Author: roovari

ಪುತ್ತೂರು : ವಿದುಷಿ ಮಂಜುಳಾ ಸುಬ್ರಮಣ್ಯ ಇವರ ನಿರ್ದೇಶನದಲ್ಲಿ ನಡೆಯುತ್ತಿರುವ ಪುತ್ತೂರಿನ ನಾಟ್ಯಶಾಲೆ ನಾಟ್ಯ ರಂಗವು ದಿನಾಂಕ 23-03-2024ರಂದು ಆಯೋಜಿಸಿದ ಕಲಾ ಮಾತಿನ ವೇದಿಕೆಯಲ್ಲಿ ವಿದುಷಿ ಪಾರ್ವತಿ ಗಣೇಶ ಭಟ್ ಹೊಸಮೂಲೆ ಇವರು ದೇವರ ನಾಮ, ಗೀಗೀಪದ, ಲಾವಣಿ ತತ್ವಪದಗಳನ್ನು ಹಾಡುತ್ತಾ, ತಮ್ಮ ಕಲಾ ಪಯಣದ ಹಾದಿಯ ಪರಿಚಯವನ್ನು ಪ್ರೇಕ್ಷಕರ ಜೊತೆ ಹಂಚಿಕೊಂಡರು. ನಂತರ ಪುತ್ತೂರು ವಿವೇಕಾನಂದ ಪ್ರಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶೋಭಿತ ಸತೀಶ್ ಇವರು “ಕಲಾ ಪ್ರಜ್ಞೆ ಮತ್ತು ತೊಡಗಿಕೊಳ್ಳುವಿಕೆಗೆ ವಯಸ್ಸಿನ ಮಿತಿ ಇರುವುದಿಲ್ಲ. ನಮ್ಮ ಸ್ವಖುಷಿಗಾಗಿ ನಾವು ಕಲಾ ಅಭ್ಯಾಸವನ್ನು ರೂಡಿಸಿಕೊಳ್ಳಬೇಕಿದೆ” ಎಂದು ತಿಳಿಸುತ್ತಾ ಶಾಸ್ತ್ರೀಯ ನೃತ್ಯ ಭಾವಾಭಿನಯವನ್ನು ಪ್ರಸ್ತುತಪಡಿಸಿದರು. ಯಕ್ಷಗಾನ ತಾಳಮದ್ದಲೆ ಅರ್ಥಧಾರಿಯಾಗಿರುವ ಶ್ರೀಮತಿ ಶುಭ ಅಡಿಗ ಇವರು ಪೌರಾಣಿಕ ಪಾತ್ರಗಳಾದ ಅಂಬೆ, ಹಿಡಿಂಬೆ ಹಾಗೂ ಲಕ್ಷ್ಮಣನ ಪಾತ್ರಗಳ ಪ್ರಸ್ತುತಿಯೊಂದಿಗೆ ತಾಳಮದ್ದಲೆ ಕ್ಷೇತ್ರದಲ್ಲಿ ತಾವು ಬೆಳೆದು ಬಂದ ಬಗೆಯನ್ನು ತಿಳಿಸಿದರು. ನಾಟ್ಯರಂಗದ ನೃತ್ಯ ಗುರುಗಳೂ, ಶಾಸ್ತ್ರೀಯ ಮತ್ತು ರಂಗಭೂಮಿಯ ಸೃಜನಶೀಲ ಸಾಧ್ಯತೆಗಳನ್ನು ತಮ್ಮ ಪ್ರಯೋಗಗಳಲ್ಲಿ ಅಳವಡಿಸಿಕೊಂಡಿರುವ ಮಂಜುಳಾ…

