Author: roovari

ಆಲ್ ಔಟ್, ನಾಕ್ ಔಟ್.. ಶಬ್ದಗಳನ್ನು ಧಾರಳ ಕೇಳಿ ಮನನ ಮಾಡಿಕೊಂಡಿರುವ ನಮಗೆ ಯಾಕೋ ಗೊತ್ತಿಲ್ಲ ಈ ‘ಲೀಕ್ ಔಟ್’ ಮಾತ್ರ ಅಷ್ಟು ಸಹ್ಯವಲ್ಲ ಕೇಳಲು. ( ಇದೇ ಕಾರಣಕ್ಕೆ ಕೆಲವು ಕಡೆ ನಾಟಕ ಪ್ರದರ್ಶನಕ್ಕೆ ಒಪ್ಪುತ್ತಿಲ್ಲವಂತೆ!) ಆದರೆ ಮಂಗಳೂರು ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ  ನಡೆದ ನಟಿ ಅಕ್ಷತಾ ಪಾಂಡವಪುರ ಅವರ ಏಕವ್ಯಕ್ತಿ, ಆಪ್ತ ರಂಗಭೂಮಿ ಆಧಾರದ ಅತೀ ಸರಳ ರಂಗಸಜ್ಜಿಕೆಯ ‘ಲೀಕ್ ಔಟ್’ ನಾಟಕ ಸುಮಾರು ತೊಂಭತ್ತು ನಿಮಿಷ ಒಂದು ಹೊಸ ಆನುಭವ ನೀಡಿದ್ದು ಸುಳ್ಳಲ್ಲ. ಆಧುನಿಕ ರಂಗಭೂಮಿಯ ಮುಂದುವರಿದ ಭಾಗವಾಗಿ ಆಪ್ತ ರಂಗಭೂಮಿ ಈಗೀಗ ಅಲ್ಲಲ್ಲಿ ಹೊಸದಾಗಿ ಕಂಡುಬರುತ್ತಿರುವ ವಿದ್ಯಮಾನ. ಪ್ರೇಕ್ಷಕರನ್ನು ಸಂದರ್ಭಾನುಸಾರ ನಟ ಹಾಗೂ ನಟಿಯರನ್ನಾಗಿ, ನಾಟಕದ ಒಂದು ಭಾಗವನ್ನಾಗಿ ಮಾಡುವ ಈ ಪ್ರಕ್ರಿಯೆ ಸ್ವಲ್ಪ ಸಾವಾಲಿನದ್ದೆ ನಿಜ. ಇಂತಹ ಸನ್ನಿವೇಶದಲ್ಲಿ ತಾನೇ ಬರೆದ ಕಥಾಸಂಕಲನ (ಲೀಕ್ ಔಟ್) ದ ಕಥೆಗಳಲ್ಲಿ  ಪ್ರತಿ ಬಾರಿ ಎರಡನ್ನು ಆಯ್ದು ಅದಕ್ಕೆ ನಾಟಕ ರೂಪನೀಡಿ ಅವುಗಳಲ್ಲಿ ಬರುವ ಪಾತ್ರಗಳಲ್ಲಿ ಕೆಲವನ್ನು…

Read More

ಪುತ್ತೂರು : ಪುತ್ತೂರು ಸಮೀಪದ‌ ಪಾದೆಕರ್ಯ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ವಿಷ್ಣು ಭಟ್ ಪಾದೆಕರ್ಯರ ನೇತೃತ್ವದಲ್ಲಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ವತಿಯಿಂದ ‘ಭೀಷ್ಮ ಪ್ರತಿಜ್ಞೆ’ ತಾಳಮದ್ದಳೆಯು ದಿನಾಂಕ 24-02-2024ರಂದು ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಭವ್ಯಶ್ರೀ ಕುಲ್ಕುಂದ ಹಾಗೂ ಚೆಂಡೆ ಮದ್ದಳೆಗಳಲ್ಲಿ ಲಕ್ಷ್ಮೀಶ ಬೆಂಗ್ರೋಡಿ, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಗಣೇಶ್ (ಶಂತನು), ಗಾಯತ್ರಿ ಹೆಬ್ಬಾರ್ (ದಾಶರಾಜ), ಜಯಂತಿ ಹೆಬ್ಬಾರ್ (ದೇವವೃತ), ಮನೋರಮಾ ಜಿ. ಭಟ್ (ಮತ್ಸ್ಯಗಂಧಿ) ಮತ್ತು ಭಾರತೀ ರೈ ಅರಿಯಡ್ಕ (ಮಂತ್ರಿ) ಸಹಕರಿಸಿದರು. ನಿರ್ದೇಶಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ಮನೋರಮಾ ಜಿ. ಭಟ್ ವಂದಿಸಿದರು.

Read More

ಕರಾವಳಿಯ ಗಂಡು ಕಲೆ ಯಕ್ಷಗಾನ. ಇಂತಹ ಗಂಡು ಕಲೆಯಲ್ಲಿ ಅನೇಕ ಮಹಿಳಾ ಕಲಾವಿದರು ಮಿಂಚುತ್ತಿದ್ದಾರೆ. ಹೀಗೆ ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಕಲಾವಿದೆ ಪೂಜಾ ಆಚಾರ್ಯ. 10.06.2002ರಂದು ಪ್ರಹ್ಲಾದ್ ಆಚಾರ್ಯ ಹಾಗೂ ಪೂರ್ಣಿಮ ಆಚಾರ್ಯ ಇವರ ಮಗಳಾಗಿ ಜನನ. Msc Psychology ಇವರ ವಿದ್ಯಾಭ್ಯಾಸ. Dr. ರಾಧಾಕೃಷ್ಣ ಉರಾಳ,  ಭರತ್ ರಾಜ್ ಪರ್ಕಳ, ಸುಬ್ಬರಾಯ ಹೆಬ್ಬಾರ್, ರವೀಶ್ ಐನಬೈಲ್, ನಿತ್ಯಾನಂದ ನಾಯಕ್ ಇವರ ಯಕ್ಷಗಾನ ಗುರುಗಳು. ಎ.ಪಿ  ಫಾಟಕ್ ಬಳಿ ಮದ್ದಳೆ ಅಭ್ಯಾಸ ಹಾಗೂ ಭಾಗವತಿಕೆಯನ್ನು ಪ್ರಸನ್ನಕುಮಾರ್ ಹೆಗ್ಡೆ ಬಳಿ ಅಭ್ಯಾಸ ಮಾಡುತ್ತಿದ್ದಾರೆ. ಪ್ರಸಂಗದ ಪದ್ಯ ಪುಸ್ತಕ ಓದುವುದು. ಪಾತ್ರದ ನಿರ್ವಹಣೆ ಹೇಗಿರಬೇಕು ಎನ್ನುವುದನ್ನು YouTube ಅಲ್ಲಿ ಸಿಗುವ ವೀಡಿಯೋಗಳನ್ನು ನೋಡಿ, ಆ ಪಾತ್ರ ನಿರ್ವಹಿಸಿದ ಬೇರೆ ಬೇರೆ ಮಹನೀಯರ ಶೈಲಿ ಗಮನಿಸಿ, ನನಗೆ ಬೇಕಾದದ್ದನ್ನು ಅನುಕರಣೆ ಮಾಡಿ, ನನ್ನತನವನ್ನು ಅದಕ್ಕೆ ಅಳವಡಿಸಿ ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಪೂಜಾ ಆಚಾರ್ಯ. ಎಲ್ಲ ಪ್ರಸಂಗಗಳಲ್ಲಿ ಅದರದ್ದೇ…

