಿ.ಎಸ್ಸಿ ಪದವಿ ಮುಗಿಸಿ, ಪೂನಾದಲ್ಲಿ ಎಲ್.ಎಲ್.ಬಿ. ಪದವಿಯ ನಂತರ ನರಸಿಂಹರಾಜಪುರದ ಮುನ್ಸೀಫ್ ಕೋರ್ಟಿನಲ್ಲಿ ಹೆಡ್ ಮುನ್ಸೀಫ್ ಆಗಿ ವೃತ್ತಿ ಆರಂಭಿಸಿದ ಇವರು, ಮೈಸೂರು ಸಿವಿಲ್ ಸರ್ವೀಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಜಯಿಯಾಗಿ ರೆವೆನ್ಯು ಇಲಾಖೆಯಲ್ಲಿ ಅಧಿಕಾರಿಯಾಗಿ ಆಯ್ಕೆಗೊಂಡು ನಂತರದಲ್ಲಿ ಐ.ಎ.ಎಸ್. ಅಧಿಕಾರಿಯಾಗಿ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ…

Read More

ಪುತ್ತೂರು: ಇಲಿ ಜ್ವರದಿಂದ ಬಳಲುತ್ತಿದ್ದ ಪುತ್ತೂರು ತಾಲ್ಲೂಕಿನ ಬೆಟ್ಟಂಪಾಡಿ ಗ್ರಾಮದ ಕೇಕನಾಜೆ ನಿವಾಸಿಯಾಗಿರುವ ಯಕ್ಷಗಾನ ಕಲಾವಿದ ಪ್ರದೀಪ್ ರೈ ಕೆ. ಇವರು ಮಂಗಳೂರಿನ ಆಸ್ಪತ್ರೆಯಲ್ಲಿ ದಿನಾಂಕ 07 ಫೆಬ್ರವರಿ 2025ರ ಶುಕ್ರವಾರದಂದು ನಿಧನರಾದರು. ಇವರಿಗೆ 54 ವರ್ಷ ವಯಸ್ಸಾಗಿತ್ತು. ವಿದ್ಯಾರ್ಥಿ ದೆಸೆಯಲ್ಲೇ ಕಲೆ ಮತ್ತು ಸಾಹಿತ್ಯ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದ ಪ್ರದೀಪ್ ಮಂಗಳಾದೇವಿ ಯಕ್ಷಗಾನ ಮೇಳ, ನಾಳ ದುರ್ಗಾ ಪರಮೇಶ್ವರಿ ಯಕ್ಷಗಾನ ಮೇಳಗಳಲ್ಲಿ ವೇಷಧಾರಿಯಾಗಿ ಕಾರ್ಯನಿರ್ವಹಿಸಿದ್ದರು. ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮಗಳಲ್ಲಿ ಅರ್ಥಧಾರಿಯಾಗಿ, ಸಂಘಟಕರಾಗಿ ಮತ್ತು ಯಕ್ಷಗಾನ ನಾಟ್ಯ ಗುರುಗಳಾಗಿಯೂ ಗುರುತಿಸಿಕೊಂಡಿದ್ದರು. ಬೆಟ್ಟಂಪಾಡಿಯ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಶ್ರೀಯುತರು ಪತ್ನಿ, ಪುತ್ರಿ, ಪುತ್ರ ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.

