Author: roovari

ಸಾಗರ : ಡಾ. ಹೆಚ್. ಗಣಪತಿಯಪ್ಪ ಸೇವಾ ಟ್ರಸ್ಟ್ (ರಿ.) ಸಾಗರ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಾಗರ ಇದರ ವತಿಯಿಂದ ‘ಡಾ. ಹೆಚ್. ಗಣಪತಿಯಪ್ಪ ನೇಗಿಲ ಯೋಗಿ’ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 18 ಏಪ್ರಿಲ್ 2025ರಂದು ಸಂಜೆ 6-00 ಗಂಟೆಗೆ ಸಾಗರ ಅಗ್ರಹಾರದ ಶೃಂಗೇರಿ ಶಂಕರ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಶಾಸಕರಾದ ಶ್ರೀ ಗೋಪಾಲಕೃಷ್ಣ ಬೇಳೂರು ಇವರು ಈ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು, ಶಿವಮೊಗ್ಗ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ. ಮಂಜುನಾಥ ಇವರು ಆಶಯ ಮಾತುಗಳನ್ನಾಡಲಿರುವರು. ಖ್ಯಾತ ವಾಗ್ಮಿ ಸುಧೀರ್ ಕುಮಾರ್ ಮುರೊಳ್ಳಿ ಇವರು ಪ್ರಧಾನ ಉಪನ್ಯಾಸ ನೀಡಲಿದ್ದು, ಕಾಗೋಡು ತಿಮ್ಮಪ್ಪ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಕರ್ನಾಟಕ ಜಾನಪದ ಪರಿಷತ್ತು ಕಲಾ ಹಾಗೂ ಕಲಿಕಾರ್ಥಿಗಳ ತಂಡದವರಿಂದ ಗಾಯನ ಪ್ರಸ್ತುತಗೊಳ್ಳಲಿದೆ.

Read More

ಸಾಲಿಗ್ರಾಮ : ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ ಇದರ ವತಿಯಿಂದ ‘ನಲಿ ಕುಣಿ 2025’ ಯಕ್ಷಗಾನ ಅಭಿನಯ ಮತ್ತು ನೃತ್ಯ ತರಬೇತಿ ಶಿಬಿರವು ದಿನಾಂಕ 13 ಏಪ್ರಿಲ್ 2025ರಂದು ಗುಂಡ್ಮಿ-ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ಉದ್ಘಾಟನೆಗೊಂಡಿತು. ‘ನಲಿ-ಕುಣಿ’ ಯಕ್ಷಗಾನ ತರಬೇತಿ ಶಿಬಿರಕ್ಕೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಉದ್ಘಾಟಕರಾಗಿ ಮಾತನಾಡುತ್ತಾ “ಇಂತಹ ಶಿಬಿರಗಳು ಮಕ್ಕಳು ಮಾನಸಿಕವಾಗಿ ಸುದೃಢರಾಗಲು ಸಹಾಯಕವಾಗುತ್ತದೆ. ಪ್ರೇಕ್ಷಕರ ಕೊರತೆ ಕಾಣುತ್ತಿರುವ ಪ್ರಸ್ತುತ ಸಮಸ್ಯೆಯನ್ನು ಬಗೆಹರಿಸಲು ಈ ಶಿಬಿರಗಳಿಂದ ಸಹಕಾರ ಸಿಗಬಹುದು. ಸದಾನಂದ ಐತಾಳ ನಿರ್ದೇಶನದಲ್ಲಿ ನಡೆಯುವ ಈ ತರಗತಿಯಲ್ಲಿ ಯಕ್ಷಗಾನದ ಉಪಯುಕ್ತ ಮಾಹಿತಿ ಮಕ್ಕಳಿಗೆ ಲಭ್ಯವಾಗುವುದಂತು ಖಂಡಿತ, ಕಲಾಕೇಂದ್ರದ ಈ ಸಾಹಸ ಅಭಿನಂದನೀಯ” ಎಂದರು. ಪ್ರಾಚಾರ್ಯ ಸದಾನಂದ ಐತಾಳರು ಶಿಬಿರದ ರೂಪುರೇಷೆಯನ್ನು ಮತ್ತು ಉಪಯುಕ್ತತೆಯನ್ನು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಕಲಾಕೇಂದ್ರದ ಅಧ್ಯಕ್ಷರಾದ ಆನಂದ ಸಿ. ಕುಂದರ್ ಮಾತನಾಡಿ ಕಲಾಕೇಂದ್ರದ ಶಿಬಿರದ ಉದ್ದೇಶವನ್ನು ವಿವರಿಸಿ, ಯಶಸ್ವಿಗೆ ಸಹಕಾರ ಬಯಸಿದರು.…

