Author: roovari

ನವದೆಹಲಿ : ಕೇಂದ್ರ ಸಾಹಿತ್ಯ ನೀಡುವ ಅಕಾಡೆಮಿಯು ಭಾಷಾಂತರ ಪ್ರಶಸ್ತಿಗೆ ಕನ್ನಡ ವಿಭಾಗದಲ್ಲಿ ಲೇಖಕ ಕೆ.ಕೆ. ಗಂಗಾಧರನ್ ಅವರ ‘ಮಲಯಾಳಂ ಕಥೆಗಳು’ ಕೃತಿ ಆಯ್ಕೆಯಾಗಿದೆ. ಮಲಯಾಳಂ ಭಾಷೆಯ ಗಂಗಾಧರನ್ ವಿವಿಧ ಲೇಖಕರ ಸಣ್ಣ ಕತೆಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಈ ಕೃತಿ ರಚಿಸಿದ್ದಾರೆ. ಇದೂ ಸೇರಿದಂತೆ ಅಕಾಡೆಮಿಯು ವಿವಿಧ ಭಾಷೆಗಳ 24 ಕೃತಿಗಳಿಗೆ ‘ಭಾಷಾಂತರ ಪ್ರಶಸ್ತಿ’ಯನ್ನು ದಿನಾಂಕ 11-03-2024ರ ಸೋಮವಾರದಂದು ಪ್ರಕಟಿಸಿದೆ. ಲೇಖಕಿ ಸುಧಾಮೂರ್ತಿ ಅವರ ‘ಮಕ್ಕಳಿಗಾಗಿ ನನ್ನ ನೆಚ್ಚಿನ ಕತೆಗಳು’ ಕೃತಿಯನ್ನು ಲೇಖಕಿ ನಾಗರತ್ನ ಹೆಗಡೆ ಸಂಸ್ಕೃತಕ್ಕೆ ಭಾಷಾಂತರಿಸಿದ್ದು, ‘ರುಚಿರಾಹ್ ಬಾಲಕಥಾ’ ಕೃತಿಗೆ ಸಂಸ್ಕೃತದ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ಸಾಹಿತಿ ಕೋಟ ಶಿವರಾಮ ಕಾರಂತ ಅವರ ‘ಚೋಮನದುಡಿ’ ಕೃತಿಯನ್ನು ಕಾಶ್ಮೀರಿ ಭಾಷೆಗೆ ಗುಲ್ಜಾರ್ ಅಹ್ಮದ್ ರಥೇರ್ ಅವರು ‘ಚೂಮ್ ಸುಂಡ್ ಡೋಲ್’ ಹೆಸರಿನಲ್ಲಿ ಭಾಷಾಂತರಿಸಿದ್ದು, ಈ ಕೃತಿಗೆ ಕಾಶ್ಮೀರಿ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು ಒಟ್ಟು ರೂಪಾಯಿ 50 ಸಾವಿರ ನಗದು ಹಾಗೂ ಪ್ರಶಸ್ತಿಪತ್ರ ಒಳಗೊಂಡಿದೆ. ಕನ್ನಡ ವಿಭಾಗದ ಆಯ್ಕೆ ಸಮಿತಿಯಲ್ಲಿ…

