Subscribe to Updates
Get the latest creative news from FooBar about art, design and business.
Author: roovari
ತೆಕ್ಕಟ್ಟೆ: ಕೊಮೆ ತೆಕ್ಕಟ್ಟೆಯ ಯಶಸ್ವೀ ಕಲಾವೃಂದದ ‘ಶ್ವೇತಯಾನ-31’ರ ಕಾರ್ಯಕ್ರಮವಾಗಿ ಯಕ್ಷಗಾನ ಭಾಗವತಿಗೆ, ಚಂಡೆ, ಮದ್ದಳೆ, ಹೆಜ್ಜೆ ತರಗತಿಗಳ ಉದ್ಘಾಟನಾ ಸಮಾರಂಭವು ದಿನಾಂಕ 01-06-2024ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು. ತರಗತಿಗಳನ್ನು ದೀಪ ಬೆಳಗಿ ಉದ್ಘಾಟಿಸಿದ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಕಲೆಯನ್ನು ಗೌರವಿಸಿ, ಪ್ರೀತಿಸಿದರೆ ಕಲೆ ನಮ್ಮನ್ನು ಅಪ್ಪಿಕೊಳ್ಳುತ್ತದೆ. ಸಪ್ತ ಬಗೆಯ ಸುಪ್ತ ಪ್ರಕಾರಗಳಿರುವ ಕಲೆ ಯಕ್ಷಗಾನ. ಇಂತಹ ಸಹಸ್ರ ಗುಣವಿರುವ ಯಕ್ಷಗಾನ ಕಲೆಯನ್ನು ಮೀರಿಸುವ ಕಲೆ ಪ್ರಪಂಚದಲ್ಲಿ ಇನ್ನೊಂದಿಲ್ಲ. ಕಲಿಯುವಿಕೆಯಲ್ಲಿ ಆಸಕ್ತಿ ಹೊಂದಿ, ಶ್ರದ್ಧೆ ಭಕ್ತಿಗಳನ್ನು ಹೊಂದಿ ಕಲಿಯಿರಿ. ಕಲೆಯ ಮೂಲಕ ಪ್ರಪಂಚದಾದ್ಯಂತ ನಿಮಗೆ ಗೌರವ ಸಿಗುತ್ತದೆ. ವಿದ್ಯೆ ಬದುಕಿಗೆ ಬೇಕು, ಕಲೆ ಜೀವನ ಅರಳುವುದಕ್ಕೆ ಬೇಕು. ಕಲೆಗೆ ಮರಣವಿಲ್ಲ. ಇಂದು ಸಮರ್ಥ ಗುರುಗಳಿಂದ ಯಕ್ಷಗಾನ ಕಲಿತು, ನಾಳೆ ಭವಿಷ್ಯವಾಳಿ, ಮುಂದಿನ ಜನಾಂಗಕ್ಕೆ ದಾಟಿಸುವ ಕೆಲಸ ಆಗಬೇಕು.” ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯಕ್ಷಗಾನ ಕಲಾವಿದ ಹಾಗೂ ಸಂಘಟಕರಾದ ಮಹಮದ್ ಗೌಸ್ ಮಾತನಾಡಿ “ಜಾತಿ…
ಖ್ಯಾತಿಗೂ ಮೀರಿದ ಸರಳತೆ. ಮೃದು. ತಲೆಗೊಂದು ಕೆಂಪು ಮಡಿ ಸುತ್ತಿಕೊಂಡು ಬಿಳೆ ಅಂಗಿ, ಲುಂಗಿಯೊಂದಿಗೆ ಸಣ್ಣದೊಂದು ಶ್ರುತಿ ಪೆಟ್ಟಿಗೆ, ತಾಳಗಳ ಜೊತೆ ವೇದಿಕೆಗೆ ಬಂದರೆ ಪ್ರೇಕ್ಷಕರಿಂದ ಕರತಾಡನ. ಭೀಷ್ಮ ಪರ್ವದ ಶ್ರೀಮನೋಹರ ಸ್ವಾಮಿ ಫರಾಕು, ಶ್ರೀಕೃಷ್ಣ ಸಂಧಾನದ ಅನೇಕ ಪದ್ಯಗಳು, ಜಾಂಬವತಿ ಕಲ್ಯಾಣದ ರಾಮ ರಾಘವ, ರಾಮ ನಿರ್ಯಾಣದ ಲಲನೆ ಜಾನಕಿ ಮೊದಲೆ ಪೋದಳು, ಲವಕುಶ, ಬ್ರಹ್ಮ ಕಪಾಲ, ರತ್ನಾವತಿ ಕಲ್ಯಾಣ, ಕಾರ್ತ್ಯವೀರಾರ್ಜುನ, ಚಂದ್ರಹಾಸ ಚರಿತ್ರೆ, ರಾಮಾಂಜನೇಯ ಸೇರಿದಂತೆ ಅನೇಕ ಪದ್ಯಗಳಿಗೆ ಇವರು ಜನಪ್ರಿಯರು. ಶುದ್ಧ ಸಾಂಪ್ರದಾಯಿಕ ಮಟ್ಟಿನಲ್ಲಿ ಶುದ್ಧ ಭಾವದಲ್ಲಿ, ಪದ್ಯದ ಶಬ್ಧ, ಬಂಧಕ್ಕೆ ಚ್ಯುತಿ ಬರದಂತೆ ಪದ್ಯ ಹೇಳುವ ಕರುನಾಡಿನ ಶ್ರೇಷ್ಠ ಭಾಗವತರು. ಓದಿದ್ದು ಎಸ್ಸೆಸ್ಸೆಲ್ಸಿ. ಆದರೂ ಕ್ಷೇತ್ರದಲ್ಲಿ ಮಾಡಿದ ಸಾಧನೆ ಸಣ್ಣದಲ್ಲ. ತಂದೆಯವರೂ ಇಡಗುಂಜಿ ಯಕ್ಷಗಾನ ಮೇಳದಲ್ಲಿ ವೇಷಧಾರಿಯಾಗಿದ್ದರ ಪರಿಣಾಮ ಎಂಬಂತೆ ಇವರನ್ನೂ ಅತ್ತ ಸೆಳೆದಿತ್ತು. ತಂದೆಯವರು ಹಾಗೂ ಅವರ ಒಡನಾಟದ ಕಲಾವಿದರು ಇವರಿಗೆ ಪ್ರೇರಣೆ ಆದರು. ಉತ್ತರ ಕನ್ನಡದ ಸಿದ್ದಾಪುರ ಪೇಟೆ ಸಮೀಪದ ಕೊಳಗಿ ಎಂಬ…
ಮಂಜೇಶ್ವರ : ‘ಶ್ರೀ ಮಾತಾ ಕಲಾಲಯ’ ಹಾಗೂ ‘ರೂವಾರಿ’ ಸಂಸ್ಥೆಗಳು ಜಂಟಿಯಾಗಿ ಆಯೋಜಿಸುತ್ತಿರುವ ಕನ್ನಡ, ತುಳು ಭಕ್ತಿ, ಭಾವ, ಜನಪದ ಗೀತೆ, ಚಿತ್ರಕಲೆ, ಯೋಗ, ಶಾಸ್ತ್ರೀಯ ನೃತ್ಯ ಹಾಗೂ ಶಾಸ್ತ್ರೀಯ ಸಂಗೀತ ತರಗತಿಗಳ ಉದ್ಘಾಟನಾ ಸಮಾರಂಭವು ದಿನಾಂಕ 02-06-2024ರ ಆದಿತ್ಯವಾರದಂದು ಕುಂಜತ್ತೂರಿನ ಲಕ್ಷ್ಮೀ ಕಣ್ಣಪ್ಪ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ವಿಜಯಾ ಬ್ಯಾಂಕಿನ ನಿವೃತ್ತ ಎ. ಜಿ. ಎಂ. ಆದ ಶ್ರೀ ಮೋಹನ್ ಶೆಟ್ಟಿ ಹಾಗೂ ನಿವೃತ್ತ ಅಪರ ಜಿಲ್ಲಾಧಿಕಾರಿಯಾದ ಶ್ರೀ ಪ್ರಭಾಕರ ಶರ್ಮ ಭಾಗವಹಿಸಿದರು. ಕಾರ್ಯಕ್ರಮಕ್ಕೆ ದೀಪ ಪ್ರಜ್ವಲಿಸಿ ಚಾಲನೆ ನೀಡಿ ಮಾತನಾಡಿದ ಶ್ರೀ ಪ್ರಭಾಕರ ಶರ್ಮ “ನಗರ ಪ್ರದೇಶಗಳಲ್ಲಿ ಸಾಕಷ್ಟು ನೃತ್ಯ ಹಾಗೂ ಚಿತ್ರಕಲಾ ತರಗತಿಗಳಿರುತ್ತವೆ, ಆದರೆ ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ಇಲ್ಲಿ ತರಗತಿಗಳನ್ನು ಪ್ರಾರಂಭಿಸಿರುವುದು ಶ್ಲಾಘನೀಯ. ಈ ಪ್ರದೇಶದ ಜನರು ತಮ್ಮ ಮಕ್ಕಳನ್ನು ಇಲ್ಲಿ ತರಗತಿಗಳಿಗೆ ಸೇರಿಸುವ ಮೂಲಕ ಮಕ್ಕಳ ಅಭಿವೃದ್ಧಿಗೆ ಹಾಗೂ ಇಂತಹ ಗ್ರಾಮೀಣ ಪ್ರದೇಶದ ತರಗತಿಗಳಿಗೆ ಪ್ರೊತ್ಸಾಹ ನೀಡಬೇಕು.” ಎಂದು ವಿನಂತಿಸಿದರು. ಕಾರ್ಯಕ್ರಮದಲ್ಲಿ ‘ಶ್ರೀ…
ಮಂಗಳೂರು : ಮಂಗಳೂರಿನ ನಾಟ್ಯಾರಾಧನಾ ಕಲಾಕೇಂದ್ರದ ಮೂವತ್ತನೆಯ ವರ್ಷಾಚರಣೆಯ ಪ್ರಯುಕ್ತ ನಡೆಸುತ್ತಿರುವ ನೃತ್ಯಾಮೃತ ಸರಣಿ ಕಾರ್ಯಕ್ರಮಗಳ ಅಂಗವಾಗಿ ನಡೆದ ‘ನೃತ್ಯ ಚಿಗುರು’ 10 ವರುಷಗಳ ಒಳಗಿನ ಪುಟಾಣಿ ಪ್ರತಿಭೆಗಳ ಏಕವ್ಯಕ್ತಿ ನೃತ್ಯ ಪ್ರದರ್ಶನ ಕಾರ್ಯಕ್ರಮವು ದಿನಾಂಕ 30-05-2024ರಂದು ಮಂಗಳೂರಿನ ಕೆನರಾ ಸಿ.ಬಿ.ಎಸ್.ಸಿ. ಶಾಲೆಯ ಭುವನೇಂದ್ರ ಸಭಾಸದನದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಣ್ಣಗುಡ್ಡೆ ಗುರ್ಜಿ ಸೇವಾ ಸಮಿತಿ ಮಹಿಳಾ ವಿಭಾಗದ ಅಧ್ಯಕ್ಷೆ ವೀಣಾ ಕೆ. ರಾವ್ ಇವರು ಮಾತನಾಡಿ “ಭರತನಾಟ್ಯದಂತಹ ಶಾಸ್ತ್ರೀಯ ಕಲೆಗಳನ್ನು ಎಳೆವೆಯಿಂದಲೇ ಕಲಿತರೆ ಮಕ್ಕಳಿಗೆ ಪುರಾಣ ಕಥೆಗಳ ಜತೆಗೆ ಜೀವನದ ಹಲವು ಮುಖಗಳು ತಿಳಿಯುತ್ತವೆ. ದೈಹಿಕ ಕ್ಷಮತೆಯೊಂದಿಗೆ ಮಾನಸಿಕ ನೆಮ್ಮದಿಯೂ ದೊರೆಯುತ್ತದೆ” ಎಂದು ನುಡಿದರು. ಸಂಸ್ಥೆಯ ನಿರ್ದೇಶಕಿ ಗುರು ವಿದುಷಿ ಸುಮಂಗಲಾ ರತ್ನಾಕರ್ ರಾವ್ ಅವರ ನೃತ್ಯ ಕಲೆಯಲ್ಲಿನ ಪರಿಶ್ರಮ ಮತ್ತು ಸಂಸ್ಥೆಯ ತ್ರಿಂಶೋತ್ಸವ ಸಂದರ್ಭದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ವಹಿಸಿದ್ದು, ನೃತ್ಯ ವಿದ್ಯಾಲಯ ಕದ್ರಿಯ ನಿರ್ದೇಶಕ ವಿದ್ವಾನ್…
ಬದಿಯಡ್ಕ : ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ಯಕ್ಷಗಾನದ ನಾಟ್ಯ ಹಾಗೂ ಹಿಮ್ಮೇಳ ತರಗತಿ ಆರಂಭವಾಗಲಿದೆ. ಪ್ರತಿ ವಾರ ಬದಿಯಡ್ಕದ ನವಜೀವನ ವಿದ್ಯಾಲಯ (ಮೂಕಾಂಬಿಕ ಸರ್ವಿಸ್ ಸ್ಟೇಷನ್ ಮುಂಭಾಗ)ದಲ್ಲಿ ತರಬೇತಿ ನಡೆಯಲಿದೆ. ವಿದ್ಯಾರ್ಥಿಗಳಿಗೆ ವಯಸ್ಸಿನ ಮಿತಿ ಇಲ್ಲ. ಯಕ್ಷಗಾನದ ಜತೆಗೆ ಯೋಗ, ವ್ಯಕ್ತಿತ್ವ ವಿಕಸನ, ಕ್ರಾಫ್ಟ್ ಮೊದಲಾದ ಕಾರ್ಯಾಗಾರ ಉಚಿತವಾಗಿವೆ. ಜೂನ್ ದ್ವಿತೀಯ ವಾರದಲ್ಲಿ ನೂತನ ತಂಡದ ಉದ್ಘಾಟನೆ ನಡೆಸಲು ಉದ್ದೇಶಿಸಲಾಗಿದೆ. ತರಗತಿಗೆ ಸೇರಲಿಚ್ಛಿಸುವವರು ಶ್ರೀಶ ಕುಮಾರ ಪಂಜಿತಡ್ಕ ಅವರನ್ನು ಸಂಪರ್ಕಿಸಬಹುದು.
ಮಂಗಳೂರು : ಮಂಗಳೂರಿನ ಕೋಡಿಕಲ್ಲಿನ ಸರಯೂ ಮಕ್ಕಳ ಮೇಳದ ‘ಸರಯೂ ಸಪ್ತಾಹ-2024’ ಸಾಧಕ ಸನ್ಮಾನ, ಬಯಲಾಟಗಳು ಮತ್ತು ಮಹಿಳಾ ತಾಳ ಮದ್ದಳೆ ಕಾರ್ಯಕ್ರಮದ ಸಮಾರೋಪ ಸಮಾರಂಭವು ದಿನಾಂಕ 31-05-2024ರಂದು ಮಂಗಳೂರಿನ ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು “ವಿಶ್ವವ್ಯಾಪಕವಾಗಿರುವ ಹಾಗೂ ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಕಾರ್ಯವನ್ನು ಸಾವಿರ ವರ್ಷಗಳಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿರುವ ಯಕ್ಷಗಾನವನ್ನು ನಮ್ಮ ಮುಂದಿನ ಪೀಳಿಗೆಗೆ ಸಕಾರಾತ್ಮಕವಾಗಿ ತಲಪಿಸೋಣ.” ಎಂದು ಶುಭ ಹಾರೈಸಿದರು. ಯಕ್ಷಗಾನ ಭಾಗವತ ಹಾಗೂ ಕಲಾವಿದರಾದ ತೋನ್ಸೆ ಪುಷ್ಕಳ ಕುಮಾರ್ ಪ್ರಸ್ತಾವಿಸಿದರು. ಕಲಾವಿದ ಡಾ. ಪೂವಪ್ಪ ಶೆಟ್ಟಿ ಅಳಿಕೆ ಹಾಗೂ ಹವ್ಯಾಸಿ ಭಾಗವತ ದೇವಿ ಪ್ರಕಾಶ್ ರಾವ್ ಕಟೀಲ್ ಇವರನ್ನು ಗೌರವಿಸಲಾಯಿತು. ಕೃಪಾ ಖಾರ್ವಿ ಹಾಗೂ ಶೋಭಾ ಪೇಜಾವರ ಸನ್ಮಾನ ಪತ್ರ ವಾಚಿಸಿದರು. ಕೇಶವ ಹೆಗ್ಡೆ, ಡಾ. ಪ್ರಖ್ಯಾತ್ ಶೆಟ್ಟಿ, ಮಾಧವ ನಾವಡ, ವೇದ ಮೂರ್ತಿ ಡಿ. ವಿ. ರಮೇಶ್…
