Author: roovari

ಸಾಲಿಗ್ರಾಮ : ಬೆಂಗಳೂರಿನ ಸಮಸ್ತರು ರಾಗ ಸಂಶೋಧನಾ ಕೇಂದ್ರ ಪ್ರಸ್ತುತ ಪಡಿಸುವ ದೇಶಿ ಖ್ಯಾತಿಯ ರಂಗ ನಿರ್ದೇಶಕ, ಸಾಂಸ್ಕೃತಿಕ ಸಂಘಟಕ ಗೋಪಾಲಕೃಷ್ಣ ನಾಯರಿಯವರ ಪ್ರಥಮ ವರ್ಷದ ‘ಸಂಸ್ಮರಣೆ ಕಾರ್ಯಕ್ರಮ’ವು ದಿನಾಂಕ 28-01-2024 ಸಂಜೆ ಗಂಟೆ 5-00ಕ್ಕೆ ಸಾಲಿಗ್ರಾಮದ ಗುಂಡ್ಮಿಯ ಸದಾನಂದ ರಂಗಮಂಟಪದಲ್ಲಿ ನಡೆಯಲಿದೆ. ಐರೊಡಿ ಹಂಗಾರಕಟ್ಟೆಯ ಯಕ್ಷಗಾನ ಕಲಾಕೇಂದ್ರದ ಅಧ್ಯಕ್ಷರಾದ ಶ್ರೀ ಆನಂದ್ ಸಿ. ಕುಂದರ್ ಅಧ್ಯಕ್ಷತೆ ವಹಿಸಲಿದ್ದು, ಉಡುಪಿಯ ರಂಗಕರ್ಮಿ, ರಂಗ ನಿರ್ದೇಶಕರಾದ ಶ್ರೀ ಉದ್ಯಾವರ ನಾಗೇಶ್ ಕುಮಾರ್ ಇವರು ಸಂಸ್ಮರಣಾ ಮಾತುಗಳನ್ನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ರಂಗಭೂಮಿ ಕಲಾವಿದರು ಹಾಗೂ ನಿರ್ದೇಶಕರಾದ ಶ್ರೀ ಜಯರಾಮ್ ನೀಲಾವರ ಇವರಿಗೆ 2024ರ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬೇಬಿ ಸಾನಿಧ್ಯ ನಾಯರಿ, ಕುಮಾರ ನೂತನ ಎಂ. ನಾಯರಿ, ಕುಮಾರಿ ಸಮೀಕ್ಷಾ, ಕುಮಾರಿ ಉನ್ನತಿ ಎಮ್. ನಾಯರಿ ಮತ್ತು ಕುಮಾರಿ ವೈಷ್ಣವಿ ಎನ್. ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬೆಂಗಳೂರಿನ ಯಕ್ಷ ಕಲಾ ಅಕಾಡೆಮಿಯವರಿಂದ ಪ್ರೊ. ಎಂ.ಎ. ಹೆಗಡೆ ರಚಿತ ಯಕ್ಷಗಾನ ‘ಲವ…

