Author: roovari

ಕನ್ನಡದ ನವೋದಯ ಕಾಲದಲ್ಲಿ ಜನಪದ ಸಾಹಿತ್ಯವು ಆ ಕಾಲದ ಮನಸ್ಸನ್ನು ಸೆರೆ ಹಿಡಿದಿತ್ತು. ಭಾಷೆ ಮತ್ತು ಸತ್ವದ ದೃಷ್ಟಿಯಿಂದ ಆಂಗ್ಲ ಭಾಷೆಯ ಕಾವ್ಯದಷ್ಟೇ ಪ್ರಭಾವವನ್ನು ಬೀರಿತ್ತು. ನೆಲದ ಬದುಕಿನ ಭದ್ರ ಪರಂಪರೆಯನ್ನು ತೋರಿಸಿಕೊಟ್ಟಿತ್ತು. ಉತ್ತರ ಕರ್ನಾಟಕದಲ್ಲಿ ದ.ರಾ. ಬೇಂದ್ರೆ, ಮಧುರಚೆನ್ನ ಮತ್ತು ಆನಂದಕಂದ ಮುಂತಾದವರು ಜನಪದ ಕಾವ್ಯದಿಂದ ಪ್ರಭಾವಿತರಾಗಿದ್ದರು. ಜಾನಪದ ಸತ್ವವನ್ನು ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿ ಹೊಂದಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ಮಾತನ್ನು ನವೋದಯದ ನಂತರದ ತಲೆಮಾರಿಗೆ ಸೇರಿದ ಸುನಂದಾ ಬೆಳಗಾಂವಕರರ ಕವಿತೆಗಳಿಗೂ ಅನ್ವಯಿಸಬಹುದು. ಸುನಂದಾ ಬೆಳಗಾಂವಕರರ ‘ಶಾಲ್ಮಲಿ’ಯು ಉತ್ತಮ ಕವಿತೆಗಳ ಸುಂದರ ಗುಚ್ಛ. ಧಾರವಾಡದ ಜನಜೀವನದ ಅಂಗವಾಗಿ ಮೂಡಿದ 42 ಕವನಗಳು ಮೊದಲ ಓದಿಗೇ ಸುಲಭವಾಗಿ ತೆರೆದುಕೊಳ್ಳುತ್ತವೆ. ಕೈಕೈ ಹಿಡಿದು ನಡೆದಾಡುವ ಪುಟ್ಟ ಮಕ್ಕಳಂತಿರುವ ಪ್ರಾಸಗಳು ತಾವಾಗಿಯೇ ಬೆಳೆದು ಮೈಗೂಡಿದ್ದು ಅಲ್ಲಲ್ಲಿ ಒಪ್ಪುವ ನುಡಿಗಳು ಛಂದೋಬದ್ಧವಾಗಿ ಮೈವೆತ್ತು ಮಿಂಚುತ್ತವೆ. ರಾಗಬದ್ಧವಾಗಿ ಹಾಡಬಲ್ಲ, ಭಾವಬದ್ಧವಾಗಿ ಓದಬಲ್ಲ, ಪುಟ್ಟ ಮಕ್ಕಳಿಂದ ನೃತ್ಯರೂಪಕವಾಗಿಸಲು ಯೋಗ್ಯವಾದ ‘ನವಿಲು’, ‘ಚಾಡಿ’, ‘ನಾಗ’, ‘ಗುಬ್ಬಿ’, ‘ಚುರಮುರಿ’ ಮೊದಲಾದ ಕವಿತೆಗಳ ಒಳನೋಟ-ಹೊರನೋಟಗಳಲ್ಲಿ…

