Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಮಂಗಳೂರಿನ ಟಿ.ಎಂ.ಎ. ಪೈ ಇಂಟನ್ಯಾಷನಲ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಮಂಗಳೂರು ಸಾಹಿತ್ಯ ಉತ್ಸವದ 7ನೇ ಆವೃತ್ತಿಯ ಅಂಗವಾಗಿ ಕನ್ನಡ ಸಾಹಿತ್ಯ ವಿಮರ್ಶೆ – ಒಂದು ಅಕಾಡೆಮಿಕ್ ಚರ್ಚೆ’ಯು ಎರಡನೇ ಸಭಾಂಗಣದಲ್ಲಿ ದಿನಾಂಕ 11 ಜನವರಿ 2025ರಂದು ನಡೆಯಿತು. ಈ ಚರ್ಚೆಯನ್ನು ಸಂವಾಹಕರಾಗಿ ಡ. ಕಾಖಂಡಕಿ ಹೆಚ್.ವಿ. ಅವರು ನಡೆಸಿಕೊಟ್ಟರು. ಈ ಚರ್ಚಾ ಫಲಕದಲ್ಲಿ ಡಾ. ಜಿ.ಬಿ. ಹರೀಶ್, ಡಾ. ಎನ್.ಎಸ್. ಗುಂಡೂರು ಹಾಗೂ ಡಾ. ಶಾಮಸುಂದರ ಖಿದರಕುಂದಿ ಭಾಗವಹಿಸಿದರು. ಡಾ. ಜಿ. ಬಿ. ಹರೀಶ್ : ಬರಹಗಾರರಾಗಿರುವ ಇವರಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಜೈನ್ ಮತ್ತು ಪ್ರಾಕೃತ ಭಾಷೆಯ ಪರಂಪರೆಯ ಅಧ್ಯಯನಕ್ಕಾಗಿ ಡಾಕ್ಟರೇಟ್ ಪದವಿ ದೊರಕಿದೆ. ಡಾ. ಎನ್. ಎಸ್. ಗುಂಡೂರು : ಶ್ರೀಯುತರು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದು, ಇವರಿಗೆ ಕರ್ನಾಟಕ ವಿಶ್ವವಿದ್ಯಾನಿಲಯದಿಂದ 2004ರಲ್ಲಿ ವಿಭಜನೆಯ ಕಾದಂಬರಿಗಳ ಕುರಿತು ಅಧ್ಯಯನಕ್ಕಾಗಿ ಡಾಕ್ಟರೇಟ್ ಪದವಿ ದೊರಕಿದೆ. ಡಾ. ಶಾಮಸುಂದರ ಖಿದರಕುಂದಿ : ಗದಗಿನ ಎ. ಎಸ್. ಏಸ್. ವಾಣಿಜ್ಯ ಕಾಲೇಜಿನಲ್ಲಿ…
ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಜಿಲ್ಲಾ ರಜತೋತ್ಸವ ಸಮಿತಿಯ ಸಹಕಾರದಲ್ಲಿ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 11 ಜನವರಿ 2025ರ ಶನಿವಾರದಂದು ಬ್ರಹ್ಮಾವರದ ಬಂಟರ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವಾ ಮಾತನಾಡಿ “ಸಮುದಾಯದ ಧ್ವನಿಯಾಗಿ, ಸಮಾಜದ ಸಾಧ್ಯತೆಗಳನ್ನು ಬದುಕಿನ ವೈವಿಧ್ಯತೆಯ ಚಿತ್ರಣವಾಗಿ, ಸಾಮಾಜಿಕ ಜವಾಬ್ದಾರಿಯ ಎಚ್ಚರಿಕೆಯ ಗಂಟೆಯಾಗಿ ಪತ್ರಿಕೆ ಕೆಲಸ ಮಾಡುತ್ತಿದೆ.” ಎಂದು ಹೇಳಿದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಮಾತನಾಡಿ “ಪತ್ರಿಕೋದ್ಯಮ ಇಂದು ಸಂದಿಗ್ಧ ಸ್ಥಿತಿಯಲ್ಲಿದೆ. ಪ್ರಾಮಾಣಿಕ ಸುದ್ದಿ ಮತ್ತು ಪ್ರಾಮಾಣಿಕ ನಿರ್ಭೀತ ಪತ್ರಿಕೋದ್ಯಮ ಇಂದು ಅಗತ್ಯವಾಗಿದೆ. ಇಂದಿನ ಪತ್ರಿಕೆ ಮತ್ತು ಪತ್ರಕರ್ತರಿಗೆ ಅತಿಯಾಗಿ ವಿಜೃಂಭಿಸದೇ ವಾಸ್ತವವನ್ನು ಬಿಂಬಿಸುವ ಪತ್ರಕರ್ತರನ್ನಾಗಿ ಮಾಡಲು ವಡ್ಡರ್ಸೆ ಅವರು ಮಾದರಿ ಹಾಕಿ ಕೊಟ್ಟಿದ್ದಾರೆ” ಎಂದು ಹೇಳಿದರು. ಸಂಘದ…
ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ 2025 ಜನವರಿಯಿಂದ ಡಿಸೆಂಬರ್ ತನಕ ಪ್ರತೀ ತಿಂಗಳು ‘ರಾಮಸಾಗರಗಾಮಿನೀ’ ಎಂಬ ಶ್ರೀಮದ್ ವಾಲ್ಮೀಕಿ ರಾಮಾಯಣ ದರ್ಶನ ಉಪನ್ಯಾಸ ಮಾಲೆಯನ್ನು ಹಮ್ಮಿಕೊಂಡಿದ್ದು, ಮಾಲೆಯ ಮೊದಲ ಸೋಪಾನ ‘ವಾಲ್ಮೀಕಿ ಗಿರಿಯಲ್ಲಿ ಜನಿಸಿ’ ಎಂಬ ವಿಷಯದ ಕುರಿತು ದಿನಾಂಕ 11 ಜನವರಿ 2025ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಖ್ಯಾತ ವಿದ್ವಾಂಸರೂ, ವಾಗ್ಮಿಗಳೂ ಆಗಿರುವ ಡಾ. ರಾಘವೇಂದ್ರ ರಾವ್ ಪಡುಬಿದ್ರಿಯವರು ಮಾತನಾಡುತ್ತಾ ಆದಿಕಾವ್ಯವಾಗಿ ರಾಮಾಯಣವು ಇಂದು ಭಾರತೀಯ ಸಂಸ್ಕೃತಿಯ ಆಗರವಾಗಿ ನಿಂತಿದೆ. ಸರ್ವ ಸದ್ಗುಣಗಳನ್ನು ಹೊಂದಿರುವ ವ್ಯಕ್ತಿ ಯಾರಾದರೂ ಈ ಪ್ರಪಂಚದಲ್ಲಿದ್ದಾರೆಯೇ ಎಂಬ ವಾಲ್ಮೀಕಿ ಮಹರ್ಷಿಗಳ ಪ್ರಶ್ನೆಗೆ ನಾರದರು ಉತ್ತರ ರೂಪವಾಗಿ ಅಂತಹ ಒಬ್ಬ ವ್ಯಕ್ತಿ ಈ ಜಗತ್ತಿನಲ್ಲಿದ್ದು, ಆತನೇ ಅಯೋಧ್ಯೆಯನ್ನು ಆಳುತ್ತಿರುವ ಪ್ರಭು ಶ್ರೀರಾಮಚಂದ್ರ ಎಂಬುದಾಗಿ ತಿಳಿಸುತ್ತಾ ಬಾಲಕಾಂಡದ…
ಧಾರವಾಡ : ವರಕವಿ ದ.ರಾ. ಬೇಂದ್ರೆ ಹೆಸರಲ್ಲಿ ಕೊಡುವ 2025ನೇ ಸಾಲಿನ ‘ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ’ ಲೇಖಕಿ ಡಾ. ವೀಣಾ ಶಾಂತೇಶ್ವರ ಹಾಗೂ ಕವಿ, ವಿಮರ್ಶಕ ಮತ್ತು ಚಿಂತಕ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಇವರುಗಳಿಗೆ ಒಲಿದಿದೆ. ಬೇಂದ್ರೆಯವರ 129ನೇ ಜನ್ಮದಿನದ ನಿಮಿತ್ತ ದಿನಾಂಕ 31 ಜನವರಿ 2025ರಂದು ಬೇಂದ್ರೆ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಡಾ. ದ.