Subscribe to Updates
Get the latest creative news from FooBar about art, design and business.
Author: roovari
ಮಂಗಳೂರು: ಮಂಗಳೂರಿನ ಸ್ವರಾಲಯ ಫೌಂಡೇಶನ್ ವತಿಯಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ ‘ಸ್ವರ ಸಂಕ್ರಾಂತಿ ಉತ್ಸವ- 2025’ ಸಂಗೀತ ಕಛೇರಿ ಕಾರ್ಯಕ್ರಮವು ದಿನಾಂಕ 14 ಜನವರಿ 2024 ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ. ಮಧ್ಯಾಹ್ನ 2 ಗಂಟೆಯಿಂದ ಕಲಾ ಶಾಲೆ ವಿದ್ಯಾರ್ಥಿಗಳಿಂದ ವಯಲಿನ್ ಪ್ರಸ್ತುತಿ ನಡೆಯಲಿದ್ದು, ಬಳಿಕ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮೂವರು ಹಿರಿಯ ಕಲಾ ಸಾಧಕರಿಗೆ ‘ಸ್ವರ ಸಾಧನಾ’ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಕರ್ನಾಟಕ ಶಾಸ್ತ್ರೀಯ ಸಂಗೀತದ ಖ್ಯಾತ ಕಲಾವಿದರಾದ ರಂಜನಿ – ಗಾಯತ್ರಿ ಇವರಿಂದ ವಿಶಿಷ್ಟ ಪರಿಕಲ್ಪನೆಯ ‘ರಸ ಬೈ ರಾಗ’ ಸಂಗೀತ ಕಚೇರಿ ನಡೆಯಲಿದ್ದು ಇವರಿಗೆ ವಯಲಿನ್‌ನಲ್ಲಿ ವಿದ್ವಾನ್ ವಿಠಲ್ ರಂಗಲ್, ಮೃದಂಗದಲ್ಲಿ ವಿದ್ವಾನ್ ಸಾಯಿ ಗಿರಿಧರ್, ಘಟಂನಲ್ಲಿ ವಿದ್ವಾನ್ ಎಸ್. ಕೃಷ್ಣ ಸಹಕರಿಸಲಿದ್ದಾರೆ. ರಂಜನಿ ಮತ್ತು ಗಾಯತ್ರಿ ಕರ್ನಾಟಿಕ್ ಸಂಗೀತ ಪ್ರಕಾರದಲ್ಲಿ ಉನ್ನತ ಸಾಧನೆ ಮಾಡಿರುವ ಕಲಾವಿದರಾಗಿದ್ದು, ‘ರಸ ಬೈ ರಾಗ’ ಪರಿಕಲ್ಪನೆಯಲ್ಲಿ ದೇಶ ವಿದೇಶದಲ್ಲಿ ಪ್ರವಾಸ ಮಾಡಿ ಸಂಗೀತ…
ಮಂಗಳೂರು : ಜ್ಞಾನರತ್ನ ಎಜ್ಯುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.) ನಿಡ್ಡೋಡಿ ಮಂಗಳೂರು ಆಯೋಜಿಸುವ ‘ನೀನಾಸಂ’ ತಿರುಗಾಟದ ನಾಟಕ ಪ್ರದರ್ಶನವು ದಿನಾಂಕ 08 ಜನವರಿ 2025 ಮತ್ತು 09 ಜನವರಿ 2025ರಂದು ನಿಡ್ಡೋಡಿಯ ಶ್ರೀ ದುರ್ಗಾದೇವಿ ವಿದ್ಯಾಸಂಸ್ಥೆಯ ಮೈದಾನದಲ್ಲಿ ನಡೆಯಲಿದೆ. ದಿನಾಂಕ 08 ಜನವರಿ 2025ರಂದು ಭವಭೂತಿ ರಚನೆ ಹಾಗೂ ಅಕ್ಷರ ಕೆ.