Read More

ಮೈಸೂರು : ಕಾವಲುಮನೆ ಸಾಂಸ್ಕೃತಿಕ ಕೇಂದ್ರ ಮೈಸೂರು ಪ್ರಯೋಗಿಸುವ ದೇವನೂರು ಮಹಾದೇವ ಇವರು ರಚಿಸಿರುವ ಸಿ. ಬಸವ ಲಿಂಗಯ್ಯ ಇವರ ಪರಿಕಲ್ಪನೆ, ಸಂಗೀತ ಮತ್ತು ನಿರ್ದೇಶನದಲ್ಲಿ ‘ಎದೆಗೆ ಬಿದ್ದ ಅಕ್ಷರ’ ನಾಟಕ ಪ್ರದರ್ಶನವನ್ನು ಮೈಸೂರು ಮತ್ತು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಮೈಸೂರಿನಲ್ಲಿ ಕಲಾಮಂದಿರ ಆವರಣದ ಕಿರುರಂಗ ಮಂದಿರದಲ್ಲಿ ದಿನಾಂಕ 4, 9, 17, 23, 24, 25 ಮೇ 2025ರಂದು ಸಂಜೆ 6-30 ಗಂಟೆಗೆ, ಮೈಸೂರು ವಿಶ್ವವಿದ್ಯಾನಿಲಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ದಿನಾಂಕ 15 ಮೇ 2025ರಂದು ಹಾಗೂ ಬೆಂಗಳೂರು ಕಲಾಗ್ರಾಮ ಸಮಾಚ್ಚಯ ಭವನದಲ್ಲಿ ದಿನಾಂಕ 20 ಮೇ 2025ರಂದು ನಾಟಕ ಪ್ರದರ್ಶನಗೊಳ್ಳಲಿದೆ. ಹೆಚ್ಚಿನ ಮಾಹಿತಿ ಮತ್ತು ಟಿಕೆಟ್ ಗಾಗಿ 9964024281 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಕಾಸರಗೋಡು : ನಮ್ಮ ನಾಡಿನ ಗಣ್ಯ ಸಂಗೀತ ಕಲಾವಿದರಾದ ಗಾನಪ್ರವೀಣ ಶ್ರೀ ಯೋಗೀಶ ಶರ್ಮ ಬಳ್ಳಪದವು ಇವರನ್ನು ಕಲ್ಯಾಸ್ಸೇರಿ ಕೃಷ್ಣನ್ ನಂಬಿಯಾರ್ ಭಾಗವತರ್ ಸ್ಮಾರಕ ಸಂಗೀತ ಸಭಾದಿಂದ ಕೊಡಮಾಡಲ್ಪಡುವ ಪ್ರತಿಷ್ಠಿತ ‘ಸಂಗೀತ ಜ್ಯೋತಿಶ್ರೀ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ಸಂಗೀತ ಕ್ಷೇತ್ರದಲ್ಲಿ ಇವರು ತೋರಿಸಿರುವ ದೀರ್ಘಕಾಲದ ನಿಷ್ಠೆ ಮತ್ತು ಸಾಧನೆ, ಭಾರತದಾದ್ಯಂತ ಹಾಗೂ ಹೊರದೇಶಗಳಲ್ಲಿ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಹಾಡಿ ಕೇಳುಗರ ಮನಮೆಚ್ಚಿದ ಕಲಾವಿದರಾಗಿ ಹಾಗೂ ನೂರಾರು ವಿದ್ಯಾರ್ಥಿಗಳಿಗೆ ಗುರುಗಳಾಗಿ ಸಂಗೀತ ಕ್ಷೇತ್ರದಲ್ಲಿ ಇವರು ಮಾಡಿದ ಸಾಧನೆಗೆ ಹಾಗೂ ಮಹತ್ವಪೂರ್ಣ ಕೊಡುಗೆಗಳಿಗೆ ಈ ಪ್ರಶಸ್ತಿ ಸಿಕ್ಕಿದ್ದು, ಇವರ ಸಾಧನೆಗೆ ಈ ಪದಕ ಮಾನ್ಯತೆಯಾಗಿದೆ. ಕಾಸರಗೋಡು ಜಿಲ್ಲೆಯ ಬಳ್ಳಪದವು ಮೂಲದ ಶ್ರೀ ಯೋಗೀಶ ಶರ್ಮರವರು, ತನ್ನೂರಲ್ಲಿ ವೀಣಾವಾದಿನಿ ಸಂಗೀತ ವಿದ್ಯಾಪೀಠವನ್ನು ಸ್ಥಾಪಿಸಿ, ಇದೀಗ ಈ ಸಂಸ್ಥೆ ತನ್ನ ಬೆಳ್ಳಿಹಬ್ಬವನ್ನೂ ಆಚರಿಸಿದೆ. ಈ ಪ್ರಶಸ್ತಿಯನ್ನು ದಿನಾಂಕ 04 ಮೇ 2025ರಂದು ಸಂಜೆ ಪಡಿಞ್ಞಾಟ್ಟಂ ಕೊಳುವ್ವಲ್ ಎನ್‌.ಎಸ್‌.ಎಸ್. ಆಡಿಟೋರಿಯಂನಲ್ಲಿ ನಡೆಯಲಿರುವ ಸಂಗೀತ ಸಭೆಯ ಮೂರನೇ ವಾರ್ಷಿಕೋತ್ಸವದಲ್ಲಿ ಪ್ರದಾನ…

