Subscribe to Updates
Get the latest creative news from FooBar about art, design and business.
Author: roovari
ಕಾರ್ಕಳ : ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಕಾರ್ಕಳದಲ್ಲಿ ದಿನಾಂಕ 03 ಜನವರಿ 2025ರಂದು ಕ್ರಿಯೇಟಿವ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು. ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿ ಮಾನವ ಸಂಪನ್ಮೂಲ ಇಲಾಖೆಯ ಉಪಪ್ರಧಾನ ವ್ಯವಸ್ಥಾಪಕರಾದ ಶ್ರೀ ಗೋಪಾಲಕೃಷ್ಣ ಸಾಮಗ ಬಿ. ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ “ಜ್ಞಾನಾರ್ಜನೆಯ ಜೊತೆಗೆ ವಿದ್ಯಾರ್ಥಿಗಳು ಉತ್ತಮ ಸಂಸ್ಕೃತಿಯನ್ನು ರೂಢಿಸಿಕೊಂಡಾಗ ಸರ್ವತೋಮುಖ ಅಭಿವೃದ್ಧಿ ಸಾಧ್ಯ” ಎಂದು ಹೇಳಿದರು. ಸಹ ಸಂಸ್ಥಾಪಕರಾದ ಗಣಪತಿ ಭಟ್ ಕೆ.ಎಸ್.ರವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸಾಗಿ ಬಂದ ಸಾಧನೆಯ ಹಾದಿಯ ಸಮಗ್ರ ಮಾಹಿತಿಗಳನ್ನು ಒದಗಿಸಿದರು. ಮುಖ್ಯ ಅತಿಥಿ ಎನ್.ಸಿ.ಎಸ್. ಮತ್ತು ಕೋ. ಇದರ ಸ್ಥಾಪಕರಾದ ಅಂ. ನಿತೇಶ್ ಶೆಟ್ಟಿಯವರು ಮಾತನಾಡಿ “ಪ್ರತಿಭಾ ಪುರಸ್ಕಾರಗಳು ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಮತ್ತು ಇದು ಇತರೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು” ಎಂದರು. ಪ್ರಧಾನ ಶಿಲ್ಪಿಗಳಾದ ಸುನಿಲ್ ಕುಮಾರ್ ಇವರು ಮಾತನಾಡಿ “ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಮಕ್ಕಳು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಸಹಕಾರಿ” ಎಂದರು.…
ಪುತ್ತೂರು : ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇಲ್ಲಿನ ನವಗ್ರಹ ಗುಡಿಯಲ್ಲಿ ತಿಂಗಳ ಸರಣಿ ಕಾರ್ಯಕ್ರಮದ ಅಂಗವಾಗಿ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ‘ಸುಧನ್ವ ಮೋಕ್ಷ’ ಎಂಬ ತಾಳಮದ್ದಳೆಯು ದಿನಾಂಕ 06 ಜನವರಿ 2025ರಂದು ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ, ಸತೀಶ್ ಇರ್ದೆ, ಕುಮಾರಿ ಕೃತಿಕಾ ಖಂಡೇರಿ ಹಾಗೂ ಚೆಂಡೆ, ಮದ್ದಲೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಮುರಳೀಧರ ಕಲ್ಲೂರಾಯ, ಕುಮಾರಿ ಶರಣ್ಯ ನೆತ್ತರಕೆರೆ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ (ಶ್ರೀ ಕೃಷ್ಣ), ಗುಂಡ್ಯಡ್ಕ ಈಶ್ವರ ಭಟ್ ಹಾಗೂ ದುಗ್ಗಪ್ಪ ನಡುಗಲ್ಲು (ಸುಧನ್ವ), ಗುಡ್ಡಪ್ಪ ಬಲ್ಯ (ಅರ್ಜುನ), ಶುಭಾ ಜೆ.ಸಿ. ಅಡಿಗ (ಪ್ರಭಾವತಿ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ರಂಗನಾಥ್ ರಾವ್ ಸಹಕರಿಸಿದರು.
