Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಮಣಿ ಕೃಷ್ಣಸ್ವಾಮಿ ಸಂಗೀತ ವಿದ್ಯಾಲಯದ ವತಿಯಿಂದ ಅನುಭವೀ ಶಿಕ್ಷಕರಿಂದ ಜೂನಿಯರ್, ಸೀನಿಯರ್ ಹಾಗೂ ವಿದ್ವತ್ ಸಂಗೀತ ಶಿಕ್ಷಣವನ್ನು ಸುರತ್ಕಲ್, ಕೆನರಾ ಬ್ಯಾಂಕ್ ಅಡ್ಡರಸ್ತೆ, ಅನುಪಲ್ಲವಿ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ನೀಡಲಾಗುವುದು. ಸಂಗೀತ ಪರೀಕ್ಷೆ ಮತ್ತು ಕಛೇರಿಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು ಸಂಸ್ಥೆಯ ಉದ್ದೇಶವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಪಿ. ನಿತ್ಯಾನಂದ ರಾವ್ 9742792669 ಸಂಖ್ಯೆಯನ್ನು ಸಂಪರ್ಕಿಸಿರಿ.
ಉಡುಪಿ : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು (ರಿ.) ಕೇಂದ್ರ ಸಮಿತಿ ಹುಬ್ಬಳ್ಳಿ ಮತ್ತು ಜಿಲ್ಲಾ ಘಟಕ ಉಡುಪಿ ಇದರ ವತಿಯಿಂದ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಇವರ ಆಶ್ರಯದಲ್ಲಿ ಉಡುಪಿ ಅಂಬಲಪಾಡಿ ಭವಾನಿ ಸಭಾಂಗಣದಲ್ಲಿ ದಾಸವರೇಣ್ಯ ಪುರಂದರದಾಸರ ಆರಾಧನೆಯ ಮಹೋತ್ಸವ ಸಂದರ್ಭದಲ್ಲಿ ಕ.ಚು.ಸಾ.ಪ. ಸಂಭ್ರಮವು ದಿನಾಂಕ 29 ಜನವರಿ 2025ರಂದು ನಡೆಯಿತು. ಹಿರಿಯ ಚಿಂತಕ ಸನ್ಮಾನ್ಯ ವಿಶ್ವನಾಥ ಶೆಣೈ ಅಧ್ಯಕ್ಷತೆಯಲ್ಲಿ ಅಂಬಲಪಾಡಿ ಜನಾರ್ಧನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬಿ. ವಿಜಯ ಬಲ್ಲಾಳರು ಉದ್ಘಾಟಿಸಿ “ದಾಸರ ನುಡಿಗಳು ಲೋಕಕ್ಕೇ ಆದರ್ಶ” ಎಂದರು. ಮುಖ್ಯ ಅತಿಥಿಗಳಾಗಿ ಶ್ರೀ ನೆಂಪು ನರಸಿಂಹ ಭಟ್ಟರು ಮಾತನಾಡಿದರು. ತದ ನಂತರದ ಉಪಾನ್ಯಾಸ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದ ಮಂಗಳೂರಿನ ಮಂಗಳಾ ಆಸ್ಪತ್ರೆಯ ಮೂಲವ್ಯಾಧಿ ಕ್ಷಾರ ತಜ್ಞ ಹಾಗೂ ಕಣಚೂರು ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸುರೇಶ ನೆಗಳಗುಳಿಯವರು “ಪುರಂದರಗಢದ ಪುರಂದರ ಅಂಕಿತನಾಮದ ಪುರಂದರರು ಪುರಂದರ ವಿಠಲನಿಗೆ ಶರಣಾಗಿ ಪುರಂದರ ದಾಸರಾದರು. ಚುಟುಕಿನಲ್ಲಿ ಹೇಳುತ್ತಾ ಹೋದ…