Read More

ಮಂಗಳೂರು : ದೇಶದ ನಾನಾ ಪ್ರತಿಷ್ಠಿತ ವೇದಿಕೆಗಳಲ್ಲಿ ಯಶಸ್ವಿಯಾಗಿ ನಡೆದ ‘ಉತ್ತರ್- ದಕ್ಷಿಣ್’ ಸರಣಿ ಸಂಗೀತ ಕಾರ್ಯಕ್ರಮವನ್ನು ದಿನಾಂಕ 28-01-2024ರಂದು ಸಂಜೆ 5.30ಕ್ಕೆ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ರವೀಂದ್ರ ಕಲಾ ಭವನದಲ್ಲಿ ಆಯೋಜಿಸಲಾಗಿದೆ. ನಗರದ ಪ್ರತಿಷ್ಠಿತ ಸಂಗೀತ ಭಾರತಿ ಪ್ರತಿಷ್ಠಾನದ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮವನ್ನು ಮುಂಬೈನ ವಿವಿದ್ ಆರ್ಟ್ಸ್ ಆ್ಯಂಡ್ ಎಂಟರ್‌ಟೈನ್‌ಮೆಂಟ್ ಪ್ರಸ್ತುತ ಪಡಿಸುತ್ತಿದ್ದು, 12 ವರ್ಷಗಳಿಂದ ನಡೆಯುತ್ತಿರುವ ಈ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ಸಂಗೀತ ಪ್ರಿಯರಿಗೆ ಅಚ್ಚುಮೆಚ್ಚಿನ ಕಚೇರಿಗಳಲ್ಲಿ ಒಂದಾಗಿದೆ. ಇದು ಉತ್ತರಾದಿ ಮತ್ತು ದಕ್ಷಿಣಾದಿ ಹೀಗೆ ಎರಡು ರೀತಿಯ ಸಂಗೀತದೊಂದಿಗೆ ಪ್ರಾದೇಶಿಕ ಸಾಮರಸ್ಯಕ್ಕೆ ಕೊಡುಗೆ ನೀಡುತ್ತದೆ. ಮುಂಬೈ, ದೆಹಲಿ, ಹೈದರಾಬಾದ್, ಬೆಂಗಳೂರು, ರಾಂಚಿ ಮತ್ತು ಈಗ ಮಂಗಳೂರಿನಲ್ಲಿ 13ನೇ ಆವೃತ್ತಿಯ ಸಂಗೀತ ಕಚೇರಿಯನ್ನು ಆಯೋಜಿಸಲಾಗಿದೆ. ಉತ್ಕೃಷ್ಟ ಮಟ್ಟದ ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇದ್ದು, ಉತ್ತರಾದಿ ಹಾಗೂ ದಕ್ಷಿಣಾದಿ ವಿಭಾಗದ ಸಂಗೀತಪ್ರಿಯರಿಗೆ ಇದೊಂದು ರಸದೌತಣವಾಗಲಿದೆ. ವರ್ಣರಂಜಿತ ಹಿನ್ನಲೆ, ಕಲಾವಿದರ ಕೌಶಲ್ಯ, ಬೆಳಕು, ಧ್ವನಿ ಮತ್ತು ಸಂಗೀತ ಸಭಾಂಗಣದಲ್ಲಿ…

Read More

ಮೈಸೂರು : ರಂಗಾಂತರಂಗ ಮೈಸೂರು (ರಿ) ಮತ್ತು ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಗಾಂಧಿನಗರ ಮೈಸೂರು ಇವರ ವತಿಯಿಂದ ‘ಮಕ್ಕಳ ರಂಗ ತರಬೇತಿ’ ಉದ್ಘಾಟನಾ ಸಮಾರಂಭವು ದಿನಾಂಕ 28-01-2024ರಂದು ಸಂಜೆ 4.30ಕ್ಕೆ ಗಾಂಧಿನಗರದ ಹರಳಯ್ಯ ರಂಗಮಂದಿರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬೆಂಗಳೂರು ಸಮಾಜ ಕಲ್ಯಾಣ ಇಲಾಖೆ ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ಸಲಹೆಗಾರರಾದ ಬಸವರಾಜ್ ದೇವನೂರು, ಮೈಸೂರಿನ ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿಗಳಾದ ಎನ್. ಮುನಿರಾಜು, ಮೈಸೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಮ್.ಡಿ. ಸುದರ್ಶನ್, ಬೆಂಗಳೂರು ಸಮಾಜ ಕಲ್ಯಾಣ ಇಲಾಖೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಸಲಹೆಗಾರರಾದ ಡಾ. ಎಸ್. ತುಕರಾಮ್, ಮೈಸೂರು ತಾಲೂಕು ಮತ್ತು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಸಿದ್ದಲಿಂಗು ಕೆ. ಮತ್ತು ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರದೀಪ್ ಎಮ್. ನಮ್ಮೊಂದಿಗೆ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ…

