Subscribe to Updates
Get the latest creative news from FooBar about art, design and business.
Author: roovari
ಮಂಗಳೂರು: ಹಿರಿಯ ಪತ್ರಕರ್ತ, ಹೊಸದಿಗಂತ ಪತ್ರಿಕೆಯ ವಿಶೇಷ ವರದಿಗಾರ ಗುರುವಪ್ಪ ಬಾಳೆಪುಣಿ ಅಲ್ಪಕಾಲದ ಅಸೌಖ್ಯದಿಂದ ದಿನಾಂಕ 26 ಜನವರಿ 2025 ರವಿವಾರ ಅಪರಾಹ್ನ ಬಾಳೆಪುಣಿಯ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 62ವರ್ಷ ವಯಸ್ಸಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್ ಕ್ಲಬ್ ಇದರ ಪ್ರಧಾನ ಕಾರ್ಯದರ್ಶಿಯಾಗಿದ್ದ ಇವರು 39ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿದ್ದರು. ‘ಅಮೃತ’, ‘ಚೇತನಾ’, ‘ದಿ ಗೋಲ್ಡ್’, ‘ಸಪ್ತಸಾರ’ ವಾರಪತ್ರಿಕೆಗಳು ಮತ್ತು ದೈನಿಕಗಳಾದ ‘ಕರಾವಳಿ ಅಲೆ’, ‘ಕನ್ನಡ ಜನ ಅಂತರಂಗ’, ‘ಕೆನರಾ ಟೈಮ್ಸ್’, ‘ಮಂಗಳೂರು ಮಿತ್ರ’ ‘ಸಂಯುಕ್ತ ಕರ್ನಾಟಕ’ಗಳಲ್ಲಿ ಕೆಲಸ ಮಾಡಿದ್ದರು. ‘ಕಿತ್ತಳೆ ಬುಟ್ಟಿಯಲ್ಲಿ ಅರಳಿದ ಅಕ್ಷರ ಕನಸು’ ಎಂಬ ಶೀರ್ಷಿಕೆಯ ವರದಿ ಮೂಲಕ ಹರೇಕಳ ಹಾಜಬ್ಬ ಅವರನ್ನು ಬಾಳೇಪುಣಿ ಪರಿಚಯಿಸಿದ್ದರು. ಇವರಿಗೆ ಪದ್ಯಾಣ ಗೋಪಾಲಕೃಷ್ಣ ಸಂಸ್ಮರಣಾ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ, ರಾಜ್ಯ ಸರ್ಕಾರದ ‘ಡಾ. ಬಿ. ಆರ್.ಅಂಬೇಡ್ಕರ್ ಪ್ರಶಸ್ತಿ’ , ‘ಬೆ. ಸು. ನಾ ಮಲ್ಯ ಪತ್ರಿಕೋದ್ಯಮ ಪ್ರಶಸ್ತಿ’, ‘ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ’, ‘ಪದ್ಯಾಣ…
ಮಂಗಳೂರು : ಕರ್ನಾಟಕ ಪ್ರಾಂತೀಯ ಕಥೋಲಿಕ ಧರ್ಮಾಧ್ಯಕ್ಷರ ಮಂಡಳಿಯ ಆಶ್ರಯದಲ್ಲಿರುವ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ (ರಿ.) ಇದರ ವತಿಯಿಂದ ‘ಸಂದೇಶ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ದಿನಾಂಕ 10 ಫೆಬ್ರವರಿ 2025ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ನಂತೂರಿನಲ್ಲಿರುವ ಸಂದೇಶ ಪ್ರತಿಷ್ಠಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಬಳ್ಳಾರಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ವಂದನೀಯ ಹೆನ್ರಿ ಡಿ’ಸೋಜರವರು ವಹಿಸಲಿದ್ದು, ಮಾನ್ಯ ಸಚಿವರಾದ ದಿನೇಶ್ ಗುಂಡೂರಾವ್, ಧರ್ಮಸ್ಥಳ ಕ್ಷೇತ್ರದ ಧರ್ಮಾಧ್ಯಕ್ಷರಾದ ವಂದನೀಯ ಫ್ರಾನ್ಸಿಸ್ ಸೆರಾವೋ ಎಸ್.ಜೆ., ಬೆಳ್ತಂಗಡಿ ಕ್ಷೇತ್ರದ ಧರ್ಮಾಧ್ಯಕ್ಷರಾದ ವಂದನೀಯ ಲಾರೆನ್ಸ್ ಮುಕ್ಕುಯಿ, ಸಂದೇಶ ಪ್ರತಿಷ್ಠಾನದ ನಿರ್ದೇಶಕರಾದ ಡಾ. ಸುದೀಪ್ ಪೌಲ್, ಸಂದೇಶ ಪ್ರತಿಷ್ಠಾನದ ವಿಶ್ವಸ್ಥರಾದ ರಾಯ್ ಕ್ಯಾಸ್ತಲಿನೊ ಮತ್ತು ಐವನ್ ಪಿಂಟೊ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿಯ ಡಾ. ನಾ. ದಾಮೋದರ ಶೆಟ್ಟಿ ಇವರುಗಳು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ‘ಸಂದೇಶ ಸಾಹಿತ್ಯ ಪ್ರಶಸ್ತಿ – ಕನ್ನಡ’ ಶ್ರೀ ಬಿ.ಆರ್. ಲಕ್ಷ್ಮಣ್ ರಾವ್, ‘ಸಂದೇಶ ಸಾಹಿತ್ಯ ಪ್ರಶಸ್ತಿ – ಕೊಂಕಣಿ’…
ಸಾಲಿಗ್ರಾಮ : ಸಾಲಿಗ್ರಾಮದ ಗುಂಡ್ಮಿಯಲ್ಲಿರುವ ಸದಾನಂದ ರಂಗಮಂಟಪದಲ್ಲಿ ಸಮಸ್ತರು, ರಂಗ ಸಂಶೋಧನಾ ಕೇಂದ್ರ ಬೆಂಗಳೂರು ಇವರು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿಯವರ ಸಹಕಾರದಲ್ಲಿ ಏರ್ಪಡಿಸಿದ್ದ ದೇಶೀ ಖ್ಯಾತಿಯ ರಂಗ ನಿರ್ದೇಶಕ ಸಾಂಸ್ಕೃತಿಕ ಸಂಘಟಕ ದಿವಂಗತ ಗೋಪಾಲಕೃಷ್ಣ ನಾಯರಿಯವರ ಎರಡನೇ ವರ್ಷದ ಸಂಸ್ಮರಣಾ ಕಾರ್ಯಕ್ರಮ ಮತ್ತು ‘ಶ್ರೀ ಗೋಪಾಲಕೃಷ್ಣ ನಾಯರಿ ರಂಗ ಪ್ರಶಸ್ತಿ 2025’ ಪ್ರದಾನ ಸಮಾರಂಭವು ದಿನಾಂಕ 19 ಜನವರಿ 2025ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟರು ಮಾತನಾಡಿ “ಕಲೆ ಮತ್ತು ಸಾಹತ್ಯ ಲೋಕದ ಬೆಳವಣಿಗೆಗೆ ನಮ್ಮ ಹಿರಿಯರ ದೇಣಿಗೆ ಮರೆಯಲಾರದ್ದು. ಅವರ ಶ್ರಮದಿಂದಾಗಿ ಇಂದು ಅದನ್ನು ಆಸ್ವಾದಿಸಲು ಸಾಧ್ಯವಾಗಿದೆ. ಗೋಪಾಲಕೃಷ್ಣ ನಾಯರಿಯವರು ಒಬ್ಬ ಶ್ರೇಷ್ಟ ರಂಗಭೂಮಿ ಕಲಾವಿದ. ನಿರ್ದೇಶಕ ಮಾತ್ರವಲ್ಲಾ ನಮ್ಮ ಕರಾವಳಿ ವಲಯದ ಸಾಂಸ್ಕೃತಿಕ ರಾಯಭಾರಿಯಾಗಿದ್ದರು. ಎನ್.ಎಸ್.ಡಿ.ಯ ನಿರ್ದೇಶಕರಾಗಿ ಅವರ ಕಾರ್ಯ ಮರೆಯಲಾರದ್ದು. ಈ ನಿಟ್ಟಿನಲ್ಲಿ ಅವರ ಸ್ಮರಣೆ ಮತ್ತು ಅವರ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿ…