ಲಿಂಗಣ್ಣಯ್ಯ ಗುಂಡಪ್ಪನವರು ಹಾಸನ ಜಿಲ್ಲೆಯ ಮತಿಗಟ್ಟ ಎಂಬಲ್ಲಿ 08 ಜನವರಿ 1903ರಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದ ಗುಂಡಪ್ಪನವರ ಮಾರ್ಗದರ್ಶಿಗಳೂ, ಗುರುಗಳೂ ಆದ್ದವರು ಬಿ.ಎಂ. ಶ್ರೀಕಂಠಯ್ಯನವರು. ಭಾಷಾಂತರ, ಗ್ರಂಥ ಸಂಪಾದನೆ, ಆಧುನಿಕ ಸಾಹಿತ್ಯಗಳಲ್ಲಿ ನಿರಂತರ ಕೆಲಸ ಮಾಡಿದ ಇವರು ಕನ್ನಡ ಭಾಷಾ ಸಂಸ್ಕೃತಿಗೆ ಅಮೋಘ ಕಾಣಿಕೆಗಳನ್ನು ನೀಡಿದ್ದಾರೆ. ಗುಂಡಪ್ಪನವರಿಗೆ ತಮಿಳಿನ ಮೇಲೆ ಪ್ರಭುತ್ವವಿದ್ದ ಕಾರಣ ಅನೇಕ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ‘ತಿರುಕ್ಕುರುಳ್’, ‘ಮಣಿಮೇಖಲೈ’, ‘ಶಿಲಪ್ಪದಿಕಾರಂ’, ‘ಅವ್ವೆಯಾರ್’, ‘ಪೆರಿಯ ಪುರಾಣಂ’, ‘ನಾಲ್ಮಡಿ ಕಡುಕು’, ‘ತಿರುವಾಚಕಂ’, ‘ಪೆರುಂಗದೈ’ ಮತ್ತು ‘ಉಳಗ ನೀತಿ’ಗಳನ್ನು ಕನ್ನಡಕ್ಕೆ ತಂದಿದ್ದಾರೆ. ಪ್ರಾಚೀನ ತಮಿಳು ಮಾತ್ರವಲ್ಲದೆ, ಸುಬ್ರಹ್ಮಣ್ಯ ಭಾರತಿಯವರ ಕವಿತೆಗಳ ಕನ್ನಡ ರೂಪವಾದ ‘ಭಾರತಿಯವರ ಕವಿತೆಗಳು’, ಮು. ವರದರಾಜನ್ ಅವರ ‘ತಮಿಳು ಸಾಹಿತ್ಯ ಚರಿತ್ರೆ’, ಯು. ಸ್ವಾಮಿನಾಥ ಅಯ್ಯರ್ ಅವರ ‘ನನ್ನ ಚರಿತ್ರೆ’ ಆಧುನಿಕ ತಮಿಳಿನ ಭಾಷಾಂತರಗಳು. ಕೌಂಟ್ ಲಿಯೋ ಟಾಲ್ ಸ್ಟಾಯ್ ಅವರ ಕಥೆಗಳ ಅನುವಾದಗಳು ಇಂದಿಗೂ ಜನಪ್ರಿಯವಾಗಿವೆ. ಇವುಗಳಲ್ಲದೇ ಸಂಸ್ಕೃತದಲ್ಲಿರುವ ಭಾಸನ ‘ಸ್ವಪ್ನ ವಾಸವದತ್ತ’…
ಸುಳ್ಯ : ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ದಿನಾಂಕ 04 ಜನವರಿ 2025 ಮತ್ತು 05 ಜನವರಿ 2025ರಂದು ನೀನಾಸಂ ನಾಟಕೋತ್ಸವ ನಡೆಯಿತು. ಈ ಉತ್ಸವವನ್ನು ಉದ್ಘಾಟಿಸಿದ ನಿವೃತ್ತ ಪ್ರಾಂಶುಪಾಲ ಡಾ. ಎನ್.ಎನ್. ಗೋವಿಂದ ಇವರು ಮಾತನಾಡಿ “ಆಧುನಿಕ ರಂಗಭೂಮಿಯ ಹುಟ್ಟಿಗೆ ಕಾರಣವಾದ ನೀನಾಸಂ ಸಂಸ್ಥೆ ಜಗತ್ತಿನ ಶ್ರೇಷ್ಠ ಕೃತಿಗಳನ್ನು ಕನ್ನಡದಲ್ಲಿ ರಂಗಕ್ಕೆ ತರುವ ಮೂಲಕ ಸದಭಿರುಚಿಯ ಪ್ರೇಕ್ಷಕ ಬಳಗವನ್ನು ಸೃಷ್ಟಿಸಿದೆ” ಎಂದರು. ರಂಗಮನೆಯ ಅಧ್ಯಕ್ಷರಾದ ಡಾ. ಜೀವನ್ ರಾಂ ಸುಳ್ಯ ಮಾತನಾಡಿ “ಹೆಗ್ಗೋಡಿನ ನೀನಾಸಂಗೆ ಇದೀಗ 75ನೇ ವರ್ಷದ ಸಂಭ್ರಮ, ನೀನಾಸಂ ತಿರುಗಾಟಕ್ಕೆ 40 ವರ್ಷ. ಸದಭಿರುಚಿಯ ನಾಟಕಗಳನ್ನು ನಿರಂತರ ನೀಡುತ್ತಿರುವ ಈ ತರಹದ ವೃತ್ತಿನಿರತ ಕಲಾವಿದರ ತಂಡ ಮತ್ತೊಂದಿಲ್ಲ” ಎಂದರು. ವೇದಿಕೆಯಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಸಾಹಿತಿ ಕುಮಾರಸ್ವಾಮಿ ತೆಕ್ಕುಂಜ, ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶಿವರಾಮ ಶಾಸ್ತ್ರಿ, ರಂಗಮನೆಯ ಸದಸ್ಯರಾದ ಲತಾ ಮಧುಸೂದನ, ರವೀಶ್…
ಮುಂಬಯಿ : ಹಿರಿಯ ಸಾಹಿತಿ, ಲೇಖಕ, ಪ್ರಾಧ್ಯಾಪಕ ಡಾ. ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನವು ಮುಂಬಯಿ ಕನ್ನಡ ಪುಸ್ತಕ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕೊಡಮಾಡುತ್ತಾ ಬಂದ ಪುಸ್ತಕ ಬಹುಮಾನ ಯೋಜನೆಯಂತೆ 2023-24ರ ಸಾಲಿನ ‘ವಿಕಾಸ’ ಪುಸ್ತಕ ಬಹುಮಾನಕ್ಕೆ ಯು. ವೆಂಕಟ್ರಾಜ ರಾವ್, ಅಶೋಕ ಪಕ್ಕಳ, ಅನಿತಾ ತಾಕೋಡೆಯವರ ಕೃತಿಗಳು ಆಯ್ಕೆಯಾಗಿವೆ. ಅದೇ ರೀತಿ ‘ಡಾ. ವಿಶ್ವನಾಥ ಕಾರ್ನಾಡ್ ವಾರ್ಷಿಕ ಸಾಹಿತ್ಯ ಪುರಸ್ಕಾರ’ಕ್ಕೆ ಹಿರಿಯ ಬರಹಗಾರರು ನಿವೃತ್ತ ಪ್ರಾಂಶುಪಾಲರಾದ ಡಾ. ಉಮಾ ರಾಮರಾವ್ ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಜಿ.ಎನ್. ಉಪಾಧ್ಯ, ಪ್ರತಿಷ್ಠಾನದ ಸಂಸ್ಥಾಪಕರಾದ ಡಾ. ವಿಶ್ವನಾಥ ಕಾರ್ನಾಡ್, ಕೋಶಾಧಿಕಾರಿ ಶರತ್ ಕಾರ್ನಾಡ್ ಇವರುಗಳ ಉಪಸ್ಥಿತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಹಿರಿಯ ಸಾಹಿತಿ ಯು. ವೆಂಕಟ್ರಾಜ್ ಇವರ ‘ಪಟೇಲರ ಹುಲಿ ಬೇಟೆ’ (ಕಥಾ ಸಂಕಲನ), ಅಂಕಣಕಾರ ಅಶೋಕ ಪಕ್ಕಳ ಅವರ ‘ಶತಾಮೃತಧಾರೆ’ (ಅಂಕಣ ಬರಹಗಳ ಸಂಗ್ರಹ) ಹಾಗೂ ಅನಿತಾ ತಾಕೋಡೆ ಅವರ ‘ಸುವರ್ಣಯುಗ’ ಜಯ ಸುವರ್ಣ ಯಶೋಗಾಥೆ ಕೃತಿಗಳು ಈ ಬಾರಿಯ…
