Author: roovari

ಬೆಂಗಳೂರು : ಶ್ರೀಮಾತಾ ಚಾರಿಟೇಬಲ್ ಟ್ರಸ್ಟ್ ಹುಳಿಯಾರು ಮತ್ತು ಸೆಂಟರ್ ಸ್ಟೇಜ್ ಬೆಂಗಳೂರು ಇವರು ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಇವರ ಹೆಸರಿನಲ್ಲಿ ಕೊಡಮಾಡುವ 2024ನೇ ಸಾಲಿನ ‘ಸೆಂಟರ್ ಸ್ಟೇಜ್ ಕಪ್ಪಣ್ಣ ಪ್ರಶಸ್ತಿ -2024’ ಪ್ರದಾನವು ಬೆಂಗಳೂರಿನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನ ವಾಡಿಯಾ ಸಭಾಂಗಣದಲ್ಲಿ ದಿನಾಂಕ 13-02-2024ರಂದು ನಡೆಯಿತು. ಈ ಸಮಾರಂಭದಲ್ಲಿ ಹಿರಿಯ ಸಾಹಿತಿ ನಾಡೋಜ ಹಂ.ಪ. ನಾಗರಾಜಯ್ಯ ಅವರು ಸುಳ್ಯ ರಂಗಮನೆಯ ರೂವಾರಿ ಡಾ. ಜೀವನ್ ರಾಂ ಸುಳ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಮಾತನಾಡುತ್ತಾ “ರಂಗಭೂಮಿಯನ್ನೇ ಬದುಕು ಮಾಡಿಕೊಂಡವರಲ್ಲಿ ಜೀವನ್ ರಾಂ ಪ್ರಮುಖರು. ಇವರ ನಾಟಕಗಳಿಗೆ ಎಂದೂ ಪ್ರೇಕ್ಷಕರ ಕೊರತೆ ಆಗಿಲ್ಲ. ತನ್ನ ವಾಸದ ಮನೆಯನ್ನೇ ಸಾಂಸ್ಕೃತಿಕ ಕೇಂದ್ರವನ್ನಾಗಿಸಿದ ಜೀವನ್ ನಾಡು ಕಂಡ ಅಪರೂಪದ ಶ್ರೇಷ್ಠ ರಂಗಕರ್ಮಿ” ಎಂದರು. ಹಿರಿಯ ರಂಗಕರ್ಮಿ, ಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣ, ಹಿರಿಯ ಐ.ಎ.ಎಸ್. ಅಧಿಕಾರಿ ಚಿರಂಜೀವಿ ಸಿಂಗ್, ಚಿತ್ರ…

Read More

ಮಂಗಳೂರು : ಇತ್ತೀಚೆಗೆ ನಿಧನ ಹೊಂದಿದ ಹಿಂದುಸ್ತಾನಿ ಸಂಗೀತ ದಿಗ್ಗಜರಾದ ವಿದುಷಿ ಪ್ರಭಾ ಅತ್ರೆ, ಪಂ. ಮಣಿಪ್ರಸಾದ್, ಪಂ. ರಶೀದ್ ಖಾನ್ ಮತ್ತು ಪಂ. ಕೇದಾರ್ ಬೋಡಸ್ ಸ್ಮರಣಾರ್ಥವಾಗಿ ‘ಧ್ಯಾನಸಂಗೀತ ಅಕಾಡೆಮಿ ಕಲಾ ಟ್ರಸ್ಟ್‌’ ಇದರ ವತಿಯಿಂದ ‘ಸ್ವರ ಶ್ರದ್ಧಾಂಜಲಿ’ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿಯು ದಿನಾಂಕ 10-02-2024ರಂದು ನಡೆಯಿತು. ಕೊಡಿಯಾಲಬೈಲ್‌ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮವನ್ನು ಹಿರಿಯ ಸಂಗೀತ ಕಲಾವಿದ ರವಿಕಿರಣ್ ಮಣಿಪಾಲ ದೀಪ ಬೆಳಗಿಸಿ ಉದ್ಘಾಟಿಸಿದರು. ಕಲಾವಿದ ಪಂ.ಗಣಪತಿ ಭಟ್ ಹಾಸಣಗಿ ಅವರ ಶಿಷ್ಯ ಪಂ.ಸತೀಶ್ ಭಟ್ ಮಾಳಕೊಪ್ಪ ಹಾಗೂ ಪಂ. ಶ್ರೀಪಾದ ಹೆಗಡೆ ಕಂಪ್ಲಿ ಅವರ ಶಿಷ್ಯ ಬೆಂಗಳೂರಿನ ರಘುನಂದನ್ ಭಟ್ ಅವರಿಂದ ಹಿಂದುಸ್ತಾನಿ ಗಾಯನ ಕಛೇರಿ ನಡೆಯಿತು. ಕಛೇರಿಯ ಹಾರ್ಮೋನಿಯಂನಲ್ಲಿ ಪ್ರಸಾದ್ ಕಾಮತ್ ಮತ್ತು ತಬಲಾದಲ್ಲಿ ಭಾರವಿ ದೇರಾಜೆ ಸಹಕರಿಸಿದರು. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಲೋಲಾಕ್ಷಿ, ಸಂಸ್ಥಾಪಕ ಕಾರ್ಯದರ್ಶಿ ಶ್ರೀ ಅಮಿತ್ ಕುಮಾರ್ ಬೆಂಗ್ರೆ, ಸದಸ್ಯರಾದ ಶ್ರೀ ಸುಶಾಂತ್ ಉಪಸ್ಥಿತಿಯಲ್ಲಿ ನಡೆದ ಈ…

