Subscribe to Updates
Get the latest creative news from FooBar about art, design and business.
Author: roovari
ಬೆಳ್ತಂಗಡಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೆಳ್ತಂಗಡಿ ತಾಲೂಕಿನ ಪ್ರಥಮ ನೃತ್ಯ ಗುರು, ಪಡ್ಡಿರೆ ನಿವಾಸಿ ಪಿ. ಕಮಲಾಕ್ಷ ಆಚಾರ್ ದಿನಾಂಕ 14 ಜನವರಿ 2025ರಂದು ಮಂಗಳೂರಿನಲ್ಲಿ ನಿಧನರಾದರು. ಅವರಿಗೆ 78ವರ್ಷ ವಯಸ್ಸಾಗಿತ್ತು. 2022ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಇವರು 1976ರಲ್ಲಿ ಬೆಳ್ತಂಗಡಿಯಲ್ಲಿ “ನೃತ್ಯನಿಕೇತನ’ವೆಂಬ ನೃತ್ಯ ಸಂಸ್ಥೆಯನ್ನು ಪ್ರಾರಂಭಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಭರತನಾಟ್ಯ ತರಬೇತಿ ನೀಡಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಶ್ರೀಯುತರು ಜಿಲ್ಲಾ ಸಾಲಿಯಾನ್ ಪ್ರತಿಷ್ಠಾನದ ಕಾರ್ಯದರ್ಶಿಯಾಗಿ, ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ತಿನ ಸ್ಥಾಪಕಾಧ್ಯಕ್ಷರಾಗಿ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ನೃತ್ಯ ಪರೀಕ್ಷಕರಾಗಿ ಹಾಗೂ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಇವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ನೃತ್ಯ ವಿದ್ಯಾನಿಧಿ’ ಬಿರುದು, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ ಮತ್ತು ಗೌರವಗಳಿಗೆ ಭಾಜನರಾಗಿದ್ದರು. 1967ರಲ್ಲಿ ಪ್ರೌಢ ಶಾಲಾ ಶಿಕ್ಷಕನಾಗಿ ಸರಕಾರಿ…
ಮಂಗಳೂರು : ಕನ್ನಡದ ವಿಶಿಷ್ಟ ಲೇಖಕರಾಗಿ ಗುರುತಿಸಿಕೊಂಡಿರುವ ಸಹನಾ ವಿಜಯಕುಮಾರ್ ಇವರ ‘ಮಾಗಧ‘ ಕೃತಿಯ ಲೋಕರ್ಪಣಾ ಸಮಾರಂಭವು ದಿನಾಂಕ 12 ಜನವರಿ 2025ರಂದು ಮಂಗಳೂರಿನ ಸಾಹಿತ್ಯ ಉತ್ಸವದ 7ನೇ ಆವೃತ್ತಿಯ ಎರಡನೇ ದಿನದಂದು ನಡೆಯಿತು. ಮಂಗಳೂರಿನ ಭಾರತ್ ಫೌಂಡೇಶನ್ ಮತ್ತು ಮೈಥಿಕ್ ಸೊಸೈಟಿಯ ಸಂಯೋಗದಿಂದ ಮಂಗಳೂರಿನ ಡಾ. ಟಿ. ಎಂ. ಎ. ಪೈ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಈ ಕಾದಂಬರಿ ಅಶೋಕನ ಬಾಳಿನ ನಿರ್ಣಾಯಕ ಕ್ಷಣವನ್ನು ಆಧರಿಸಿ ನಾಲ್ಕು ಪ್ರಮುಖ ಅಂಶಗಳಲ್ಲಿ ರೂಪುಗೊಂಡಿದೆ. ಮುಖ್ಯವಾಗಿ ಅಶೋಕನ ಧರ್ಮಶಾಸನಗಳನ್ನು ಆಧರಿಸಿ ಈ ಕೃತಿಯನ್ನು ರಚಿಸಲಾಗಿದೆ. ಅರ್ಥಶಾಸ್ತ್ರದ ತತ್ವಗಳು ಕೂಡ ಈ ಕಥನದಲ್ಲಿ ಅರ್ಥಪೂರ್ಣವಾಗಿ ಬಳಕೆಯಾಗಿವೆ. ಈ ಕಾದಂಬರಿ ಕೇವಲ ರಾಜಕೀಯ ಅಥವಾ ಧಾರ್ಮಿಕ ವಿಚಾರಗಳನ್ನು ಮಾತ್ರ ಜೋಡಿಸಿಕೊಳ್ಳುವುದಿಲ್ಲ ಬದಲಾಗಿ ಇದು ಭಾರತೀಯ ಇತಿಹಾಸದ ಮಹತ್ವಪೂರ್ಣ ಘಟನೆಯನ್ನು ಹಾಗೂ ಅಶೋಕನ ವ್ಯಕ್ತಿತ್ವದ ಒಳಹೊರಗಿನ ಶೋಧನೆಯನ್ನು ಕಲಾತ್ಮಕ ಹಾಗೂ ತಾತ್ವಿಕವಾಗಿ ಪ್ರಸ್ತುತಪಡಿಸುತ್ತದೆ.
