Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಆಲಾಫ್ ಸಂಗೀತ ಸಭಾ ಇದರ ವತಿಯಿಂದ ಬೈಠಕ್ ಸಂಗೀತ ಕಛೇರಿಯನ್ನು ದಿನಾಂಕ 22 ಜೂನ್ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಮಹಾಲಕ್ಷ್ಮೀಪುರಂನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಂಗೀತ ಕಛೇರಿಯಲ್ಲಿ ಅರ್ಜುನ್ ಆನಂದ್ ಇವರ ಸಿತಾರ್ ವಾದನ, ಸುದೀಪ್ತೋ ಚಕ್ರಬೋರ್ತಿ ಮತ್ತು ಮಾಹಿ ಜವೇರಿ ಇವರ ಹಾಡುಗಾರಿಕೆಗೆ ರೂಪಕ್ ಕಲ್ಲೂರ್ಕರ್, ಆದಿತ್ಯ ಸಿಂಗ್, ಕೌಶಿಕ್ ಭಟ್ ತಬಲಾದಲ್ಲಿ ಹಾಗೂ ಮಧುಸೂದನ್ ಭಟ್ ಮತ್ತು ಗೌರವ್ ಗಡಿಯಾರ್ ಇವರು ಹಾರ್ಮೋನಿಯಂನಲ್ಲಿ ಸಾಥ್ ನೀಡಲಿದ್ದಾರೆ.
ಮೈಸೂರು : ಡಿ.ವಿ.ಜಿ. ಬಳಗ ಪ್ರತಿಷ್ಠಾನ (ನೋಂ) ಇದರ ವತಿಯಿಂದ ‘ಡಿ.ವಿ.ಜಿ. ಪ್ರಶಸ್ತಿ 2025’ ಪ್ರದಾನ ಸಮಾರಂಭವನ್ನು ದಿನಾಂಕ 22 ಜೂನ್ 2025ರಂದು ಬೆಳಗ್ಗೆ 10-00 ಗಂಟೆಗೆ ಮೈಸೂರಿನ ಕುವೆಂಪು ನಗರದ ರಮಾ ಗೋವಿಂದ ಕಲಾವೇದಿಕೆಯಲ್ಲಿ ಆಯೋಜಿಸಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಶಿವಮೊಗ್ಗದ ಖ್ಯಾತ ವಾಗ್ಮಿಗಳಾದ ವಿದ್ವಾನ್ ಜಿ.ಎಸ್. ನಟೇಶ್ ಇವರು ವಹಿಸಲಿದ್ದು, ಕವಿಗಳು ಹಾಗೂ ಸಾಹಿತಿ ಟಿ.ಎನ್. ಶಿವಕುಮಾರ್ (ತ ನಾ ಶಿ) ಇವರಿಗೆ ‘ಡಿ.ವಿ.ಜಿ. ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಗುವುದು. ಬೆಂಗಳೂರಿನ ಖ್ಯಾತ ಶಿಕ್ಷಣ ತಜ್ಞರಾದ ಡಾ. ಗುರುರಾಜ ಕರಜಗಿ ಮತ್ತು ಖ್ಯಾತ ಸಂಗೀತಗಾರರು ಹಾಗೂ ಸಂಗೀತ ಶಾಸ್ತ್ರಜ್ಞರಾದ ವಿದ್ವಾನ್ ಡಾ. ರಾ.ಸ. ನಂದಕುಮಾರ್ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪುತ್ತೂರು : ಸಂಧ್ಯಾರಶ್ಮಿ ಸಾಹಿತ್ಯ ಸಂಘ ಹಾಗೂ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ಹೋಬಳಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಸಾಹಿತಿ ಕೆ. ಆರ್. ತೇಜಕುಮಾರ್ ಬಡ್ಡಡ್ಕ ಇವರ ವ್ಯಕ್ತಿತ್ವ ಹಾಗೂ ಕೃತಿ ಪರಿಚಯದ ‘ತಿಂಗಳ ಸಾಹಿತ್ಯ ಸಂವಾದ ಮಾಲಿಕೆ’ ಕಾರ್ಯಕ್ರಮದಲ್ಲಿ ಸಾಹಿತಿ ಉಲ್ಲಾಸ್ ಕಜೋಡಿ ಬರೆದ ಚೊಚ್ಚಲ ಕೃತಿ “ಜೀವನಯಾನ” ಕವನ ಸಂಕಲನದ ಲೋಕಾರ್ಪಣಾ ಸಮಾರಂಭವು ದಿನಾಂಕ 20 ಜೂನ್ 2025ರಂದು ಕುರುಂಜಿಬಾಗ್ ನಲ್ಲಿರುವ ಸಂದ್ಯಾರಶ್ಮಿ ಸಭಾಂಗಣದಲ್ಲಿ ನಡೆಯಿತು. ಸಂದ್ಯಾರಶ್ಮಿ ಸಾಹಿತ್ಯ ಸಂಘದ ಅಧ್ಯಕ್ಷರಾದ ಶ್ರೀಮತಿ ಲೀಲಾ ದಾಮೋದರ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಸಾಹಿತಿಗಳಾದ ಅರವಿಂದ ಚೊಕ್ಕಾಡಿ ಕೃತಿ ಲೋಕಾರ್ಪಣೆಗೊಳಿಸಿದರು. ನಿವೃತ್ತ ಉಪನ್ಯಾಸಕ ರಾಮಚಂದ್ರ ಪಳಂಗಾಯ ಇವರು ವ್ಯಕ್ತಿತ್ವ ಪರಿಚಯ ಮಾಡಿ, ನಿವೃತ್ತ ಉಪ ಪ್ರಾಂಶುಪಾಲರಾದ ಬಾಬು ಮಾಸ್ತರ್ ಅಚೆಪ್ಪಾಡಿ ಕೃತಿ ಪರಿಚಯಿಸಿದರು. ಸಮಾರಂಭದಲ್ಲಿ ಸಾಹಿತಿ ಕೆ. ಆರ್. ತೇಜಕುಮಾರ್ ಬಡ್ಡಡ್ಕ, ಬಂಟಮಲೆ ಅಕಾಡೆಮಿಯ ಅಧ್ಯಕ್ಷರಾದ ಸಾಹಿತಿ ಎ. ಕೆ. ಹಿಮಕರ, ಸುಳ್ಯ ತಾಲೂಕು…
ತುಮಕೂರು : ಕನ್ನಡ ಸಾಹಿತ್ಯ ಪರಿಷತ್ತು ತುಮಕೂರು ಹಾಗೂ ಜಯಮಂಗಲಿ ಪ್ರಕಾಶನ ತುಮಕೂರು ಆಯೋಜಿಸುವ ದುಗ್ಗೇನಹಳ್ಳಿ ಸಿದ್ದೇಶ ಇವರ ‘ಗುರುವಿನ ಜೋಳಿಗೆ’ ಕವನ ಸಂಕಲನದ ಲೋಕಾರ್ಪಣಾ ಸಮಾರಂಭವು 22 ಜೂನ್ 2025 ರಂದು ಬೆಳಿಗ್ಗೆ ಘಂಟೆ 11.00ಕ್ಕೆ ತುಮಕೂರಿನ ಅಮಾನಿಕೆರೆ ರಸ್ತೆಯಲ್ಲಿರುವ ಕನ್ನಡ ಭವನದಲ್ಲಿ ನಡೆಯಲಿದೆ. ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಇದರ ಅಧ್ಯಕ್ಷರಾದ ನಾಡೋಜ ಡಾ. ವೂಡೇ ಪಿ.ಕೃಷ್ಣ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ರಾಜ್ಯ ಒಕ್ಕಲಿಗರ ಸಂಘ ತುಮಕೂರು ಇದರ ನಿರ್ದೇಶಕರು ಹಾಗೂ ಸಹಾಯಕ ಕಾರ್ಯದರ್ಶಿಗಳಾದ ಶ್ರೀ ಹನುಮಂತರಾಯಪ್ಪ ಆರ್. ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಹಿರಿಯ ಜಾನಪದ ವಿದ್ವಾಂಸರಾದ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಕೃತಿ ಲೋಕಾರ್ಪಣೆ ಗೊಳಿಸಲಿದ್ದು, ಬೆಂಗಳೂರಿನ ವಿಮರ್ಶಕರು ಮತ್ತು ಲೇಖಕರಾದ ಡಾ. ಜಿ. ಬಿ. ಹರೀಶ ಕೃತಿ ಕುರಿತು ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾ ಕ.ಸಾ.ಪ. ಇದರ ಅಧ್ಯಕ್ಷರಾದ ಶ್ರೀ ಕೆ.ಎಸ್. ಸಿದ್ದಲಿಂಗಪ್ಪ ಹಾಗೂ ತುಮಕೂರು ಜಿಲ್ಲಾ ಕ. ಸಾ. ಪ ಇದರ ಕೋಶಾಧ್ಯಕ್ಷರು…