Read More

ಮಂಗಳೂರು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಮೂರು ದಿನಗಳ ಕಾಲ ನಡೆಯುವ 32ನೇ ವರ್ಷದ ಅಂತ‌ರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ‘ಯಕ್ಷೋತ್ಸವ-2024’ ಕಾರ್ಯಕ್ರಮವು ದಿನಾಂಕ 23-02-2024 ರಂದು ಕಾಲೇಜಿನ ಆವರಣದಲ್ಲಿ ಆರಂಭಗೊಂಡಿತು. ಯಕ್ಷೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರಿನ ಹಿರಿಯ ವಕೀಲರಾದ ಶ್ರೀ ಮಹೇಶ್ ಕಜೆ “ಯಕ್ಷಗಾನ ಪರಿಪೂರ್ಣ ಕಲೆಯಾಗಿದೆ. ಯಕ್ಷಗಾನ ನಮ್ಮ ಮಣ್ಣಿನ ಶ್ರೀಮಂತ ಗಂಡು ಕಲೆಯಾಗಿದ್ದು, ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬೆಳೆಸಲು ‘ಯಕ್ಷೋತ್ಸವ’ದಂತಹ ವೇದಿಕೆ ಸೂಕ್ತವಾಗಿದೆ. ಎಸ್‌.ಡಿ.ಎಂ. ಕಾನೂನು ಕಾಲೇಜಿನಲ್ಲಿ ಹಲವಾರು ಜನರ ಪರಿಶ್ರಮದಿಂದ ಇಂದು ‘ಯಕ್ಷೋತ್ಸವ’ ಮುಂದುವರೆಯುತ್ತಿದೆ. ವಿದ್ಯಾರ್ಥಿಗಳ ತಂಡ ಮುಂದಿಟ್ಟ ಹೆಜ್ಜೆಗಳಿಂದಾಗಿ 32 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದೆ” ಎಂದರು. ಕಾಲೇಜಿನ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ದೇವರಾಜ್ ಕೆ. ಮಾತನಾಡಿ “ಕಳೆದ 32 ವರ್ಷಗಳಿಂದ ಆಡಳಿತ ಮಂಡಳಿಯ ಸಹಕಾರದಿಂದ ಉತ್ತಮ ಕಾರ್ಯ ನಡೆಯುತ್ತಿದೆ. ಕೆಲವು ಅನಿವಾರ್ಯ ಸಂದರ್ಭದಲ್ಲಿ ನಿಲ್ಲಿಸುವ ಹಂತಕ್ಕೆ…

Read More

ಉಡುಪಿ : ಸುಮನಸಾ ಕೊಡವೂರು ಆಯೋಜಿಸುವ ನಾಟಕ ಉತ್ಸವ ‘ರಂಗ ಹಬ್ಬ-12’ ದಿನಾಂಕ 25-02-2024 ರಿಂದ 02-03-2024ರ ವರೆಗೆ ಉಡುಪಿಯ ಅಜ್ಜರ ಕಾಡಿನಲ್ಲಿರುವ ಭುಜಂಗ ಪಾರ್ಕ್ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ. ದಿನಾಂಕ : 25-02-2024 – ‘ಸರಸ ವಿರಸ ಸಮರಸ’- ಕನ್ನಡ ನಾಟಕ ತಂಡ : ಸುಸ್ಥಿರ ಪ್ರತಿಷ್ಠಾನ, ಬೆಂಗಳೂರು ರಚನೆ : ವಿಲಿಯಂ ಶೇಕ್ಸ್ ಪಿಯರ್, ಅನುವಾದ – ಕೆ. ಎಸ್. ರಂಗೇ ಗೌಡ ನಿರ್ದೇಶನ : ಜೋಸೆಫ್ ಜಾನ್ ‘ಸರಸ ವಿರಸ ಸಾಮರಸ’ : ವಿಲಿಯಂ ಶೇಕ್ಸ್ ಪಿಯರ್ ರವರ ನಲಿವಿನ ನಾಟಕಗಳಲ್ಲಿ ಒಂದಾಗಿರುವ ‘The Taming of the Shrew’ ನಾಟಕವು ‘ಸರಸ ವಿರಸ ಸಮರಸ’ ನಾಟಕವಾಗಿ ಕನ್ನಡಕ್ಕೆ ಅನುವಾದ ಗೊಂಡಿರುವ ಒಂದು ವಿಶಿಷ್ಟ ರಂಗ ಪ್ರಯೋಗ. ಮೂಲ ನಾಟಕದಲ್ಲಿ ನಾಯಕ ಪೆಟ್ರೋಷಿಯೋ ಗಯ್ಯಾಳಿ ನಾಯಕಿ ಕ್ಯಾಥರೀನಳನ್ನು ತನ್ನದೇ ಶೈಲಿಯಲ್ಲಿ ಪಳಗಿಸಿ ಅವಳನ್ನು ಒಳ್ಳೆಯವಳನ್ನಾಗಿ ಪರಿವರ್ತಿಸುತ್ತಾನೆ. ಆದರೆ ಈ ನಾಟಕದಲ್ಲಿ ಸ್ತ್ರೀ ಪುರುಷರಿಬ್ಬರೂ ಸಮಾನತೆಯನ್ನು ಸಾರಿ…

Read More

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 26-02-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಮಂಗಳೂರಿನ ವಿದುಷಿ ರೆಮೊನಾ ಇವೈಟ್ ಪಿರೇರ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ. ತಮ್ಮ 3ನೇ ವಯಸ್ಸಿನಿಂದ ಭರತನಾಟ್ಯವನ್ನು ಪ್ರಾರಂಭಿಸಿರುವ ರೆಮೊನಾ ಇವೈಟ್ ಪಿರೇರ ಸೌರಭ ನೃತ್ಯ ಕಲಾ ಪರಿಷತ್ತಿನ ವಿದ್ಯಾರ್ಥಿನಿ. ಗುರು ಡಾ. ಶ್ರೀವಿದ್ಯಾ ಮುರಳೀಧರ್ ಇವರ ಮಾರ್ಗದರ್ಶನದಲ್ಲಿ ಭರತನಾಟ್ಯವನ್ನು ಕಲಿಯುತ್ತಿರುವ ಇವರು 2019ರಲ್ಲಿ ರಂಗ ಪ್ರವೇಶ ಮಾಡಿರುತ್ತಾರೆ. ಐದನೇ ವಯಸ್ಸಿನಲ್ಲಿ ‘ಅರಳು ಮಲ್ಲಿಗೆ ಪ್ರಶಸ್ತಿ’ ಹಾಗೂ ಕುಂದಾಪುರದಲ್ಲಿ ನಡೆದ ಭರತನಾಟ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿರುತ್ತಾರೆ. ಕೇಂದ್ರ ಸರಕಾರದಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ, ಧಾರವಾಡದ ಬಾಲ ವಿಕಾಸ ಅಕಾಡೆಮಿಯಿಂದ ಬಾಲ ಗೌರವ್ ಪ್ರಶಸ್ತಿ, ಹೊಯ್ಸಳಾ ಕೆಳದಿ…