ವಿ. ಇವರ ನಿರ್ದೇಶನದಲ್ಲಿ ಹೆಗ್ಗೋಡು ನೀನಾಸಂ ತಂಡದವರಿಂದ ‘ಮಾಲತೀ ಮಾಧವ’ ಮತ್ತು ದಿನಾಂಕ 09 ಜನವರಿ 2025ರಂದು ಅಭಿರಾಮ್ ಭಡ್ಕಮ್ಕರ್ ರಚಿಸಿರುವ ಜಯಂತ್ ಕಾಯ್ಕಿಣಿ ಕನ್ನಡಕ್ಕೆ ಅನುವಾದಿಸಿರುವ ವಿದ್ಯಾನಿಧಿ ವನಾರಸೆ ಇವರ ನಿರ್ದೇಶನದಲ್ಲಿ ಹೆಗ್ಗೋಡು ‘ಅಂಕದ ಪರದೆ’ ನಾಟಕ ಪ್ರದರ್ಶನಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ : 9844722956/ 9008729110/ 959117201
ಕೋಲಾರ : ಬಿ. ಶಿವಕುಮಾರ್ ಸಾರಥ್ಯದ ಸ್ವರ್ಣಭೂಮಿ ಫೌಂಡೇಶನ್, ರೋಟರಿ ಕ್ಲಬ್ ಕೋಲಾರ, ಡಾ. ಕೆ ವಾಮನ್ ರಾವ್ ಬೇಕಲ್ ಸಾರಥ್ಯದ ಕಾಸರಗೋಡು ಕನ್ನಡ ಭವನ ಸಂಯುಕ್ತವಾಗಿ ಆಯೋಜಿಸಿದ ವಿಶ್ವಮಾನವ ಕುವೆಂಪು ಜನ್ಮ ದಿನಾಚರಣೆ ಪ್ರಯುಕ್ತ ‘ಕಾಸರಗೋಡು – ಕೋಲಾರ ಕನ್ನಡ ಉತ್ಸವ’ ಕಾರ್ಯಕ್ರಮವು ದಿನಾಂಕ 28 ಡಿಸೆಂಬರ್ 2024ರಂದು ಕೋಲಾರದ ಪತ್ರಕರ್ತರ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮುಖ್ಯ ಭಾಷಣ ಮಾಡಿದ ಕೋಲಾರದ ಸಿವಿಲ್ ನ್ಯಾಯಾದೀಶರಾದ ಶ್ರೀ ಹರ್ಷ ಜಿ. “ಪ್ರತಿಜ್ಞಾಬದ್ದವಾಗಿ ಕನ್ನಡ ಭಾಷೆಯನ್ನು ಕನ್ನಡಿಗರು ಬಳಸಿಕೊಂಡರೆ ಮಾತ್ರ ಕನ್ನಡ ಉಳಿಯಬಲ್ಲುದು” ಎಂದು ಹೇಳಿದರು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕನ್ನಡ ಭವನದ ರೂವಾರಿಗಳಾದ ವಾಮನ್ ರಾವ್ ಬೇಕಲ್ ಇವರು ಮಾತನಾಡಿ “ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ರಕ್ಷಿಸುವ ಮತ್ತು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಗುರುತರ ಹೊಣೆಗಾರಿಕೆ ಸಂಘ, ಸಂಸ್ಥೆಗಳಿಗಿದ್ದು, ಪರಸ್ಪರ ಸಹಕರಿಸಿ ಕನ್ನಡ ಕಾರ್ಯಗಳನ್ನು ಮಾಡಬೇಕಿದೆ” ಎಂದು ಹೇಳಿದರು. ಕಾರ್ಯಕ್ರಮವನ್ನು ಬಿ. ಶಿವಕುಮಾರ್ ಪ್ರಾಸ್ತಾವಿಕ…
ಮಂಗಳೂರು : ಹೊಸ ವರ್ಷದ ಆರಂಭವನ್ನು ಹೆಜ್ಜೆ ಗೆಜ್ಜೆ ನೃತ್ಯ ನಾದಗೊಳೊಂದಿಗೆ ‘ಚಕ್ರಪಾಣಿ ನೃತ್ಯ ಕಲಾ ಕೇಂದ್ರ’ ಅತ್ತಾವರ ಮಂಗಳೂರು ಇಲ್ಲಿನ ನಾಟ್ಯ ಗುರುಗಳಾದ ವಿದ್ವಾನ್ ಶ್ರೀ ಸುರೇಶ್ ಅತ್ತಾವರ್ ಇವರ ನಿರ್ದೇಶನದಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ‘ಶ್ರೀ ಚಕ್ರ ನೃತ್ಯೋತ್ಸವ’ ಕಾರ್ಯಕ್ರಮವು ದಿನಾಂಕ 01 ಜನವರಿ 2025ರಂದು ಪುರಭವನದಲ್ಲಿ ಅತ್ಯಂತ ವೈಭವದಿಂದ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಚಕ್ರಪಾಣಿ ಗೋಪಿನಾಥ ದೇವಸ್ಥಾನ ಅತ್ತಾವರ ಇಲ್ಲಿನ ಪ್ರಧಾನ ಅರ್ಚಕರಾದ ಶ್ರೀ ಗೋಪಾಲಕೃಷ್ಣ ಭಟ್ ನೆರವೇರಿಸಿ “ಬದುಕಿನಲ್ಲಿ ಭರವಸೆ ಮೂಡಲು ಒಂದಷ್ಟು ಹೊತ್ತು ಮನಸ್ಸು ಪ್ರಪುಲ್ಲಗೊಳ್ಳಲು ನೃತ್ಯ, ಸಂಗೀತ, ಚಿತ್ರಕಲೆ, ಬರವಣಿಗೆಯಂತಹ ಹವ್ಯಾಸಗಳು ಬೇಕು. ಈ ದಿನ ನೃತ್ಯ ಹಾಗೂ ಸಂಗೀತದಲ್ಲಿ ಕಾರ್ಯಕ್ರಮ ನೀಡುವ ಎಲ್ಲರಿಗೂ ದೇವರು ಶುಭವನ್ನೇ ಕರುಣಿಸಲಿ, ಚಕ್ರಪಾಣಿ ನೃತ್ಯ ಕಲಾ ಕೇಂದ್ರ ಇನ್ನಷ್ಟು ಉತ್ತಮ ನೃತ್ಯ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಒದಗಿಸಲಿ” ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ಸರಕಾರಿ…
ಉಡುಪಿ : ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ‘ಬಾಲ ಮತ್ತು ಕಿಶೋರ ಯುಗಳ ನೃತ್ಯ’ ಕಾರ್ಯಕ್ರಮವು ದಿನಾಂಕ 05 ಜನವರಿ 2025ರಂದು ಬೈಲೂರು ಶ್ರೀ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ನಡೆಯಿತು. ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು ಮತ್ತು ಅಥಿತಿ ಶ್ರೀಯುತ ಮೋಹನ್ ರಾವ್ ಇವರು ದೀಪ ಬೆಳಗಿಸಿ ಶುಭ ಹಾರೈಸಿದರು. ಬಹಳ ವರ್ಷದಿಂದಲೂ ಬೈಲೂರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ಮತ್ತು ಪ್ರೋತ್ಸಾಹ ಕೊಡುತ್ತಿದ್ದ ದೇವಸ್ಥಾನದ ಆಡಳಿತ ಮಂಡಳಿಯ ಬಗ್ಗೆ ಪ್ರಸ್ತಾಪಿಸುತ್ತ ಶ್ರೀಯುತ ಜಯರಾಮ ಆಚಾರ್ಯರವರು ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ನಡೆಸುತ್ತಿರುವ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ “ಪ್ರತಿನಿತ್ಯವೂ ದೇವತಾರಾಧನೆಯಲ್ಲಿ ರಾಜೋಪಚಾರ ಮಂತ್ರದ ಮುಖಾಂತರ ಮಾತ್ರ ನಡೆಯುತ್ತಿದ್ದು, ಇನ್ನು ಮುಂದೆ ನೃತ್ಯ, ಸಂಗೀತ ನಿತ್ಯ ಆರಾಧನೆಯಲ್ಲಿ ಬರಲಿ. ಇಂತಹ ಕಾರ್ಯಕ್ರಮಕ್ಕೆ ದೇವಸ್ಥಾನಗಳ ವ್ಯವಸ್ಥಾಪಕರು ಅವಕಾಶ ಮಾಡಲಿ” ಎಂದು ನುಡಿದರು. “ಪರಿಷತ್ ನೃತ್ಯ ಕಲೆ ಬೆಳವಣಿಗೆಗೆ ಹಲವಾರು ಉತ್ತಮ ಕಾರ್ಯಕ್ರಮ…