ಮೂಡಬಿದಿರೆ : ಸುವರ್ಣ ಹಬ್ಬದ ಸಂಭ್ರಮದಲ್ಲಿರುವ ಶ್ರೀದೇವಿ ನೃತ್ಯ ಕೇಂದ್ರದ ದ್ವಿತೀಯ ಶಾಖೆಯ ಉದ್ಘಾಟನಾ ಸಮಾರಂಭವು ದಿನಾಂಕ 05 ಜನವರಿ 2025ರ ಭಾನುವಾರ ಬೆಳಿಗ್ಗೆ ಘಂಟೆ 10.00ಕ್ಕೆ ಮೂಡಬಿದಿರೆಯ ರಮಾಮಣಿ ಶೋಧ ಸಂಸ್ಥಾನ ಸಭಾಭವನದಲ್ಲಿ ನಡೆಯಿತು. ದವಳತ್ರಯ ಜೈನ ಕಾಶಿ ಟ್ರಸ್ಟ್ (ರಿ )ಮೂಡಬಿದಿರೆ ಹಾಗೂ ಶ್ರೀ ದಿಗಂಬರ ಜೈನ ಮಠ ಇದರ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮವನ್ನು ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ, ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಆಶೀರ್ವಚನ ನೀಡಿದ ಸ್ವಾಮೀಜಿ “ನೃತ್ಯ ಕಲೆಯು ಭಾರತೀಯ ಪ್ರಾಚೀನ ಎಪ್ಪತ್ತೆರಡು ಕಲೆ(64ಕಲೆ ಅಂತಲೂ ಹೇಳುತ್ತಾರೆ) ಗಳಲ್ಲಿ ಒಂದು. ಶಾಸ್ತ್ರೀಯ ನೃತ್ಯ ಅಧಿನಾಥ ತೀರ್ಥoಕರ ಕಾಲದಲ್ಲೇ ಆರಾಧನ ಪದ್ಧತಿಯಾಗಿ ರಾಜರ ಆಸ್ಥಾನದಲ್ಲಿ ಪ್ರದರ್ಶನಗೊಳ್ಳುತ್ತಿತ್ತು. ಅಂಗಿಕ, ಅಭಿನಯ, ಮುದ್ರೆ, ಹೆಜ್ಜೆಗಳ ಶಾಸ್ತ್ರೀಯ ಪಟ್ಟುಗಳನ್ನು ಕಲಿತ ನೃತ್ಯಗಾರರು ತಮ್ಮ ಗುರುಗಳಿಂದ ಅಭ್ಯಾಸ ಕಾಲದಲ್ಲಿ ನವರಸಗಳ ಪ್ರಾಮುಖ್ಯತೆ, ಸೌಂದರ್ಯ ಪ್ರಜ್ಞೆ,…
ಮಂಗಳೂರು : ಸಾಹಿತ್ಯ, ಸಂಸ್ಕೃತಿ, ಕಲೆ, ಸಂಘಟನೆ, ಸದ್ವಿಚಾರ ಎಂಬ ನೆಲೆಯಲ್ಲಿ ಕಳೆದ 25 ವರ್ಷಗಳಿಂದ ಪುಸ್ತಕ ಪ್ರಕಟನೆಯಲ್ಲಿ ಸಕ್ರಿಯವಾಗಿರುವ ಕಲ್ಲಚ್ಚು ಪ್ರಕಾಶನದ ಬೆಳ್ಳಿ ಹಬ್ಬ ಪ್ರಯುಕ್ತ ‘ರಜತ ರಂಗು’ ಕಾರ್ಯಕ್ರಮಕ್ಕೆ ದಿನಾಂಕ 05 ಜನವರಿ 2025ರಂದು ಮಂಗಳೂರಿನ ಓಶಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕೇಂದ್ರ ಸಾಹಿತ್ಯ ಅಕಾಡಮಿಯ ನಿವೃತ್ತ ಉಪ ಕಾರ್ಯದರ್ಶಿ ಡಾ. ಮಹಾಲಿಂಗೇಶ್ವರ ಎಸ್.ಪಿ. ಇವರು ಮಾತನಾಡಿ “ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಪರಂಪರೆ ಇದೆ. ಎಲ್ಲವನ್ನೂ ಒಳಗೊಂಡಿರುವ ಕನ್ನಡ ನಾಡು ಬಹುಭಾಷಾ ಸಂಗಮ ಮಾತ್ರವಲ್ಲ ಬಹುತೇಕ ಸಾಹಿತಿಗಳೂ ಕನ್ನಡೇತರ ಭಾಷೆಗಳಲ್ಲಿ ಕೂಡ ಬರೆಯುವ ಶಕ್ತಿ ಹೊಂದಿರುವುದು