Author: roovari

ಬೈಂದೂರು : ಲಾವಣ್ಯ (ರಿ.) ಬೈಂದೂರು, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಬೈಂದೂರು ತಾಲೂಕು ಘಟಕ ಮತ್ತು ಅಶೋಕ ಜ್ಯುವೆಲ್ಲರ್ಸ್ ಉಪ್ಪುಂದ ಇವರ ಸಂಯುಕ್ತ ಆಶ್ರಯದಲ್ಲಿ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರಂಗ ಅಧ್ಯಯನ ಕೇಂದ್ರ ಸಾದರ ಪಡಿಸುವ ‘ಚಾರುವಸಂತ’ ನಾಟಕ ಪ್ರದರ್ಶನವು ದಿನಾಂಕ 04 ಫೆಬ್ರವರಿ 2025ರಂದು ಸಂಜೆ 5-30 ಗಂಟೆಗೆ ಯಡ್ತರೆ-ಬೈಂದೂರು ಜೆ.ಎನ್.ಆರ್. ಹೊರಾಂಗಣ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ. ನಾಡೋಜ ಹಂಪನಾ ವಿರಚಿತ ಈ ದೇಸೀ ಕಾವ್ಯದ ರಂಗರೂಪಕ್ಕೆ ಡಾ. ಜೀವನ್ ರಾಮ್ ಸುಳ್ಯ ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದು, ಡಾ. ನಾ. ದಾಮೋದರ ಶೆಟ್ಟಿ ಇವರು ರಂಗರೂಪ ನೀಡಿರುತ್ತಾರೆ.

Read More

ಭಾರತೀಯ ಸಂಸ್ಕೃತಿಯಲ್ಲಿ ನೃತ್ಯ ಅತ್ಯಂತ ಪ್ರೌಢವಾದ, ಶ್ರೇಷ್ಠವಾದ ಮತ್ತು ಪ್ರಾಚೀನವಾದ ಕಲೆ. ದೇವರ ವರದಾನವಾದ ಈ ಕಲೆ ಹೃದಯದ ಭಾಷೆಯಾಗಿದೆ. ಶ್ರದ್ಧಾ ಭಕ್ತಿಯಿಂದ ಇದನ್ನು ನಮ್ಮಲ್ಲಿ ಮೈಗೂಡಿಸಿಕೊಳ್ಳಬೇಕು, ಆಗ ಮಾತ್ರ ಕಲೆ ನಮಗೆ ಒಲಿಯುತ್ತದೆ. ಹಲವಾರು ಖ್ಯಾತಿವೆತ್ತ ಭರತನಾಟ್ಯ ಕಲಾವಿದರು ನಮ್ಮಲ್ಲಿದ್ದಾರೆ. ಅವರಲ್ಲಿ ಪ್ರತಿಭಾವಂತೆಯಾದ ಪ್ರತಿಭಾ ಪ್ರಹ್ಲಾದ್ ಒಬ್ಬರು. ಭರತನಾಟ್ಯ ಕಲಾವಿದೆ, ಶಿಕ್ಷಣ ತಜ್ಞೆ, ನೃತ್ಯ ಸಂಯೋಜಕಿ, ಕಲಾ ನಿರ್ವಾಹಕಿ ಮತ್ತು ಲೇಖಕಿಯಾಗಿ ಭರತ ನಾಟ್ಯಕಲೆಯನ್ನು ಮೇರು ಸ್ಥಾನಕ್ಕೆ ಕೊಂಡೊಯ್ದವರು ಪದ್ಮಶ್ರೀ ಪ್ರತಿಭಾ ಪ್ರಹ್ಲಾದ್. ನೃತ್ಯದ ಮೇಲೆ ಅಪಾರ ಆಸಕ್ತಿ ಇದ್ದ ಪ್ರತಿಭಾ ತಮ್ಮ ನಾಲ್ಕರ ಹರೆಯದಲ್ಲಿಯೇ ಯಾವುದೇ ಸಾಂಪ್ರದಾಯಿಕ ತರಬೇತಿಯಿಲ್ಲದೆ ಪ್ರತಿಭೆಯನ್ನು ಹೊರಹೊಮ್ಮಿಸಿದವರು. ಆದರೆ ಹೆತ್ತವರು ಇವರ ಪ್ರತಿಭೆಯನ್ನು ಅರಿತುಕೊಂಡು ಅದಕ್ಕೆ ಬೇಕಾದ ಪ್ರೋತ್ಸಾಹವನ್ನು ನೀಡಿದರು. ಯು. ಎಸ್. ಕೃಷ್ಣ ರಾವ್, ಕಲಾ ನಿಧಿ ನಾರಾಯಣ ಮತ್ತು ವಿ. ಎಸ್. ಮುತ್ತುಸ್ವಾಮಿ ಪಿಳ್ಳೆ ಇವರುಗಳು ಭರತನಾಟ್ಯ ಮತ್ತು ವೆಂಪಟ್ಟಿ ಚಿನ್ನ ಸತ್ಯ ಅವರು ಕೂಚಿಪುಡಿಯ ನೃತ್ಯ ಶಿಕ್ಷಣಕ್ಕೆ ಬುನಾದಿಯನ್ನು ಹಾಕಿದ…