Read More

ಕಾಸರಗೋಡು : ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಸ್ಥಾಪಕ ಸಂಚಾಲಕತ್ವದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭವು ದಿನಾಂಕ 18 ಏಪ್ರಿಲ್ 2025ರಂದು ಅಪರಾಹ್ನ 2-00 ಗಂಟೆಗೆ ಕಿನ್ನಿಗೋಳಿಯ ಯುಗಪುರುಷ ಸಭಾಂಗಣದಲ್ಲಿ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾ ಘಟಕವನ್ನು ಪ್ರದೀಪ್ ಕುಮಾರ ಕಲ್ಕೂರ ಉದ್ಘಾಟಿಸುವರು. ಡಾ. ವಾಮನ್ ರಾವ್ ಬೇಕಲ್ – ಸಂಧ್ಯಾರಾಣಿ ಟೀಚರ್ ಇವರು ದೀಪ ಪ್ರಜ್ವಲನೆ ಮಾಡುವರು. ಡಾ. ಶಾಂತಾ ಪುತ್ತೂರು ಪ್ರಾಸ್ತಾವಿಕವಾಗಿ ಮಾತನಾಡುವರು. ಘಟಕದ ಅಧ್ಯಕ್ಷ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಅನಿತಾ ಶೆಣೈ, ಪಮ್ಮಿ ಕೊಡಿಯಾಲ್ ಬೈಲ್, ಪಿ.ವಿ. ಪ್ರದೀಪ್ ಕುಮಾರ್, ಅಪೂರ್ವ ಕಾರಂತ, ಉಷಾ ಶಶಿಧರ. ಲಕ್ಷ್ಮಿ ಪೆರ್ಮುದೆ, ರೇಖಾ ಸುದೇಶ್ ರಾವ್, ಅಕ್ಷತಾ ನಾಗನಕಜೆ, ವಸಂತ ಕೆರೆಮನೆ ಭಾಗವಹಿಸುವರು. ಕಾರ್ಯಕ್ರಮದಲ್ಲಿ ಕಾಸರಗೋಡಿನ ಕನ್ನಡ…