Read More

ಬಂಟ್ವಾಳ : ತೆಂಕುತಿಟ್ಟಿನ ಪರಂಪರೆಯ ಪ್ರಾತಿನಿಧಿಕ ಯಕ್ಷಗಾನ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ (82) ದಿನಾಂಕ 24-01-2024ರಂದು ಬಂಟ್ವಾಳ ತಾಲೂಕಿನ ಪೆರುವಾಯಿಯಲ್ಲಿ ನಿಧನರಾದರು. ಅಳಿಕೆ ರಾಮಯ್ಯ ರೈಯವರಲ್ಲಿ ಯಕ್ಷಗಾನ ಅಭ್ಯಾಸ ಮಾಡಿ 12ರ ಹರೆಯದಲ್ಲಿ ಯಕ್ಷಗಾನ ರಂಗ ಪ್ರವೇಶಿಸಿದ ಇವರು ಇರಾ, ಧರ್ಮಸ್ಥಳ, ಕಟೀಲು, ಬಪ್ಪನಾಡು, ಕದ್ರಿ, ಪುತ್ತೂರು ಮೇಳಗಳಲ್ಲಿ ಸುಮಾರು ಆರು ದಶಕಗಳ ಕಲಾಸೇವೆಗೈದಿರುತ್ತಾರೆ. ರಕ್ತಬೀಜ, ಹಿರಣ್ಯಕಶಿಪು, ಕಂಸ, ಋತುಪರ್ಣ, ಹನುಮಂತ ಮೊದಲಾದ ಪೌರಾಣಿಕ ಪಾತ್ರಗಳಲ್ಲಿ ಪ್ರಸಿದ್ಧಿ ಪಡೆದಿದ್ದರು. ತುಳು ಪ್ರಸಂಗದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸುವುದರೊಂದಿಗೆ ತಾಳ ಮದ್ದಲೆ, ಅರ್ಥಧಾರಿಯಾಗಿಯೂ ಭಾಗವಹಿಸುತ್ತಿದ್ದರು. ಇವರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. 2009ರಲ್ಲಿ ಯಕ್ಷಗಾನ ಕಲಾರಂಗವು ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿತ್ತು.

Read More

ಮಂಗಳೂರು : ಕರ್ನಾಟಕ ಕೊಂಕಣಿ ಭಾಷಾ ಮಂಡಳ್ ಇದರ ಸುವರ್ಣ ಮಹೋತ್ಸವದ ಸಮಾರೋಪ ಹಾಗೂ ಕೊಂಕಣಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ‘ಭಾಂಗಾರೋತ್ಸವ್’ವು ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಿನಾಂಕ 09-01-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬೆಂಗಳೂರಿನ ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯ ರೊನಾಲ್ಡ್ ಫೆರ್ನಾಂಡಿಸ್‌ ಇವರು “ಕೊಂಕಣಿ ಭಾಷೆಗೆ ಅದರದ್ದೇ ಆದ ಸ್ಥಾನಮಾನವಿದೆ. ತನ್ನದೇ ವ್ಯಾಪ್ತಿಯನ್ನು ಒಳಗೊಂಡಿದೆ. ಕೊಂಕಣಿ ಉಳಿವಿಗೆ ಅನೇಕರು ಶ್ರಮಿಸಿದ್ದಾರೆ. ಕರಾವಳಿಯ ಕೊಂಕಣಿ ಭಾಷಿಗರು ದೇಶಕ್ಕಾಗಿ ಸೇವೆ ಸಲ್ಲಿಸಿರುವುದು ಅವಿಸ್ಮರಣೀಯ. ಕೊಂಕಣಿ ಭಾಷೆ ಎಲ್ಲಿಯೂ ಬಂಧಿಯಾಗಿಲ್ಲ. ಕೊಂಕಣಿ ಮಾತನಾಡುವ ಜನರಿಂದ ಭಾಷೆ ಬೆಳೆಯುತ್ತಿದೆ. ಸಾಹಿತಿಗಳೊಂದಿಗೆ ಓದುಗರ ಪಾತ್ರವೂ ಕೊಂಕಣಿಗೆ ಮಹತ್ವದ್ದಾಗಿದೆ. ಸಂಘಟನೆ, ಸರಕಾರದ ಪ್ರೋತ್ಸಾಹವು ಸಾಹಿತ್ಯ ಭಾಷೆಯ ಬೆಳವಣಿಗೆ ಪೂರಕವಾಗಿವೆ. ಮುಂದೆಯೂ ಭಾಷೆಯ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು” ಎಂದು ಹೇಳಿದರು. ಕೊಂಕಣಿ ಭಾಷಾ ಮಂಡಳ್‌ನ ಸ್ಥಾಪಕ ಖಜಾಂಚಿ ವಂದನೀಯ ಮಾರ್ಕ್ ವಾಲ್ಟರ್ ಮಾತನಾಡಿ ಭಾಷಾ ಮಂಡಳ್ ಇದರ ಆರಂಭದ ದಿನಗಳನ್ನು ನೆನಪಿಸಿಕೊಂಡರು. “ಕೊಂಕಣಿ ಭಾಷೆ ಉಳಿವಿಗಾಗಿ…