Read More

ಹೊನ್ನಾವರ : ಪ್ರೀತಿ ಪದಗಳ ಸಹಯಾನಿ ಡಾ. ವಿಠ್ಠಲ ಭಂಡಾರಿ ನೆನಪು -4 ಕಾರ್ಯಕ್ರಮವನ್ನು ದಿನಾಂಕ 04 ಮೇ 2025ರಂದು ಬೆಳಿಗ್ಗೆ 10-30 ಗಂಟೆಗೆ ಹೊನ್ನಾವರ ಕೆರೆಕೋಣ ಸಹಯಾನದ ಅಂಗಳದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10-00 ಗಂಟೆಗೆ ‘ನಮನ’ ಸ್ವಾಮಿ ಗಾಮನಹಳ್ಳಿ ಇವರಿಂದ ಹಾಡುಗಳು, ಬೆಂಗಳೂರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರೊ. ಎಸ್. ಜಿ. ಸಿದ್ಧರಾಮಯ್ಯ ಇವರು ಈ ಕಾರ್ಯಕ್ರಮವನ್ನು ಸಾಹಿತಿ ಕೃಷ್ಣ ನಾಯಕ ಇವರು ಅಧ್ಯಕ್ಷತೆಯಲ್ಲಿ ಉದ್ಘಾಟನೆ ಮಾಡಲಿದ್ದಾರೆ. ಸಹಾಯಕ ಪ್ರಾಧ್ಯಾಪಕರಾದ ಡಾ. ಅನಸೂಯಾ ಕಾಂಬಳೆ ಇವರಿಂದ ‘ಜನಜೀವನ ಮತಧರ್ಮ ನಿರಪೇಕ್ಷತೆ’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನಡೆಯಲಿದೆ. ಸಂಧ್ಯಾ ನಾಯ್ಕ, ಸುನೈಫ್ ವಿಟ್ಲ, ವಿಲ್ಸನ್ ಕಟೀಲು, ಚಿನ್ಮಯ ಹೆಗಡೆ, ಹೆಬಸೂರ ರಂಜಾನ್ ಇವರಿಂದ ಕಾವ್ಯ ಓದು ಪ್ರಸ್ತುತಗೊಳ್ಳಲಿದೆ. ‘ಅನ್ವೇಷಣೆ’ ಸಂಪಾದಕರಾದ ಆರ್.ಜಿ. ಹಳ್ಳಿ ನಾಗರಾಜ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ‘ಸಮಕಾಲೀನ ಸಂವಾದ’ದಲ್ಲಿ ನ್ಯಾಯವಾದಿ ಪ್ರಕಾಶ ಉಡಿಕೇರಿ, ಸುರಭಿ ರೇಣುಕಾಂಬಿಕೆ ಮತ್ತು ಕಾರವಾರ ಕ.ಸಾ.ಪ.ದ ಅಧ್ಯಕ್ಷರಾದ ರಾಮಾ…