ಗಂಗೊಳ್ಳಿ : ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಕುಂದಾಪುರ ಘಟಕ ಆಯೋಜಿಸಿದ ಕುಮಾರವ್ಯಾಸ ಸ್ಮೃತಿ ಮತ್ತು ಗಮಕ ಕಲಾ ಪ್ರಾತ್ಯಕ್ಷಿಕೆ ಕಾರ್ಯಕ್ರಮವು ದಿನಾಂಕ 11 ಜನವರಿ 2025ರಂದು ನಡೆಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರ್ನಾಟಕ ಗಮಕ ಕಲಾ ಪರಿಷತ್ತು ಕುಂದಾಪುರ ಘಟಕದ ಅಧ್ಯಕ್ಷ ಎಚ್. ಸುಜಯೀಂದ್ರ ಹಂದೆ ಮಾತನಾಡಿ “ಕನ್ನಡ ನಾಡು ಕಂಡ ಅತ್ಯದ್ಭುತ ಕವಿ ಕುಮಾರವ್ಯಾಸ. ಕನ್ನಡ ನೆಲದ ಮನೆ ಮನಗಳಲ್ಲಿ ಭಾರತ ಕತೆಯನ್ನು ನೆಲೆಯಾಗುವಂತೆ, ಆಪ್ತವಾಗುವಂತೆ ಮಾಡಿದ ಧೀಮಂತ ಕವಿ. ಮಹಾ ಭಾರತದ ಕಥಾ ವಸ್ತುವನ್ನು ಭಾಮಿನಿ ಷಟ್ಪದಿಯಲ್ಲಿ ರಚಿಸಿ, ಅದನ್ನು ಕೃಷ್ಣ ಕತೆಯೆಂದು ಸಾರಿದವನು. ಕುವೆಂಪು ಅವರು ಹೇಳುವಂತೆ ಕಲಿಯುಗದಲ್ಲೂ ದ್ವಾಪರವನ್ನು ಕಟ್ಟಿಕೊಟ್ಟವನು. ವ್ಯಾಸ ರಚಿತ ಭಾರತದ ಮುಂದೆ ತಾನು ಕುಮಾರವ್ಯಾಸನೆಂದು ಹೇಳಿಕೊಳ್ಳುವಲ್ಲಿ ನಾರಣಪ್ಪನ ವಿನಯ ಸಂಪನ್ನತೆ ಎದ್ದು ಕಾಣುತ್ತದೆ. ನಾಡಿನ ಮೂಲೆ ಮೂಲೆಗಳ ವಿದ್ವಾಂಸರನ್ನೂ, ಜನ ಸಾಮಾನ್ಯರನ್ನೂ ತನ್ನ ಕಾವ್ಯ ಸೊಬಗಿನಿಂದ ಬೆರಗುಗೊಳಿಸುತ್ತಾ ಒಂದರ್ಥದಲ್ಲಿ ಕನ್ನಡದ ಭಾಷಾ…
ಕಾಸರಗೋಡು : ಕರ್ನಾಟಕ ರಾಜ್ಯ ಮಟ್ಟದ ಹಿರಿಯ ನಾಟಕ ಮತ್ತು ಸಾಂಸ್ಕೃತಿಕ ಸಂಘಟನೆಯಾದ ವಿ.ಕೆ.ಎಂ ಕಲಾವಿದರು (ರಿ.) ಬೆಂಗಳೂರು ಇದರ 44ನೇ ಸಂಸ್ಥಾಪನಾ ವರ್ಷಾಚರಣೆಯ ಅಂಗವಾಗಿ ಹಾಗೂ ಇದರ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಬೆಂಗಳೂರು ಇದರ ಸಹಯೋಗದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ ಕಾಸರಗೋಡು, ಇದರ ಸಹಕಾರದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ದಿನಾಂಕ 27 ಮಾರ್ಚ್ 2025ರಂದು ಅಪರಾಹ್ನ 4-00 ಗಂಟೆಗೆ ವಿಶ್ವರಂಗ ಭೂಮಿ ದಿನಾಚರಣೆಯ ಅಂಗವಾಗಿ ಹಳೆ ನಾಟಕಗಳ ಸವಿನೆನಪು, ಕಾಸರಗೋಡು ಬೆಂಗಳೂರು ಕನ್ನಡ ನಾಟಕೋತ್ಸವ ಮತ್ತು ಗಡಿನಾಡ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿ.ಕೆ.ಎಂ.ಕಲಾವಿದರು (ರಿ.) ಬೆಂಗಳೂರು ಇದರ ನೇತೃತ್ವದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಸಿ.ಎಂ. ತಿಮ್ಮಯ್ಯ ಬೆಂಗಳೂರು ಇವರ ಸಾರಥ್ಯದಲ್ಲಿ 1) ಎನ್.ಎಸ್. ರಾವ್ ವಿರಚಿತ, ಡಿ. ವೆಂಕಟರಮಣಯ್ಯ (ಅಪ್ಪಾಜಿ) ಇವರ ನಿರ್ದೇಶನದಲ್ಲಿ ಬೆಂಗಳೂರಿನ ರೂಪ ಕಲಾನಿಕೇತನ ಅಭಿನಯಿಸುವ ‘ವರ ಭ್ರಷ್ಟ’ ಕನ್ನಡ ನಾಟಕ. 2) ವಿ.ಕೆ.ಎಂ.…
ಕುಂದಾಪುರ : ನಿರ್ದಿಗಂತ ಮೈಸೂರು ನಿರಂತರ ರಂಗ ಉತ್ಸವ ಪ್ರಯುಕ್ತ ಸಮುದಾಯ ಕುಂದಾಪುರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಆಯೋಜನೆಯಲ್ಲಿ ಶಕೀಲ್ ಅಹ್ಮದ್ ಇದರ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ ಪ್ರದರ್ಶನವನ್ನು ದಿನಾಂಕ 18 ಜನವರಿ 2025ರಂದು ಸಂಜೆ 6-30 ಗಂಟೆಗೆ ಕುಂದಾಪುರ ಬೋರ್ಡ್ ಹೈಸ್ಕೂಲ್ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ನಾಟಕದ ಹಿನ್ನೆಲೆ : ಮೋಡಿ ಮಾಡಬಲ್ಲ ಮೋಹಕ ಮಾತುಗಳನ್ನಾಡುವ ತುಂಡೇರಾಯ, ಬಯಸಿದ್ದನ್ನು ಪಡೆಯಲು ಏನು ಮಾಡಲೂ ಹಿಂಜರಿಯದವ ತುಂಡೇರಾಯನ ದುರಾಸೆ ಮತ್ತು ಅಧಿಕಾರ ದಾಹ ಹೆಚ್ಚಾದಂತೆ ಅದನ್ನು ಸಾಧಿಸಿಕೊಳ್ಳುವ ಮಾರ್ಗಗಳೂ ಹೆಚ್ಚು ಕ್ರೂರಗೊಳ್ಳುತ್ತಾ ಹೋಗುತ್ತವೆ. ತನ್ನ ಬುದ್ಧಿ ಮತ್ತು ಬಲಪ್ರಯೋಗದಿಂದ ಅಧಿಕಾರದ ಗದ್ದುಗೆಗಳನ್ನು ಏರುವ ಹವಣಿಕೆ ಈತನದು. ಜನರನ್ನು ಮಾತಿನಲ್ಲಿ ಮರುಳು ಮಾಡುತ್ತಾ ಮರುಳಾಗದಿದ್ದವರನ್ನು ಕೊಲ್ಲುತ್ತಾ, ತನ್ನ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಬಯಸುತ್ತಾನೆ. ಸಮಕಾಲೀನ ಜಾಗತಿಕ ರಾಜಕೀಯ ಮತ್ತು ಯಾವುದೇ ದೇಶ ಕಾಲವನ್ನೂ ಸಂಕೇತವಾಗಿ ಪ್ರತಿನಿಧಿಸಬಲ್ಲ ವಿಡಂಬನಾತ್ಮಕ ನಾಟಕವಿದು. ನಾಟಕಕಾರ ಬರ್ಟೋಲ್ಟ್…