Read More

ಕೋಲ್ಕತ್ತಾ : ಕೋಲ್ಕತ್ತಾದ ಭಾರತೀಯ ಭಾಷಾ ಪರಿಷತ್ತಿನ ಯುವ ಪುರಸ್ಕಾರಕ್ಕೆ ಕವಿ ಆರಿಫ್ ರಾಜಾ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ಸ್ಮರಣಿಕೆ ಹಾಗೂ ರೂಪಾಯಿ 51 ಸಾವಿರ ನಗದು ಬಹುಮಾನ ಒಳಗೊಂಡಿದೆ. ದಿನಾಂಕ 20-04-2024ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪರಿಷತ್ತಿನ ಅಧ್ಯಕ್ಷೆ ಕುಸುಮ್ ಖೇಮಾಣಿ ತಿಳಿಸಿದ್ದಾರೆ. ಸೈತಾನನ ಪ್ರವಾದಿ, ಜಂಗಮ ಫಕೀರನ ಜೋಳಿಗೆ, ಬೆಂಕಿಗೆ ತೊಡಿಸಿದ ಬಟ್ಟೆ, ನಕ್ಷತ್ರ ಮೋಹ, ಎದೆ ಹಾಲಿನ ಪಾಳಿ ಕವನ ಸಂಕಲನಗಳನ್ನು ಅವರು ರಚಿಸಿದ್ದಾರೆ. ಇಳಕಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಆರಿಫ್ ಅವರ ಹಲವು ಕವಿತೆಗಳು ಇಂಗ್ಲಿಷ್, ಸ್ಪ್ಯಾನಿಷ್, ಪರ್ಷಿಯನ್, ಗ್ರೀಕ್, ಅಲ್ಬೇನಿಯನ್, ಟರ್ಕಿಷ್ ಸೇರಿ ದೇಶದ ತಮಿಳು, ತೆಲುಗು, ಮಲಯಾಳಂ, ಹಿಂದಿ ಅಲ್ಲದೇ ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಅವರ ಕವಿತೆಗಳು ದಾವಣಗೆರೆ, ಮಂಗಳೂರು, ಶಿವಮೊಗ್ಗ, ಮೈಸೂರು, ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಸೇರಿ ಕರ್ನಾಟಕ ಪಿ. ಯು. ಮಂಡಳಿಯ ಪ್ರಥಮ ಪಿಯುಸಿಗೆ ಪಠ್ಯವಾಗಿವೆ. ಇವರ ಸಾಹಿತ್ಯ ಸಾಧನೆಗೆ ಬೇಂದ್ರೆ ಪುಸ್ತಕ…

Read More

ಕೋಟ : ದಿಮ್ಸಾಲ್ ಹಾಗೂ ಧಮನಿ ಉಭಯ ಸಂಸ್ಥೆಗಳ ಸಹಯೋಗದೊಂದಿಗೆ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಇದರ ಸರಣಿ ಕಾರ್ಯಕ್ರಮ ‘ಸಿನ್ಸ್ 1999 ಶ್ವೇತಯಾನ’ದ ಅಂಗವಾಗಿ ಚಿಣ್ಣರ ತಾಳಮದ್ದಳೆ ‘ಕೃಷ್ಣಾರ್ಜುನರ ಕಾಳಗ’ವು ದಿನಾಂಕ 09-03-2024 ರಂದು ಕೋಟದ ಕಾವೇರಿ ಕಾಂಪ್ಲೆಕ್ಸ್ ಮುಂಭಾಗದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಾಯೋಜಕರಾದ ಕೋಟದ ಕಾವೇರಿ ಕಾಂಪ್ಲೆಕ್ಸ್ ಇದರ ಮಾಲಕರಾದ ಸಂತೋಷ್ ಇವರನ್ನು ಅಭಿನಂದಿಸಿ ಮಾತನಾಡಿದ ಲಂಬೋದರ ಹೆಗಡೆ ನಿಟ್ಟೂರು “ಮಕ್ಕಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಸಂಸ್ಕೃತಿಯನ್ನು ವೃದ್ಧಿಸುತ್ತವೆ. ಮಹಾಭಾರತ ರಾಮಾಯಣದಲ್ಲಿನ ನೀತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಲ್ಲಿ ಬಾಲ್ಯವು ಪ್ರಮುಖ ಪಾತ್ರವಹಿಸುತ್ತದೆ. ಬಾಲ್ಯದಲ್ಲಿ ಸಾಂಸ್ಕೃತಿಕ ಶಿಕ್ಷಣ ಮೊದಲಾಗಬೇಕು. ಆಗಲೇ ಸಂಸ್ಕೃತಿ ಜೀವನದುದ್ದಕ್ಕೂ ಬೆಳೆಯುತ್ತದೆ ಮತ್ತು ಉಳಿಯುತ್ತದೆ. ಇಂತಹ ಮಕ್ಕಳನ್ನು ಪ್ರಭಾವೀಗೊಳಿಸುವ ಸಂಸ್ಥೆಗೆ ಪ್ರೋತ್ಸಾಹ ನೀಡಬೇಕಾಗುತ್ತದೆ. ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರೋತ್ಸಾಹಿಸಿದರೆ ಮಕ್ಕಳ ಬೆಳವಣಿಗೆ ಸಾಧ್ಯ. ಈ ನಿಟ್ಟಿನಲ್ಲಿ ಸಂತೋಷ್ ಅಭಿನಂದನಾರ್ಹರು.” ಎಂದು ಹೇಳಿದರು. ಯಕ್ಷ ಗುರು ಕೃಷ್ಣಮೂರ್ತಿ ಉರಾಳ, ಶ್ವೇತಯಾನದ ಉಪಾಧ್ಯಕ್ಷರಾದ ಗಣಪತಿ ಟಿ. ಶ್ರೀಯಾನ್, ಕೊಮೆ ಶನೇಶ್ವರ ದೇಗುಲದ…

Read More

ಉಡುಪಿ : ಕನ್ನಡ ಸಾರಸ್ವತ ಲೋಕದ ಹಿರಿಯ ವಿದ್ವಾಂಸ ದಿವಂಗತ ಮುಳಿಯ ತಿಮ್ಮಪ್ಪಯ್ಯನವರ ನೆನಪಿನಲ್ಲಿ ನೀಡಲಾಗುವ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿಗೆ ಗಮಕ ವ್ಯಾಖ್ಯಾನಕಾರ, ಯಕ್ಷಗಾನ ಪ್ರಸಂಗಕರ್ತ ಹಾಗೂ ಸಾಹಿತಿ ಕಬ್ಬಿನಾಲೆ ವಸಂತ ಭಾರದ್ವಾಜ್ ಅವರನ್ನು ಡಾ. ನಾ. ದಾಮೋದರ ಶೆಟ್ಟಿ ಅಧ್ಯಕ್ಷರಾಗಿರುವ ಆಯ್ಕೆ ಸಮಿತಿಯು ಆಯ್ಕೆ ಮಾಡಿದೆ. ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಹತ್ತುಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮಾರ್ಚ್ ತಿಂಗಳ ಕೊನೆಯಲ್ಲಿ ನಡೆಯಲಿರುವುದು ಎಂದು ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ. ಉಡುಪಿ ಜಿಲ್ಲೆಯ ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು ಸ್ಟೇಟ್‌ಬ್ಯಾಂಕ್ ಆಫ್ ಮೈಸೂರಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸಿಬ್ಬಂದಿ ತರಬೇತಿ ಕಾಲೇಜಿನ ಪ್ರಾಧ್ಯಾಪಕರಾಗಿ ಸ್ವಯಂ ನಿವೃತ್ತಿ ಪಡೆದು ಭಾಷೆ, ವ್ಯಾಕರಣ, ಛಂದಃಶಾಸ್ತ್ರಗಳಲ್ಲಿ ವಿದ್ವತ್ತನ್ನು ಗಳಿಸಿ, ಗಮಕ ವ್ಯಾಖ್ಯಾನಕಾರರಾಗಿ ನಾಡಿನಾದ್ಯಂತ ಪ್ರಸಿದ್ಧರಾಗಿದ್ದಾರೆ. ಮಹಾಕಾವ್ಯಗಳ ಕವಿಯಾಗಿ, ಯಕ್ಷಗಾನ ಪ್ರಸಂಗಕರ್ತರಾಗಿ, ವಾಗ್ಮಿಗಳಾಗಿ ಹೆಸರು…