Read More

ಮಣಿಪಾಲ : ರೇಡಿಯೊ ಮಣಿಪಾಲ್ 90.4 MHz, ಸಮುದಾಯ ಬಾನುಲಿ ಕೇಂದ್ರ, ಮಣಿಪಾಲ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಯೋಗದೊಂದಿಗೆ ‘ವಿಷುಕಣಿ-ಕವಿದನಿ’ ಬಹುಭಾಷಾ ಕವಿಗೋಷ್ಠಿ ದಿನಾಂಕ 10 ಏಪ್ರಿಲ್ 2025ರಂದು ಮಣಿಪಾಲದ ರೇಡಿಯೊ ಮಣಿಪಾಲ್ ಎಂ.ಐ.ಸಿ. ಕ್ಯಾಂಪಸ್‌ನಲ್ಲಿ ನಡೆಯಿತು. ಸಭಾ ಕ್ರಾಯಕ್ರಮದ ಉದ್ಘಾಟನೆಯನ್ನು ಮಣಿಪಾಲ್ ಇನ್ಸಿಟ್ಯೂಟ್ ಆಫ್ ಕಮ್ಯುನಿಕೇಶನ್ ಮಾಹೆ ಮಣಿಪಾಲ ಇದರ ನಿರ್ದೇಶಕರಾದ ಡಾ. ಶುಭ ಹೆಚ್.ಎಸ್‌. ಇವರು ನೆರವೇರಿಸಿ ಮಾತನಾಡಿ, “ಕವನಗಳಿಗೆ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಅವಕಾಶವಿದೆ, ಹೀಗಾಗಿ ಕವಿತೆಗಳಿಗೆ ವಿಮರ್ಶೆಯ ಅವಶ್ಯಕತೆ ಎದುರಾಗುವುದಿಲ್ಲ, ಯುಗಾದಿ ಹಬ್ಬದ ಕುರಿತು ನಮ್ಮಲ್ಲಿರುವ ಸಂಸ್ಕೃತಿ ಆಚಾರಗಳನ್ನು ಕವನಗಳ ಮೂಲಕ ಪ್ರಚುರಪಡಿಸುವ ಈ ಅಪೂರ್ವ ಅವಕಾಶ ಸಿಕ್ಕಿರುವುದು ಎಲ್ಲರಿಗೂ ಅಭಿನಂದನೀಯ ವಿಚಾರ” ಎಂದರು. ಸಭಾಧ್ಯಕ್ಷತೆಯನ್ನು ಭಾಷಾ ತಜ್ಞ ನಾಡೋಜ ಪ್ರೊ. ಕೆ.ಪಿ. ರಾವ್ ವಹಿಸಿ ಮಾತನಾಡಿ “ಭಾಷೆಗಳನ್ನು ಉಳಿಸಿ ಬೆಳೆಸಬೇಕು. ಇಲ್ಲವಾದಲ್ಲಿ ಭಾಷೆಯೊಂದಿಗೆ ಅದರ ಅಪೂರ್ವ ಸಂಸ್ಕೃತಿ ಕೂಡ ಅವನತಿಯಾಗುವ ಸಂಭವವಿರುತ್ತದೆ. ನಮ್ಮ ದೇಶದಲ್ಲಿರುವ ಹಲವಾರು ಭಾಷೆಗಳು…