ಮಂಗಳೂರು : ಡಾ. ವಾಗೀಶ್ವರಿ ಶಿವರಾಮರ 35ನೇ ಕೃತಿ ‘108 ಚೈತನ್ಯದಾಯಿನೀ – ಕಥಾ ಮಾಲಾ’ ಇದರ ಲೋಕರ್ಪಣಾ ಸಮಾರಂಭವು ದಿನಾಂಕ 22 ಜನವರಿ 2025ರಂದು ಮಂಗಳೂರಿನ ಚಿಲಿಂಬಿಯ ಕೋಟೆಕಣಿ ರಸ್ತೆಯಲ್ಲಿರುವ ಸದ್ಭೋಧ ಗುರುಕುಲದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೃತಿಯನ್ನು ಲೋಕಾರ್ಪಣೆಗೊಳಿಸಿದ ಮಂಗಳೂರಿನ ಖ್ಯಾತ ಲೆಕ್ಕ ಪರಿಶೋಧಕರಾದ ಶ್ರೀ ಎಸ್. ಎಸ್. ನಾಯಕ್ ಮಾತನಾಡಿ “ಜ್ಞಾನ ನೀಡುವ ಪುಸ್ತಕ ಒಬ್ಬ ಒಳ್ಳೆಯ ಗೆಳೆಯ. ದೇಶ, ಧರ್ಮ ಹಾಗೂ ಸಂಸ್ಕೃತಿಯ ಬಗ್ಗೆ ಜ್ಞಾನ ನೀಡುವ ಪುಸ್ತಕಗಳನ್ನು ಬಾಲ್ಯದಲ್ಲಿಯೇ ಓದುವ ಹವ್ಯಾಸ ಬೆಳೆಸಿಕೊಂಡಾಗಲೇ ಸತ್ಪ್ರಜೆಗಳಾಗಬಹುದು. ಡಾ. ವಾಗೀಶ್ವರಿ ಶಿವರಾಮರ 35ನೇ ಕೃತಿ ‘108 ಚೈತನ್ಯದಾಯಿನೀ ಕಥಾ ಮಾಲಾ’ ಕೃತಿಯಲ್ಲಿರುವ 108 ಕಥೆಗಳು, ಸುಭಾಷಿತಗಳು ಎಲ್ಲರಲ್ಲೂ ಚೈತನ್ಯವನ್ನು ಅರಳಿಸುವ ಟಾನಿಕ್ (ರಸಾಯನ )ಆಗಿದೆ” ಎಂದರು.ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಎನ್. ಐ. ಟಿ. ಕೆ. ನಿರ್ಮಿತ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಕಲ್ಬಾವಿ ಮಾತನಾಡಿ “ಹಿರಿಯರು ಮನೆಯಲ್ಲಿ ಸ್ತೋತ್ರ ಮಂತ್ರಗಳನ್ನು ಗಟ್ಟಿಯಾಗಿ ಉಚ್ಚರಿಸುತ್ತಾ, ಉತ್ತಮ ಕೃತಿಗಳನ್ನು ಓದುತ್ತಾ,…
ಪತ್ರಿಕೋದ್ಯಮ ಶಿಕ್ಷಣ ಮತ್ತು ಬರಹಗಳಿಗೆ ಪ್ರಸಿದ್ಧರಾದ ಸಾಹಿತಿ ಡಾ. ನಾಡಿಗ ಕೃಷ್ಣಮೂರ್ತಿಯವರು. “ಬಹುಮುಖೀ ವ್ಯಕ್ತಿತ್ವದ ಇವರು ‘ಪತ್ರಿಕೋದ್ಯಮ ಶಿಕ್ಷಣದ ಭೀಷ್ಮ’ ಎಂದೇ ಪ್ರಖ್ಯಾತರಾಗಿದ್ದಾರೆ”. ಎಂಬುದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ ಪ್ರೊಫೆಸರ್ ಜಿ. ಹೇಮಂತ್ ಇವರ ಅಭಿಮಾನದ ಮಾತುಗಳು. ನರಸಿಂಗರಾವ್ ನಾಡಿಗ ಮತ್ತು