Read More

ಕಿನ್ನಿಗೋಳಿ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಿನ್ನಿಗೋಳಿ ಘಟಕದ ಉದ್ಘಾಟನೆಯನ್ನು ದಿನಾಂಕ 09 ಮೇ 2025ರಂದು ಮಧ್ಯಾಹ್ನ 3-00 ಗಂಟೆಗೆ ಕಿನ್ನಿಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಟಪದ ಎದುರು ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಸಾಧಕ ಕಲಾವಿದರಿಗೆ ಗೌರವಾರ್ಪಣೆ ನೀಡಿ ಸನ್ಮಾನಿಸಲಾಗುವುದು. ಮಧ್ಯಾಹ್ನ 3-00 ಗಂಟೆಗೆ ರವಿಚಂದ್ರ ಕನ್ನಡಿಕಟ್ಟೆ, ಅಮೃತ ಅಡಿಗ, ಸಿದ್ಧಕಟ್ಟೆ ಭರತ್ ಶೆಟ್ಟಿ, ಡಾ. ಪ್ರಖ್ಯಾತ್ ಶೆಟ್ಟಿ, ಮನ್ವಿತ್ ರೈ ಇರಾ ಇವರಿಂದ ನಡೆಯಲಿರುವ ‘ಯಕ್ಷಗಾನ ಗಾನ ವೈಭವ’ಕ್ಕೆ ಗುರುಪ್ರಸಾದ್ ಬೊಳಿಂಜಡ್ಕ ಮತ್ತು ಕೌಶಿಕ್ ರಾವ್ ಚೆಂಡೆ ಮತ್ತು ಮದ್ದಳೆಯಲ್ಲಿ ಹಾಗೂ ಪೂರ್ಣೇಶ್ ಆಚಾರ್ಯ ಚಕ್ರತಾಳದಲ್ಲಿ ಸಹಕರಿಸಲಿದ್ದಾರೆ. ಸಂಜೆ 5-00 ಗಂಟೆಗೆ ಮಂಗಳೂರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಹೇರಂಭ ಇಂಡಸ್ಟ್ರೀಸ್ ಇದರ ಮಾಲಕರಾದ ಕನ್ಯಾನ ಸದಾಶಿವ ಶೆಟ್ಟಿ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ ಸಭಾ ಕಾರ್ಯಕ್ರಮದ ಬಳಿಕ…