Read More

ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿಯ ಸ್ಮರಣಾರ್ಥ ಆಯೋಜಿಸಿದ ‘ಗಾಂಧಿ ಸ್ಮೃತಿ’ ಕಾರ್ಯಕ್ರಮವು ದಿನಾಂಕ 30 ಜನವರಿ 2025ರ ಗುರುವಾರದಂದು ಬೆಳಿಗ್ಗೆ ಘಂಟೆ 11.00ಕ್ಕೆ ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ನಡೆಯಲಿದೆ. ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ನಾನಿ ಅಲ್ವಾರಿಸ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಅಕಾಡೆಮಿಯು ಮಹಾತ್ಮ ಗಾಂಧೀಜಿಯ ಬಗ್ಗೆ ಮುದ್ರಿಸಿದ ‘ಮನ್ಯಾಸಂಸ್ರಾಚೊ ಮಹಾನ್ ಉಜ್ವಾಡ್- ಮಹಾತ್ಮ ಗಾಂಧೀಜಿ’ ಪುಸ್ತಕವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಪಿ. ಎಲ್. ಧರ್ಮ ಇವರು ಲೋಕಾರ್ಪಣೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿಗಳಾದ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಜೆ. ನ., ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೊ- ಅಪರೇಟಿವ್ ಸೊಸೈಟಿ ಕಾರವಾರದ ಅಧ್ಯಕ್ಷರಾದ ಶ್ರೀ ಜೋರ್ಜ್ ಎನ್. ಫರ್ನಾಂಡಿಸ್‌ ಭಾಗವಹಿಸಲಿರುವರು. ಡಾ. ಅಲ್ವಿನ್ ಡೆಸಾ ಪುಸ್ತಕದ ಬಗ್ಗೆ ಮಾತಾನಾಡಲಿರುವರು.