ಕಮಲಾ ಬಾಯಿ ದಂಪತಿಗೆ 25 ಜನವರಿ 1920ರಂದು ಜನಿಸಿದ ಸುಪುತ್ರ ನಾಡಿಗ ಕೃಷ್ಣಮೂರ್ತಿಯವರು. ಇವರ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ಹುಟ್ಟೂರಾದ ಶಿವಮೊಗ್ಗ ಜಿಲ್ಲೆಯ ಆನವಟ್ಟಿ ಗ್ರಾಮದಲ್ಲಿ ನಡೆಯಿತು. ಶಿವಮೊಗ್ಗದಲ್ಲಿ ಪ್ರೌಢ ಶಾಲೆಯ ಶಿಕ್ಷಣವನ್ನು ಪೂರೈಸಿದ ಮೇಲೆ ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ಮುಗಿಸಿದರು. ದೇಶ ಕಟ್ಟುವ ಕಾರ್ಯದಲ್ಲಿ ಸಮೂಹ ಮಾಧ್ಯಮಗಳ ಕಾರ್ಯ ಮಹತ್ತರವಾದುದು ಎಂಬುದನ್ನು ಕಂಡುಕೊಂಡು 1947ರಲ್ಲಿ ಅಮೆರಿಕಾದ ಮಿಸ್ಸೌರಿ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಶಿಕ್ಷಣದಲ್ಲಿ ಸ್ನಾತಕೋತ್ತರ ಪ್ರವೇಶ ಪಡೆದುಕೊಂಡ ಸ್ಪೂರ್ತಿಯ ಚಿಲುಮೆ ಇವರು. ಶಿಕ್ಷಣ ಹಾಗು ಹಡಗಿನ ಪ್ರಯಾಣಕ್ಕೆ ವೆಚ್ಚ ಭರಿಸಲು ರಸ್ತೆಯಲ್ಲಿ ನಿಂತು ಪುಸ್ತಕ ಮಾರಿ ಹಣ ಕೂಡಿಸಿದ್ದು ಇವರ ಕಾರ್ಯ ತತ್ಪರತೆಗೆ ಮತ್ತು ಪತ್ರಿಕೋದ್ಯಮ ಶಿಕ್ಷಣವನ್ನು…
ಮಂಗಳೂರು : ಖ್ಯಾತ ಯಕ್ಷಗಾನ ಕಲಾವಿದ, ಪ್ರಸಂಗಕರ್ತ ಹಾಗೂ ಹವ್ಯಾಸಿ ಪತ್ರಕರ್ತರಾದ ತಾರಾನಾಥ ವರ್ಕಾಡಿ ಮಂಡಿಸಿದ ‘ಕರಾವಳಿ ಕರ್ನಾಟಕದ ಯಕ್ಷಗಾನ ವೃತ್ತಿ ರಂಗಭೂಮಿಯ ಬಹುಮುಖಿ ಅಧ್ಯಯನ’ ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಡಿ. ಲಿಟ್ ಪದವಿ ನೀಡಿದೆ. ಇದು ವೃತ್ತಿಪರ ಯಕ್ಷಗಾನ ಕಲಾವಿದರ ಸಾಧನೆ ಎಂಬುದು ಗಮನಾರ್ಹ. ಕಟೀಲು, ಧರ್ಮಸ್ಥಳ ಮೊದಲಾದ ಮೇಳಗಳಲ್ಲಿ ಸುಮಾರು 4ದಶಕಗಳ ಕಾಲ ತಿರುಗಾಟ ನಡೆಸಿದ ವರ್ಕಾಡಿಯವರು ಯಕ್ಷಗಾನ ವೇಷಧಾರಿ ಹಾಗೂ ತಾಳಮದ್ದಳೆ ಅರ್ಥದಾರಿಯಾಗಿ ಜನಮನ್ನಣೆ ಪಡೆದ ಕಲಾವಿದ. ಕನ್ನಡ ಹಾಗೂ ತುಳುವಿನಲ್ಲಿ ಅನೇಕ ‘ಯಕ್ಷಗಾನ ಪ್ರಸಂಗ ರಚಿಸಿರುವ ಇವರು ಆಯುರ್ವೇದ, ಜ್ಯೋತಿಷ್ಯ, ವಾಸ್ತುತಜ್ಞರಾಗಿಯೂ ಪರಿಚಿತರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿದ್ದ ಅವರ ಬಹುಮುಖ ಚಟುವಟಿಕೆಗಳಿಗಾಗಿ ಅನೇಕ ಸಂಘ- ಸಂಸ್ಥೆಗಳು ಅವರನ್ನು ಗೌರವಿಸಿವೆ.
