Subscribe to Updates
Get the latest creative news from FooBar about art, design and business.
Author: roovari
ಸಾಲಿಗ್ರಾಮ : ಸಮಸ್ತರು ರಂಗ ಸಂಶೋಧನ ಕೇಂದ್ರ ಬೆಂಗಳೂರು ಪ್ರಸ್ತುತ ಪಡಿಸುವ ದೇಶೀ ಖ್ಯಾತಿಯ ರಂಗ ನಿರ್ದೇಶಕ ಸಾಂಸ್ಕೃತಿಕ ಸಂಘಟಕ ಗೋಪಾಲಕೃಷ್ಣ ನಾಯರಿಯವರ ಎರಡನೇ ವರ್ಷದ ಸಂಸ್ಮರಣಾ ಕಾರ್ಯಕ್ರಮ ಮತ್ತು ‘ಶ್ರೀ ಗೋಪಾಲಕೃಷ್ಣ ನಾಯರಿ ರಂಗ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ದಿನಾಂಕ 19 ಜನವರಿ 2025ರಂದು ಗುಂಡ್ಮಿ ಸಾಲಿಗ್ರಾಮ ಸದಾನಂದ ರಂಗ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಇದರ ಅಧ್ಯಕ್ಷರಾದ ಶ್ರೀ ಆನಂದ ಸಿ. ಕುಂದರ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಅಧ್ಯಕ್ಷರಾದ ಶ್ರೀ ವೈಕುಂಠ ಹೇರ್ಳೆ ಇವರು ಸಂಸ್ಮರಣಾ ಮಾತುಗಳನ್ನಾಡಲಿರುವರು. ಶ್ರೀ ಗೋಪಾಲಕೃಷ್ಣ ದೇವರು ಭಟ್ಟ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಉದಯೋನ್ಮುಖ ಬಾಲ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಾಲಿಗ್ರಾಮದ ಆರಾಧನಾ ಮೇಲೋಡಿಸ್ (ರಿ.) ಇವರಿಂದ ಭಾವಗೀತೆ ಮತ್ತು ಜಾನಪದ ಹಾಡುಗಳು ಗಾಯನ ಪ್ರಸ್ತುತಗೊಳ್ಳಲಿದೆ.
ಕೊಪ್ಪಳ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು ಸಂಸ್ಥೆಯ ವತಿಯಿಂದ ‘ಅಖಿಲ ಕರ್ನಾಟಕ ನಾಲ್ಕನೇ ಕವಿ-ಕಾವ್ಯ ಸಮ್ಮೇಳನ -2025’ವನ್ನು ದಿನಾಂಕ 19 ಜನವರಿ 2025ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿರುವ ಶ್ರೀ ಚನ್ನಬಸವೇಶ್ವರ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 9-00 ಗಂಟೆಗೆ ಗೀತಗಾಯನ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷರಾದ ಅನಸೂಯ ಜಹಗೀರದಾರ ಇವರ ಅಧ್ಯಕ್ಷತೆಯಲ್ಲಿ ಧಾರವಾಡದ ಪ್ರಸಿದ್ಧ ಸಾಹಿತಿ ರಂಜಾನ್ ದರ್ಗಾ ಇವರು ಈ ಸಮ್ಮೇಳನವನ್ನು ಉದ್ಘಾಟಿಸಲಿರುವರು. ಇದೇ ಸಂದರ್ಭದಲ್ಲಿ ಡಾ. ಹನುಮಂತ ಹೇರೂರುರವರ ‘ಹದ್ದುಗಳ ನೆರಳಲ್ಲಿ’, ಶರಣಪ್ಪ ತಳ್ಳಿ ಕುಪ್ಪಿಗುಡ್ಡರವರ ‘ನಾಕು ತಾವಿನ ತಿರುವು’, ರಮೇಶ್ ಗಬ್ಬೂರುರವರ ‘ತತ್ವ ಪದಗಳು’, ನಾಗಭೂಷಣ್ ಅರಳಿಯವರ ‘ನೂರೆಂಟು ಹೆಜ್ಜೆಗಳು’, ರಮೇಶ್ ಬನ್ನಿಕೊಪ್ಪರವರ ‘ಆಫ್ ಚಹಾ’, ಡಾ. ಹನುಮಂತ ಹೇರೂರುರವರ ‘ನುಡಿದಷ್ಟೇ ಬಯಲು’, ಡಾ. ಯಮನೂರಪ್ಪ ವಡಕಿಯವರ ‘ಒಡಲ ಜೋಗುಳ’, ಡಾ. ಯಮನೂರಪ್ಪ ವಡಕಿಯವರ ‘ಕೊಪ್ಪಳ ಜಿಲ್ಲೆಯ ಆಯ್ದ ತತ್ವ ಪದಗಳು’ ಎಂಬ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಧಾರವಾಡ ಹಿರಿಯ ಸಾಹಿತಿ…
ತೀರ್ಥಹಳ್ಳಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ ಇವರ ನೇತೃತ್ವದಲ್ಲಿ ತೀರ್ಥಹಳ್ಳಿ ತಾಲೂಕಿನಲ್ಲಿ 2024ರ ನವೆಂಬರ್ ತಿಂಗಳಿನಲ್ಲಿ ತೀರ್ಥಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯನ್ನು ರಚಿಸಲಾಗಿದ್ದು, ಶ್ರೀಮತಿ ರೇಣುಕಾ ಹೆಗಡೆ – ಅಧ್ಯಕ್ಷರು ಮತ್ತು ಶ್ರೀಮತಿ ಲೀಲಾವತಿ ಎಸ್. – ಕಾರ್ಯದರ್ಶಿಗಳು ಇವರ ಮುಂದಾಳತ್ವದಲ್ಲಿ ಸುಮಾರು 50 ಸದಸ್ಯರನ್ನು ಒಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಈ ಸಂಘಟನೆಯ ಅಡಿಯಲ್ಲಿ ಹಲವಾರು ಸಾಹಿತ್ಯಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಈ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯಡಿಯಲ್ಲಿ ಈವರೆಗೆ ಎರಡು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ತೀರ್ಥಹಳ್ಳಿ ತಾಲೂಕಿನಲ್ಲಿ ಆಯೋಜಿಸಿ ಮಕ್ಕಳಲ್ಲಿ ಹುದುಗಿರುವ ಕಾವ್ಯ ರಚನೆ, ಕಥೆ ಹೇಳುವ ಸಾಮರ್ಥ್ಯ ಹಾಗೂ ಪ್ರಬಂಧ ರಚನೆ ಮತ್ತು ಮಂಡನೆಗೆ ಸಂಬಂಧಿಸಿದಂತೆ ಗೋಷ್ಠಿಗಳನ್ನು ಆಯೋಜಿಸಿ, ತಾಲೂಕು ಮಟ್ಟದ ಸಮ್ಮೇಳನಗಳನ್ನು ಅದ್ದೂರಿಯಾಗಿ ನಡೆಸಿ ಇಲ್ಲಿ…
ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ‘ತಿಂಗಳ ನಾಟಕ ಸಂಭ್ರಮ’ದ ಪ್ರಯುಕ್ತ ನಾಟಕ ಪ್ರದರ್ಶನವು ದಿನಾಂಕ 18 ಜನವರಿ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ನಡೆಯಲಿದೆ. ಈ ಸಂಭ್ರಮದಲ್ಲಿ ಕಲಾ ನಿರ್ದೇಶಕರಾದ ಶ್ರೀ ಶಶಿಧರ ಅಡಪ ಇವರು ತಿಂಗಳ ಅತಿಥಿಯಾಗಿ ಭಾಗವಹಿಸಲಿರುವರು. ಎಂ. ಗಣೇಶ್ ಇವರ ನಿರ್ದೇಶನದಲ್ಲಿ ಶ್ರೀ ಗಜಾನನ ಯುವಕ ಮಂಡಳಿ – ಶೇಷಗಿರಿ ಕಲಾ ತಂಡದವರು ಅಭಿನಯಿಸುವ ಕುವೆಂಪುರವರ ‘ಶ್ರೀ ರಾಮಾಯಣ ದರ್ಶನ’ ಆಧಾರಿತ ನಾಟಕ ‘ವಾಲಿವಧೆ’ ಪ್ರದರ್ಶನಗೊಳ್ಳಲಿದೆ.