Read More

ಮಂಗಳೂರು : ರಾಗತರಂಗ ಮಂಗಳೂರು ವತಿಯಿಂದ ‘ಝೇಂಕಾರ-2024’ ಹಾಗೂ ಗುರುವಂದನಾ ಕಾರ್ಯಕ್ರಮ ಮಂಗಳೂರಿನ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ದಿನಾಂಕ 04-02-2024ರ ರವಿವಾರ ನಡೆಯಿತು. ಈ ಸಂದರ್ಭದಲ್ಲಿ ಮಂಗಳೂರಿನ ‘ಝೇಂಕಾರ ಗಾನ ಕಲಾ ಕೇಂದ್ರ’ದ ನಿರ್ದೇಶಕಿ ಹಾಗೂ ಸಂಗೀತ ಶಿಕ್ಷಕಿ ಜಯಶ್ರೀ ಅರವಿಂದ್ ಅವರಿಗೆ ಗುರುವಂದನೆ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ರೀಡಾಭಾರತಿ ಹಾಗೂ ಪಟ್ಲ ಫೌಂಡೇಶನ್ ಮಂಗಳೂರು ವಲಯದ ಕಾರ್ಯದರ್ಶಿ ಎ. ಕೃಷ್ಣ ಶೆಟ್ಟಿ ತಾರೆಮಾ‌ರ್ ಮಾತನಾಡಿ “ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿಯನ್ನು ಕಿರಿಯರಿಗೂ ತಿಳಿಯಪಡಿಸಲು ತೊಡಗಿಸಿಕೊಂಡಿರುವ ಕಾರ್ಯ ಶ್ಲಾಘನೀಯ.” ಎಂದರು. ಮಾನವ ಹಕ್ಕುಗಳ ರಕ್ಷಣಾ ವೇದಿಕೆಯ ಜಿಲ್ಲಾ ಉಸ್ತುವಾರಿ ಸುದೇಶ್ ಶೆಟ್ಟಿ ಕೊಡಿಯಾಲಬೈಲು ಮಾತನಾಡಿ “ರಾಗತರಂಗ ಮಕ್ಕಳ ಪ್ರತಿಭೆ ಗುರುತಿಸಿ, ವೇದಿಕೆ ನೀಡಿ, ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಶ್ರಮಿಸುತ್ತಿದೆ.” ಎಂದರು. ಕಾರ್ಯಕ್ರಮದಲ್ಲಿ ರಾಗತರಂಗದ ಗೌರವಾಧ್ಯಕ್ಷ ಡಾ. ದೇವರಾಜ್, ಪ್ರಮುಖರಾದ ಸೌಮ್ಯ ರಾವ್, ಸುಂದರ್ ಪಟೇಲ್, ಪುಷ್ಪಾ ಜೋಗಿ ಉಪಸ್ಥಿತರಿದ್ದರು. ರಾಗತರಂಗದ ಅಧ್ಯಕ್ಷೆ ಆಶಾಹೆಗ್ಡೆ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ…

