Author: roovari

ಕಮತಗಿ : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ(ರಿ.)ಕಮತಗಿ ವತಿಯಿಂದ ಕೊಡಮಾಡುವ 2025ನೇ ಸಾಲಿನ ರಾಜ್ಯಮಟ್ಟದ “ಮೇಘರತ್ನ ಪ್ರಶಸ್ತಿ”ಗೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ರಂಗಕರ್ಮಿ, ಹಿರಿಯ ಸಾಹಿತಿ, ನಟ ಹಾಗೂ ನಾಟಕಕಾರರಾದ ಶ್ರೀ ಮಹಾಂತೇಶ ಎಂ.ಗಜೇಂದ್ರಗಡ ಅವರು ಆಯ್ಕೆಯಾಗಿದ್ದಾರೆ. ಈ ವಾರ್ಷಿಕ ಪ್ರಶಸ್ತಿಯನ್ನು ಉತ್ತರ ಕರ್ನಾಟಕದ ಜೀವಮಾನ ಸಾಧನೆ ಮಾಡಿದ ಒಬ್ಬ ಮಹನೀಯರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯು ರೂಪಾಯಿ 5 ಸಾವಿರ ನಗದು ಹಾಗೂ ನೆನಪಿನ ಕಾಣಿಕೆ ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಜೂನ್ ತಿಂಗಳ ಕೊನೆಯಲ್ಲಿ ಬಾಗಲಕೋಟೆ ಜಿಲ್ಲೆಯ ಇಳಕಲ್ ನಲ್ಲಿ ನಡೆಯಲಿದೆ.

Read More

ಆಧುನಿಕ ಕನ್ನಡ ಕಾವ್ಯ ನಿರ್ಮಾಪಕರಲ್ಲಿ ಬೇಂದ್ರೆಯವರದು ಎದ್ದು ಕಾಣುವ ಹೆಸರು. “ಒಂದು ಪೂರ್ಣ ಆಯುಷ್ಯವನ್ನು ಸಾರ್ಥಕವಾಗಿ ಸಫಲವಾಗಿ ಯಾರ ಕಾವ್ಯದ ಅಭ್ಯಾಸಕ್ಕಾಗಿ ಮೀಸಲಾಗಿಡಬಹುದೋ ಅಂಥ ಕನ್ನಡ ಕವಿಗಳಲ್ಲಿ ಶ್ರೀಮಾನ್ ಬೇಂದ್ರೆಯವರು ಅತ್ಯಾಧುನಿಕರು. ಇಪ್ಪತ್ತನೆಯ ಶತಮಾನದಲ್ಲಿ ಇಂಥ ಕವಿ ಕನ್ನಡದಲ್ಲಿ ಇರುವುದು ಕನ್ನಡ ಭಾಷೆಯ ಸುದೈವವೇ ಸರಿ” ಎಂಬುದಾಗಿ ಖ್ಯಾತ ಸಾಹಿತಿ ವಿಮರ್ಶಕ ಶಂಕರ ಮೊಕಾಶಿ ಪುಣೇಕರ ಅವರು ಹೇಳಿರುವ ಮಾತಿನಲ್ಲಿ ಅತ್ಯುಕ್ತಿ ಇಲ್ಲ. ಬೇಂದ್ರೆ ಕನ್ನಡಿಗರ ಭಾವಕೋಶದಲ್ಲಿ ಸೇರಿಹೋದ ಅದ್ಭುತ ಕವಿ ಚೇತನ. ಅವರ ಸಮಗ್ರ ಸಾಹಿತ್ಯವನ್ನು ತಾಳೆ ಹಾಕಿ ಒರೆಗೆ ಹಚ್ಚಿ ನೋಡಿ ಅವರನ್ನು ‘ಭುವನದ ಭಾಗ್ಯ’ ಎಂದು ಕರೆದು ಅವರ ದೈತ್ಯ ಪ್ರತಿಭೆಯ ಪ್ರಕಾಶವನ್ನು ಲೋಕ ಸಮ್ಮುಖಗೊಳಿಸಿದವರು ವಿಮರ್ಶಕ ಡಾ. ಆಮೂರ. ‘ಡಾ. ಜಿ.ಎಸ್. ಆಮೂರ ಅವರ ಸಮಗ್ರ ಬೇಂದ್ರೆ ವಿಮರ್ಶೆ’ ಈ ಮಹಾಕೃತಿಯನ್ನು ವಿಮರ್ಶಕ ಡಾ. ಜಿ.ಎಂ. ಹೆಗಡೆಯವರು ಇತ್ತೀಚಿಗೆ ಸಂಪಾದಿಸಿ ಕೊಟ್ಟಿದ್ದಾರೆ. “ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆ ಒಂದು ಸಜೀವ ವಿಕಾಸ ಪ್ರಕ್ರಿಯೆ. ಅದಕ್ಕೆ ಶತಮಾನಗಳೂ…