ಬೆಂಗಳೂರು : ರಂಗಚಂದಿರ (ರಿ.) ಆಯೋಜಿಸುವ ಒಡನಾಡಿ ಬಂಧು ಸಿಜಿಕೆ -75 ‘ಮಾಸದ ನೆನೆಪು’ ಸರಣಿ ಕಾರ್ಯಕ್ರಮದ ಉದ್ಘಾಟನೆ ಸಮಾರಂಭವನ್ನು ದಿನಾಂಕ 27 ಜೂನ್ 2025ರಂದು ಸಂಜೆ 6-00 ಗಂಟೆ ಬೆಂಗಳೂರಿನ ಜೆ.ಸಿ. ರಸ್ತೆ, ಕನ್ನಡ ಭವನದ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಪ್ರೊ ಎಲ್.ಎನ್. ಮುಕುಂದರಾಜ್ ಇವರ ಅಧ್ಯಕ್ಷತೆಯಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜಮೂರ್ತಿ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ರಂಗ ಸಂಘಟಕ ಕೆ. ರೇವಣ್ಣ, ರಂಗ ನಿರ್ದೇಶಕ ರಾಜೇಶ್ ತಲಕಾಡು ಮತ್ತು ಹಿರಿಯ ಕಲಾವಿದರಾದ ಎಂ. ಚಂದ್ರಕಾಂತ ಇವರಿಗೆ ರಂಗ ಗೌರವ ನೀಡಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಂಚಯ ತಂಡದಿಂದ ರಂಗಗೀತೆಗಳು, ರಂಗ ಪ್ರದರ್ಶನ ಕಲಾ ಕೇಂದ್ರ ಅಭಿನಯದ ಕುವೆಂಪು ರಚನೆಯ ‘ಜಲಗಾರ’ ನಾಟಕ ದೃಶ್ಯಾವಳಿ ಮತ್ತು ಡಾ. ಹೆಚ್.ಎಸ್. ಶಿವಪ್ರಕಾಶ್ ರಚನೆಯ ‘ಸಮಗಾರ ಭೀಮವ್ವ’ ಕಾವ್ಯ ವಾಚನ ಮಂಜನಾಥ್ ಕಗ್ಗೆರೆ ಇವರಿಂದ ಪ್ರಸ್ತುತಗೊಳ್ಳಲಿದೆ.
ಕುಮಟಾ : ಶ್ರೀ ವಿನಾಯಕ ಭಟ್ಟ ಸಂಯೋಜನೆಯಲ್ಲಿ ಸುಪ್ರಸಿದ್ಧ ಯಕ್ಷ ದಿಗ್ಗಜರಿಂದ ‘ಯಕ್ಷ ಸಂಭ್ರಮ’ ಕಾರ್ಯಕ್ರಮವನ್ನು ದಿನಾಂಕ 22 ಜೂನ್ 2025ರಂದು ಸಂಜೆ 4-00 ಗಂಟೆಗೆ ಕುಮಟಾ ಹವ್ಯಕ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ‘ಶ್ರೀ ಸತ್ಯನಾರಾಯಣ ವೃತ ಮಹಾತ್ಮೆ’ ಹಾಗೂ ‘ಮೀನಾಕ್ಷಿ ಕಲ್ಯಾಣ’ ಎಂಬ ಪ್ರಸಂಗ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಸ್ವಿಟ್ಜರ್ಲ್ಯಾಂಡ್ : ಭಾರತೀಯ ಶಾಸ್ತ್ರೀಯ ಸಂಗೀತ ಕಛೇರಿ ವಯೋಲಿನ್ ಟ್ರಿಯೋ ಕಾರ್ಯಕ್ರಮವು ದಿನಾಂಕ 22 ಜೂನ್ 2025ರಂದು ಸಂಜೆ 4-00 ಗಂಟೆಗೆ ಸ್ವಿಟ್ಜರ್ಲ್ಯಾಂಡ್ ನಲ್ಲಿ ನಡೆಯಲಿದೆ. ಡಾ. ಮೈಸೂರು ಮಂಜುನಾಥ್, ಸುಮಂತ್ ಮಂಜುನಾಥ್ ಮತ್ತು ಮಾಳವಿ ಇವರ ವಯೋಲಿನ್ ವಾದನಕ್ಕೆ ಶ್ರೀರಂಗ ಮಿರಾಜ್ಕರ್ ಇವರು ತಬಲಾ ಹಾಗೂ ಚಿದು ನಾರಾಯಣನ್ ಇವರು ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ.