Read More

ಕನ್ನಡದ ಗಮನಾರ್ಹ ಯುವ ಕಥೆಗಾರ್ತಿ ತೇಜಸ್ವಿನಿ ಹೆಗಡೆಯವರು ‘ಕಾಣ್ಕೆ’ ಮತ್ತು ‘ಸಂಹಿತಾ’ ಎಂಬ ಎರಡು ಕಥಾ ಸಂಕಲನಗಳ ನಂತರ ಈಗ ‘ಜೋತಯ್ಯನ ಬಿದಿರು ಬುಟ್ಟಿ’ ಎಂಬ ತಮ್ಮ ಮೂರನೇ ಕಥಾ ಸಂಕಲನವನ್ನು ಹೊರ ತಂದಿದ್ದಾರೆ. ಹತ್ತು ವಿಶಿಷ್ಠ ಕಥೆಗಳಿರುವ ಈ ಸಂಕಲನವು ಅವರ ಗಾಢವಾದ ಸಾಮಾಜಿಕ ಕಳಕಳಿಯನ್ನು ಎತ್ತಿ ಹಿಡಿಯುತ್ತವೆ. ಕಳೆದ ಕೆಲವು ದಶಕಗಳಿಂದ ಸ್ತ್ರೀ ಶೋಷಣೆಯ ವಿರುದ್ದ ಸೆಟೆದು ನಿಲ್ಲುವುದನ್ನೇ ತಮ್ಮ ಕಥೆಗಳ ಫೋಕಸ್ ಆಗಿ ಮಾಡಿಕೊಂಡ ಕಥೆಗಾರ್ತಿಯರು ಭಿನ್ನ ದಾರಿಗೆ ಹೋಗಿ ಮರಳುತ್ತಿದ್ದಾರೆ ಅನ್ನುವುದಕ್ಕೆ ತೇಜಸ್ವಿನಿಯವರ ಕಥೆಗಳು ಸಾಕ್ಷಿಯಾಗುತ್ತವೆ. ಬೆನ್ನುಡಿ ಬರೆದಿರುವ ಕೆ. ಸತ್ಯನಾರಾಯಣ ಅವರು ಹೇಳಿರುವಂತೆ ತೇಜಸ್ವಿನಿಯವರದ್ದು ಹೆಣ್ಣು ಕಥೆಗಳೇ ಆದರೂ ಹೆಣ್ಣಿನ ಶಕ್ತಿಯ ವಿವಿಧ ಮುಖಗಳನ್ನು ಬೆಳಕಿಗೊಡ್ಡುವುದೇ ಅವರ ಲಕ್ಷ್ಯವಾಗಿರುವಂತೆ ಕಾಣುತ್ತದೆ. ಮೊದಲ ಕಥೆ ‘ರತ್ನಗಂಧಾ’ ಆರಂಭವಾಗುವುದು ಹಳ್ಳಿಯ ಇಬ್ಬರು ಗೆಳೆಯರ ಮೂಲಕವಾದರೂ ಅದರ ಮುಖ್ಯ ಎಳೆ ಇರುವುದು ಇಳಿ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡು ಮಗನಿಂದ ದೂರವಾದ ರತ್ನಮ್ಮ ಮರು ಮದುವೆ ಮಾಡಿಕೊಳ್ಳ ಹೊರಟಿದ್ದಾರೆ ಎಂಬ…

