Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ‘ಸಹಚಾರಿ’ ಮತ್ತು ಹಲ್ಗಿ ಕಲ್ಚರ್ ಇದರ ವತಿಯಿಂದ ಎರಡನೇ ವರ್ಷದ ‘ಸಂವಿಧಾನ ಸಾಥಿ’ ನೃತ್ಯ ಕಾರ್ಯಕ್ರಮಗಳ ಉದ್ಘಾಟನೆಯನ್ನು ದಿನಾಂಕ 01 ಜೂನ್ 2025ರಂದು ಬೆಳಗ್ಗೆ 10-30 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ : 8762002411.
ಮಂಗಳೂರು : ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದು, ಇದರ ವತಿಯಿಂದ ಶ್ರೀಮತಿ ವಜ್ರ ರಾವ್ ಇವರ ಲೇಖನ ಸಂಕಲನ ‘ಮರೆಯದ ಮಾತುಗಳು’ ಅಮೃತ ಪ್ರಕಾಶ 44ನೇ ಸರಣಿ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ಮಂಗಳೂರಿನ ಪತ್ರಿಕಾ ಭವನದಲ್ಲಿ ದಿನಾಂಕ 27 ಮೇ 2025ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರು ಹಾಗೂ ಲೇಖಕರು ಮಂಗಳೂರಿನ ಹರಿಕಥಾ ಪರಿಷತ್ (ರಿ.) ಇದರ ಅಧ್ಯಕ್ಷರಾದ ಮಹಾಬಲ ಶೆಟ್ಟಿ ವಹಿಸಿದ್ದರು. ಲೇಖಕರು ಹಾಗೂ ಐ.ಸಿ.ಎ.ಐ. ಮಂಗಳೂರು ಇದರ ಮಾಜಿ ಚೇಯರ್‌ಮಾನ್ ಎಸ್.ಎಸ್. ನಾಯಕ್ ಇವರು ‘ಮರೆಯದ ಮಾತುಗಳು’ ಕೃತಿ ಬಿಡುಗಡೆಗೊಳಿಸಿದರು. ಕೃತಿಯ ಲೇಖಕಿ ಶ್ರೀಮತಿ ವಜ್ರಾ ರಾವ್, ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು, ಕವಿಯತ್ರಿ ಶಿಕ್ಷಕಿ ಸುರೇಖಾ ಯಾಳವಾರ ಉಪಸ್ಥಿತರಿದ್ದರು. ಡಾ. ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿ, ಸುರೇಖಾ ಯಾಳವಾರ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರು : ಡಾ. ದಿನಕರ ಎಸ್ ಪಚ್ಚನಾಡಿ ದಂಪತಿಗಳು ಸಂತಾನ ಪ್ರಾಪ್ತಿಗಾಗಿ ಹೊತ್ತ ಹರಕೆಯ ಫಲಶ್ರುತಿಗೆ ಹಮ್ಮಿಕೊಂಡ ಪುತ್ರಕಾಮೇಷ್ಠಿ ತಾಳಮದ್ದಲೆ ಸಪ್ತಾಹದ ಸಮಾರೋಪ ಸಮಾರಂಭ ದಿನಾಂಕ 17 ಮೇ 2025ರಂದು ಕುಲಶೇಖರ ಜ್ಯೋತಿನಗರ ಧರ್ಮಶಾಸ್ತ್ರ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕುಲಶೇಖರ ಧರ್ಮಶಾಸ್ತ ಮಂದಿರ ಟ್ರಸ್ಟ್ ಇದರ ಅಧ್ಯಕ್ಷರಾದ ಅಡ್ವಕೇಟ್ ರಾಮ್ ಪ್ರಸಾದ್ ಮಾತನಾಡಿ “ಬಹಳ ಪರಂಪರೆ ಇರುವ ಯಕ್ಷಗಾನವು ಮಾಡಿಸುವವರ ಜೊತೆಗೆ ಭಾಗವಹಿಸುವ ಕಲಾವಿದರ ಭಕ್ತಿ ನಿಷ್ಠೆ ಹಾಗೂ ಹರಕೆ ನಂಬಿಕೆಯ ಆರಾಧನಾ ಕಲೆಯಾಗಿದೆ” ಎಂದರು. ಮೇ 11ರಂದು ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಆರಂಭಗೊಂಡ ಈ ತಾಳಮದ್ದಳೆ ಮುಂದುವರಿದು ಶರವು ಶ್ರೀ ಮಹಾಗಣಪತಿ ದೇವಸ್ಥಾನ, ಬೋಳಾರ ಶ್ರೀ ಮಾರಿಯಮ್ಮ ದೇವಸ್ಥಾನ, ಬಜಾಲ್ ಶ್ರೀ ಸತ್ಯನಾರಾಯಣ ಭಜನಾ ಮಂದಿರ, ಕೂಳೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಮಂದಿರ, ಕಾವೂರು ವೈದ್ಯನಾಥ ಬಬ್ಬುಸ್ವಾಮಿ ದೈವಸ್ಥಾನಗಳಲ್ಲಿ ಜರಗಿ ಕುಲಶೇಖರ ಜ್ಯೋತಿನಗರ ಧರ್ಮಶಾಸ್ತ್ರ ಮಂದಿರದ ವೇದಿಕೆಯಲ್ಲಿ ಸಮಾಪನಗೊಂಡಿತು. ಧರ್ಮಶಾಸ್ತ್ರ ಮಂದಿರದ ಗೌರವ ಅಧ್ಯಕ್ಷರಾದ ಕೂಸಪ್ಪ…
ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಆಶ್ರಯದಲ್ಲಿ ‘ಯಕ್ಷಧ್ರುವ ಪಟ್ಲ ದಶಮ ಸಂಭ್ರಮ 2025’ ರಾಷ್ಟ್ರೀಯ ಕಲಾ ಸಮ್ಮೇಳನವನ್ನು ದಿನಾಂಕ 01 ಜೂನ್ 2025ರಂದು ಬೆಳಗ್ಗೆ 9-30ರಿಂದ ರಾತ್ರಿ 11-00ರವರೆಗೆ ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ ಗಂಟೆ 9-30ಕ್ಕೆ ಉದ್ಘಾಟನ ಸಮಾರಂಭದಲ್ಲಿ ಎಡನೀರು ಮಠದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಕರ್ನಾಟಕ ಸರ್ಕಾರದ ವಿಧಾನ ಸಭಾಧ್ಯಕ್ಷರಾದ ಯು.ಟಿ. ಖಾದರ್ ಉದ್ಘಾಟಿಸುವರು. ಉದ್ಯಮಿ ಶಶಿಧರ ಬಿ. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಉದ್ಯಮಿ ಡಾ. ಕನ್ಯಾನ ಸದಾಶಿವ ಶೆಟ್ಟಿಯವರು ಉಪಸ್ಥಿತಲಿರುವರು. ಬೆಳಗ್ಗೆ 11-00ಕ್ಕೆ ಡಾ. ಎಂ. ಮೋಹನ ಆಳ್ವ ಇವರ ಉಪಸ್ಥಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ರಾಷ್ಟ್ರೀಯ ಕಲಾ ಸಮ್ಮೇಳನವನ್ನು ಉದ್ಘಾಟಿಸುವರು. ಡಾ. ಆಳ್ವರ ನಿರ್ದೇಶನ ಮತ್ತು ಸಂಯೋಜನೆಯಲ್ಲಿ ಭಾರತದ 8 ಶಾಸ್ತ್ರೀಯ ಕಲೆಗಳ ಪ್ರದರ್ಶನ, ಯಕ್ಷಗಾನ ಹಾಗೂ ಭಾರತೀಯ ಕಲೆಗಳ ಛಾಯಾಚಿತ್ರ ಪ್ರದರ್ಶನ, ಯಕ್ಷಧ್ರುವ ಮಹಿಳಾ ಸದಸ್ಯೆಯರಿಂದ ಯಕ್ಷಗಾನ ಮತ್ತು…