ಕನ್ನಡದಲ್ಲಿ ಕಾದಂಬರಿಯು ಅತ್ಯಂತ ಹುಲುಸಾಗಿ ಬೆಳೆದ ಸಾಹಿತ್ಯ ಪ್ರಕಾರವಾಗಿದೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಅದು ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ. ಅದರ ಬೆಳವಣಿಗೆಯನ್ನು ಸ್ಥೂಲವಾಗಿ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ ಯುಗಗಳೆಂದು ಗುರುತಿಸಲಾಗುತ್ತದೆ. ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯ ಈ ಹಂತಗಳನ್ನು ಕಾಲ ಕ್ರಮದಲ್ಲಿ ಒಂದು ಮುಗಿದ ನಂತರ ಇನ್ನೊಂದು ಆರಂಭವಾಯಿತು ಎನ್ನುತ್ತಿದ್ದರೂ ಅವುಗಳೆಲ್ಲ ಏಕ ಕಾಲದಲ್ಲಿ ಅಸ್ತಿತ್ವದಲ್ಲಿರುವುದನ್ನು ಅಲ್ಲಗೆಳೆಯುವಂತಿಲ್ಲ. ಈಗ ಬಂಡಾಯ ಯುಗವು ಮುಗಿದರೂ ಅದರ ಸೂಕ್ಷ್ಮ ದನಿಯನ್ನು ಹೊಂದಿದ ಅನೇಕ ಕಾದಂಬರಿಗಳು ಬರುತ್ತಿವೆ. ನವ್ಯ ಮಾರ್ಗದ ಕೃತಿಗಳೂ ಬೆಳಕು ಕಾಣುತ್ತಿವೆ. ನಾರಾಯಣ ಕಂಗಿಲ ಅವರ ‘ಶಬ್ದ ಮತ್ತು ನೂಪುರ’ ಎಂಬ ಕಾದಂಬರಿಯು ನವ್ಯದ ಸತ್ವವನ್ನು ಹೀರಿಕೊಂಡು ರೂಪು ತಾಳಿದೆ. ವಿಶಾಲ ಎಂಬ ವ್ಯಕ್ತಿಯ ಆತ್ಮಶೋಧನೆ, ದ್ವಂದ್ವ, ಸ್ವಗತಗಳಿಂದ ಆರಂಭಗೊಳ್ಳುವ ಕಾದಂಬರಿಯು ಆಪ್ತವಾದ ನಿರೂಪಣೆಯೊಂದಿಗೆ ಬದುಕಿನ ಸಂಕೀರ್ಣ ಸಮಸ್ಯೆಗಳಿಗೆ ಮುಖಾಮುಖಿಯಾಗುತ್ತದೆ. ಮಾನವೀಯ ಸಂಬಂಧಗಳ ಸೂಕ್ಷ್ಮ ರೂಪವನ್ನು ಹಿಡಿದಿಡುತ್ತದೆ. ಇಲ್ಲಿ ‘ಶಬ್ದ’ ಎಂಬುದು ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ನೆಲೆಗಳಲ್ಲಿ ಕಾಣಿಸಿಕೊಳ್ಳುವ ಸದ್ದು…