Read More

ಬೆಂಗಳೂರು : ದಿನಾಂಕ 11-02-2024ರಂದು ನಿಧನರಾದ ತುಮಕೂರಿನ ಸಾಂಸ್ಕೃತಿಕ ಧ್ವನಿ ಎಂದೇ ಖ್ಯಾತರಾಗಿದ್ದ ಬರಹಗಾರ ಕವಿತಾಕೃಷ್ಣ ಅವರಿಗೆ  ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಬೆಳೆಸುವಲ್ಲಿ ಬಹಳ ಮುಖ್ಯಪಾತ್ರ ವಹಿಸಿದ್ದ ಕವಿತಾಕೃಷ್ಣ ಅವರು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ತುಮಕೂರು ಜಿಲ್ಲೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಹತ್ವದ ಸೇವೆಯನ್ನು ಸಲ್ಲಿಸಿದ್ದಾರೆ. ತುಮಕೂರಿನ ಹಳ್ಳಿ ಹಳ್ಳಿಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರನ್ನು ಮಾಡುವಲ್ಲಿ, ತುಮಕೂರು ಜಿಲ್ಲೆಯ ಬರಹಗಾರರು ಸಂಘಟಿತವಾಗುವಲ್ಲಿ ಕವಿತಾ ಕೃಷ್ಣ ಅವರ ಪಾತ್ರ ಬಹಳ ಮುಖ್ಯವಾದದ್ದು. ತುಮಕೂರಿನಲ್ಲಿ ಲೇಖಕಿಯರ ಸಂಘ ಸ್ಥಾಪಿತವಾಗುವಲ್ಲಿ ಮತ್ತು ಬರಹಗಾರ್ತಿಯರು ಧೈರ್ಯವಾಗಿ ಬರೆಯುವಲ್ಲಿ ಅವರ ಪಾತ್ರ ಬಹಳ ಮುಖ್ಯವಾದದ್ದು. ತುಮಕೂರು ಜಿಲ್ಲೆಯಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಕವಿತಾಕೃಷ್ಣರವರು ನೆಲಮಂಗಲ ತಾಲೂಕಿನ ಮಣ್ಣೆ ಪ್ರೌಡಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾದ ನಂತರ ತಮ್ಮನ್ನು ಸಂಪೂರ್ಣ ಸಾಹಿತ್ಯಕ್ಕೇ ಸಮರ್ಪಿಸಿಕೊಂಡಿದ್ದರು. ಒಟ್ಟು 125 ಕೃತಿಗಳನ್ನು…

Read More

ಪಾಂಬೂರು : ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಪರಿಚಯ ಪ್ರತಿಷ್ಠಾನ ಪ್ರಸ್ತುತ ಪಡಿಸುವ ‘ಪರಿಚಯ ರಂಗೋತ್ಸವ 2024’ವು ದಿನಾಂಕ 18-02-2024ರಿಂದ 24-02-2024ರವರೆಗೆ ಪಾಂಬೂರಿನ ರಂಗಪರಿಚಯದಲ್ಲಿ ನಡೆಯಲಿದೆ. ದಿನಾಂಕ 18-02-2024ರಂದು ಸಂಜೆ 6.30 ಗಂಟೆಗೆ ಮಂಡ್ಯ ಪಾಂಡವಪುರದ ‘ದಿ ಚಾನಲ್ ಥಿಯೇಟರ್ಸ್’ ಪ್ರಸ್ತುತ ಪಡಿಸುವ ‘ಲೀಕ್ ಔಟ್’ ಕನ್ನಡ ನಾಟಕ, ದಿನಾಂಕ 19-02-2024ರಂದು ಕೇರಳದ ಅರುಣ್ ಲಾಲ್ ರಂಗ ಪಠ್ಯ, ವಿನ್ಯಾಸ ಮತ್ತು ನಿದೇಶನದಲ್ಲಿ ಮಂಗಳೂರಿನ ಅಸ್ತಿತ್ವ (ರಿ.) ಅಭಿನಯಿಸುವ ‘ಜುಗಾರಿ’ ಕೊಂಕಣಿ ನಾಟಕ, ದಿನಾಂಕ 20-02-2024ರಂದು ಸಂತೋಷ್ ನಾಯಕ್ ಪಟ್ಲ ವಿನ್ಯಾಸ ಮತ್ತು ನಿದೇಶನದಲ್ಲಿ ಪಟ್ಲ ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪ್ರಸ್ತುತ ಪಡಿಸುವ ತುಳು ನಾಟಕ ‘ಒಂಜಿ ದಮ್ಮಪದ’, ದಿನಾಂಕ 21-02-2024ರಂದು ಹಿಂದಿಯಿಂದ ಕನ್ನಡ ರೂಪಾಂತರ ಮತ್ತು ನಿರ್ದೇಶನ ಸದಾನಂದ ಸುವರ್ಣ, ಮಂಗಳೂರಿನ ಸುವರ್ಣ ಪ್ರತಿಷ್ಠಾನ ಪ್ರಸ್ತುತಿ ಪಡಿಸುವ ‘ಉರುಳು’ ಕನ್ನಡ ನಾಟಕ, ದಿನಾಂಕ 22-02-2024ರಂದು ರೋಹಿತ್ ಎಸ್. ಬೈಕಾಡಿ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮಣಿಪಾಲದ…

Read More

ಪುಣೆ : ಶ್ರೀ ಗುರುದತ್ತ ನೃತ್ಯಾಲಯ ಸಂಸ್ಥೆಯು ನಟ ಸಾಮ್ರಾಟ್ ನಿಲು ಪೂಲೆ ನಾಟ್ಯಗೃಹದಲ್ಲಿ ದಿನಾಂಕ 18-02-2024ರಂದು ವಾರ್ಷಿಕೋತ್ಸವವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಸನಾತನ ನಾಟ್ಯಾಲಯದ ಗುರುಗಳಾದ ವಿದುಷಿ ಶ್ರೀಲತಾ ನಾಗರಾಜ್ ಮತ್ತು ಶ್ರೀ ಮಂಜುನಾಥ ನೃತ್ಯ ಕಲಾ ಶಾಲೆ ಕಲಬುರ್ಗಿಯ ನೃತ್ಯ ಗುರು ವಿದ್ವಾನ್ ಮಂಜುನಾಥ ಎನ್. ಪುತ್ತೂರು ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಂಸ್ಥೆಯ 100ಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಲಿದ್ದಾರೆ.

Read More

ಮಂಗಳೂರು : ಮಾಂಡ್ ಸೊಭಾಣ್ ಸಂಸ್ಥೆಯ ಕಲಾಕುಲ್ ನಾಟಕ ರೆಪರ್ಟರಿ ವತಿಯಿಂದ ‘ಟ್ರೈಕ್ವೆಟ್ರಾ’ ಎಂಬ ದಶದಿನಗಳ ನಾಟಕ ಕಾರ್ಯಾಗಾರ ದಿನಾಂಕ 17-02-2024ರಿಂದ 26-02-2024ರವರೆಗೆ ಪ್ರತಿ ದಿನ ಸಂಜೆ 5.30ರಿಂದ 8.30ರವರೆಗೆ ಶಕ್ತಿನಗರದ ಕಲಾಂಗಣದಲ್ಲಿ ನಡೆಯಲಿದೆ. ನೇಷನಲ್ ಸ್ಕೂಲ್ ಆಫ್ ಡ್ರಾಮಾ ಪದವೀಧರೆ ಸವಿತ ರಾಣಿ ಇವರು ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ. ದೈಹಿಕ ಚಲನೆ, ಹಾವಭಾವ, ಪ್ರದರ್ಶನಾತ್ಮಕ ಸುಧಾರಣೆ, ದೃಶ್ಯ ಸಂರಚನೆ ಮತ್ತಿತರ ರಂಗಭೂಮಿಯ ನಟನಾ ಕೌಶಲ್ಯ ಹಾಗೂ ಕಲಾತ್ಮಕತೆಯನ್ನು ಹೆಚ್ಚಿಸುವ ತರಬೇತಿ ನೀಡಲಿದ್ದಾರೆ. ವಿದ್ದು ಉಚ್ಚಿಲ್ ಹಾಗೂ ವಿಕಾಸ್ ಕಲಾಕುಲ್ ಸಹಕಾರ ನೀಡಲಿದ್ದಾರೆ. ದಿನಾಂಕ 25-02-2024ರಂದು ಸವಿತ ರಾಣಿ ಇವರಿಂದ `ರೆಸ್ಟ್ ಲೆಸ್ ನೆಸ್ ಇನ್ ಪೀಸಸ್’ ಎಂಬ ಏಕ ವ್ಯಕ್ತಿ ಪ್ರದರ್ಶನ ಹಾಗೂ ಮಾಂಡ್ ತಂಡದಿಂದ `ನಿಮ್ಣೆಂ ಉತರ್’ ನಾಟಕ ಪ್ರದರ್ಶನಗೊಳ್ಳಲಿದೆ. ಸಮಾರೋಪದಲ್ಲಿ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರಿಂದ ಪ್ರಮಾಣಪತ್ರ ನೀಡಲಾಗುವುದು. ಶಿಬಿರ ಶುಲ್ಕ ರೂ.1,000/-. ಹೆಚ್ಚಿನ ಮಾಹಿತಿಗಾಗಿ ಮಾಂಡ್ ಸೊಭಾಣ್…