Read More

ಪುತ್ತೂರು : ಹಲಸು ಹಣ್ಣು ಮೇಳದ ಸಭಾಂಗಣದಲ್ಲಿ ಪನಸೋಪಾಖ್ಯಾನ ‘ಹಲಸಿನ ಅರಿವಿನ ಹರಿವು’ ಕಾಲ್ಪನಿಕ ಕಥೆ ತಾಳಮದ್ದಲೆಯನ್ನು ದಿನಾಂಕ 07 ಜೂನ್ 2025ರಂದು ಸಂಜೆ 4-30 ಗಂಟೆಗೆ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಆಯೋಜಿಸಲಾಗಿದೆ. ಕುಂಬಳೆಯ ಶ್ರೀ ಶೇಡಿಗುಮ್ಮೆ ವಾಸುದೇವ ಭಟ್ ಇವರು ಪ್ರಸಂಗ ಕವಿ, ಶ್ರೀ ಅಡ್ಕ ಗೋಪಾಲಕೃಷ್ಣ ಭಟ್ ಕಥಾ ಹಂದರ, ಪೆರಾಜೆಯ ನಾ. ಕಾರಂತ ಇವರ ಪರಿಕಲ್ಪನೆ ಹಾಗೂ ಪುತ್ತೂರಿನ ಶ್ರೀ ರಮೇಶ್ ಭಟ್ ಸಂಯೋಜನೆ ಮಾಡಲಿದ್ದಾರೆ.

Read More

ಮಂಗಳೂರು : ದಿನಾಂಕ 03 ಜೂನ್ 2025ರ ಮಂಗಳವಾರ ಮಧ್ಯಾಹ್ನ 3-00 ಗಂಟೆಯಿಂದ ದಿನಾಂಕ 04 ಜೂನ್ 2025ರ ಬುಧವಾರ 3-00 ಗಂಟೆ ವರೆಗೆ ನಿರಂತರವಾಗಿ 24 ಗಂಟೆಗಳ ಕಾಲ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ 270 ಹಾಡುಗಳನ್ನು ಹಾಡುವ ಮೂಲಕ ಕರಾವಳಿ ಮೂಲದ ಯಶವಂತ್ ಎಂ.ಜಿ. ಸೇರಿದಂತೆ ಆರು ಸಂಗೀತ ಕಲಾವಿದರು ತಮ್ಮ ಹೆಸರನ್ನು ವಿಶ್ವ ದಾಖಲೆ ನಿರ್ಮಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲಿಸಿಕೊಂಡಿದ್ದಾರೆ. ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮಂಗಳವಾರ ಸಂಜೆ ಮೂರು ಗಂಟೆಗೆ ಆರಂಭವಾದ ‘ಬಾಲಗಾನ ಯಶೋಯಾನ’ ನಿರರ್ಗಳ ಗಾಯನ ಬುಧವಾರ ಸಂಜೆ ಮೂರು ಗಂಟೆಗೆ ಸಮಾಪನಗೊಳ್ಳುವ ಮೂಲಕ ಈ ದಾಖಲೆ ನಿರ್ಮಾಣವಾಗಿದೆ. ಗಾನ ಗಂಧರ್ವ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಜನ್ಮ ದಿನೋತ್ಸವದ ಪ್ರಯುಕ್ತ ಯಶವಂತ್ ಅವರು ಏಕಾಂಗಿಯಾಗಿ ಹಾಡುವ ಮೂಲಕ ದಾಖಲೆಯ ಗಾಯನ ಕಾರ್ಯಕ್ರಮ ನಡೆಸಿದ್ದಾರೆ. ಇವರ ಜತೆಗೆ ಗಿಟಾರ್ ನಲ್ಲಿ ರಾಜ್ ಗೋಪಾಲ್, ಕೀ ಬೋರ್ಡ್ ನಲ್ಲಿ ದೀಪಕ್ ಜಯಶೀಲನ್,…

Read More

ಮಂಗಳೂರು : ಸರಯೂ ಬಾಲ ಯಕ್ಷವೃಂದ ಕೋಡಿಕಲ್ ಇದರ ರಜತ ಮಹೋತ್ಸವ ಸಂಭ್ರಮ ಸಮಾರಂಭದ ಅಂಗವಾಗಿ ಆಯೋಜಿಸಿದ 15 ದಿನಗಳ ‘ಯಕ್ಷಪಕ್ಷ – ರಜತ ಸರಯೂ’ಸಮಾರಂಭದ 14ನೇ ದಿನದ ಕಾರ್ಯಕ್ರಮವು ದಿನಾಂಕ 31 ಜೂನ್ 2025ರ ಬುಧವಾರದಂದು ಕದ್ರಿ ದೇವಳದ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಆರೂರು ಆಶಾ ಪ್ರಭಾಕರ ರಾವ್ ಮಾತನಾಡಿ “ಇಂದು ಯಕ್ಷಗಾನ ರಂಗ ವಿಸ್ತರಿಸಲ್ಪಟ್ಟಿದೆ. ಪುರುಷರಂತೆಯೇ ಮಹಿಳಾ ಕಲಾವಿದರೂ ತಮ್ಮ ನೈಪುಣ್ಯತೆಯನ್ನು ಪ್ರದರ್ಶಿಸುತ್ತಿದ್ದಾರೆ. ದೇಶವಿದೇಶಗಳಿಗೂ ತಮ್ಮ ಕಲಾ ಪ್ರದರ್ಶನವನ್ನು ವಿಸ್ತರಿಸಿದ್ದಾರೆ. ಅನೇಕರು ಮೇಳದ ಕಲಾವಿದರಿಗೆ ಸಮದಂಡಿಯಾಗಿ ನಿಲ್ಲುವಂತೆ ಪ್ರಬುದ್ಧರಾಗುತ್ತಿದ್ದಾರೆ. ಇಂದು ಸರಯೂವಿನಿಂದ ಸನ್ಮಾನಗೊಳ್ಳುತ್ತಿರುವ ಸಂಧಾ ರಾವ್ ಕೂಡಾ ಓರ್ವ ಸಂಘಟಕಿ, ಯಕ್ಷಕಲಾವಿದೆ, ಉತ್ತಮ ವಾಗ್ಮಿಯೂ ಆಗಿದ್ದಾರೆ. ಈ ಪುಣ್ಯಕ್ಷೇತ್ರದಲ್ಲಿ ಗೌರವಿಸಲ್ಪಡುವುದು ಅವರ ಭಾಗ್ಯ” ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ತುಳುಕೂಟ (ರಿ) ಸಂಸ್ಥೆಯ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ ರಜತ ಸಂಭ್ರಮದಲ್ಲಿರುವ ಮಕ್ಕಳ ಮೇಳದ ಕಾರ್ಯಚಟುವಟಿಕೆಗಳ ಬಗ್ಗೆ ಶ್ಲಾಘಿಸಿದರು. ಕದ್ರಿ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ…

Read More

ಶಿರಸಿ : ಶ್ರೀ ಯಕ್ಷರಾಘವ ಜನ್ಸಾಲೆ ಪ್ರತಿಷ್ಠಾನ (ರಿ.) ಸಿದ್ಧಾಪುರ ಮತ್ತು ಅತಿಥಿ ಕಲಾವಿದರ ಸಂಗಮದಲ್ಲಿ ‘ಗಾನ ಸಾರಥಿ’ ಜನ್ಸಾಲೆಯವರ ನಿರ್ದೇಶನದಲ್ಲಿ ‘ಬ್ರಹ್ಮ ಕಪಾಲ’ ಎಂಬ ಪ್ರಸಂಗದ ಪೌರಾಣಿಕ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 07 ಜೂನ್ 2025ರಂದು ಸಂಜೆ 9-00 ಗಂಟೆಗೆ ಇಟಗುಳಿಯ ಶ್ರೀ ಶಾಂತಾರಾಮ ಸೀತಾರಾಮ ಹೆಗಡೆ ಇವರ ಮನೆಯಂಗಳದಲ್ಲಿ ಹಮ್ಮಿಕೊಳ್ಳಲಾಗಿದೆ. ಹಿಮ್ಮೇಳದಲ್ಲಿ ಭಾಗವತರು ರಾಘವೇಂದ್ರ ಆಚಾರ್ಯ ಜನ್ಸಾಲೆ ಮತ್ತು ಬಿಲ್ಗಾಡಿ ಗಣೇಶಾಚಾರ್ಯ, ಮದ್ದಳೆಯಲ್ಲಿ ಶಂಶಾಕ ಆಚಾರ್ಯ ಕಿರುಮಂಜೇಶ್ವರ ಮತ್ತು ಚಂಡೆಯಲ್ಲಿ ಪ್ರಜ್ವಲ್ ಮುಂಡಾಡಿ ಹಾಗೂ ಮುಮ್ಮೇಳದಲ್ಲಿ ಉದಯ ಹೆಗಡೆ ಕಡಬಾಳ, ವಿನಯ್ ಭಟ್ಟ ಬೇರೊಳ್ಳಿ, ಸುಬ್ರಹ್ಮಣ್ಯ ಭಟ್ಟ ನೇರಗೋಡು, ಕಾರ್ತೀಕ ಹೆಗಡೆ ಚಿಟ್ಟಾಣಿ, ಪವನ್ ಕುಮಾರ್ ಸಾಣ್ಮನೆ ಮತ್ತು ಕೆ. ಜಿ. ಕಾರ್ತಿಕ್, ಸ್ತ್ರೀ ವೇಷದಲ್ಲಿ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ಸುಧೀರ ಉಪ್ಪೂರು ಮತ್ತು ಸಂತೋಷ ಕುಮಾರ ಕುಲಾಲ್ ಹಾಗೂ ಹಾಸ್ಯದಲಿ ಪುರಂದರ ಮೂಡ್ಕಣಿ ಇವರು ಸಹಕರಿಸಲಿದ್ದಾರೆ.

Read More

ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಪುತ್ತೂರು ಅರ್ಪಿಸುವ ‘ನೃತ್ಯಾಂತರಂಗ 128’ ನೃತ್ಯ ಕಾರ್ಯಕ್ರಮವನ್ನು ದಿನಾಂಕ 07 ಜೂನ್ 2025ರಂದು ಸಂಜೆ 5-30 ಗಂಟೆಗೆ ಪುತ್ತೂರಿನ ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ವಿದ್ವಾನ್ ದೀಪಕ್ ಕುಮಾರರ ಶಿಷ್ಯೆ ಕುಮಾರಿ ನಿಶಿ ಎನ್. ಇವರು ನೃತ್ಯ ಪ್ರದರ್ಶನ ನೀಡಲಿದ್ದು, ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸಂಧ್ಯಾ ಕೆ. ಇವರು ಅಭ್ಯಾಗತರಾಗಿ ಭಾಗವಹಿಸಲಿರುವರು. ನಟುವಾಂಗದಲ್ಲಿ ವಿದ್ವಾನ್ ದೀಪಕ್ ಕುಮಾರ್, ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಸುಳ್ಯದ ವಿದ್ವಾನ್ ಶ್ಯಾಮ್ ಭಟ್ ಮೃದಂಗದಲ್ಲಿ ಪೂಂಜಾಲಕಟ್ಟೆ ವಿದ್ವಾನ್ ಕೃಷ್ಣಗೋಪಾಲ್ ಇವರು ಕೊಳಲಿನಲ್ಲಿ ಸಹಕರಿಸಲಿದ್ದಾರೆ.

