Subscribe to Updates
Get the latest creative news from FooBar about art, design and business.
Author: roovari
ಕುಂದಾಪುರ : “ಪ್ರತಿಭೆ ನಿಮ್ಮದು ವೇದಿಕೆ ನಮ್ಮದು” 2025ರ ಕಾರ್ಯಕ್ರಮದಡಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ 107ನೇ ತಿಂಗಳ ಕಾರ್ಯಕ್ರಮ ದಿನಾಂಕ 25 ಮೇ 2025ರಂದು ನಡೆಯಿತು. ಶ್ರೀಮತಿ ವಸಂತಿ ಆರ್. ಪಂಡಿತ್ ಮತ್ತು ಶ್ರೀಮತಿ ದೇವಕಿ ಸುರೇಶ್ ಪ್ರಭು ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮದ ವೇದಿಕೆಯಲ್ಲಿ ಅಧ್ಯಕ್ಷರಾಗಿ ಗೊಂಬೆಯಾಟ ಪ್ರೋತ್ಸಾಹಕರಾದ ರಾಧಾಕೃಷ್ಣ ಪ್ರಭು, ಮುಖ್ಯ ಅತಿಥಿಗಳಾಗಿ ಉಡುಪಿ ಯಕ್ಷಗಾನ ಕೇಂದ್ರದ ಗುರು ಹಾಗೂ ಉಪ್ಪಿನಕುದ್ರು ಗೊಂಬೆಯಾಟ ಮಂಡಳಿಯ ಭಾಗವತರಾದ ಉಮೇಶ್ ಸುವರ್ಣ, ರಮೇಶ್ ಕಾಮತ್, ವಿ. ಶ್ರೀನಿವಾಸ ಪೈ, ಆಡಿಟರ್ ವಾಸುದೇವ ಶ್ಯಾನುಭಾಗ್ ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 2024-25ರ ಸಾಲಿನ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದ ವಿದ್ಯಾರ್ಥಿನಿ ಹಾಗೂ ಕಲಾವಿದೆ ಕುಮಾರಿ ಆಕಾಂಕ್ಷಾ ಎಸ್.ಪೈ ಇವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಆಕಾಂಕ್ಷಾ ಎಸ್. ಪೈ ಹಾಗೂ ಅವನಿ ಶ್ಯಾನುಭಾಗ್…
ಕುಂದಾಪುರ: ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ಇವರ ವತಿಯಿಂದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಇವರ ಸಹಯೋಗದಲ್ಲಿ ಅರಿವಿನ ಬೆಳಕು ಉಪನ್ಯಾಸ ಮಾಲೆ-5 ಮತ್ತು ಕೃತಿ ಲೋಕಾರ್ಪಣಾ ಕಾರ್ಯಕ್ರಮವು ದಿನಾಂಕ 29 ಮೇ 2025ರಂದು ಮಧ್ಯಾಹ್ನ 2.30ಕ್ಕೆ ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಾಲಿರುವ ಈ ಕಾರ್ಯಕ್ರಮವನ್ನು ಬೆಂಗಳೂರು ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಬಾಲಾಜಿ ಎಸ್ ಉದ್ಘಾಟಿಸಲಿದ್ದು, ಖ್ಯಾತ ಜಾನಪದ ವಿದ್ವಾಂಸ ಪ್ರೊ. ಕನರಾಡಿ ವಾದಿರಾಜ್ ಭಟ್ ಇವರು ‘ಜಲ ಜಾನಪದ’ ಪುಸ್ತಕ ಲೋಕಾರ್ಪಣೆ ಗೊಳಿಸಲಿದ್ದಾರೆ. ಡಾ. ಶಿವರಾಮ ಕಾರಂತ ಟ್ರಸ್ಟಿ ಇದರ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಭಾಗವಹಿಸಲಿದ್ದು, ಚಿಂತಕ ಮುಸ್ತಾಕ್ ಹೊನ್ನಾಬೈಲ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಡಾ. ಶಿವರಾಮ ಕಾರಂತರ ಬದುಕು, ಕೃತಿಗಳು ಮತ್ತು ಪರಿಸರ ಎಂಬ ವಿಷಯದ ಕುರಿತು ಉಪನ್ಯಾಸ…
ಗೋಣಿಕೊಪ್ಪ: ನಾಡಿನ ಪ್ರತಿಷ್ಠಿತ ಸಾಹಿತ್ಯಿಕ ಸಂಸ್ಥೆಯಾದ ಕೊಡವ ತಕ್ಕ್ ಎಳ್ತ್‌ಕಾರಡ ಕೂಟ ಹಾಗೂ ಗೋಣಿಕೊಪ್ಪ ಕಾವೇರಿ ಕಾಲೇಜಿನ ಜಂಟಿ ಆಶ್ರಯದಲ್ಲಿ ‘ಕೊಡವ ತಕ್ಕ್ ಎಳ್ತ್‌ಕಾರಡ ಕೂಟ’ದ ‘ಜನಪ್ರಿಯ ಕೊಡವ ಸಾಹಿತ್ಯ ಮಾಲೆ ಯೋಜನೆ’ಯಲ್ಲಿ ಮೂರು ಪುಸ್ತಕಗಳ ಲೋಕಾರ್ಪಣಾ ಸಮಾರಂಭವು ಗೋಣಿಕೊಪ್ಪ ಕಾವೇರಿ ಕಾಲೇಜಿನ ಸೆಮಿನಾರ್ ಹಾಲ್’ನಲ್ಲಿ ನಡೆಯಲಿದೆ. ದಿನಾಂಕ 31 ಮೇ 2025ರ ಶನಿವಾರ ಪೂರ್ವಾಹ್ನ ಘಂಟೆ 10. 00ಕ್ಕೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಲೇಖಕಿ ಉಳುವಂಗಡ ಕಾವೇರಿ ಉದಯ ಬರೆದ 190ನೇ ಹೆಜ್ಜೆಯ ಪುಸ್ತಕ, 17 ಲೇಖಕರು ಬರೆದ 191ನೆ ಹೆಜ್ಜೆಯ ಪುಸ್ತಕ ಹಾಗೂ ಲೇಖಕಿ ಕೊಟ್ಟಂಗಡ ಕವಿತ ವಾಸುದೇವ ಬರೆದ 192ನೇ ಹೆಜ್ಜೆಯ ನೂತನ ಮೂರು ಪುಸ್ತಕಗಳನ್ನು ಲೋಕಾರ್ಪಣೆಗೊಳ್ಳಲಿದೆ. ‘ಕೊಡವ ತಕ್ಕ್ ಎಳ್ತ್‌ಕಾರಡ ಕೂಟ’ದ ಅಧ್ಯಕ್ಷರಾದ ಚೆಟ್ಟಂಗಡ ರವಿ ಸುಬ್ಬಯ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾವೇರಿ ಎಜುಕೇಷನ್ ಸೊಸೈಟಿ ಇದರ ಅಧ್ಯಕ್ಷರಾದ ಮಂಡೇಪಂಡ ಸುಗುಣ ಮುತ್ತಣ್ಣ, ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ…
