Subscribe to Updates
Get the latest creative news from FooBar about art, design and business.
Author: roovari
‘ಶತಾಮೃತಧಾರೆ’ ಇದು ಅಶೋಕ ಪಕ್ಕಳರ ಚೊಚ್ಚಲ ಕೃತಿ. ಮುಂಬೈನ ಬಂಟರ ಸಂಘದ ಮುಖವಾಣಿ ಬಂಟರವಾಣಿಯಲ್ಲಿ ಅವರು ಬರೆದ ನೂರು ಸಂಪಾದಕೀಯಗಳ ದೊಡ್ಡ ಸಂಕಲನವಿದು. ಇದರಲ್ಲಿ ವೈವಿಧ್ಯಮಯವಾದ ಓದಿಸಿಕೊಂಡು ಹೋಗುವ ನೂರು ಲೇಖನಗಳಿವೆ. ಇವೆಲ್ಲ ನಮ್ಮ ಸಾಂಪ್ರತ ಸಂದರ್ಭಗಳಿಗೆ ಸಂಬಂಧಿಸಿದ ಗಂಭೀರ ಕಾಳಜಿಯುಳ್ಳ ಲೇಖಕನೊಬ್ಬನ ತುಡಿತವೂ ಆಗಿವೆ. ಕವಿ ಮನದ ಚಿಂತಕರಾಗಿರುವ ಪಕ್ಕಳ ಇವರು ಸಮಕಾಲೀನ ತವಕ ತಲ್ಲಣಗಳಿಗೆ ಮುಖಾಮುಖಿಯಾದ ಪ್ರತಿಭೆಯ ಸ್ವರೂಪ ಇಲ್ಲಿ ವಿಸ್ತ್ರತವಾಗಿ ಅನಾವರಣಗೊಂಡಿದೆ. ಹಾಗೆ ನೋಡಿದರೆ ಸಂಪಾದಕೀಯ ಬರಹಗಳು, ಅಂಕಣ ಬರಹಗಳು ಸಮಯ ಸಾಹಿತ್ಯವೇ. ಆದರೆ ಅಶೋಕ ಪಕ್ಕಳ ಇವರ ಪ್ರತಿಭೆ, ಸೃಜನಶೀಲ ಚಿಂತನೆಯಿಂದ ಇಲ್ಲಿನ ಬರವಣಿಗೆ ಸಮಯಾತೀತವೂ ಆಗಿ ತಾಳುವ ಬಾಳುವ ಗುಣವನ್ನು ಹೊಂದಿರುವುದು ವಿಶೇಷ. ಇಲ್ಲಿನ ಲೇಖನಗಳಲ್ಲಿ ಬದುಕನ್ನು ನೋಡುವ, ಅನ್ವೇಷಿಸುವ ಪರಿ ಮನಂಬುಗುವಂತಿದೆ. ಅಶೋಕ ಪಕ್ಕಳ ಅವರದು ನಾನಾ ಮುಖಗಳ ವ್ಯಕ್ತಿತ್ವ, ಅವರು ಉತ್ತಮ ಕಾರ್ಯಕ್ರಮ ನಿರೂಪಕರಾಗಿ, ಯಕ್ಷಗಾನ ತಾಳಮದ್ದಳೆಯ ಕಲಾವಿದರಾಗಿ, ಸಂಘಟಕರಾಗಿ, ಸಮಾಜ ಸೇವಕರಾಗಿ ಹೀಗೆ ನಾನಾ ನೆಲೆಗಳಲ್ಲಿ ದೂರದ ಮುಂಬೈ ಮಹಾನಗರದಲ್ಲಿ…
ನಮ್ಮ ಭಾರತೀಯ ಪರಂಪರೆಯ ಅಸ್ಮಿತೆಯಾದ ರಾಮಾಯಣ ಮತ್ತು ಮಹಾಭಾರತದ ಕಥೆಗಳು ನಮ್ಮ ಸಾಂಸ್ಕೃತಿಕ ಜಗತ್ತಿನ ಒಂದು ಅವಿಭಾಜ್ಯ ಅಂಗವಾಗಿ ಹಾಸುಹೊಕ್ಕಾಗಿದೆ. ಸಂಗೀತ-ನೃತ್ಯ-ನಾಟಕ ಯಾವುದೇ ಕಲಾಪ್ರಕಾರದ ಹೂರಣ ಈ ಮಹಾಕಾವ್ಯಗಳನ್ನು ಬಿಟ್ಟು ಬೇರಿಲ್ಲ. ಎಲ್ಲ ಕಥೆಗಳ ಆಗರ ಅವು. ಎಲ್ಲಕ್ಕೂ ಸ್ಫೂರ್ತಿ-ಪ್ರೇರಣೆ. ಅದರಲ್ಲೂ ನೃತ್ಯಗಳಲ್ಲಿ ಇವು ಬಹು ಬಳಕೆಯಲ್ಲಿದ್ದು ಆಕರ್ಷಣೆಯ ಕೇಂದ್ರಬಿಂದುವೂ ಆಗಿದೆ. ರಾಮಾಯಣ – ಮಹಾಭಾರತದ ಕಥಾವಸ್ತುಗಳನ್ನು ಕಾಲಾನುಕಾಲದಿಂದ ಯಶಸ್ವಿಯಾಗಿ ನೃತ್ಯಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಜನಜನಿತ ಕಥೆಯಾಗಿದ್ದು, ಇವು ಅನೇಕ ತಿರುವುಗಳನ್ನು, ಸ್ವಾರಸ್ಯವಾದ ಕಥಾ ಓಟವನ್ನು ಉಳ್ಳದ್ದಾದ್ದರಿಂದ ಇವುಗಳು ಬಹು ಜನಪ್ರಿಯ ಕೂಡ. ಅದರಂತೆ ದಿನಾಂಕ 05 ಜನವರಿ 2025ರಂದು ಜಯನಗರದ ವಿವೇಕ ಸಭಾಂಗಣದಲ್ಲಿ ಸಾಧನ ನೃತ್ಯ ಶಾಲೆಯ 11ನೇ ವಾರ್ಷಿಕೋತ್ಸವದ ಪ್ರಯುಕ್ತ ಪ್ರದರ್ಶಿತವಾದ ‘ರಾಮಾಯಣ’ ನೃತ್ಯರೂಪಕ ಸೊಗಸಾಗಿ ಮೂಡಿಬಂದು, ನೋಡುಗರನ್ನು ಆಕರ್ಷಿಸಿತು. ತೆರೆ ಸರಿದೊಡನೆ ಸರ್ವರ ಪ್ರಥಮ ದೃಷ್ಟಿಯನ್ನು ಆಕರ್ಷಿಸಿದ್ದು ಶ್ರೀರಾಮ-ಲಕ್ಷ್ಮಣ-ಸೀತಾ ಸಮೇತನಾದ ಆಂಜನೇಯ ಮೂರ್ತಿ. ಆಲಂಕೃತ ಪ್ರಭಾವಳಿಯ ಏಕಚ್ಛತ್ರದಡಿ ದಿವ್ಯಮೂರ್ತಿಗಳು ಅನಾವರಣಗೊಂಡ ಹೃನ್ಮನ ತಣಿಸುವ ದೃಶ್ಯ ಆಕರ್ಷಿಸಿತು. ಇಡೀ ರಾಮಾಯಣದ…
ಪುತ್ತೂರು : ಕಾವು ಸಮೀಪದ ಪೆರ್ನಾಜೆಯಲ್ಲಿ ಶ್ರೀ ಸುಬ್ರಹ್ಮಣ್ಯ ಉಂಗ್ರುಪುಳಿತ್ತಾಯ ಹಾಗೂ ಶ್ರೀಮತಿ ಶ್ರೀಲತಾರ ಷಷ್ಠೀ ಪೂರ್ತಿ ಕಾರ್ಯಕ್ರಮದ ಅಂಗವಾಗಿ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ‘ಸ್ಯಮಂತಕ ಮಣಿ’ ತಾಳಮದ್ದಳೆಯು ದಿನಾಂಕ 08 ಜನವರಿ 2025ರಂದು ನಡೆಯಿತು. ಹಿಮ್ಮೇಳದಲ್ಲಿ ತಲ್ಪನಾಜೆ ವೆಂಕಟ್ರಮಣ ಭಟ್, ನಿತೀಶ್ ಎಂಕಣ್ಣಮೂಲೆ, ಬೇಂಗ್ರೋಡಿ ಲಕ್ಷ್ಮೀಶ ಭಟ್, ಮುರಳೀಧರ ಕಲ್ಲೂರಾಯ ಕುಂಜೂರುಪಂಜ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಶೆಟ್ಟಿ ಸಾಲ್ಮರ (ಶ್ರೀ ಕೃಷ್ಣ), ಭಾಸ್ಕರ್ ಬಾರ್ಯ (ಬಲರಾಮ), ಗುಂಡ್ಯಡ್ಕ ಈಶ್ವರ ಭಟ್ (ಜಾಂಬವ), ಪೂಕಳ ಲಕ್ಷ್ಮೀ ನಾರಾಯಣ ಭಟ್ (ನಾರದ) ಸಹಕರಿಸಿದರು. ಮುರಳೀಧರ ಆಚಾರ್ ಸ್ವಾಗತಿಸಿ, ಗುರುಮೂರ್ತಿ ಪುಣಿಚ್ಚಿತ್ತಾಯ ವಂದಿಸಿದರು.