Read More

ಸುಂಟಿಕೊಪ್ಪ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರದ ವತಿಯಿಂದ ಸ್ವಸಹಾಯ ಸಂಘದ ಸದಸ್ಯರಿಗೆ ಪುಸ್ತಕ ಓದಿ ವಿಮರ್ಶೆ ಮಾಡುವ ಕಾರ್ಯಕ್ರಮ ದಿನಾಂಕ 28 ಜನವರಿ 2025ರಂದು ಮಂಜಿಕರ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಮಾಲಿನಿ ನಾತನಾಡಿ “ಪ್ರತಿಯೊಬ್ಬರೂ ಪುಸ್ತಕವನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಇದು ವ್ಯಕ್ತಿಯ ವ್ಯಕ್ತಿತ್ವ ವಿಕಾಸಗೊಳಿಸುತ್ತದೆ. ಇಂದಿನ ದಿನಗಳಲ್ಲಿ ನಾವುಗಳು ಪುಸ್ತಕಗಳನ್ನು ಓದುವ ಹವ್ಯಾಸದಿಂದ ದೂರ ಉಳಿದುಕೊಳ್ಳುತ್ತಿದ್ದೇವೆ. ಇದರಿಂದ ನಮ್ಮ ಜ್ಞಾನವು ಕುಂಠಿತಗೊಳ್ಳುತ್ತಿದೆ. ನಾವು ನಿತ್ಯ, ಪುಸ್ತಕಗಳನ್ನು ಓದುವುದರಿಂದ ವೈಯಕ್ತಿಕ ಜ್ಞಾನವನ್ನು ಬೆಳೆಸಿಕೊಳ್ಳಬಹುದಾಗಿದೆ.” ಎಂದು ಕರೆ ನೀಡಿದರು. ಜನನಿ ತಂಡದ ಸದಸ್ಯೆಯಾದ ರತ್ನ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳಾದ ಜನನಿ, ಭೂಮಿಕ, ಕನ್ನಿಕ, ಭಗವತಿ ಹಾಗೂ ಧೃತಿ ಸಂಘದ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸದಸ್ಯರಿಗೆ ಪುಸ್ತಕ…

Read More

ಮುಂಬಯಿ : ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ ಮತ್ತು ಮೈಸೂರು ಅಸೋಸಿಯೇಷನ್ ಮುಂಬೈ ಇದರ ಸಂಯುಕ್ತ ಆಶ್ರಯದಲ್ಲಿ ‘ಬಂಗಾರದ ಹಬ್ಬ ದತ್ತಿ ಉಪನ್ಯಾಸ ಮಾಲಿಕೆ -2025′ ಕಾರ್ಯಕ್ರಮವು ದಿನಾಂಕ 25 ಜನವರಿ 2025ರಂದು ನಡೆಯಿತು. ‘ರಾಮಾಯಣದಲ್ಲಿ ಮೌಲ್ಯ ಸಂಘರ್ಷ’ ವಿಷಯದ ಕುರಿತು ಕಲಾವಿದರು ಮತ್ತು ವಿದ್ವಾಂಸರಾದ ಡಾ. ಪ್ರಭಾಕರ ಜೋಶಿ ಅವರ ಮಾತುಗಳಿಗೆ ಶ್ರೋತೃವಾಗುವ ಸದವಕಾಶವೊಂದು ನನ್ನದಾಯಿತು. ಅವರ ಮಾತು, ವಿಷಯ ಮಂಡನೆ ನಾವೆಲ್ಲ ನಿರೀಕ್ಷಿಸಿದಂತೆ ವಿದ್ವತ್ಪೂರ್ಣವಾಗಿತ್ತು ಅಲ್ಲದೆ ಸರಳವಾಗಿತ್ತು. ನಡುನಡುವೆ ದೈನಂದಿನ ಜೀವನದ ಆಗುಹೋಗುಗಳನ್ನು ಹೇಳುತ್ತಾ, ಲಘು ಹಾಸ್ಯ ಮಿಶ್ರಿತ ಮಾತುಗಳನ್ನು ಆಡುತ್ತಾ ಪ್ರೇಕ್ಷಕರನ್ನು ಹಿಡಿದಿಡುವ ಪರಿ ಹಿತವಾಗಿತ್ತು. ಒಂದು ಜನಾಂಗದ ಸಂಸ್ಕೃತಿಯನ್ನು ಮಹಾಕಾವ್ಯಗಳು ಹೇಳುತ್ತವೆ ಅನ್ನುತ್ತಲೇ ರಾಮಾಯಣವು ಜನರ ಭಾವನೆಗಳನ್ನು ಹೇಗೆ ಹೇಳ್ತದೆ ಅನ್ನುವುದನ್ನು ಅವರು ರಾಮಾಯಣದಲ್ಲಿ ಬರುವ ಸನ್ನಿವೇಶಗಳನ್ನು ಉದಾಹರಿಸುತ್ತಾ ಹೋದರು. ಸಾವಿರಾರು ವರ್ಷಗಳ ಹಿಂದೆ ವಾಲ್ಮೀಕಿ ಇಂತಹದ್ದೊಂದು ಮಹಾಕಾವ್ಯ ರಚಿಸಿ ರಾಮನ ಪಾತ್ರದ ಸಂಘರ್ಷಗಳನ್ನು ಚಿತ್ರಿಸಿರುವುದು ಅಚ್ಚರಿಯನ್ನು ಉಂಟು ಮಾಡುವಂತಹದ್ದು. ರಾಮಾಯಣದಲ್ಲಿ ಅನೇಕ ಸಂಘರ್ಷದ ಸನ್ನಿವೇಶಗಳು…