ಬೆಂಗಳೂರು : ಶಿರಸಿ ತಾಲೂಕಿನ ಸಣ್ಣಕೇರಿಯ ಪೂರ್ಣಿಮಾ ಭಟ್ಟ ಅವರ ‘ಕತೆ ಜಾರಿಯಲ್ಲಿರಲಿ’ ಅಪ್ರಕಟಿತ ಕಥಾಸಂಕಲನಕ್ಕೆ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ಹಾಗೂ ಬೆಳಗಾವಿ ಜಿಲ್ಲೆ ಮೋಳೆಯ ಡಾ. ವಿ.ಎ. ಲಕ್ಷ್ಮಣ ಅವರ ‘ಪರಿಮಳದ ಬಾಕಿ ಮೊತ್ತ’ ಅಪ್ರಕಟಿತ ಕವನ ಸಂಕಲನಕ್ಕೆ ‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ ಪ್ರಕಟಿಸಲಾಗಿದೆ. ಕಥೆ ವಿಭಾಗಕ್ಕೆ ‘ಸುಧಾ’ ವಾರ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರಘುನಾಥ ಚ.ಹ. ಹಾಗೂ ಕಾವ್ಯ ವಿಭಾಗಕ್ಕೆ ದೂರದರ್ಶನದ ನಿರ್ದೇಶಕಿ ಆರತಿ ಎಚ್.ಎನ್. ತೀರ್ಪುಗಾರರಾಗಿದ್ದರು. ಎರಡೂ ಪ್ರಶಸ್ತಿಗಳು ತಲಾ ರೂ.10,000/- ನಗದು ಹಾಗೂ ಫಲಕಗಳನ್ನು ಒಳಗೊಂಡಿವೆ. ಪೂರ್ಣಿಮಾ ಭಟ್ಟ ಸಣ್ಣಕೇರಿ : ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ವಿಜೇತರಾದ ಪೂರ್ಣಿಮಾ ಭಟ್ಟ ಸಣ್ಣಕೇರಿಯವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದು, ಇವರು ಕೆಲ ಕಾಲ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಕೆಲ ವರ್ಷ ಪತ್ರಿಕೆಗಳಲ್ಲಿ ಉಪ ಸಂಪಾದಕಿಯಾಗಿ ಕಾರ್ಯ ನಿರ್ವಹಿಸಿದ್ದು, ಪ್ರಸ್ತುತ ಮಕ್ಕಳಿಗೆ ಮನೆಪಾಠ ಮಾಡುವ ಮೂಲಕ ಕನ್ನಡ ಕಲಿಸುತ್ತಿದ್ದಾರೆ. ಇವರು ಬರೆದ ಕತೆ, ಕವನ, ಲೇಖನಗಳು ಪತ್ರಿಕೆಗಳಲ್ಲಿ,…
ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿಪ್ರಶಸ್ತಿಗಳಲ್ಲಿ ಅತ್ಯಂತ ಪ್ರತಿಷ್ಟಿತವಾದ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ. ಈ ದತ್ತಿಯನ್ನು ಗೌರಮ್ಮರವರ ಪುತ್ರ ಬಿ.