Author: roovari

ತೆಕ್ಕಟ್ಟೆ: ಕೊಮೆಯ ಯಶಸ್ವೀ ಕಲಾವೃಂದ (ರಿ.)ಕೊಮೆ, ತೆಕ್ಕಟ್ಟೆ ಸಾಂಸ್ಕೃತಿಕ ಸಂಘಟನೆ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ‘ಸಿನ್ಸ್-1999 ಶ್ವೇತಯಾನ ಕಾರ್ಯಕ್ರಮವು ದಿನಾಂಕ 18-02-2024 ರಂದು ಸಮುದ್ಯತಾ ಸಂಸ್ಥೆಯ ಸಹಯೋಗದೊಂದಿಗೆ ಕನ್ನುಕೆರೆಯ ಪ್ರೆಸಿಡೆಂಟ್ ಕನ್ವೆನ್ಷನ್ ಸೆಂಟರಿನಲ್ಲಿ ಉದ್ಘಾಟನೆಗೊಳ್ಳಲಿದೆ. ಸಂಜೆ ಗಂಟೆ 5.00ಕ್ಕೆ ತೆಕ್ಕಟ್ಟೆ ಹಯಗ್ರೀವದಿಂದ ಮೆರವಣಿಗೆಯೊಂದಿಗೆ ಕನ್ನುಕೆರೆಯ ಪ್ರೆಸಿಡೆಂಟ್ ಕನ್ವೆನ್ಷನ್ ಸೆಂಟರ್ ತನಕ ಚಲಿಸಿ, ಸಂಜೆ ಗಂಟೆ 6.30ರಿಂದ ಕೇಂದ್ರದ ಕಲಿಕಾ ಮಕ್ಕಳಿಂದ ಕಾರ್ಯಕ್ರಮ ವೈವಿದ್ಯ ಪ್ರದರ್ಶನಗೊಳ್ಳಲಿದೆ. ಬಳಿಕ ಆರಂಭವಾಗುವ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕಾಯಕ್ರಮವನ್ನು ಉದ್ಘಾಟಿಸಲಿದ್ದು, ಸುಜಯ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಯಕ್ಷಗಾನದ ವಿದ್ವಾಂಸ ಪವನ್ ಕಿರಣ್‌ಕೆರೆ ಶುಭಾಸಂಶನೆ ಮಾಡಲಿದ್ದಾರೆ. ಶಾಸಕ ಕಿರಣ್ ಕುಮಾರ್ ಕೊಡ್ಗಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಕಾಂಗ್ರೆಸ್ ಮುಖಂಡ ದಿನೇಶ ಹೆಗ್ಡೆ ಮೊಳಹಳ್ಳಿ, ತಲ್ಲೂರು ಶಿವರಾಮ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶ್ರೀಮತಿ…