Read More

ಬೆಳಗ್ಗೆ ರೇಡಿಯೋ ಕೇಳುತ್ತಾ, ವಾರ್ತಾ ಪತ್ರಿಕೆ ಮತ್ತು ಚಹಾಕ್ಕಾಗಿ ಕಾಯುವ ಕಾಲವೊಂದಿತ್ತು. ಇಂದಿನ ದಿನಗಳಲ್ಲಿ ಎಲ್ಲಾ ಸುದ್ದಿಗಳೂ ಮೊಬೈಲ್ ನಲ್ಲಿ ಸಿಗುತ್ತವೆ. ಡಿಜಿಟಲ್ ಮಾಧ್ಯಮ ವಿಶೇಷವಾಗಿ ಸದ್ದು ಮಾಡುತ್ತಿರುವ ಈ ಕಾಲಘಟ್ಟದಲ್ಲಿ ವಾರ್ತಾ ಪತ್ರಿಕೆಯನ್ನು ಓದುವ ವಾಚಕರ ಒಂದು ವರ್ಗ ಈಗಲೂ ಇದೆ ಎಂಬುದು ಸಂತೋಷದ ವಿಷಯ. ಎಷ್ಟು ಕೆಲಸದ ಒತ್ತಡವಿದ್ದರೂ, ಆರಾಮಾಗಿ ಕುಳಿತು ಚಹವನ್ನು ಸವಿಯುತ್ತಾ ವೃತ್ತಪತ್ರಿಕೆಗಳನ್ನು ಹಿಡಿದುಕೊಂಡು ಓದುವುದೆಂದರೆ ಅದರಿಂದ ದೊರೆಯುವ ಸಂತೋಷವೇ ಬೇರೆ. ಹಬ್ಬ ಹರಿದಿನಗಳಲ್ಲಿ ಒಂದು ದಿನ ಪೇಪರ್ ಇಲ್ಲ ಅಂದ್ರೆ, ಆ ದಿನದ ಬೆಳಗಿಗೆ ಸ್ವಾರಸ್ಯವೇ ಇರುವುದಿಲ್ಲ. ದಿನ ಪರಿಪೂರ್ಣವೆಂದಿಸಿಕೊಳ್ಳುವುದೇ ಪೇಪರ್ ಕೈಗೆ ಬಂದಾಗ. ಇದು ಮುದ್ರಣ ಮಾಧ್ಯಮ ಕ್ಷೇತ್ರಕ್ಕೆ ದೊರೆತ ಗೌರವ. ಸಾಮಾಜಿಕ ಮಾಧ್ಯಮಗಳಿಗೆ ನಾವು ವಾರ್ತೆ ತಲುಪಿಸಲು ಮೊದಲು ಅಲೆದಾಡಬೇಕಿತ್ತು. ಈಗ ಇದೆಲ್ಲವೂ ನಾವಿರುವಲ್ಲಿoದಲೇ ಸಾಧ್ಯವಾಗುತ್ತಿದೆ ಎಂಬುದು ಒಂದು ರೀತಿಯಲ್ಲಿ ಸುದ್ದಿ ಮಾಧ್ಯಮಗಳ ಪ್ರಗತಿಗೆ ಸಾಕ್ಷಿಯಾಗಿದೆ. ನಮ್ಮ ಸುತ್ತಮುತ್ತ, ದೇಶ – ವಿದೇಶಗಳಲ್ಲಿ ಏನು ನಡೆಯುತ್ತಿದೆ ಎಂಬ ವಿಚಾರ ಮನೆಮನೆಗಳಿಗೆ ತಲುಪುವುದು…