Read More

ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮಂಗಳೂರು ತಾಲೂಕು ಸಮಿತಿಯ ಚೊಚ್ಚಲ ಕಾರ್ಯಕ್ರಮ ‘ರಾಮ ಕಥಾ ವೈಭವ’ವು ದಿನಾಂಕ 03-02-2024ರಂದು ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ನಡೆಯಿತು. ಅ.ಭಾ.ಸಾ.ಪ.ದ ಮಂಗಳೂರು ತಾಲೂಕು ಅಧ್ಯಕ್ಷೆ ಡಾ. ಮೀನಾಕ್ಷಿ ರಾಮಚಂದ್ರ ಶ್ರೀರಾಮನ ಚಿತ್ರಪಟಕ್ಕೆ ದೀಪ ಬೆಳಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಖ್ಯಾತ ಗಮಕಿಗಳಾದ ಶ್ರೀಯುತ ಸುರೇಶ್ ಅತ್ತೂರ್‌ ಇವರು ರಾಮ ಕಥಾ ವೈಭವ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮಕ್ಕೆ ತೊರವೆ ರಾಮಾಯಣದ ಆಯ್ದ ಭಾಗದ ವಾಚನದೊಂದಿಗೆ ವಿದ್ಯುಕ್ತ ಚಾಲನೆಯನ್ನು ನೀಡಿದರು. ಅನಂತರ ಶ್ರೀ ಚಂದ್ರಹಾಸ ಕಣಂತೂರು, ಶ್ರೀಮತಿ ಉಷಾ ಅಮೃತಕುಮಾರ್, ರವಿಕಲಾ ಸುಂದರ್, ಅಶ್ವಿನಿ, ಗೀತಾ ಲಕ್ಷ್ಮೀಶ್, ಡಾ. ಕವಿತಾ, ಯಶೋದ ಕುಮಾರಿ, ಚಂದ್ರಪ್ರಭ ದಿವಾಕರ್ ಮತ್ತು ಸಂಧ್ಯಾ ಆಳ್ವ ವಿವಿಧ ರಾಮಾಯಣಗಳನ್ನು ವಾಚಿಸಿದರು. ಸಭಿಕರಾಗಿ ಪಾಲ್ಗೊಂಡಿದ್ದ ಶ್ರೀ ತುಪ್ಪೇಕಲ್ಲು ನರಸಿಂಹ ಶೆಟ್ಟಿ, ಶ್ರೀ ಶಿವಪ್ರಸಾದ್ ಶೆಟ್ಟಿ, ಶ್ರೀಮತಿ ಜ್ಯೋತಿ ಮಹಾದೇವ್‌ರವರು ತಮ್ಮ ಅನಿಸಿಕೆಗಳೊಂದಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಅ.ಭಾ.ಸಾ.ಪ. ಇದರ ಕೇಂದ್ರ ಸಮಿತಿಯ ಪದಾಧಿಕಾರಿಗಳಾದ…