Read More

ಬದಿಯಡ್ಕ : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ದಿನಾಂಕ 09 ಫೆಬ್ರವರಿ 2025ರಂದು ಬದಿಯಡ್ಕದ ಗಣೇಶ ಪೈಗಳ ಮನೆಯಲ್ಲಿ ದಿ. ಬಿ. ಕೃಷ್ಣ ಪೈಯವರ ‘ಸ್ಮರಣಾಂಜಲಿ’ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಮರಣಾ ಭಾಷಣ ಮಾಡಿದ ನಿವೃತ್ತ ಪ್ರಾಂಶುಪಾಲ ಡಾ. ಬೇ. ಸೀ ಗೋಪಾಲಕೃಷ್ಣ ಭಟ್ “ಕಾಸರಗೋಡು ಜಿಲ್ಲೆಯ ಬದಿಯಡ್ಕವನ್ನು ಸಾಂಸ್ಕೃತಿಕ ನಗರಿಯಾಗಿ ರೂಪಿಸಿದವರಲ್ಲಿ ಬಿ. ಕೃಷ್ಣ ಪೈಗಳೂ ಪ್ರಮುಖರು. ಇವರು ವಿನೂತನ ಶೈಲಿಯಲ್ಲಿ ಕಾರ್ಯಕ್ರಮ ಸಂಯೋಜಿಸುವಲ್ಲಿ ನಿಸ್ಸೀಮರು. ಸ್ನೇಹಮಯ ಹಾಸ್ಯಭರಿತ ಸ್ವಭಾವ, ಸರ್ವಜನ ಸಮಭಾವ, ಅಶುಕವಿತ್ವವು ಯುವ ಸಾಹಿತಿಗಳಿಗೆ ಆದರ್ಶ” ಎಂದು ಹೇಳಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ಪ್ರೊ. ಎ. ಶ್ರೀನಾಥ್ ಕಾಸರಗೋಡು ಮಾತನಾಡಿ, “ಕೃಷ್ಣ ಪೈಗಳು ಅನೇಕ ಪ್ರತಿಭೆಗಳನ್ನು ಶೋಧಿಸಿ ಗೆದ್ದಿದ್ದಾರೆ. ಎಲ್ಲಾ ಕಡೆಗಳಲ್ಲಿ ಎಳೆಯ ಮಕ್ಕಳ ಕವಿ ಮನಸ್ಸುಗಳನ್ನು ಅರಳಿಸುವ ಯತ್ನಗಳು ನಡೆಯಬೇಕು. ಇದರಿಂದ ಮಕ್ಕಳ ಮಾನಸಿಕ ದೃಢತೆ ಹೆಚ್ಚುತ್ತದೆ” ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ…

Read More

ಉಡುಪಿ : ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ವತಿಯಿಂದ ರೇಡಿಯೋ ಮಣಿಪಾಲ್ ಸಹಯೋಗದಲ್ಲಿ ನಡೆಯುತ್ತಿರುವ ಸರಣಿ ಕಾರ್ಯಕ್ರಮ ‘ಕಥೆ ಕೇಳೋಣ’ದ ಭಾಗವಾಗಿ, ಕೇಳುಗರಿಗೆ ರೇಡಿಯೋ ಸೆಟ್ ಗಳನ್ನು ಉಚಿತವಾಗಿ ಹಸ್ತಾಂತರಿಸುವ ಅಭಿಯಾನವು ದಿನಾಂಕ 09 ಫೆಬ್ರವರಿ 2025ರಂದು ಮ್ಯಾಕ್ಸ್ ಮೀಡಿಯಾ ಆವರಣದಲ್ಲಿ ನಡೆಯಿತು. ಖ್ಯಾತ ಚಲನಚಿತ್ರ ನಟ ರಂಗ ನಿರ್ದೇಶಕ ಮಂಡ್ಯ ರಮೇಶ್ ಫಲಾನುಭವಿಗಳಿಗೆ ರೇಡಿಯೋಗಳನ್ನು ವಿತರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರೇಡಿಯೋ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಮುಖ್ಯಸ್ಥರಾದ ಡಾ. ರಶ್ಮಿ ಅಮ್ಮೆಂಬಳ, ಕ.ಸಾ.ಪ. ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ, ಕ.ಸಾ.ಪ. ಜಿಲ್ಲಾ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್, ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು, ಸಾಮಾಜಿಕ ಜಾಲತಾಣದ ಸಂಚಾಲಕ ಸಿದ್ಧಬಸಯ್ಯಸ್ವಾಮಿ ಚಿಕ್ಕಮಠ, ರೇಡಿಯೊ ಮಣಿಪಾಲದ ಸ್ವಯಂ ಸೇವಕರಾದ ಸುನೀತಾ ಅಂಡಾರು ಮುಂತಾದವರು ಉಪಸ್ಥಿತರಿದ್ದರು.