Read More

ಸುರತ್ಕಲ್ : ಗೋವಿಂದ ದಾಸ ಕಾಲೇಜಿನ ಯಕ್ಷಗಾನ ಮತ್ತು ಲಲಿತಕಲಾ ಅಧ್ಯಯನ ಕೇಂದ್ರ, ಕಲಾಬ್ಧಿ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಮಹಿಳಾ ವೇದಿಕೆಗಳ ಆಶ್ರಯದಲ್ಲಿ ನಟಿ ಅಕ್ಷತಾ ಪಾಂಡವಪುರ ಅವರ ಕಥೆ, ವಿನ್ಯಾಸ ಮತ್ತು ಅಭಿನಯದ ಸ್ತ್ರೀ ಸಂವೇದನೆಯ ಸೂಕ್ಷ್ಮ ಭಾವನೆಗಳನ್ನು ಅಭಿವ್ಯಕ್ತಿಸುವ ಆಪ್ತ ರಂಗಪ್ರಯೋಗ ‘ಲೀಕ್ ಔಟ್’ – ಏಕವ್ಯಕ್ತ ನಾಟಕ ಪ್ರದರ್ಶನವು ದಿನಾಂಕ 21-02-2024 ರಂದು ಸುರತ್ಕಲ್ಲಿನ ಗೋವಿಂದದಾಸ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿರಿಯ ರಂಗಭೂಮಿ ಕಲಾವಿದೆ ಹಾಗೂ ನಿರ್ಮಾಪಕಿ ಗೀತಾ ಸುರತ್ಕಲ್ ಮಾತನಾಡಿ “ಆಧುನಿಕ ಜಗತ್ತಿನ ಹೊಸ ಸಮಸ್ಯೆಗಳನ್ನು ಅನುಸಂಧಾನ ಮಾಡುತ್ತಾ ಹೆಣ್ಣಿನ ಅಂತರಂಗದ ತಲ್ಲಣಗಳನ್ನು ಕಟ್ಟಿಕೊಡುವ ಅಕ್ಷತಾರ ರಂಗ ಪ್ರಯೋಗ ಅನನ್ಯವಾದುದು.” ಎಂದು ಹೇಳಿದರು.   ಹಿರಿಯ ನಟ ಡಾ. ಆರ್. ನರಸಿಂಹ ಮೂರ್ತಿ ಮಾತನಾಡಿ “ಆಪ್ತ ರಂಗಭೂಮಿ ಪ್ರಯೋಗಗಳಲ್ಲಿ ವಿಶಿಷ್ಟವಾಗಿ ಪ್ರೇಕ್ಷಕರನ್ನು ಪಾತ್ರಗಳನ್ನಾಗಿಸಿಕೊಂಡು ಸಮಸ್ಯೆಗಳ ಕುರಿತು ಸಂವಾದಿಸಲು ಪ್ರೇರೇಪಿಸುವ ರಂಗಭೂಮಿಗೆ ಹೊಸ ಆಯಾಮ ನೀಡುವ ಪ್ರಯೋಗ ಇದಾಗಿದೆ.” ಎಂದರು. ಕಾಲೇಜಿನ ಪ್ರಾಚಾರ್ಯ…

Read More

ಕಡಬ: ಕೀರ್ತಿಶೇಷ ಶಾಂತಿಗೋಡು ಗೋಪಾಲಕೃಷ್ಣ ಶಗ್ರಿತ್ತಾಯ ಮತ್ತು ಜಾನಕಿ ಅಮ್ಮಸ್ಮಾರಕ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಹಾಗೂ ಪಡುಬೆಟ್ಟು ಸರಕಾರಿ ಹಿ. ಪ್ರಾ. ಶಾಲೆಯ ಸಹಯೋಗದಲ್ಲಿ ಪಡುಬೆಟ್ಟು ಶ್ರೀ ಬಾಲಸುಬ್ರಹ್ಮಣ್ಯ ಮಕ್ಕಳ ಯಕ್ಷಗಾನ ಮಂಡಳಿಯ ಉದ್ಘಾಟನಾ ಸಮಾರಂಭ, ಗುರುವಂದನೆ ಮತ್ತು ಮಕ್ಕಳ ರಂಗಪ್ರವೇಶ ಕಾರ್ಯಕ್ರಮವು ದಿನಾಂಕ 10-02-2024ರಂದು ಪಡುಬೆಟ್ಟು ಸರಕಾರಿ ಹಿ.ಪ್ರಾ. ಶಾಲಾ ರಂಗಮಂದಿರದಲ್ಲಿ ನಡೆಯಿತು. ಮಕ್ಕಳ ಯಕ್ಷಗಾನ ಮಂಡಳಿಯನ್ನು ಉದ್ಘಾಟಿಸಿ ಮಾತನಾಡಿದ ನರಿಮೊಗರು ಸರಸ್ವತಿ ವಿದ್ಯಾಮಂದಿರದ ಸಂಚಾಲಕ ಅವಿನಾಶ್ ಕೊಡಂಕಿರಿ “ಎಂಭತ್ತರ ದಶಕದಲ್ಲಿ ಈ ಮೇಳವನ್ನು ಸ್ಥಾಪಿಸಿ ನಾಡಿನಾದ್ಯಂತ ಹಲವಾರು ಕಾರ್ಯಕ್ರಮಗಳ ನೀಡಿ ಪ್ರಸಿದ್ದಿ ಪಡೆಯಲು ಕಾರಣೀಭೂತರಾದ ಇಲ್ಲಿನ ನಿವೃತ್ತ ಶಿಕ್ಷಕ ದಿ. ಶಾಂತಿಗೋಡು ಗೋಪಾಲ ಕೃಷ್ಣ ಶಗ್ರಿತ್ತಾಯರ ನೆನಪಿನಲ್ಲಿ ಪ್ರತಿಷ್ಠಾನ ಮೂಲಕ ನಾಲ್ಕು ದಶಕಗಳ ಬಳಿಕ ಮತ್ತೆ ಅದೇ ಮಕ್ಕಳ ಮೇಳವನ್ನು ಲೋಕಾರ್ಪಣೆಗೊಳಿಸುವ ಕಾರ್ಯ ನನ್ನ ಪಾಲಿಗೊದಗಿದೆ. ಯಕ್ಷಗಾನವು ಭಾರತೀಯ ಸಂಸ್ಕೃತಿ ಬಿಂಬಿಸುವ ಕಲೆಯಾಗಿದ್ದು, ಮಕ್ಕಳ ತಂಡದ ಮೂಲಕ ನಿರಂತರ ಆ ಕೆಲಸ ನಡೆಯುವಂತಾಗಲಿ.” ಎಂದು ಶುಭ ಹಾರೈಸಿದರು. …