ಬೆಂಗಳೂರು : ಸಂಧ್ಯಾ ಕಲಾವಿದರು ಅಭಿನಯಿಸುವ ಎಸ್.ವಿ. ಕೃಷ್ಣಶರ್ಮ ರಚಿಸಿ ನಿರ್ದೇಶಿಸಿರುವ ‘ಸುಯೋಧನ’ ನಾಟಕವು ದಿನಾಂಕ 07-06-2024ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರದ ‘ಚೌಡಯ್ಯ ಮೆಮೋರಿಯಲ್ ಹಾಲ್’ನಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕದ ನಿರ್ವಹಣೆ ವೈ.ಕೆ. ಸಂಧ್ಯಾ ಶರ್ಮ ಅವರದ್ದು. ಮಹಾಭಾರತದಲ್ಲಿ ನಡೆದು ಹೋದ ಘಟನೆ, ಕಥಾನಕವನ್ನು ದುರ್ಯೋಧನ ತನ್ನ ವಿಮರ್ಶಕ ಚಕ್ಷುಗಳಿಂದ ಪರಾಮರ್ಶಿಸುವ, ವಿಶ್ಲೇಷಿಸುವ ಚಿಂತನ ಮಂಥನಗಳಿಗೆ ಒತ್ತು ನೀಡುವ ‘ಸುಯೋಧನ’ ನಾಟಕ ಬೇರೆ ನಾಟಕಗಳಿಗಿಂತ ವಿಭಿನ್ನವಾಗಿದೆ. ಇಲ್ಲಿಯ ರಾಜಕಾರಣದಲ್ಲಿ ಕಂಡು ಬರುವ ಕೃಷ್ಣನ ಕಪಟ, ಶಕುನಿಯ ಕುತಂತ್ರ, ಸುಯೋಧನನ ಛಲ ಮುಂದಿನ ರಾಜಕೀಯಕ್ಕೆ ಭದ್ರ ಬುನಾದಿಯೆನ್ನುವ ನಾಟಕದ ಮಾತು, ಅವರ ನಡೆ ಇವತ್ತಿನ ರಾಜಕೀಯ ಪ್ರಸ್ತುತತೆಯನ್ನು ಎತ್ತಿಹಿಡಿಯುತ್ತದೆ. ಮಹಾಭಾರತದ ಕಥೆಗೊಂದು ಹೊಸ ಆಯಾಮ ನೀಡುವ ಪ್ರಯತ್ನವನ್ನು ನಾಟಕಕಾರರು ಮಾಡಿದ್ದಾರೆ. ಮಹಾಭಾರತದ ಬಹುತೇಕ ವಿವರಗಳು ನಾಟಕದಲ್ಲಿ ಹಾದು ಹೋಗುತ್ತವೆ. ಈ ನಾಟಕದಲ್ಲಿ ಸುಯೋಧನ ಕೂಡ ತನ್ನ ದೃಷ್ಟಿಯಿಂದಲೇ ಎಲ್ಲವನ್ನೂ ವಿಶ್ಲೇಷಿಸುತ್ತಾನೆ. ಇಲ್ಲಿ ನಾಟಕದ ಕಥಾ ನಾಯಕ ದುರ್ಯೋಧನನಾದ್ದರಿಂದ ಅವನು ಕಂಡಂತೆ…
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಹಾಗೂ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಸಹಯೋಗದೊಂದಿಗೆ ಸುರತ್ಕಲ್ ಅಮರಾಲ್ಡ್ ಬೇ ಬೀಚ್ ರೆಸಾರ್ಟ್ ನ ‘ಕನಸು’ ಮನೆಯಂಗಳದಲ್ಲಿ ಆಯೋಜಿಸಿದ ‘ವರ್ಷ ವೈಭವ’ ಕವಿ ಗೋಷ್ಠಿ ಹಾಗೂ ಕನ್ನಡ ಹಾಡು ಕಾರ್ಯಕ್ರಮ ದಿನಾಂಕ 02-06-2024 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಮಾತನಾಡಿ “ಇಂತಹ ತಳಮಟ್ಟದ ಕಾರ್ಯಕ್ರಮಗಳು ಕನ್ನಡದ ಕಂಪು ಹರಡುವಲ್ಲಿ ಹೆಚ್ಚು ಪರಿಣಾಮಕಾರಿ. ಈ ನಿಟ್ಟಿನಲ್ಲಿ ತಾಲೂಕು ಘಟಕ ಶ್ಲಾಘನೀಯ ಸೇವೆ ಸಲ್ಲಿಸುತ್ತಿದೆ.” ಎಂದರು. ಎಸ್. ಕೆ. ಗೋಪಾಲಕೃಷ್ಣ ಭಟ್, ಗೋಪಾಲಕೃಷ್ಣ ಬೊಳುಂಬು , ಡಾ. ಶೈಲಜಾ ಏತಡ್ಕ, ಅಕ್ಷತಾ ಶೆಟ್ಟಿ, ಗಣೇಶ್ ಪ್ರಸಾದ್ ಜೀ ಹಾಗೂ ಎನ್. ಸುಬ್ರಾಯ ಭಟ್ ವರ್ಷದ ಸ್ಪರ್ಶದ ಕವನಗಳ ಮೂಲಕ ಸಾಹಿತ್ಯಾಸಕ್ತರಿಗೆ ಹರ್ಷ ತಂದರೆ ಮುರಳೀಧರ ಭಾರದ್ವಾಜ್ , ಪ್ರತೀಕ್ಷಾ ಭಟ್ ಕೋಂಬ್ರಾಜೆ , ಪುಟಾಣಿ ಸಹಸ್ರ ಕೋಂಬ್ರಾಜೆ…
ಮಂಗಳೂರು: ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಸಾಹಿತ್ಯಪರ ‘ಅಮೃತ ಪ್ರಕಾಶ’ ಪತ್ರಿಕೆ ಹಾಗೂ ಸರೋಜಿನಿ ಮಧುಸೂದನ ಕುಶೆ ಶಾಲೆ ಇವರ ಜಂಟಿ ಆಶ್ರಯದಲ್ಲಿ 2024-25ನೇ ಸಾಲಿನ ಸಾಹಿತ್ಯ ಅಭಿರುಚಿ ಕಾರ್ಯಕ್ರವು ದಿನಾಂಕ 01-06-2024ರ ಶನಿವಾರದಂದು ನಡೆಯಿತು. ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಉದ್ಘಾಟಿಸಿದರು. 2024-25ನೇ ಸಾಲಿನ ‘ಸಾಹಿತ್ಯ ಅಭಿರುಚಿ 101’ ಕಾರ್ಯಕ್ರಮಕ್ಕೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇದರ ಅಧ್ಯಕ್ಷರಾದ ಪ್ರೋ. ಎಂ. ಪಿ. ಶ್ರೀನಾಥ ಅವರು ಚಾಲನೆ ನೀಡಿದರು. ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಡಾ. ಮೀನಾಕ್ಷಿ ರಾಮಚಂದ್ರ, ಗೌರವ ಉಪನ್ಯಾಸಕರಾದ ಉಮೇಶ್ ಕಾರಂತ ಹಾಗೂ ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರೊಫೆಸರ್ ಹಾಗೂ ಜೆಪ್ಪು ಬಂಟರ ಸಂಘದ ಅಧ್ಯಕ್ಷರಾದ ವಸಂತ ಶೆಟ್ಟಿ, ಅತ್ತಾವರ ನಗರ ನಿವಾಸಿಗಳ ಸಂಘದ ಅಧ್ಯಕ್ಷರಾದ ಉಮೇಶ್ ರಾವ್ ಕುಂಬ್ಳೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರೋಜಿನಿ ಮಧುಸೂದನ ಕುಶೆ ಶಾಲೆಯ ಪ್ರಾಂಶುಪಾಲರಾದ ಬಿಂದುಸಾರ…