Read More

ದೆಹಲಿಯ ರಾಷ್ಟ್ರೀಯ ರಂಗಶಾಲೆಯು (ಎನ್.ಎಸ್.ಡಿ.) ಫೆಬ್ರವರಿ 1ರಿಂದ ಎಂಟು ದಿನಗಳ ಕಾಲ ಬೆಂಗಳೂರಿನ ಕಲಾಗ್ರಾಮದಲ್ಲಿ ಆಯೋಜಿಸಿದ್ದ ‘ಭಾರತ ರಂಗ ಮಹೋತ್ಸವ ಅಂತರಾಷ್ಟ್ರೀಯ ನಾಟಕೋತ್ಸವ’ದ ಕೊನೆಯ ದಿನವಾದ ಫೆಬ್ರವರಿ 8ರಂದು ಬೆಂಗಳೂರಿನ ಎನ್.ಎಸ್.ಡಿ. ಕೇಂದ್ರದ ವಿದ್ಯಾರ್ಥಿಗಳು ಬಿ. ಜಯಶ್ರೀಯವರ ನಿರ್ದೇಶನದಲ್ಲಿ ‘ಜಸ್ಮಾ ಓಡನ್’ ನಾಟಕವನ್ನು ಅಭಿನಯಿಸಿ ಗಮನ ಸೆಳೆದರು. ಗುಜರಾತಿನ ಜನಪ್ರಿಯ ಜಾನಪದ ಕಥೆಯಾಧರಿಸಿ ಶಾಂತಾ ಗಾಂಧಿಯವರು ಬರೆದ ‘ಜಸ್ಮಾ ಓಡನ್’ ನಾಟಕವು ಬಿ. ಜಯಶ್ರೀಯವರ ಪರಿಕಲ್ಪನೆಯಲ್ಲಿ ದೃಶ್ಯಕಾವ್ಯವಾಗಿ ಅರಳಿದೆ. ಹಾಡು ಸಂಗೀತ ನೃತ್ಯ ಕಲಾಪ್ರಕಾರಗಳ ಸಂಯೋಜನೆಯಿಂದಾಗಿ ಇಡೀ ನಾಟಕ ನೋಡುಗರ ಕಣ್ಮನ ಸೆಳೆಯುವಂತೆ ಮೂಡಿ ಬಂದಿದೆ. ಈ ಜಾನಪದ ಪ್ಯಾಂಟಸಿ ಕಥೆ ಹೀಗಿದೆ. ಮುನಿಯೊಬ್ಬನ ತಪಸ್ಸಿನ ಪ್ರಭಾವಕ್ಕೆ ಇಂದ್ರನ ಸಿಂಹಾಸನವೇ ಕಂಪಿಸುತ್ತದೆ. ಮುನಿಯ ತಪಸ್ಸು ಭಂಗಕ್ಕೆ ಇಂದ್ರ ಅಪ್ಸರೆಯರನ್ನು ಕಳುಹಿಸುತ್ತಾನೆ. ತಪೋಭಂಗಗೊಂಡ ಮುನಿ ಅಪ್ಸರೆ ಕಾಮಕುಂಡಲಿಯ ಮೇಲೆ ಅನುರಕ್ತನಾಗುತ್ತಾನೆ. ಮುನಿಯ ಬಯಕೆಯನ್ನು ಆ ಅಪ್ಸರೆ ತಿರಸ್ಕರಿಸಿ ಆತನನ್ನು ಅವಮಾನಿಸಿದಾಗ ಸಿಟ್ಟಿಗೆದ್ದ ಋಷಿ ‘ಭೂಲೋಕದಲ್ಲಿ ವಡ್ಡರ ಕುಲದ ಕುರೂಪಿ ಕುಂಟ ಗಂಡನ ಹೆಂಡತಿಯಾಗಿ…