Read More

ಕಾಸರಗೋಡು: ರಂಗಚಿನ್ನಾರಿಯ ಸಂಗೀತ ಘಟಕ ‘ಸ್ವರ ಚಿನ್ನಾರಿ’ಯ ಐದನೇ ಸರಣಿ ಕಾರ್ಯಕ್ರಮ ‘ಕನ್ನಡ ಧ್ವನಿ’ ಕನ್ನಡ ನಾಡಗೀತೆ ಭಾವಗೀತೆಗಳ ಕಲಿಕಾ ಶಿಬಿರವು ದಿನಾಂಕ 23-01-2024ನೇ ಮಂಗಳವಾರ ಮಹಾಜನ ಸಂಸ್ಕೃತ ಕಾಲೇಜು ನೀರ್ಚಾಲು ಇಲ್ಲಿ ಪ್ರೌಢ ಶಾಲಾ ಮಕ್ಕಳಿಗಾಗಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಶಾಲಾ ಮ್ಯಾನೇಜರ್ ಶ್ರೀ ಜಯದೇವ ಖಂಡಿಗೆ ಮಾತನಾಡಿ “ರಂಗಚಿನ್ನಾರಿ ಸಂಸ್ಥೆಯ ಕನ್ನಡದ ಕಾರ್ಯಗಳು ಪ್ರಶಂಸನೀಯ. ಹಾಡನ್ನು ಕಲಿಯುವ ಮಕ್ಕಳು ಮುಂದೆ ಉತ್ತಮ ಕಲಾವಿದರಾಗಲಿ.” ಎಂದು ಹಾರೈಸಿದರು. ಪ್ರಾಸ್ತವಿಕವಾಗಿ ಮಾತನಾಡಿದ ರಂಗಚಿನ್ನಾರಿಯ ನಿರ್ದೇಶಕರಲ್ಲಿ ಒಬ್ಬರಾದ ಶ್ರೀ ಸತೀಶ್ಚಂದ್ರ ಭಂಡಾರಿ “ಪಾಠ ಪುಸ್ತಕಗಳಿಂದ ಕಲಿಯುವ ವಿದ್ಯೆಗೆ ಎಷ್ಟು ಉತ್ತೇಜನ ಕೊಡುತ್ತೇವೋ ಅದರ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಹಾಡು, ನೃತ್ಯ, ಚಿತ್ರಕಲೆ ಹಾಗೂ ಯೋಗ ಮುಂತಾದವುಗಳಿಗೂ ಪ್ರಾಶಸ್ತ್ಯ ಕೊಡುವುದರಿಂದ ಮುಂದೆ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ತಮ್ಮನ್ನು ತಾವು ನೋಡಿಕೊಳ್ಳಬಹುದು. ಕನ್ನಡ ನಮ್ಮೆಲ್ಲರ ಮಾತೃಭಾಷೆ ಆದ್ದರಿಂದ ಅದನ್ನು ಉಳಿಸಿ ಬೆಳೆಸಲು ಕಾಸರಗೋಡಿನ ಕನ್ನಡ ವಿದ್ಯಾರ್ಥಿಗಳಿಗೆ ಇಂತಹ ಕಲಿಕಾ ಶಿಬಿರಗಳು ಅನಿವಾರ್ಯವಾಗಿವೆ.”…