Read More

ಮಂಗಳೂರು : ಕಲಾಭಿ ಯಕ್ಷಗಾನ ಅಧ್ಯಯನ ಕೇಂದ್ರ ಬೋಂದೆಲ್ ಮಂಗಳೂರು ಇದರ ವತಿಯಿಂದ ಖ್ಯಾತ ಯಕ್ಷ ಗುರುಗಳಾದ ಶ್ರೀ ರಾಕೇಶ್ ರೈ ಅಡ್ಕ ಇವರ ಸಾರಥ್ಯದಲ್ಲಿ ‘ಯಕ್ಷ ನಾಟ್ಯ ತರಬೇತಿ’ಯು ದಿನಾಂಕ 07 ಜೂನ್ 2025ರ ಶುಕ್ರವಾರದಂದು ಬೋಂದೆಲ್ ಕಲಾಗ್ರಾಮದಲ್ಲಿ ಪ್ರಾರಂಭವಾಗಲಿದೆ. ಯಕ್ಷಕಲಾ ಆಸಕ್ತರಿಗೆ ಯಕ್ಷಗಾನ ಕಲಾವಿದರಾಗಲು ಇದು ಸುವರ್ಣ ಅವಕಾಶವಾಗಿದ್ದು, ಪ್ರತಿ ಶುಕ್ರವಾರ ಸಂಜೆ 6-00ರಿಂದ 7-00 ಗಂಟೆ ತನಕ ತರಗತಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9900772221 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ದಿನಾಂಕ 04 ಜೂನ್ 2025ರಂದು ಮಂಚಿ ಸಮೀಪದ ಬಾವದ ಶ್ರೀಮತಿ ಮೀನಾಕ್ಷಿ ಮೋಹನ್ ಶೆಟ್ಟಿಯವರ ನೂತನ ಗೃಹ ‘ಭ್ರಾಮರಿ’ ಇದರ ಪ್ರವೇಶೋತ್ಸವದ ಅಂಗವಾಗಿ ‘ಲಕ್ಷ್ಮೀ ಸ್ವಯ೦ವರ’ (ಸಮುದ್ರ ಮಥನ) ಎಂಬ ಪ್ರಸಂಗದ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಮಲ್ಲಿಕಾ ಅಜಿತ್ ಶೆಟ್ಟಿ ಸಿದ್ದಕಟ್ಟೆ, ಪುಂಡಿಕಾಯಿ ರಾಜೇಂದ್ರ ಪ್ರಸಾದ್, ಬೇಂದ್ರೋಡಿ ಲಕ್ಷ್ಮೀಶ್ ಭಟ್ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಮಹಾವಿಷ್ಣು ಮತ್ತು ನಾರದ (ಕಿಶೋರಿ ದುಗ್ಗಪ್ಪ ನಡುಗಲ್ಲು), ಬಲಿ ಚಕ್ರವರ್ತಿ (ಶುಭಾ ಜೆ.ಸಿ. ಅಡಿಗ), ದೇವೇಂದ್ರ (ಹರಿಣಾಕ್ಷಿ ಜೆ. ಶೆಟ್ಟಿ), ವಾಲಿ ಮತ್ತು ದೂರ್ವಾಸ (ಶಾರದಾ ಅರಸ್), ಲಕ್ಷ್ಮೀ (ಭಾರತಿ ರೈ ಅರಿಯಡ್ಕ) ಸಹಕರಿಸಿದರು. ಸಂಚಾಲಕ ಭಾಸ್ಕರ್ ಬಾರ್ಯ ಸ್ವಾಗತಿಸಿದರು. ಅಭಿಮತ ಚಾನೆಲ್ ನ ಡಾ. ಮಮತಾ ಪ್ರವೀಣ್ ಶೆಟ್ಟಿ ಕಲಾವಿದರನ್ನು ಶಲ್ಯ ಹೊದಿಸಿ, ಗೌರವಿಸಿ ವಂದಿಸಿದರು.