ಮೂಡುಬಿದಿರೆ: ಭಾರತ್ ಸ್ಕೌಟ್ಸ್ ಗೈಡ್ಸ್ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಮೂಡುಬಿದಿರೆ ಸ್ಥಳೀಯ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಕಲೋತ್ಸವ’ ಕಾರ್ಯಕ್ರಮವು ದಿನಾಂಕ 08 ಜನವರಿ 2025ರಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆವರಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಆಯಕ್ತ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಮಾತನಾಡಿ “ಕಾಲ ಕಾಲಕ್ಕೆ ಸರಿಯಾದ ವಿದ್ಯೆ ಬುದ್ಧಿಯ ಜೊತೆಗೆ ಹೃದಯಕ್ಕೆ ಸಂಸ್ಕಾರವನ್ನು ಒದಗಿಸುವ ಕೆಲಸ ಈ ‘ಪ್ರತಿಭಾ ಕಲೋತ್ಸವ’ದ ಮೂಲಕ ಸಾಕಾರಗೊಳ್ಳಲಿದೆ. ದೇಶದಲ್ಲೆ ಮೊತ್ತ ಮೊದಲ ಬಾರಿಗೆ ಭಾರತ್ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಪ್ರತಿಭಾ ಕಲೋತ್ಸವ ಹಮ್ಮಿಕೊಂಡಿರುವುದು ಖುಷಿ ನೀಡಿದೆ. ಪಠ್ಯೇತರವಾಗಿ ಮನಸ್ಸನ್ನು ಕಟ್ಟುವ ಇಂತಹ ಕಾರ್ಯಕ್ರಮಗಳು ಎಲ್ಲಾ ಭಾಗಗಳಲ್ಲೂ ನಡೆಯಬೇಕು. ಆ ಮೂಲಕ ವಿದ್ಯಾರ್ಥಿಗಳಲ್ಲಿ ಭಾರತ್ ಸ್ಕೌಟ್ಸ್ ಗೈಡ್ಸ್ ಕುರಿತು ಇನ್ನಷ್ಟು…
ಮೂಡುಬಿದಿರೆ: ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕ ಮತ್ತು ಶ್ರೀ ಮಹಾವೀರ ಪ. ಪೂ. ಕಾಲೇಜಿನ ಸಹಯೋಗದಲ್ಲಿ ‘ಕನ್ನಡ ಚಿಂತನ’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ‘ಕನ್ನಡ ಕಾವ್ಯ ಮತ್ತು ಜೀವನಪ್ರೀತಿ’ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವು ದಿನಾಂಕ 08 ಜನವರಿ 2025ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಆಳ್ವಾಸ್ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಯೋಗೀಶ್ ಕೈರೋಡಿ ಮಾತನಾಡಿ “ಹೊರಗಿನ ಪ್ರಪಂಚವನ್ನು ತೆರೆದ ಕಣ್ಣುಗಳಿಂದ ಕಂಡಾಗ ಅನೇಕ ಸಂಗತಿಗಳು ನಮ್ಮ ಮನಸ್ಸನ್ನು ತಟ್ಟಿ ಯೋಚನೆಗೀಡು ಮಾಡಿದಾಗ ಅಂತಹ ಸಂಗತಿಗಳೇ ನಮ್ಮನ್ನು ಕವಿತ್ವದೆಡೆಗೆ ಸೆಳೆಯುತ್ತವೆ.