Read More

ಕಾರ್ಕಳ : ಕಾರ್ಕಳದ ಕ್ರಿಯೇಟಿವ್‌ ಶಿಕ್ಷಣ ಪ್ರತಿಷ್ಠಾನದ ಮಹತ್ವಾಕಾಂಕ್ಷಿ ಯೋಜನೆಯಾದ “ಮೊಬೈಲ್‌ ಬಿಡಿ, ಪುಸ್ತಕ ಹಿಡಿ” ಅಭಿಯಾನವು ದಿನಾಂಕ 6-01-2024 ರಿಂದ 10-01-2024ರ ವರೆಗೆ ನಡೆಯಿತು. ಯುವಜನರು ಮತ್ತು ವಿದ್ಯಾರ್ಥಿಗಳನ್ನು ಓದಿನ ಕಡೆಗೆ ಸೆಳೆಯಬೇಕು, ಮೊಬೈಲಿನ ಬಳಕೆಯನ್ನು ಹಿತಮಿತವಾಗಿ ಮಾಡಬೇಕೆಂಬ ಉದ್ದೇಶವಿರಿಸಿಕೊಂಡು ಕಾರ್ಕಳ, ಉಡುಪಿ, ಪುತ್ತೂರು, ಸುಳ್ಯದ ಶಾಲೆಗಳಿಗೆ ಮತ್ತು ಆಸಕ್ತ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಸಾಹಿತ್ಯಕ್ಷೇತ್ರ ಓದುಗರ ಬರ ಎದುರಿಸುತ್ತಿದೆ ಎಂಬ ಮಾತಿನ ನಡುವೆಯೂ “ದಿನಕ್ಕೊಂದು ಪುಸ್ತಕ”ವನ್ನು ಶಾಲೆಗಳಿಗೆ ತಲುಪಿಸುವ ಕಾರ್ಯ ಮಾಡಲಾಯಿತು. ಕಾರ್ಕಳ ತಾಲೂಕಿನ ಸ್ಥಳೀಯ ಶಾಲೆಗಳನ್ನು ಸಂದರ್ಶಿಸಿ ಪುಸ್ತಕವನ್ನು ಕೊಡಮಾಡಲಾಯಿತು. ಸರ್ವಜನಿಕರಿಂದ ಮತ್ತು ವಿದ್ಯಾಭಿಮಾನಿಗಳಿಂದ ಅಪೂರ್ವ ಬೆಂಬಲ ವ್ಯಕ್ತವಾಗಿ ಪ್ರತಿನಿತ್ಯ ಸುಮಾರು ಹತ್ತು ಪುಸ್ತಕಗಳನ್ನು ಪುಸ್ತಕ ದಾನಿಗಳ ನೆರವಿನೊಂದಿಗೆ ವಿತರಿಸಲಾಯಿತು. ಈ ಯೋಜನೆಗೆ ಸಾರ್ವಜನಿಕರು ಹಾಗೂ ಪುಸ್ತಕ ಪ್ರಿಯರಿಂದ ರೂಪಾಯಿ 28,110 ಸಂಗ್ರಹಗೊಂಡು, ದಿನಕ್ಕೆ 10 ಪುಸ್ತಕದಂತೆ ಒಟ್ಟು 312ಪುಸ್ತಕಗಳನ್ನು ಜನವರಿ ತಿಂಗಳಿನಲ್ಲಿ ಕಾರ್ಕಳವಲ್ಲದೆ ದೂರದ ಸುಳ್ಯ, ಪುತ್ತೂರಿನ ಶಾಲೆಗಳನ್ನೂ ಆಯ್ಕೆಮಾಡಿ ಪುಸ್ತಕ ವಿತರಿಸಲಾಯಿತು. ಪುಸ್ತಕ ಸ್ವೀಕರಿಸಿದ…

Read More

ಮೂಡುಬಿದಿರೆ : ಪ್ಲಾಸ್ಟಿಕ್ ಅತಿ ಬಳಕೆ ಹಾಗೂ ಅವೈಜ್ಞಾನಿಕ ವಿಲೇವಾರಿಯಿಂದ ಕ್ಯಾನ್ಸರ್‌ಕಾರಕ ರೋಗಕ್ಕೆ ತುತ್ತಾಗಬಹುದು. ಕ್ಯಾನ್ಸರ್ ಮಾತ್ರವಲ್ಲ, ಹಲವಾರು ರೋಗರುಜಿನಗಳಿಗೆ ಆಗರವಾಗಬಹುದು. ನಿಮಗಿದು ಗೊತ್ತಾ…? ಹಾಗಿದ್ದರೆ ತಡ ಯಾಕೆ ಕಸವನ್ನು ಹಸಿ- ಒಣ ಎಂದು ವಿಂಗಡಣೆ ಮಾಡಿ, ವಿಲೇವಾರಿ ಮಾಡಿ… ದಿನಾಂಕ 09-02-2024ರಂದು ಮೂಡುಬಿದಿರೆಯ ವಾರದ ಸಂತೆಯ ಶುಕ್ರವಾರ ಸಂಜೆ ಜನನಿಬಿಡದ ಸ್ವರಾಜ್ಯ ಮೈದಾನ ಹಾಗೂ ಬಸ್ ನಿಲ್ದಾಣದ ಬಳಿ ಪರಿಸರ ಕಾಳಜಿಯನ್ನು ಮೂಡಿಸಿದ್ದು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಕ್ತ ಆಯ್ಕೆ ವಿಷಯದ ವಿದ್ಯಾರ್ಥಿಗಳು. ಮೂಡುಬಿದಿರೆ ಪುರಸಭೆ ಸಹಯೋಗದಲ್ಲಿ ಕಸ ವಿಲೇವಾರಿ ಮಹತ್ವ, ಪ್ಲಾಸ್ಟಿಕ್ ಅಪಾಯದ ಕುರಿತು ಬೀದಿ ನಾಟಕ ಮಾಡಿದ ವಿದ್ಯಾರ್ಥಿಗಳು ಸೇರಿದ್ದ ಜನರ ಮನ ಸೆಳೆದರು. ಪರಿಸರ ಕಾಳಜಿಯ ಸಂದೇಶ ಸಾರಿದರು. ಅಷ್ಟು ಮಾತ್ರವಲ್ಲ, ಕಸವನ್ನು ಯಾವ ರೀತಿ ವಿಂಗಡಣೆ ಮಾಡಬೇಕು? ಎಲ್ಲಿ ಎಸೆಯಬೇಕು? ನಿರ್ಲಕ್ಷ್ಯದ ಪರಿಣಾಮ ಏನು? ಎಂಬಿತ್ಯಾದಿ ವಿವರಗಳನ್ನು ಸಂಭಾಷಣೆ, ಅಭಿನಯ, ಪ್ರಾತ್ಯಕ್ಷಿಕೆಗಳ ರಂಗ ರೂಪದ ಮೂಲಕ ಪ್ರೇಕ್ಷಕರಿಗೆ…