ಧಾರವಾಡ : ಉತ್ತರ ಕರ್ನಾಟಕ ಲೇಖಕಿಯರ ಸಂಘ ಪ್ರತಿ ವರ್ಷ ಕೊಡುವ ಸಾಹಿತ್ಯ ಸರಸ್ವತಿ, ಶ್ರೀಮತಿ ಶಾಂತಾದೇವಿ ಕಥಾ ಪ್ರಶಸ್ತಿ ಹಾಗೂ ಡಾ.ಲತಾ ರಾಜಶೇಖರ ಕಾವ್ಯ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಶ್ರೀಮತಿ ಶಾಂತಾದೇವಿ ಕಣವಿ ಕಥಾ ಪ್ರಶಸ್ತಿ 2023ನೇ ಸಾಲಿಗೆ ಸಿ. ಎನ್. ಮುಕ್ತಾ ಹಾಗೂ 2024ನೇ ಸಾಲಿಗೆ ಫಾತಿಮಾ ರಲಿಯಾ, 2023ನೇ ಸಾಲಿನ ಡಾ. ಲತಾ ರಾಜಶೇಖರ ಕಾವ್ಯ ಪ್ರಶಸ್ತಿಗೆ ಡಾ.ಎಚ್. ಎಲ್. ಪುಷ್ಪಾ ಹಾಗೂ 2024ನೇ ಸಾಲಿನ ಪ್ರಶಸ್ತಿಗೆ ಸ್ಮಿತಾ ಅಮ್ರತರಾಜ್, 2023ನೇ ಸಾಲಿನ ಸಾಹಿತ್ಯ ಸರಸ್ವತಿ ಪ್ರಶಸ್ತಿಗೆ ಡಾ. ವೈ. ಸಿ. ಭಾನುಮತಿ ಹಾಗೂ 2024ನೇ ಸಾಲಿನ ಪ್ರಶಸ್ತಿಗೆ ಬಿ. ಕೆ. ಶ್ರೀಮತಿ ರಾವ್ ಆಯ್ಕೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಡಾ. ರಾಜೇಶ್ವರಿ ಮಹೇಶ್ವರಯ್ಯ ಇವರು ದತ್ತಿ ದಾನಿಗಳಿಗೆ ಮತ್ತು ಸಾಹಿತ್ಯ ಸರಸ್ವತಿ ಆಯ್ಕೆ ಸಮಿತಿಯ ಸದಸ್ಯರಾದ ಡಾ.ವೀರಣ್ಣ ರಾಜೂರ, ಡಾ.ವೀಣಾ ಶಾಂತೇಶ್ವರ, ಡಾ.ಶಾಂತಾ ಇಮ್ರಾಪೂರ, ಶ್ರೀ ಹ.ವೆಂ.ಕಾಖಂಡಕಿಯವರಿಗೆ ಹಾಗೂ ಕಾವ್ಯ ಪ್ರಶಸ್ತಿಯ ತೀರ್ಪುಗಾರರಾದ ಸವಿತಾ ನಾಗಭೂಷಣ…
ಸುಳ್ಯ : ಜಲಶ್ರೀ ಪ್ರತಿಷ್ಠಾನ ಕಡ್ಲಾರು ಹಾಗೂ ಎನ್.ಎ. ಟೈಮ್ಸ್ ಯೂಟ್ಯೂಬ್ ಚಾನಲ್ ಇದರ ಸಂಯುಕ್ತ ಆಶ್ರಯದಲ್ಲಿ ‘ಕವನ ವಾಚನ ವಿಡಿಯೋ ಸ್ಪರ್ಧೆ 2025’ಯನ್ನು ಹಮ್ಮಿಕೊಳ್ಳಲಾಗಿದೆ. 16ರಿಂದ 45 ವರ್ಷ ಹಾಗೂ 45 ವರ್ಷ ಮೇಲ್ಪಟ್ಟವರು ಎಂಬ ಎರಡು ವಿಭಾಗದಲ್ಲಿ ಈ ಸ್ಪರ್ಧೆ ನಡೆಯಲಿದೆ. ವಿಡಿಯೋ ಕಳುಹಿಸಲು ಕೊನೆಯ ದಿನಾಂಕ 15 ಜೂನ್ 2025 ಆಗಿರುತ್ತದೆ. ಸ್ವರಚಿತ ಕವನಗಳನ್ನು ವಾಚನ ಮಾಡುತ್ತಿರುವ ವಿಡಿಯೋವನ್ನು ತಮ್ಮ ಸ್ವವಿವರದೊಂದಿಗೆ 9141840733 ಸಂಖ್ಯೆಗೆ ವಾಟ್ಸಾಪ್ ಮಾಡುವುದು ಹಾಗೂ ಹೆಚ್ಚಿನ ಮಾಹಿತಿಗಾಗಿ 7259928731 ಸಂಖ್ಯೆಯನ್ನು ಸಂಪರ್ಕಿಸಿರಿ.