Read More

ಅಹ್ಮದಾಬಾದ್ : ಪದ್ಮ ವಿಭೂಷಣ ಪುರಸ್ಕೃತ ಖ್ಯಾತ ಕಥಕ್ ನೃತ್ಯಗಾರ್ತಿ ಕುಮುದಿನಿ ಲಖೀಯಾ ಅಹಮದಾಬಾದ್‌ನ ತಮ್ಮ ನಿವಾಸದಲ್ಲಿ ದಿನಾಂಕ 12 ಏಪ್ರಿಲ್ 2025ರಂದು ವಯೋಸಹಜ ಕಾಯಿಲೆಯಿಂದ ನಿಧನ ಹೊಂದಿದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಕುಮುದಿನಿ ಅವರು ಸ್ಥಾಪಿಸಿದ್ದ ಕದಂಬ ಸೆಂಟರ್ ಫಾರ್ ಡಾನ್ಸ್ ಅಂಡ್ ಮ್ಯೂಸಿಕ್‌ ಇದರ ನಿರ್ವಾಹಕರು ಈ ಮಾಹಿತಿ ನೀಡಿದ್ದಾರೆ. 1960ರ ದಶಕದಲ್ಲಿ ಪ್ರಾರಂಭವಾದ ಕಥಕ್‌ನ ಏಕವ್ಯಕ್ತಿ ರೂಪದಿಂದ ದೂರ ಸರಿಯುವ ಮೂಲಕ ಅದನ್ನು ಸಮೂಹ ದೃಶ್ಯವಾಗಿ ಪರಿವರ್ತಿಸುವ ಮೂಲಕ ಮತ್ತು ಸಾಂಪ್ರದಾಯಿಕ ಕಥೆಗಳನ್ನು ತೆಗೆದುಹಾಕುವುದು ಮತ್ತು ಕಥಕ್ ಸಂಗ್ರಹಕ್ಕೆ ಸಮಕಾಲೀನ ಕಥಾಹಂದರವನ್ನು ಸೇರಿಸುವಂತಹ ಹೊಸತನವನ್ನು ಇವರು ಪರಿಚಯಿಸಿದ್ದರು. ಇವರ ಸಾಧನೆಗೆ ಭಾರತ ಸರ್ಕಾರದಿಂದ ‘ಪದ್ಮಶ್ರೀ’, ‘ಪದ್ಮ ವಿಭೂಷಣ’, ಸಂಗೀತ ನಾಟಕ ಅಕಾಡೆಮಿಯಿಂದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ‘ಕಾಳಿದಾಸ್ ಸಮ್ಮಾನ್’, ಸಂಗೀತ ನಾಟಕ ಅಕಾಡೆಮಿಯಿಂದ ‘ಸಂಗೀತ ನಾಟಕ ಅಕಾಡೆಮಿ ಟ್ಯಾಗೋರ್ ರತ್ನ’, ಕೇರಳ ಸರ್ಕಾರದಿಂದ ‘ಗುರು ಗೋಪಿನಾಥ್ ದೇಸಿಯ ನಾಟ್ಯ ಪುರಸ್ಕಾರಂ’ ಮುಂತಾದ ಪುರಸ್ಕಾರಗಳು ಸಂದಿವೆ.

Read More

ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಜೀವಮಾನ ಸಾಧನೆಗೆ ಕೊಡಮಾಡುವ 2024ನೇ ಸಾಲಿನ ‘ಗೌರವ ಪ್ರಶಸ್ತಿ’ಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಬ್ಯಾರಿ ಭಾಷೆ, ಸಾಹಿತ್ಯ, ಸಂಶೋಧನೆ, ಕಲೆ, ಜನಪದ ಮತ್ತು ಸಂಘಟನಾ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿರುವ ಮೂವರು ಮಹನೀಯರನ್ನು 2024ನೇ ಸಾಲಿನ ಪ್ರಶಸ್ತಿಗೆ ಪರಿಗಣಿಸಲಾಗುವುದು. ಪ್ರಶಸ್ತಿಯು ರೂಪಾಯಿ 50,000 ನಗದು, ಪ್ರಮಾಣ ಪತ್ರ, ಸ್ಮರಣಿಕೆ ಮತ್ತು ಫಲಪುಷ್ಪ ಒಳಗೊಂಡಿರುತ್ತದೆ. ಆಸಕ್ತರು ಸ್ವತಃ ಅಥವಾ ಸಾಧಕರ ಪರವಾಗಿ ಇತರರು ಹೆಸರುಗಳನ್ನು ಶಿಫಾರಸು ಮಾಡಬಹುದು. ಹಿಂದಿನ ಸಾಲಿನಲ್ಲಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಿರುವ, ಆದರೆ ಪ್ರಶಸ್ತಿಗೆ ಆಯ್ಕೆ ಆಗದಿರುವವರ ಅರ್ಜಿಗಳನ್ನು ಈ ವರ್ಷವೂ ಪರಿಗಣಿಸಲಾಗುವುದು. ಸಾಧನೆಯ ಪೂರಕ ವಿವರ ಇದ್ದರೆ ಅಕಾಡೆಮಿಗೆ ಕಳುಹಿಸಿಕೊಡಬಹುದು. ಹೊಸದಾಗಿ ಅರ್ಜಿ ಸಲ್ಲಿಸುವವರು ವ್ಯಕ್ತಿ ಪರಿಚಯ, ಭಾವಚಿತ್ರ ಹಾಗೂ ದಾಖಲೆಗಳ ಜೆರಾಕ್ಸ್ ಪ್ರತಿಗಳೊಂದಿಗೆ ಲಕೋಟೆಯ ಮೇಲೆ ‘ಬ್ಯಾರಿ ಅಕಾಡೆಮಿ ಗೌರವ ಪ್ರಶಸ್ತಿ 2024’ ಎಂದು ಬರೆದು ರಿಜಿಸ್ಟ್ರಾರ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಸಾಮರ್ಥ್ಯ ಸೌಧ, 2ನೇ ಮಹಡಿ,…