Read More

ಕಾಸರಗೋಡು : ಕೀರಿಕ್ಕಾಡು ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕಿರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಡಾ. ರಮಾನಂದ ಬನಾರಿ ಅವರ ಹಿರಿತನದಲ್ಲಿ ‘ಅಗ್ರ ಪೂಜೆ’ ಯಕ್ಷಗಾನ ತಾಳಮದ್ದಳೆಯು ದಿನಾಂಕ 27-01-2024ರಂದು ಜರಗಿತು. ಭಾಗವತರಾಗಿ ಮೋಹನ ಮೆಣಸಿನಕಾನ, ಚೆಂಡೆ ಮದ್ದಳೆ ವಾದನದಲ್ಲಿ ಮಂಡೆಕೋಲು ಅಪ್ಪಯ್ಯ ಮಣಿಯಾಣಿ, ವಿಷ್ಣುಶರಣ ಬನಾರಿ, ಕೃಷ್ಣಪ್ರಸಾದ ಬೆಳ್ಳಿಪ್ಪಾಡಿ ಸಹಕರಿಸಿದರು. ಅರ್ಥಧಾರಿಗಳಾಗಿ ವೆಂಕಟ್ರಮಣ ಮಾಸ್ತರ್ ದೇಲಂಪಾಡಿ, ಐತ್ತಪ್ಪ ಗೌಡ ಮುದಿಯಾರು, ರಾಮಯ್ಯ ರೈ ಕಲ್ಲಡ್ಕಗುತ್ತು, ರಮಾನಂದ ರೈ ದೇಲಂಪಾಡಿ, ಭಾಸ್ಕರ ಮಾಸ್ತರ್ ದೇಲಂಪಾಡಿ, ರಾಮ ನಾಯ್ಕ ಈಶ್ವರಮಂಗಲ, ರಜತ್ ಡಿ.ಆರ್., ಬಿ.ಎಚ್. ವೆಂಕಪ್ಪ, ಗೋಪಾಲಕೃಷ್ಣ ಮುದಿಯಾರು ಭಾಗವಹಿಸಿದರು. ಬಬಿತಾ ಕೋಟಿಗದ್ದೆ ಸ್ವಾಗತಿಸಿ, ನಂದಕಿಶೋರ ಬನಾರಿ ವಂದಿಸಿದರು.