Read More

ಬೆಂಗಳೂರು : ‘ಸಮಷ್ಟಿ’ ಕನ್ನಡ ರಂಗತಂಡವು ನೀನಾಸಂ ಪದವೀಧರ ಮಂಜುನಾಥ ಎಲ್. ಬಡಿಗೇರ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಖ್ವಾಜಾ ನಸ್ರುದ್ದೀನ್’ ಎನ್ನುವ ಕನ್ನಡ ನಾಟಕವನ್ನು ದಿನಾಂಕ 07 ಮೇ 2025ರಂದು ರಂಗಶಂಕರದಲ್ಲಿ ಸಂಜೆ 7-30ಕ್ಕೆ ಪ್ರದರ್ಶಿಸಲಿದೆ. ನಾಟಕದ ಬಗ್ಗೆ : ಖ್ವಾಜಾ ನಸ್ರುದ್ದೀನನ ಹೆಸರು ಕೇಳದ ದೇಶವೇ ಈ ಪ್ರಪಂಚದಲ್ಲಿ ಇಲ್ಲವೆಂದು ಹೇಳಬೇಕು. ಐತಿಹಾಸಿಕ ನೆಲೆಯಲ್ಲಿ ಅವನು ಬದುಕಿದ್ದಕ್ಕೆ ಇರುವ ಪುರಾವೆಗಳೆಲ್ಲಾ ಇದೆ ಮತ್ತು ಇಲ್ಲ ಅನ್ನುವಂತಿದೆ. ಅರೇಬಿಯಾದ ಇಸ್ಲಾಮಿಕ್ ಜಾನಪದ ಕತೆಗಳಲ್ಲಿ ಸದಾ ಕತ್ತೆಯೊಂದಿಗೆ ಬರುವ ಈ ಅಲೆಮಾರಿ ನಾಯಕ, ತನ್ನ ಹಾಸ್ಯಪ್ರಜ್ಞೆ, ಬುದ್ಧಿವಂತಿಕೆ, ಹೃದಯವಂತಿಕೆ, ಮಾನವೀಯತೆ ಇವೆಲ್ಲಾ ಗುಣಗಳು ಒಟ್ಟಿಗೆ ಮೇಳೈಸಿರುವ ವಿಶಿಷ್ಟ ಪಾತ್ರ. ಪ್ರಸ್ತುತ ಸಮಷ್ಟಿಯ ಈ ನಾಟಕವು ‘ಅಡ್ವೆಂಚರ್ಸ್ ಇನ್ ಭುಕಾರ’ ಎಂಬ ರಷ್ಯನ್ ಪುಸ್ತಕವನ್ನು ಆಧರಿಸಿ ಕಟ್ಟಲಾಗಿದೆ. ಇದನ್ನು ಕನ್ನಡಕ್ಕೆ ಅನುವಾದಿಸಿದವರು ಎಲ್. ಗುಂಡಪ್ಪನವರು. ಈವರೆಗೂ ಪ್ರಪಂಚದಾದ್ಯಂತ ಇವನ ಬಗ್ಗೆ ಬೇರೆ ಬೇರೆ ಭಾಷೆಗಳಲ್ಲಿ ಸಿನೇಮಾ, ಧಾರಾವಾಹಿಗಳು ಬಂದಿರುವುದು ಇವನ ಪ್ರಸ್ತುತತೆಗೆ ಸಾಕ್ಷಿ.…

Read More

ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪರ್ಯಾಯ ಪುತ್ತಿಗೆ ಮಠದ ಸಹಯೋಗದಲ್ಲಿ ಆಯೋಜಿಸಿದ್ದ 2 ದಿನಗಳ 17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ದಿನಾಂಕ 01 ಮೇ 2025ರಂದು ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಪ್ರಾಂಶುಪಾಲ ಡಾ. ಗಣನಾಥ ಎಕ್ಕಾರು ಮಾತನಾಡಿ “ರಾಜ್ಯದಲ್ಲಿ ಕನ್ನಡ ಶಾಲೆ ಹಾಗೂ ಕನ್ನಡದ ಅಸ್ಮಿತೆ ಉಳಿಸಲು ಕನ್ನಡ ಸಾಹಿತ್ಯ ಪರಿಷತ್ ಸರಕಾರದ ಮುಂದೆ ಹಕ್ಕೊತ್ತಾಯ ಮಂಡಿಸಬೇಕು. ಗ್ರಾಮಕ್ಕೆ 2-3 ಶಾಲೆಗಳನ್ನು ನೀಡುವುದಕ್ಕಿಂತ 10 ಗ್ರಾಮಗಳನ್ನು ಒಟ್ಟುಮಾಡಿ ಒಂದು ಮಾದರಿ ಕನ್ನಡ ಶಾಲೆ ನಿರ್ಮಿಸಿ ಇಂಗ್ಲಿಷ್ ಪ್ರಧಾನವಾಗಿರಿಸಿಕೊಂಡು ಶಿಕ್ಷಣ ನೀಡಬೇಕು” ಎಂದರು. ಸಮ್ಮೇಳನದ ಅಧ್ಯಕ್ಷರಾದ ಡಾ. ಪಾದೇಕಲ್ಲು ವಿಷ್ಣುಭಟ್ ಮಾತನಾಡಿ “ಸತತ ಅಭ್ಯಾಸ ಪ್ರಯತ್ನ ಎಲ್ಲರಿಗೂ ಬೇಕಿದೆ. ಸಂದೇಹ ಬಂದರೆ ಅದಕ್ಕೆ ಪರಿಹಾರ ನೀಡುವವರು ಇಂದು ಇಲ್ಲವಾಗುತ್ತಿದ್ದಾರೆ” ಎಂದು ವಿಷಾದ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಡಾ. ಪಾದೇಕಲ್ಲು ವಿಷ್ಣು ಭಟ್ ದಂಪತಿಯನ್ನು ಗೌರವಿಸಲಾಯಿತು.…