ರಾ. ಬೇಂದ್ರೆ ಟ್ರಸ್ಟ್ ಅಧ್ಯಕ್ಷರಾದ ಡಾ. ಡಿ.ಎಂ. ಹಿರೇಮಠ ಇವರು ತಿಳಿಸಿದರು. ಪ್ರಶಸ್ತಿ ಮೊತ್ತ ರೂಪಾಯಿ ಒಂದು ಲಕ್ಷವಿದ್ದು, ಇಬ್ಬರು ಹಂಚಿಕೊಂಡಿದ್ದಾರೆ. ಪ್ರಶಸ್ತಿ ಫಲಕ, ಫಲ-ಪುಷ್ಪಗಳನ್ನು ಒಳಗೊಂಡಿದೆ. ಧಾರವಾಡದ ನವೋದಯ ಸಾಹಿತ್ಯದ ಸ್ತ್ರೀ ಸಂವೇದನೆ ಸೃಜನಶೀಲ ಲೇಖಕಿ ಡಾ. ವೀಣಾ ಶಾಂತೇಶ್ವರ ಮತ್ತು ಗಾಂಧಿ, ಅಂಬೇಡ್ಕರ್, ಲೋಹಿಯಾ, ಕುವೆಂಪು ಇವರ ವಿಚಾರಧಾರೆಗಳಿಂದ ಪ್ರಭಾವಿತರಾದ ತುಮಕೂರು ಮೂಲದ ಪ್ರೊ. ಎಸ್.ಜಿ. ಸಿದ್ದರಾಮಯ್ಯರವರನ್ನು ಪ್ರಶಸ್ತಿ ಆಯ್ಕೆ ಸಮಿತಿ ಒಮ್ಮತದಿಂದ ಆಯ್ಕೆ ಮಾಡಿದೆ. ಪ್ರೊ. ವೀಣಾ ಶಾಂತೇಶ್ವರ : ಧಾರವಾಡದಲ್ಲಿ ಹುಟ್ಟಿದ ಪ್ರೊ. ವೀಣಾ…
ಕೋಣಾಜೆ : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಮಂಗಳೂರು ವಿವಿ ವತಿಯಿಂದ ವಿವಿಯ ಆಡಳಿತ ಸೌಧದ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ದಿನಾಂಕ 09 ಜನವರಿ 2025ರಂದು ನಾ. ಡಿಸೋಜ ನುಡಿನಮನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಂಗಳೂರು ವಿವಿಯ ಕುಲಸಚಿವ ರಾಜು ಮೊಗವೀರ ಇವರು ಮಾತನಾಡಿ “ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಾದ ಅಗತ್ಯವನ್ನು ಪ್ರತಿಪಾದಿಸಿದ ಕನ್ನಡದ ಲೇಖಕ ನಾ. ಡಿಸೋಜ, ಅವರ ಕಾದಂಬರಿಗಳಲ್ಲಿ ಪ್ರಕೃತಿ ವಿನಾಶದ ದುಷ್ಪರಿಣಾಮಗಳ ಕುರಿತು, ಅಭಿವೃದ್ಧಿಯ ಅಮಾನವೀಯ ಮುಖ ಅನಾವರಣಗೊಂಡಿದೆ. ಅಭಿವೃದ್ಧಿಯ ಮಾದರಿಗಳು ಭಿನ್ನ ಇರಬಹುದು. ಶರಾವತಿಯಲ್ಲಿ ಮುಳುಗಡೆಯಿಂದ, ರಸ್ತೆ ಅಗಲೀಕರಣದಿಂದ, ವಿಮಾನ ನಿಲ್ದಾಣದಿಂದ ಹೀಗೆ ಬೇರೆ ಬೇರೆ ಕಾರಣಗಳಿಂದ ಮನೆ, ಜಾಗ ಕಳೆದುಕೊಂಡು ವಲಸೆ ಹೋಗಬೇಕಾದವರ ಭಾವನೆಗಳು, ಸಂಕಟಗಳು ಸಮಾನ. ಬರಹಗಾರರು ಇಂತಹ ನೋವಿಗೆ ಮಿಡಿಯುತ್ತಾರೆ. ನಾ. ಡಿಸೋಜರ ಬರಹದಲ್ಲಿ ಅದನ್ನು ಕಾಣಬಹುದಾಗಿದೆ.” ಎಂದು ತಿಳಿಸಿದರು. ದ.ಕ. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಮಾತನಾಡಿದರು. ವಿಧಾನ…
ಕೂಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಹಮ್ಮಿಕೊಂಡಿರುವ ‘ಬಲೆ ತುಳು ಸಾಹಿತ್ಯ ಓದುಗ’ ಅಭಿಯಾನದ ಎರಡನೇ ಕಾರ್ಯಕ್ರಮ ದಿನಾಂಕ 09 ಜನವರಿ 2025 ರಂದು ಮಂಗಳೂರಿನ ಉರ್ವಸ್ಟೋರ್ ನಲ್ಲಿರುವ ತುಳುಭವನದ ತುಳು ಸಾಹಿತ್ಯ ಆಕಾಡಮಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ತುಳು ಸಾಹಿತಿ ಹಾಗೂ ನಾಟಕಗಾರ ಪರಮಾನಂದ ಸಾಲ್ಯಾನ್ ಮಾತನಾಡಿ “ವಿದ್ಯಾರ್ಥಿಗಳಲ್ಲಿ ತುಳು ಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸಲು ಇಂತಹ ಅಭಿಯಾನ ಸೂಕ್ತ. ತುಳು ಬದುಕಿನ ನಂಬಿಕೆಯ ಜತೆಗೆ ಜಿಜ್ಞಾಸೆಯನ್ನು ಸಮಚಿತ್ತದಿಂದ ಕಾಣುವ ಪ್ರಜ್ಞಾವಂತಿಕೆ ಓದಿನ ಮೂಲಕ ಮೂಡಲಿದೆ” ಎಂದರು. ಇದೇ ಸಂದರ್ಭದಲ್ಲಿ ಅಕಾಡೆಮಿಯ ತ್ರೈಮಾಸಿಕ ಪತ್ರಿಕೆ ‘ಮದಿಪು’ ಸಂಚಿಕೆಯನ್ನು ಲೋಕಾರ್ಪಣೆಗೊಳಿಸಿದ ಮಂಗಳೂರು ಪ್ರೆಸ್ ಕ್ಲಬ್ ಇದರ ಅಧ್ಯಕ್ಷರಾದ ಪಿ. ಬಿ. ಹರೀಶ್ ರೈ ಮಾತನಾಡಿ “ಪ್ರತಿ ಸಂದರ್ಭದಲ್ಲಿಯೂ ಅಕಾಡಮಿಗಳು ಸರಕಾರದತ್ತ ನಿರೀಕ್ಷೆ ಮಾಡುವುದಕ್ಕಿಂತ ಸ್ವಯಂ ಸಂಪನ್ಮೂಲ ಕ್ರೂಡೀಕರಿಸಿ ಜನಸಹಭಾಗಿತ್ವದಲ್ಲಿ ಕಾರ್ಯಕ್ರಮ ರೂಪಿಸುವುದು ಅಗತ್ಯ” ಎಂದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಇವರ ಅಧ್ಯಕ್ಷತೆಯಲ್ಲಿ…
ಬೆಂಗಳೂರು : ನಾಟಕ ಬೆಂಗಳೂರು 25 ರಂಗಭೂಮಿ ಸಂಭ್ರಮದ ಪ್ರಯುಕ್ತ ವಿಜಯನಗರ ಬಿಂಬ (ರಿ.) ಪ್ರಸ್ತುತ ಪಡಿಸುವ ಬರ್ಟೋಲ್ಟ್ ಬ್ರೆಕ್ಟ್ ಇವರು ರಚಿಸಿರುವ ಡಾ. ಎಸ್.ವಿ. ಕಶ್ಯಪ್ ಇವರ ನಿರ್ದೇಶನದಲ್ಲಿ ‘ಮದರ್ ಕರೇಜ್’ ನಾಟಕ ಪ್ರದರ್ಶನವನ್ನು ದಿನಾಂಕ 21 ಜನವರಿ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕವನ್ನು ಲಿಂಗದೇವರು ಹಳೆಮನೆ ಇವರು ಕನ್ನಡಕ್ಕೆ ಅನುವಾದಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಪ್ರಸ್ತುತಗೊಳ್ಳಲಿದೆ.
ಮಂಗಳೂರು : ನವಭಾರತ ಎಜುಕೇಶನ್ ಸೊಸೈಟಿ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನವಭಾರತ ಯಕ್ಷಗಾನ ಅಕಾಡೆಮಿಯ ‘ದಶಮಾನೋತ್ಸವ ಸಮಾರಂಭವು ದಿನಾಂಕ 11 ಜನವರಿ 2025ರಂದು ಮಂಗಳೂರಿನ ಮಣ್ಣಗುಡ್ಡೆ ಸಂಘನಿಕೇತನದ ‘ಸುಜ್ಞಾನ’ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಪಿ. ವಾಮನ ಶೆಣೈಯವರು ಮಾತನಾಡಿ “ನಮ್ಮ ಭಾರತೀಯ ಸಂಸ್ಕೃತಿಗಳನ್ನು ಯಕ್ಷಗಾನ ಪ್ರತಿಪಾದಿಸುತ್ತಿದೆ. ದೈಹಿಕ ಶ್ರಮದ ಮೂಲಕ, ಅದರಲ್ಲಿನ ಲಾಸ್ಯದ ಮೂಲಕ, ನಾಟ್ಯದ ಮೂಲಕ ಭಿನ್ನಭಿನ್ನ ಪರಂಪರೆಯನ್ನು ಒಂದೇ ಸುತ್ತಿನಡಿ ತಂದು ಅದು ಬೆಳಗುತ್ತದೆ. ಶಿಕ್ಷಣದ ಪ್ರತಿಯೊಂದು ರೆಂಬೆಗಳೂ ತುಂಬಿಕೊಂಡಿರಬೇಕಾದರೆ ಈ ರೀತಿಯ ಸಾಂಸ್ಕೃತಿಕ ಪುನರುತ್ಥಾನ ಈ ವಿಶಿಷ್ಠ ಕಲೆಯಲ್ಲಿದೆ. ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಉದಿಸಿದ ನವಭಾರತ ಎಜ್ಯುಕೇಶನ್ ಸೊಸೈಟಿಯಲಿ ಯಕ್ಷಗಾನ ಅಕಾಡೆಮಿಯನ್ನು ನಡೆಸುತ್ತಾ ಇದೀಗ ಹತ್ತರ ಸಂಭ್ರಮದಲ್ಲಿದೆ. ನಗರದ ಬೇರೆ ಬೇರೆ ಶಾಲೆಗಳಿಂದ ಇಲ್ಲಿ ಯಕ್ಷ ಶಿಕ್ಷಣಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ನಾವು ಮುಕ್ತವಾಗಿ ಶಿಕ್ಷಣ ನೀಡುತ್ತಿದ್ದೇವೆ. ಈ ಪ್ರಕ್ರಿಯೆಗಾಗಿ ನಾವೆಲ್ಲರೂ ಕೈಜೋಡಿಸಿ ಸಹಯೋಗಿಗಳಾಗೋಣ ಎಂದು ಕರೆ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ…
ಉಡುಪಿ :ಉಡುಪಿ ತುಳು ಕೂಟದ ಆಶ್ರಯದಲ್ಲಿ ನಡೆಯುವ ‘ಎಸ್. ಯು. ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ’ಗೆ ತುಳು ಕಾದಂಬರಿಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಹಸ್ತಪ್ರತಿಗಳು ಈವರೆಗೆ ಯಾವುದೇ ಬಹುಮಾನಕ್ಕೆ ಆಯ್ಕೆಯಾಗಿರಬಾರದು ಹಾಗೂ ಮುದ್ರಿತವಾಗಿರಬಾರದು. ಮುದ್ರಿಸುವಾಗ ಕೌನ್ 1/8 ಆಕಾರದಲ್ಲಿ 120 ಪುಟಗಳನ್ನು ಮೀರದಷ್ಟು ದೀರ್ಘವಾಗಿರಬೇಕು. ಹಸ್ತಪ್ರತಿಗಳು ಸುಂದರವಾದ ಕೈಬರಹ, ಬೆರಳಚ್ಚು ಅಥವಾ ಕಂಪ್ಯೂಟರ್ ಮುದ್ರಿತ (ಡಿ. ಟಿ. ಪಿ.) ರೂಪದಲ್ಲಿ ಇರಬಹುದು. ಹಸ್ತ ಪ್ರತಿಯನ್ನು 31 ಜನವರಿ 2025ರ ಒಳಗೆ ತಲುಪಿಸಬೇಕು. ಹೆಚ್ಚಿನ ಮಾಹಿತಿಗೆ ಕಾದಂಬರಿ ಸ್ಪರ್ಧೆಯ ಸಂಚಾಲಕಿ ಶಿಲ್ಪಾ ಜೋಷಿ – 7892194150 ಇವರನ್ನು ಸಂಪರ್ಕಿಸುವಂತೆ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.
ಬೆಂಗಳೂರು : ಪ್ರಾಮಾಣಿಕ ಮನಸುಗಳ ಸಂಗಮವಾದ ಜನಸಿರಿ ತಂಡ (ರಿ.) ಇದರ ವತಿಯಿಂದ ಕರುನಾಡ ಕವಿಗಳಿಂದ ಏಕಕಾಲದಲ್ಲಿ 21 ನಿಮಿಷದೊಳಗೆ ರೈತರ ಬಗ್ಗೆ ಕವನ ರಚಿಸುವ ‘ರಾಜ್ಯಮಟ್ಟದ ಕವಿಗಳ ಕಲರವ 2025’ ಕಾರ್ಯಕ್ರಮವನ್ನು ದಿನಾಂಕ 09 ಫೆಬ್ರವರಿ 2025ರಂದು ಬೆಂಗಳೂರಿನ ಸರ್ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಭಾಗವಹಿಸುವ ಕವಿಗಳಿಗೆ ನಿಯಮಾವಳಿಗಳು : * ರೈತರನ್ನು ಕುರಿತು ಕವನ ರಚಿಸಬೇಕು. * ನಿಗದಿಪಡಿಸಿದ ಸಮಯಕ್ಕಿಂತ ಅರ್ಧ ಗಂಟೆ ಮೊದಲೇ ಸಭಾಂಗಣದಲ್ಲಿ ಹಾಜರಿರಬೇಕು. * ಜನಸಿರಿ ಸಂಸ್ಥೆ ನೀಡುವ ಬರವಣಿಗೆ ಪ್ರತಿಯಲ್ಲಿರುವ ಸೂಚನೆಗಳನ್ನು ಪಾಲಿಸುತ್ತಾ ಅದರಲ್ಲಿಯೇ ಕವನ ರಚಿಸಬೇಕು. * ನಕಲು ಮಾಡಿ ಬರೆಯುವ ಹಾಗಿಲ್ಲ. ಪ್ರಾಮಾಣಿಕ ಮನಸ್ಸಿನೊಂದಿಗೆ ಭಾಗವಹಿಸಬೇಕು. * ಲಘು ಉಪಹಾರದ ವ್ಯವಸ್ಥೆ ಇರುತ್ತದೆ. * ಭಾಗವಹಿಸುವ ಕವಿಗಳಿಗೆ ಪ್ರಶಸ್ತಿ ಪತ್ರದೊಂದಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು. * ಭಾಗವಹಿಸಲು ಇಚ್ಚಿಸುವ ಕವಿಗಳು ಪೂರ್ಣ ವಿಳಾಸದೊಂದಿಗೆ ಮೊದಲೇ ಹೆಸರು ನೋಂದಾಯಿಸಿಕೊಳ್ಳಬೇಕಾದ ದೂರವಾಣಿ ಸಂಖ್ಯೆ- ಜನಸಿರಿ : 9206199955. * ಕವಿಗಳು…