Read More

ಎಲ್.ವಿ. ಶಾಂತಕುಮಾರಿ ಅವರು ಹಿರಿಯ ಲೇಖಕಿ. ಆಂಗ್ಲ ಸಾಹಿತ್ಯವನ್ನು ಪಾಠ ಮಾಡುತ್ತಿದ್ದವರು. ಕನ್ನಡ ಕವಯತ್ರಿಯಾಗಿ, ವಿಮರ್ಶಕಿಯಾಗಿ, ಕನ್ನಡದಿಂದ ಇಂಗ್ಲೀಷಿಗೂ ಇಂಗ್ಲೀಷಿನಿಂದ ಕನ್ನಡಕ್ಕೂ ಮಹತ್ವದ ಕೃತಿಗಳನ್ನು ಅನುವಾದಿಸಿರುವ ಅನುವಾದಕಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ಹಲವು ದಶಕಗಳ ಅನುಭವವುಳ್ಳವರು. ಸ್ವಭಾವತಃ ಬರಹಗಾರ್ತಿಯಾಗಿರುವುದರಿಂದ ಅವರ ಮನಸ್ಸಿನ ಭಾವನೆಗಳು ಕವಿತೆಗಳಾಗಿ ಅಕ್ಷರರೂಪ ತಳೆದಿವೆ. ಕವಯತ್ರಿಯ ಮಾತುಗಳಿವು: “ಮನಸ್ಸಿಗೆ ಸಂತೋಷವೋ, ದುಃಖವೋ ಆದಾಗಲೋ, ಬದುಕಿನ ಹಲವಾರು ಭಾವಗಳು ಮನಸ್ಸನ್ನು ಮುತ್ತಿದ್ದಾಗಲೋ ಗುರುತು ಹಾಕಿಕೊಂಡಿದ್ದ ಬರಹಗಳಿವು. ಕೆಲವೊಮ್ಮೆ ಭಾವನೆಗಳನ್ನು ಹಂಚಿಕೊಳ್ಳಲಾಗದಿದ್ದಾಗ ಮನಸ್ಸು ತನಗೆ ತಾನೆ ಹೇಳಿಕೊಂಡ ಮಾತುಗಳು ಮಾತ್ರ. ಇವನ್ನು ಈಗ ಸುಮಾರು ನಲವತ್ತು ವರ್ಷಗಳಿಗೂ ಮುಂಚಿನಿಂದ ಬರೆಯುತ್ತಾ ಬಂದಿರುವ ಸ್ವಗತಗಳೆಂದರೆ ಹೆಚ್ಚು ಸರಿಯಾದೀತು. ಸುತ್ತಮುತ್ತಲ ವಾತಾವರಣ, ಪರಿಸ್ಥಿತಿ, ಪ್ರಕೃತಿ, ಜನರ ವರ್ತನೆಗಳು ಬೇರೆ ಬೇರೆ ರೀತಿಯ ಪರಿಣಾಮಗಳನ್ನು ಉಂಟುಮಾಡಿ ನಮ್ಮನ್ನು ಪ್ರತಿಕ್ರಿಯಿಸುವಂತೆ ಒತ್ತಾಯಿಸುವುದಂತೂ ಸತ್ಯ. ಪ್ರತಿಕ್ರಿಯಿಸುವುದಕ್ಕಿಂತಲೂ ಹಲವು ಬಾರಿ ಈ ಬಾಹ್ಯ ಪ್ರಚೋದನೆಗಳಿಂದ ನಮ್ಮ ಒಳಗನ್ನು ನಾವು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬಹುದು ಎನಿಸುತ್ತದೆ. ಇಲ್ಲಿನ ಕೆಲವು ಬರಹಗಳು ಅಂತಹ ಪ್ರಯತ್ನಗಳಾಗಿರಬಹುದು. ಸುತ್ತ…

Read More

ಪುತ್ತೂರು : ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ಶಾಲಾ ಮಟ್ಟದಲ್ಲಿ ನಡೆಸಿದ ಪ್ರಬಂಧ-ಚಿತ್ರಕಲೆ -ಭಾಷಣ ಸ್ಪರ್ಧೆಗಳ ಬಹುಮಾನ ವಿತರಣೆ ಕಾರ್ಯಕ್ರಮವು ದಿನಾಂಕ 14-02-2024ರ ಬುಧವಾರ ಬೆಳಿಗ್ಗೆ 9.30 ರಿಂದ ಪುತ್ತೂರಿನ ಪೆರ್ಲಡ್ಕದಲ್ಲಿರುವ ಬಾಲವನದಲ್ಲಿ ನಡೆಯಲಿದೆ. ಪುತ್ತೂರು ತಾಲೂಕಿನ ಸುಮಾರು 77 ಶಾಲೆಗಳಿಂದ 670 ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವವು ಮಾನ್ಯ ಸಹಾಯಕ ಆಯುಕ್ತರ ನೇತೃತ್ವದಲ್ಲಿ ನಡೆಯಲಿದೆ. ಮಾನ್ಯ ಸಹಾಯಕ ಆಯುಕ್ತರು, ಮಾನ್ಯ ತಹಸಿಲ್ದಾರ್, ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತ ಅವರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ‘ಸಾಹಿತ್ಯದ ನಡಿಗೆ ಕಾರಂತಜ್ಜನ ಮನೆಗೆ’ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಕ.ಸಾ.ಪ. ಪುತ್ತೂರು ವೆಬ್ಸೈಟ್ ಮೊಬೈಲ್ ಆವೃತಿಯ ಲೋಕಾರ್ಪಣೆ ಹಾಗೂ ಶ್ರೀ ಪಟ್ಟಾಭಿರಾಮ ಸುಳ್ಯ ಇವರಿಂದ ಹಾಸ್ಯ ಪ್ರಹಸನ ಕಾರ್ಯಕ್ರಮ ನಡೆಯಲಿದೆ.