ಆರ್. ಆರ್. ಕೇಶವ ಮೂರ್ತಿಯವರು ಪಿಟೀಲು ವಿದ್ವಾಂಸರಲ್ಲಿ ಅಗ್ರಗಣ್ಯರು. ಸಂಗೀತ ಮನೆತನದಲ್ಲಿ ಮೊಳಕೆಯೊಡೆದ ಕುಡಿ ಇದು. ಇವರ ತಾತ ವೆಂಕಟರಾಮಯ್ಯನವರು ಸುಪ್ರಸಿದ್ಧ ವಾಗ್ಗೇಯಕಾರರು ಮತ್ತು ಸಂಗೀತಗಾರರು. ಸಂಗೀತ ಕಾಶಿ ಎನಿಸಿರುವ ಹಾಸನ ಜಿಲ್ಲೆಯ ರುದ್ರಪಟ್ಟಣದಲ್ಲಿ 27 ಮೇ 1914ರಲ್ಲಿ ಇವರ ಜನನವಾಯಿತು. ತಂದೆ ರಾಮಸ್ವಾಮಯ್ಯ ತಾಯಿ ಸುಬ್ಬಮ್ಮ. ಇವರ ಸಂಗೀತದ ಆರಂಭದ ಗುರು ಇವರ ತಂದೆಯೇ ಆಗಿದ್ದಾರೆ. 1923ನೇ ಸವಿಯಲ್ಲಿ ಮೈಸೂರಿಗೆ ಬಂದ ಕೇಶವ ಮೂರ್ತಿಯವರು ಬಿಡಾರಂ ಕೃಷ್ಣಪ್ಪನವರಲ್ಲಿ ಪಿಟೀಲು ಮತ್ತು ಚಿಕ್ಕ ರಾಮರಾಯರಲ್ಲಿ ಗಾಯನ ಅಭ್ಯಾಸ ನಡೆಸಿದರು. ಅಂದಿನ ಗುರುಗಳು ಕಲಿಸುತ್ತಿದ್ದ ಪಾಠ ಬಹಳ ಕಟ್ಟುನಿಟ್ಟು ಆಗಿದ್ದು ದಿನಕ್ಕೆ ಎಂಟು ಗಂಟೆಗಳ ನಿರಂತರ ಅಭ್ಯಾಸವನ್ನು ಮಾಡಲೇಬೇಕಾಗಿತ್ತು. ಮನಸ್ಸಿನ ನಿಗ್ರಹದೊಂದಿಗೆ ಸಾಧನೆ ಮಾಡಿ ಈ ವಿದ್ಯೆಯನ್ನು ಕರಗತಗೊಳಿಸಬೇಕಾಗಿತ್ತು. ಪಿಟೀಲಿನಲ್ಲಿ ಪರಿಣತಿ ಹೊಂದಿದ ಇವರು ಟಿ. ಚೌಡಯ್ಯನವರಂತೆ ಏಳು ತಂತಿಗಳಲ್ಲಿ ಪಿಟೀಲನ್ನುಅಭ್ಯಾಸ ಮಾಡಿದ್ದರೂ, ವಿದ್ವಾಂಸರ ಕಚೇರಿಗಳಲ್ಲಿ ಹಾಡುಗಾರರ ಮಧ್ಯೆ ನಾಲ್ಕು ತಂತಿ ಇಲ್ಲವೇ ಏಳು ತಂತಿಯ ಪಿಟೀಲನ್ನು ನುಡಿಸುತ್ತಿದ್ದರು. ಆರ್. ಆರ್. ಕೇಶವಮೂರ್ತಿಯವರು…
ಹೊನ್ನಾವರ : ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ವತಿಯಿಂದ ಹಮ್ಮಿಕೊಂಡ ಎರಡು ದಿನಗಳ ಯಕ್ಷಗಾನ ವಿಚಾರ ಸಂಕಿರಣ, ಗೋಷ್ಠಿ, ತಾಳಮದ್ದಲೆ ಹಾಗೂ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ದಿನಾಂಕ 25 ಮೇ 2025ರ ಭಾನುವಾರದಂದು ಹೊನ್ನಾವರ ತಾಲೂಕಿನ ಕವಲಕ್ಕಿ ಶ್ರೀ ಮಹಾಸತಿ ದೇವಳದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಒಂದು ಕಾಲದಲ್ಲಿ ರಾಜಾಶ್ರಯ ಪಡೆದು ಮೆರೆದಿದ್ದ ಕನ್ನಡ ಕರಾವಳಿಯ ಶ್ರೀಮಂತ ಯಕ್ಷಗಾನ ಕಲೆಯನ್ನು ಪ್ರತೀ ಮನೆಮನಕ್ಕೆ ತಲುಪಿಸಿ ಗತಿಸಿದ ವೈಭವವನ್ನು ಪುನರ್ ಪಡೆಯಲು ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಯತ್ನಿಸಲಿದೆ. ಯಕ್ಷಗಾನ ಇಂದು ಸಮಷ್ಠಿಯನ್ನು ಒಳಗೊಂಡ ಪರಿಪೂರ್ಣ ಕಲೆಯಾಗಿದೆ. ಇಲ್ಲಿ ವೃತ್ತಪರ ಕಲಾವಿದರದಲ್ಲದೆ, ಹವ್ಯಾಸಿಯಾಗಿ ವೈದ್ಯರು, ಇಂಜೀನಿಯರ್‌ಗಳು, ಸಾಹಿತಿಗಳು, ಅಧ್ಯಾಪಕರು ಹೀಗೆ ಎಲ್ಲಾ ಕ್ಷೇತ್ರದ ವ್ಯಕ್ತಿಗಳು ತಮ್ಮನ್ನು ಈ ಕಲೆಗೆ ಮುಡಿಪಾಗಿಟ್ಟಿದ್ದಾರೆ. ಇದು ಯಕ್ಷಗಾನ ಕಲೆಯ ವೈಶಿಷ್ಟ್ಯ ಇದನ್ನು ಅನ್ಯ ಕಲೆಗಳಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. ತೆಂಕುತಿಟ್ಟು, ಬಡಗುತಿಟ್ಟು, ಉತ್ತರ…
ಉಡುಪಿ : ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ಇವರು ಯಕ್ಷ ಸಂಜೀವ ಪ್ರತಿಷ್ಠಾನದ ಸಹಕಾರದೊಂದಿಗೆ ರಾಷ್ಟ್ರೀಯ ನಾಟ್ಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಆಯೋಜಿಸಿದ ಯಕ್ಷಗಾನ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ 21 ಮೇ 2025ರಂದು ತಿಂಗಳೆ ಎನ್. ಎಸ್. ಡಿ. ಪ್ರತಿಷ್ಠಾನದಲ್ಲಿ ನಡೆಯಿತು. ಶಿಬಿರವನ್ನು ಉದ್ಘಾಟಿಸಿದ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಮಾತನಾಡಿ “ಯಕ್ಷಗಾನವನ್ನು ಯೋಗ್ಯ ಗುರುಗಳಿಂದ ಕಲಿತರೆ ಮುಂದಿನ ಪೀಳಿಗೆಗೆ ಕಲೆಯನ್ನು ಸಮರ್ಪಕವಾಗಿ ದಾಟಿಸಬಹುದಾಗಿದೆ. ಯಕ್ಷಗಾನ ಕಲಿತವರೆಲ್ಲ ಗುರುವಾಗಲು ಸಾಧ್ಯವಿಲ್ಲ. ಸಂಜೀವರಲ್ಲಿ ಯಕ್ಷಗಾನ ತರಬೇತಿ ಪಡೆಯುವುದೇ ಪೂರ್ವ ಜನ್ಮದ ಸುಕೃತ ಫಲ” ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುರು ಬನ್ನಂಜೆ ಸಂಜೀವ ಸುವರ್ಣ ಮಾತನಾಡಿ “ಕಲಿಯುವ ತುಡಿತ ಸಾಧನೆಯ ಛಲ ಇವೆರಡೂ ಇದ್ದರೆ ಯಾವುದೂ ಅಸಾಧ್ಯವಲ್ಲ” ಎಂದರು. ತಿಂಗಳೆ ಪ್ರತಿಷ್ಠಾನದ ಪ್ರೊಫೆಸರ್ ವಿವೇಕ್, ಭಾಗವತರಾದ ಲಂಬೋದರ ಹೆಗಡೆ ನಿಟ್ಟೂರು, ಶ್ರೀಧರ ಹೆಗಡೆ ಉಪಸ್ಥಿತರಿದ್ದರು. ಸುಮಾರು 30 ವಿದ್ಯಾರ್ಥಿಗಳು 10 ದಿನಗಳ ಕಾಲ ಈ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಶಿಷ್ಯರಾದ ಶ್ರುತಿ ಬಂಗೇರ,…