Read More

ಪಡುಬಿದ್ರೆ : ಮೂಲ್ಕಿ ಸುಂದರ್‌ ರಾಮ್‌ ಶೆಟ್ಟಿ ಕಾಲೇಜು ಶಿರ್ವ ಹಾಗೂ ಚಿರಂತನ ಚಾರಿಟೇಬಲ್‌ ಟ್ರಸ್ಟ್‌ ಸುರತ್ಕಲ್‌ ಇದರ ಸಹಯೋಗದಲ್ಲಿ ಸುರ್ ಮಣಿ ಪಂ. ಕಿರಣ್‌ ಹೆಗ್ಡೆ ಇವರ ಹಿಂದೂಸ್ಥಾನಿ ಶಾಸ್ತ್ರೀಯ ಕೊಳಲು ವಾದನ ಕಛೇರಿಯು ದಿನಾಂಕ 15-03-2024ರಂದು ಶಿರ್ವದ ಮೂಲ್ಕಿ ಸುಂದರ್‌ ರಾಮ್‌ ಶೆಟ್ಟಿ ಕಾಲೇಜಿನಲ್ಲಿ ನಡೆಯಿತು. ಪಂ. ಕಿರಣ್‌ ಹೆಗ್ಡೆ ಇವರು ಸಂಜೆಯ ಪೂರಿಯಾ ಕಲ್ಯಾಣ್‌ ರಾಗವನ್ನು ಪ್ರಸ್ತುತಪಡಿಸಿದರು. ಅವರ ಕೊಳಲ ನಾದವು ಕೇಳುಗರನ್ನು ಮಂತ್ರಮುಗ್ಧಗೊಳಿಸಿತು. ಆರಂಭದ ಆಲಾಪ್, ಜೋಡ್ ಹಾಗೂ ಝಾಲಾ ಇದರ ವಿಶಿಷ್ಟವಾದ ನುಡಿಸಾಣಿಕೆ ಕಾರ‍್ಯಕ್ರಮಕ್ಕೆ ಮೆರುಗನ್ನು ನೀಡಿತು. ಕಲಾಕಾರನ ಕಲಾ ನೈಪುಣ್ಯ ಕೇಳುಗರ ಹೃದಯ ಮುಟ್ಟುವಂತೆ ಅರಳಿಕೊಳ್ಳುತ್ತಾ ಮುನ್ನಡೆಯಿತು. ವಿಲಂಬಿತ ರೂಪಕ ತಾಳದಲ್ಲಿ ಲಯಬದ್ಧವಾಗಿ ರಾಗ-ರಸ ಕಾಲೇಜಿನ ಸಭಾಭವನದಲ್ಲಿ ತುಳುಕಾಡುತ್ತಿದ್ದಂತೆ ಕೇಳುಗರು ಮಂತ್ರಮುಗ್ಧವಾಗದೇ ಇರಲು ಸಾಧ್ಯವಾಗಲಿಲ್ಲ. ಉನ್ನತ ಸಂಗೀತದ ಉಯ್ಯಾಲೆಯಲ್ಲಿ ತೇಲಾಡಿದ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಕಲಾ ರಸಿಕರಾದರು ಮಾತ್ರವಲ್ಲ, ಕಾಲೇಜಿನಲ್ಲಿ ನಡೆದ ಈ ವಿಶಿಷ್ಟ ಸಂಗೀತ ರಸದೌತಣದಲ್ಲಿ ಮಿಂದೆದ್ದರು. ತುಳಸೀದಾಸರು ಭಕ್ತಪರವಶರಾಗಿ ತಮ್ಮ ʼರಾಮಚರಿತಮಾನಸʼದಲ್ಲಿ…