ಕಾಸರಗೋಡು : ಕಾಸರಗೋಡಿನ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ 19ನೇ ವಾರ್ಷಿಕೋತ್ಸವ ಮತ್ತು ರಂಗಚಿನ್ನಾರಿ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 24 ಮೇ 2025ರಂದು ಕಾಸರಗೋಡಿನ ಕರಂದಕ್ಕಾಡಿನಲ್ಲಿರುವ ‘ಪದ್ಮಗಿರಿ ಕಲಾ ಕುಟೀರ’ದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಸ್ವಾಮೀಜಿ “ಎಲೆಮರೆಯ ಪ್ರತಿಭಾನ್ವಿತರನ್ನು, ಹಿರಿಯ ಕಲಾವಿದರನು ಗುರುತಿಸುವಂತಹ ಹಾಗೂ ಅವರಿಗೆ ವೇದಿಕೆ ಕಲ್ಪಿಸುವ ಕಾರ್ಯ ಅತ್ಯಂತ ಶ್ಲಾಘನೀಯ. ಇದರಿಂದಾಗಿ ಯುವ ಪ್ರತಿಭೆಗಳಿಗೆ ಕಲೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗುತ್ತದೆ. ಸುಪ್ತವಾಗಿದ್ದ ಪ್ರತಿಭೆ ಅನಾವರಣಗೊಳ್ಳುತ್ತದೆ. ರಂಗಚಿನ್ನಾರಿಯು ಕಲೆ, ಸಾಹಿತ್ಯ, ಸಂಸ್ಕೃತಿಯ ಉಳಿವಿಗಾಗಿ ನಿರಂತರ ಕೈಂಕರ್ಯ ನಡೆಸುತ್ತಿದ್ದು ಯುವ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಮಹತ್ವದ ಕಾರ್ಯ ಮಾಡುತ್ತಿದೆ. ಈಗಾಗಲೇ ನೂರಾರು ಮಂದಿ ಯುವ ಪ್ರತಿಭೆಗಳನ್ನು ಗುರುತಿಸಿ, ವೇದಿಕೆ ಕಲ್ಪಿಸಿ ಅವರಲ್ಲಿ ಸುಪ್ತವಾಗಿದ್ದ ಪ್ರತಿಭೆ ಅರಳುವುದಕ್ಕೆ ಕಾರಣವಾಗಿದೆ” ಎಂದರು. ಖ್ಯಾತ ಪತ್ರಕರ್ತ ರವೀಂದ್ರ ಜೋಶಿ ಮಾತನಾಡಿ “ಎರಡು ದಶಕಗಳಿಂದ ನಿರಂತರವಾಗಿ ಕನ್ನಡ ನಾಡು, ನುಡಿ, ಸಂಸ್ಕೃತಿಗಾಗಿ ದುಡಿಯುತ್ತಿರುವುದು…
ಬೆಂಗಳೂರು : ಸ್ಟೇಜ್ ಬೆಂಗಳೂರು ಪ್ರಸ್ತುತ ಪಡಿಸುವ ಎರಡು ನಾಟಕ ಪ್ರದರ್ಶನವನ್ನು ದಿನಾಂಕ 30 ಮೇ 2025ರಂದು ಬೆಂಗಳೂರಿನ ಮಲ್ಲತ್ತಳ್ಳಿ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಜೆ 6-00 ಗಂಟೆಗೆ ಕೆ.ವಿ. ಸುಬ್ಬಣ್ಣ ರಚಿಸಿರುವ ಶಿಶಿರ ವಿ. ಶಾಸ್ತ್ರೀ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಬೆಟ್ಟಕ್ಕೆ ಚಳಿಯಾದರೆ’ ಮಕ್ಕಳ ನಾಟಕ ಮತ್ತು 7-30 ಗಂಟೆಗೆ ಪಿ. ಲಂಕೇಶ್ ರಚಿಸಿರುವ ವಿಶಾಲ್ ಕಶ್ಯಪ್ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಪೊಲೀಸರಿದ್ದಾರೆ ಎಚ್ಚರಿಕೆ’ ನಾಟಕ ಪ್ರದರ್ಶನ ನಡೆಯಲಿದೆ.