ಧಾರವಾಡ : ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಮತ್ತು ಮನೋಹರ ಗ್ರಂಥಮಾಲಾ ಇವುಗಳ ಸಹಯೋಗದಲ್ಲಿ ಹಿರಿಯ ಸಾಹಿತಿ ಡಾ. ನಾ. ಡಿಸೋಜಾ ಅವರಿಗೆ ಭಾವ ಪೂರ್ಣ ಶೃದ್ಧಾಂಜಲಿ ನುಡಿನಮನ ಕಾರ್ಯಕ್ರಮವು ದಿನಾಂಕ 06 ಜನವರಿ 2025ರಂದು ಧಾರವಾಡದ ಮನೋಹರ ಗ್ರಂಥ ಮಾಲಾ ಅಟ್ಟದಲ್ಲಿ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಹಿರಿಯ ಸಾಹಿತಿ ಡಾ. ಶಾಮಸುಂದರ ಬಿದರಕುಂದಿ “ನಾ. ಡಿಸೋಜಾ ಜನಸಾಮಾನ್ಯರ ಅನುಭೂತಿ ಇಟ್ಟುಕೊಂಡು ಕಥೆ, ಕಾದಂಬರಿ ರಚನೆ ಮಾಡಿ ಜನಪ್ರಿಯ ಸಾಹಿತಿಯಾದರು. ಮುಳುಗಡೆ ಅವರ ಸಾಹಿತ್ಯದ ಸ್ಥಾಯಿವಸ್ತು. ಮುಳುಗಡೆ ಪ್ರದೇಶದ ಜನರ ಬದುಕು, ಬವಣೆ, ನೋವು, ನಲಿವುಗಳನ್ನು ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದು ವಿಶೇಷತೆ. ಲಿಂಗನಮಕ್ಕಿ ಜಲಾಶಯದ ನಿರ್ಮಾಣದಿಂದ ಜನರ ಜೀವನದಲ್ಲಾದ ಬದಲಾವಣೆಯನ್ನು ಸೂಕ್ಷ್ಮವಾಗಿ ಗ್ರಹಿಸಿ ಬರೆದರು. ಅವರ ಹಲವು ಕತೆಗಳು, ಪ್ರಬಂಧಗಳು ಪಠ್ಯವಾಗಿವೆ. ಡಿಸೋಜಾ ಅವರ ಕಾದಂಬರಿ ‘ದ್ವೀಪ’ ಸಿನೆಮಾ ಆಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದು ಹೆಗ್ಗಳಿಕೆ. ಡಿಸೋಜಾ ಅವರ ಎಲ್ಲ ಕತೆಗಳು ರೂಪಕಗಳೇ ಆಗಿವೆ. ಮಕ್ಕಳ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ…
ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ, ರಂಗಸಂಪದ ಕೋಟ, ಧಮನಿ ಟ್ರಸ್ಟ್ ತೆಕ್ಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ‘ಸಿನ್ಸ್ 1999 ಶ್ವೇತಯಾನ-96 ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ‘ನಾಟಕಾಷ್ಟಕ’ ಕಾರ್ಯಕ್ರಮದ ಸಮಾರೋಪ ಸಮಾರಂಭ ದಿನಾಂಕ 02 ಜನವರಿ 2025ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ ಮಾತನಾಡಿ “ಸಮಸ್ಯೆಗಳ ಸರಮಾಲೆಯನ್ನು ಬದಿಗೊತ್ತಿ ವಿಜೃಂಭಣೆಯಿದ ಸಂಭ್ರಮಿಸುವುದಕ್ಕೆ ಸಾಧ್ಯ ಎನ್ನುವುದನ್ನು ಯಶಸ್ವೀ ಕಲಾವೃಂದ ಮಾಡಿ ತೋರಿಸಿದೆ. ಎಲ್ಲಾ ರೀತಿಯ ಸೌಲಭ್ಯ, ಸಂಪನ್ಮೂಲ, ಅವಕಾಶ ಇದ್ದಂತಹ ಸಂಸ್ಥೆಗಳಿಗೆ ನಿರಂತರವಾಗಿ ಕೆಲಸಗಳನ್ನು ಮಾಡುವುದು ಸಾಹಸವಾಗಿರುವ ಸಂದರ್ಭಗಳಲ್ಲಿ ಊಹೆಗೆ ನಿಲುಕದಷ್ಟು ವೈವಿಧ್ಯಮಯ ಕಾರ್ಯಕ್ರಮಗಳನ್ನು ಮಾಡುವ ಚೇತೋಹಾರಿ ಶಕ್ತಿ ಯಶಸ್ವೀ ಕಲಾವೃಂದಕ್ಕಿದೆ. ಒಂದು ಜಾಗದಲ್ಲಿ ನಿರಂತರವಾಗಿ ಕಲಾ ಚಟುವಟಿಕೆಗಳನ್ನು ನಿರಂತರವಾಗಿ ಮಾಡುವಷ್ಟು ದೊಡ್ಡ ಸಾಮಾಜಿಕ ಉಪಕಾರಿ ಯಾವುದೂ ಇಲ್ಲ. ಯಾಕೆಂದರೆ ಇದು ಬೆಳಕು ಹಚ್ಚುವ ಕಾರ್ಯ. ‘ನಾಟಕಾಷ್ಟಕ’ ಹೆಸರೇ ಆಕರ್ಷಕ. ಜೀವನ ಕೆಟ್ರೆ ನಾಟಕದಿಂದ ಸರಿ ಮಾಡಬಹುದು, ನಾಟಕನೇ ಕೆಟ್ರೆ? ಸರಿ ಮಾಡುವುದು…
ಮಂಗಳೂರು : ಮಂಗಳೂರಿನ ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಇದರ ಸಾರಥ್ಯದಲ್ಲಿ ದಿನಾಂಕ 05 ಜನವರಿ 2025ರಂದು ಮಂಗಳೂರು ಪುರಭವನದ ಎದುರಿನ ರಾಜಾಜಿ ಪಾರ್ಕಿನಲ್ಲಿ ಕುವೆಂಪು ಜನ್ಮ ದಿನದ ಪ್ರಯುಕ್ತ ‘ಕನ್ನಡವೇ ಸತ್ಯ’ ವಿಚಾರಗೋಷ್ಠಿ-ಕವಿಗೋಷ್ಠಿ ಮತ್ತು ಗೀತಗಾಯನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿಕ್ಷಕಿ ಕುಸುಮಾ ಕೆ.ಆರ್. “ಹುಟ್ಟುವ ಪ್ರತಿ ಮಗು ವಿಶ್ವಮಾನವನೇ. ಆನಂತರ ಆ ಮಗುವನ್ನು ಜಾತಿ ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ ಹಾಗಾಗಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು. ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪುರವರಿಗಿತ್ತು. ಕುವೆಂಪು ಅವರ ಜಾತ್ಯಾತೀತ ಮನೋಭಾವದಿಂದ ಕೂಡಿ ಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ. ಅವರ ಕನಸನ್ನು ನನಸಾಗಿಸುವ ಪ್ರಯತ್ನ ನಮ್ಮದಾಗಬೇಕು. ಆ ಮತದ ಈ ಮತದ ಹಳೆ ಮತದ ಸಹವಾಸ ಸಾಕಿನ್ನು, ಸೇರಿರೈ ಮನುಜ ಮತಕೆ, ಓಹ್ ಬನ್ನಿ ಸೋದರರೇ ವಿಶ್ವಪಥಕೆ. . . ಕನ್ನಡವೇ ಸತ್ಯ ಕನ್ನಡವೇ ನಿತ್ಯ. ಇಂದಿನ ಈ ಕನ್ನಡವೇ ಸತ್ಯ ಕಾರ್ಯಕ್ರಮವು ನಿಜಕ್ಕೂ…