Read More

ಮಂಗಳೂರು : ಶ್ರೀ ವಾಗೀಶ್ವರಿ ಯಕ್ಷಗಾನ ಸಂಘವು ಮಂಗಳೂರು ಕುಡ್ತೇರಿ ಶ್ರೀ ಮಹಾಮಾಯಾ ದೇವಸ್ಥಾನದಲ್ಲಿ ದಿನಾಂಕ 11-02-2024ರಂದು ಅಗಲಿದ ಶ್ರೀ ನಾಗೇಶ ಪ್ರಭುಗಳಿಗೆ ಶೃದ್ಧಾಂಜಲಿ ಸಮರ್ಪಸಿತು. ಸಂಘಟನಾ ಕಾರ್ಯದರ್ಶಿ ನವನೀತ ಶೆಟ್ಟಿ, ಕಾರ್ಯದರ್ಶಿ ಸಂಜಯ ಕುಮಾರ್, ಭಾಗವತ ಅಶೋಕ್ ಬೋಳೂರು, ಪ್ರಭಾಕರ ಕಾಮತ್, ಭಾಗವತ ಸುಧಾಕರ ಸಾಲಿಯಾನ್ ನುಡಿ ನಮನ ಸಲ್ಲಿಸಿದರು. ಶೋಭಾ ಐತಾಳ್, ಜಯರಾಮ ಉರ್ವ, ಸುದರ್ಶನ್ ದಂಬೆಲ್, ಶಿವಾನಂದ ಪೆರ್ಲಗುರಿ, ರಮೇಶ್ ಆಚಾರ್ಯ ಕಾವೂರು, ಪುರುಷೋತ್ತಮ ಆಚಾರ್ಯ, ಬಿ.ಟಿ. ಕುಲಾಲ್ ಉಪಸ್ಥಿರಿದ್ದರು. ಬಳಿಕ ‘ಮಾರ್ಕಂಡೇಯ ಚರಿತ್ರೆ’ ತಾಳಮದ್ದಳೆ ಜರಗಿತು.

Read More

ಮಂಗಳೂರು : ಖ್ಯಾತ ರಂಗಕರ್ಮಿ, ರಾಜ್ಯ ಪ್ರಶಸ್ತಿ ವಿಜೇತ, ಚಲನಚಿತ್ರ ನಿರ್ದೇಶಕ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಕಾಸರಗೋಡು ಚಿನ್ನಾ ಇವರಿಗೆ ಡಾ. ಪಿ. ದಯಾನಂದ ಪೈ ಪ್ರಾಯೋಜಿತ ವಿಶ್ವ ಕೊಂಕಣಿ ಕೇಂದ್ರ ನೀಡುವ ‘ರಂಗ ಶ್ರೇಷ್ಟ ಪುರಸ್ಕಾರ’ವನ್ನು ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದ ಸಭಾಂಗಣದಲ್ಲಿ ದಿನಾಂಕ 11-02-2024ರಂದು ನಡೆದ ವಿಶ್ವ ಕೊಂಕಣಿ ಸಮಾರೋಹ ಎಂಬ ಸಾಹಿತ್ಯ ಕಲೋತ್ಸವದಲ್ಲಿ ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಜಯರಾಂ ಅಮೀನ್ ಮಾತನಾಡಿ “ಉದ್ಯಮ, ಸಾಹಿತ್ಯ, ಕಲೆ, ಸೇವೆ ಸಹಿತ ವಿವಿಧ ಕ್ಷೇತ್ರಗಳಿಗೆ ಕೊಂಕಣಿಗರು ದೇಶ ಮತ್ತು ಸಮಾಜಕ್ಕೆ ನೀಡಿರುವ ಕೊಡುಗೆ ಅನನ್ಯವಾದುದು. ಕೊಂಕಣಿ ಭಾಷೆ ಮಾತನಾಡುವ ವಿವಿಧ ಧರ್ಮ ಜಾತಿಯ ಬಹು ಸಂಸ್ಕೃತಿ ಜೀವನ ಪದ್ಧತಿಯ ಜನ ವಿಶ್ವ ಕೊಂಕಣಿ ಕೇಂದ್ರ ಎಂಬ ಕೊಡೆಯ ಅಡಿ ಒಂದಾಗಿದ್ದಾರೆ” ಎಂದರು. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ನಂದ ಗೋಪಾಲ ಶೆಣೈ ಮಾತನಾಡಿ “ಕೊಂಕಣಿಗರು ಇಂದು…

Read More