Read More

ಮಂಗಳೂರು: ಸಂಗೀತ ಭಾರತಿ ಪ್ರತಿಷ್ಠಾನ ಆಯೋಜನೆಯ ರಾಷ್ಟ್ರಮಟ್ಟದ ಸಂಗೀತ ಸ್ಪರ್ಧೆ, ವಿಜೇತರಿಗೆ ಪುರಸ್ಕಾರ ಪ್ರದಾನ ಕಾರ್ಯಕ್ರಮ ‘ಡಾ. ಪಿ. ದಯಾನಂದ ಪೈ ‘ಎಸ್‌. ಬಿ. ಎಫ್. ಯುವ ಮಹೋತ್ಸವ್-2025’ಇದರ ಉದ್ಘಾಟನಾ ಸಮಾರಂಭವು ದಿನಾಂಕ 08 ಫೆಬ್ರವರಿ 2025ರ ಶನಿವಾರದಂದು ಮಂಗಳೂರಿನ ಡಾನ್‌ಬಾಸ್ಕೊ ಸಭಾಂಗಣದಲ್ಲಿ sನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಪದ್ಮಶ್ರೀ ಪುರಸ್ಕೃತ ಹಿರಿಯ ಬಾನ್ಸುರಿ ಕಲಾವಿದ ಪಂ. ರೋನು ಮುಜುಂದಾರ್ ಮಾತನಾಡಿ “ಯುವಜನರಲ್ಲಿ ಹಿಂದುಸ್ತಾನಿ ಶಾಸೀಯ ಸಂಗೀತವನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಸಂಗೀತ ಭಾರತಿ ಫೌಂಡೇಶನ್ ಮಂಗಳೂರಿನಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆ ಆಯೋಜಿಸಿರುವುದು ಶ್ಲಾಘನೀಯ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಯುವ ಕಲಾವಿದರು ಉತ್ತಮ ಪ್ರದರ್ಶನ ನೀಡಿರುವುದು ಸಂತಸ ತಂದಿದೆ.” ಎಂದರು. ಸಂಗೀತ ಭಾರತಿ ಪ್ರತಿಷ್ಠಾನ ಅಧ್ಯಕ್ಷ ಉಸ್ತಾದ್ ರಫೀಕ್ ಖಾನ್, ಉಪಾಧ್ಯಕ್ಷರಾದ ಪ್ರೊ. ನರೇಂದ್ರ ಎಲ್. ನಾಯಕ್, ಅಂತಾರಾಷ್ಟ್ರೀಯ ಕಲಾವಿದರಾದ ಪಂ. ಜಯತೀರ್ಥ ಮೇವುಂಡಿ, ಯುವ ತಬ್ಲಾ ವಾದಕ ಪಂ. ಯಶವಂತ್ ವೈಷ್ಣವ್, ವಿದುಷಿ ಪೂರ್ಣಿಮಾ ಭಟ್ ಕುಲಕರ್ಣಿ, ಡಾ. ಶಶಾಂಕ್ ಮಕ್ತೇದಾರ್, ಉಜ್ಜೈನ್ ಸ್ಮಾಲ್…

Read More

ಮಂಗಳೂರು : ಕೂಟ ಮಹಾಜಗತ್ತು (ರಿ.) ಸಾಲಿಗ್ರಾಮ ಇದರ ಮಂಗಳೂರು ಅಂಗ ಸಂಸ್ಥೆಯವರು ಆಯೋಜಿಸಿದ್ದ ‘ನಮ್ಮವರು ನಮ್ಮ ಹೆಮ್ಮೆ’ ಕಾರ್ಯಕ್ರಮವು ದಿನಾಂಕ 09 ಫೆಬ್ರವರಿ 2025ರಂದು ಪಾಂಡೇಶ್ವರದ ಗುರು ನರಸಿಂಹ ಸಭಾಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕೂಟ ಸಮಾಜದ ಐದು ಜನ ಸಾಧಕರಿಗೆ ‘ಕೂಟ ಸಮಾಜದ ಕಣ್ಮಣಿ’ ಎಂಬ ಬಿರುದು ಪ್ರಧಾನ ಮಾಡಲಾಯಿತು. ಸಮಾರಂಭದ ಸಾಂಸ್ಕೃತಿಕ ವೇದಿಕೆಯಲ್ಲಿ ಭರತಾಂಜಲಿ (ರಿ.) ಕೊಟ್ಟಾರ ಮಂಗಳೂರು ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ‘ಭರತನಾಟ್ಯ ಸಂಭ್ರಮ’ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನವನ್ನು ಪ್ರಸ್ತುತಗೊಳಿಸಿದರು. ಕೊನೆಯಲ್ಲಿ ಸಂಸ್ಥೆಯ ಕಲಾ ಗುರುಗಳನ್ನು ಗೌರವಿಸಲಾಯಿತು.