ಜಿ. ವಸಂತರು ಕೊಡಗಿನ ಮಹಿಳಾ ಲೇಖಕಿಯರು ಪ್ರಕಟ ಪಡಿಸಿದ ಉತ್ತಮ ಕೃತಿಗೆ ನೀಡಿ ಗೌರವಿಸುವ ಸಲುವಾಗಿ ಸ್ಥಾಪಿಸಲಾಗಿದೆ. ಇಲ್ಲಿಯವರೆಗೆ 20 ಲೇಖಕಿಯರಿಗೆ ಈ ಪ್ರಶಸ್ತಿ ನೀಡಲಾಗಿದ್ದು, 2024-25ನೇ ಸಾಲಿನ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದ್ದು 15 ಲೇಖಕಿಯರು ತಮ್ಮ ಕೃತಿಗಳನ್ನು ಪ್ರಶಸ್ತಿಗಾಗಿ ಪ್ರಸ್ತುತ ಪಡಿಸಿದ್ದರು. ಜಿಲ್ಲೆಯ ಹಿರಿಯ ಮೂರು ಸಾಹಿತಿಗಳನ್ನು ತೀರ್ಪುಗಾರರನ್ನಾಗಿಸಿ ಅವರು ಎಲ್ಲ ಪುಸ್ತಕಗಳನ್ನು ಪರಮಾರ್ಶಿಸಿ ಶ್ರೀಮತಿ ಕೂಡಕಂಡಿ ಓಂಶ್ರೀ ದಯಾನಂದ ಇವರ ‘ಪುಟಾಣಿ ರೈಲು – ಅಂದದ ಕಥೆಗಳ ಲೋಕದಲ್ಲೊಂದು ಸುಂದರ ಪಯಣ’ ಕಥಾ ಸಂಕಲನಕ್ಕೆ ಪ್ರಶಸ್ತಿ ಲಭ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ತಿಳಿಸಿದ್ದಾರೆ. ಶ್ರೀಮತಿ ಕೂಡಕಂಡಿ ಓಂಶ್ರೀ ದಯಾನಂದ ಇವರು ಭಾಗಮಂಡಲ ನಾಡು ತಾವೂರು ಗ್ರಾಮದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ…
ಮಂಗಳೂರು : ಕರಾವಳಿ ಲೇಖಕಿಯರ – ವಾಚಕಿಯರ ಸಂಘದ ಆಶ್ರಯದಲ್ಲಿ ಸಂಘದ ಕಾರ್ಯದರ್ಶಿ ಯಶೋದಾ ಮೋಹನ್ ಇವರ ಎರಡು ಕೃತಿಗಳ ಅನಾವರಣ ಕಾರ್ಯಕ್ರಮವು ಸಂಘದ ಸಭಾಂಗಣ ‘ಸಾಹಿತ್ಯ ಸದನ’ದಲ್ಲಿ ದಿನಾಂಕ 05 ಜನವರಿ 2025ರಂದು ನಡೆಯಿತು. ಸಂಘದ ಅಧ್ಯಕ್ಷರಾದ ಶಕುಂತಳಾ ಟಿ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ‘ಇಳಿ ಹಗಲಿನ ತೇವಗಳು’ ಕನ್ನಡ ಕಥಾ ಸಂಕಲನವನ್ನು ಹಿರಿಯ ಸಾಹಿತಿ ಶ್ರೀ ಮುದ್ದು ಮೂಡುಬೆಳ್ಳೆಯವರು ಬಿಡುಗಡೆ ಮಾಡಿದರು. ಕೃತಿಯನ್ನು ಪರಿಚಯಿಸಿದ ಡಾ. ಸುಧಾರಾಣಿಯವರು “ಈ ಸಂಕಲನದಲ್ಲಿ ಲೇಖಕಿ ತನ್ನ ಅಸ್ಮಿತೆಯನ್ನು ಹುಡುಕಿಕೊಳ್ಳುತ್ತಲೇ ಮನುಷ್ಯ ಸಂಬಂಧಗಳ ತೇವವನ್ನು ಅರಸ ಬಯಸಿದ್ದಾರೆ. ಇಲ್ಲಿನ ಕಥೆಗಳು ಹೆಣ್ಣು ಕೇಂದ್ರಿತ ಮತ್ತು ಹೆಣ್ಣು ನೋಟವೇ ಆಗಿದ್ದರೂ ಸೀಮಿತ ಚೌಕಟ್ಟಿನದ್ದಲ್ಲ. ಆಧುನಿಕ ಕಾಲಘಟ್ಟದ ಮಾನವ ಸಂಬಂಧಗಳ ಬಿರುಕು, ಇಕ್ಕಟ್ಟು, ಬಿಕ್ಕಟ್ಟುಗಳನ್ನು ನಿರೂಪಿಸುವ ಈ ಕತೆಗಳು ನಿಜ ಅರ್ಥದಲ್ಲಿ ಇಳಿ ಹಗಲಿನ ತೇವಗಳು.” ಎಂದು ಅಭಿಪ್ರಾಯಪಟ್ಟರು. ‘ತಡ್ಯ ಕಡಪುನಗ’ ತುಳು ಕವಿತೆಗಳ ಸಂಕಲನವನ್ನು ಅನಾವರಣ ಮಾಡಿದ ಡಾ. ಜ್ಯೋತಿ ಚೇಳಾಯ್ರು ಮಾತನಾಡಿ “ಹೆಣ್ಣು ಮಕ್ಕಳು…