ಕಡಬ : ಕಡಬ ತಾಲೂಕು, ಐತ್ತೂರು ಗ್ರಾಮದ, ಬೆತ್ತೋಡಿ – ಮಾಳ ವರದ ರೈ ಮತ್ತು ವಾರಿಜ ರೈ ದಂಪತಿಗಳ ಮಗನಾಗಿ ಜನನ. 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ನಿಲ್ಲಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಗುರುಗಳಾದ ಶ್ರೀ ತಾರನಾಥ ಬಲ್ಯಾಯ ವರ್ಕಾಡಿಯವರಿಂದ ನಾಟ್ಯಾಭ್ಯಾಸ ಮಾಡಿ ಶ್ರೀ ಧರ್ಮಸ್ಥಳ ಮೇಳಕ್ಕೆ ಸೇರ್ಪಡೆಗೊಂಡರು. ನಂತರ ಶ್ರೀ ಕಟೀಲು ಮೇಳ, ಪುತ್ತೂರು ಮೇಳ, ಕುಂಟಾರು ಮೇಳ, ಮಂಗಳಾದೇವಿ ಮೇಳ, ತೆಂಕು – ಬಡಗು ಸಮ್ಮಿಶ್ರಗೊಂಡ ಹಿರಿಯಡ್ಕ ಮೇಳ, ತಳಕಲ ಮೇಳ, ಸುಂಕದಕಟ್ಟೆ ಮೇಳ, ಬಾಚಕೆರೆ ಮೇಳ, ಪ್ರಸ್ತುತ ಗೆಜ್ಜೆಗಿರಿ ಮೇಳದಲ್ಲಿ ಹಾಸ್ಯ ಕಲಾವಿದರಾಗಿ ಸೇವೆಗೈಯುತ್ತಿದ್ದಾರೆ. ರವಿ ಕುಮಾರ್ ಸುರತ್ಕಲ್ ರಚಿಸಿದ ‘ನಾಗತಂಬಿಲ’ದ ಕೂಸಮ್ಮ (ನಂಜುಂಡ)ನ ಪಾತ್ರ ಯಕ್ಷ ರಂಗದಲ್ಲಿ ಹೊಸ ತಿರುವು ತಂದು ಕೊಟ್ಟಿತ್ತು. ನಾಗರಪಂಚಮಿಯ ನೋಣಯ್ಯ, ‘ವಜ್ರ ಕುಟುಂಬ’ದ ಕಪಟ ಸ್ವಾಮೀಜಿ, ‘ಪವಿತ್ರ – ಪಲ್ಲವಿ’ಯ ಪದ್ಮಾವತಿ (ಪದ್ದು), ‘ಚೆನ್ನಿ- ಚೆನ್ನಮ್ಮ’ದ ಪುರುಷೋತ್ತಮ, ‘ವಿಜಯಕೇಸರಿ’ಯ ಮಾರುತಿ, ‘ಜೀವನಚಕ್ರ’ದ ನಿಷ್ಠಾವಂತ ಸೇವಕ, ‘ಗುಳಿಗೋದ್ಭವ – ಪಂಜುರ್ಲಿ ಪ್ರತಾಪ’ದ…
ಉಡುಪಿ : ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಮತ್ತು ಅವರ ಪತ್ನಿ ಶ್ರೀಮತಿ ಸರಸ್ವತೀ ಜಿ. ರಾವ್ ತಮ್ಮ ಮಗಳು ಪಾವನಿಯ ಹತ್ತನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಉಡುಪಿ ಜಿಲ್ಲೆಯ 1ರಿಂದ 9ನೇ ತರಗತಿವರೆಗೆ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಚಿಣ್ಣರ ಬಣ್ಣದ ಹಬ್ಬ – 2025’ ಚಿತ್ರಕಲಾ ಸ್ಪರ್ಧೆಯು ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ದಿನಾಂಕ 12 ಜನವರಿ 2025 ಭಾನುವಾರ ಜರಗಿತು. ಸುಮಾರು 300 ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ತರಗತಿವಾರು ಪ್ರಥಮ (ರೂ.2000), ದ್ವಿತೀಯ (ರೂ.1500), ತೃತೀಯ (ರೂ.1000) ಮತ್ತು ಎರಡು ಸಮಾಧಾನಕರ (ತಲಾ ರೂ.500) ಸೇರಿದಂತೆ ಒಟ್ಟು 45 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಪುಸ್ತಕ ಸ್ಮರಣಿಕೆಯನ್ನು ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ. ಜೆ.ಎನ್. ಭಟ್ ಮತ್ತು ಡಾ. ವಿರೂಪಾಕ್ಷ ದೇವರಮನೆ ವಿದ್ಯಾರ್ಥಿ ಪೋಷಕರಿಗೆ ಆರೋಗ್ಯದ ಮತ್ತು ಮಕ್ಕಳನ್ನು ಬೆಳೆಸುವ ಕುರಿತು ಉಪಯುಕ್ತ ಸಲಹೆ ನೀಡಿದರು. ರಮೇಶ್…
ಕಾಸರಗೋಡು : ಪೆರ್ಲ ಸಮೀಪದ ಬಳ್ಳಂಬೆಟ್ಟು ಶ್ರೀ ಪರಿವಾರ ಸಹಿತ ಶಾಸ್ತರ ದೇವಳದಲ್ಲಿ ಮಕರ ಸಂಕ್ರಮಣದ ಅಂಗವಾಗಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ವತಿಯಿಂದ ದಿನಾಂಕ 14 ಜನವರಿ 2025ರಂದು ಅಗರಿ ಭಾಗವತ ವಿರಚಿತ ‘ಶಾಂಭವಿ ವಿಲಾಸ’ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಗಿರೀಶ್ ರೈ ಕಕ್ಕೆಪದವು, ಶ್ರೇಯಾ ಆಚಾರ್ಯ ಆಲಂಕಾರು, ಪದ್ಮನಾಭ ಉಪಾಧ್ಯಾಯ, ನೆಕ್ಕರೆಮೂಲೆ ಗಣೇಶ್ ಭಟ್ ಸಹಕರಿಸಿದರು. ಮುಮ್ಮೇಳದಲ್ಲಿ ಗಾಯತ್ರೀ ಹೆಬ್ಬಾರ್ (ಕೌಶಿಕೆ), ಹರಿಣಾಕ್ಷಿ ಜೆ. ಶೆಟ್ಟಿ (ಶುಂಭ), ಶುಭಾ ಅಡಿಗ (ರಕ್ತಬೀಜ ಮತ್ತು ಸುಗ್ರೀವ), ಕಿಶೋರಿ ದುಗ್ಗಪ್ಪ ನಡುಗಲ್ಲು (ಚಂಡ), ಶಾರದ ಅರಸ್ (ಮುಂಡ) ಸಹಕರಿಸಿದರು. ನಿರ್ದೇಶಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ವಂದಿಸಿದರು. ಬದಿಯಡ್ಕ ಉದ್ಯಮಿ ಗಿರಿಧರ ಪೈ ಕಾರ್ಯಕ್ರಮ ಪ್ರಾಯೋಜಿಸಿದ್ದರು.
ಮಂಗಳೂರು : ಮಂಗಳೂರಿನ ಡಾ. ಟಿ. ಎಂ. ಎ. ಪೈ ಇಂಟರ್ನೇಷನಲ್ ಕನ್ವೆನ್ಷನ್ ಸೆಂಟರ್ ಇಲ್ಲಿ ನಡೆದ ಮಂಗಳೂರು ಸಾಹಿತ್ಯ ಉತ್ಸವದ 7ನೇ ಆವೃತ್ತಿಯ ಅಂಗವಾಗಿ ದಿನಾಂಕ 11 ಜನವರಿ 2025 ರಂದು ‘ಕಥಾ ಓದು’ ಕಾರ್ಯಕ್ರಮವು ಸಾಹಿತ್ಯ ಪ್ರೇಮಿಗಳಿಗೆ ಅನನ್ಯ ಅನುಭವ ನೀಡಿತು. ಈ ವಿಶೇಷ ಕಾರ್ಯಕ್ರಮದಲ್ಲಿ ಮೂರು ಪ್ರಮುಖ ವ್ಯಕ್ತಿತ್ವಗಳು ಭಾಗವಹಿಸಿದರು – ಪತ್ರಕರ್ತ ಹಾಗೂ ಲೇಖಕ ಗೋಪಾಲಕೃಷ್ಣ ಕುಂಟಿನಿ, ಕಥೆಗಾರ ಸಚಿನ್ ತೀರ್ಥಹಳ್ಳಿ ಮತ್ತು ಗುರುವಂದನ ಸಾಹಿತ್ಯ ಪ್ರಶಸ್ತಿ ವಿಜೇತೆಯಾದ ಲೇಖಕಿ ಸ್ಮಿತಾ ರಾಘವೇಂದ್ರ ‘ಕಥಾ ಓದು’ ಸಂವಾದದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವು ಕಥಾ ಓದು ಕಲೆ ಕುರಿತು ಪರಿಚಯ ನೀಡುವ ಮೂಲಕ ಆರಂಭವಾಯಿತು, ಇದು ಸಂಸ್ಕೃತಿಗಳನ್ನು ಸಂಪರ್ಕಿಸುವ, ಪರಂಪರೆಯನ್ನು ಕಾಪಾಡುವ ಮತ್ತು ಚಿಂತನೆಗೆ ಉತ್ತೇಜನ ನೀಡುವ ಒಂದು ಸಶಕ್ತ ಮಾಧ್ಯಮವಾಗಿದೆ. ಪ್ರತ್ಯೇಕವಾಗಿ ತಮ್ಮ ಕಥೆಗಳನ್ನು ಓದುವುದರ ಮೂಲಕ ಎಲ್ಲರೂ ತಮ್ಮ ವಿಶಿಷ್ಟ ಶೈಲಿಯನ್ನು ಪರಿಚಯಿಸಿದರು. ಕಥೆಗಳ ಮೂಲಕ ಸಂಸ್ಕೃತಿಯ ಆಳವಾದ ವ್ಯಾಖ್ಯಾನ, ಸಾಹಿತ್ಯದ ಸಮಾಜಶಾಸ್ತ್ರೀಯ ಪ್ರಭಾವ, ಮತ್ತು…
ಕಾಸರಗೋಡು : ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಮೈಸೂರು ಇದರ ಕೇರಳ ಗಡಿನಾಡ ಘಟಕವಾದ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಶಿವರಾಮ ಕಾಸರಗೋಡು ಅಧ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ಬಂದು 25 ವರ್ಷ ಪೂರ್ಣಗೊಂಡಿದೆ. ದಿನಾಂಕ 27 ಮಾರ್ಚ್ 2025 ಗುರುವಾರದಂದು ಇದರ ಬೆಳ್ಳಿ ಹಬ್ಬ ವರ್ಷಾಚರಣೆಯ ಸಂಭ್ರಮವು ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆಯಲಿದೆ. ದಿನಾಂಕ 12 ಜನವರಿ 2025ರಂದು ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನದ ಲಾಂಛನವನ್ನು ವಿಟ್ಲದಲ್ಲಿ ನಡೆದ ಬಂಟ್ವಾಳ ತಾಲೂಕು 6ನೇ ಚುಟುಕು ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಮೈಸೂರು ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯ ಸ್ಥಾಪಕರಾದ ರಾಜ್ಯ ಪ್ರಧಾನ ಸಂಚಾಲಕ ಡಾ. ಎಂ.ಜಿ.ಆರ್. ಅರಸ್ ಇದನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರುಗಳಾದ ದಕ್ಷಿಣ ಕನ್ನಡ ಜಿಲ್ಲೆಯ ಹರೀಶ್ ಸುಲಾಯ ಒಡ್ಡಂಬೆಟ್ಟು, ಕಾಸರಗೋಡು ಜಿಲ್ಲೆಯ ಶಿವರಾಮ ಕಾಸರಗೋಡು, ಮಂಗಳೂರು ತಾಲೂಕಿನ ಗೋಪಾಲಕೃಷ್ಣ ಶಾಸ್ತ್ರಿ, ಸುಳ್ಯದ ಶ್ರೀಮತಿ ಅಶ್ವಿನಿ ಕೋಡಿಬೈಲು, ಬಂಟ್ವಾಳ…