Read More

ಬೆಂಗಳೂರು : 2023ನೆಯ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ‘ಡಾ. ರಾಜ್ ಕುಮಾರ್ ಸಾಂಸ್ಕೃತಿಕ ದತ್ತಿ ಪ್ರಶಸ್ತಿ’ಗೆ ಹಿರಿಯ ಕಲಾವಿದ ಎಂ.ಎಸ್. ಉಮೇಶ್ ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯು ಉಮೇಶ್ ಅವರನ್ನು ಡಾ. ರಾಜ್‌ಕುಮಾ‌ರ್ ಸಾಂಸ್ಕೃತಿಕ ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರಶಸ್ತಿಯು ರೂ.25,000/- ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ರಾಜ್ ಕುಮಾರ್ ಅವರು ತಮಗೆ ‘ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ ಬಂದಾಗ ನಗದು ಮೊತ್ತವನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ನಿಧಿ ಸ್ಥಾಪಿಸಿದ್ದರು. ನಂತರದಲ್ಲಿ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರು ಈ ದತ್ತಿನಿಧಿಗೆ ಇನ್ನಷ್ಟು ಮೊತ್ತವನ್ನು ಸೇರಿಸಿದ್ದರು. ಚಿಕ್ಕ ವಯಸ್ಸಿನಲ್ಲೇ ರಂಗಭೂಮಿಯನ್ನು ಪ್ರವೇಶಿಸಿದ ಎಂ.ಎಸ್. ಉಮೇಶ್ ಇವರು ಕೆ. ಹಿರಣ್ಣಯ್ಯ ಮಿತ್ರ ಮಂಡಲಿಯಲ್ಲಿ ‘ಜಗಜ್ಯೋತಿ ಬಸವೇಶ್ವರ’ ನಾಟಕದಲ್ಲಿ ಬಾಲನಟರಾಗಿ ಹೆಸರು ಮಾಡುವ ಮೂಲಕ ಕಲಾರಂಗ ಪ್ರವೇಶಿಸಿದ್ದರು. ಗುಬ್ಬಿ ಕಂಪನಿಯಲ್ಲಿ ಕೂಡ ಬಾಲ ನಟನಾಗಿ ಪ್ರಸಿದ್ಧಿ ಪಡೆದ…

Read More