Read More

ಪುತ್ತೂರು : ಪುತ್ತೂರು ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ತುಳು ಕೂಟೊ ಪುತ್ತೂರು ತಾಲೂಕು ಇದರ ವತಿಯಿಂದ ‘ತುಳುವೆರೆ ಮೇಳೊ-2024’ ಕಾರ್ಯಕ್ರಮವು ದಿನಾಂಕ 03-03-2024ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು “ತುಳು ಭಾಷೆ ರಾಜ್ಯದ 2ನೇ ಭಾಷೆ ಆಗದೇ ನಮಗೆ ಗೌರವ ಇಲ್ಲ. ಆಗ ತುಳು 8ನೇ ಪರಿಚ್ಛೇದಕ್ಕೆ ಸೇರ್ಪಡೆ ಆಗುತ್ತದೆ. ಈ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನ ಇರಬೇಕು. ತುಳುವರ ಮನಸ್ಸು, ದೊಡ್ಡದು. ತುಳು ಪ್ರಾದೇಶಿಕ ಮತ್ತು ವ್ಯವಹಾರಿಕ ಭಾಷೆ, ಜಾತಿ, ವರ್ಣ, ಪಂಗಡ ಬಿಟ್ಟು ತುಳು ಭಾಷೆ ಮಹತ್ವ ಪಡೆದಿದೆ. ತುಳು ಭಾಷೆಗೆ ಭಾವನಾತ್ಮಕ ಸಂಬಂಧವಿದೆ. ಈಗ ವಿಧಾನಸಭೆಯಲ್ಲೂ ತುಳು ಭಾಷೆ ಕೇಳಲು ಆರಂಭವಾಗಿದೆ. ಇದಕ್ಕೆ ಶಾಸಕರಿಗೆ ಅಭಿನಂದನೆ ಸಲ್ಲಿಸಬೇಕು ಎಂದರು. ತುಳು ಲಿಪಿ ನಮ್ಮಲ್ಲಿ ಇದೆ. ತುಳುವಿಗೆ ಅಂಕೆ ಸಂಖ್ಯೆಯೂ ಇದೆ. ಹಾಗಾಗಿ ಜಾತಿ ಮತ ಪಂಗಡ ಬಿಟ್ಟು ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನ…

Read More

ತಮ್ಮ ಮೊದಲ ಕಥಾ ಸಂಕಲನ ‘ಅಜ್ಜ ನೆಟ್ಟ ಹಲಸಿನ ಮರ’ದ ಮೂಲಕ ಸಾಹಿತ್ಯ ಲೋಕಕ್ಕೆ ಪರಿಚಯಿಸಿಕೊಂಡ ಸತೀಶ್ ವಕ್ವಾಡಿಯವರು ಈಗ ತಮ್ಮ ಎರಡನೇ ಸಂಕಲನ ‘ಕೊನೆಯ ಎರಡು ಎಸೆತಗಳು’ ಮೂಲಕ ಭರವಸೆಯ ಕಥೆಗಾರರಾಗಿ ಬೆಳೆದಿದ್ದಾರೆ. ಬುಕ್ ಬ್ರಹ್ಮ ಪ್ರಕಟಿಸಿದ ಈ ಸಂಕಲನದಲ್ಲಿ ಗಮನ ಸೆಳೆಯುವ ಎಂಟು ಕಥೆಗಳಿವೆ. ಆಧುನಿಕ ಸಂದರ್ಭದಲ್ಲಿ ಗ್ರಾಮೀಣ ಮತ್ತು ನಗರ ಕೇಂದ್ರಿತ ಸಂಸ್ಕೃತಿಗಳು ಹೇಗೆ ಪಲ್ಲಟಗೊಳ್ಳುತ್ತಿವೆ ಎಂಬುದನ್ನು ಈ ಕಥೆಗಳು ತುಲನಾತ್ಮಕವಾಗಿ ಚಿತ್ರಿಸುತ್ತವೆ. ಗಾಳಿಯನ್ನಾಗಲಿ ನೆರಳನ್ನಾಗಲಿ ಕೊಡದ ‘ಗಾಳಿಮರ’ ಮೊದಲನೆಯ ಕಥೆಯ ಶೀರ್ಷಿಕೆ. ನಗರಕ್ಕೆ ಹೋಗಿ ಬಿಳಿ ಕಾಲರ್ ಉದ್ಯೋಗ ಸಂಪಾದಿಸಿ ಜೀವನ ನಡೆಸಬೇಕೆಂಬ ಆಸೆಯಿದ್ದರೂ ವಿದ್ಯೆ ಕಲಿಯುವುದರಲ್ಲಿ ದಡ್ಡನಾದ ಸದಾಶಿವ ಹಳ್ಳಿಯಲ್ಲೇ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿ ಮನೆಯಲ್ಲೂ ಊರಲ್ಲೂ ಎಲ್ಲರಿಗೂ ಬೇಕಾದವನಾಗುತ್ತಾನೆ. ಬಂದ ಗಂಡುಗಳನ್ನೆಲ್ಲ ಒಂದಿಲ್ಲೊಂದು ಕೊರತೆ ಹೇಳಿ ತಿರಸ್ಕರಿಸುವ ತಂಗಿಗೊಂದು ಗಂಡು ಹುಡುಕುವುದರಲ್ಲಿ ಅವನ ಯೌವನ ಸವೆಯುತ್ತದೆ. ಅವಳಿಗೆ ಮದುವೆ ನಿಶ್ಚಯವಾಗುವುದಕ್ಕೆ ಮೊದಲೇ ಅವನು ಪ್ರೀತಿಸಿದ ಹುಡುಗಿ ಅವನಿಗಾಗಿ ಕಾದು ಕೊನೆಗೆ ಹಿರಿಯರ ಒತ್ತಾಯಕ್ಕೆ…