Read More

ಮುಡಿಪು : ಅಮ್ಮೆಂಬಳ ಶಂಕರನಾರಾಯಣ ನಾವಡ ಸಾಹಿತ್ಯ ಪ್ರತಿಷ್ಠಾನ ಇದರ ವತಿಯಿಂದ ಮಂಗಳೂರು ವಿವಿಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದೊಂದಿಗೆ ದಿನಾಂಕ 24-01-2024ರಂದು ಹಿರಿಯ ಸಾಹಿತಿಗಳಾದ ಡಾ. ಹಿ.ಚಿ. ಬೋರಲಿಂಗಯ್ಯ, ಡಾ. ಬಸವರಾಜ ಕಲ್ಗುಡಿ, ಡಾ. ಪಾದೆಕಲ್ಲು ವಿಷ್ಣುಭಟ್, ಡಾ. ಬಿ. ಜನಾರ್ದನ ಭಟ್ ಅವರಿಗೆ ‘ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಕರ್ಣಾಟಕ ಬ್ಯಾಂಕಿನ ಮಾಜಿ ನಿರ್ದೇಶಕರು, ಕಾರ್ಯನಿರ್ವಹಣಾಧಿಕಾರಿ ಡಾ. ಮಹಾಬಲೇಶ್ವರ ಎಂ.ಎಸ್. ಮಾತನಾಡುತ್ತಾ “ಕನ್ನಡ ಪರ, ಕನ್ನಡ‌ ಸಾಹಿತ್ಯದ ಕೆಲಸ ಮಾಡುವವರಿಗೆ ಆತ್ಮಸ್ಥೈರ್ಯವನ್ನು ತುಂಬಿ ಹುರುಪು ನೀಡುವ ಕಾರ್ಯ ನಿರಂತರವಾಗಿ ನಡೆಯಬೇಕು. ಕನ್ನಡ ಭಾಷೆ‌ ಎಂಟು ಜ್ಞಾನ ಪೀಠ ಪ್ರಶಸ್ತಿಗಳನ್ನು ತಂದುಕೊಟ್ಟಿರುವುದು ಕನ್ನಡದ ಶಕ್ತಿಯಾಗಿದೆ. ಅಮ್ಮೆಂಬಳ ಶಂಕರನಾರಾಯಣ ನಾವಡ ಸಾಹಿತ್ಯ ಪ್ರತಿಷ್ಠಾನವು ಕನ್ನಡದ ವಿದ್ವಾಂಸರನ್ನು, ಸಾಹಿತಿಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಿರುವುದು ಪ್ರಶಸ್ತಿಯ ಹಿರಿಮೆ ಗರಿಮೆಯನ್ನು ಹೆಚ್ಚಿಸಿದೆ. ಕನ್ನಡ ನೆಲ ಜಲ ಸೇರಿದಂತೆ ಕನ್ನಡ‌ ಭಾಷೆಯ ಸಂರಕ್ಷಣೆಗಾಗಿ…

Read More

ಉಡುಪಿ : ‘ಸಂಸ್ಕೃತಿ ವಿಶ್ವ ಪ್ರತಿಷ್ಠಾನ’ವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ಸಂಸ್ಕೃತಿ ಉತ್ಸವ’ ಕಾರ್ಯಕ್ರಮವು ದಿನಾಂಕ 23-01-2024ರ ಮಂಗಳವಾರದಂದು ಉಡುಪಿಯ ಎಂ. ಜಿ. ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮದಲ್ಲಿ ಗಡಿನಾಡ ಕನ್ನಡ ಕಲಾವಿದ ಕಾಸರಗೋಡು ಚಿನ್ನಾ ಅವರಿಗೆ ಹೆಬ್ರಿಯ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಿತ ‘ಶಾರದಾ ಕೃಷ್ಣ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕಾಸರಗೋಡು ಚಿನ್ನಾ “ನನ್ನ ರಂಗ ಚಟುವಟಿಕೆ ಮತ್ತು ಸಾಹಿತ್ಯ ಸಾಧನೆಯ ಹಿಂದಿನ ಬಹುಪಾಲು ಶ್ರೇಯಸ್ಸು ಉಡುಪಿ ಮಣ್ಣಿಗೆ ಸಲ್ಲಬೇಕು. ಹುಟ್ಟಿದ ನೆಲ ಕಾಸರಗೋಡು ಕನ್ನಡಕ್ಕಾಗಿ ಹೋರಾಡುವ ಭಾವ ಬೆಳೆಸಿತು. ಭಾಷಾವಾರು ಪ್ರಾಂತ್ಯ ವೇಳೆ ಅಧಿಕಾರಿಗಳ ತಪ್ಪಿನಿಂದ ಕಾಸರಗೋಡು ಕೇರಳಕ್ಕೆ ಸೇರ್ಪಡೆಯಾಗಬೇಕಾಯಿತು.  ಕಾಸರಗೋಡು ಮಣ್ಣು ಈಗಲೂ ಕನ್ನಡದ ಮಣ್ಣು.” ಎಂದು ಪ್ರತಿಪಾದಿಸಿದರು. ಹಿರಿಯ ಸಾಹಿತಿ ಎ. ಎಸ್. ಏನ್  ಹೆಬ್ಬಾರ್ ಅಧ್ಯಕ್ಷತೆಯಲ್ಲಿ ನಡೆದ ಈ…