Read More

ಮಂಗಳೂರು : ಅರೆಹೊಳೆ ಪ್ರತಿಷ್ಠಾನ, ರಂಗ ಅಧ್ಯಯನ ಕೇಂದ್ರ ಸಂತ ಅಲೋಶಿಯಸ್ ಕಾಲೇಜು ಪರಿಗಣಿತ ವಿಶ್ವವಿದ್ಯಾನಿಲಯ, ಅಸ್ತಿತ್ವ (ರಿ.) ಮತ್ತು ಕಲಾಭಿ (ರಿ.) ಆಯೋಜಿಸುವ ರಂಗರಥ ಟ್ರಸ್ಟ್ ಬೆಂಗಳೂರು ಅಭಿನಯಿಸುವ ‘ಧರ್ಮನಟಿ’ ನಾಟಕ ಪ್ರದರ್ಶನವನ್ನು ದಿನಾಂಕ 31 ಜನವರಿ 2025ರಂದು ಸಂಜೆ ಗಂಟೆ 6-45ಕ್ಕೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ರಂಗಭೂಮಿ ಉಡುಪಿ ಆಯೋಸಿದ್ದ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ ನಾಟಕ ಇದಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದಲ್ಲಿ ಪ್ರಸ್ತುತಗೊಳ್ಳಲಿರುವ ಸಂಗೀತಮಯ ಐತಿಹಾಸಿಕ ಕನ್ನಡ ನಾಟಕಕ್ಕೆ ಆಸಿಫ್ ಕ್ಷತ್ರಿಯ ಮತ್ತು ಶ್ವೇತಾ ಶ್ರೀನಿವಾಸ್ ಇವರು ನಿರ್ದೇಶನ ಮಾಡಿದ್ದು, ಭಿನ್ನಷಡ್ಜ ಸಂಗೀತದಲ್ಲಿ ಸಹಕರಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8050157443 (ಶ್ವೇತಾ ಶ್ರೀನಿವಾಸ್) ಅಥವಾ 9448286776 ಆಸಿಫ್ ಕ್ಷತ್ರಿಯ ಇವರನ್ನು ಸಂಪರ್ಕಿಸಿ. ರಂಗರಥ ಸಂಸ್ಥೆಯ ಬಗ್ಗೆ : ಭಾರತೀಯ ಪ್ರದರ್ಶನ ಕಲಾ ಸಂಸ್ಥೆಯಾದ ‘ರಂಗರಥ’ ಎಂಬುದು ರಂಗಪ್ರೇಕ್ಷಕರ ಮನಸೂರೆಗೊಂಡ ಬೆಂಗಳೂರಿನ ಕೆಲವು…