ಮಂಗಳೂರು : ಡಾ. ವಾಮನ್ ರಾವ್ ಸಾರತ್ಯದ ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯದ ದಕ್ಷಿಣ ಕನ್ನಡ ಜಿಲ್ಲಾ ಘಟಕವನ್ನು ದಿನಾಂಕ 25 ಮೇ 2025ರಂದು ಮಂಗಳೂರು ತಾಲೂಕು ಮಹಿಳಾ ಒಕ್ಕೂಟ ಸಭಾ ಭವನದಲ್ಲಿ ಕನ್ನಡ ಧ್ವಜವನ್ನು ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಶ್ರಿಮತಿ ರೇಖಾ ಸುದೇಶ್ ರಾವ್ ಇವರಿಗೆ ನೀಡಿ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷರು ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರೂ ಆದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ “ಕನ್ನಡ ಭವನದ ಕನ್ನಡಪರ ಚಟುವಟಿಕೆಗಳು ಅನುಕರಣೀಯ ಹಾಗೂ ಶ್ಲಾಘನೀಯ. ಹಿರಿಯರನ್ನು ಗೌರವಿಸಿ, ಪ್ರತಿಭಾವಂತರನ್ನು ಪುರಸ್ಕರಿಸಿ, ಯುವ ಪ್ರತಿಭೆಗಳನ್ನು ಹುಡುಕಿ ತೆಗೆದು ‘ಭರವಸೆಯ ಬೆಳಕು’ ಎಂಬ ಅರ್ಹ ನಾಮದ ಪ್ರಶಸ್ತಿ ನೀಡಿ, ವಿವಿಧ ಸಮಾನ ಮನಸ್ಕ ಸಂಘಟನೆಗಳನ್ನು, ಸಂಘಟಕರನ್ನು ಒಂದೇ ವೇದಿಕೆಯಡಿ ತೊಡಗಿಸಿಕೊಳ್ಳಲು ಅವಕಾಶ ಮಾಡಿಕೊಡುವ ವಾಮನ್ ರಾವ್ ಬೇಕಲರ ಮುಂದಿನ ಎಲ್ಲ ಕನ್ನಡಪರ ಚಟುವಟಿಕೆಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ನಮ್ಮೆಲ್ಲರ ಸಂಪೂರ್ಣ ಬೆಂಬಲವಿದೆ.…
ಕಿನ್ನಿಗೋಳಿ : ಕಲಾಬ್ದಿ ಗೋವಿಂದದಾಸ ಕಾಲೇಜು ಸುರತ್ಕಲ್ ಇವರ ಸಹಕಾರದಲ್ಲಿ ಕಲಾಯುಗ ಹಾಗೂ ಯುಗಪುರುಷ ಕಿನ್ನಿಗೋಳಿಯ ಸಹಯೋಗದಲ್ಲಿ ಕಲಾಯುಗ ಪ್ರಸ್ತುತ ಪಡಿಸಿದ ಚರಿತ್ ಸುವರ್ಣ ನಿರ್ದೇಶನದ ಅಕ್ಷರ ಕೆ.ವಿ. ಇವರ ಸ್ವಯಂವರಲೋಕ ಆಧಾರಿತ ನಾಟಕ ‘ಹುಡುಕಾಟದಲ್ಲಿ’ ಇದರ ಪ್ರಥಮ ಪ್ರದರ್ಶನವು ದಿನಾಂಕ 24 ಮೇ 2025ರಂದು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯುಗಪುರುಷದ ಭುವನಾಭಿರಾಮ ಉಡುಪರು “ಉತ್ತಮ ತರಬೇತಿ ನೀಡಿ ಯುವ ಕಲಾವಿದರನ್ನು ಸೃಷ್ಟಿ ಮಾಡಿ ರಂಗಭೂಮಿಯಲ್ಲಿ ತೊಡಗಿಸಿಕೊಂಡು ಉತ್ತಮ ಪ್ರದರ್ಶನ ನೀಡುವಲ್ಲಿ ಸುರತ್ಕಲ್ ಕಲಾಯುಗ ತಂಡ ಯಶಸ್ವಿಯಾಗಿದೆ” ಎಂದು ಹೇಳಿದರು. ಕಿನ್ನಿಗೋಳಿ ವಿಜಯಾ ಕಲಾವಿದರು ಸಂಘಟನೆಯ ಅಧ್ಯಕ್ಷ ಶರತ್ ಶೆಟ್ಟಿ, ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಹರೀಶ್ ಆಚಾರ್ಯ, ವಿನೋದ್ ಶೆಟ್ಟಿ ಕೃಷ್ಣಾಪುರ, ನರೇಂದ್ರ ಕೆರೆಕಾಡು, ರಾಘು ಗುಜರನ್, ರೇಖಾ ಸುವರ್ಣ ಶುಭ ಹಾರೈಸಿದರು. ನಿರ್ದೇಶಕ ಚರಿತ್ ಸುವರ್ಣ, ಕಲಾವಿದರಾದ ವೈಭವಿ, ಪ್ರೀತೇಶ್ ಕೊಡೆತ್ತೂರು, ಹಿತ ಉಮೇಶ್, ಪ್ರೀತಿ ಭಗತ್, ಚರಣ್ ಎಸ್. ನಾಯ್ಕ್, ಭರತ್,…
‘ಪುರಾಣ ಕಥಾಕೋಶ’ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಮೋಹನ ಕುಂಟಾರ್ ಸಂಪಾದಿಸಿದ ಕೃತಿ. ಬಹುಮುಖ ಪ್ರತಿಭಾವಂತರಾಗಿದ್ದ ತಮ್ಮ ಅಜ್ಜ ಅಡೂರು ಅಪ್ಪೋಜಿರಾವ್ ಜಾದವ್ ಅವರು ಬಿಟ್ಟು ಹೋದ ಅಳಿದುಳಿದ ಆಸ್ತಿ. ಯಕ್ಷಗಾನ ತಾಳಮದ್ದಳೆಯಲ್ಲಿ ಊರು-ಪರವೂರುಗಳಲ್ಲಿ ಬಹಳ ಒಳ್ಳೆಯ ಹೆಸರು ಗಳಿಸಿದ್ದ ಅವರು ಬರೇ ನಾಲ್ಕನೆಯ ತರಗತಿಯವರೆಗಷ್ಟೆ ಓದಿಕೊಂಡಿದ್ದರೂ ನೂರಾರು ಯಕ್ಷಗಾನ ಪ್ರಸಂಗಗಳ ಹಸ್ತಪ್ರತಿಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದರು. ಹಿಮ್ಮೇಳಕ್ಕೆ ಬಳಸುವ ಮದ್ದಳೆ, ಜಾಗಟೆಯಂಥ ಸಂಗೀತೋಪಕರಣಗಳೂ ಅವರ ಸಂಗ್ರಹದಲ್ಲಿದ್ದವು. ಅಜ್ಜ ತೀರಿಕೊಂಡಾಗ ಮೋಹನ ಕುಂಟಾರ್ ಅವರು ಆರು ತಿಂಗಳ ಕೂಸು. ಅಜ್ಜನ ಆಸ್ತಿಯನ್ನು ಸುರಕ್ಷಿತವಾಗಿ ಇಡುವ ಆಸಕ್ತಿ ಮುಂದಿನ ತಲೆಮಾರಿನವರಿಗೆ ಇರಲಿಲ್ಲವಾಗಿ ಪುಸ್ತಕಗಳೆಲ್ಲ ಹರಿದು ಹಾಳಾದವು. ಮೋಹನರು ದೊಡ್ಡವರಾದ ನಂತರ ಅಜ್ಜನ ಆಸ್ತಿಯನ್ನು ಕಳೆದುಕೊಂಡದ್ದರ ಬಗ್ಗೆ ದುಃಖಿತರಾದರು. ಹುಡುಕಿ ಹುಡುಕಿ ಕೊನೆಗೆ ಸಿಕ್ಕಿದ ಕೆಲವು ಕದಲಿದ ಹಾಳೆಗಳನ್ನು ಜೋಡಿಸಿದಾಗ ಅಜ್ಜ ಬರೆದಿಟ್ಟಿದ್ದ ಕೆಲವು ಪುರಾಣ ಕಥೆಗಳು ಸಿಕ್ಕಿದವು. ಅವನ್ನೇ ಇಲ್ಲಿ ‘ಪುರಾಣ ಕಥಾಕೋಶ’ವಾಗಿ ಹೊರ ತಂದಿದ್ದಾರೆ. ಇದು ಅಜ್ಜನೊಂದಿಗಿನ ಅವರ ಭಾವುಕ ನಂಟಿನ…