Read More

ಉಡುಪಿ : ಅಂತರಾಷ್ಟ್ರೀಯ ‌ಮಹಿಳಾ ದಿನದ ಅಂಗವಾಗಿ ಕೊಡವೂರು ಬ್ರಾಹ್ಮಣ ಮಹಾ ಸಭಾದಿಂದ ಅಪರೂಪದ ಚುಕ್ಕಿ ಮಂಡಲ ಆರ್ಟ್ ಕಲಾವಿಭಾಗದಲ್ಲಿ ರಾಷ್ಟ್ರೀಯ ‌ಮಟ್ಟದಲ್ಲಿ ಸಾಧನೆಗೈದ ಕಲಾವಿದೆ ರಂಗವಲ್ಲಿ, ಸಂಗೀತ, ವರ್ಲಿ ಕಲೆ, ಫ್ಯಾಬ್ರಿಕ್ ಪೇಂಟಿಂಗ್, ಕಸೂತಿ ಹೀಗೆ ಲಲಿತ ಕಲೆಗಳ ವಿವಿಧ ಪ್ರಕಾರಗಳಲ್ಲಿ ಸಾಧನೆಗೈದ ಶ್ರೀಮತಿ ಅಶ್ವಿನಿ ಶ್ರೀನಿವಾಸ್ ಇವರನ್ನು ಅವರ ಸ್ವಗೃಹ ಶ್ರೀವಾಸದಲ್ಲಿ ದಿನಾಂಕ 10-03-2024ರಂದು ಅಭಿನಂದಿಸಲಾಯಿತು‌. ಬ್ರಾಹ್ಮಣ ಮಹಾ ಸಭಾ ಕೊಡವೂರು ಇದರ ಅಧ್ಯಕ್ಷರಾದ ಶ್ರೀನಿವಾಸ ಉಪಾಧ್ಯಾಯ, ಕೋಶಾಧಿಕಾರಿ ಶ್ರೀಧರ ಶರ್ಮ, ಸದಸ್ಯರಾದ ರೋಹಿಣಿ ಬಾಯರಿ, ಸೌಮ್ಯಾ ಗಣೇಶ್, ಕೌಸ್ತುಭ ಚಂದನ್, ಶೃತಿ ಸುಕುಮಾರ್, ಮುರಳೀಧರ ಭಟ್, ಸುಲೋಚನಾ ಉಪಾಧ್ಯಾಯ ಉಪಸ್ಥಿತಿತರಿದ್ದರು. ಜತೆ ಕಾರ್ಯದರ್ಶಿ ರಾಜಶ್ರೀ ಪ್ರಸನ್ನ ಸನ್ಮಾನ ಪತ್ರ ವಾಚಿಸಿ, ಪದಾಧಿಕಾರಿ ದೀಪಾ ರಾಮಕೃಷ್ಣ ಧನ್ಯವಾದವಿತ್ತರು. ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Read More