Read More

ಮಂಗಳೂರು : ಖ್ಯಾತ ನಟ, ನಾಟಕ ಕಲಾವಿದ, ಹಾಡುಗಾರ ಪ್ರಸಾಧನಕಾರ ಎಸ್. ರಾಮದಾಸ್ (86) ಟಿ.ಟಿ. ರಸ್ತೆ ನಿವಾಸಿ ಅಲ್ಪಕಾಲದ ಅಸೌಖ್ಯದಿಂದಾಗಿ ದಿನಾಂಕ 27-03-2024ರಂದು ಸ್ವಗ್ರಹದಲ್ಲಿ ನಿಧನ ಹೊಂದಿದರು. ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯಲ್ಲಿ 32 ವರ್ಷ ಸೇವೆ ಸಲ್ಲಿಸಿದ ಇವರು ಕಲ್ಕೂರ ಜಾಹೀರಾತು ಸಂಸ್ಥೆಯಲ್ಲಿ ಕೆಲವು ವರ್ಷ ಕೆಲಸ ಮಾಡಿದ್ದರು. ದಶಕಗಳ ಕಾಲದ ಹಿಂದೆ ಪ್ರಾಥಮಿಕ ನವೋದಯ ಕಲಾವೃoದದಲ್ಲಿ ಮಸಣಕ್ಕೆ, ತರಂಗ ತರಂಗ ಅಂತರಂಗ, ಹೆಗಲಿಗೆ ಇರುಳು, ಅಸ್ತಮಾನ, ಕಲ್ಜಿಗದ ಕುರುಕ್ಷೇತ್ರ, ಕೋಟಿ ಚೆನ್ನಯ್ಯದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಇವರು ಎನ್.ಎಸ್. ರಾವ್ ರಚಿಸಿದ ಕಲಿ ಕಂಠೀರವ ನಾಟಕದಲ್ಲಿ ನಂಜಯ್ಯನ ಪಾತ್ರದಲ್ಲಿ ಮಿಂಚಿದ್ದರು. ಸೀತಾರಾಮ್ ಕುಲಾಲ್ ರವರ ‘ಮಣ್ಣಿನ ಮಗಳು ಅಬ್ಬಕ್ಕ’ದಲ್ಲಿ ನಾರ್ಣಪ್ಪಯ್ಯ ಪಾತ್ರ ಸ್ಮರಿಸುವಂತದ್ದು. ಮಾಸ್ಟರ್ ವಿಠ್ಠಲ್ ಜತೆಯಲ್ಲಿ 40 ವರ್ಷಗಳಿಂದ ಹಾಡುಗಾರನಾಗಿ, ಪ್ರಸಾಧನ ಕಲಾವಿದರಾಗಿ, ಮಾಯಾಮೃಗ, ಶಕುಂತಳಾ, ಮೋಹಿನಿ – ಭಸ್ಮಾಸುರ.. ಇನ್ನೂ ಅನೇಕ ರೂಪಕಗಳಿಗೆ ಹಾಡುಗಾರನಾಗಿ, ಪ್ರಸಾಧನ ಕಲಾವಿದನಾಗಿ ಪ್ರಸಿದ್ದಿ ಹೊಂದಿದ್ದರು . ದಿ.…

Read More

ಹೊನ್ನಾವರ : ಹೊನ್ನಾವರದ ಗುಣವಂತೆಯಲ್ಲಿ ‘ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ’ದ 5ನೇ ದಿನದ ಕಾರ್ಯಕ್ರಮವು ದಿನಾಂಕ 17-03-2024ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮೈಸೂರಿನ ಖ್ಯಾತ ಸಾಹಿತಿಗಳಾದ ಶ್ರೀ ಜಿ. ಎಸ್. ಭಟ್ಟ “ಗ್ರಾಮೀಣ ಪ್ರದೇಶವಾದ ಗುಣವಂತೆಯಲ್ಲಿ ‘ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ’ ಆಗುತ್ತಿರುವುದು ಸಾಂಸ್ಕೃತಿಕ ಅನನ್ಯತೆಯ ಅಪೂರ್ವ ಕಾರ್ಯಕ್ರಮವೆಂದು ಭಾವಿಸುತ್ತೇನೆ. ಇಂತಹ ಅಪರೂಪದ ಕಾರ್ಯಕ್ರಮವನ್ನು ಸರ್ಕಾರ ಗುರುತಿಸಿ ಸ್ಥಿರ ಅನುದಾನವನ್ನು ನೀಡಬೇಕು. ನಿರಂತರ ಯಕ್ಷಗಾನ ಚಿಂತನೆಯ ಈ ಕೆರೆಮನೆಯ ನೆಲದಲ್ಲಿ “ಯಕ್ಷಗಾನ ವಿಶ್ವವಿದ್ಯಾಲಯ” ಸ್ಥಾಪನೆಯಾಗಬೇಕು, ತನ್ಮೂಲಕ ಸಂಶೋಧನೆಗಳು ನಡೆದು ಯಕ್ಷಗಾನದ ವಿಸ್ತಾರ ಸಮಾಜಕ್ಕೆ ತಲುಪಬೇಕು. ಯಕ್ಷಗಾನ ಅಕಾಡೆಮಿಯಲ್ಲಿ ಉತ್ತರ ಕನ್ನಡದವರನ್ನು ನಿರ್ಲಕ್ಷಿಸಿದ್ದನ್ನ ಕೂಡಲೇ ಸರಿಪಡಿಸಬೇಕು.” ಎಂದು ಸರ್ಕಾರವನ್ನು ಆಗ್ರಹಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯಮಾನ್ಯರಿಂದ ದೀಪ ಪ್ರಜ್ವಲನದ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟನೆಗೊಂಡಿತು. ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಮಾನವನ್ನು ಸಾಗರದ ಕಲಾಸಂಘಟಕರಾದ ಶ್ರೀ ಶುಂಠಿ ಸತ್ಯನಾರಾಯಣ ಭಟ್ಟ, ಜಾನಪದ ತಜ್ಞ ಮತ್ತು ಸಂಶೋಧಕರಾದ ಡಾ. ಮೋಹನ ಕುಂಟಾರ್,…