ಕಾಸರಗೋಡು : ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ, ಕಾಸರಗೋಡು, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ, ಕೇರಳ ರಾಜ್ಯ ದಾಸ ಸಾಹಿತ್ಯ ಪರಿಷತ್ತು ಹಾಗೂ ವಿ.ಕೆ.ಎಂ. ಕಲಾವಿದರು (ರಿ.) ಬೆಂಗಳೂರು ಇವರ ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಬೆಂಗಳೂರು ಪ್ರಾಯೋಜಕತ್ವದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ದಿನಾಂಕ 27 ಮಾರ್ಚ್ 2025 ಗುರುವಾರದಂದು ಬೆಳಿಗ್ಗೆ ಗಂಟೆ 9-00ರಿಂದ ರಾತ್ರಿ 9-00ರವರೆಗೆ ನಡೆಯುವ ಒಂದು ದಿನದ ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನ -2025, ಕರ್ನಾಟಕ ಗಡಿನಾಡ ಉತ್ಸವ, ವಿಶ್ವ ರಂಗಭೂಮಿ ದಿನಾಚರಣೆ, ಬೆಂಗಳೂರು ಕನ್ನಡ ನಾಟಕೋತ್ಸವವನ್ನು ಯಶಸ್ವಿಯಾಗಿ ಸಂಘಟಿಸುವ ಉದ್ದೇಶದಿಂದ ವಿಶೇಷ ಸಭೆಯನ್ನು ಕಾಸರಗೋಡು ಕನ್ನಡ ಗ್ರಾಮದಲ್ಲಿ ದಿನಾಂಕ 28 ಜನವರಿ 2025ರಂದು ಕರೆಯಲಾಯಿತು. ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ…
ಬೆಂಗಳೂರು : ಜನ ಸಾಮಾನ್ಯರಲ್ಲಿ ಅದರಲ್ಲಿಯೂ ವಿಶೇಷವಾಗಿ ಕನ್ನಡ ಯುವಜನತೆಯಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಕುರಿತು ಆಸಕ್ತಿ ಮೂಡಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಬಿ.ಎಂ.ಶ್ರೀಯವರು ರೂಪಿಸಿದ ಮುಖ್ಯ ಯೋಜನೆ ಕನ್ನಡ ಸಾಹಿತ್ಯ ಪರೀಕ್ಷೆಗಳು. 1940ರ ಜೂನ್ ತಿಂಗಳಿನಿಂದ ‘ಕನ್ನಡ ಅಣುಗ’, ಕನ್ನಡ ಕಾವ, ಕನ್ನಡ ಜಾಣ ಪರೀಕ್ಷೆಗಳು ಆರಂಭವಾದವು. 1948ರಲ್ಲಿ `ಅಣುಗ’ವನ್ನು ಕೈ ಬಿಡಲಾಯಿತು. 1966ರಲ್ಲಿ ‘ಕನ್ನಡ ರತ್ನ’ ಪರೀಕ್ಷೆ ಆರಂಭವಾಗಿದ್ದು, 1992ರಲ್ಲಿ ಕನ್ನಡ ಪ್ರವೇಶ ಆರಂಭವಾಯಿತು. ಈ ಎಲ್ಲಾ ಪರೀಕ್ಷೆಗಳು ಲಕ್ಷಾಂತರ ಕನ್ನಡಿಗರಲ್ಲಿ ಭಾಷೆ ಮತ್ತು ಸಾಹಿತ್ಯದ ಕುರಿತು ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದು, ನಿರಂತರವಾಗಿ ನಡೆದುಕೊಂಡು ಬರುತ್ತಿವೆ. ಈ ವರ್ಷ ಕನ್ನಡ ಸಾಹಿತ್ಯ ಪರಿಷತ್ತು 2024-25ನೇ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳನ್ನು ದಿನಾಂಕ 7, 8 ಮತ್ತು 9 ಫೆಬ್ರವರಿ 2025ರಂದು ಒಟ್ಟು ಮೂರು ದಿನಗಳ ಕಾಲ ರಾಜ್ಯದ 18 ಕೇಂದ್ರಗಳಲ್ಲಿ ನಡೆಸಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.…