Read More

ಬೆಂಗಳೂರು : ಸ್ವಾಭಿಮಾನಿ ಕರ್ನಾಟಕ ವೇದಿಕೆಯು ‘ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ’ಗೆ 2024ರಲ್ಲಿ ಪ್ರಕಟಗೊಂಡ ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ಪ್ರಶಸ್ತಿ ನೀಡಲು ನಿರ್ಧರಿಸಿದ್ದು, ಲೇಖಕರು ಮತ್ತು ಪ್ರಕಾಶಕರಿಂದ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ 4 ಪ್ರಕಾರದ, 4 ಕೃತಿಗಳಿಗೆ (ಒಂದು ಡಾ. ಸಿ. ಸೋಮಶೇಖರ, ಸರ್ವಮಂಗಳ ಸಾಹಿತ್ಯ ಸೇವಾ ಪ್ರತಿಷ್ಠಾನ (ರಿ) ಬೆಂಗಳೂರು, ದತ್ತಿ ಪ್ರಶಸ್ತಿ) ಕತೆ, ಕಾದಂಬರಿ, ಕವಿತೆ, ಲೇಖನ, ಮಕ್ಕಳ ಸಾಹಿತ್ಯ, ನಾಟಕ ಇತ್ಯಾದಿಯಾಗಿ ತಲಾ 5,000 ರೂ. ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ಪುಸ್ತಕದ ಮೂರು ಪ್ರತಿಗಳನ್ನು ದಿನಾಂಕ 10 ಮೇ 2025ರ ಒಳಗಾಗಿ ಕಳುಹಿಸಬೇಕು ಎಂದು ವೇದಿಕೆಯ ಅಧ್ಯಕ್ಷ ದ್ವಾರನಕುಂಟೆ ಪಾತಣ್ಣ ತಿಳಿಸಿದ್ದಾರೆ. ಪುಸ್ತಕಗಳನ್ನು ಕಳುಹಿಸಬೇಕಾದ ವಿಳಾಸ: ದ್ವಾರನಕುಂಟೆ ಪಾತಣ್ಣ, ಅಧ್ಯಕ್ಷರು ಸ್ವಾಭಿಮಾನಿ ಕರ್ನಾಟಕ ವೇದಿಕೆ, ನಂ.118, ಹೊಂಬೆಳಕು, ಹೆಚ್. ಎಂ. ಟಿ. ಲೇ ಔಟ್, ನಾಗಸಂದ್ರ ಅಂಚೆ, ಬೆಂಗಳೂರು 560073.