ಭಾವನಾತ್ಮಕ ಸಂಗತಿಗಳಿರಬಹುದು, ನೋವಿನ ಘಟನೆಗಳೇ ಇರಬಹುದು, ಸಂತೋಷದ ಕ್ಷಣಗಳೇ ಇರಬಹುದು ಆ ಸಂದರ್ಭಗಳಲ್ಲಿ ನಮ್ಮನ್ನು ಕಾಡುವ ಸಂವೇದನೆ, ಜೀವನಪ್ರೀತಿ ಕವಿಮನಸ್ಸಿಗೆ ಮೂಲ. ಒಳ್ಳೆಯ ಬರಹವೂ ಕಾವ್ಯವಾಗಬಲ್ಲುದು ಮತ್ತು ಕಾವ್ಯ ರಚಿಸದಿದ್ದರೂ ಜೀವನ ಪ್ರೀತಿಯ ಸಂವೇದನೆ ಇರುವವರೆಲ್ಲರೂ ಕವಿಗಳೇ ಆಗಿರುತ್ತಾರೆ” ಎಂದರು. ಸಭಾಧ್ಯಕ್ಷತೆಯನ್ನುವಹಿಸಿದ್ದ ಕ. ಸಾ. ಪ. ಮೂಡುಬಿದಿರೆ…
ಸುರತ್ಕಲ್ : ಮಣಿಕೃಷ್ಣ ಸ್ವಾಮಿ ಅಕಾಡೆಮಿ(ರಿ.) ಮತ್ತು ನಾಗರಿಕ ಸಲಹಾ ಸಮಿತಿ(ರಿ.) ಸುರತ್ಕಲ್ ಆಯೋಜಿಸುವ ಉದಯರಾಗ ಕಾರ್ಯಕ್ರಮ ಸರಣಿಯ ‘ಉದಯರಾಗ–58’ ಕಾರ್ಯಕ್ರಮವು ದಿನಾಂಕ 05 ಜನವರಿ 2025ರಂದು ಸುರತ್ಕಲ್‌ನ ಮೇಲು ಸೇತುವೆಯ ತಳಭಾಗದ ಎಂ. ಸಿ. ಎಫ್ ನಾಗರಿಕ ಸಲಹಾ ಸಮಿತಿ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರಿನ ‘ಅರೋಹಣಂ ಸ್ಕೂಲ್ ಆಫ್ ಮ್ಯೂಸಿಕ್’ ಇದರ ಗುರು ಹಾಗೂ ಸಂಗೀತ ಕಲಾವಿದ ಡಾ. ವಿದ್ವಾನ್ ಅನೀಶ್ ವಿ. ಭಟ್ ಮಾತನಾಡಿ “ಶಾಸ್ತ್ರೀಯ ಸಂಗೀತದ ಅಭ್ಯಾಸಿಗಳಿಗೆ ಪೂರಕ ವಾತಾವರಣ ಲಭ್ಯವಾದಾಗ ಪರಿಪೂರ್ಣ ಕಲಾವಿದರಾಗಿ ರೂಪುಗೊಳ್ಳಲು ಸಾಧ್ಯ.” ಎಂದು ನುಡಿದರು. ಡಾ. ವಿದ್ವಾನ್ ಅನೀಶ್ ವಿ. ಭಟ್ ಅವರ ಶಿಷ್ಯೆಯರಾದ ಶ್ರೀವರದಾ ಪಟ್ಟಾಜೆ, ಸುಮನ ಕೆ., ಚಿನ್ಮಯಿ ವಿ. ಭಟ್, ಹವ್ಯಶ್ರೀ ಕೆ.ಟಿ., ರಕ್ಷ ಎ. ಆರ್. ಇವರಿಂದ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ ನಡೆಯಿತು. ಇವರಿಗೆ ವಯಲಿನ್‌ನಲ್ಲಿ ಸುನಾದ ಪಿ. ಎಸ್. ಹಾಗೂ ಮೃದಂಗದಲ್ಲಿ ಅವಿನಾಶ್ ಬಿ. ಸಹಕರಿಸಿದರು. ಮಣಿಕೃಷ್ಣ…