Read More

ಕಾಸರಗೋಡು : ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ದಿನಾಂಕ 27 ಮಾರ್ಚ್ 2025 ಗುರುವಾರದಂದು ನಡೆಯುವ ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನದ ಅಂಗವಾಗಿ ಕೇರಳ ರಾಜ್ಯ ಸಹಿತ ಕಾಸರಗೋಡು ಜಿಲ್ಲೆಯ ಸಾಹಿತ್ಯಾಸಕ್ತರಿಗೆ ಸಣ್ಣ ಕಥೆ, ಕವನ, ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸಣ್ಣ ಕಥೆ ರಚನೆ (ಎ4 ಅಳತೆಯ ಹಾಳೆಯಲ್ಲಿ ಒಂದು ಪುಟ ಮೀರದಂತೆ ಇರಬೇಕು), ಕವನ ರಚನೆ ಸ್ಪರ್ಧೆ (12 ಸಾಲು ಮೀರಬಾರದು), ನಾನು ಓದಿದ ಉತ್ತಮ ಪುಸ್ತಕ (ಎ4 ಹಾಳೆಯಲ್ಲಿ ಎರಡು ಪುಟ) ಮೀರದಂತೆ ಇರಬೇಕು. ಕಾಸರಗೋಡು ಜಿಲ್ಲೆಯಲ್ಲಿ ವಾಸವಾಗಿರುವ, ಉದ್ಯೋಗ, ವ್ಯವಹಾರದಲ್ಲಿರುವವರು ಮತ್ತು ಮೂಲತಃ ಕಾಸರಗೋಡು ಜಿಲ್ಲೆಯವರಾಗಿದ್ದು ರಾಜ್ಯ, ದೇಶ, ವಿದೇಶಗಳಲ್ಲಿ ವಾಸವಾಗಿರುವ ಸಾಹಿತ್ಯಾಸಕ್ತರು ಮುಕ್ತವಾಗಿ ಭಾಗವಹಿಸಬಹುದು. ಪ್ರತಿ ಸ್ಪರ್ಧಾ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಮತ್ತು 25 ಮಂದಿಗೆ ಆಯ್ಕೆ ಸಮಿತಿಯವರು ಗುರುತಿಸಲ್ಪಟ್ಟ ಸಣ್ಣ ಕಥೆ, ಕವನ, ಪ್ರಬಂಧ ರಚಿಸಿದ ಸಾಹಿತ್ಯಾಸಕ್ತರಿಗೆ ವಿಶೇಷ ಬಹುಮಾನ, ಪ್ರಮಾಣ ಪತ್ರ,…

Read More

ಬೆಳ್ತಂಗಡಿ : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಹಾಗೂ ಪರಿವಾರ ದೈವಗಳ ಐದನೇ ವರ್ಷದ ಪ್ರತಿಷ್ಠಾ ಮಹೋತ್ಸವ ಹಾಗೂ ನೇಮೋತ್ಸವದ ಅಂಗವಾಗಿ ದಿನಾಂಕ 07 ಫೆಬ್ರವರಿ 2025ನೇ ಶುಕ್ರವಾರ ‘ಶ್ಯಮಂತಕ ಮಣಿ’ ಎಂಬ ತಾಳಮದ್ದಳೆಯು ಶ್ರೀ ದೇವಳದ ಪ್ರಾಂಗಣದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಗಿರೀಶ್ ರೈ ಕಕ್ಕೆಪದವು ಮತ್ತು ಪದ್ಮನಾಭ ಕುಲಾಲ್ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪಿ.ಟಿ. ಜಯರಾಮ್ ಭಟ್, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೆಳದಲ್ಲಿ ಶುಭಾ ಜೆ.ಸಿ. ಅಡಿಗ (ಶ್ರೀ ಕೃಷ್ಣ), ಕಿಶೋರಿ ದುಗ್ಗಪ್ಪ ನಡುಗಲ್ಲು (ಜಾಂಬವಂತ), ಹರಿಣಾಕ್ಷಿ ಜೆ. ಶೆಟ್ಟಿ (ಬಲರಾಮ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಸ್ವರ್ಣಲತಾ ಬಾರ್ಯ ಮತ್ತಿತರರು ಕಲಾವಿದರಿಗೆ ಶಾಲು ಹೊದಿಸಿ ಗೌರವಿಸಿದರು.

Read More