Read More

ಮೂಡುಬಿದಿರೆ (ವಿದ್ಯಾಗಿರಿ ) : ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಯಕ್ಷಗಾನ ಕಲೆಯಾಧಾರಿತ ರಾಜ್ಯಮಟ್ಟದ ಸ್ಪರ್ಧೆ ‘ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ- 2023-24’ ಕಾರ್ಯಕ್ರಮವು ದಿನಾಂಕ 06-02-2024ರ ಮಂಗಳವಾರದಂದು ವಿದ್ಯಾಗಿರಿಯ ಮುಂಡ್ರೆದಗುತ್ತು ಅಮರನಾಥ ಶೆಟ್ಟಿ (ಕೃಷಿ ಸಿರಿ) ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಗೌರವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ಮಾತನಾಡಿ “ಯಕ್ಷಗಾನವನ್ನು ಒಂದು ಪರಿಪೂರ್ಣ ಕಲೆಯನ್ನಾಗಿ ಮಾಡುವ ಮಹತ್ಕಾರ್ಯವನ್ನು ಕಲಾವಿದರು, ಭಾಗವತರು ಹಾಗೂ ವೇಷಧಾರಿಗಳು ಮಾಡುತ್ತಿದ್ದಾರೆ. ಇವರ ಕೊಡುಗೆಯಿಂದ ಯಕ್ಷಗಾನ ಅತ್ಯುನ್ನತ ಸ್ಥಾನಕ್ಕೆ ಏರಿದೆ. ಸಂಗೀತ, ಭಾಗವತಿಗೆ, ಹಿಮ್ಮೇಳ, ವೇಷಭೂಷಣ, ನೃತ್ಯಗಳನ್ನು ಒಳಗೊಂಡ ಸರ್ವ ಗುಣ ಸಂಪನ್ನವಾದಂತಹ ಕಲೆ ಯಕ್ಷಗಾನ. ಪಟ್ಲ ಸತೀಶ್ ಶೆಟ್ಟಿ ಕೇವಲ ಕಲಾವಿದ ಮಾತ್ರವಲ್ಲ. ಪಟ್ಲ ಫೌಂಡೇಶನ್ ಸ್ಥಾಪಿಸಿ ಅನೇಕ ಕಲಾವಿದರಿಗೆ ಬದುಕು ಕಟ್ಟಿಕೊಡುತ್ತಿದ್ದಾರೆ.” ಎಂದು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಮೂಡಬಿದಿರೆಯ ಶಾಸಕ ಉಮಾನಾಥ್ ಎ.…