Read More

ಕೋಟ : ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.) ಕೋಟ, ಗೀತಾನಂದ ಫೌಂಡೇಶನ್ ಮಣೂರು ಪಡುಕರೆ, ಕೋಟತಟ್ಟು ಗ್ರಾಮ ಪಂಚಾಯತ್ ಕೋಟತಟ್ಟು, ಉಸಿರು ಕೋಟ, ಬ್ರಹ್ಮಾವರ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘ, ಕುಂದಾಪ್ರ ಕನ್ನಡ ಪರಿಷತ್ತು ಉಡುಪಿ ಜಿಲ್ಲೆ ಇವರ ಸಂಯುಕ್ತ ಆಸರೆಯಲ್ಲಿ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ 2025’ವನ್ನು ದಿನಾಂಕ 04 ಮೇ 2025ರಂದು ಬೆಳಗ್ಗೆ 9-00 ಗಂಟೆಗೆ ಕೋಟ ಡಾ. ಶಿವರಾಮ ಕಾರಂತ ಥೀಂ ಪಾರ್ಕ್ ಇಲ್ಲಿ ಆಯೋಜಿಸಲಾಗಿದೆ. ಬೆಳಗ್ಗೆ 9-00 ಗಂಟೆಗೆ ಕಾಂಬ 01ರಲ್ಲಿ ಸಮ್ಮೇಳನದ ಉದ್ಘಾಟನಾ ಸಮಾರಂಭವು ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಕುಂದರ್ ಬಾರಿಕೆರೆ ಇವರ ಅಧ್ಯಕ್ಷತೆಯಲ್ಲಿ ಕುಂದಾಪ್ರ ಕನ್ನಡ ಅಧ್ಯಯನ ಪೀಠ ಇವರ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಇವರು ದೀಪ ಪ್ರಜ್ವಲನೆಯೊಂದಿಗೆ ಪ್ರಾರಂಭವಾಗಲಿದೆ. ಕುಂದಾಪ್ರ ಕನ್ನಡ ಚಿಂತಕರಾದ ಡಾ. ಅಣ್ಣಯ್ಯ ಕುಲಾಲ್ ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿರುವರು. ಕಾಂಬ 02ರಲ್ಲಿ ಕವಿಗೋಷ್ಠಿ, ಕಾಂಬ 03ರಲ್ಲಿ ‘ತಾಳ್ಮೆ…