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ವತಿಯಿಂದ ತಿಂಗಳ ಸರಣಿ ತಾಳಮದ್ದಳೆಯು ಬನ್ನೂರು ಸಮೀಪದ‌ ಭಾರತೀ ನಗರದ ಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನದಲ್ಲಿ ದಿನಾಂಕ 26-03-2024ರಂದು ‘ಅಂಗದ ಸಂಧಾನ’ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಯಲ್.ಯನ್. ಭಟ್, ಆನಂದ ಸವಣೂರು, ಪ್ರೊ. ದಂಬೆ ಈಶ್ವರ ಶಾಸ್ತ್ರೀ, ಅಚ್ಯುತ ಪಾಂಗಣ್ಣಾಯ, ಮಾಸ್ಟರ್ ಪರೀಕ್ಷಿತ್ ಮತ್ತು ಮಾಸ್ಟರ್ ಅಮೋಘ ಕೃಷ್ಣ ‌ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ರಾಮ‌ (ಭಾಸ್ಕರ್ ಬಾರ್ಯ ಮತ್ತು ಬಡೆಕ್ಕಿಲ ಚಂದ್ರಶೇಖರ ಭಟ್), ರಾವಣ (ಪಕಳಕುಂಜ ಶ್ಯಾಮ್ ಭಟ್), ಪ್ರಹಸ್ತ (ಗುಂಡ್ಯಡ್ಕ ಈಶ್ವರ ಭಟ್), ಸಾರಣ (ಗುಡ್ಡಪ್ಪ ಬಲ್ಯ), ಸುಗ್ರೀವ (ದುಗ್ಗಪ್ಪ‌ ಯನ್.) ಮತ್ತು ಅಂಗದ (ಅಚ್ಯುತ ಪಾಂಗಣ್ಣಾಯ) ಸಹಕರಿಸಿದರು.

Read More

ಕಾರ್ಕಳ : ಮಂಗಳೂರು ವಿಶ್ವವಿದ್ಯಾನಿಲಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ, ವಿವಿ ಸಂಧ್ಯಾ ಕಾಲೇಜು ಮಂಗಳೂರು ಹಾಗೂ ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಕರಾವಳಿ ಸಂಸ್ಕೃತಿ ಸಮಕಾಲೀನ ಸವಾಲುಗಳು’ ಎಂಬ ವಿಷಯದ ಬಗ್ಗೆ ರಾಷ್ಟ್ರೀಯ ವಿಚಾರ ಸಂಕಿರಣವು ದಿನಾಂಕ 30-03-2024ರಂದು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಆಡಿಯೋ ವಿಶುವಲ್ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಕಾಲೇಜು ವಿಶ್ವಸ್ತ ಮಂಡಳಿ ಸದಸ್ಯರಾದ ಶ್ರೀ ಟಿ.ಎ. ಜಗದೀಶ್ ಇವರ ಅಧ್ಯಕ್ಷತೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ ಇವರು ಉದ್ಘಾಟಿಸಲಿದ್ದಾರೆ. ಹಿರಿಯ ವಿದ್ವಾಂಸರು ಮತ್ತು ಸಾಹಿತಿಗಳಾದ ಡಾ. ಗಣೇಶ ಅಮೀನ್ ಸಂಕಮಾರ್ ಇವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಇದೇ ಸಮಯದಲ್ಲಿ ಚಿಂತನೆ 1ರಲ್ಲಿ ಆಂಧ್ರಪ್ರದೇಶದ ಕುಪ್ಪಂ ದ್ರಾವಿಡ ವಿ.ವಿ.ಯ ಪ್ರಾಧ್ಯಾಪಕರಾದ ಡಾ. ಬಿ.ಎಸ್. ಶಿವಕುಮಾರ್ ‘ತುಳುನಾಡಿನ ಜಾತ್ರೆಗಳು – ಕೂಡು ಸಮಾಜದ ಮಾದರಿ’, ಚಿಂತನೆ 2ರಲ್ಲಿ ಮಂಗಳೂರಿನ ದೈವ ನರ್ತಕರು ಮತ್ತು…