Read More

ಬೆಂಗಳೂರು : ಶ್ರೀಮಾತಾ ಚಾರಿಟೇಬಲ್‌ ಟ್ರಸ್ಟ್ ಹುಳಿಯಾರು ಹಾಗೂ ಸೆಂಟರ್ ಸ್ಟೇಜ್ ಬೆಂಗಳೂರು ಇವರು ಕನ್ನಡ ಸಾಂಸ್ಕೃತಿಕ ಲೋಕದ ಸಂಘಟಕ ಶ್ರೀನಿವಾಸ ಜಿ. ಕಪ್ಪಣ್ಣ ಅವರ ಹೆಸರಿನಲ್ಲಿ ನೀಡುತ್ತಿರುವ ‘ಸೆಂಟರ್ ಸ್ಟೇಜ್ ಕಪ್ಪಣ್ಣ ಸಾಂಸ್ಕೃತಿಕ ಪ್ರಶಸ್ತಿ’ಗೆ ಪ್ರಸಿದ್ಧ ರಂಗಕರ್ಮಿ, ಸುಳ್ಯದ ರಂಗಮನೆಯ ಡಾ. ಜೀವನ್ ರಾಂ ಸುಳ್ಯ ಹಾಗೂ ‘ಸೆಂಟರ್ ಸ್ಟೇಜ್ ಕಪ್ಪಣ್ಣ ಸಾಂಸ್ಕೃತಿಕ ಯುವ ಪ್ರಶಸ್ತಿ’ಗೆ ಸಂಘಟಕ ಹಾಗೂ ನಿರ್ದೇಶಕರಾದ ನರೇಶ್ ಡಿಂಗ್ರಿ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 13-02-2024ರಂದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ನಡೆಯಲಿದೆ. ‘ಸೆಂಟರ್ ಸ್ಟೇಜ್ ಕಪ್ಪಣ್ಣ ಸಾಂಸ್ಕೃತಿಕ ಪ್ರಶಸ್ತಿ’ 50 ಸಾವಿರ ನಗದು ಹಾಗೂ ‘ಸೆಂಟರ್ ಸ್ಟೇಜ್ ಕಪ್ಪಣ್ಣ ಸಾಂಸ್ಕೃತಿಕ ಯುವ ಪ್ರಶಸ್ತಿ’ಯು 25 ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಡಾ. ಜೀವನ್ ರಾಂ ಸುಳ್ಯ ಜೀವನ್‌ ರಾಂ ಅವರು ಕಳೆದ 25 ವರ್ಷಗಳಿಂದ ರಂಗಭೂಮಿಯಲ್ಲಿ ದುಡಿಯುತ್ತಿದ್ದು, ಸುಳ್ಯದ ಹಳೆಗೇಟಿನಲ್ಲಿ ತನ್ನ ವಾಸದ…

Read More

ಕಾಸರಗೋಡು : ಕೇರಳ ಪೋಕ್ಲೋರ್ ಅಕಾಡಮಿ ಪ್ರಶಸ್ತಿ – 2022ನೇ ಸಾಲಿನ ಪ್ರಶಸ್ತಿಗೆ ರಮೇಶ್ ಶೆಟ್ಟಿ ಬಾಯಾರ್ ಆಯ್ಕೆಯಾಗಿದ್ದಾರೆ. ಯಕ್ಷಗಾನದ ಪ್ರಸಿದ್ಧ ಕಲಾವಿದ ಕೆ. ರಮೇಶ್ ಶೆಟ್ಟಿ ಬಾಯಾರ್ ಅವರ ಕಲಾಕ್ಷೇತ್ರದ ಸಾಧನೆಯನ್ನು ಗುರುತಿಸಿ ಕೇರಳ ಸರಕಾರ 2022ರಸಾಲಿನ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. ರಮೇಶ್ ಶೆಟ್ಟಿ ಬಾಯಾರ್ ಅವರು ಮಂಜೇಶ್ವರ ತಾಲೂಕಿನ ಪೈವಳಿಕೆ ಪಂಚಾಯಿತಿನ ಬಾಯಾರು ನಿವಾಸಿ. ಸುಮಾರು 57 ವರ್ಷದ ಕಲಾಅನುಭವಿ. ವೇಷಧಾರಿಯಾಗಿ, ನಿರ್ದೇಶಕರಾಗಿ, ಪ್ರಸಾಧನ ಕಲಾವಿದನಾಗಿ, ಯಕ್ಷಗಾನ ಶಿಕ್ಷಕನಾಗಿ ಹಾಗೂ ಹಿಮ್ಮೇಳವ ವಾದಕರಾಗಿ ಪ್ರಸಿದ್ಧರು. ಇವರು ಯಕ್ಷಗಾನ ಕಲಾವಿದ ಪ್ರಸಿದ್ದ ಸ್ತ್ರೀ ವೇಷಧಾರಿ ದಿ. ಐತ್ತಪ್ಪ ಶೆಟ್ಟಿ ಕುಳ್ಯಾರು ಮತ್ತು ಕಲ್ಯಾಣಿ ಹೆಂಗ್ಸು ಇವರ ಸುಪುತ್ರ. ತನ್ನ 12ನೇ ವಯಸ್ಸಿನಲ್ಲಿಯೇ ಯಕ್ಷಗಾನದಲ್ಲಿ ಅಭಿನಯಿಸಲು ಪ್ರಾರಂಭಿಸಿದ ರಮೇಶ್ ಶೆಟ್ಟಿ ತಂದೆಯಿಂದಲೇ ಪ್ರಾಥಮಿಕ ಯಕ್ಷ ಶಿಕ್ಷಣ ಹಾಗೂ ದಿ. ಪ್ರಕಾಶ ಚಂದ್ರ ರಾವ್ ಬಾಯಾರು ಇವರಿಂದ ಯಕ್ಷಗಾನದ ಸಂಪೂರ್ಣ ತರಬೇತಿ ಪಡೆದು ಯಕ್ಷಗಾನದ ಎಲ್ಲಾ ಪ್ರಕಾರದ ವೇಷಗಳನ್ನು ಸಮರ್ಥವಾಗಿ ನಿಭಾಯಿಸಿದವರು.…