ಮಂಗಳೂರು : ಡಾ. ದಿನಕರ ಎಸ್. ಪಚ್ಚನಾಡಿ ದಂಪತಿ ಸಂತಾನ ಪ್ರಾಪ್ತಿಗಾಗಿ ಹೊತ್ತ ಹರಕೆಯ ಫಲಶ್ರುತಿಗೆ ಹಮ್ಮಿಕೊಂಡ ಪುತ್ರಕಾಮೇಷ್ಠಿ ಯಕ್ಷಗಾನ ತಾಳಮದ್ದಳೆ ಸಪ್ತಾಹದ ಉದ್ಘಾಟನಾ ಸಮಾರಂಭವು ದಿನಾಂಕ 11 ಮೇ 2025ರಂದು ಮಂಗಳೂರಿನ ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆವರಣದಲ್ಲಿ ನಡೆಯಿತು. ಸಪ್ತಾಹವನ್ನು ಉದ್ಘಾಟಿಸಿದ ಶ್ರೀರಾಮಕೃಷ್ಣ ಮಠ ಮಂಗಳೂರು ಇದರ ಅಧ್ಯಕ್ಷರಾದ ಪರಮಪೂಜ್ಯ ಸ್ವಾಮಿ ಜಿತಕಾಮಾಂದಜೀ ಮಹಾರಾಜ್ ಮಾತನಾಡಿ “ಭಕ್ತಿಯೇ ಬದುಕಿನ ಶಕ್ತಿ, ಅದೇ ಒಂದು ನಂಬಿಕೆ. ಸೇವೆಯೇ ವಿಕಾಸಕ್ಕೆ ಪೂರಕವಾಗಿರುತ್ತದೆ. ಜೀವನದ ನಡವಳಿಕೆಯಲ್ಲಿ ಇರಬೇಕಾದುದು ಶ್ರಧ್ದೆ. ಶ್ರಧ್ದೆ ಮತ್ತು ವಿಶ್ವಾಸವೇ ಯಶಸ್ಸಗೆ ಕಾರಣ” ಎಂದು ನುಡಿದರು. ಅಷ್ಟ ದಂಪತಿ ಸಂಮಾನದ ನಿಮಿತ್ತ, ಶ್ರೀಮತಿ ಸುಚೇತಾ ಜೋಷಿ ಅವರೊಂದಿಗೆ ಸಂಮಾನ ಸ್ವೀಕರಿಸಿದ ಖ್ಯಾತ ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಷಿ ಮಾತನಾಡಿ “ಯಕ್ಷಗಾನದ ಮೂಲಕ ಹರಕೆ ಹೇಳುವುದು ಹಿಂದಿನಿಂದಲೂ ನಡೆದು ಬಂದ ಕ್ರಮ. ದೇವೀ ಮಹಾತ್ಮೆ ಹೆಚ್ಚು ಹರಕೆಯ ಆಟವಾಗುತ್ತಿದೆ. ಸಂತಾನಕ್ಕಾಗಿ ಪುತ್ರಕಾಮೇಷ್ಠಿ ಹಿಂದೆ ನಡೆದಿದೆ. ಈಗ ನಡೆಯುವ ಹರಕೆ ತಾಳಮದ್ದಳೆ…
ತೆಕ್ಕಟ್ಟೆ: ಧಮನಿ (ರಿ.) ತೆಕ್ಕಟ್ಟೆ ನೇತೃತ್ವದಲ್ಲಿ ಮಕ್ಕಳಿಗಾಗಿ ಹದಿನೈದು ದಿನಗಳ ವೃತ್ತಿಪರ ರಂಗ ತರಬೇತಿ ಕಾರ್ಯಾಗಾರ “ಚಿಗುರು” ಇದರ ಉದ್ಘಾಟನಾ ಸಮಾರಂಭವು ದಿನಾಂಕ 17 ಮೇ 2025ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು. ಕಾರ್ಯಾಗಾರವನ್ನು ಉದ್ಘಾಟಿಸಿದ ಖ್ಯಾತ ರಂಗ ನಿರ್ದೇಶಕ ಪ್ರಶಾಂತ್ ಶೆಟ್ಟಿ ಕೋಟ ಮಾತನಾಡಿ “ರಂಗಾಭ್ಯಾಸದ ಮೂಲಕ ಮಾನವೀಯತೆ ಗುಣಗಳನ್ನು ಕಲಿತು ಸಮಾಜಕ್ಕೆ ಮಾದರಿಯಾಗಿರುವುದು ಒಳ್ಳೆಯ ಸಂಸ್ಕಾರ. ರಂಗಭೂಮಿಯಲ್ಲಿ ಬದ್ಧತೆ, ಶಿಸ್ತು, ಅತೀ ಅಗತ್ಯ. ಪ್ರಸಿದ್ಧಿಯ ಕಡೆಗೆ ಒಲವು ಒಳಿತಲ್ಲ. ಪ್ರಸಿದ್ಧಿಯಿಂದ ಬೆಳವಣಿಗೆ ಕುಂಠಿತವಾಗುತ್ತದೆ. ನಿರಂತರ ರಂಗಕಲೆಯಲ್ಲಿ ತೊಡಗಿಕೊಂಡರೆ ತಾನೇ ತಾನಾಗಿ ಪ್ರಸಿದ್ಧಿ ಬಂದೇ ಬರುತ್ತದೆ. ಪ್ರಸಿದ್ಧಿಯ ಬೆನ್ನು ಹಿಡಿದು ಹೋಗದಿರಿ” ಎಂದು ಹೆಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ‘ಕೈಲಾಸ’ ಕಲಾಕ್ಷೇತ್ರದ ಅಧ್ಯಕ್ಷರಾದ ಹೆರಿಯ ಮಾಸ್ಟರ್ ಮಾತನಾಡಿ “ರಂಗ ಭೂಮಿಯ ಮೂಲಕ ಹೊಸ ಪ್ರಪಂಚಕ್ಕೆ ಹೊಸತನ, ಹೊಸ ಮೌಡ್ಯಗಳಿಂದ ಹೊಸ ಭಾಷ್ಯ ಬರೆದು ನಾವೀನ್ಯತೆಯನ್ನು ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ” ಎಂದರು. ರಂಗ ನಿರ್ದೇಶಕ ರೋಹಿತ್ ಎಸ್. ಬೈಕಾಡಿ ಮಾತನಾಡಿ “ಮಕ್ಕಳ ರಂಗಭೂಮಿ ಅದ್ಭುತ…
ಉಡುಪಿ : ಯಕ್ಷಗಾನ ಕಲಾರಂಗದ ಸುವರ್ಣ ಸಡಗರದ ಪ್ರಯುಕ್ತ ಯಕ್ಷಗಾನ ಕಲಾವಿದರ ಸಮಾವೇಶ ಮತ್ತು ‘ಯಕ್ಷಗಾನ ಕಲಾರಂಗ ಸುವರ್ಣ ಪುರಸ್ಕಾರ’ ಪ್ರದಾನ ಸಮಾರಂಭವನ್ನು ದಿನಾಂಕ 31 ಮೇ 2025ರಂದು ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗಿನ ಕಾರ್ಯಕ್ರಮ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ನಡೆಯಲಿದ್ದು, ಬೆಳಗ್ಗೆ 9-00 ಗಂಟೆಗೆ ಕಲಾವಿದರಿಗೆ ಕೆ.ಎಮ್.ಸಿ. ಮಣಿಪಾಲ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಯಲಿದೆ. 10-00 ಗಂಟೆಗೆ ಕರ್ಣಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಉದ್ಯಮಿ ಗೋಪಾಲ ಸಿ. ಬಂಗೇರ ಉಪಸ್ಥಿತರಿರುವರು. 10-30ಕ್ಕೆ ಮಾಧವ ಮಾತೃ ಗ್ರಾಮಂ ಕೂಡಿಯಾಟ್ಟಂ ಗುರುಕುಲಂ ತ್ರಿಶೂರ್ ಅವರಿಂದ ಕೂಡಿಯಾಟ್ಟಂ “ಸೀತಾಪಹರಣಂ-ಜಟಾಯುವಧಂ’ ಪ್ರದರ್ಶನಗೊಳ್ಳಲಿದೆ. 11.30ಕ್ಕೆ ಯಕ್ಷಗಾನ ಕಲಾವಿದರಿಗೆ ‘ಕಲೆ ಪೂರ್ಣಾವಧಿ ಉದ್ಯೋಗವಾಗಿರಬೇಕೆ ? ಉಪವೃತ್ತಿಯಾಗಿರಬೇಕೆ?’ ವಿಷಯದ ಕುರಿತು ಚರ್ಚೆ ನಡೆಯಲಿದೆ. ಅಪರಾಹ್ನ 2-30 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀ…