Subscribe to Updates
Get the latest creative news from FooBar about art, design and business.
Author: roovari
ಮಂಡ್ಯ : ಪರಿಚಯ ಪ್ರಕಾಶನದ ವತಿಯಿಂದ ನೀಡಲಾಗುವ ‘ಪರಿಚಯ ಮಕ್ಕಳ ಸಾಹಿತ್ಯ ಪ್ರಶಸ್ತಿ’ಗೆ 2024ನೇ ಸಾಲಿನಲ್ಲಿ ಪ್ರಕಟಗೊಂಡಿರುವ ಮಕ್ಕಳ ಸಾಹಿತ್ಯದ ವಿವಿಧ ಪ್ರಕಾರದ ಕೃತಿಗಳನ್ನು ಲೇಖಕ/ಲೇಖಕಿ ಅಥವಾ ಪ್ರಕಾಶಕರಿಂದ ಆಹ್ವಾನಿಸಲಾಗಿದೆ. ಮಕ್ಕಳ ಸಾಹಿತ್ಯದ ಕಾವ್ಯ, ಕಥೆ, ಕಾದಂಬರಿ, ನಾಟಕ, ವಿಮರ್ಶೆ ಹಾಗೂ ಸಂಶೋಧನಾ ಪ್ರಕಾರಗಳು ಸೇರಿದಂತೆ ಒಟ್ಟಾರೆ ಮಕ್ಕಳಿಗೆ ಸಂಬಂಧಪಟ್ಟ ಕೃತಿಗಳನ್ನು ಕಳುಹಿಸಬಹುದಾಗಿದೆ. ಪ್ರಶಸ್ತಿಯು 10,000/- ನಗದು ಮತ್ತು ಫಲಕವನ್ನು ಹೊಂದಿರುತ್ತದೆ. ಆಸಕ್ತ ಸಾಹಿತಿಗಳು ತಮ್ಮ ಪುಸ್ತಕಗಳ ಮೂರು ಪ್ರತಿಗಳನ್ನು ದಿನಾಂಕ 30 ಜೂನ್ 2025ರೊಳಗೆ ತಲುಪುವಂತೆ ಅಂಚೆ ಮೂಲಕ ಎಂ.ಎನ್. ಶಿವಕುಮಾರ ಆರಾಧ್ಯ, ಸಂಸ್ಥಾಪಕರು, ಪರಿಚಯ ಪ್ರಕಾಶನ ನಂ.181, ಮಂಗಲ ಗ್ರಾಮ ಮತ್ತು ಅಂಚೆ, ಮಂಡ್ಯ ತಾಲ್ಲೂಕು, ಮಂಡ್ಯ ಜಿಲ್ಲೆ – 571478 ಈ ವಿಳಾಸಕ್ಕೆ ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 991689441 ಸಂಪರ್ಕಿಸಬಹುದು.
ಕಾಸರಗೋಡು : ಡಾ. ವಾಮನ್ ರಾವ್ ಬೇಕಲ್ – ಸಂದ್ಯಾ ರಾಣಿ ಟೀಚರ್ ಸಾರಥ್ಯದ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ, ಕೇರಳ ರಾಜ್ಯ – ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ, ಕಾಸರಗೋಡು ಇದರ ಪ್ರತಿಷ್ಠಿತ ಅಂತಾರಾಜ್ಯ ಪ್ರಶಸ್ತಿಯಾದ ‘ಕನ್ನಡ ಪಯಸ್ವಿನಿ ಪ್ರಶಸ್ತಿ 2025’ ಮಂಗಳೂರಿನ ಸುಪ್ರಸಿದ್ದ ಕವಯತ್ರಿ, ಲೇಖಕಿ, ಉತ್ತಮ ಸಂಘಟಕಿಯಾಗಿರುವ ಶ್ರೀಮತಿ ಅನಿತಾ ಶೆಣೈ ಇವರಿಗೆ ಲಭಿಸಿದೆ. ಕನ್ನಡ ಭವನ ಪ್ರಶಸ್ತಿ ಆಯ್ಕೆ ಸಮಿತಿಯು ಇವರ ಪ್ರಶಸ್ತಿಯನ್ನು ಘೋಷಿಸಿದ್ದು, ದಿನಾಂಕ 22 ಜುಲೈ 2025ರಂದು ಶ್ರೀಮತಿ ಅನಿತಾ ಶೆಣೈ ಇವರ ನಿವಾಸದಲ್ಲಿ ನಡೆಯಲಿರುವ ಕೇರಳ ರಾಜ್ಯ – ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ, ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಾಗೂ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಉದ್ಘಾಟನೆಗೊಳ್ಳಲಿರುವ ‘ಮನೆ ಮನೆ ಕನ್ನಡ ಜಾಗೃತಿ ಅಭಿಯಾನ’ ಮತ್ತು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಸಂಸ್ಥೆಯ…
ಗೋವಾ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಗೋವಾ ಘಟಕದ ದ್ವಿತೀಯ ವರ್ಷದ ವಾರ್ಷಿಕೋತ್ಸವವನ್ನು 22 ಜೂನ್ 2025ರಂದು ಮಧ್ಯಾಹ್ನ 3-00 ಗಂಟೆಗೆ ಗೋವಾ ಪಣಜಿಯ ಇನ್ಸ್ಟಿಟ್ಯೂಟ್ ಮೆನೆಜಸ್ ಬ್ರಗಾನ್ಸಾ ಸಭಾಗೃಹದಲ್ಲಿ ಹಮ್ಮಿಕೊಳ್ಳಲಾಗಿದೆ. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಗೋವಾ ಘಟಕದ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಇರ್ವತ್ತೂರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ರಾಜ್ಯ ಸಚಿವರಾದ ಶ್ರೀಪಾದ್ ನಾಯ್ಕ್ ಇವರು ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಹಳೆಯಂಗಡಿ ಇವರಿಂದ ‘ಶ್ರೀ ದೇವಿ ಮಹಾತ್ಮೆ’ ಎಂಬ ಪ್ರಸಂಗದ ಯಕ್ಷಗಾನ ಬಯಲಾಟ ನಡೆಯಲಿದೆ.
ಕಿನ್ನಿಗೋಳಿ : ಕಿನ್ನಿಗೋಳಿಯ ಯಕ್ಷಲಹರಿ ಯುಗಪುರುಷ ಸಂಸ್ಥೆಯಲ್ಲಿ ಕಳೆದ 34 ವರ್ಷಗಳಿಂದ ಯಕ್ಷಗಾನದ ಕೈಕಂರ್ಯ ಕಲಾ ಮಾತೆಯ ಸೇವೆ ನಿರಂತರ ನಡೆಯುತ್ತ ಬಂದಿದೆ, ಇದೀಗ 34 ನೇ ವರ್ಷದ ಕಲಾ ಪರ್ವ ಕರ್ಣಾಟಕ ಬ್ಯಾಂಕ್ ಪ್ರಾಯೋಜಿತ ತಾಳಮದ್ದಲೆ ಸ್ಪರ್ಧೆ ಸಪ್ತಾಹ, ಹಾಗೂ ಯಕ್ಷಲ ಹರಿಯ ವಾರ್ಷಿಕೋತ್ಸವ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸಮ್ಮಾನ ಜು.27 ರಿಂದ ಅ. 3 ರತನಕ ನಡೆಯಲಿದೆ ಎಂದು ಯಕ್ಷಲಹರಿ ಸಂಸ್ಥೆಯ ಅಧ್ಯಕ್ಷ ರಘುನಾಥ ಕಾಮತ್ ಕೆಂಚನಕೆರೆ ತಿಳಿಸಿದರು. ಅವರು ಕಿನ್ನಿಗೋಳಿಯ ದುರ್ಗಾ ರೆಸಿಡೆನ್ಸಿಯ ಸಭಾಭವನ ದಲ್ಲಿ ನಡೆದ ತಾಳಮದ್ದಳೆ ಸ್ಪರ್ಧೆ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿ, 7 ದಿನಗಳಲ್ಲಿ ಆಹ್ವಾನಿತ ಹವ್ಯಾಸಿ ತಂಡಗಳ ತಾಳಮದ್ದಳೆ ಸ್ಪರ್ಧೆ ನಡೆಯಲಿದ್ದು, ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರತಿ ವರ್ಷ ಕಲಾವಿದರ ಸಮ್ಮಾನ ಜತೆಗೆ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಸಹಕಾರ ನೀಡುವ ಯೋಜನೆ ನಡೆಯಲಿದೆ ಎಂದರು. ತಾಳಮದ್ದಳೆ ಸ್ಪರ್ಧಾ ಸಪ್ತಾಹದಲ್ಲಿ ಪ್ರತಿದಿನ ಸಭಾ ಕಾರ್ಯಕ್ರಮದಲ್ಲಿ ಹವ್ಯಾಸಿ ಹಿರಿಯ ಕಲಾವಿದರಿಗೆ ಗೌರವ, ಅಗಲಿದ…
ಕನ್ನಡದ ಹಿರಿಯ ಹಾಗೂ ಅಪರೂಪದ ವಿದ್ವಾಂಸರಾದ ಬಿ. ಎಸ್. ಸಣ್ಣಯ್ಯ ಇವರು ಸಂಶೋಧನೆ ಮತ್ತು ಹಸ್ತಪ್ರತಿ ಶಾಸ್ತ್ರದಲ್ಲಿ ಅಪಾರ ಪಾಂಡಿತ್ಯವುಳ್ಳವರು. ಸಣ್ಣೇಗೌಡ ಹಾಗೂ ಬೋರಮ್ಮ ದಂಪತಿಗಳ ಪುತ್ರರಾದ ಇವರು 18 ಜೂನ್ 1926ರಂದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಭೋಗನಹಳ್ಳಿಯಲ್ಲಿ ಜನ್ಮ ತಾಳಿದರು. ಎಂ. ಎ., ಬಿ. ಲಿಬ್, ಡಿಪ್ಲೋಮಾ ಇನ್ ಆರ್ಕೈವ್ಸ್ ಪದವೀಧರರು. ಗ್ರಾಮೀಣ ಪರಿಸರದಲ್ಲಿ ಬೆಳೆದ ಸಣ್ಣಯ್ಯನವರದು ಸರಳ – ಸಜ್ಜನಿಕೆಯ ವ್ಯಕ್ತಿತ್ವ. ಯಾವ ಅಧಿಕಾರ, ಪ್ರಶಸ್ತಿ, ಪುರಸ್ಕಾರ, ವೇದಿಕೆಗಳ ಬಗ್ಗೆ ಗಮನವೀಯದೆ, ಶ್ರದ್ಧೆಯಿಂದ ಸದ್ದು ಮಾಡದೆ, ಮೌನವಾಗಿ ಕೆಲಸ ಮಾಡುತ್ತಾ ಬಂದವರು. ಕುವೆಂಪು, ಡಿ. ಎಲ್. ನರಸಿಂಹಾಚಾರ್, ಎಸ್. ವಿ. ಪರಮೇಶ್ವರ ಭಟ್ಟ, ತ. ಸು. ಶಾಮರಾಯ ಇಂತಹ ಘನ ವಿದ್ವಾಂಸರ ಶಿಷ್ಯರಾಗಿದ್ದು ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡವರು. ಡಿ. ಎಲ್. ನರಸಿಂಹಾಚಾರ್ ಬೋಧಿಸುತ್ತಿದ್ದ ಪ್ರಾಚೀನ ಕಾವ್ಯಗಳ ಪಾಠದಿಂದ ಆಕರ್ಷಿತರಾಗಿ ಹಸ್ತಪ್ರತಿ ಶಾಸ್ತ್ರದ ಕಡೆಗೆ ತಮ್ಮ ಒಲವನ್ನು ತೋರಿ ಅಧ್ಯಯನವನ್ನು ಆರಂಭಿಸಿದರು. ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯ ಸಂಶೋಧನಾಲಯದಲ್ಲಿ…
ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ ಇವರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುಂಡಾಜೆ ಇದರ ಸಹಯೋಗದಲ್ಲಿ ಆಯೋಜಿಸುವ ಶ್ರೀಮತಿ ಪದ್ಮಾ ಪಿ. ಬೇಡೇಕರ್ ವಿರಚಿತ ‘ದರ್ಪಣ’ ಕವನ ಸಂಕಲನದ ಲೋಕಾರ್ಪಣಾ ಸಮಾರಂಭವು ದಿನಾಂಕ 19 ಜೂನ್ 2025ನೇ ಗುರುವಾರ ಮಧ್ಯಾಹ್ನ ಗಂಟೆ 2-15ಕ್ಕೆ ಮುಂಡಾಜೆಯ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ ಇದರ ಅಧ್ಯಕ್ಷರಾದ ಶ್ರೀ ಡಿ. ಯದುಪತಿ ಗೌಡ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ದ. ಕ. ಜಿಲ್ಲಾ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ ಕವನ ಸಂಕಲನ ಲೋಕಾರ್ಪಣೆಗೊಳಿಸಲಿದ್ದಾರೆ. ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುಂಡಾಜೆ ಇಲ್ಲಿನ ಮುಖ್ಯೋಪಾಧ್ಯಾಯಿನಿಯಾದ ಮತಿ ಮಂಜುಳಾ ಶುಭಾಶಂಸನೆಗೈಯಲಿದ್ದು, ಶ್ರೀಮತಿ ಸ್ಮಿತಾ ಹೆಚ್. ಬೇಡೇಕರ್ ಕೃತಿ ಪರಿಚಯ ಮಾಡಿಕೊಡಲಿದ್ದಾರೆ. ಸಮಾರಂಭದಲ್ಲಿ ಶ್ರೀಮತಿ ಪದ್ಮಾ…
ಉಡುಪಿ : ಶ್ರೀಮತಿ ಆಶಾ ಕುತ್ಯಾರ್ ಹಾಗೂ ಶ್ರೀ ಅಶೋಕ್ ಕುತ್ಯಾರ್ ಪ್ರಾಯೋಜಿತ ಪ್ರೊ. ಕು.ಶಿ ಹರಿದಾಸ ಭಟ್ಟರ ನೆನಪಿನಲ್ಲಿ ನೀಡಲಾಗುವ ‘ಪ್ರೊ. ಕು.ಶಿ. ಹರಿದಾಸ ಭಟ್ ಜನ್ಮಶತಮಾನೋತ್ಸವ ಜಾನಪದ ಪ್ರಶಸ್ತಿ’ ಹಾಗೂ ‘ಪ್ರೊ. ಕು.ಶಿ ಹರಿದಾಸ ಭಟ್ ಜಾನಪದ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 21 ಜೂನ್ 2025ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ಟಿ. ಮೋಹನದಾಸ್ ಪೈ ಕೌಶಲ್ಯ ಅಭಿವೃದ್ಧಿ ಕೇಂದ್ರದ ಸಭಾಂಗಣದಲ್ಲಿ ಮಧ್ಯಾಹ್ನ ಘಂಟೆ 3.೦೦ರಿಂದ ನಡೆಯಲಿರುವುದು. ಸಾಹಿತ್ಯ, ಶಿಕ್ಷಣ, ಆಡಳಿತ, ಸಂಘಟನೆ, ಜಾನಪದ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮ ಅನುಪಮ ಸಾಧನೆ ಸಿದ್ಧಿಗಳಿಂದ ಲೋಕ ವಿಖ್ಯಾತರಾದ ಪ್ರೊ. ಕು.ಶಿ ಅವರ 2024ರ ಸಾಲಿನ ಜನ್ಮಶತಮಾನೋತ್ಸವ ಜಾನಪದ ಪ್ರಶಸ್ತಿಯನ್ನು ಮೈಸೂರಿನ ಡಾ. ಡಿ. ಕೆ. ರಾಜೇಂದ್ರ ಇವರಿಗೆ, 2025ರ ಸಾಲಿನ ಜಾನಪದ ಪ್ರಶಸ್ತಿಯನ್ನು ಬೆಂಗಳೂರಿನ ಡಾ. ವಿಜಯಶ್ರೀ ಸಬರದ ಇವರಿಗೂ ಪ್ರದಾನ ಮಾಡಲಾಗುವುದು. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇದರ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಪ್ರಶಸ್ತಿ…
ಬೆಳ್ತಂಗಡಿ : ಕೊಯ್ಯೂರು ಪಂಚದುರ್ಗಾಪರಮೇಶ್ವರಿ ಯಕ್ಷಗಾನ ಸಂಘ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಸಂಕ್ರಾಂತಿಯ ಪ್ರಯುಕ್ತ ‘ಸೌಗಂಧಿಕಾ’ ಪ್ರಸಂಗದ ಯಕ್ಷಗಾನ ತಾಳಮದ್ದಳೆಯು ದಿನಾಂಕ 15 ಜೂನ್ 2025ರಂದು ಕೊಯ್ಯೂರು ಪಂಚದುರ್ಗಾಪರಮೇಶ್ವರಿ ದೇವಾಲಯದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವತರಾಗಿ ಶ್ರೀ ಉಮೇಶ ಆಚಾರ್ಯ ಮತ್ತು ಕುಮಾರಿ ನಂದನ ಮಾಲೆಂಕಿ. ಮದ್ದಳೆ ಹಾಗೂ ಚೆಂಡೆಯಲ್ಲಿ ಶ್ರೀ ರತನ್ ಮತ್ತು ಸಮರ್ಥ್ ಹೊಳ್ಳ ಸಹಕರಿಸಿದರು, ಮುಮ್ಮೇಳದಲ್ಲಿ ದ್ರೌಪದಿಯಾಗಿ ಶ್ರೀರಾಮಕೃಷ್ಣ ಭಟ್ ಬಳೆಂಜ, ಭೀಮನಾಗಿ ದಿನೇಶ್ ಕೊಯ್ಯುರು, ಹನುಮಂತನಾಗಿ ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯ, ಯಕ್ಷ ಮಂತ್ರಿಯಾಗಿ ಬಾಸಮೆ ನಾರಾಯಣ ಭಟ್ ಸಹಕರಿಸಿದರು. ದೇವಸ್ಥಾನದ ಮೋಕ್ತೇಸರ ಶ್ರೀಹರೀಶ್ ಬಲ್ಲಾಳ್ ಮತ್ತು ಪ್ರಧಾನ ಅರ್ಚಕ ಅಶೋಕ ಬಾಂಗಿನ್ನಾಯ ಕಲಾವಿದರನ್ನು ಗೌರವಿಸಿದರು. ಶ್ರೀಮತಿ ಕೆ. ಆರ್. ಸುವರ್ಣಕುಮಾರಿ ಸಹಕರಿಸಿದರು.
ಬಂಟ್ವಾಳ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ‘ಯುವ ವಾಹಿನಿ (ರಿ.)’ ಬಂಟ್ವಾಳ ಘಟಕವು ಕವಿ, ಸಾಹಿತಿ, ಸಂಘಟಕ ಬಿ. ತಮ್ಮಯ್ಯ ನೆನಪಿನಲ್ಲಿ ಆಯೋಜಿಸಿದ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆ 2024-25ರ ಅತೀ ಸಣ್ಣಕಥೆ ಸ್ಪರ್ಧೆ ಹಾಗೂ ಲಲಿತ ಪ್ರಬಂಧ ಸ್ಪರ್ಧೆಯ ವಿಜೇತರನ್ನು ಘೋಷಿಸಿದ್ದು, ಅತೀ ಸಣ್ಣಕಥಾ ಸ್ಪರ್ಧೆಯಲ್ಲಿ ಸುಲ್ತಾನ್ ಮನ್ಸೂರು ಮಂಚಿ ಇವರ ‘ಜಾಥಾ’ ಕಥೆ ಪ್ರಥಮ ಹಾಗೂ ಸ್ಮಿತಾ ಅಮೃತರಾಜ್ ಸಂಪಾಜೆ ಇವರ ‘ಸ್ಫೋಟ’ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದೆ. ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ರೂಪಕಲಾ ಆಳ್ವ ಬರೆದ ‘ಬೂಬು ಎಂಬ ಮರಿಮೊಮ್ಮಗಳು’ ಪ್ರಥಮ ಹಾಗೂ ನಳಿನಿ ಭೀಮಪ್ಪ ಧಾರವಾಡ ಬರೆದ ‘ಮುಡಿಯಿಂದ ಜಾರುತಿಹವೋ’ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದೆ. ವಿಜೇತರಿಗೆ ಪ್ರಶಸ್ತಿಯನ್ನು ದಿನಾಂಕ 22 ಜೂನ್ 2025ರಂದು ಬಿ. ಸಿ.ರೋಡು ಗಾಣದ ಪಾಡ್ಪುವಿನಲ್ಲಿರುವ ಬ್ರಹ್ಮ ಶ್ರೀ ನಾರಾಯಣಗುರು ಸಭಾ ಭವನದಲ್ಲಿ ನಡೆಯಲಿರುವ ಪದಗ್ರಹಣ ಸಮಾರಂಭದಲ್ಲಿ ನೀಡಿ ಗೌರವಿಸಲಾಗುವುದು.
ಬೆಂಗಳೂರು : ಟೀಮ್ ಕದಳಿ ಪ್ರಸ್ತುತಿಯಲ್ಲಿ ‘ಯಕ್ಷ ಸಿಂಧೂರ’ ಪ್ರಸಂಗ 02 ಪೌರಾಣಿಕ ಯಕ್ಷ ಭಿನ್ನಣ ಕಾರ್ಯಕ್ರಮವನ್ನು ದಿನಾಂಕ 21 ಜೂನ್ 2025ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಲಾಗಿದೆ. ರಾಮಕೃಷ್ಣ ಹೆಗಡೆ ಹಿಲ್ಲೂರು ಮತ್ತು ಶ್ರೇಯಾ ಆಚಾರ್ಯ ಅಲಂಕಾರು ಇವರ ಕಂಠಸಿರಿಯಲ್ಲಿ ‘ಸುದರ್ಶನ ವಿಜಯ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.