ಬೆಂಗಳೂರು : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ.) ಕಮತಗಿ ಮತ್ತು ಗೀತಾ ಸಂಗೀತ ಅಕಾಡೆಮಿ ಟ್ರಸ್ಟ್ (ರಿ.) ಬೆಂಗಳೂರು ಇದರ ಸಹಯೋಗದಲ್ಲಿ ‘ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಉತ್ಸವ-2025’ ಸಮಾರಂಭವನ್ನು ದಿನಾಂಕ 02 ಫೆಬ್ರವರಿ 2025 ಭಾನುವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಜಾನಪದ ಕಲಾ ಪ್ರದರ್ಶನ, ಭರತನಾಟ್ಯ, ವಿಶೇಷ ಉಪನ್ಯಾಸ, ಸುಗಮ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಚಿಕ್ಕಬಳ್ಳಾಪುರ ಜಾನಪದ ಕಲಾವಿದರಾದ ಡಾ. ಶಶಿಕಲಾ ಎ.ಆರ್. ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಮೊದಲು ಮೆರವಣಿಗೆ ಚಾಲನೆ, ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ಪ್ರತಿಮೆಗೆ ಮಾಲಾರ್ಪಣೆ ಮತ್ತು ಪುಸ್ತಕ ಮಳಿಗೆ ಉದ್ಘಾಟನೆಗೊಳ್ಳಲಿದೆ. ಬೆಂಗಳೂರು ಆಕಾಶವಾಣಿ ಸಹಾಯಕ ನಿರ್ದೇಶಕರಾದ ಶ್ರೀಮತಿ ನೂತನ ದೋಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಇದರ ಕಾರ್ಯದರ್ಶಿಗಳಾದ ಡಾ. ಸಂಗಮೇಶ…
ಮೈಸೂರು: ಸಮತಾ ಅಧ್ಯಯನ ಕೇಂದ್ರ(ರಿ)ವು ಸಂಸ್ಥಾಪಕ ಅಧ್ಯಕ್ಷೆ, ಖ್ಯಾತ ಸ್ತ್ರೀವಾದಿ, ವಿಮರ್ಶಕಿ ಹಾಗೂ ಲೇಖಕಿಯಾದ ಡಾ. ವಿಜಯಾ ದಬ್ಬೆ ಅವರ ಹೆಸರಿನಲ್ಲಿ 2022ರಲ್ಲಿ ಸ್ಥಾಪಿಸಿರುವ ‘ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ -2025’ಗೆ ಮಹಿಳೆಯರ ಕವನ ಸಂಕಲನವನ್ನು ಆಹ್ವಾನಿಸಿದೆ. 2020 -2024ರ ಅವಧಿಯಲ್ಲಿ ಪ್ರಥಮ ಮುದ್ರಣ ಕಂಡಿರುವ ಕವನ ಸಂಕಲನವನ್ನು ಮಾತ್ರ ಪರಿಗಣಿಸಲಾಗುವುದು. ಈ ಪ್ರಶಸ್ತಿಯು ರೂಪಾಯಿ 25,000/- ನಗದು ಮತ್ತು ಫಲಕವನ್ನು ಒಳಗೊಂಡಿದ್ದು, 1 ಜೂನ್ 2025 ರಂದು ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಆಸಕ್ತ ಪ್ರಕಾಶಕರು ಅಥವಾ ಲೇಖಕಿಯರು ಸಂಕಲನದ ನಾಲ್ಕು ಪ್ರತಿಗಳನ್ನು 15 ಮಾರ್ಚ್ 2025ರ ಒಳಗಾಗಿ ಕಳುಹಿಸುವಂತೆ ಕೋರಲಾಗಿದೆ. ವಿಳಾಸ: ಎಂ. ಎಸ್. ವೇದಾ, ಅಲಂಪು, ಮನೆ ಸಂಖ್ಯೆ 1257, ಪಡುವಣ ರಸ್ತೆ, 4ನೇ ಕ್ರಾಸ್, ಟಿ. ಕೆ. ಬಡಾವಣೆ, 4ನೇ ಹಂತ, ಕುವೆಂಪುನಗರ, ಮೈಸೂರು-570023.
ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಕರಾವಳಿ ಲೇಖಕಿಯರ-ವಾಚಕಿಯರ ಸಂಘ (ರಿ.) ಇದರ ವತಿಯಿಂದ ಶ್ರೀ ನಾರಾಯಣ ಗುರು ಶಿಕ್ಷಣ ಟ್ರಸ್ಟ್ (ರಿ.) ಕಾಟಿಪಳ್ಳ ಮತ್ತು ಕ.ಸಾ.ಪ. ಸುರತ್ಕಲ್ ಹೋಬಳಿ ಘಟಕದ ಸಹಯೋಗದಲ್ಲಿ ‘ಪದ್ಮಾ ಶೆಣೈ, ಲಲಿತಾ ರೈ, ಎ.ಪಿ. ಮಾಲತಿ ಮತ್ತು ಶ್ರಿಕಲಾ ಉಡುಪ’ ದತ್ತಿನಿಧಿ ಕಾರ್ಯಕ್ರಮವು ದಿನಾಂಕ 25 ಜನವರಿ 2025ರಂದು ಬ್ರಹ್ಮಶ್ರೀ ನಾರಾಯಣ ಗುರು ಶಿಕ್ಷಣ ಟ್ರಸ್ಟ್ ಕಾಟಿಪಳ್ಳದಲ್ಲಿ ನಡೆಯಿತು. ಸಂಸ್ಥೆಯ ಅಧ್ಯಕ್ಷರಾದ ಪಿ. ದಯಾಕರ್ ಇವರು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಕ.ಲೇ.ವಾ.ದ ಅಧ್ಯಕ್ಷರಾದ ಶ್ರೀಮತಿ ಶಕುಂತಳಾ ಟಿ. ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ‘ಪ್ರವಾಸ ಪ್ರಬಂಧ’ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿಕ್ರಮ್ ಶೈಲೇಶ ನಾಯಕ್, ವರ್ಷಿಣಿ, ರೂಪಾ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಮತ್ತು ಅರ್ಜುನ್ ಎಂ. ಮತ್ತು ವರುಣ್ ಪ್ರೋತ್ಸಾಹಕ ಬಹುಮಾನ ಪಡೆದುಕೊಂಡರು. ವಿಜೇತರಿಗೆ ಬಹುಮಾನ ವಿತರಿಸಿದ…
ಚನ್ನರಾಯಪಟ್ಟಣ : ಪ್ರತಿಮಾ ಟ್ರಸ್ಟ್ (ರಿ.) ಇದರ ವತಿಯಿಂದ ‘ಪ್ರತಿಮೋತ್ಸವ -2025’ ಕಾರ್ಯಕ್ರಮವನ್ನು ದಿನಾಂಕ 02 ಫೆಬ್ರವರಿ 2025ರಂದು ಸಂಜೆ 6-30 ಗಂಟೆಗೆ ಚನ್ನರಾಯಪಟ್ಟಣದ ರಾಘವೇಂದ್ರ ಸಾಮಿಲ್ ರಸ್ತೆಯಲ್ಲಿರುವ ರಂಗ ಲೋಕದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರತಿಮಾ ಟ್ರಸ್ಟ್ ಇದರ ಅಧ್ಯಕ್ಷರಾದ ಉಮೇಶ್ ತೆಂಕನಹಳ್ಳಿ ಇವರ ಅಧ್ಯಕ್ಷತೆಯಲ್ಲಿ ಪಾಂಡವಪುರದ ಉಪವಿಭಾಗಾಧಿಕಾರಿ ಶ್ರೀ ನಿವಾಸ ಗೌಡ ಕೆ.ಆರ್. ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಸಭಾ ಕಾರ್ಯಕ್ರಮದ ಬಳಿಕ ಶಿಬಿರಾರ್ಥಿಗಳಿಂದ ಜನಪದ ಸಮೂಹ ಗೀತ ಗಾಯನ, ಉಮೇಶ್ ತೆಂಕನಹಳ್ಳಿ ಇವರ ರಚನೆ ಮತ್ತು ನಿರ್ದೇಶನದಲ್ಲಿ ‘ಜೊಳ್ಳು ಸುದ್ದಿ ಪೊಳ್ಳು ಮಾತು’ ನಾಟಕ ಪ್ರದರ್ಶನ, ಶ್ರೀಮತಿ ಸುಶೀಲ ರಾವು ಹಾಗೂ ಶ್ರೀಮತಿ ರಮ ಇವರ ನಿರ್ದೇಶನದಲ್ಲಿ ಕೋಲಾಟ, ಉಮೇಶ್ ತೆಂಕನಹಳ್ಳಿ ಇವರ ನಿರ್ದೇಶನದಲ್ಲಿ ರಂಗಕುಣಿತ ಮತ್ತು ಕಂಸಾಳೆ ಪ್ರದರ್ಶನಗೊಳ್ಳಲಿದೆ.