Read More

ಬೆಂಗಳೂರು : ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ.) ಸಿದ್ಧನಹಳ್ಳಿ ಇದರ ವತಿಯಿಂದ ಕವಿ ಚಿಂತಕ, ಅಧ್ಯಾಪಕರಾದ ಶ್ರೀ ಜಿ. ನಾಗರಾಜ್ ನಾದಲೀಲೆ ಇವರ ಸಮ್ಮೇಳನಾಧ್ಯಕ್ಷತೆಯಲ್ಲಿ ದಿನಾಂಕ 02 ಫೆಬ್ರವರಿ 2025ರಂದು ಬೆಂಗಳೂರಿನ ಶೇಷಾದ್ರಿಪುರಂ ಮೊದಲನೆಯ ಮಹಡಿ ಕಾನ್ಫ್ ರೆನ್ಸ್ ಹಾಲ್ ನಲ್ಲಿ ಬೆಳಗ್ಗೆ ಗಂಟೆ 9-30ರಿಂದ ಗಾಂಧೀಜಿ ವಿವೇಕಾನಂದ ಪ್ರಣಿತ ರಾಜ್ಯ ಮಟ್ಟದ ಎಂಟನೇ ಯುವಜನ ಸಮ್ಮೇಳನವನ್ನು ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ಡಾ. ಕೃಷ್ಣ ಹಾನ್ ಬಾಳ್ ಹಾಗೂ ಶ್ರೀಮತಿ ಜಯಶ್ರೀ ರಾಜು ಅವರ ಕೃತಿಗಳ ಲೋಕಾರ್ಪಣೆ, ವಿಚಾರಗೋಷ್ಠಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಬೆಳಿಗ್ಗೆ 9-30 ಗಂಟೆಗೆ ವಿಶ್ರಾಂತ ಮುಖ್ಯೋಪಾಧ್ಯಾಯರು ಶ್ರೀ ಏಕಾಂಬರೇಶ್ವರ್ ಇವರಿಂದ ಧ್ವಜಾರೋಹಣ ಮತ್ತು ಹಿರಿಯ ಸಾಹಿತಿ ಶ್ರೀಮತಿ ಅಂಬುಜಾ ಪ್ರಕಾಶ್ ಇವರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ ಈ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಯುವ ಸಾಹಿತಿ…

Read More

ಉಡುಪಿ : ರಾಜ್ಯದ ಹೆಸರಾಂತ ಹವ್ಯಾಸಿ ನಾಟಕ ಸಂಸ್ಥೆಯಾದ ‘ರಂಗಭೂಮಿ (ರಿ.) ಉಡುಪಿ’ ಇದರ ವತಿಯಿಂದ ಮೂರು ದಿನಗಳ ‘ರಂಗಭೂಮಿ ರಂಗೋತ್ಸವ’ವನ್ನು ದಿನಾಂಕ 01 ಫೆಬ್ರವರಿ 2025ರಿಂದ 03 ಫೆಬ್ರವರಿ 2025ರವರೆಗೆ ಪ್ರತಿದಿನ ಸಂಜೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 01 ಫೆಬ್ರವರಿ 2025ರಂದು ಸಂಜೆ ಗಂಟೆ 5-45ಕ್ಕೆ ‘ರಂಗಭೂಮಿ ರಂಗೋತ್ಸವ’ದ ಉದ್ಘಾಟನೆಯನ್ನು ರಂಗಭೂಮಿ ಇದರ ಗೌರವಾಧ್ಯಕ್ಷರಾದ ಡಾ. ಹೆಚ್.ಎಸ್. ಬಲ್ಲಾಳ್ ಇವರ ನೆರವೇರಿಸಲಿದ್ದು, ರಂಗಭೂಮಿ ಇದರ ಅಧ್ಯಕ್ಷರಾದ ಡಾ. ತಾಲ್ಲೂರು ಶಿವರಾಮ ಶೆಟ್ಟಿ ಇವರು ಅಧ್ಯಕ್ಷತೆಯನ್ನು ವಹಿಸಲಿರುವರು. ಸಭಾ ಕಾರ್ಯಕ್ರಮದಲ್ಲಿ 45ನೇ ರಾಜ್ಯ ಮಟ್ಟದ ಕನ್ನಡ ನಾಟಕೋತ್ಸವ ಸ್ಪರ್ಧೆಯ ಬಹುಮಾನ ವಿತರಣೆ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಪ್ರಥಮ ಪ್ರಶಸ್ತಿ ವಿಜೇತ ನಾಟಕದ ಮರು ಪ್ರದರ್ಶನಗೊಳ್ಳಲಿದೆ. ಬೆಂಗಳೂರಿನ ರಂಗರಥ ಟ್ರಸ್ಟ್ (ರಿ.) ತಂಡದವರು ಆಸಿಫ್ ಕ್ಷತ್ರಿಯ ಮತ್ತು ಶ್ವೇತಾ ಶ್ರೀನಿವಾಸ್ ನಿರ್ದೇಶನದಲ್ಲಿ ‘ಧರ್ಮನಟಿ’ ಐತಿಹಾಸಿಕ ನಾಟಕ ಪ್ರದರ್ಶನ ನೀಡಲಿದ್ದಾರೆ. ದಿನಾಂಕ 02 ಫೆಬ್ರವರಿ 2025ರಂದು ಸಂಜೆ…