Read More

ಬೆಂಗಳೂರು : ಮಂಗಳೂರಿನ ಬಲ್ಲಾಲ್‌ಬಾಗ್ ಇಲ್ಲಿರುವ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರ, ಆರ್ಟ್ ಕೆನರಾ ಟ್ರಸ್ಟ್ ವತಿಯಿಂದ ಕರಾವಳಿಯ 17 ಪ್ರತಿಭಾವಂತ ಕಲಾವಿದರ ಸಂಗ್ರಹವನ್ನು ಒಳಗೊಂಡಿರುವ ‘ಟ್ರಾನ್ಸ್ ಪೋಸಿಂಗ್ ಎಕ್ಸ್ ಪೀರಿಯೆನ್ಸ್’ (ಪರಿವರ್ತನೆ ಅನುಭವಗಳು) ಎಂಬ ಪ್ರದರ್ಶನವು ದಿನಾಂಕ 03-02-2024 ಮತ್ತು 04-02-2024ರಂದು ನಡೆಯಿತು. ಈ ಕಲಾ ಪ್ರದರ್ಶನವನ್ನು ಖ್ಯಾತ ಕಲಾ ಇತಿಹಾಸಕಾರರಾದ ರಜನಿ ಪ್ರಸನ್ನ ಅವರು ದಿನಾಂಕ 03-02-2024ರ ಶನಿವಾರದಂದು ಬೆಂಗಳೂರಿನ ದೊಮ್ಮಲೂರಿನಲ್ಲಿರುವ ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್ (BIC) ನಲ್ಲಿ ಉದ್ಘಾಟಿಸಿದರು. ಈ ಕಾರ್ಯಕ್ರಮವು ಭಾಷಾ ರೋಗ ತಜ್ಞ ಡಾ. ಪ್ರತಿಭಾ ಕಾರಂತ್, ಸಂರಕ್ಷಣಾ ಪ್ರಾಣಿಶಾಸ್ತ್ರಜ್ಞ ಡಾ. ಉಲ್ಲಾಸ್ ಕಾರಂತ್ ಮತ್ತು ಶ್ರೀ ಪ್ರಸನ್ನ ಸೇರಿದಂತೆ ಇತರ ಗಣ್ಯ ಅತಿಥಿಗಳ ಉಪಸ್ಥಿತಿಗೆ ಸಾಕ್ಷಿಯಾಯಿತು. ಆರ್ಟ್ ಕೆನರಾ ಟ್ರಸ್ಟ್ ಆಯೋಜಿಸಿರುವ ಈ ಪ್ರದರ್ಶನವು ಕರಾವಳಿ ಕರ್ನಾಟಕದ ಬೇರುಗಳನ್ನು ಹೊಂದಿರುವ 17 ಕಲಾವಿದರು ರಚಿಸಿದ ವರ್ಣ ಚಿತ್ರಗಳು, ಶಿಲ್ಪಗಳು, ಛಾಯಾಚಿತ್ರಗಳು ಮತ್ತು ಇನ್ ಸ್ವಾಲೇಶನ್ ಆರ್ಟ್ ಗಳ ವೈವಿಧ್ಯಮಯ ಕಲಾಕೃತಿಗಳನ್ನು ಪ್ರದರ್ಶಿಸುತ್ತದೆ.…

Read More