Read More

ಮಂಗಳೂರು: ಅಗಲಿದ ಹಿರಿಯ ಯಕ್ಷಗಾನ ಕಲಾವಿದ, ಐತಿಹಾಸಿಕ ಕರ್ನಾಟಕ ಮೇಳದಲ್ಲಿ ಸುದೀರ್ಘ ತಿರುಗಾಟ ಮಾಡಿದ ನವರಸ ನಾಯಕ ಬೆಜ್ಜದಗುತ್ತು ದಿ. ಪುಳಿಂಚ ರಾಮಯ್ಯ ಶೆಟ್ಟರ ಸ್ಮರಣಾರ್ಥ ಮೂರು ವರ್ಷಕ್ಕೊಮ್ಮೆ ನೀಡಲಾಗುವ ‘ಪುಳಿಂಚ ಪ್ರಶಸ್ತಿ’ಗೆ ಈ ಬಾರಿ ಯಕ್ಷಗಾನದ ಮೂವರು ಪ್ರಸಿದ್ಧ ಕಲಾವಿದರನ್ನು ಆಯ್ಕೆಮಾಡಲಾಗಿದೆ. ತೆಂಕುತಿಟ್ಟಿನ ಹಿರಿಯ ಕಲಾವಿದರಾದ ಬೋಳಾರ ಸುಬ್ಬಯ್ಯ ಶೆಟ್ಟಿ, ಗೋಣಿಬೀಡು ಸಂಜಯಕುಮಾರ್ ಶೆಟ್ಟಿ ಮತ್ತು ಮಿಜಾರು ತಿಮ್ಮಪ್ಪ ಅವರುಗಳನ್ನು 2023-25ನೇ ಸಾಲಿನ ಪುಳಿಂಚ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪುಳಿಂಚ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಪುಳಿಂಚ ಶ್ರೀಧರ ಶೆಟ್ಟಿ ತಿಳಿಸಿದ್ದಾರೆ ಇದೇ ಸಂದರ್ಭದಲ್ಲಿ ದಿ. ಬಂಟ್ವಾಳ ಜಯರಾಮ ಆಚಾರ್ಯರಿಗೆ ಮರಣೋತ್ತರವಾಗಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 25,000 ನಗದನ್ನು ಒಳಗೊಂಡಿದೆ. ದಿನಾಂಕ 04 ಮೇ 2025 ರಂದು ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಚೆಂಡೆ ಶ್ರೀ ಕಲ್ಲುರ್ಟಿ ದೈವಸ್ಥಾನದ ಪುನಃ ಪ್ರತಿಷ್ಠೆ, ಸಾನಿಧ್ಯ ಕಲಶಾಭಿಷೇಕ ಮತ್ತು ತ್ರೈ ಮಾಸಿಕ  ಕೋಲೋತ್ಸವದ ಸಂದರ್ಭ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಪ್ರಶಸ್ತಿ ಪ್ರದಾನ…

Read More

ಉಡುಪಿ : ಭಾವನಾ ಪೌಂಡೇಶನ್(ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಗ್ರಾಮೀಣ ಭಾಗದಲ್ಲಿ ಸಂಯೋಜಿಸಿದ ಬಾಲ ಲೀಲಾ ಚಿಣ್ಣರ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 13 ಏಪ್ರಿಲ್ 2025ರಂದು ಹಾವಂಜೆಯ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಚಿತ್ರಕಲಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ “ವಿಶ್ವ ಕಲಾ ಸಿಂಧು” ಪುರಸ್ಕಾರವನ್ನು ಆರ್ಟಿಸ್ಟ್ ಫೋರಂ ಇದರ ಅಧ್ಯಕ್ಷರಾದ ರಮೇಶ್ ರಾವ್‌ ಇವರಿಗೆ ನೀಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀಯುತರು “ಚಿತ್ರಕಲೆ ಮಕ್ಕಳ ಮನಸ್ಸನ್ನು ಹದಗೊಳಿಸಲು ಬಹು ಮುಖ್ಯವಾದ ಕಲಾಪ್ರಕಾರ ಅಂತೆಯೇ ಚಿಣ್ಣರು ಸೃಜನಶೀಲರಾಗಿರಬೇಕಾದುದೂ ಮುಖ್ಯ. ಗ್ರಾಮೀಣ ಭಾಗದಲ್ಲಿ ಈ ತೆರನಾದ ಚಟುವಟಿಕೆಗಳು ಇಂದಿಗೆ ಅತ್ಯವಶ್ಯಕ” ಎಂಬುದಾಗಿ ಅಭಿಪ್ರಾಯಪಟ್ಟರು. ಭಾವನಾ ಪುರಸ್ಕಾರವನ್ನು ಸ್ವೀಕರಿಸಿದ ಹಿರಿಯ ಪತ್ರಕರ್ತರಾದ ನಾಗರಾಜ್ ವರ್ಕಾಡಿ ಮಾತನಾಡಿ “ಈ ಪುರಸ್ಕಾರವು ನಮ್ಮ ಕಾರ್ಯ ಕ್ಷೇತ್ರದ ಜವಾಬ್ದಾರಿಯನ್ನು ಹೆಚ್ಚಿಸುವ ಒಂದು ಎಚ್ಚರಿಕೆ. ಅಂತೆಯೇ ಇನ್ನಷ್ಟು ರಂಗಭೂಮಿ ವಲಯದಲ್ಲಿ ಕಾರ್ಯವನ್ನು ಮಾಡಲು ಪ್ರೇರಣೆ”…