ಮಂಗಳೂರು : 2025ನೇ ಸಾಲಿನ ಡಾ ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗ ಶ್ರೇಷ್ಠ ಪುರಸ್ಕಾರಕ್ಕೆ ಗುಲ್ವಾಡಿ ರಾಮದಾಸ ದತ್ತಾತ್ರೇಯ ಭಟ್ ಹಾಗೂ 2025ನೇ ಸಾಲಿನ ಡಾ ಪಿ. ದಯಾನಂದ ಪೈ ಭಾಷಾನುವಾದ ಪುರಸ್ಕಾರಕ್ಕೆ ಡಾ. ಗೀತಾ ಶೆಣೈ ಇವರು ಆಯ್ಕೆಯಾಗಿರುತ್ತಾರೆ. ಗುಲ್ವಾಡಿ ರಾಮದಾಸ ದತ್ತಾತ್ರೇಯ ಭಟ್ : ಎಳವೆಯಿಂದಲೆ ನಾಟಕಕ್ಷೇತ್ರಕ್ಕೆ ಆಕರ್ಷಿತರಾದ ಶ್ರೀ ಗುಲ್ವಾಡಿಯವರು ತಮ್ಮ ನಿರಂತರ ಎಂಟು ದಶಕಗಳ ಸುದೀರ್ಘ ಹವ್ಯಾಸಿ ರಂಗಕಲಾ ಬದುಕಿನಲ್ಲಿ ಸಾಂಪ್ರದಾಯಿಕ, ವಿಶೇಷವಾಗಿ ಪೌರಾಣಿಕ ನಾಟಕಗಳ (ಪ್ರಚಂಡ ಪರಶು, ಆತ್ಮಲಿಂಗ, ಸಂತ ಜ್ಞಾನೇಶ್ವರ, ತುಲಸಿ ಜಲಂದರ) ವರ್ಣಾಲಂಕಾರ, ಧ್ವನಿ ಬೆಳಕಿನಿಂದ ಹಿಡಿದು ಸ್ವಂತ ನಾಟಕ ರಚನೆ, ಅಭಿನಯ, ನಿರ್ದೇಶನ ಸಾಮರ್ಥ್ಯಗಳೊಂದಿಗೆ ಮಂಗಳೂರಿಂದ ಮುಂಬೈ ನಗರದವರೆಗೂ ಹೆಸರು ಗಳಿಸಿದ್ದಾರೆ. ಸದ್ಯ ಗೋವಾದಲ್ಲಿ ನೆಲೆಸಿರುವ ಇವರ ಎಲೆಮರೆಯ ಪ್ರತಿಭೆಯನ್ನು ವಿಶ್ವ ಕೊಂಕಣಿ ಕೇಂದ್ರವು ಗುರುತಿಸಿ ಗೌರವಿಸಿದೆ. ಡಾ ಗೀತಾ ಶೆಣೈ : ಡಾ. ಗೀತಾ ಶೆಣೈಯವರು ವಚನ ಸಾಹಿತ್ಯ, ಕನಕದಾಸರ ಸಮಗ್ರ ಸಾಹಿತ್ಯ, ಕುವೆಂಪು ಸಾಹಿತ್ಯ…
ಮಂಗಳೂರು : ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ತು ರಿ. ಮಂಗಳೂರು, ಸಂಸ್ಕಾರ ಭಾರತಿ ಮಂಗಳೂರು ಹಾಗೂ ವಿಶ್ವಕರ್ಮ ಕಲಾ ಪರಿಷತ್ತು (ರಿ.) ಮಂಗಳೂರು ಸಂಯುಕ್ತವಾಗಿ ಆಯೋಜಿಸಿದ ಕೀರ್ತಿಶೇಷ ನೃತ್ಯಗುರು ಕರ್ನಾಟಕ ಕಲಾಶ್ರೀ ಕೆ. ಕಮಲಾಕ್ಷ ಆಚಾರ್ಯರ ‘ಶ್ರದ್ಧಾನಮನ’ ಸಭೆಯು ದಿನಾಂಕ 25 ಜನವರಿ 2025ರಂದು ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವಳದ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀಯುತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಮೈಸೂರಿನ ನೃತ್ಯ ವಿದ್ವಾಂಸರಾದ ಪ್ರೊ. ರಾಮಮೂರ್ತಿ ರಾವ್ ಮಾತನಾಡಿ “ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ತು (ರಿ.) ಮಂಗಳೂರು ಇದರ ಸ್ಥಾಪಕಾಧ್ಯಕ್ಷರಾಗಿದ್ದು, ಭರತನಾಟ್ಯ ಶಿಕ್ಷಕರ ಸಂಘಟನೆಯನ್ನು ಬಲಪಡೆಸಿದವರು ಕೀರ್ತಿಶೇಷ ವಿದ್ವಾನ್ ಕಮಲಾಕ್ಷ ಆಚಾರ್ಯರು. ಮಂದಸ್ಮಿತವದನರಾಗಿದ್ದ ಇವರದು ನೇರವಾದ ಮೃದು ನುಡಿಯಿಂದ ಕೂಡಿದ ಶಿಸ್ತು ಬದ್ಧ ಬದುಕು. ಸದಾ ಭರತನಾಟ್ಯ ಕಲಾವಿದರು ಒಗ್ಗಟ್ಟಾಗಿದ್ದು ಅಧ್ಯಯನಶೀಲರಾಗಿ ಮುಂದುವರಿಯಬೇಕೆಂಬ ಮನಸ್ಸಿನಿಂದಲೇ ಕರ್ತವ್ಯ ನಿರ್ವಹಿಸಿದ ಪ್ರಾಮಾಣಿಕ” ಎಂದರು. ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ತಿನ ಅಧ್ಯಕ್ಷರಾದ ಯು.ಕೆ. ಪ್ರವೀಣ್ ಮಾತನಾಡಿ “ಇತ್ತೀಚೆಗೆ ಅಗಲಿದ ಹೆಸರಾಂತ ಗುರು ಕಮಲಾಕ್ಷ…
ಬೆಂಗಳೂರು : ತೊ. ನಂಜುಂಡಸ್ವಾಮಿ ಗೆಳೆಯರ ಬಳಗ ಇದರ ವತಿಯಿಂದ ತೊ. ನಂಜುಂಡಸ್ವಾಮಿ ನೆನೆಪಿನ ಪ್ರಶಸ್ತಿ ಪ್ರದಾನ ಸಮಾರಂಭ 2025’ವನ್ನು ದಿನಾಂಕ 10 ಫೆಬ್ರವರಿ 2025ರಂದು ಸಂಜೆ 5-30 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಹಮ್ಮಿಕೊಳ್ಳಲಾಗಿದೆ. ರಂಗ ಸಂಘಟಕರು, ರಂಗ ನಿರ್ದೇಶಕರು ಸಮಾಜ ಸೇವಕರಾದ ಶ್ರೀ ಪ್ರಭು ಗುರಪ್ಪನವರ ಇವರಿಗೆ ಮೂರನೇ ವರುಷದ ತೊ. ನಂಜುಂಡಸ್ವಾಮಿ ನೆನೆಪಿನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಕೆ.ವಿ. ನಾಗರಾಜ ಮೂರ್ತಿಯವರು ವಹಿಸಲಿರುವರು. ಆನಂದ್ ಮಾಲೂರು ಮತ್ತು ತಂಡದವರಿಂದ ಅಂಬೇಡ್ಕರ್ ಹಾಗೂ ಸಂವಿಧಾನ ಗಾಯನ ಕಾರ್ಯಕ್ರಮ ಮತ್ತು ಲಹರಿ ಭಾರೀಘಾಟ್ ಇವರ ಪರಿಕಲ್ಪನೆ ಮತ್ತು ವಿನ್ಯಾಸದಲ್ಲಿ ಸಹಚಾರಿ ತಂಡದವರಿಂದ ‘ಶಾಂತಿ ಮತ್ತು ಪ್ರೀತಿಗಾಗಿ’ ಭರತನಾಟ್ಯ ಪ್ರಸ್ತುತಗೊಳ್ಳಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಕೃಷ್ಣ ಭಟ್ ಮತ್ತು ಗಂಗಮ್ಮ ದಂಪತಿಗಳ ಸುಪುತ್ರಿಯಾಗಿರುವ ಕೆ. ಜಯಲಕ್ಷ್ಮೀ ಕುಮಾರ್ ಇವರು ಎಂ.ಎ. ಬಿ.ಇಡಿ. ಪದವೀಧರರಾಗಿದ್ದಾರೆ. ಪ್ರಸ್ತುತ ಮಡಿಕೇರಿಯ ಸಂತ ಜೋಸೆಫರ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಹಾಡುಗಾರಿಕೆ, ಲೇಖನ, ಕಥೆ, ಕವನ, ನಾಟಕ ಇತ್ಯಾದಿಗಳನ್ನು ಬರೆಯುವುದು ಇವರ ಹವ್ಯಾಸ. ಕಾರ್ಯಕ್ರಮ ನಿರೂಪಣೆ, ಭಾಷಣ ಕಲೆಗಾರಿಕೆಯನ್ನೂ ಮೈಗೂಡಿಸಿಕೊಂಡಿದ್ದಾರೆ. ಇವರು ಬರೆದ ‘ಯಾರು ಹಿತವರು ನಿನಗೆ’ ನಾಟಕ ಹಲವು ವೇದಿಕೆಗಳಲ್ಲಿ ಪ್ರದರ್ಶನಗೊಂಡಿದೆ. ‘ನೆನಪುಗಳ ಸುಳಿಯಲ್ಲಿ’ ನಾಟಕವನ್ನು ಪ್ರಾಥಮಿಕ ಶಾಲಾ ಶಿಕ್ಷಕರು ಹಲವಾರು ವೇದಿಕೆಗಳಲ್ಲಿ ಅಭಿನಯಿಸಿರುತ್ತಾರೆ. ಮಡಿಕೇರಿ ಆಕಾಶವಾಣಿಯಲ್ಲಿ ಕ್ಯಾಶುವಲ್ ಅನೌನ್ಸರ್ ಆಗಿ ಕೆಲಸ ಮಾಡಿದ್ದಾರೆ. ಭಾವಯಾನ ಸರಣಿ ಕಾರ್ಯಕ್ರಮದ ಜೊತೆಗೆ ಚಿಂತನೆಗಳು, ಸಂದರ್ಶನಗಳು, ಮಹಿಳಾ ಲೋಕದಲ್ಲಿ ಕಥೆ. ಕವನ, ವೈಚಾರಿಕ ಪ್ರಬಂಧಗಳು ಭಿತ್ತರಗೊಂಡಿವೆ. ಇವರು ಬರೆದು ರಾಗ ಸಂಯೋಜನೆ ಮಾಡಿರುವ ಮೂರು ಹಾಡುಗಳು ದ್ವನಿ ಸುರುಳಿಯಲ್ಲಿ ಮೂಡಿ ಬಂದಿದೆ. ತಮ್ಮ ‘ಪ್ರಜ್ಞಾ ಕಲಾ ಕೇಂದ್ರ’ ಎಂಬ ಸಾಂಸ್ಕೃತಿಕ ಸಂಸ್ಥೆಯ ಮೂಲಕ…