Read More

ಮಂಗಳೂರು : ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಹಾಗೂ ಜರ್ನಿ ಥಿಯೇಟರ್ ಗ್ರೂಪ್ ಮಂಗಳೂರು ಸಹಯೋಗದೊಂದಿಗೆ ಕಾಲೇಜಿನ ವಿದ್ಯಾರ್ಥಿಗಳು ಅಭಿನಯಿಸಿದ ‘ಉತ್ಥಾನ ಪರ್ವ’ ನಾಟಕ ಪ್ರದರ್ಶನವು ದಿನಾಂಕ 18-03-2024ರಂದು ಮಂಗಳೂರು ಗಾಂಧೀನಗರದಲ್ಲಿರುವ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಕಲಾಮಂಟಪದಲ್ಲಿ ಪ್ರದರ್ಶನಗೊಂಡಿತು. ಕಾಲೇಜಿನ ಸಂಚಾಲಕ ಕಾರಂದೂರು ವಸಂತ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಶಿವಭಕ್ತಿ ಯೋಗ ಸಂಘದ ಉಪಾಧ್ಯಕ್ಷ ಶೇಖರ ಪೂಜಾರಿ, ಮಾಜಿ ಡೀನ್ ಡಾ. ಉಮ್ಮಪ್ಪ ಪೂಜಾರಿ, ಪ್ರಾಂಶುಪಾಲೆ ಡಾ. ಆಶಾಲತಾ ಎಸ್. ಸುವರ್ಣ, ಲಲಿತ ಕಲಾ ಸಂಘದ ಸಂಯೋಜಕಿ ಡಾ. ನಿಶಾ ಯುವರಾಜ್, ವಿದ್ದು ಉಚ್ಚಿಲ್, ಜರ್ನಿ ಥೇಟ‌ರ್ ಗ್ರೂಪಿನ ಸಾಂಸ್ಕೃತಿಕ ಸಂಚಾಲಕ ಸುನೀಲ್ ಪಲ್ಲಮಜಲು ಮೊದಲಾದವರು ಉಪಸ್ಥಿತರಿದ್ದರು.