ಉಡುಪಿ : ಉಡುಪಿ ಬನ್ನಂಜೆಯ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಪೆರ್ಡೂರಿನ ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ವತಿಯಿಂದ ಮತ್ಸ್ಯರಾಜ್ ಗ್ರೂಪ್ ಮಲ್ಪೆ ಇವರ ಸಹಯೋಗದಲ್ಲಿ ಅವಿಭಜಿತ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಭಜನಾ ಸ್ಪರ್ಧೆಯ ಸಮಾರೋಪ ಸಮಾರಂಭವು ದಿನಾಂಕ 10-03-2024ರಂದು ಸಂಜೆ ನಡೆಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ದೇವರ ಭಜನೆಯಿಂದ ಮನಸ್ಸಿಗೆ ನೆಮ್ಮದಿ, ಸಂತೋಷ ಪ್ರಾಪ್ತಿಯಾಗುತ್ತದೆ. ಭಜನೆ ಭಗವಂತನ ಸಾಕ್ಷಾತ್ಕಾರಕ್ಕಿರುವ ಸುಲಭ ಮಾರ್ಗ. ಭಜನೆಗೆ ಅದ್ಭುತ ಶಕ್ತಿಯಿದೆ. ಅದರಲ್ಲಿ ಸಿಗುವ ಆನಂದ ಬೇರೆಲ್ಲೂ ಸಿಗದು. ಎಂತಹ ಸಂಕಷ್ಟ ಕಾಲದಲ್ಲಿಯೂ ಭಗವಂತನ ನಾಮಸ್ಮರಣೆ ನಮ್ಮನ್ನು ಪಾರುಮಾಡುತ್ತದೆ. ನಮ್ಮ ಸಂಸ್ಕೃತಿಯಿಂದ ವಿಮುಖರಾದ ಯುವ ಪೀಳಿಗೆಯನ್ನು ಸರಿದಾರಿಗೆ ತರಲು ಭಜನೆಯಂತಹ ಕಾರ್ಯಕ್ರಮಗಳು ಇಂದು ಅನಿವಾರ್ಯವಾಗಿವೆ. ಭಜನೆಯಿಂದ ಒಳಿತೇ ಆಗುತ್ತದೆಯೇ ಹೊರತು ಕೆಡುಕಾಗದು. ನಾವು ಮಕ್ಕಳಿಗೆ ಬಾಲ್ಯದಲ್ಲಿಯೇ ಅಧ್ಯಾತ್ಮದ ಅರಿವು ಮೂಡಿಸಿದಾಗ ಅವರೂ ಸತ್ಯ ಮಾರ್ಗದಲ್ಲಿಯೇ…

Read More

ಬೆಂಗಳೂರು : 2023ನೆಯ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ ‘ಪ್ರೊ. ಸಿ.ಎಚ್. ಮರಿದೇವರು ದತ್ತಿ ಪ್ರಶಸ್ತಿ’ಗೆ ಕುಷ್ಟಗಿಯ ನಿಸರ್ಗ ಸಂಗೀತ ವಿದ್ಯಾಲಯ, ಚಾಮರಾಜನಗರದ ಹಿರಿಯ ಬರಹಗಾರ ಕೆ.ಸಿ. ಶಿವಪ್ಪ, ರಾಯಚೂರಿನ ಕೃಷಿತಜ್ಞರಾದ ಕವಿತಾ ಮಿಶ್ರ, ತುಮಕೂರಿನ ಕನ್ನಡ ಸೇವಕ ಡಾ. ಬಿ. ನಂಜುಂಡ ಸ್ವಾಮಿ ಮತ್ತು ತುಮಕೂರಿನ ಸಂಗೀತ ಸಾಧಕರಾದ ಮಲ್ಲಿಕಾರ್ಜುನ ಕೆಂಕೆರೆ ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯು ದತ್ತಿಯ ನಿಯಮಗಳನ್ನು ಪರಿಶೀಲಿಸಿ ಈ ಆಯ್ಕೆಯನ್ನು ಮಾಡಿದೆ. ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಕೃಷಿ, ನೀರಾವರಿ, ಕನ್ನಡ ಸೇವೆಯ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆಯನ್ನು ಸಲ್ಲಿಸಿದರಿಗೆ ಈ ದತ್ತಿ ಪುರಸ್ಕಾರವನ್ನು ನೀಡಲಾಗುತ್ತದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನಮಸಾಗರದಲ್ಲಿರುವ ನಿಸರ್ಗ ಸಂಗೀತ ವಿದ್ಯಾಲಯ ಮತ್ತು ರಂಗ ಕಲಾವಿದರ ಸಂಘ (ರಿ) ಸಂಪತ್ತಿಗೆ ಸವಾಲ್ ಖ್ಯಾತಿಯ ನಾಟಕಕಾರ ಮತ್ತು ನಿರ್ದೇಶಕ ಪಿ.ಬಿ. ಧತ್ತರಗಿ ಮತ್ತು ರಂಗ ನಿರ್ದೇಶಕಿ ಸರೊಜಮ್ಮ ಧತ್ತರಗಿಯವರಿಂದ ಸ್ಥಾಪಿತವಾಗಿದ್ದು ಮರೆಯಾಗುತ್ತಿರುವ…

Read More

ಮೈಸೂರು : ಆತ್ಮೀಯ ಗೆಳೆಯರೇ, ಪೋಷಕರೇ, ಪುಟಾಣಿಗಳೇ ನಿಮ್ಮೆಲ್ಲರ ತುಂಬು ಹೃದಯದ ಸಹಕಾರ, ಪ್ರೀತಿ, ರಂಗ ಕಾಳಜಿ ಮತ್ತು ಎಲ್ಲಕ್ಕಿಂತ ಮುಖ್ಯ ನೀವು ನಮ್ಮ ‘ಶ್ರೀಗುರು ಕಲಾ ಶಾಲೆ’ಯ ಮೇಲಿಟ್ಟಿದ್ದ ನಂಬಿಕೆ ಮತ್ತು ವಿಶ್ವಾಸಗಳಿಂದ ಕಳೆದ ವರ್ಷ ನಾವು ಆರಂಭಿಸಿದ ಮಕ್ಕಳ ಬೇಸಿಗೆ ಶಿಬಿರ “ಪುಟಾಣಿ ಪರ್ ಪಂಚ” ನಿಮ್ಮನ್ನು ತಲುಪುವಲ್ಲಿ ಯಶಸ್ವಿಯಾಗಿದೆ ಎಂಬ ಹೆಮ್ಮೆಯ ಭಾವನೆ ನಮ್ಮಲ್ಲಿ ಮೂಡಿದೆ. ಅದಕ್ಕೆಲ್ಲ ಕಾರಣ ನೀವು…. ನೀವು ಮತ್ತು ನೀವು. ನಮ್ಮ ಶ್ರೀಗುರು ಕಲಾ ಶಾಲೆಯ ಉದ್ದೇಶವಾದರೂ ಅಷ್ಟೇ….ಮುಖ್ಯವಾಗಿ ರಂಗಭೂಮಿಯ ಮೂಲಕ ಮಕ್ಕಳನ್ನು ತಲುಪುವುದು. ಆ ನಿಟ್ಟಿನಲ್ಲಿ ನಮ್ಮ ರಂಗ ಚಟುವಟಿಕೆಗಳು ಮತ್ತು ವಿವಿಧ ಕಾರ್ಯಕ್ರಮಗಳು ನಮಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿವೆ. ನಾವು ನಮ್ಮ ಹಿರಿಯರಿಂದ ಕಲಿತದ್ದನ್ನು ಮಕ್ಕಳಿಗೆ ಕಲಿಸುವ ಒಂದು ಸಣ್ಣ ಪ್ರಯತ್ನ ಅಷ್ಟೇ ಇದೆಲ್ಲ. ನಮ್ಮ ಕಲಾ ಶಾಲೆ ನಡೆಸುವ ರಂಗ ತರಬೇತಿ ಶಿಬಿರಗಳಿಗೆ ಮತ್ತು ಸಂಗೀತ ಕಲಿಕೆಗೆ ಕೊಡುವಷ್ಟೇ ಪ್ರಾಮುಖ್ಯತೆಯನ್ನು ನಮ್ಮ ‘ಪುಟಾಣಿ ಪರ್ ಪಂಚ’ಕ್ಕೂ ನೀಡಿ ನಮ್ಮ ಜವಾಬ್ದಾರಿಯನ್ನು…

Read More