Read More

ಬೆಂಗಳೂರು : ಕರ್ಣಾಟಕ ಯಕ್ಷಧಾಮ ಮಂಗಳೂರು, ಸಾಲಿಗ್ರಾಮ ಮಕ್ಕಳ ಮೇಳ ಕೋಟ, ಪದ್ಮಕಮಲ ಟ್ರಸ್ಟ್ ಬೆಂಗಳೂರು ಮತ್ತು ಕಲ್ಕೂರ ಪ್ರತಿಷ್ಠಾನ ಮಂಗಳೂರು ಇವರ ವತಿಯಿಂದ ‘ಲಲಿತ ಕಲೋತ್ಸವ, ಸಮ್ಮಾನ ಮತ್ತು ಯಕ್ಷಗಾನ ಪ್ರದರ್ಶನಗಳನ್ನು ದಿನಾಂಕ 08 ಜೂನ್ 2025ರಂದು ಮುಂಜಾನೆ 10-00 ಗಂಟೆಗೆ ಬೆಂಗಳೂರಿನ ಪರಂಪರಾ ಅಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ. ವೇದಮೂರ್ತಿ ಶ್ರೀ ಅನಂತ ಪದ್ಮನಾಭ ಸೋಮಯಾಜಿ ಇವರನ್ನು ಸನ್ಮಾನಿಸಲಾಗುವುದು ಹಾಗೂ ಮಿಜಾರು ಬಾಲಕೃಷ್ಣ ಗೌಡ ಇವರಿಗೆ ‘ಯಕ್ಷಕಲಾ ಗೌರವ’ ನೀಡಲಾಗುವುದು. ಲಲಿತ ಕಾಲೋತ್ಸವದಲ್ಲಿ ಕಲಾಕುಸುಮಗಳಾದ ಶ್ರೀಮತಿ ಅನಸೂಯ ಹೊಳ್ಳ, ಶ್ರೀಮತಿ ಜಯಶ್ರೀ ಅರವಿಂದ, ಕು. ನಿಧಿ ರವಿರಾಜ್‌ ಭಟ್‌, ಕು. ನಿಧಿ ಕೆದಿಲಾಯ, ಕು. ನಿಭ ಕೆದಿಲಾಯ, ಕು. ಈಶ್ವರಿ ಪ್ರವೀಣ, ಕು. ಪ್ರಣತಿ ಸಂತೋಷ್, ಕು. ಕಾವ್ಯ ಹಂದೆ, ಶ್ರೀಮತಿ ಪ್ರಣೀತ ಅನುಪ್, ಶ್ರೀ ಅಭಿಜಿತ್ ಮೈಸೂರು, ಶ್ರೀಮತಿ ಶಮ ಭಾಗವಹಿಸಲಿದ್ದು, ಬೆಂಗಳೂರಿನ ಶಂಕರ ಫೌಂಡೇಶನ್ ಇದರ ವಿದುಷಿ ಸುಪ್ರಿಯ ಶಿವರುದ್ರಪ್ಪ ಇವರ ಶಿಷ್ಯೆಯರಿಂದ ಭರತನಾಟ್ಯ ಪ್ರದರ್ಶನಗೊಳ್ಳಲಿದೆ. ಬೆಂಗಳೂರಿನ ‘ಯಕ್ಷ…

Read More