Read More

ಧಾರವಾಡ : ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ (ರಿ.) ಧಾರವಾಡ ಇದರ ವತಿಯಿಂದ ಡಾ. ದ.ರಾ. ಬೇಂದ್ರೆ ಅವರ 128ನೆಯ ಜನ್ಮ ದಿನಾಚರಣೆ ಹಾಗೂ ‘ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ 2024’ ಪ್ರದಾನ ಸಮಾರಂಭವು ದಿನಾಂಕ 31-01-2024ರಂದು ಸಂಜೆ ಗಂಟೆ 5ಕ್ಕೆ ಧಾರವಾಡದ ಸಾಧನಕೇರಿಯ ಡಾ. ದ.ರಾ. ಬೇಂದ್ರೆ ಭವನದಲ್ಲಿ ನಡೆಯಲಿದೆ. ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಮಾನ್ಯ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಇವರು ಈ ಕಾರ್ಯಕ್ರಮದ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ಅಧ್ಯಕ್ಷರಾದ ಡಾ. ಡಿ.ಎಮ್. ಹಿರೇಮಠ ಇವರು ಅಧ್ಯಕ್ಷತೆ ವಹಿಸಲಿದ್ದು, ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಅಧ್ಯಯನಾಂಗ ನಿರ್ದೇಶಕರಾದ ಪ್ರೊ. ಬಸವರಾಜ ಡೋಣೂರ ಅಭಿನಂದನಾ ನುಡಿಯನ್ನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಧಾರವಾಡದ ಶ್ರೀಮತಿ ಅರ್ಪಿತಾ ಜಹಗೀರದಾರ ಮತ್ತು ವೃಂದದವರಿಂದ ಡಾ. ದ.ರಾ. ಬೇಂದ್ರೆ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ. ವರಕವಿ ಡಾ. ದ.ರಾ. ಬೇಂದ್ರೆಯವರ 128ನೇ ಜನ್ಮದಿನದ ನಿಮಿತ್ತ…

Read More

ಉಡುಪಿ : ಭಾವನಾ ಫೌಂಡೇಷನ್ (ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ವತಿಯಿಂದ ಹಿರಿಯಡ್ಕದ ಸಂಸ್ಕೃತಿ ಸಿರಿ ಟ್ರಸ್ಟ್ ಹಾಗೂ ಆಭರಣ ಜುವೆಲ್ಲರ್ಸ್ ಸಹಯೋಗದಲ್ಲಿ ಆಯೋಜಿಸುವ ‘ಜನಪದ’ ದೇಶೀಯ ಕಲೆಯ ಸರಣಿ ಕಲಾ ಕಾರ್ಯಾಗಾರದ ಒಂಭತ್ತು ಮತ್ತು ಹತ್ತನೇ ಆವೃತ್ತಿಯು ದಿನಾಂಕ 27-01-2024 ಶನಿವಾರದಂದು ಅಪರಾಹ್ನ 2 ಗಂಟೆಗೆ ಬಡಗುಪೇಟೆಯ ‘ಹತ್ತು ಮೂರು ಇಪ್ಪಂತ್ತೆಂಟು ಗ್ಯಾಲರಿ’ಯಲ್ಲಿ ಪ್ರಾರಂಭವಾಗಲಿದೆ. ಈ ಕಾರ್ಯಾಗಾರವು ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಪ್ರೊ. ಮುರುಳೀಧರ ಉಪಾಧ್ಯ ಹಿರಿಯಡಕ ಇವರಿಂದ ಉದ್ಘಾಟನೆಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ಈಶಾವಾಸ್ಯ ಪ್ರತಿಷ್ಠಾನದ ವಿಶ್ವಸ್ಥರಾದ ಶ್ರೀ ವಿನಯ್ ಬನ್ನಂಜೆ ಹಾಗೂ ಮಂಗಳೂರಿನ ಆರ್ಕಿಟೆಕ್ಟ್ ಶ್ರೀ ಪ್ರಮುಖ್ ರೈಯವರು ಭಾಗವಹಿಸಲಿದ್ದು, ಭಾವನಾ ಫೌಂಡೇಷನ್ ಇದರ ನಿರ್ದೇಶಕರಾದ ಹಾವಂಜೆ ಮಂಜುನಾಥ ರಾವ್‌ರವರು ಉಪಸ್ಥಿತರಿರಲಿದ್ದಾರೆ. ಈ ದೇಶೀಯ ಕಲೆಯ ಸರಣಿ ಕಲಾ ಕಾರ್ಯಾಗಾರದ ಭಾಗವಾಗಿ ಮೈಸೂರು ಹಾಗೂ ಗಂಜೀಫಾ ಚಿತ್ರಕಲೆಯನ್ನು ಈ ಬಾರಿ ಪರಿಚಯಿಸುತ್ತಿದ್ದು, ಯುವ ಕಲಾವಿದರಾದ ಶಶಾಂಕ್ ಭಾರಧ್ವಾಜ್ ರವರು ಈ ಕಾರ್ಯಾಗಾರವನ್ನು…

Read More