Read More

ನಟನೊಬ್ಬ ಶೂನ್ಯ ದೃಷ್ಟಿಯ ಮೂಲಕ ಜನರನ್ನೇ ದಿಟ್ಟಿಸಿ ನೋಡುತ್ತಾ ತೆಂಬರೆ ಬಾರಿಸುವುದರೊಂದಿಗೆ ನಾಟಕ ಆರಂಭವಾಗುತ್ತದೆ. ಕುದ್ರೋಳಿ ಗೋಕರ್ಣನಾಥೇಶ್ವರ ಕಾಲೇಜು ವಿದ್ಯಾರ್ಥಿಗಳಿಂದ ಜರ್ನಿಥೇಟರ್ ಮಂಗಳೂರು ಇವರ ಸಹಯೋಗದೊಂದಿಗೆ ಕಾಲೇಜಿನ ರಂಗಮಂಟಪದಲ್ಲಿ ಸಂಪನ್ನಗೊಂಡ ನಾಟಕವಿದು. ನಾಟಕ ರಚನೆಕಾರ ವಿಧೇಯನ್ ರಚಿಸಿರುವ ಈ ನಾಟಕದ ಹೆಸರು “ಉತ್ಥಾನ ಪರ್ವ” ಈ ಹೆಸರಿನಂತೆ ನಾಟಕದುದ್ದಕ್ಕೂ ಎರಡು ಹುಡುಕಾಟಗಳು ನಿರಂತರವಾಗಿ ಸಾಗುತ್ತವೆ. ಒಂದು ಹುಡುಕಾಟವು ಜಗದ ನಿಯಮಗಳಿಗೆ ಬಲಿಯಾದ ಮಗುವಿಗಾಗಿ ತಾಯಿಯ ಹುಡುಕಾಟವಾದರೆ ಮತ್ತೊಂದು ವಾಸ್ತವ ಜಗದ ಒಳಗೆ ಇರದೇ ಇರುವ ಅಸ್ತಿತ್ವದ ಅತೀ ಬಯಕೆಗಳಿಗಾಗಿ ನಡೆಯುವ ದೇವರ ಹುಡುಕಾಟ. ಈ ನಾಟಕದ ಒಳಗೆ ಎರಡು ಕಥೆಗಳಲ್ಲಿ ಹೆಣೆಯಲಾಗಿದೆ. ಅದು ಮಲಯಾಳಂ ಮೂಲದ ಜಿ. ಶಂಕರ್ ಪಿಳ್ಳೆಯರು ರಚಿಸಿದ “ಕರುತ್ತ ದೈವತ್ತೆ ತೇಡಿ” ಮತ್ತು ತುಳುವ ನಾಡಿನ ದೈವ ಕೊರಗಜ್ಜನ ಕಥೆ. ಇವೆರಡು ಕಥೆಗಳನ್ನು ಎರಡೂ ಕಥೆಗಳಿಗೂ ತೊಡಕು ಬಾರದ ರೀತಿಯಲ್ಲಿ ಹೆಣೆದಿರುವ ನಾಟಕ ರಚನೆಕಾರರನ್ನು ಮೆಚ್ಚಲೇಬೇಕು. ನಾಟಕದ ನಿರ್ದೇಶಕರಾದ ವಿದ್ದು ಉಚ್ಚಿಲರು ಈ ನಾಟಕವನ್ನು ಅತೀ ಸುಂದರವಾಗಿ…

Read More

ಸಾಮಾನ್ಯವಾಗಿ ಬೆಂಗಳೂರು ನಗರದಂಥ ಬೃಹತ್ ನಗರದಲ್ಲಿ ನೃತ್ಯಪ್ರದರ್ಶನಗಳು ನಡೆಯುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ನೃತ್ಯ ಕಾರ್ಯಕ್ರಮಗಳು ಸ್ಮೃತಿಪಟಲದಲ್ಲಿ ಉಳಿಯುವಂಥವು. ಜೆ. ಪಿ. ನಗರದ ‘ಅರ್ಕ’- ಆಪ್ತ ಕಲಾಮಂದಿರದಲ್ಲಿ ನಡೆದ ‘ಕಲಾಸಂಭ್ರಮ-4’ ದಲ್ಲಿ ನೃತ್ಯಕಲಾವಿದೆ – ಗುರು ಭಾವನಾ ವೆಂಕಟೇಶ್ವರ ಅವರ ಆಯ್ದ ಕೃತಿಗಳ ಸಮರ್ಪಣಾ ಪ್ರಸ್ತುತಿಗಳು ಮುದನೀಡಿದವು. ಅ ನೃತ್ಯಸಂಯೋಜನೆಗಳು ಹೊಸ ಆಯಾಮದಲ್ಲಿ ಕಣ್ಮನ ಸೆಳೆದರೆ, ಅಂಗಶುದ್ಧ ನರ್ತನ-ಸ್ಫುಟವಾದ ಮುದ್ರೆಗಳ ಚೆಲುವಿನಲ್ಲಿ ಕಲಾವಿದೆ ಭಾವನಾಳ ಆತ್ಮವಿಶ್ವಾಸ ಅಭಿವ್ಯಕ್ತಗೊಂಡಿತ್ತು. ವೇಗ ಗತಿಯ ನೃತ್ತಝೇಂಕಾರವನ್ನೂ ಒಳಗೊಂಡ ಸಾತ್ವಿಕಾಭಿನಯ, ಆಕಾಶಚಾರಿ, ಭ್ರಮರಿ, ಅಡವುಗಳ ಖಾಚಿತ್ಯ, ಹರಿತವಾದ ಜತಿಗಳ ಸೊಗಸು ಬೆರೆತ ಲವಲವಿಕೆಯ ಆಂಗಿಕಾಭಿನಯ ಮುಂತಾದ ‘ನೃತ್ಯವ್ಯಾಕರಣ’ದ ಎಲ್ಲ ಸುಂದರಾಂಶಗಳನ್ನೂ ಸುಮನೋಹರವಾಗಿ ಬಿಂಬಿಸಿದ್ದವು. ನವ ಆಯಾಮದ ‘ಅಲರಿಪು’ -ಶಿವ-ಶಿವೆಯರ ಸುಂದರ ಸಂಗಮದಂತೆ ಭಾಸವಾದರೂ ದೇವ-ದೇವಿಯರ ಅಸ್ಮಿತೆಯನ್ನು ತನ್ನ ಸೂಕ್ಷ್ಮಾಭಿನಯದ ಬನಿಯಲ್ಲಿ ಸಾಕ್ಷಾತ್ಕರಿಸಿದ ಕಲಾವಿದೆಯ ಚೈತನ್ಯಭರಿತ ನರ್ತನ ಸ್ತುತ್ಯಾರ್ಹವಾಗಿತ್ತು. ‘ಶಿವ ನವರಸ’- ಪಾಪನಾಶನ ಶಿವನ್ ರಚಿಸಿದ ಅಪೂರ್ವ ಕೃತಿಯಲ್ಲಿ ಶಿವನ ಭವ್ಯತೆ ಹಾಗೂ ವೀರತ್ವವನ್ನು ಮನಮುಟ್ಟುವಂತೆ ಪ್ರತಿಪಾದಿಸಿತು. ಪ್ರತಿಯೊಂದು…