Read More

ಉಡುಪಿ : ಹಿರಿಯ ಸಾಹಿತಿ ಕು. ಗೋ. (ಗೋಪಾಲಕೃಷ್ಣ ಭಟ್) ಇವರ ‘ಕು. ಗೋ. ಸಮಗ್ರ ಸಾಹಿತ್ಯ’ ಕೃತಿಯ ಲೋಕಾರ್ಪಣಾ ಸಮಾರಂಭವು ದಿನಾಂಕ 13 ಏಪ್ರಿಲ್ 2025ರ ಭಾನುವಾರದಂದು ಉಡುಪಿಯ ಇಂದ್ರಾಳಿಯಲ್ಲಿರುವ ಅವರ ನಿವಾಸ ‘ವಾಗ್ದೇವಿ’ಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಸಾಹಿತಿ ವಿ. ಗಣೇಶ ಮಾತನಾಡಿ “ಬರೆದ ಪುಸ್ತಕವನ್ನು ಕೊಂಡು ಓದುವುದೇ ಓದುಗರು ಲೇಖಕನಿಗೆ ನೀಡುವ ಕೊಡುಗೆಯಾಗಿದೆ. ಬರೆದಿದ್ದನ್ನು ಜನರು ಓದಿದಾಗ ಲೇಖಕನೂ ಸಂತೋಷಗೊಳ್ಳುತ್ತಾನೆ. ಹೆಸರು, ಪ್ರೀತಿ, ವಿಶ್ವಾಸ, ಸಾಹಿತ್ಯಾಭಿಮಾನಕ್ಕೆ ಕು. ಗೋ. ಹೆಸರುವಾಸಿ ಆಗಿದ್ದಾರೆ. ಸಾಹಿತ್ಯ ಇರುವವರೆಗೆ ಅವರು ಹಾಗೂ ಅವರ ಹಾಸ್ಯಪ್ರಜ್ಞೆ ಅಜರಾಮರ” ಎಂದು ಬಣ್ಣಿಸಿದರು. ಸಾಹಿತಿ ಡಾ. ಪಾದೇಕಲ್ಲು ವಿಷ್ಣು ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕು. ಗೋ. ಇವರ ಮೊಮ್ಮಕ್ಕಳಾದ ಸಂತೃಪ್ತ ಹೆರ್ಗ, ಪ್ರತೀಕ್ಷಾ ಬಿ. ಹಾಗೂ ವಿಶ್ಲೇಶ ಭಟ್ ಇವರುಗಳು ಪುಸ್ತಕ ಲೋಕಾರ್ಪಣೆಗೊಳಿಸಿದರು. ಪುಸ್ತಕ ಪ್ರಕಾಶಕರಾದ ವಿ. ಎಸ್‌. ನಾಗಮಣಿ, ಸಾಹಿತಿ ಅಂಬ್ರಯ್ಯ ಮಠ ಉಪಸ್ಥಿತರಿದ್ದರು. ಉಡುಪಿ ತಾಲೂಕು ಕ.…

Read More