ನಾಡಿನ ವಿಶೇಷವಾಗಿದೆ” ಎಂದರು. ಈ ಸಂದರ್ಭ ಕಲ್ಲಚ್ಚು ಪ್ರಕಾಶನದ ಮುಖ್ಯಸ್ಥ ಮಹೇಶ ಆರ್. ನಾಯಕ್ ರಚಿಸಿದ ‘ಅನೂಗೂಡುನೂ ಬಾ’ ಕಥೆ ಕವನಗಳ ಕಾರುಬಾರಿನೊಳು ಎಂಬ ಕೃತಿಯನ್ನು ಸಾಹಿತಿ ಡಾ. ಪ್ರಭಾಕರ ನೀರುಮಾರ್ಗ ಬಿಡುಗಡೆಗೊಳಿಸಿದರು. ಕಥೆಗಾರ ಡಾ. ಸಂಪೂರ್ಣಾನಂದ ಬಳ್ಕೂರು ಕೃತಿ ಪರಿಚಯ ಮಾಡಿದರು. ಮುಖ್ಯ…
ಯಕ್ಷಗಾನ – ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ ಇಂತಹ ಶಾಸ್ತ್ರೀಯ ಕಲೆಯಲ್ಲಿ ತಮ್ಮ ಪ್ರತಿಭೆಯನ್ನು ಕಲಾ ಪ್ರಪಂಚದಲ್ಲಿ ಪ್ರದರ್ಶನ ನೀಡುತ್ತಿರುವ ಯಕ್ಷ ದಂಪತಿ ಆನಂದ ಭಟ್ ಕೆಕ್ಕಾರು ಹಾಗೂ ವಿದ್ಯಾ ಆನಂದ ಭಟ್ ಕೆಕ್ಕಾರು. ಆನಂದ ಭಟ್ ಕೆಕ್ಕಾರು: ಹೊನ್ನಾವರದ ಕೆಕ್ಕಾರಿನ ಗಣಪತಿ ಭಟ್ ಮತ್ತು ದಿ. ವಿಜಯಲಕ್ಷ್ಮಿ ಭಟ್ ಇವರ ಮಗನಾಗಿ 13.06.1988 ರಂದು ಜನನ. ಮೆಕ್ಯಾನಿಕ್ ಇಂಜಿನಿಯರ್ ಇವರ ವಿದ್ಯಾಭ್ಯಾಸ. ಮನೆಯಲ್ಲಿ ಯಕ್ಷಗಾನ ವಾತಾವರಣ, ದೊಡ್ಡಪ್ಪ ಜಿ ಡಿ ಭಟ್ ನಾಟಕ ಕಲಾವಿದ ಜೊತೆಗೆ ಗಣಪತಿ ಮೂರ್ತಿಕಾರ, ತಂದೆಯು ನಾಟಕಕಾರ ಹಾಗೂ ತಾಯಿ ಕೂಡ ಸಾಂಸ್ಕೃತಿಕ ಆಸಕ್ತಿ ಇದ್ದುದರಿಂದ ಕೆಕ್ಕಾರು ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆಯಾಯಿತು. ಯಕ್ಷಗಾನವನ್ನು ನೋಡಿಯೇ ಕಲಿತದ್ದು ಆದ್ರೆ ಮಂಡಿ ಭಾಸ್ಕರ್ ಭಟ್ ಅನ್ನುವರು ಮಾರ್ಗದರ್ಶನ ಮಾಡಿ ಯಕ್ಷಗಾನ ರಂಗದಲ್ಲಿ ಒಳ್ಳೆಯ ಕಲಾವಿದರಿಗೆ ರೂಪುಗೊಂಡರು. ಭೀಷ್ಮ ವಿಜಯ, ಕರ್ಣ ಪರ್ವ, ದಮಯಂತಿ, ಹರೀಶ್ಚಂದ್ರ, ವಾಲಿವಧೆ ಇತ್ಯಾದಿ ನೆಚ್ಚಿನ ಪ್ರಸಂಗಗಳು. ಭೀಷ್ಮ,…
ಮಡಿಕೇರಿ : ದಿನಾಂಕ 5 ಜನವರಿ 2025ರಂದು ನಿಧನರಾದ ರಾಜ್ಯದ ಹಿರಿಯ ಸಾಹಿತಿ ಹಾಗೂ ಮಡಿಕೇರಿಯಲ್ಲಿ 2014ರಂದು ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ನಾ. ಡಿಸೋಜ ಅವರ ಆತ್ಮಕ್ಕೆ ಶ್ರದ್ಧಾಂಜಲಿ ಕೋರಿ ಸಂತಾಪ ಸೂಚಕ ಸಭೆಯು ಕನ್ನಡ ಸಾಹಿತ್ಯ ಪರಿಷತ್ ಮಡಿಕೇರಿ ವತಿಯಿಂದ ದಿನಾಂಕ 06 ಜನವರಿ 2025ರಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಸಾಹಿತಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾದ ಎಸ್. ಐ. ಮುನೀರ್ ಅಹಮದ್ ಮಾತನಾಡಿ “ಸಾಹಿತ್ಯ ಲೋಕ ಕಂಡಂತಹ ಸೃಜನಶೀಲ ಪರಿಸರ ಕಾಳಜಿಯುಳ್ಳ ಕಥೆಗಾರರೆನಿಸಿದ ನಾ. ಡಿಸೋಜಾ ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಸಾಹಿತ್ಯ ಕೃಷಿ ನಡೆಸಿದ್ದಾರೆ. ತಮ್ಮೆಲ್ಲ ಕಥೆ, ಕಾದಂಬರಿಗಳ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಎಚ್ಚರಿಸುತ್ತ ಬಂದಿರುತ್ತಾರೆ. ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ…
ಸಂಗೀತದ ಬಗ್ಗೆ ಅಗಾಧ ಪಾಂಡಿತ್ಯವುಳ್ಳ ಪಂಡಿತ್ ಆರ್. ಕೆ. ಬಿಜಾಪುರೆ ಇವರು ಸುಸಂಸ್ಕೃತ ಕುಟುಂಬದ ಸಂಗೀತಮಯ ವಾತಾವರಣವಿರುವ ಮನೆಯಿಂದ ಬಂದವರು. ಪ್ರಬುದ್ಧ ನಾಟಕಕಾರ ಮತ್ತು ಸಂಯೋಜಕ ಬೆಳಗಾವಿ ಜಿಲ್ಲೆಯ ಕಾಗ್ವಾಡದ ಕಲ್ಲೋಪಂತ್ ಬಿಜಾಪುರೆ ಮತ್ತು ಗೋದುಬಾಯಿ ದಂಪತಿಯ ಪುತ್ರ. ಪಂಡಿತ್ ಆರ್. ಕೆ. ಬಿಜಾಪುರೆ ಎಂದೇ ಪ್ರಸಿದ್ಧರಾಗಿರುವ ರಾಮ ಕಲ್ಲೋ ಬಿಜಾಪುರೆ ಇವರನ್ನು ‘ಪಂಡಿತ್ ರಾಮಭಾವು ಬಿಜಾಪುರೆ’ , ‘ಬಿಜಾಪುರೆ ಮಾಸ್ತರ್’ ಎಂದು ಜನ ಪ್ರೀತಿಯಿಂದ ಕರೆಯುತ್ತಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರು, ಸಾಹಿತಿಗಳು, ಸಂಗೀತ ಆರಾಧಕರೂ ಆಗಿದ್ದ ತಂದೆ, ದಾಸರ ಪದ ಹಾಗೂ ಜಾನಪದ ಗೀತೆಗಳನ್ನು ಮಧುರ ಕಂಠದಿಂದ ಹಾಡುವ ತಾಯಿ ಮತ್ತು ಉತ್ತಮ ತಬಲವಾದಕ ದೊಡ್ಡಪ್ಪ ಇವರೆಲ್ಲರ ಸಂಗೀತ ಸಂಸ್ಕಾರದ ಪ್ರಭಾವ ಎಳವೆಯಲ್ಲಿಯೇ ಬಿಜಾಪುರೆಯವರ ಮೇಲೆ ಅತೀವ ಪ್ರಭಾವ ಬೀರಿತ್ತು. ತಂದೆ ಕಲ್ಲೋಪಂತರಿಗೆ ಗೋಕಾಕ ತಾಲೂಕಿನ ಅಕ್ಕತಂಗೇರ ಹಾಳಕ್ಕೆ ವರ್ಗಾವಣೆಯಾದಾಗ ಬಿಜಾಪುರೆಯವರ ಸಂಗೀತದ ಕಲಿಕೆಗೆ ಅನುಕೂಲವೇ ಆಯ್ತು. ಕಲ್ಲೋಪಂತರ ನಾಟಕಗಳಿಗೆ ಸಂಗೀತ ರಚನೆ ಮಾಡಿದ ನಾಟಕದ ಮಾಸ್ಟರ್ ಅಣ್ಣಿಗೇರಿ ಮಲ್ಲಯ್ಯನವರು…