ಹಾಸನ : ಪಡುವಾರಹಳ್ಳಿಯಲ್ಲಿರುವ ವಿನಾಯಕ ನಗರದ ಸಿ.ಪಿ.ಕೆ.ಯವರ ನಿವಾಸದಲ್ಲಿ ದಿನಾಂಕ 14 ಜನವರಿ 2024ರಂದು ಸರಳವಾಗಿ ನಡೆದ ಸಮಾರಂಭದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು ಸಂಸ್ಥೆಯ ವತಿಯಿಂದ ದಿನಾಂಕ 19 ಜನವರಿ 2025ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆಯಲಿರುವ ‘ಅಖಿಲ ಕರ್ನಾಟಕ ನಾಲ್ಕನೇ ಕವಿ-ಕಾವ್ಯ ಸಮ್ಮೇಳನ’ದ ಲಾಂಛನ ಹಾಗೂ ಆಹ್ವಾನ ಪತ್ರಿಕೆ ಬಿಡುಗಡೆಗೊಂಡವು. ಈ ಕಾರ್ಯಕ್ರಮದಲ್ಲಿ ಪಂಪ ಪ್ರಶಸ್ತಿ ಪುರಸ್ಕೃತ ಬಹುಶ್ರುತ ಹಿರಿಯ ವಿದ್ವಾಂಸ ಡಾ. ಸಿ.ಪಿ. ಕೃಷ್ಣಕುಮಾರ್ (ಸಿಪಿಕೆ) ಇವರು ಮಾತನಾಡಿ “ನಾಡಿನ ಉದ್ದಗಲ ಕವಿ-ಕಾವ್ಯ ಸಮ್ಮೇಳನಗಳು ನಿರಂತರವಾಗಿ ನಡೆಯುವುದರಿಂದ ಕನ್ನಡ ಪ್ರಜ್ಞೆಯ ಜಾಗೃತಿ ಉಂಟಾಗಿ, ಸಾಹಿತ್ಯ ಮತ್ತು ಸಂಸ್ಕೃತಿಯ ಕಂಪು ಹರಡಲು ಸಾಧ್ಯವಾಗುತ್ತದೆ. ಸಂಘ ಸಂಸ್ಥೆಗಳು ಸಂಘಟಿಸುವ ಕವಿ-ಕಾವ್ಯ ಸಮ್ಮೇಳನಗಳು ಆಗಾಗ ನಡೆಯುತ್ತಿರಬೇಕು. ಇವು ಹೊಸ ಹೊಸ ಸಾಹಿತ್ಯ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ನೆರವಾಗುತ್ತವೆ. ಹಾಗಾಗಿ ಸಮ್ಮೇಳನದ ಉದ್ದೇಶ ಹೆಚ್ಚು ವ್ಯಾಪಕತೆ ಮತ್ತು ಸಾರ್ಥಕತೆಯನ್ನು ಹೊಂದಿರುವುದು ಸ್ತುತ್ಯಾರ್ಹ ಹಾಗೂ ಸಕಾಲಿಕ ಕನ್ನಡ ಕಾಯಕ. ಕನ್ನಡ ಸಾಹಿತ್ಯ…
ಬೆಂಗಳೂರು : ಪ್ರವರ ಥಿಯೇಟರ್ ಪ್ರಸ್ತುತ ಪಡಿಸುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕದ 25ನೇ ಪ್ರದರ್ಶನವನ್ನು ದಿನಾಂಕ 25 ಜನವರಿ 2025ರಂದು ಸಂಜೆ ಗಂಟೆ 7-00ಕ್ಕೆ ಬೆಂಗಳೂರಿನ ಬಸವೇಶ್ವರನಗರ ಇಂಜಿನಿಯರ್ಸ್ ಅಸೋಸಿಯೇಷನ್ ಆವರಣದಲ್ಲಿರುವ ಕೆ.ಇ.ಎ. ಪ್ರಭಾತ್ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಈ ನಾಟಕದ ನಿರ್ವಹಣೆ ಅಜಯ್ ಕುಮಾರ್ ಮಾಡಿದ್ದು, ಸಂಗೀತ ಅಕ್ಷಯ್ ಭೊಂಸ್ಲೆ ಮತ್ತು ಬೆಳಕಿನ ವಿನ್ಯಾಸ ಮಂಜು ನಾರಾಯಣ್ ಮತ್ತು ಸೂರ್ಯ ಸಾಥಿ ನೀಡಿದ್ದು, ಕರಣಂ ಪವನ್ ಪ್ರಸಾದ್ ರಂಗ ರೂಪ ಹಾಗೂ ಹನು ರಾಮಸಂಜೀವ ಇವರು ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 9686869676. ಪ್ರವೇಶ ದರ ರೂ.200/- ಆಗಿರುತ್ತದೆ. ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ಕೃತಿಯು ಮಹಾಕವಿ ಕುವೆಂಪು ಇವರ ಜೀವನದ ಹಲವು ಮಹತ್ವದ ಅಧ್ಯಾಯಗಳನ್ನು ಒಳಗೊಂಡಿದೆ. ಒಂದರ್ಥದಲ್ಲಿ ತೇಜಸ್ವಿಯವರು ಹುಟ್ಟಿದಲ್ಲಿಂದ ಇಲ್ಲಿಯವರೆಗಿನ ಕುವೆಂಪುರವರ ಕಥೆ, ಹಾಗೆಯೇ ಇದು ತೇಜಸ್ವಿಯವರ ಆತ್ಮಕಥೆಯ ಹಲವು ಅಧ್ಯಾಯಗಳೆಂದೂ ಹೇಳಬಹುದು. ಕುವೆಂಪು, ಕನ್ನಡ ಸಾಂಸ್ಕೃತಿಕ ಚರಿತ್ರೆಯಲ್ಲಿ…
1950ರ ಕಾಲಘಟ್ಟದಲ್ಲಿ ಹೆಸರಾಂತ ರಂಗ ಕಲಾವಿದರಾಗಿ, ಗಾಯಕರಾಗಿ ಮತ್ತು ಚಿತ್ರ ನಟರಾಗಿ ಮಿಂಚಿದವರು ಹೊನ್ನಪ್ಪ ಭಾಗವತರ್. ಬೆಂಗಳೂರಿನ ನೆಲಮಂಗಲದ ಚೌಡಸಂದ್ರ ಗ್ರಾಮದಲ್ಲಿ 1916 ಜನವರಿ 15ರಂದು ಜನಿಸಿದ ಹೊನ್ನಪ್ಪರ ತಂದೆ ಚಿಕ್ಕಲಿಂಗಪ್ಪ, ತಾಯಿ ಕಲ್ಲಮ್ಮ. ಎಳವೆಯಲ್ಲಿ ತಂದೆಯನ್ನು ಕಳೆದುಕೊಂಡು ತಂದೆಯ ಪ್ರೀತಿಯಿಂದ ವಂಚಿತರಾಗಿ ಬೆಳೆದ ಇವರು ತಮ್ಮ ಬಾಲ್ಯವನ್ನು ತಾಯಿಯ ತವರು ಮೋಟಗಾನಹಳ್ಳಿಯಲ್ಲಿ ಕಳೆದರು. ಇವರಿಗೆ ತಾಯಿ ಹಾಡುತ್ತಿದ್ದ ಸಂಗೀತ, ಭಜನೆ, ಹಳ್ಳಿಯಲ್ಲಿ ಕಾಣಸಿಗುತ್ತಿದ್ದ ನಾಟಕ, ಊರಿನ ಹಬ್ಬ ಹರಿದಿನಗಳು ಆಪ್ತವಾಗಿದ್ದು, ಇವರ ಮೇಲೆ ಬಹಳ ಪರಿಣಾಮ ಬೀರಿದವು. ಕೆಲ ಕಾಲದ ನಂತರ ಬೆಂಗಳೂರಿಗೆ ಬಂದ ಹೊನ್ನಪ್ಪನವರು ದುಡಿಯಲಾರಂಭಿಸಿದರು. ಮನೆತನದ ವೃತ್ತಿ ನೇಯ್ಗೆ ಆದ್ದರಿಂದ ಬೆಂಗಳೂರಿಗೆ ಬಂದ ಹೊನ್ನಪ್ಪನವರು ಅಣ್ಣನೊಡನೆ ಮಗ್ಗದ ಕೆಲಸದಲ್ಲಿ ತೊಡಗಿಕೊಂಡರು. ಇದರೊಂದಿಗೆ ಇವರು ಮೂರ್ತಿ ಭಾಗವತರ್ ಮತ್ತು ಅರುಣಾಚಲಪ್ಪನವರ ಶಿಷ್ಯರಾಗಿದ್ದು, ಹಾರ್ಮೋನಿಯಂ ಮತ್ತು ಸಂಗೀತ ಅಭ್ಯಾಸ ಮಾಡಿದರು. ಒಂದು ಬಾರಿ ಹೊನ್ನಪ್ಪರ ಸಂಗೀತವನ್ನು ಕೇಳಿ ಮೂರ್ತಿ ಭಾಗವತರ್ ಇವರ ಕಂಟಸಿರಿಗೆ ದಂಗಾಗಿ ಆಕರ್ಷಿತರಾಗಿದ್ದರು. ಒಂದು ಬಾರಿ ಸೇಲಂನಲ್ಲಿ…