Read More

ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ 70ನೇ ವರ್ಷದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶಿಕ್ಷಣ ಸೇರಿದಂತೆ, ಕಲೆ, ಸಾಹಿತ್ಯ, ಸಂಗೀತ, ಸಮಾಜ ಸೇವೆಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು “ಕರ್ನಾಟಕ ಸಿರಿಗನ್ನಡ ಸಿರಿ” ರಾಜ್ಯ ಪ್ರಶಸ್ತಿಗೆ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ಈ ರಾಜ್ಯ ಪ್ರಶಸ್ತಿಗೆ ಆಯ್ಕೆಯಾದವರನ್ನು ಸಮಾರಂಭದ ಪ್ರತ್ಯೇಕ ವೇದಿಕೆಯಲ್ಲಿ ಕಲಾಕುಂಚದ ಮುತ್ತೈದೆಯರು ಕನ್ನಡ ತಿಲಕವಿಟ್ಟು, ಕನ್ನಡ ಕಂಕಣ ಕಟ್ಟಿ, ಕನ್ನಡಾರತಿ ಬೆಳಗಿ, ಪುಷ್ಪವೃಷ್ಠಿಯೊಂದಿಗೆ ಗೌರವಿಸುತ್ತಾರೆ. ನಂತರ ಅವರದೇ ಭಾವಚಿತ್ರವಿರುವ ಸನ್ಮಾನಪತ್ರ, ಕನ್ನಡ ಪೇಟದೊಂದಿಗೆ ಹಾರ, ಶಾಲು, ಕನ್ನಡತಾಯಿ ಭುವನೇಶ್ವರಿಯ ಸ್ಮರಣಿಕೆ ಚಿನ್ನದ ಲೇಪನದ ಪದಕ ಕೊರಳಿಗೆ ಹಾಕಿ ಸನ್ಮಾನಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ಕೆ. ಹೆಚ್. ಮಂಜುನಾಥ್ ತಿಳಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ಹೆಚ್ಚಿನ ಮಾಹಿತಿಗೆ 9538732777 55 ಸಂಪರ್ಕಿಸಬಹುದು ಎಂದು ಕಲಾಕುಂಚ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ. ಸಿ. ಉಮೇಶ್ ವಿನಂತಿಸಿದ್ದಾರೆ.

Read More

ಮಡಿಕೇರಿ: ಡಾ.ವಾಮನ್ ಬೇಕಲ್ ಸ್ಥಾಪಕ ಸಂಚಾಲಕತ್ವದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡಿನ ಜಿಲ್ಲಾ ಘಟಕದ ನೇತೃತ್ವದಲ್ಲಿ ಕೊಡಗು ಜಿಲ್ಲಾ ಕನ್ನಡ ಭವನ, ಕೊಡಗು ಜಿಲ್ಲಾ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಕಾಸರಗೋಡಿನ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಅಗ್ರಗಣ್ಯ ಸಾಹಿತಿ, ಇತಿಹಾಸ ಶಿಕ್ಷಕ ಮತ್ತು ಸಂಶೋಧಕರಾದ ಬೇಕಲ ರಾಮ ನಾಯಕರ ಬದುಕು ಬರಹದ ಕುರಿತ ಸ್ಮರಣಾಂಜಲಿ ಕಾರ್ಯಕ್ರಮ ದಿನಾಂಕ 27 ಏಪ್ರಿಲ್ 2025ರಂದು ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಬಯಲು ರಂಗ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಸಾಹಿತಿ ಚಂದ್ರಹಾಸ ಎಂ. ಬಿ. ಚಿತ್ತಾರಿ ಮಾತನಾಡಿ “ಬೇಕಲ ರಾಮ ನಾಯಕರದ್ದು, ಸಾಹಿತ್ಯ ಸರಸ್ವತಿಯ ಮನಸ್ಸು. ಅವರ ನಿಸ್ವಾರ್ಥ ಸಾಹಿತ್ಯ ಸೇವೆಯು ಸಾರ್ವಕಾಲಿಕ ಆದರ್ಶ, ಸರ್ವರೂ ಒಂದಾಗಿ, ಸಹಬಾಳ್ವೆ ನಡೆಸಬೇಕೆಂಬ ಅರ್ಪಣಾ ಮನೋಭಾವ ಅವರ ಕೃತಿಗಳಲ್ಲಿವೆ. ಈ ಎಲ್ಲಾ ಕೃತಿಗಳೂ ಕೂಡಾ ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ವರದಾನ” ಎಂದು…

Read More