ಕೋಲಾರ ವೆಂಕಟೇಶ ಅಯ್ಯರ್ ಇವರು ಕೆ.ವಿ.ಅಯ್ಯರ್ ಎಂದೇ ಪ್ರಸಿದ್ಧಿ ಪಡೆದ ಕನ್ನಡ ನಾಡು ಕಂಡ ವಿಶೇಷ ವ್ಯಕ್ತಿಗಳಲ್ಲಿ ಒಬ್ಬರು. ವೃತ್ತಿಯಿಂದ ದೈಹಿಕ ಶಿಕ್ಷಣ ತಜ್ಞರಾದರೂ ಪ್ರವೃತ್ತಿಯಿಂದ ಸಾಹಿತ್ಯ ಕೃಷಿಯನ್ನು ಮಾಡಿಕೊಂಡು ಬಂದವರು. 1898 ಜನವರಿ 8 ರಂದು ಕೋಲಾರ ಜಿಲ್ಲೆಯ ದೇವರಾಯ ಸಮುದ್ರ ಎಂಬಲ್ಲಿ ಇವರ ಜನನವಾಯಿತು. ಪ್ರೌಢ ಶಿಕ್ಷಣ ಪಡೆದ ನಂತರ ಬಡತನದದಿಂದಾಗಿ ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿದ್ದು ವಿಷಾದದ ಸಂಗತಿ. ಉತ್ತಮ ವ್ಯಾಯಾಮ ಶಿಕ್ಷಕರಾದ ಇವರು ಛಾಯಾಗ್ರಹಕರು, ರೇಡಿಯೋ ರಿಪೇರಿ ಇತ್ಯಾದಿಗಳಲ್ಲಿ ನಿಪುಣರು. ನಾಟಕದಲ್ಲಿ ಆಸಕ್ತಿ ಹೊಂದಿರುವ ಇವರು “ರವಿ ಕಲಾವಿದರು” ಎನ್ನುವ ನಾಟಕ ಸಂಸ್ಥೆಯ ಅಧ್ಯಕ್ಷರಾಗಿ ದುಡಿದರು. ದೇಹದಾರ್ಢ್ಯತೆಯಲ್ಲಿ ಸ್ವತಃ ಆಸಕ್ತಿಯಿರುವ ಕಾರಣ ವ್ಯಾಯಾಮ ಶಾಲೆ ನಡೆಸುತ್ತಿದ್ದರು ಇವರ ವ್ಯಾಯಾಮ ಶಾಲೆಗೆ ಮಹಾರಾಜ ಕೃಷ್ಣರಾಜ ಒಡೆಯರು ಮಾತ್ರವಲ್ಲದೆ, ಟಿ.ಪಿ. ಕೈಲಾಸಮ್ ಬಂದು ಮಾರ್ಗದರ್ಶನ ನೀಡುವುದರೊಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಲ್ಯದಲ್ಲಿ ಹೋಟೆಲುಗಳಲ್ಲಿ ಇಡ್ಲಿ ದೋಸೆ ಹಿಟ್ಟನ್ನು ದೊಡ್ಡ ಗಾತ್ರದ ರುಬ್ಬುಕಲ್ಲಲ್ಲಿ ರುಬ್ಬುತ್ತಿದ್ದು, ಅಡುಗೆಗೆ ಬೇಕಾದ ಭಾರಿ ಗಾತ್ರದ ನೂರಾರು ಕೊಡ…
ಕಾರ್ಕಳ : ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಕಾರ್ಕಳದಲ್ಲಿ ದಿನಾಂಕ 04 ಜನವರಿ 2025ರಂದು ಕ್ರಿಯೇಟಿವ್ ‘ನುಡಿಹಬ್ಬ’ ಮತ್ತು ವಾರ್ಷಿಕೋತ್ಸವ ಸಮಾರಂಭ ‘ಕ್ರಿಯೇಟಿವ್ ಆವಿರ್ಭವ’ವು ‘ವಿವಿಧತೆಯಲ್ಲಿ ಏಕತೆ’ ಎಂಬ ಪರಿಕಲ್ಪನೆಯೊಂದಿಗೆ ಬಹಳ ವೈಭವಪೂರ್ಣವಾಗಿ ಮೂಡಿಬಂದಿತು. ಕಾರ್ಯಕ್ರಮದಲ್ಲಿ ‘ಪ್ರೇಮಕವಿ’ ಎಂದೇ ಕರೆಯಲ್ಪಡುವ ಖ್ಯಾತ ಸಾಹಿತಿಗಳಾದ ಬಿ. ಆರ್. ಲಕ್ಷ್ಮಣರಾವ್ ಹಾಗೂ ನಡೆದಾಡುವ ಗ್ರಂಥಾಲಯ ಎಂದೇ ಪ್ರಸಿದ್ಧರಾದ ಡಾ. ನಾ. ಸೋಮೇಶ್ವರ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ವಿದ್ಯಾರ್ಥಿಗಳ ಸಮ್ಮುಖದಲ್ಲಿ ಎರಡು ಹಂತಗಳಲ್ಲಿ ಸಂವಾದ ಕಾರ್ಯಕ್ರಮವು ಖ್ಯಾತ ನಿರೂಪಕ ಅವಿನಾಶ್ ಕಾಮತ್ ಇವರ ಮುಖೇನ ನಡೆಸಲ್ಪಟ್ಟಿತು. ‘ಕವಿತೆ ಹುಟ್ಟುವ ಸಮಯ’ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಮೂಹವನ್ನುದ್ದೇಶಿಸಿ ಮಾತನಾಡಿದ ಬಿ. ಆರ್. ಲಕ್ಷ್ಮಣರಾವ್ “ಹಾಡುಗಳ ನಿರಂತರತೆಗೆ ಕಾರಣ ಮುಂದಿನ ಪೀಳಿಗೆಯಾಗಿರುವ ವಿದ್ಯಾರ್ಥಿಗಳು” ಎಂದರು. ಮಜಾ ಟಾಕೀಸ್ ಖ್ಯಾತಿಯ ಮೋಹನ್ ಕಾರ್ಕಳ ಮತ್ತು ತಂಡದವರಿಂದ ಬಿ. ಆರ್. ಲಕ್ಷ್ಮಣರಾವ್ ವಿರಚಿತ ಕವಿತೆಗಳ ಗಾಯನ ಕಾರ್ಯಕ್ರಮ ಜರುಗಿತು. ಪ್ರಖ್ಯಾತ ವೈದ್ಯ, ಕ್ವಿಜ್ ಮಾಸ್ಟರ್, ಲೇಖಕರು ಹಾಗೂ ಅಂಕಣಕಾರರಾದ ಡಾ. ನಾ. ಸೋಮೇಶ್ವರ…
ಸುರತ್ಕಲ್ : ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ (ರಿ.) ಸುರತ್ಕಲ್ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ದಿನಾಂಕ 05 ಜನವರಿ 2025ರಂದು ಸುರತ್ಕಲಿನ ವಿದ್ಯಾದಾಯಿನಿ ಕಲಾಮಂದಿರದಲ್ಲಿ ಆಯೋಜಿಸಿರುವ 40ರ ಸಂಭ್ರಮದ ಪ್ರಯುಕ್ತ ‘ನಲ್ವತ್ತರ ನಲಿವು -1’ ಉದ್ಘಾಟನಾ ಸಮಾರಂಭ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವದಿಸಿದ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು “ಭಾರತೀಯ ಶಾಸ್ತ್ರೀಯ ಕಲಾಪ್ರಕಾರಗಳು ಆತ್ಮವನ್ನು ಪರಮಾತ್ಮನಡೆಗೆ ಕೊಂಡೊಯ್ಯುವ ಒಂದು ಕಲಾಪ್ರಕಾರವಾಗಿದೆ. ಇದನ್ನು ಅಷ್ಟೇ ಶ್ರದ್ಧೆಯಿಂದ ಆರಾಧಿಸಿ ಪ್ರದರ್ಶಿಸಿದಾಗ ಮನುಷ್ಯನಲ್ಲಿ ಸಾತ್ವಿಕ ಭಾವನೆ ಉಂಟಾಗುತ್ತದೆ. ಕಳೆದ 40 ವರ್ಷಗಳಿಂದ ಕಲಾ ಕ್ಷೇತ್ರದಲ್ಲಿ ವಿಶೇಷ ಸಾಧನೆಯನ್ನು ಮಾಡಿ ಅಸಂಖ್ಯಾತ ಶಿಷ್ಯ ವರ್ಗವನ್ನು ಹೊಂದಿರುವ ಸಂಸ್ಥೆಯ ರೂವಾರಿ ಚಂದ್ರಶೇಖರ ನಾವಡರು ಅಭಿನಂದನಾರ್ಹರು” ಎಂದು ನುಡಿದರು. ನಾಟ್ಯಾಂಜಲಿ ಸಂಸ್ಥೆಯ ಗೌರವಾರ್ಪಣೆಯನ್ನು ಎಚ್.