ಮೈಸೂರು : ಬೆಂಗಳೂರಿನ ರಂಗಸಂಪದ ರಂಗ ತಂಡದ ವತಿಯಿಂದ ಸುವರ್ಣ ಸಂಭ್ರಮದ ಪ್ರಯುಕ್ತ ದಿನಾಂಕ 22 ಜೂನ್ 2025ರಂದು ಸಂಜೆ 4-00 ಹಾಗೂ 6-30 ಗಂಟೆಗೆ ಹಿರಿಯ ರಂಗ ಕಲಾವಿದೆ ಉಮಾಶ್ರೀ ಅಭಿನಯಿಸುವ ‘ಶರ್ಮಿಷ್ಠೆ’ ಏಕವ್ಯಕ್ತಿ ನಾಟಕ ಪ್ರದರ್ಶನವನ್ನು ಮೈಸೂರಿನ ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಡಾ. ಬೇಲೂರು ರಘುನಂದನ್ ನಾಟಕ ರಚಿಸಿದ್ದು, ಚಿದಂಬರ ರಾವ್ ಜಂಬೆ ವಿನ್ಯಾಸ ನಿರ್ದೇಶನ ಮಾಡಿದ್ದು, ಟಿಕೆಟ್ ದರ ರೂ.150/- ನಿಗದಿ ಮಾಡಲಾಗಿದೆ.
ನಮ್ಮ ಕುಟುಂಬದಲ್ಲಿ ಒಬ್ಬರಾಗಿ ಬೆರೆತುಹೋಗಿರುವ ಸಂಪಿಗೆ ಲಕ್ಷ್ಮಮ್ಮನವರು ನನ್ನ ಬಾಲ್ಯದ ದಿನಗಳಲ್ಲಿ ಪುನರಾವರ್ತಿತವಾಗಿ ಹೇಳುತ್ತಿದ್ದ ವಿಧಿಯಮ್ಮನ ಜನಪದ ಕಥೆಯು ಸೋಫೋಕ್ಲಿಸ್ಸಿನ ‘ಈಡಿಪಸ್ ರೆಕ್ಸ್’ ನಾಟಕಕ್ಕೆ ಹೋಲುತ್ತಿದ್ದುದನ್ನು ಸಾಹಿತ್ಯಾಸಕ್ತಿ ಬೆಳೆದ ನಂತರದ ದಿನಗಳಲ್ಲಿ ಕಂಡುಕೊಂಡೆ. ಸಿಗ್ಮಂಡ್ ಫ್ರಾಯ್ಡ್ ಈ ಕಥೆಯ ಹಿನ್ನೆಲೆಯಲ್ಲಿ ‘ಈಡಿಪಸ್ ಕಾಂಪ್ಲೆಕ್ಸ್’ ಎಂಬ ಮಾನಸಿಕ ಪರಿಕಲ್ಪನೆಯೊಂದನ್ನು ಹೆಸರಿಸಿದ್ದಾನೆ. ವಿಧಿಯಮ್ಮನ ಕಥೆಯನ್ನು ಕಾದಂಬರಿಯಾಗಿಸುವ ಕನಸು ಬಹಳ ದಿನಗಳಿಂದ ಇತ್ತು. ಆದರೆ ಕಾದಂಬರಿಯ ವಿಸ್ತಾರವಾದ ವ್ಯಾಪ್ತಿಗೆ ಕಥಾ ಎಳೆಯು ಸಾಲದು ಎನ್ನಿಸಿತು. ಹೀಗಾಗಿ ವಿಧಿಗೆ ಸಂಬಂಧಿಸಿದ ಜನಪದ ಕಥೆಗಳನ್ನೆಲ್ಲಾ ಒಟ್ಟು ಹಾಕತೊಡಗಿದೆ. ಕನ್ನಡ ಮಾತ್ರವಲ್ಲದೆ ಮರಾಠಿ, ಸಂತಾಲಿ, ಗೊಂಡಿ, ತಮಿಳು ಮೊದಲಾದ ಇತರ ಭಾಷೆಗಳಲ್ಲಿಯೂ ಇರುವ ಹಲವು ಜನಪದ ಕಥೆಗಳನ್ನು ಆಧರಿಸಿ ನನ್ನ ಕಲ್ಪನೆಯ ಸಂಯೋಗದೊಂದಿಗೆ ಒಂದು ಬಂಧದಲ್ಲಿ ಕಾದಂಬರಿಯ ರೂಪಕ್ಕೆ ತರುವ ಯತ್ನವನ್ನು ಮಾಡಿದ್ದೇನೆ. ಈ ಕಥೆಗಳಲ್ಲಿ ಕೆಲವು ‘ಬದುಕು ವಿಧಿಯ ಅನುಸಾರವೇ ನಡೆಯುತ್ತದೆ’ ಎಂಬ ಸಿದ್ಧಾಂತವನ್ನು ಸಾರಿದರೆ, ‘ಮನುಷ್ಯ ಪ್ರಯತ್ನದಿಂದ ಅಥವಾ ಯುಕ್ತಿಯಿಂದ ವಿಧಿಗೇ ತಿರುಗೇಟು ನೀಡಬಹುದು’ ಎಂಬ ವಾದವನ್ನು…
ದುಬೈ : ಯಕ್ಷಗಾನ ಅಭ್ಯಾಸ ಕೇಂದ್ರ ಯು.ಎ.ಇ. ಇದರ ‘ದಶಮಾನೋತ್ಸವ ಸಂಭ್ರಮ’ವನ್ನು ಯಕ್ಷಧ್ರುವ ಪಟ್ಲ ಫೌಂಡೇಷನ್ ಯು.ಎ.ಇ. ಘಟಕದ ಸಹಯೋಗದೊಂದಿಗೆ ದಿನಾಂಕ 29 ಜೂನ್ 2025ರಂದು ಬೆಳಿಗ್ಗೆ 9-00 ಗಂಟೆಗೆ ದುಬೈ ಯು.ಎ.ಇ. ಕರಾಮದ ಇಂಡಿಯನ್ ಹೈಸ್ಕೂಲಿನ ಶೇಖ್ ರಷೀದ್ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ. ದಶಮ ಸಂಭ್ರಮದ ಪ್ರಯುಕ್ತ ಯು.ಎ.ಇ.ಯ ಏಳು ಮಂದಿ ಸಾಧಕರನ್ನು ಮತ್ತು ಮೂರು ಸಾಧಕ ಸಂಸ್ಥೆಗಳನ್ನು ಸನ್ಮಾನಿಸಲಾಗುವುದು. ಸರ್ವೋತ್ತಮ ಶೆಟ್ಟಿ (ಸಂಘಟನೆ), ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ (ಕಲಾ ಪೋಷಕ), ಪುತ್ತಿಗೆ ವಾಸುದೇವ ಭಟ್ (ಉದ್ಯಮ), ಬಾಲಕೃಷ್ಣ ಸಾಲಿಯಾನ್ (ಸಮಾಜ ಸೇವೆ), ಬಿ.ಕೆ. ಗಣೇಶ ರೈ (ಮಾಧ್ಯಮ), ಡೋನಿ ಕೊರೆಯಾ (ನಾಟಕ), ರೂಪಾ ಕಿರಣ್ (ಭರತನಾಟ್ಯ), ಶ್ರೀ ರಾಜರಾಜೇಶ್ವರಿ ಭಜನಾ ತಂಡ (ಭಜನೆ), ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ (ಸಂಸ್ಕೃತಿ) ಕನ್ನಡ ಪಾಠಶಾಲೆ ದುಬೈ (ಕನ್ನಡ ನಾಡು-ನುಡಿ-ಭಾಷೆ) ಸನ್ಮಾನ ಆಯ್ಕೆಯಾದ ಸಾಧಕರು ಹಾಗೂ ಸಂಸ್ಥೆಗಳು. ಬೆಳಗ್ಗೆ 9-00 ಗಂಟೆಗೆ ಆರಂಭವಾಗುವ ಕಾರ್ಯಕ್ರಮಕ್ಕೆ ಒಟ್ಟು ಹದಿನೆಂಟು ಮಂದಿಯ ಅಬ್ಬರ…