Read More

ಕಾಸರಗೋಡು : ರಂಗಚಿನ್ನಾರಿ ಕಾಸರಗೋಡು ಇದರ ಹದಿನೆಂಟನೇ ವಾರ್ಷಿಕೋತ್ಸವ ಮತ್ತು ರಂರಚಿನ್ನಾರಿ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 30-03-2024ನೇ ಶನಿವಾರದಂದು ಸಂಜೆ ಘಂಟೆ 4.55ರಿಂದ ಕಾಸರಗೋಡಿನ ಕರೆಂದಕ್ಕಾಡಿನಲ್ಲಿರುವ ‘ಪದ್ಮಗಿರಿ ಕಲಾ ಕುಟೀರ’ದಲ್ಲಿ ನಡೆಯಲಿದೆ. 2024 ನೇ ಸಾಲಿನ ಶ್ರೀ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಸ್ಮರಣಾರ್ಥ ಪ್ರಶಸ್ತಿ’ಗೆ ಯಕ್ಷಗಾನ ಕ್ಷೇತ್ರದ ಸಾಧಕರಾದ ಶ್ರೀ ರಾಮ ಜೋಗಿ, ‘ರಂಗ ಚಿನ್ನಾರಿ ಪ್ರಶಸ್ತಿ’ಗೆ ಸಂಗೀತ ಕ್ಷೇತ್ರದ ಸಾಧಕರಾದ ಶ್ರೀ ಚಂದ್ರಶೇಖರ ಹಾಗೂ ಸಾಹಿತ್ಯ, ಸಂಗೀತ ಮತ್ತು ಚಿತ್ರಕಲಾ ಕ್ಷೇತ್ರದ ಸಾಧಕರಾದ ಶ್ರೀಮತಿ ಶಶಿಕಲಾ ಬಾಯಾರು, ‘ರಂಗ ಚಿನ್ನಾರಿ ಯುವ ಪ್ರಶಸ್ತಿ’ಗೆ ಕಲಾ ಕ್ಷೇತ್ರದ ಸಾಧಕರಾದ ಶ್ರೀ ಕಾರ್ತಿಕ್ ಪಡ್ರೆ ಹಾಗೂ ನೃತ್ಯಕಲಾ ಕ್ಷೇತ್ರದ ಸಾಧಕರಾದ ಕುಮಾರಿ ಶಿವಾನಿ ಕೆ. ಕೂಡ್ಲು ಆಯ್ಕೆಯಾಗಿದ್ದಾರೆ. ಧಾರ್ಮಿಕ ಮುಂದಾಳು ಹಾಗೂ ಖ್ಯಾತ ನೇತ್ರ ತಜ್ಞರಾದ ಡಾ. ಅನಂತ ಕಾಮತ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಶ್ರೀ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಲಿರುವರು.…

Read More