ಯು. ಅನಂತಯ್ಯ, ಎಸ್. ಸುಬ್ರಾಯ ಹಾಲಂಬಿ ಕುಂದಾಪುರ, ವೆಂಕಟರಮಣ ಐತಾಳ್ ಕೋಟೇಶ್ವರ, ಪಿ. ಪುರುಷೋತ್ತಮ ರಾವ್ ಕೃಷ್ಣಾಪುರ, ತಿರುಮಲೇಶ್ವರ ಭಟ್ ಕಲ್ಲಡ್ಕ, ಸರ್ವೋತ್ತಮ…
ಕಾರ್ಕಳ : ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಕಾರ್ಕಳದಲ್ಲಿ ದಿನಾಂಕ 03 ಜನವರಿ 2025ರಂದು ಕ್ರಿಯೇಟಿವ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು. ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿ ಮಾನವ ಸಂಪನ್ಮೂಲ ಇಲಾಖೆಯ ಉಪಪ್ರಧಾನ ವ್ಯವಸ್ಥಾಪಕರಾದ ಶ್ರೀ ಗೋಪಾಲಕೃಷ್ಣ ಸಾಮಗ ಬಿ. ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ “ಜ್ಞಾನಾರ್ಜನೆಯ ಜೊತೆಗೆ ವಿದ್ಯಾರ್ಥಿಗಳು ಉತ್ತಮ ಸಂಸ್ಕೃತಿಯನ್ನು ರೂಢಿಸಿಕೊಂಡಾಗ ಸರ್ವತೋಮುಖ ಅಭಿವೃದ್ಧಿ ಸಾಧ್ಯ” ಎಂದು ಹೇಳಿದರು. ಸಹ ಸಂಸ್ಥಾಪಕರಾದ ಗಣಪತಿ ಭಟ್ ಕೆ.ಎಸ್.ರವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸಾಗಿ ಬಂದ ಸಾಧನೆಯ ಹಾದಿಯ ಸಮಗ್ರ ಮಾಹಿತಿಗಳನ್ನು ಒದಗಿಸಿದರು. ಮುಖ್ಯ ಅತಿಥಿ ಎನ್.ಸಿ.ಎಸ್. ಮತ್ತು ಕೋ. ಇದರ ಸ್ಥಾಪಕರಾದ ಅಂ. ನಿತೇಶ್ ಶೆಟ್ಟಿಯವರು ಮಾತನಾಡಿ “ಪ್ರತಿಭಾ ಪುರಸ್ಕಾರಗಳು ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಮತ್ತು ಇದು ಇತರೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು” ಎಂದರು. ಪ್ರಧಾನ ಶಿಲ್ಪಿಗಳಾದ ಸುನಿಲ್ ಕುಮಾರ್ ಇವರು ಮಾತನಾಡಿ “ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಮಕ್ಕಳು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಸಹಕಾರಿ” ಎಂದರು.…