Read More

ಮಂಗಳೂರು : ಬಿಜೈಯಲ್ಲಿರುವ ನೃತ್ಯ ಸಂಸ್ಥೆ ನೃತ್ಯಾಂಗನ್ ಪ್ರಸ್ತುತ ಪಡಿಸುವ ಭಾರತೀಯ ಶಾಸ್ತ್ರೀಯ ನೃತ್ಯ ಸರಣಿಯ 12ನೇ ಆವೃತ್ತಿ ‘ಸಮರ್ಪಣ 2024’ ನೃತ್ಯೋತ್ಸವ ಕಾರ್ಯಕ್ರಮವನ್ನು ದಿನಾಂಕ 01 ಮತ್ತು 02 ಫೆಬ್ರವರಿ 2025ರಂದು ಸಂಜೆ ಗಂಟೆ 5-45ಕ್ಕೆ ಡಾನ್ ಬೋಸ್ಕೋ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 01 ಫೆಬ್ರವರಿ 2025ರಂದು ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಕಲಾ ನಿರ್ದೇಶಕರಾದ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ದಂಪತಿಗಳು ದೀಪ ಪ್ರಜ್ವಲನೆ ಮಾಡಿ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಇಟಲಿಯ ಕಲಾವಿದೆ ಲುಕ್ರೆಜಿಯಾ ಮ್ಯಾನಸ್ಕೋಟಿ ಮತ್ತು ಬೆಂಗಳೂರಿನ ಸಂಜನಾ ರಾಜೇಶ್ ನೃತ್ಯ ಪ್ರದರ್ಶನ ನೀಡಲಿದ್ದಾರೆ. ದಿನಾಂಕ 02 ಫೆಬ್ರವರಿ 2025ರಂದು ಕೇರಳದ ಕಲಾಮಂಡಲಂ ಪ್ರಜೀಶಾ ಗೋಪಿನಾಥ್, ಬೆಂಗಳೂರಿನ ಕಾವ್ಯಾ ಕಾಶಿನಾಥನ್ ಹಾಗೂ ಮಂಗಳೂರಿನ ಅಂಕಿತಾ ರೈ ಇವರುಗಳು ಏಕವ್ಯಕ್ತಿ ಶಾಸ್ತ್ರೀಯ ಭರತನಾಟ್ಯ ಪ್ರಸ್ತುತ ಪಡಿಸಲಿದ್ದಾರೆ. ಕಲಾಸಕ್ತರಿಗೆ ಉಚಿತ ಪ್ರವೇಶ ಎಂದು ನೃತ್ಯಾಂಗನ್ ನಿರ್ದೇಶಕಿ ಕಲಾವಿದೆ ರಾಧಿಕಾ ಶೆಟ್ಟಿ ತಿಳಿಸಿದ್ದಾರೆ.

Read More