ಮಂಗಳೂರು : ಚಿರಂತನ ಚಾರಿಟೇಬಲ್ ಟ್ರಸ್ಟ್, ಸಪ್ತಕ ಬೆಂಗಳೂರು ಮತ್ತು ರಾಮಕೃಷ್ಣ ಮಠ ಮಂಗಳೂರು ಜಂಟಿಯಾಗಿ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಸ್ವಾಮಿ ವಿವೇಕಾನಂದರ ಜನ್ಮದಿನ ಪ್ರಯುಕ್ತ ಪ್ರಸ್ತುತ ಪಡಿಸುವ ‘ಪಂಚಮದ ಇಂಚರ ವಿವೇಕ ಸ್ಮೃತಿ 2025’ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹಬ್ಬ ಕಾರ್ಯಕ್ರಮವನ್ನು ದಿನಾಂಕ 12 ಜನವರಿ 2025ರಂದು ಮಧ್ಯಾಹ್ನ 2-30 ಗಂಟೆಗೆ ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮನಂದಾಜಿ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ತಬಲಾ ವಿದ್ವಾಂಸ ಭಾವಚಿತ್ರ ಕಲಾವಿದ ಪಂಡಿತ್ ಯಶವಂತ್ ಜೆ. ಆಚಾರ್ಯ ಮತ್ತು ಕಲೆ ಮತ್ತು ಸಂಗೀತದ ಪೋಷಕ ಶ್ರೀ ಜಿ.ಎಸ್. ಹೆಗ್ಡೆ ಇವರುಗಳನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಮುಂಬೈಯ ಶ್ರೀ ಧನಂಜಯ್ ಹೆಗ್ಡೆ ಇವರ ಹಾಡುಗಾರಿಕೆಗೆ ಬೆಂಗಳೂರಿನ ಗುರುಮೂರ್ತಿ ವೈದ್ಯ ತಬಲಾದಲ್ಲಿ ಮತ್ತು ಉಡುಪಿಯ ಶ್ರೀ ಪ್ರಸಾದ್ ಕಾಮತ್ ಇವರು ಸಂವಾದಿನಿಯಲ್ಲಿ ಸಹಕರಿಸಲಿದ್ದಾರೆ. ವಿದುಷಿ ಮಂಜೂಷಾ…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಪಾಕ್ಷಿಕ ಕೂಟವು ದಿನಾಂಕ 04 ಜನವರಿ 2025ರಂದು ‘ಅಂಗದ ಸಂಧಾನ’ ತಾಳಮದ್ದಳೆಯೊಂದಿಗೆ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ಜರಗಿತು. ಹಿಮ್ಮೇಳದಲ್ಲಿ ಕುಸುಮಾಕರ ಆಚಾರ್ಯ ಹಳೆನೇರೆಂಕಿ, ಕುಮಾರಿ ಕೃತಿಕಾ ಖಂಡೇರಿ, ಜಯಪ್ರಕಾಶ್ ನಾಕೂರು, ಟಿ.ಡಿ. ಗೋಪಾಲಕೃಷ್ಣ ಭಟ್ ಮತ್ತು ಕುಮಾರಿ ಶರಣ್ಯ ವಿಟ್ಲ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ರಾಮ (ವಿ.ಕೆ. ಶರ್ಮ ಅಳಿಕೆ), ಅಂಗದ (ಭಾಸ್ಕರ್ ಬಾರ್ಯ). ಪ್ರಹಸ್ತ (ಗುಡ್ಡಪ್ಪ ಬಲ್ಯ) ಸಹಕರಿಸಿದರು. ಟಿ. ರಂಗನಾಥ ರಾವ್ ಸ್ವಾಗತಿಸಿ, ರಾಜ್ ಗೋಪಾಲ್ ಭಟ್ ಬನ್ನೂರು ವಂದಿಸಿದರು.