ಬೆಂಗಳೂರು : ನಿರ್ಮಲ ನೃತ್ಯ ನಿಕೇತನ ಕಲ್ಚರಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ 50ನೇ ವರ್ಷದ ವಾರ್ಷಿಕೋತ್ಸವ ಸಲುವಾಗಿ ‘ಭರತನಾಟ್ಯ ಯುಗಳ ನೃತ್ಯ’ ಪ್ರದರ್ಶನವನ್ನು ದಿನಾಂಕ 02 ಫೆಬ್ರವರಿ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾ ಕ್ಷೇತ್ರ ಆವರಣದ ನಯನ ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ. ನೃತ್ಯ ವಿದ್ಯಾನಿಲಯದ ನೃತ್ಯ ಗುರುಗಳಾದ ವಿದ್ವಾನ್ ಯು.ಪಿ. ಶರಣ್ ಮತ್ತು ವಿದುಷಿ ನಿಶ್ಚಿತಾ ಶರಣ್ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಮಂಗಳೂರು: ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಮ್ ಇಲ್ಲಿ ನಡೆಯಲಿರುವ ‘25ನೇ ತುಳು ಸಾಹಿತ್ಯ ಸಮ್ಮೇಳನ’ದ ಅಧ್ಯಕ್ಷರಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ, ತುಳು – ಕನ್ನಡ ಸಾಹಿತಿ ಹಾಗೂ ಹಿರಿಯ ಯಕ್ಷಗಾನ ಅರ್ಥಧಾರಿಯಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಆಯ್ಕೆಯಾಗಿದ್ದಾರೆ. ದಿನಾಂಕ 06 ಫೆಬ್ರವರಿ 2025ರಂದು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಮಾರ್ಗದರ್ಶನದೊಂದಿಗೆ ‘ತುಳು ಬಾಸೆ ಸಂಸ್ಕೃತಿದ ಜಾಗೃತಿಗಾದ್’ಎಂಬ ಧ್ಯೇಯ ವಾಕ್ಯದೊಂದಿಗೆ ಒಡಿಯೂರು ಶ್ರೀ ದತ್ತಾಂಜನೇಯ ಕ್ಷೇತ್ರದಲ್ಲಿ ಸಮ್ಮೇಳನ ನಡೆಯಲಿದೆ. ಬಹುಮುಖೀ ಸಾಧಕ : ಶಿಕ್ಷಣ, ಸಾಹಿತ್ಯ, ಕಲೆ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಭಾಸ್ಕರ ರೈ ಕುಕ್ಕುವಳ್ಳಿ ಓರ್ವ ಬಹುಮುಖೀ ಸಾಧಕರು. ಪುತ್ತೂರು ತಾಲೂಕು ಇರ್ದೆ ಗ್ರಾಮದ ಪ್ರತಿಷ್ಠಿತ ಬಾಲ್ಯೊಟ್ಟು ಗುತ್ತು ಮನೆತನದಲ್ಲಿ ಜನಿಸಿದ ಇವರು ನವೋದಯ ಪ್ರೌಢಶಾಲೆ ಬೆಟ್ಟಂಪಾಡಿ ಮತ್ತು ಪುತ್ತೂರಿನ ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಪ್ರೌಢ ಶಿಕ್ಷಣವನ್ನು ಪೂರೈಸಿದರು. ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ…