Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ‘ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ.)’ ಇದರ ವತಿಯಿಂದ ಡಾ. ಸುನೀತಾ ಎಂ. ಶೆಟ್ಟಿ ದತ್ತಿನಿಧಿ ಪ್ರಾಯೋಜಿತ ‘ತೌಳವ ಸಿರಿ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ದಿನಾಂಕ 12 ಏಪ್ರಿಲ್ 2025ರಂದು ಅಪರಾಹ್ನ 2-30 ಗಂಟೆಗೆ ಮಂಗಳೂರಿನ ಉರ್ವಸ್ಟೋರ್ ಅಶೋಕ ನಗರ ಕಚೇರಿ ಬಳಿಯಿರುವ ‘ಸಾಹಿತ್ಯ ಸದನ’ದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಕ.ಲೇ.ವಾ. ಸಂಘ ಇವರ ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಟಿ. ಶೆಟ್ಟಿ ಇವರು ವಹಿಸಲಿದ್ದು, ಲೇಖಕಿ ಪತ್ರಕರ್ತೆ ಶ್ರೀಮತಿ ಜಯಂತಿ ಎಸ್. ಬಂಗೇರ ಇವರಿಗೆ ‘ತೌಳವ ಸಿರಿ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಉಡುಪಿ : ಭಾವನಾ ಪೌಂಡೇಶನ್ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಗ್ರಾಮೀಣ ಭಾಗದಲ್ಲಿ ಸಂಯೋಜಿಸುತ್ತಿರುವ ‘ಬಾಲ ಲೀಲಾ’ ಚಿಣ್ಣರ ಬೇಸಿಗೆ ಶಿಬಿರವು ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ದಿನಾಂಕ 10 ಏಪ್ರಿಲ್ 2025ರಂದು ಉದ್ಘಾಟನೆಗೊಂಡಿತು. ಈ ಶಿಬಿರವನ್ನು ಉದ್ಘಾಟನೆ ಮಾಡಿದ ಸಂಗೀತ ಸಂಯೋಜಕರಾದ ಅರುಣ್ ಹಾವಂಜೆ ಮಾತನಾಡಿ “ನಮ್ಮೂರಿನಲ್ಲಿ ಭಾವನಾ ಫೌಂಡೇಶನ್ ಸಂಘಟಿಸುತ್ತಿರುವ ಬೇಸಿಗೆ ಶಿಬಿರವು ಬಹು ಮಹತ್ವಪೂರ್ಣವಾದುದು ಮತ್ತು ಇಂದಿನ ಆಧುನಿಕ ಜೀವನದ ನಡುವೆ ಸಾಂಪ್ರದಾಯಿಕ ಮೌಲ್ಯಗಳನ್ನು ಎತ್ತಿ ಹಿಡಿಯುವುದರೊಂದಿಗೆ ಕಲೆ, ಅಭಿನಯ, ಸಂಗೀತ ಎಲ್ಲವನ್ನೂ ಸಮೀಕರಿಸುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ” ಎಂಬುದಾಗಿ ಅಭಿಪ್ರಾಯವಿತ್ತರು. ಭಾವನಾ ಫೌಂಡೇಶನ್ನ ಸ್ಥಾಪಕಾಧ್ಯಕ್ಷರಾದ ಯಕ್ಷಗುರು ಹಾವಂಜೆ ಮಂಜುನಾಥ ರಾವ್ ಹಾಗೂ ಶಿಬಿರ ಸಂಯೋಜಕರಾದ ಡಾ. ಜನಾರ್ದನ ಹಾವಂಜೆ, ವಿಶುರಾವ್ ಹಾವಂಜೆ ಹಾಗೂ ವಿದುಷಿ ಅಕ್ಷತಾ ವಿಶು ರಾವ್ ಉಪಸ್ಥಿತರಿದ್ದರು. ಈ ಬೇಸಿಗೆ ಶಿಬಿರವು ನಾಲ್ಕು ದಿನಗಳ ಕಾಲ ನಡೆಯಲಿದ್ದು, ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುವ ಹಾಗೂ ಕಸವನ್ನು ರಸವಾಗಿಸುವ ಉದ್ದೇಶದೊಂದಿಗೆ ರೂಪಿಸಲಾಗಿದೆ.…
ಬ್ರಹ್ಮಾವರ : ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ (ರಿ.) ಇದರ ‘ನಲ್ವತ್ತರ ನಲಿವು -10’ ಸರಣಿಯ ಪ್ರಯುಕ್ತ ಶ್ರೀ ಮಹಾಲಿಂಗೇಶ್ವರ ಲಲಿತ ಕಲಾಕೇಂದ್ರ ಬ್ರಹ್ಮಾವರ ಸಂಸ್ಥೆಯ ಆಶ್ರಯದಲ್ಲಿ ‘ನೃತ್ಯ ಕೌಸ್ತುಭ ಹಾಗೂ ನೃತ್ಯ ರೂಪಕ’ ಕಾರ್ಯಕ್ರಮವನ್ನು ದಿನಾಂಕ 13 ಏಪ್ರಿಲ್ 2025ರಂದು ಸಂಜೆ 7-00 ಗಂಟೆಗೆ ಬ್ರಹ್ಮಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಮೈಸೂರು : ಪರಿವರ್ತನ ರಂಗ ಸಮಾಜ ಹಾಗೂ ಸಮುದಾಯ ಮೈಸೂರು ಸಂಸ್ಥೆಗಳ ಸಂಯಕ್ತಾಶ್ರಯದಲ್ಲಿ ನಮನ ಕಲಾವೇದಿಕೆ ಕೃಷ್ಣಮೂರ್ತಿಪುರಂ ಮೈಸೂರು ಇವರ ಸಹಕಾರದೊಂದಿಗೆ ಸಫ್ದರ್ ಹಶ್ಮಿ ನೆನಪಿನಲ್ಲಿ ಆಯೋಜಿಸುವ ‘ಸಾಮಾಜಿಕ ಪರಿವರ್ತನೆಯ ಸಾಧನವಾಗಿ ಬೀದಿ ನಾಟಕಗಳು’ ವಿಷಯದ ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮವು ದಿನಾಂಕ 12 ಏಪ್ರಿಲ್ 2025ರಂದು ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ನಮನ ಕಲಾಮಂಟಪದಲ್ಲಿ ನಡೆಯಲಿದೆ. ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಡಾ. ಮಹದೇವ್, ಜನಾರ್ಧನ (ಜೆನ್ನಿ), ಶಶಿಧರ್ ಭಾರಿಘಾಟ್, ಪ್ರೊ. ಕೆ. ಪಿ. ವಾಸುದೇವನ್ ಹಾಗೂ ಪ್ರೊ. ಎಸ್. ಆರ್. ರಮೇಶ್ ಭಾಗವಹಿಸಲಿದ್ದಾರೆ.
ಉಡುಪಿ : ಭೂಮಿಕಾ (ರಿ.) ಹಾರಾಡಿ, ಕರ್ನಾಟಕ ಜಾನಪದ ಪರಿಷತ್ತು (ರಿ.) ಬೆಂಗಳೂರು, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ (ರಿ.) ಉಡುಪಿ ಮತ್ತು ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಉಡುಪಿ ಇದರ ವತಿಯಿಂದ ‘ಪಂಚದಿನ ನಾಟಕೋತ್ಸವ’ ಬಣ್ಣ -11 ದಿನಾಂಕ 13 ಏಪ್ರಿಲ್ 2025ರಂದು ಸಂಜೆ ಗಂಟೆ 6-30ಕ್ಕೆ ಬ್ರಹ್ಮಾವರದ ಎಸ್.ಎಂ.ಎಸ್. ಕಾಲೇಜಿನ ಮಕ್ಕಳ ಮಂಟಪದಲ್ಲಿ ಆಯೋಜಿಸಲಾಗಿದೆ. ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ನಿ. ಬೀ. ವಿಜಯ ಬಲ್ಲಾಳ್ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿಗಳಾದ ಪ್ರೊ. ಹಿ. ಚಿ. ಬೋರಲಿಂಗಯ್ಯ ಇವರಿಗೆ ‘ಜಾನಪದ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ವಿದ್ದು ಉಚ್ಚಿಲ್ ಇವರ ನಿರ್ದೇಶನದಲ್ಲಿ ಸುಮನಸಾ ಕೊಡವೂರು ತಂಡದವರಿಂದ ‘ಈದಿ’ ತುಳು ನಾಟಕಗಳು ಪ್ರದರ್ಶನಗೊಳ್ಳಲಿದೆ.
ಬೆಂಗಳೂರು : ರಂಗಚಂದಿರ (ರಿ) ಮತ್ತು ರಂಗ ನಾಯಕ ಟ್ರಸ್ಟ್ ಆಯೋಜಿಸುವ ‘ಬೆಳಕಬಳ್ಳಿ ಅ.ನ. ರಮೇಶ್ ನೆನಪು’ ಕಾರ್ಯಕ್ರಮವು ದಿನಾಂಕ 15 ಏಪ್ರಿಲ್ 2025ರಂದು ಸಂಜೆ 5-00 ಗಂಟೆ ಬೆಂಗಳೂರಿನ ಜೆ.ಸಿ. ರಸ್ತೆ, ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಲಿದೆ. ಕರ್ನಾಟಕ ನಾಟಕ ಅಕಾಡೆಮಿ ಇದರ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜ ಮೂರ್ತಿ ಇವರು ಅಧ್ಯಕ್ಷತೆ ವಹಿಸಲಿದ್ದು, ಶ್ರೀನಿವಾಸ ಜಿ. ಕಪ್ಪಣ್ಣ, ಸೆಂಟರ್ ಸ್ಟೇಜ್ ಗಂಗಾಧರ್, ಶಶಿಧರ ಅಡಪ, ಎನ್.ಎಸ್. ಚಿತ್ರಶೇಖರ್, ಚಂದ್ರಶೇಖರ್ ಮತ್ತು ರಾಧಾಕೃಷ್ಣ ಹೆಗಡೆ ಇವರಿಂದ ಒಡನಾಟದ ಮಾತುಗಳು, ಜೆ. ಲೋಕೇಶ್, ಡಾ. ನಾಗರತ್ನಮ್ಮ ಮರಿಯಮ್ಮನಹಳ್ಳಿ. ಜಿ.ಎನ್. ಮೋಹನ್, ಡಾ. ಟಿ.ಎಸ್. ವಿವೇಕಾನಂದ ಮತ್ತು ಜಯಶ್ರೀ ಕಂಬಾರ ಇವರುಗಳಿಗೆ ರಂಗ ಗೌರವ ಹಾಗೂ ಬೆಳಕು ವಿನ್ಯಾಸಕರಾದ ಟಿ.ಎಂ. ನಾಗರಾಜು ಮತ್ತು ಮಂಜುನಾರಾಯಣ ಇವರಿಗೆ ಗೌರವ ಸನ್ಮಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಸ್ವರಾಮೃತ ಸಂಗೀತ ಶಾಲೆಯ ಮಕ್ಕಳಿಂದ ಗೀತೆಗಾಯನ, ಸಂಚಯ ತಂಡದಿಂದ ರಂಗಗೀತೆಗಳ ಪ್ರಸ್ತುತಿ, ಕುವೆಂಪುರವರ ‘ಜಲಗಾರ’ ನಾಟಕದ…
ಮಂಗಳೂರು : ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ವತಿಯಿಂದ ‘ಯಕ್ಷ ವಸುಂದರ’ ಕಾರ್ಯಕ್ರಮವನ್ನು ದಿನಾಂಕ 12 ಏಪ್ರಿಲ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಮಂಗಳೂರಿನ ಗುರುಪುರದಲ್ಲಿರುವ ಮಾಣಿಬೆಟ್ಟು ಗುತ್ತು ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಮಾಜಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರು ಅಧ್ಯಕ್ಷತೆಯಲ್ಲಿ ಗೋಳಿದಡಿ ಗುತ್ತು ಗಡಿಕಾರರಾದ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ ಇವರು ದೀಪ ಪ್ರಜ್ವಲನೆ ಮಾಡಿ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. 11-00 ಗಂಟೆಗೆ ನಡೆಯಲಿರುವ ವಿಚಾರಗೋಷ್ಠಿಯಲ್ಲಿ ‘ತೆಂಕುತಿಟ್ಟಿ ಯಕ್ಷಗಾನದ ಸ್ಥಿತ್ಯಂತರಗಳು’ ಎಂಬ ವಿಷಯದ ಬಗ್ಗೆ ಹಿರಿಯ ಯಕ್ಷಗಾನ ಕಲಾವಿದರಾದ ಡಾ. ತಾರಾನಾಥ ವರ್ಕಾಡಿ ಇವರು ಪ್ರಸ್ತಾವನೆ ಮಾಡಲಿದ್ದು, ‘ಭಾಗವತಿಕೆ’ ಬಗ್ಗೆ ಉಪನ್ಯಾಸಕ ಸುನೀಲ್ ಪಲ್ಲಿಮಜಲು, ‘ಅರ್ಥಗಾರಿಕೆ’ ಬಗ್ಗೆ ಯಕ್ಷಗಾನ ಬಹುಶ್ರುತರಾದ ಶಾಂತರಾಮ ಕುಡ್ವ, ‘ಮುಖವರ್ಣಿಕೆ’ ಬಗ್ಗೆ ಉಪನ್ಯಾಸಕ ಕುಮಾರಿ ಮೈತ್ರಿ ಭಟ್, ‘ವೇಷಭೂಷಣ’ ಬಗ್ಗೆ ಹಿರಿಯ ಕಲಾವಿದ ಉಬರಡ್ಕ ಉಮೇಶ ಶೆಟ್ಟಿ, ‘ಸ್ತ್ರೀ’ ವೇಷ’ದ ಬಗ್ಗೆ ಸಂಜಯ ಕುಮಾರ್ ಶೆಟ್ಟಿ…
ಮಂಗಳೂರು : ಜರ್ನಿ ಥೇಟರ್ ಗ್ರೂಪ್ (ರಿ.) ಮಂಗಳೂರು ಮತ್ತು ರಂಗ ಅಧ್ಯಯನ ಕೇಂದ್ರ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಸಹಯೋಗದಲ್ಲಿ ರಂಗಾಯಣ ಮೈಸೂರು ಇದರ ಹಿರಿಯ ಕಲಾವಿದರು ಅಭಿನಯಿಸುವ ‘ಮಿ. ಬೋಗೀಸ್’ ನಾಟಕ ಪ್ರದರ್ಶನವನ್ನು ದಿನಾಂಕ 15 ಏಪ್ರಿಲ್ 2025ರಂದು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿ.ವಿ.ಯಲ್ಲಿ ಹಮ್ಮಿಕೊಳ್ಳಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಪ್ರಸ್ತುತಗೊಳ್ಳುವ ಈ ನಾಟಕಕ್ಕೆ ಉಚಿತ ಪ್ರವೇಶವಿದ್ದು, ರೋಆಲ್ಡ್ ದಾಹ್ಲ್ ಇವರು ಈ ನಾಟಕದ ಕಥೆ ರಚನೆ ಮಾಡಿದ್ದು, ಸಂತೋಷ್ ಕೌಲಗಿ ಕನ್ನಡಕ್ಕೆ ಅನುವಾದ ಮಾಡಿದ್ದು, ಪ್ರಶಾಂತ್ ಹಿರೇಮಠ ಸಂಗೀತ ಹಾಗೂ ಎಚ್.ಕೆ. ದ್ವಾರಕನಾಥ್ ಇವರು ರಂಗರೂಪ ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ.
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿಗಳಲ್ಲೊಂದಾದ 2024ನೆಯ ಸಾಲಿನ ಅಭಯಲಕ್ಷ್ಮಿ ದತ್ತಿ ಪ್ರಶಸ್ತಿಗೆ ಡಾ. ಜಯಮಾಲ ಪೂವಣಿ, ಆರ್. ವೆಂಕಟರಾಜು, ಶಾಂತಲ ಧರ್ಮರಾಜ್, ಆರ್. ರಾಮಚಂದ್ರ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜನಪದದ ಜೊತೆಗೆ ಕನ್ನಡ-ಕನ್ನಡಿಗ-ಕರ್ನಾಟಕ ಇವುಗಳ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿನ ಅಪಾರ ಗೌರವದಿಂದ ಶ್ರೀಮತಿ ಪಿ. ಜಯಲಕ್ಷ್ಮಿಯವರು ತಮ್ಮ ಪತಿ ಎಸ್.ಎ. ಅಭಯಕುಮಾರ್ ಅವರ ದಿವ್ಯ ಸ್ಮರಣೆಯಲ್ಲಿ ‘ಅಭಯಲಕ್ಷ್ಮಿ’ ದತ್ತಿ ಪ್ರಶಸ್ತಿಯನ್ನು ಪರಿಷತ್ತಿನಲ್ಲಿ ಸ್ಥಾಪಿಸಿರುತ್ತಾರೆ. ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಇಬ್ಬರಿಗೆ ಪುರಸ್ಕಾರವನ್ನು ನೀಡಬೇಕೆನ್ನುವುದು ದತ್ತಿ ದಾನಿಗಳ ಆಶಯವಾಗಿದೆ 2024ನೆಯ ಸಾಲಿನ ಈ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಡಾ. ಜಯಮಾಲಾ ಪೂವಣಿಯವರು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದವರು, ಸಮಾಜ ವಿಜ್ಞಾನದಲ್ಲಿ ಡಾಕ್ಟೋರೇಟ್ ಪದವಿ ಪಡೆದ ಮೊದಲ ಜೈನ…
ಮಂಗಳೂರು : ಕೊಂಕಣಿಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕಳೆದ 39 ವರ್ಷಗಳಿಂದ ನಿರಂತರತೆಯನ್ನು ಕಾಪಾಡಿಕೊಂಡು ಬಂದಿರುವ ‘ಮಾಂಡ್ ಸೊಭಾಣ್’ ಸಂಸ್ಥೆಯ ವತಿಯಿಂದ ನಡೆಯುವ ತಿಂಗಳ ವೇದಿಕೆ ಸರಣಿಯ 280ನೇ ಕಾರ್ಯಕ್ರಮವು ದಿನಾಂಕ 06 ಏಪ್ರಿಲ್ 2025ರಂದು ಶಕ್ತಿನಗರದ ಕಲಾಂಗಣದಲ್ಲಿ ನಡೆಯಿತು. ಮಾಂಡ್ ನಾಟಕ ತಂಡದ ಸದಸ್ಯ ರೆನಾಲ್ಡ್ ಲೋಬೊ ಘಂಟೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಂಡ್ ಸೊಭಾಣ್ ಪದಾಧಿಕಾರಿಗಳಾದ ಎರಿಕ್ ಒಝೇರಿಯೊ, ಲುವಿ ಪಿಂಟೊ, ಕೇರನ್ ಮಾಡ್ತಾ ಹಾಗೂ ಎಲ್ರೊನ್ ರೊಡ್ರಿಗಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾಕಾರ್ಯಕ್ರಮದ ಬಳಿಕ ಜೆ. ಪಿ. ತೂಮಿನಾಡು ಇವರ ಮೂಲಕತೆ ಆಧರಿಸಿ ನೆಲ್ಲು ಪೆರ್ಮನ್ನೂರು ರಚಿಸಿ, ನಿರ್ದೇಶಿಸಿದ ‘ಎಸ್.ಬಿ.ಜಿ. ಟ್ರಾವೆಲ್ಸ್’ ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು. ಹಲವಾರು ಪ್ರದರ್ಶನಗಳನ್ನು ಕಂಡ ಈ ನಾಟಕವು ಜನರಿಗೆ ಭರಪೂರ ಮನರಂಜನೆ ನೀಡುವಲ್ಲಿ ಯಶಸ್ವಿಯಾಯಿತು. ನೆಲ್ಲು ಪೆರ್ಮನ್ನೂರ್, ಲ್ಯಾನ್ಸಿ ಬಂಟ್ವಾಳ್, ಸಂದೀಪ್ ಮಸ್ಕರೇನ್ಹಸ್, ದೀಪಕ್ ಕುಟಿನ್ಹಾ, ಮರಿಯಾ ಜೊಯ್ಸ್, ಜಾಸ್ಮಿನ್ ಡಿ’ಸೋಜ, ಅಸುಂತಾ ಪಾಯ್ಸ್, ಜೊಯೆಲ್ ಪಿಂಟೊ, ಗ್ಲೆರನ್ ವಾಸ್, ಕೇತನ್ ರೊಡ್ರಿಗಸ್…